ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್ – Kannada News | Actor Vinay Rajkumar takes part in Karnataka State Police run in Mysore

ನಟ ವಿನಯ್ ರಾಜ್​ಕುಮಾರ್ (Vinay Rajkumar) ಅವರು ಮೈಸೂರಿನಲ್ಲಿ ನಡೆದ ಡ್ರಗ್ಸ್ ವಿರೋಧಿ ಜಾಗೃತಿ ಮ್ಯಾರಥಾನ್​ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಇದರಲ್ಲಿ ಭಾಗವಹಿಸಿದ್ದಕ್ಕೆ ಖುಷಿ ಆಗುತ್ತಿದೆ. ನಮ್ಮ ಪೊಲೀಸ್, ನಮ್ಮ ಹೆಮ್ಮೆ ಎಂಬ ಟ್ಯಾಗ್ ಲೈನ್ ಕೇಳಲು ಬಹಳ ಖುಷಿ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಇತ್ತೀಚೆಗೆ ಮೈಸೂರಲ್ಲಿ ಪೊಲೀಸರು ದೊಡ್ಡ ಡ್ರಗ್ಸ್ (Drugs) ಜಾಲ ಪತ್ತೆ ಮಾಡಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಕೆಲವರು ಮನರಂಜನೆಗೆ, ಕೆಲವರು ನೋವಿಗೆ ಡ್ರಗ್ಸ್ ಸೇವಿಸುತ್ತಾರೆ. ಅಂಥವರನ್ನು ರಿಹ್ಯಾಬ್ ಸೆಂಟರ್​​ಗೆ ಕಳಿಸಬೇಕು’ ಎಂದಿದ್ದಾರೆ ವಿನಯ್ ರಾಜ್​ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಖಮೇನಿ ಹತ್ಯೆ ಖಂಡಿಸಿ ಕರಾಚಿಯಲ್ಲಿ ಹಿಂಸಾಚಾರ, ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ, 10 ಮಂದಿ ಸಾವು – Kannada News | US Israel Strike Kills Khamenei: Karachi Embassy Attacked Amidst Iran Vows Retaliation

ಕರಾಚಿ, ಮಾರ್ಚ್​ 01: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್(Iran) ಮೇಲೆ ವೈಮಾನಿಕ ದಾಳಿ ನಡೆಸಿದ ಪರಿಣಾಮ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಈ ಹತ್ಯೆಯನ್ನು ಖಂಡಿಸಿ, ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕರಾಚಿಯಲ್ಲಿರುವ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೈಯಲ್ಲಿ ಕೋಲು ಹಾಗೂ ಕಲ್ಲುಗಳನ್ನು ಹಿಡಿದಿದ್ದ ನೂರಾರು ಜನರ ಗುಂಪು ರಾಯಭಾರಿ ಕಚೇರಿಯತ್ತ ನುಗ್ಗಿ ಕಲ್ಲು ತೂರಾಟ ನಡೆಸಿತು.

ಇರಾನ್ ನಾಯಕನ ಹತ್ಯೆಗೆ ಅಮೆರಿಕವೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಭದ್ರತಾ ಪಡೆಗಳು ಓಪನ್ ಫೈರಿಂಗ್ ಮಾಡಿದ್ದಾರೆ. ಅಮೆರಿಕ ಮಿತ್ರರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಟ್ರಂಪ್ ಈ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಮ್ಮ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಿದರೆ ನೀವು ಎಂದೂ ಕಂಡರಿಯದ ರೀತಿಯಲ್ಲಿ ದಾಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರಾಚಿಯಲ್ಲಿ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್‌ನ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಪ್ರದೇಶವನ್ನು ಅಸ್ಥಿರಗೊಳಿಸಲು ಅಮೆರಿಕ ಮತ್ತು ಇಸ್ರೇಲ್‌ನ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಮೆರಿಕ-ಇಸ್ರೇಲ್ ದಾಳಿಯಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Video: ಇರಾನ್ ಸರ್ವೋಚ್ಚ ನಾಯಕ ಖಮೇನಿಯ ಸಾವು ಘೋಷಿಸುವಾಗ ಕಣ್ಣೀರು ಹಾಕಿದ ಇರಾನ್ ಟಿವಿ ನಿರೂಪಕ

ಈಗ, ಇರಾನ್ ಈ ದಾಳಿಗಳಿಗೆ ಬಲವಾದ ಪ್ರತ್ಯುತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಇದು ಈ ಪ್ರದೇಶದಲ್ಲಿನ ಅನೇಕ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ, ಈ ಕ್ರಮವು ಹೆಚ್ಚಿನ ಗಲ್ಫ್ ರಾಷ್ಟ್ರಗಳನ್ನು ಕೆರಳಿಸಿದೆ, ಅವರು ಈ ಕೃತ್ಯವನ್ನು ಖಂಡಿಸಿದ್ದಾರೆ.

ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಸುಪ್ರೀಂ ಲೀಡರ್ ಅವರ ಎರಡನೇ ಮಗ ಮೊಜ್ತಬಾ ಖಮೇನಿ ಅವರು ಅತ್ಯಂತ ಸಂಭಾವ್ಯ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 1969 ರಲ್ಲಿ ಜನಿಸಿದ ಮೊಜ್ತಬಾ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಇರಾನ್‌ನ ಕ್ಲೆರಿಕಲ್ ಸ್ಥಾಪನೆ ಎರಡರೊಂದಿಗೂ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ಇರಾನ್-ಇರಾಕ್ ಯುದ್ಧದ ಅಂತಿಮ ಹಂತಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಈಗ ತೆರೆಮರೆಯಲ್ಲಿ ಬಲವಾದ ಪ್ರಭಾವ ಹೊಂದಿರುವ ಮಧ್ಯಮ ಶ್ರೇಣಿಯ ಧರ್ಮಗುರುವಾಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್​ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ! – Kannada News | D.K. Shivakumar Expresses Concern Over Kannadigas Stranded Amidst Middle East Conflict

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್​ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ!

ಬೆಂಗಳೂರು, ಮಾರ್ಚ್ 01: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದುಬೈ ಹಾಗೂ ಇರಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಿಲುಕಿಕೊಂಡಿರುವವರೊಂದಿಗೆ ಸ್ವತಃ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲವೆಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಮತ್ತು ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇನೆ. ಆದರೆ ಕಾಂಟ್ಯಾಕ್ಟ್‌ಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ದೆಹಲಿ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.ಅಲ್ಲಿ ಲಕ್ಷಾಂತರ ಭಾರತೀಯರು ಇದ್ದಾರೆ. ಕರ್ನಾಟಕ ಮತ್ತು ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?

ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಡಿಸಿಎಂ, ಮಕ್ಕಳ ಶಾಲೆಗಳ ಮೇಲಿನ ದಾಳಿಗಳು ಖಂಡನೀಯ ಎಂದು ಹೇಳಿದರು. ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಇಂತಹ ದಾಳಿಗಳು ಸರಿಯಲ್ಲ. ಆದರೆ ನಾವು ಆತಂಕಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಸಾಧ್ಯತೆ ಇಲ್ಲ, ಏನೇ ಮಾಹಿತಿ ಬಂದರೂ ವಿದೇಶಾಂಗ ಇಲಾಖೆಯಿಂದಲೇ ಬರಬೇಕು ಎಂದ ಅವರು, ಕನ್ನಡ ಸಂಘಟನೆಗಳು ಸಿಲುಕಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ವಿಶ್ವಕಪ್​ಗೂ ತಟ್ಟಿದ ಯುದ್ಧದ ತಾಪ..! – Kannada News | T20 World Cup 2026: ICC Working On Alternative Flight Plans For Players

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ವಾಯು ದಾಳಿ ಮುಂದುವರೆಸಿದೆ. ಈ ವಾಯು ದಾಳಿಗೆ ಪ್ರತೀಕಾರವಾಗಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನಿ ಪ್ರತಿ ದಾಳಿ ನಡೆಸಿದೆ. ಈ ದಾಳಿಗಳಿಂದಾಗಿ ವಾಯು ಸಂಚಾರದ ಮೇಲೆ ಪರಿಣಾಮ ಬೀರುತ್ತಿದ್ದು, ಅನೇಕ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಇನ್ನು ಕೆಲ ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ. ಈ ರದ್ದಾಗುವಿಕೆಯು ಟಿ20 ವಿಶ್ವಕಪ್ ಮೇಲೂ ಪರಿಣಾಮ ಬೀರಿದೆ.

ಇರಾನ್ ಮತ್ತು ಗಲ್ಫ್ ಪ್ರದೇಶದ ವೈಮಾನಿಕ ಮಾರ್ಗಗಳನ್ನು ಮುಚ್ಚಿರುವುದರಿಂದ ದುಬೈ ಮತ್ತು ಕತಾರ್ ಮೂಲಕ ಹಾದುಹೋಗುವ ವಿಮಾನಯಾನಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇತ್ತ ಭಾರತ ಮತ್ತು ಶ್ರೀಲಂಕಾ ಆಯೋಜಿಸಿದ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ ಕೆಲ ತಂಡಗಳು ಹಾಗೂ ಸಿಬ್ಬಂದಿಗಳು ಇದೇ ವಾಯು ಮಾರ್ಗದ ಮೂಲಕ ಸಂಚರಿಸಬೇಕಿರುವುದರಿಂದ ಸಮಸ್ಯೆ ಎದುರಾಗಿದೆ.

