ಬೆಂಚ್​ನಲ್ಲಿ ಕೂತು ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾರನ್ನು ನೋಡಿದ್ದೇನೆ..! – Kannada News | IND vs WI: Sanju Samson credits Virat Kohli and Rohit Sharma

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 195 ರನ್​ ಕಲೆಹಾಕಿದ್ದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿದ್ದರು.

ಸಂಜು ಸ್ಯಾಮ್ಸನ್ ಅವರ ಅಜೇಯ ಇನಿಂಗ್ಸ್​​ನೊಂದಿಗೆ ಟೀಮ್ ಇಂಡಿಯಾ 19.2 ಓವರ್​ಗಳಲ್ಲಿ 199 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿತು. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಈ ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ನಾನು ಆಟವಾಡಲು ಪ್ರಾರಂಭಿಸಿದ ದಿನದಿಂದ, ದೇಶಕ್ಕಾಗಿ ಆಡಲು ಕನಸು ಕಾಣಲು ಪ್ರಾರಂಭಿಸಿದ ದಿನದಿಂದ, ನಾನು ಕಾಯುತ್ತಿದ್ದ ದಿನ ಇದು ಎಂದು ನಾನು ಭಾವಿಸುತ್ತೇನೆ . ಇಂತಹದೊಂದು ಇನಿಂಗ್ಸ್ ಆಡುವುದು ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ.

ನಾನು ಯಾವಾಗಲೂ ಬಹಳಷ್ಟು ಏರಿಳಿತಗಳನ್ನು ಹೊಂದಿರುವ ವಿಶೇಷ ಪ್ರಯಾಣವನ್ನು ಹೊಂದಿದ್ದೇನೆ. ಆದರೆ ನಾನು ನನ್ನನ್ನು ಅನುಮಾನಿಸುತ್ತಲೇ ಇದ್ದೆ, ಯೋಚಿಸುತ್ತಲೇ ಇದ್ದೆ, ನಾನು ಅಂತಹದೊಂದು ಇನಿಂಗ್ಸ್ ಆಡಬಹುದೇ? ಇದಾಗ್ಯೂ ನಾನು ನನ್ನ ಮೇಲೆ ನಂಬಿಕೆಯಿಟ್ಟಿದ್ದೆ. ಇದೀಗ ಎಲ್ಲವೂ ನಿಜಯವಾಗಿದೆ. ಅಂತಹದೊಂದು ಇನಿಂಗ್ಸ್ ಆಡಲು  ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತ ಭಗವಂತನಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದೇ ವೇಳೆ ಬ್ಯಾಟಿಂಗ್‌ನಲ್ಲಿನ ನಿಮ್ಮ ಪಾತ್ರದ ಸ್ಪಷ್ಟತೆಯ ಬಗ್ಗೆ ಕೇಳಿದಾಗ, ನಾನು ಬಹಳ ಸಮಯದಿಂದ ಈ ಸ್ವರೂಪವನ್ನು ಆಡುತ್ತಿದ್ದೇನೆ. ಸುಮಾರು 10 ರಿಂದ 12 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ ಮತ್ತು ಕಳೆದ 10 ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದೇನೆ.

ನಾನು ತಂಡದಲ್ಲಿದ್ದರೂ ಆಡುವ ಅವಕಾಶ ಸಿಗದಿದ್ದಾಗ, ಬೆಂಚ್ ಮೇಲೆ ಕುಳಿತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪಂದ್ಯವನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆ.

ನಾನು ಸುಮಾರು 50-60 ಪಂದ್ಯಗಳನ್ನು ಆಡಿದ್ದರೂ, ಹೊರಗಿನಿಂದ ಸುಮಾರು 100 ಪಂದ್ಯಗಳನ್ನು ವೀಕ್ಷಿಸಿರುವುದು ನನಗೆ ಹೆಚ್ಚಿನ ಪಕ್ವತೆಯನ್ನು ನೀಡಿದೆ.

