Video: ಪೋಷಕರೆದುರೇ ಜಿಪ್ ಲೈನ್ ರೈಡ್ ವೇಳೆ ಬಿದ್ದು ಪ್ರಾಣಬಿಟ್ಟ ಬಾಲಕ – Kannada News | Teen Dies After Zipline Accident in Agra, Incident Caught on Video

ಆಗ್ರಾ, ಮೇ 25: ಮನರಂಜನೆ ಮತ್ತು ಸಾಹಸದ ಆಟ(Game)ವೊಂದು ಹದಿನೈದು ವರ್ಷದ ಬಾಲಕನ ಪಾಲಿಗೆ ಯಮಪಾಶವಾದ ಅತ್ಯಂತ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ ಚೌಪಟ್ಟಿ’ಯಲ್ಲಿ ಜಿಪ್‌ಲೈನಿಂಗ್ ಸವಾರಿಯ ವೇಳೆ ಬಾಲಕನೊಬ್ಬ ಎತ್ತರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಹೃದಯವಿದ್ರಾವಕ ಘಟನೆಯ ಲೈವ್ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ನಡೆದಿದ್ದೇನು?
ವರದಿಗಳ ಪ್ರಕಾರ, 15 ವರ್ಷದ ಹದಿಹರೆಯದ ಬಾಲಕನೊಬ್ಬ ತನ್ನ ಪೋಷಕರೊಂದಿಗೆ ಆಗ್ರಾ ಚೌಪಟ್ಟಿಗೆ ಭೇಟಿ ನೀಡಿದ್ದ. ಅಲ್ಲಿ ಅತ್ಯಂತ ಉತ್ಸಾಹದಿಂದ ಜಿಪ್‌ಲೈನಿಂಗ್ ಸಾಹಸಕೆಕಂದು ಹೊರಟಿದ್ದ. ಆದರೆ, ತಾಂತ್ರಿಕ ದೋಷ ಅಥವಾ ಸುರಕ್ಷತಾ ಲೋಪ ಸಂಭವಿಸಿದೆ. ಪರಿಣಾಮವಾಗಿ, ಆತ ಗಾಳಿಯಲ್ಲೇ ನಿಯಂತ್ರಣ ಕಳೆದುಕೊಂಡು ನೇರವಾಗಿ ಕೆಳಗೆ ಬಿದ್ದಿದ್ದಾನೆ. ಅಲ್ಲಿಯೇ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ಈ ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಬಾಲಕನ ಪೋಷಕರು ಸ್ಥಳದಲ್ಲೇ ಇದ್ದು, ಅವರ ಕಣ್ಣೆದುರೇ ಮಗ ತಳಮಳಿಸುತ್ತಾ ಪ್ರಾಣ ಬಿಟ್ಟಿದ್ದಾನೆ.

ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಸಾರ್ವಜನಿಕರ ಆಕ್ರೋಶ
ಈ ಭೀಕರ ಅಪಘಾತವು ಚೌಪಟ್ಟಿಯಲ್ಲಿ ಜಿಪ್‌ಲೈನಿಂಗ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ಕಂಪನಿ ಮತ್ತು ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಇಂತಹ ಅಪಾಯಕಾರಿ ಸಾಹಸ ಕ್ರೀಡೆಗಳಿಗೆ ಬೇಕಾದ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಕಂಪನಿಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಇಲ್ಲಿದೆ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಜಿಪ್‌ಲೈನಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಯ ಮ್ಯಾನೇಜರ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜೊತೆಗೆ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.

ಮತ್ತಷ್ಟು ಓದಿ: Video: ಬಾಲಕಿ ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟ

ಪೊಲೀಸರು ಬಾಲಕನ ಮೃತದೇಹವನ್ನು ವಶಕ್ಕೆ ಪಡೆದು, ಪಂಚನಾಮ ಪ್ರಕ್ರಿಯೆ ಮುಗಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಘೋರ ಅಪಘಾತದಿಂದಾಗಿ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಆಗ್ರಾ ಚೌಪಟ್ಟಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಭೀತಿ ಆವರಿಸಿದೆ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಬಾಲಕನ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಪ್ಪೆಚಿಪ್ಪು ಸಂಗ್ರಹದ ವೇಳೆ ಭಟ್ಕಳದಲ್ಲಿ ದುರಂತ: ಮನಕಲಕುವಂತಿದೆ ಜಲಸಮಾಧಿಯಾದ 11 ಮಂದಿಯ ಕುಟುಂಬದ ಕಥೆಗಳು – Kannada News | Uttara Kannada Drowning: Heartbreaking Stories Emerge from Bhatkal Tragedy