ಪರ್ಯಾಯ ವಿಮಾನ ಮಾರ್ಗಗಳು:

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ಗಾಗಿ ಬಂದಿರುವ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಗಾಗಿ ಐಸಿಸಿ (ICC) ‘ಪರ್ಯಾಯ ವಿಮಾನ ಯೋಜನೆ’ ಗಳನ್ನು ರೂಪಿಸುತ್ತಿದೆ.

ಗಲ್ಫ್ ರಾಷ್ಟ್ರಗಳ ವಾಯುಪ್ರದೇಶ ಅಪಾಯಕಾರಿಯಾಗಿರುವುದರಿಂದ, ತಂಡಗಳನ್ನು ಯುರೋಪ್ ಅಥವಾ ಆಗ್ನೇಯ ಏಷ್ಯಾದ ಸುರಕ್ಷಿತ ಮಾರ್ಗಗಳ ಮೂಲಕ ಕಳುಹಿಸಲು ಐಸಿಸಿ ಮುಂದಾಗಿದೆ.

ಯುದ್ಧದ ಹೊರತಾಗಿಯೂ, ಭಾರತದಲ್ಲಿ ನಡೆಯುತ್ತಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಐಸಿಸಿ ಸ್ಪಷ್ಟಪಡಿಸಿದೆ. ಏಕೆಂದರೆ ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದ್ದು, ಇನ್ನು ಕೇವಲ 4 ತಂಡಗಳು ಮಾತ್ರ ತವರಿಗೆ ತೆರಳಬೇಕಿದೆ.

ಈ ತಂಡಗಳನ್ನು ಸುರಕ್ಷಿತವಾಗಿ ಕಳುಹಿಸಿಕೊಡಲು ಐಸಿಸಿ ಪರ್ಯಾಯ ವಿಮಾನ ಮಾರ್ಗಗಳಿಗಾಗಿ ಮಾತುಕತೆ ನಡೆಸುತ್ತಿದೆ. ಅದರಂತೆ ಟಿ20 ವಿಶ್ವಕಪ್​ನಲ್ಲಿ ಉಳಿದಿರುವ ತಂಡಗಳನ್ನು ಯುರೋಪ್ ಅಥವಾ ಆಗ್ನೇಯ ಏಷ್ಯಾದ ಸುರಕ್ಷಿತ ಮಾರ್ಗಗಳ ಮೂಲಕ ಕಳುಹಿಸಲು ಐಸಿಸಿ ಪ್ಲ್ಯಾನ್ ರೂಪಿಸುತ್ತಿದೆ.

ಖಮೇನಿ ಹತ್ಯೆ:

ಫೆಬ್ರವರಿ 28, 2026 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ . ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮಾಡಿದೆ. ಈ ದಾಳಿಯು ಮುಂದುವರೆಯುವ ಸಾಧ್ಯತೆಯಿದೆ.

ಇತ್ತ ಟಿ20 ವಿಶ್ವಕಪ್​ ಮಾರ್ಚ್ 8 ರಂದು ಮುಗಿಯಲಿದೆ. ಇಲ್ಲಿ ಭಾರತ ತಂಡವನ್ನು ಹೊರತುಪಡಿಸಿ ನ್ಯೂಝಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳು ತವರಿಗೆ ವಾಪಾಸ್ಸಾಗಬೇಕಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆಯನ್ನು ರೂಪಿಸಲು ಐಸಿಸಿ ನಿರ್ಧರಿಸಿದ್ದು, ಅದರಂತೆ ಉಳಿದಿರುವ ತಂಡಗಳನ್ನು ಯುರೋಪ್ ವಾಯು ಮಾರ್ಗಗಳ ಮೂಲಕ ಕಳುಹಿಸಿಕೊಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Auqib Nabi: 18 ಪಂದ್ಯಗಳಲ್ಲಿ ಬರೋಬ್ಬರಿ 104 ವಿಕೆಟ್ಸ್..!

ಸೆಮಿಫೈನಲ್ ವೇಳಾಪಟ್ಟಿ:

  • ಮಾರ್ಚ್ 4, ಮೊದಲ ಸೆಮಿಫೈನಲ್: ಸೌತ್ ಆಫ್ರಿಕಾ vs ನ್ಯೂಝಿಲೆಂಡ್ (ಈಡನ್ ಗಾರ್ಡನ್ಸ್ ಮೈದಾನ, ಕೊಲ್ಕತ್ತಾ)
  • ಮಾರ್ಚ್ 5, ದ್ವಿತೀಯ ಸೆಮಿಫೈನಲ್: ಇಂಗ್ಲೆಂಡ್ vs ಭಾರತ ಅಥವಾ ವೆಸ್ಟ್ ಇಂಡೀಸ್ (ವಾಂಖೆಡೆ ಸ್ಟೇಡಿಯಂ, ಮುಂಬೈ)
  • ಮಾರ್ಚ್ 8, ಫೈನಲ್ ಪಂದ್ಯ-  ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್​.