ಬೃಹತ್ ಗುರಿ ಬೆನ್ನಟ್ಟುವಾಗ ತಾಳ್ಮೆಯಿಂದ ಇರುವುದು ಮತ್ತು ಪ್ರತಿ ಎಸೆತವನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಿಂದ ಕಲಿತಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಟಕ್ಕೆ ಅನುಗುಣವಾಗಿ ತಮ್ಮ ಆಟವನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಹಾಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತ ಚೇಸ್ ಮಾಡುವಾಗ ನಾನು ಸಹ ಅದೇ ತಂತ್ರವನ್ನು ಪಾಲಿಸಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದನ್ನೂ ಓದಿ: Sanju Samson: ಶತಕ ಮಿಸ್… ವಿರಾಟ್ ಕೊಹ್ಲಿ ದಾಖಲೆ ಉಡೀಸ್

ಈ ಮೂಲಕ ತನ್ನ ಭರ್ಜರಿ ಬ್ಯಾಟಿಂಗ್​ನ ಶ್ರೇಯಸ್ಸಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಕಾರಣ ಎಂದು ಸಂಜು ಸ್ಯಾಮ್ಸನ್ ಪರೋಕ್ಷವಾಗಿ ಹೇಳಿದ್ದಾರೆ.

Published On – 9:21 am, Mon, 2 March 26

Source link

ಬೆಂಚ್​ನಲ್ಲಿ ಕೂತು ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾರನ್ನು ನೋಡಿದ್ದೇನೆ..! – Kannada News | Ind vs wi sanju samson credits virat kohli and rohit sharma

ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ: ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ – Kannada News | Davangere Wrestling: Iran’s Mirza, India’s Raviraj Draw at Duggamma Fair

ದಾವಣಗೆರೆ, ಮಾ.2: ಇಲ್ಲಿನ ದೇವತೆ ದುಗ್ಗಮ್ಮನ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನ ಮಿರ್ಜಾ ಪೈಲ್ವಾನ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಮ್ಮ ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ದಾವಣಗೆರೆಯ ಮಣ್ಣಿನ ಅಖಾಡದಲ್ಲಿ ಬೆವರಳಿಸಿದ ಮಿರ್ಜಾ, ಭಾರತೀಯರ ಪ್ರೀತಿ ಮತ್ತು ಕ್ರೀಡಾಭಿಮಾನವನ್ನು ಹಾಡಿ ಹೊಗಳಿದ್ದಾರೆ. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಫೈನಲ್ ಪಂದ್ಯವು ಭಾರೀ ಕುತೂಹಲ ಮೂಡಿಸಿತ್ತು. ಮಹಾರಾಷ್ಟ್ರದ ಪುಣೆಯ ಖ್ಯಾತ ಕುಸ್ತಿಪಟು ರವಿರಾಜ್ ಹಾಗೂ ಇರಾನ್‌ನ ಮಿರ್ಜಾ ನಡುವೆ ನಡೆದ ಈ ಕಾಳಗದಲ್ಲಿ ಇಬ್ಬರೂ ಸಮಬಲದ ಪೈಪೋಟಿ ನೀಡಿದರು. ರಂಭದಿಂದಲೇ ಇಬ್ಬರೂ ಪಟುಗಳು ದಾಳಿ ಮತ್ತು ಪ್ರತಿದಾಳಿಗಳ ಮೂಲಕ ವಿರಾರು ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಪಂದ್ಯವು ಸಮಬಲದಲ್ಲಿ ಅಂತ್ಯಗೊಂಡಿತು. ಸ್ಪಷ್ಟ ಜಯಶಾಲಿ ಯಾರು ಎಂಬುದು ನಿರ್ಧಾರವಾಗದಿದ್ದರೂ, ಇಬ್ಬರ ಹೋರಾಟಕ್ಕೆ ಅಭಿಮಾನಿಗಳು ಮನಸೋತು ಚಪ್ಪಾಳೆ ತಟ್ಟಿದರು. “ನನ್ನ ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದಿದ್ದರೂ, ಇಲ್ಲಿನ ಜನರ ಪ್ರೀತಿ ನನಗೆ ಧೈರ್ಯ ನೀಡಿದೆ. ಹಿಂದುಸ್ತಾನದ ಕ್ರೀಡಾಭಿಮಾನ ಮತ್ತು ಇಲ್ಲಿನ ಮಣ್ಣಿನ ಸಂಸ್ಕೃತಿ ಅದ್ಭುತ” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಕಲೆಕ್ಷನ್; ಮೊದಲ ದಿನ 75 ಲಕ್ಷ, ನಂತರ ಎರಡು ದಿನ ಮ್ಯಾಜಿಕ್ – Kannada News | The Kerala Story 2: Box Office Rises Amid Love Jihad Controversy and Court Battle

‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದವು. ಈಗ ‘ದಿ ಕೇರಳ ಸ್ಟೋರಿ 2’ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರ ಕೂಡ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ. ಈ ಚಿತ್ರದ ರಿಲೀಸ್​​ಗೆ ಕೋರ್ಟ್ ತಡೆನೀಡಿತ್ತು. ಆ ಬಳಿಕ ತೆರವನ್ನು ತೆಗೆಯಲಾಯಿತು. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 75 ಲಕ್ಷ ರೂಪಾಯಿ ಮಾತ್ರ. ಆದರೆ, ಶನಿವಾರ ಹಾಗೂ ಭಾನುವಾರ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಧೂಳೆಬ್ಬಿಸಿದೆ.

‘ದಿ ಕೇರಳ ಸ್ಟೋರಿ 2’ ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಐಶ್ವರ್ಯಾ ಓಝಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನ ಮಾಡಿದ್ದಾರೆ.ಈ ಚಿತ್ರದ ರಿಲೀಸ್​ಗೆ ಕೇರಳ ಹೈಕೋರ್ಟ್ ತಡೆ ನೀಡಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಮರು ವಿಚಾರಣೆ ನಡೆಸಿ, ಚಿತ್ರದ ಬಿಡುಗಡೆಗೆ ಅನುಮತಿ ನೀಡಿತ್ತು. ಶುಕ್ರವಾರ ಸಿನಿಮಾ ತೆರೆಗೆ ಬಂದಿದೆ.

ಮೊದಲ ದಿನ ಈ ಚಿತ್ರ 75 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 4.65 ಕೋಟಿ ರೂಪಾಯಿ ಹಾಗೂ 5 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ ಅಲ್ಲಿ ಏರಿಕೆ ಕಂಡಿದೆ. ‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಲವ್ ಜಿಹಾದ್ ಕುರಿತ ಕಥೆಯನ್ನು ಹೇಳಲಾಗುತ್ತಿದೆ. ಈ ಕಾರಣದಿಂದ ಸಿನಿಮಾ ವಿವಾದ ಸೃಷ್ಟಿಸಿದೆ.