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಂಗರೆ ಬಳಿ ಸಂಭವಿಸಿದ ಕಪ್ಪೆಚಿಪ್ಪು ಸಂಗ್ರಹ ದುರಂತದಲ್ಲಿ ಒಟ್ಟು 11 ಮಂದಿ ಜಲಸಮಾಧಿಯಾಗಿದ್ದಾರೆ. ಮೃತಪಟ್ಟ 11 ಮಂದಿಯ ಪೈಕಿ ಎಂಟು ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಸಾಮೂಹಿಕ ಅಂತ್ಯಸಂಸ್ಕಾರವನ್ನು ಇಂದು (ಮೇ 24) ನೆರವೇರಿಸಲಾಯಿತು. ನಿನ್ನೆ ಮೂವರ ಅಂತ್ಯಕ್ರಿಯೆಗಳನ್ನು ನಡೆಸಲಾಗಿತ್ತು. ಕಪ್ಪೆಚಿಪ್ಪು ಹೆಕ್ಕಲು ತೆರಳಿದ್ದವರಲ್ಲಿ ಮಹಾದೇವ್ ನಾಯಕ್ ಮತ್ತು ಲಕ್ಷ್ಮಿ ನಾಯಕ್ ದಂಪತಿ ಕೂಡ ಸೇರಿದ್ದರು. ಇವರ ಅಕಾಲಿಕ ನಿಧನದಿಂದ ಮಕ್ಕಳಾದ ದರ್ಶನ್ ಮತ್ತು ಕೀರ್ತನಾ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಇದೇ ದುರಂತದಲ್ಲಿ ತಾಯಿಯನ್ನು ರಕ್ಷಿಸಲು ಹೋಗಿ ಮಗ ಉಮೇಶ್ ನಾಯಕ್ ಸಹ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ನಾಲ್ಕು ಮಕ್ಕಳ ತಾಯಿ ಲಕ್ಷ್ಮಿ ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಹತ್ತು ವರ್ಷಗಳ ಹಿಂದೆ ಲಕ್ಷ್ಮಿಯ ಪತಿ ನಿಧನರಾಗಿದ್ದರು. ಅಂದಿನಿಂದ ನಾಲ್ವರು ಮಕ್ಕಳನ್ನು ಲಕ್ಷ್ಮಿ ಒಬ್ಬರೇ ಪೋಷಿಸುತ್ತಿದ್ದರು. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಲಕ್ಷ್ಮಿ, ತಮ್ಮ ಮಕ್ಕಳನ್ನು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದಿಸುತ್ತಿದ್ದರು. ಮಕ್ಕಳನ್ನು ದೊಡ್ಡವರನ್ನಾಗಿ ಮಾಡಬೇಕು, ಅವರಿಗೆ ಉತ್ತಮ ಭವಿಷ್ಯ ನೀಡಬೇಕು ಎಂಬ ಆಶಯದೊಂದಿಗೆ ಕಪ್ಪೆಚಿಪ್ಪು ಸಂಗ್ರಹಕ್ಕೆ ತೆರಳಿದ್ದಾಗ ದುರಂತಕ್ಕೀಡಾಗಿದ್ದಾರೆ. ತಾಯಿಯ ಸಾವಿನಿಂದ ನಾಲ್ಕು ಪುಟ್ಟ ಮಕ್ಕಳು ಅನಾಥರಾಗಿ, ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

2 ತಂಡಗಳನ್ನು ಗಂಟು ಮೂಟೆ ಕಟ್ಟುವಂತೆ ಮಾಡಿದ 1 ರನ್, 1 ಅಂಕ..! – Kannada News | IPL 2026 PlayOffs: 1 Run, 1 Point: Two Teams Knocked Out

IPL 2026: ಕ್ರಿಕೆಟ್ ಎಂಬುದು ಮಹಾನ್ ಅನಿಶ್ಚಿತತೆಗಳ ಆಟ. ಇಲ್ಲಿ ಕೇವಲ ಒಂದು ಎಸೆತ, ಒಂದು ರನ್ ಅಥವಾ ಪ್ರಕೃತಿಯ ಒಂದು ಸಣ್ಣ ಮುನಿಸು ಇಡೀ ಟೂರ್ನಿಯ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು. ಇಡೀ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದರೂ, ಅಂತಿಮವಾಗಿ ಪ್ಲೇಆಫ್ ಹಂತ ತಲುಪಲು ಈ ಎರಡೂ ತಂಡಗಳಿಗೆ ಅಡ್ಡಿಯಾಗಿದ್ದು ಕೇವಲ ‘1 ರನ್’ ಮತ್ತು ‘1 ಅಂಕ’ದ ಸಣ್ಣ ವ್ಯತ್ಯಾಸ!

ಡೆಲ್ಲಿ ತಂಡದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿ ಮಾಡಿದ ಆ ಒಂದು ನಿರ್ಧಾರ ಹಾಗೂ ಪಂಜಾಬ್ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದಾಗ ಸುರಿದ ಅಕಾಲಿಕ ಮಳೆ ಹೇಗೆ ಇವೆರಡೂ ತಂಡಗಳನ್ನು ಟೂರ್ನಿಯಿಂದ ಹೊರದಬ್ಬಿದವು ಎಂಬ ರೋಚಕ ವಿವರ ಇಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್- 1 ರನ್​:

ಗುಜರಾತ್ ಟೈಟಾನ್ಸ್ (GT) ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 1 ರನ್‌ನಿಂದ ರೋಚಕ ಸೋಲು ಕಂಡಿತ್ತು. ಈ ಸೋಲು ಅಂತಿಮವಾಗಿ ತಂಡದ ಪ್ಲೇಆಫ್ ಅವಕಾಶವನ್ನೇ ಕಿತ್ತುಕೊಂಡಿತು ಎಂದರೆ ತಪ್ಪಾಗಲಾರದು.