ಇದನ್ನೂ ಓದಿ: ವಿವಾದದ ನಡುವೆ ‘ದಿ ಕೇರಳ ಸ್ಟೋರಿ 2’ ರಿಲೀಸ್; ಹೀನಾಯ ಕಲೆಕ್ಷನ್

ಈ ಮೊದಲು ರಿಲೀಸ್ ಆಗಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ, ಹಿಂದೂ ಯುವತಿಯರನ್ನು ಯಾವ ರೀತಿಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ, ಅವರನ್ನು ಐಸಿಸ್​​ಗೆ ಸೇರ್ಪಡೆ ಮಾಡುತ್ತಾರೆ ಎಂಬುದನ್ನು ತೋರಿಸಲಾಗಿತ್ತು. ಈ ಚಿತ್ರಕ್ಕೆ ಪಶ್​ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಬ್ಯಾನ್ ಹೇರುವ ಪ್ರಯತ್ನ ಮಾಡಿ ವಿಫಲರಾಗಿದ್ದವು. ಈಗ ವಿಪುಲ್ ಅಮೃತ್​ಲಾಲ್ ಶಾ ನಿರ್ಮಾಣದ ಸಿನಿಮಾ ವಿವಾದ ಸೃಷ್ಟಿಸುತ್ತಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ ಬಿಎಂಟಿಸಿ ಬಸ್, ಆಮೇಲೇನಾಯ್ತು ನೋಡಿ – Kannada News | BMTC Bus Breaks Down on Railway Track Near Anekal, Major Accident Averted After Traffic Chaos

ಆನೇಕಲ್, ಮಾರ್ಚ್​ 2: ಬೆಂಗಳೂರಿನ ಆನೇಕಲ್ ಸಮೀಪದ ರೈಲ್ವೆ ಗೇಟ್ ಬಳಿ ಬಿಎಂಟಿಸಿ ಬಸ್ಸೊಂದು ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ ಘಟನೆ ನಡೆದಿದೆ. ಆನೇಕಲ್‌ನಿಂದ ಅತ್ತಿಬೆಲೆ ಕಡೆಗೆ ಹೋಗುತ್ತಿದ್ದ ಬಸ್ಸು ರೈಲು ಹಳಿಯ ಮೇಲೆ ಸಾಗುತ್ತಿದ್ದಂತೆಯೇ ಕೆಟ್ಟ ನಿಂತಿತು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಕಿಲೋ ಮೀಟರ್​​​ಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು. ಅದೃಷ್ಟವಶಾತ್, ರೈಲ್ವೆ ಪಾಸಿಂಗ್ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಕೌಟ್​ನಲ್ಲಿ ನಾಲ್ಕು ತಂಡಗಳು: ಇಲ್ಲಿದೆ ವೇಳಾಪಟ್ಟಿ

Source link

ಬೆಂಗಳೂರಿನಲ್ಲಿ ನೂರಾರು ಮರಗಳ ಮಾರಣಹೋಮಕ್ಕೆ ರೈಲ್ವೆ ಇಲಾಖೆ ಸಿದ್ದತೆ: ಪರಿಸರ ಹೋರಾಟಗಾರರ ಆಕ್ರೋಶ – Kannada News | Mass Tree Felling Planned Near Sir M. Visvesvaraya Railway Station in Bengaluru Sparks Environmental Outrage

ಸರ್​​ಎಂ ವಿಶ್ವೇಶ್ವರಯ್ಯ ರೈಲ್ವೆ ಸ್ಟೇಷನ್​​ ಹೊರಬಾಗದ ನೋಟImage Credit source: tv9

ಬೆಂಗಳೂರು, ಮಾರ್ಚ್​ 2: ಬೈಯಪ್ಪನಹಳ್ಳಿ ಬಳಿಯ ಸರ್​ಎಂ ವಿಶ್ವೇಶ್ವರಯ್ಯ ರೈಲ್ವೆ ಸ್ಟೇಷನ್​ನಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ಬರೋಬ್ಬರಿ 269 ಮರಗಳನ್ನು ಕಡಿಯಲು ರೈಲ್ವೆ ಇಲಾಖೆ (Indian Railways) ಮುಂದಾಗುತ್ತಿದೆ. ಇದಕ್ಕೆ ಪರಿಸರ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿದೆ. ಬೈಯಪ್ಪನಹಳ್ಳಿಯಲ್ಲಿರುವ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿರುವ 269 ಮರಗಳು ಹತ್ತಾರು ವರ್ಷಗಳ ಹಳೆಯದ್ದಾಗಿವೆ. ಅವುಗಳು ಬೃಹತ್ ಮರಗಳಾಗಿದ್ದು, ಹಾಗಾಗಿ ಯಾವುದೇ ಕಾರಣಕ್ಕೂ ಅವುಗಳನ್ನು ಕಡಿಯಬಾರದು ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಮರಗಳನ್ನು ಕಡಿಯಲು ಮುಂದಾದರೆ ರೈಲು ನಿಲ್ದಾಣದ ಎದುರು ಬೃಹತ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಆದರೆ, ರೈಲ್ವೆ ಇಲಾಖೆ ಮಾತ್ರ ಯಾವುದನ್ನೂ ಲೆಕ್ಕಿಸದೆ ಮರಗಳನ್ನು ಕಡಿಯಲು ಸಿದ್ದತೆ ಮಾಡಿಕೊಂಡಿದೆ.

ರೈಲ್ವೆ ಕೋಚ್​ಗಳ ತಪಾಸಣೆ ಮತ್ತು ನಿರ್ವಹಣೆ ಮಾಡುವುದಕ್ಕಾಗಿ ರೈಲ್ವೆ ಡಿಪೋ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಇಲಾಖೆ ಉದ್ದೇಶಿಸಿರುವ ಅದೇ ಜಾಗದಲ್ಲಿ 269 ಮರಗಳಿವೆ. ಹೀಗಾಗಿ ಆ ಮರಗಳನ್ನು ಕಡಿದು ಕಾಮಗಾರಿ ಮಾಡಲು ರೈಲ್ವೆ ಇಲಾಖೆ ತೀರ್ಮಾನ ಮಾಡಿದೆ. ಇದಕ್ಕೆ ಈಗ ಸ್ಥಳೀಯರಿಂದಲೂ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೂ ತಟ್ಟಿದ ಇರಾನ್-ಇಸ್ರೇಲ್ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು, ಪ್ರಯಾಣಿಕರ ಪರದಾಟ

ಒಟ್ಟಿನಲ್ಲಿ, ಅಭಿವೃದ್ಧಿ ಅನ್ನೋ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಾ ಹೋದರೆ ಗಾರ್ಡನ್ ಸಿಟಿ ಹೋಗಿ ಕಾಂಕ್ರೀಟ್ ಜಂಗಲ್ ಆಗುವುದರಲ್ಲಿ ಅನುಮಾನವಿಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ – Kannada News | Rashmika Mandanna And Vijay Devarakonda Attend Allu Sirish Wedding program

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ವಿವಾಹ ಆದರು. ಈ ಮದುವೆ ಬಳಿಕ ಅವರು ಅಲ್ಲು ಅರ್ಜುನ್ ಮನೆ ಮದುವೆಗೆ ಭೇಟಿ ನೀಡಿದ್ದಾರೆ. ಇದಕ್ಕೆ ಕಾರಣ, ಅಲ್ಲು ಸಿರಿಶ್ ಮದುವೆ. ಹೌದು, ಅಲ್ಲು ಸಿರಿಶ್ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿವೆ. ಈ ಸಂದರ್ಭದಲ್ಲಿ ರಶ್ಮಿಕಾ ಹಾಗೂ ವಿಜಯ್ ತೆರಳಿ, ನವ ದಂಪತಿ ಆಗಲಿರುವ ಜೋಡಿಗೆ ಶುಭ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್​ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಎಷ್ಟು ದಿನಗಳವರೆಗೆ ಮುಂದುವರೆಯಬಹುದು, ಟ್ರಂಪ್ ಹೇಳಿದ್ದೇನು? – Kannada News | Trump on US Iran War: Duration, Israel’s Role and Epic Fury Operations

ವಾಷಿಂಗ್ಟನ್, ಮಾರ್ಚ್​ 02: ಇರಾನ್(Iran) ಜೊತೆ ನಡೆಯುತ್ತಿರುವ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಮುಖ ಹೇಳಿಕೆ ನೀಡಿದ್ದಾರೆ. ಸಂಘರ್ಷ ಮುಂದಿನ ನಾಲ್ಕು ವಾರಗಳವರೆಗೆ ಮುಂದುವರೆಯಬಹುದು ಎಂದು ಅವರು ಹೇಳಿದ್ದಾರೆ. ಇದು ನಾಲ್ಕು ವಾರಗಳು ಅಥವಾ ಅದಕ್ಕಿಂತ ಮುಂಚೆಯೂ ಅಂತ್ಯಗೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಅಮೇರಿಕದ ಸೈನಿಕರಿಗೆ ಅವರು ಗೌರವ ಸಲ್ಲಿಸಿದರು.