ಪಂದ್ಯದ ವಿವರ: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್​ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್​ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊನೆಯ 2 ಎಸೆತಗಳಲ್ಲಿ 2 ರನ್ ಬೇಕಿತ್ತು. ಕ್ರೀಸ್‌ನಲ್ಲಿದ್ದ ಸ್ಟಾರ್ ಫಿನಿಷರ್ ಡೇವಿಡ್ ಮಿಲ್ಲರ್ 5ನೇ ಎಸೆತವನ್ನು ಸ್ಕ್ವೇರ್ ಲೆಗ್ ಕಡೆಗೆ ಬಾರಿಸಿದರು.

ಆದರೆ ಈ ಒಂದು ರನ್ ಓಡಲು ಡೇವಿಡ್ ಮಿಲ್ಲರ್ ನಿರಾಕರಿಸಿದರು. ನಾನ್‌ಸ್ಟ್ರೈಕರ್‌ನಲ್ಲಿದ್ದ ಕುಲ್ದೀಪ್ ಯಾದವ್ ಅರ್ಧ ಪಿಚ್‌ವರೆಗೂ ಓಡಿ ಬಂದಿದ್ದರೂ ಕೂಡ ಮಿಲ್ಲರ್ ಒಂದು ರನ್ ಓಡಲು ಮನಸ್ಸು ಮಾಡಿರಲಿಲ್ಲ. ಪರಿಣಾಮ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ 2 ರನ್ ಬೇಕಿದ್ದವು.

ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಬೌನ್ಸರ್ ಎಸೆತದಲ್ಲಿ ರನ್​ ಗಳಿಸಲು ಮಿಲ್ಲರ್ ವಿಫಲರಾದರು. ಬೈಸ್ ರನ್ ಓಡಲು ಯತ್ನಿಸಿದಾಗ ಕುಲ್ದೀಪ್ ಯಾದವ್ ರನ್ ಔಟ್ ಆದರು.  ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 1 ರನ್​ನಿಂದ ಸೋಲೊಪ್ಪಿಕೊಂಡಿತು.

ಒಂದು ವೇಳೆ ಆ ಸಿಂಗಲ್ ಪಡೆದಿದ್ದರೆ ಪಂದ್ಯ ಕನಿಷ್ಠ ಸೂಪರ್ ಓವರ್‌ಗೆ ತಲುಪುತ್ತಿತ್ತು. ಅಲ್ಲದೆ ಸೂಪರ್ ಓವರ್​ನಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 2 ಅಂಕಗಳನ್ನು ಪಡೆಯಲು ಅವಕಾಶ ಇರುತ್ತಿತ್ತು. ಒಂದು ವೇಳೆ ಹೀಗೆ 2 ಅಂಕಗಳನ್ನು ಪಡೆದಿದ್ದರೆ 14 ರ ಬದಲಿಗೆ ಒಟ್ಟು 16 ಅಂಕ ಪಡೆದು ಡೆಲ್ಲಿ ಕ್ಯಾಪಿಟಲ್ಸ್​ ಸುಲಭವಾಗಿ ಪ್ಲೇಆಫ್ ತಲುಪಬಹುದಿತ್ತು.

ಪಂಜಾಬ್ ಕಿಂಗ್ಸ್- 1 ಪಾಯಿಂಟ್:

ಐಪಿಎಲ್​ನ ಮೊದಲಾರ್ಧದಲ್ಲಿ  ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡದ ಪ್ರಚಂಡ ಪ್ರದರ್ಶನ ನೀಡಿತ್ತು. ಈ ಪ್ರದರ್ಶನದೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದ್ದರು. ಆದರೆ ಈ ಪಂದ್ಯದಲ್ಲಿ ಪಂಜಾಬ್ ಪಾಲಿಗೆ ಅದೃಷ್ಟ ಕೈಕೊಟ್ಟಿತು.

ಪಂದ್ಯದ ವಿವರ: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಪಂಜಾಬ್ ಕಿಂಗ್ಸ್ ಬೌಲರ್​ಗಳು ಯಶಸ್ವಿಯಾಗಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 3.4 ಓವರ್‌ಗಳಲ್ಲಿ ಕೇವಲ 25 ರನ್‌ಗಳಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅತ್ಯುತ್ತಮ ಆರಂಭ ಪಡೆದಿದ್ದರಿಂದ ಈ ಪಂದ್ಯವು ಪಂಜಾಬ್ ಕಿಂಗ್ಸ್ ಪಾಲಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಪಂಜಾಬ್ ಕಿಂಗ್ಸ್​ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದಂತೆಯೇ ಮಳೆ ಆರಂಭವಾಯಿತು. ನಿರಂತರ ಮಳೆಯಿಂದಾಗಿ ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.