ಭಾನುವಾರ ಪ್ರತಿಷ್ಠಿತ ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ, ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಯುಎಸ್ ಮಿಲಿಟರಿ ಕಾರ್ಯಾಚರಣೆ ಇನ್ನೂ ನಾಲ್ಕು ವಾರಗಳವರೆಗೆ ಇರುತ್ತದೆ ಎಂದರು. ಇದು ದೊಡ್ಡ ದೇಶ, ಆದ್ದರಿಂದ ಇದು ನಾಲ್ಕು ವಾರಗಳು ಅಥವಾ ಅದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳಬಹುದು ಎಂದರು.

ಇರಾನ್ ಕಡೆಯವರು ಮಾತನಾಡಲು ಬಯಸಿದ್ದರು, ಆದರೆ ಕಳೆದ ವಾರ ಅವರು ಆ ಪ್ರಯತ್ನ ಮಾಡಬೇಕಿತ್ತು ಎಂದು ಅವರು ವಿವರಿಸಿದರು. ಅವರು ಪ್ರಸ್ತುತ ಜನರಲ್‌ಗಳನ್ನು ಭೇಟಿ ಮಾಡುತ್ತಿದ್ದಾರೆ. , 48 ಉನ್ನತ ಇರಾನಿನ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಯುದ್ಧನೌಕೆಗಳು ನಾಶವಾಗಿವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ನಿಜವಾಗಿಯೂ ಅಮೆರಿಕ ಹೇಳಿದ್ದಕ್ಕೆ ಇರಾನ್ ಒಪ್ಪುತ್ತಿರಲಿಲ್ಲವೇ? ಅದಕ್ಕೆ ಈ ಯುದ್ಧ ಪ್ರಾರಂಭವಾಯಿತೇ?

ಕಾರ್ಯಾಚರಣೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೊನೆಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಯುದ್ಧ ಕಾರ್ಯಾಚರಣೆಗಳು ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ ಮತ್ತು ಕಾರ್ಯಾಚರಣೆಗಳು ಪೂರ್ಣಗೊಳ್ಳುವವರೆಗೆ ಮುಂದುವರಿಯುತ್ತವೆ.ನಮ್ಮ ಉದ್ದೇಶವು ತುಂಬಾ ಪ್ರಬಲವಾಗಿದೆ.

ಇರಾನ್ ಅನ್ನು ಯಾರು ಮುನ್ನಡೆಸಲು ಬಯಸುತ್ತಾರೆ ಎಂದು ಟ್ರಂಪ್ ಅವರನ್ನು ಕೇಳಿದಾಗ, ನನ್ನ ಬಳಿ ಮೂರು ಉತ್ತಮ ಆಯ್ಕೆಗಳಿವೆ, ಆದರೆ ಈಗ ನಾನು ಅವರಿಗೆ ಹೇಳುವುದಿಲ್ಲ ಎಂದು ಹೇಳಿದರು. ಕಳೆದ 36 ಗಂಟೆಗಳಲ್ಲಿ, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡೆಸಿದ ಸಶಸ್ತ್ರ ದಾಳಿಗಳು ಇರಾನ್ ಅನ್ನು ಧ್ವಂಸಗೊಳಿಸಿವೆ. ನೂರಾರು ಗುರಿಗಳು ನಿಮಿಷಗಳಲ್ಲಿ ನಾಶವಾದವು ಮತ್ತು ಒಂಬತ್ತು ಹಡಗುಗಳು ಮತ್ತು ಅವುಗಳ ನೌಕಾ ಕಟ್ಟಡಗಳು ಬೂದಿಯಾದವು.