ಪಂದ್ಯ ರದ್ದಾದ ಕಾರಣ ಐಪಿಎಲ್ ನಿಯಮಾವಳಿಗಳ ಪ್ರಕಾರ ಎರಡೂ ತಂಡಗಳಿಗೆ ತಲಾ 1 ಅಂಕವನ್ನು ಹಂಚಲಾಯಿತು. ಈ ಪಂದ್ಯ ನಡೆದಿದ್ದರೆ ಪಂಜಾಬ್ ಕಿಂಗ್ಸ್​ ಗೆದ್ದು 2 ಪೂರ್ಣ ಅಂಕಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿದ್ದವು.

ಈ ಎರಡು ಅಂಕಗಳು ಸಿಕ್ಕಿದ್ದರೆ ಪಂಜಾಬ್ ಕಿಂಗ್ಸ್ ತಂಡವು 15 ರ ಬದಲಿಗೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್​ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ವರುಣನ ಅವಕೃಪೆಯಿಂದಾಗಿ ಪಂಜಾಬ್ ಕಿಂಗ್ಸ್ ಪಾಲಿಗೆ ಒಂದು ಅಂಕ ಕೈ ತಪ್ಪಿತು. ಈ ಒಂದು ಅಂಕದ ಕಾರಣದಿಂದಲೇ ಇದೀಗ ಪಂಜಾಬ್ ಕಿಂಗ್ಸ್ ಐಪಿಎಲ್​ನಿಂದ ಹೊರಬಿದ್ದಿದೆ.

ಇದನ್ನೂ ಓದಿ: RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2026ರ ಈ ಸೀಸನ್ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೆ ಅತ್ಯಂತ ಹೃದಯವಿದ್ರಾವಕ ಮತ್ತು ನಿರಾಶಾದಾಯಕವಾಗಿ ಮುಕ್ತಾಯಗೊಂಡಿದೆ.ಕ್ರಿಕೆಟ್ ಮೈದಾನದಲ್ಲಿ ಕೇವಲ ‘ಒಂದು ರನ್’ ಮತ್ತು ‘ಒಂದು ಅಂಕ’ ಇಡೀ ಟೂರ್ನಿಯ ಭವಿಷ್ಯವನ್ನೇ ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಎರಡೂ ತಂಡಗಳ ದುರಾದೃಷ್ಟದ ನಿರ್ಗಮನವೇ ಸಾಕ್ಷಿ

Source link

ಕಾನ್ ಫಿಲ್ಮ್​​ ಫೆಸ್ಟಿವಲ್​ನಲ್ಲಿ ಐಶ್ವರ್ಯಾನ ಟೀಕಿಸಿದವರಿಗೆ ಕ್ಲಾಸ್ – Kannada News | Aishwarya Rai’s Cannes 2026 Blue Gown Sparks Debate; Kangana Ranaut Defends Her Look