ಇದಲ್ಲದೆ, ಈ ಇಸ್ರೇಲಿ ಮತ್ತು ಅಮೇರಿಕನ್ ದಾಳಿಗಳು ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಸಾವಿಗೆ ಕಾರಣವಾಯಿತು, ಇದು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಿತು ಮತ್ತು ಕೊಲ್ಲಿಯಲ್ಲಿರುವ ಯುಎಸ್ ನೆಲೆಗಳ ಮೇಲೆ ಪದೇ ಪದೇ ಬಾಂಬ್ ದಾಳಿ ಮಾಡಿತು.

ವೀಡಿಯೊ ಸಂದೇಶದಲ್ಲಿ, ಈ ಯುದ್ಧವು ಕೇವಲ ಅಧಿಕಾರಕ್ಕಾಗಿ ಅಲ್ಲ, ನ್ಯಾಯ ಮತ್ತು ಭದ್ರತೆಗಾಗಿ ಹೋರಾಟ ಎಂದು ಟ್ರಂಪ್ ಹೇಳಿದ್ದಾರೆ. ಕಳೆದ 36 ಗಂಟೆಗಳಲ್ಲಿ ಅಮೆರಿಕ ಮತ್ತು ಅದರ ಪಾಲುದಾರರು ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ಇದು ಜಗತ್ತು ಕಂಡ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಮಿಲಿಟರಿ ಕಾರ್ಯಾಚರಣೆಯಾಗಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಸೌಲಭ್ಯಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ನೂರಾರು ಗುರಿಗಳನ್ನು ಈ ದಾಳಿಯಲ್ಲಿ ಗುರಿಯಾಗಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮತ್ತೆ ಸಂಡೂರಿನಲ್ಲಿ ಗಣಿ ವಿಸ್ತರಣೆ ಆತಂಕ: ಸುಪ್ರೀಂ ಕೋರ್ಟ್ ಅದೇಶ ಮೀರಿ ಹೆಚ್ಚುವರಿ ಗಣಿಗಾರಿಕೆಗೆ ನಡೆಯುತ್ತಿದೆಯಾ ಸಿದ್ಧತೆ? – Kannada News | Mining Expansion Fears in Sandur: Allegations of Excess Iron Ore Extraction Beyond Supreme Court Limit in Ballari

ಮತ್ತೆ ಸಂಡೂರಿನಲ್ಲಿ ಗಣಿ ವಿಸ್ತರಣೆ ಆತಂಕImage Credit source: tv9

ಬಳ್ಳಾರಿ, ಮಾರ್ಚ್ 2: ಗಣಿನಾಡು ಎಂದೇ ಪ್ರಸಿದ್ಧಿಯಲ್ಲಿರುವ ಬಳ್ಳಾರಿಯ (Ballari) ಸಂಡೂರಿನಲ್ಲಿ (Sandur) ಮತ್ತೆ ಗಣಿ ವಿಸ್ತರಣೆ ಭೀತಿ ತಲೆದೋರಿದೆ. ಅರಣ್ಯ ಪ್ರದೇಶದ ಹೆಚ್ಚುವರಿ ಭೂಮಿಯನ್ನು ಗಣಿಗಾರಿಕೆಗೆ ನೀಡಲು ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಲ್ಲಿ ಆತಂಕ ಹೆಚ್ಚಿಸಿದೆ. ಸಂಡೂರಿನ ಸ್ವಾಮಿಮಲೈ ಅರಣ್ಯ ವ್ಯಾಪ್ತಿಯ ದೇವದಾರಿ ಅರಣ್ಯ ಪ್ರದೇಶದಲ್ಲಿ ಸುಮಾರು 1,000 ಎಕರೆ ಹಾಗೂ ರಾಮಗಡ ಅರಣ್ಯ ಪ್ರದೇಶದಲ್ಲಿ 150 ಎಕರೆ ಸೇರಿ ಒಟ್ಟು 1,150 ಎಕರೆ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ನೀಡಲು ಯತ್ನ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಭೂಮಿಯನ್ನು ಕುದುರೆಮುಖ ಐರನ್ ಓರ್ ಕಂಪನಿ (KIOCL) ಮತ್ತು ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL)ಗೆ ಲೀಸ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ?