ಕಂಗನಾ -ಐಶ್ವರ್ಯಾImage Credit source: Cannes Film Festival

ವಿಶ್ವ ವಿಖ್ಯಾತ ಕಾನ್ ಫಿಲ್ಮ್​ ಫೆಸ್ಟಿವಲ್​​​ನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಳ್ಳುವವರೆಗೂ ಆ ಸಂಭ್ರಮ ಪೂರ್ಣಗೊಳ್ಳುವುದಿಲ್ಲ ಎಂಬ ಮಾತಿದೆ. ಈ ವರ್ಷವೂ ಅಭಿಮಾನಿಗಳು ಐಶ್ವರ್ಯಾ ಎಂಟ್ರಿಗಾಗಿ ಕಾತರದಿಂದ ಕಾಯುತ್ತಿದ್ದರು. ಅಂತಿಮವಾಗಿ, ಐಶ್ವರ್ಯಾ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ. ಆದರೆ, ಈ ಬಾರಿ ಅವರ ರೆಡ್ ಕಾರ್ಪೆಟ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಕೆಲವು ನೆಟ್ಟಿಗರು ಐಶ್ವರ್ಯಾ ಅವರ ನೀಲಿ ಬಣ್ಣದ ಗೌನ್ ಸೌಂದರ್ಯವನ್ನು ಹೊಗಳುತ್ತಿದ್ದರೆ, ಇನ್ನು ಕೆಲವರು ಅವರ ವಯಸ್ಸು ಮತ್ತು ಸ್ಟೈಲಿಂಗ್ ಅನ್ನು ಆಧರಿಸಿ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಈಗ ಈ ಟ್ರೋಲರ್‌ಗಳ ವಿರುದ್ಧ ನಟಿ ಹಾಗೂ ಸಂಸದೆ ಕಂಗನಾ ರನೌತ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಐಶ್ವರ್ಯಾ ಅವರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ ರನೌತ್, ಟ್ರೋಲರ್‌ಗಳಿಗೆ ಬಲವಾದ ಪ್ರತಿಕ್ರಿಯೆ ನೀಡಿದ್ದಾರೆ. ‘ಫ್ಯಾಷನ್ ಮತ್ತು ಶೈಲಿ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ ಹಾಗೂ ಅಭಿವ್ಯಕ್ತಿ. ಯಾವುದೇ ಮಹಿಳೆ ಇತರರನ್ನು ಮೆಚ್ಚಿಸಲು ಮಾತ್ರ ಬದುಕುವುದಿಲ್ಲ. ಈ ಲುಕ್‌ನಲ್ಲಿ ಐಶ್ವರ್ಯಾ ಅದ್ಭುತವಾಗಿ ಕಾಣುತ್ತಿದ್ದಾರೆ. ಕೆಲವರು ಅವಳನ್ನು ವಿಭಿನ್ನವಾಗಿ ನೋಡಲು ಬಯಸಿದರೆ, ಅವರು ಮೊದಲು ತಮ್ಮನ್ನು ತಾವು ಕನ್ನಡಿಯಲಿ ನೋಡಿಕೊಳ್ಳಬೇಕು. ಐಶ್ವರ್ಯಾ ಯಾರನ್ನೂ ಇಂಪ್ರೆಸ್ ಮಾಡಲು ರೆಡ್ ಕಾರ್ಪೆಟ್‌ಗೆ ಬರುವುದಿಲ್ಲ, ಅವರು ತಮ್ಮ ಆತ್ಮವಿಶ್ವಾಸ ಮತ್ತು ವಿಶಿಷ್ಟ ಗುರುತಿನಿಂದ ಅಲ್ಲಿ ನಿಲ್ಲುತ್ತಾರೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಲಗುವ ಮುನ್ನ ಐಶ್ವರ್ಯಾಗೆ ಮೂರು ಬಾರಿ ಕ್ಷಮೆ ಕೇಳುತ್ತಾರೆ ಅಭಿಷೇಕ್ ಬಚ್ಚನ್

ವಯಸ್ಸನ್ನು ಮುಂದಿಟ್ಟುಕೊಂಡು ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ಕಂಗನಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಜನರಿಗೆ ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡಿ ಅಭ್ಯಾಸವಿಲ್ಲದಿದ್ದರೆ, ಅವರು ಈಗಲೇ ಅದಕ್ಕೆ ಒಗ್ಗಿಕೊಳ್ಳುವುದು ಒಳ್ಳೆಯದು. ಐಶ್ವರ್ಯಾ ರೈ ಬಚ್ಚನ್ ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ಕಾನ್ ಫೆಸ್ಟ್​ನ ಭಾಗವಾಗಿದ್ದಾರೆ. ಅವರ ರೆಡ್ ಕಾರ್ಪೆಟ್ ಲುಕ್ ಪ್ರತಿ ವರ್ಷವೂ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಪ್ರಪಂಚದಾದ್ಯಂತದ ಫ್ಯಾಷನಿಸ್ಟರು ಅವರ ಸ್ಟೈಲಿಂಗ್‌ಗಾಗಿ ಕಾಯುತ್ತಿರುತ್ತಾರೆ” ಎಂದು ಹೇಳುವ ಮೂಲಕ ಕಂಗನಾ ಅವರು ಐಶ್ವರ್ಯಾ ಬೆಂಬಲಕ್ಕೆ ನಿಂತಿದ್ದಾರೆ.

ಕಾನ್ 2026ರ ವೇದಿಕೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ರಸಿದ್ಧ ವಿನ್ಯಾಸಕ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ನೀಲಿ ಬಣ್ಣದ ವಿಶೇಷ ಗೌನ್ ಧರಿಸಿದ್ದರು. ವರದಿಗಳ ಪ್ರಕಾರ, ಈ ರಾಯಲ್ ಉಡುಪನ್ನು ಸಿದ್ಧಪಡಿಸಲು ಬರೋಬ್ಬರಿ 1500 ಗಂಟೆಗಳು ಬೇಕಾಗಿದ್ದವಂತೆ. ಆದರೆ, ಈ ವಿಶಿಷ್ಟ ಲುಕ್ ಹೊರಬರುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:00 am, Mon, 25 May 26

Source link

Gold Rate: ಚಿನ್ನದ ಬೆಲೆ ಗ್ರಾಮ್​ಗೆ 30 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 25th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 25: ಕಳೆದ ವಾರಾಂತ್ಯದಲ್ಲಿ 40 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ (Gold Rates) ಇವತ್ತು ಸೋಮವಾರ 30 ರೂ ಹೆಚ್ಚಿದೆ. ಒಂದು ಗ್ರಾಮ್​ಗೆ 14,600 ರೂ ಗಡಿ ದಾಟಿದೆ. ಅರಪಂಜಿ ಚಿನ್ನದ ಬೆಲೆ 15,950 ರೂ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯಲ್ಲೂ ಕಳೆದ ನಾಲ್ಕೈದು ದಿನಗಳಿಂದ ಯಾವ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,938 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,610 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,954 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,938 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,610 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,610 ರೂ
  • ಚೆನ್ನೈ: 14,780 ರೂ
  • ಮುಂಬೈ: 14,610 ರೂ
  • ದೆಹಲಿ: 14,625 ರೂ
  • ಕೋಲ್ಕತಾ: 14,610 ರೂ
  • ಕೇರಳ: 14,610 ರೂ
  • ಅಹ್ಮದಾಬಾದ್: 14,615 ರೂ
  • ಜೈಪುರ್: 14,625 ರೂ
  • ಲಕ್ನೋ: 14,625 ರೂ
  • ಭುವನೇಶ್ವರ್: 14,610 ರೂ