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಂಡೂರು ಭಾಗದಲ್ಲಿ ವರ್ಷಕ್ಕೆ 30 ಮಿಲಿಯನ್ ಟನ್‌ಗಳಷ್ಟು ಮಾತ್ರ ಅದಿರು ಗಣಿಗಾರಿಕೆಗೆ ಅವಕಾಶವಿದೆ. ಆದರೆ ಇದನ್ನು 50 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದು ನ್ಯಾಯಾಲಯದ ನಿಯಮ ಉಲ್ಲಂಘನೆಯಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಸಂಡೂರಿನ ಅರಣ್ಯ ಪ್ರದೇಶದ ಒಟ್ಟು 32 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈಗಾಗಲೇ ಗಣಿಗಾರಿಕೆಯಿಂದ ಗಣಿ ಧೂಳು, ಅಂತರ್ಜಲ ಸಮಸ್ಯೆ, ಆರೋಗ್ಯ ಸಮಸ್ಯೆಗಳು ಮತ್ತು ಪರಿಸರ ಹಾನಿ ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳೀಯರು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತಷ್ಟು ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ನೀಡಿದರೆ ಲಕ್ಷಾಂತರ ಮರಗಳು ನಾಶವಾಗುವ ಸಾಧ್ಯತೆ ಇದೆ ಎಂದು ಜನರು ಎಚ್ಚರಿಸಿದ್ದಾರೆ.

ಸ್ಥಳೀಯರ ಅಭಿಪ್ರಾಯದಂತೆ, ಈಗಾಗಲೇ ಸಂಡೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಎಂಡಿಸಿ (NMDC) ಗಣಿಯಿಂದಲೇ ಅಗತ್ಯವಾದ ಅದಿರನ್ನು ಪಡೆದು ಕೈಗಾರಿಕೆಗಳನ್ನು ನಡೆಸಬಹುದು. ಕುದುರೆಮುಖ ಐರನ್ ಓರ್ ಕಂಪನಿ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳನ್ನು ಬಳ್ಳಾರಿ ಜಿಲ್ಲೆಯ ಕುಡುತಿನಿ ಭಾಗದಲ್ಲಿ ಸ್ಥಾಪಿಸಲು ರೈತರು ಸಾವಿರಾರು ಎಕರೆ ಭೂಮಿ ನೀಡಿರುವುದಾಗಿ ಹೇಳಲಾಗಿದೆ. ಆದ್ದರಿಂದ ಹೊಸ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಬದಲಾಗಿ ಈಗಿರುವ ಸಂಪನ್ಮೂಲಗಳನ್ನು ಬಳಸಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ಯಾವುದೇ ಕಾರಣಕ್ಕೂ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು. ಪರಿಸರ, ಅರಣ್ಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ?

ಒಟ್ಟಿನಲ್ಲಿ, ಸಂಡೂರಿನ ಹಸಿರು ಕಾಡುಗಳನ್ನು ಮತ್ತಷ್ಟು ಗಣಿಗಾರಿಕೆಗೆ ತೆರೆದುಕೊಟ್ಟರೆ ಸಸ್ಯ-ಪ್ರಾಣಿ ಸಂಕುಲಕ್ಕೆ ಭಾರೀ ಹಾನಿಯಾಗುವ ಸಾಧ್ಯತೆ ಇದೆ. ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯೂ ಸಮಾನವಾಗಿ ಮುಖ್ಯ ಎಂದು ಸ್ಥಳೀಯರು, ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version