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,396 ರುಪಾಯಿ)
  • ದುಬೈ: 503.25 ಡಿರಾಮ್ (13,063 ರುಪಾಯಿ)
  • ಅಮೆರಿಕ: 141 ಡಾಲರ್ (13,457 ರುಪಾಯಿ)
  • ಸಿಂಗಾಪುರ: 181.60 ಸಿಂಗಾಪುರ್ ಡಾಲರ್ (13,569 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (13,116 ರೂ)
  • ಸೌದಿ ಅರೇಬಿಯಾ: 512 ಸೌದಿ ರಿಯಾಲ್ (13,021 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (13,244 ರುಪಾಯಿ)
  • ಕುವೇತ್: 41.58 ಕುವೇತಿ ದಿನಾರ್ (12,918 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

KPCC Joint Press Conference Live: ಕಾಂಗ್ರೆಸ್ ನಾಯಕರಿಂದ ಜಂಟಿ ಜಂಟಿ ಸುದ್ದಿಗೋಷ್ಠಿ ನೇರಪ್ರಸಾರ – Kannada News | KPCC Joint Press Conference Live: Siddaramaiah, DK Shivakumar, and Surjewala to Hold Joint Press Meet

ಬೆಂಗಳೂರು, ಮೇ 25: ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ನಾಯಕರ ಮಹತ್ವದ ಜಂಟಿ ಸುದ್ದಿಗೋಷ್ಠಿ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಂಟಿಯಾಗಿ ಈ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಮೂವರು ಪ್ರಭಾವಿ ನಾಯಕರು ಒಂದೇ ವೇದಿಕೆಯಲ್ಲಿ ಕೈ ನಾಯಕರ ಮುಂದಿನ ತಂತ್ರಗಾರಿಕೆ ಬಿಚ್ಚಿಡಲಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸುದ್ದಿ ಗೋಷ್ಠಿಯ ನೇರಪ್ರಸಾರ ಇಲ್ಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ! ಇಲ್ಲಿವೆ ಈ ಹೊತ್ತಿನ ಟಾಪ್ ಸುದ್ದಿಗಳು – Kannada News | Tv9 Kannada News Live: Bhatkal Tension, Guarantee Schemes Revision, Maharashtra Mishap, and Yash’s Toxic Update

ಇಲ್ಲಿವೆ ಈ ಹೊತ್ತಿನ ಟಾಪ್ ಸುದ್ದಿಗಳು

ಬೆಂಗಳೂರು, ಮೇ 25: ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸದ (Murinakatte Issue) ಬೆನ್ನಲ್ಲೇ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇತ್ತ ಕರ್ನಾಟಕ ಸರಕಾರವು ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು ಅರ್ಹತೆ ಪರಿಶೀಲಿಸಲಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಯಗಢದಲ್ಲಿ ಕಾರು ಕಂದಕಕ್ಕೆ ಉರುಳಿ 8 ಪ್ರವಾಸಿಗರು ದುರ್ಮರಣಕ್ಕೀಡಾಗಿದ್ದಾರೆ ಹಾಗೂ ನಟ ಯಶ್ ತಮ್ಮ ‘ಟಾಕ್ಸಿಕ್’ ಸಿನಿಮಾ ಕುರಿತು ಖಡಕ್ ಉತ್ತರ ನೀಡಿದ್ದಾರೆ.

ಭಟ್ಕಳದಲ್ಲಿ ಮುರಿನಕಟ್ಟೆ ವಿವಾದ: ಉದ್ವಿಗ್ನತೆ ಹಿನ್ನೆಲೆ ನಿಷೇಧಾಜ್ಞೆ ಜಾರಿ!

ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದ ವೆಂಕಟಾಪುರದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಸಾವಿರಾರು ಯುವಕರು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 25ರಿಂದ ಮೇ 27ರ ವರೆಗೆ ಎರಡು ದಿನಗಳ ಕಾಲ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಗುಂಪುಗೂಡಬಾರದು ಎಂದು ಭಟ್ಕಳ ಎಸಿ ಮಹೇಶ್ ಆದೇಶ ಹೊರಡಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿ ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಸರಕಾರದ ಮಹತ್ವದ ನಿರ್ಧಾರ

ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಿನ್ನೆ ನಡೆದ ಎಸ್‌ಐಆರ್ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಯೋಜನೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮತ್ತು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಉಚಿತ ಸೌಲಭ್ಯಗಳು ತಲುಪುವಂತೆ ಮಾಡಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಫಲಾನುಭವಿಗಳ ಅರ್ಹತೆಯನ್ನು ಸಮಗ್ರವಾಗಿ ಮರುಪರಿಶೀಲಿಸಲಾಗುತ್ತಿದ್ದು, ನಕಲಿ ಅಥವಾ ಅನರ್ಹ ಕಾರ್ಡ್‌ದಾರರಿಗೆ ಗ್ಯಾರಂಟಿ ಹಣ ಹಾಗೂ ಉಚಿತ ವಿದ್ಯುತ್ ಕಟ್ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ

ಮಹಾರಾಷ್ಟ್ರದ ರಾಯಗಢದಲ್ಲಿ ಭೀಕರ ಕಾರು ಅಪಘಾತ

ಮಹಾರಾಷ್ಟ್ರದ ರಾಯಗಢದ ಮಹಾಬಲೇಶ್ವರ-ಪೋಲಾದ್​ಪುರ ರಸ್ತೆಯ ಅಂಬೆನಾಲಿ ಘಾಟ್ ಬಳಿ ಭಾನುವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 1,000 ಅಡಿ ಆಳದ ಭೀಕರ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಎಂಟು ಮಂದಿ ಪ್ರವಾಸಿಗರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾತ್ರಿಯ ಕತ್ತಲಿನಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸದ್ಯಕ್ಕೆ ಕಂದಕದಿಂದ ಕೇವಲ ಎರಡು ಮೃತದೇಹಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿದೆ. ಬಾಕಿ ಉಳಿದಿರುವ ಆರು ಮಂದಿ ಪ್ರವಾಸಿಗರ ಶವಗಳಿಗಾಗಿ ಕಂದಕದ ತಳಭಾಗದಲ್ಲಿ ಸ್ಥಳೀಯರ ನೆರವಿನೊಂದಿಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ ಮಹಾರಾಷ್ಟ್ರದ ರಾಯಗಢದಲ್ಲಿ ಕಂದಕಕ್ಕೆ ಉರುಳಿದ ಕಾರು, ಎಂಟು ಮಂದಿ ಸಾವು

ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಅಪ್ಡೇಟ್

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಸದ್ಯ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಕೆಲವು ನೆಗೆಟಿವ್ ಕಮೆಂಟ್‌ಗಳು ಮತ್ತು ಟೀಕೆಗಳಿಗೆ ನಟ ಯಶ್ ಖಡಕ್ ಆಗಿ ಉತ್ತರಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ನೇರವಾಗಿಯೇ ಉತ್ತರಿಸಿರುವ ಅವರು, ಸಿನಿಮಾ ಮೇಕಿಂಗ್ ಗುಣಮಟ್ಟದ ಕುರಿತು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ ಮಗ ಯಶ್ ಪರ ನಿಂತ ಯಶ್ ತಾಯಿ ಪುಷ್ಪಾ: ‘ಟಾಕ್ಸಿಕ್’ ಬಗ್ಗೆ ಹೇಳಿದ್ದೇನು?

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಗಮನಿಸಿ: 60 ದಿನಗಳ ಕಾಲ ಈ ಪ್ರಮುಖ ರಸ್ತೆ ಕ್ಲೋಸ್​​; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ – Kannada News | Bengaluru Traffic Alert: Kamaraj Road Closed for 60 Days Due to Construction Work; Check Alternative Routes Here

ಬೆಂಗಳೂರು, ಮೇ 25: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಲಾ ಕ್ರಾಸ್ ಸಮೀಪ ಹಳೆಯ ಕಲ್ಲಿನ ಕಲ್ವರ್ಟ್ ತೆರವುಗೊಳಿಸಿ ಹೊಸ RCC ಕಲ್ವರ್ಟ್ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 60 ದಿನಗಳ ಕಾಲ ಕಾಮರಾಜ್ ರಸ್ತೆ ಬಂದ್ ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತಿಳಿಸಿದೆ. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡುಗಳನ್ನು ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾವೆಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ?

  • ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದಿಂದ ನಾಲಾ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
  • ಕಾಮರಾಜ ರಸ್ತೆಯ ಕೆ.ಆರ್ ರಸ್ತೆ – ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಡಿಕನ್ಸನ್ ಜಂಕ್ಷನ್ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣಾರ್ಭಟ! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಪರ್ಯಾಯ ಮಾರ್ಗಗಳು

  • ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು ವೀರಪಿಳ್ಳೆ ಸ್ಟ್ರೀಟ್ ಮೂಲಕ ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
  • ಕಬ್ಬನ್ ರಸ್ತೆ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕೆ.ಆರ್ ರಸ್ತೆ ಕಬ್ಬನ್ ರಸ್ತೆ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕ ತೆರಳಿ ಮಣಿಪಾಲ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು ಡಿಕನ್ಸನ್ ರಸ್ತೆ ಮೂಲಕ ನೇರವಾಗಿ ತೆರಳಿ ಬ್ಲೂ ಸ್ಟೋನ್​​ ಹತ್ತಿರ ಬಲ ತಿರುವು ಪಡೆದುಕೊಂಡು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
  • ಡಿಸ್ಪೆನ್ಸರಿ ರಸ್ತೆ (ಆಲೀಸ್ ಜಂಕ್ಷನ್) ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಡಿಕನ್ಸನ್ ರಸ್ತೆಯ ಮೂಲಕ ನೇರವಾಗಿ ಚಲಿಸಿ ಬ್ಲೂ ಸ್ಟೋನ್ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Petrol Diesel Prices Hike: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ – Kannada News | Bangalore Petrol Price Reaches Rs 110.93: Fuel Prices Hike For 4th Time In 13 Days, Check Today’s Rate List Inside

ಬೆಂಗಳೂರು, ಮೇ 25: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತೈಲ ಬೆಲೆ ಏರಿಕೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕನೇ ಬಾರಿಗೆ ಹೆಚ್ಚಳ ಕಂಡಿದ್ದು, ಕಳೆದ 13 ದಿನಗಳಲ್ಲಿ ಇದು ನಾಲ್ಕನೇ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 2.61 ರೂ. ಏರಿಕೆಯಾಗಿದ್ದರೆ, ಡೀಸೆಲ್ ದರ 2.71 ರೂ. ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯ ನಂತರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 110.93 ರೂ. ಗೆ ತಲುಪಿದೆ. ಭಾನುವಾರಕ್ಕೆ (ಮೇ 24) ಹೋಲಿಸಿದರೆ ಡೀಸೆಲ್ ದರ 95.99 ರೂ. ನಿಂದ 98.54 ರೂ. ಗೆ ಏರಿದೆ. ದೆಹಲಿಯಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂ. ಗಡಿದಾಟಿದೆ.

ಒಂದು ದಿನ ಬಿಟ್ಟು ಒಂದು ದಿನದಂತೆ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿರುವುದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಕೆಲವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಈ ರೀತಿ ಮುಂದುವರಿದರೆ ಜೀವನ ನಡೆಸುವುದು ಕಷ್ಟ ಎಂದು ತಮ್ಮ ಸಂಕಷ್ಟವನ್ನು ವ್ಯಕ್ತಪಡಿಸಿದ್ದಾರೆ. ಈ ನಿರಂತರ ಬೆಲೆ ಏರಿಕೆಯಿಂದ ದಿನನಿತ್ಯದ ಬಳಕೆ ವಸ್ತುಗಳ ಮೇಲೆ ಸಹ ಪರಿಣಾಮ ಬೀರುವ ಆತಂಕವಿದೆ. ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಂಗಳೂರು: ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ತಲೆಗೆ ಹೊಡೆದು ದುಷ್ಕರ್ಮಿಗಳು ಪರಾರಿ – Kannada News | Police Constable Attacked During Night Patrol in Kodical Mangaluru

ಮಂಗಳೂರು, ಮೇ 25: ಮಂಗಳೂರಿನ ಕೋಡಿಕಲ್‌ನಲ್ಲಿ ಭಾನುವಾರ ಮುಂಜಾನೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಹನುಮಂತ್ ಕಾಂತಿ ಅವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಹೊಡೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಾರಾಯಣ ಗುರು ಸಹಕಾರಿ ಸಂಘದ ಕಟ್ಟಡದ ಬಳಿ ಕಾನ್‌ಸ್ಟೆಬಲ್ ಹನುಮಂತ್ ಮತ್ತು ಗೃಹರಕ್ಷಕ ಸಿಬ್ಬಂದಿ ಬಸವರಾಜ್ ಕರ್ತವ್ಯದಲ್ಲಿದ್ದರು. ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಸವಾರರು ನಿಲ್ಲಿಸದೆ ತಲೆ ತಪ್ಪಿಸಿಕೊಂಡಿದ್ದಾರೆ. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸ್ಥಳಕ್ಕೆ ಹಿಂತಿರುಗಿದ ಬೈಕ್‌ ಸವಾರ, ಕಾನ್‌ಸ್ಟೆಬಲ್ ಹನುಮಂತ್ ಅವರ ತಲೆಗೆ ಬಲವಾಗಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಗಾಯಗೊಂಡ ಸಿಬ್ಬಂದಿ ಹಲ್ಲೆಕೋರರನ್ನು ಹಿಡಿಯಲು ಪ್ರಯತ್ನಿಸಿದರಾದರೂ ಅವರು ಸಿಗಲಿಲ್ಲ.

ಸದ್ಯ ತಲೆಗೆ ಸಣ್ಣಪುಟ್ಟ ಗಾಯಗಳಾಗಿರುವ ಹನುಮಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಇಡೀ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉರ್ವಾ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಯತ್ನ (BNS 109) ಸೇರಿದಂತೆ ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version