Source link

ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ? – Kannada News | Iran US Israel war aggression, how it affects gold, silver, stock markets this week

ಇರಾನ್ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್

ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳನ್ನು ಎಸಗಿರುವುದು ಈಗ ಪಶ್ಚಿಮ ಏಷ್ಯಾದಲ್ಲಿ (West Asia crisis) ದೊಡ್ಡ ಸಂಘರ್ಷ ವಾತಾವರಣ ಏರ್ಪಟ್ಟಿದೆ. ಈ ಯುದ್ದ ಅನಿರೀಕ್ಷಿತವಲ್ಲವಾದರೂ, ಮಾರುಕಟ್ಟೆಗಳಿಗೂ ಈ ಸಂದರ್ಭವು ಅನಿರೀಕ್ಷಿತವಲ್ಲವಾದರೂ, ಸಾಕಷ್ಟು ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಸ್ಟ್ರೇಟ್​ಗೆ (Strait of Hormuz) ತಡೆಯಾಗುವ ಸಂಭವ ಇರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಇದೂ ಸೇರಿದಂತೆ ವಿವಿಧ ಕಾರಣಗಳಿಂದ ಜಾಗತಿಕ ಅನಿಶ್ಚಿತ ಸ್ಥಿತಿ ಹೆಚ್ಚಬಹುದು. ಇದು ಮಾರುಕಟ್ಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಚಿನ್ನ, ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ

ಜಾಗತಿಕ ಅನಿಶ್ಚಿತ ಪರಿಸ್ಥಿತಿ ಉದ್ಭವವಾದರೆ ಚಿನ್ನ, ಬೆಳ್ಳಿಯಂತಹ ನೈಜ ಹಾಗೂ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತದೆ. ಹೂಡಿಕೆಗಳು ಅವುಗಳತ್ತ ಹರಿದು ಹೋಗುತ್ತವೆ. ಇರಾನ್ ಅಮೆರಿಕ ಸಂಘರ್ಷ ಸಂದರ್ಭವೂ ಕೂಡ ಹೂಡಿಕೆದಾರರನ್ನು ಚಿನ್ನ, ಬೆಳ್ಳಿಗಳತ್ತ ನೂಕಬಹುದು. ಸೋಮವಾರದಿಂದ ಈ ಎರಡೂ ಲೋಹಗಳ ಬೆಲೆಯಲ್ಲಿ ಗಣನೀಯ ಏರಿಕೆ ನಿರೀಕ್ಷಿಸಬಹುದು. ಅಪರಂಜಿ ಚಿನ್ನದ ಬೆಲೆ 17,000 ರೂ ದಾಟಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು

ನಿಫ್ಟಿ, ಸೆನ್ಸೆಕ್ಸ್ ಕುಸಿತ?

ಭಾರತದ ಷೇರು ಮಾರುಕಟ್ಟೆಯು ಈ ವಾರ ಗಡಗಡ ನಡುಗಬಹುದು. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಆಗಲಿದೆ ಎನ್ನುವ ಸಕಾರಾತ್ಮಕ ಬೆಳವಣಿಗೆಯ ಖುಷಿಯಲ್ಲಿದ್ದ ಹೂಡಿಕೆದಾರರಿಗೆ ಈಗ ಇರಾನ್ ಅಮೆರಿಕ ಸಂಘರ್ಷವು ಭೀತಿ ಮೂಡಿಸಬಹುದು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಕುಸಿತ ಕಾಣಬಹುದು. ಸೆನ್ಸೆಕ್ಸ್ 25,000 ಅಂಕಗಳ ಕೆಳಗೆ ಇಳಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು.

ಪೆಟ್ರೋಲ್, ಡೀಸಲ್ ಬೆಲೆ ಏರಿಕೆ?

ಪಶ್ಚಿಮ ಏಷ್ಯಾದಲ್ಲಿರುವ ಹಾರ್ಮುಜ್ ಸಮುದ್ರ ಮಾರ್ಗದಲ್ಲಿ ಜಗತ್ತಿನ ಶೇ. 20ರಷ್ಟು ತೈಲ ಸಾಗಣೆ ನಡೆಯುತ್ತದೆ. ಈ ಮಾರ್ಗಕ್ಕೆ ತಡೆಯಾದರೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಪರಿಣಾಮವಾಗಿ ತೈಲ ಬೆಲೆ ಏರಿಕೆ, ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬಹುದು.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಇರಾನ್ ಮೇಲೆ ಅಮೆರಿಕದ ಯುದ್ಧ ಯಾಕೆ?

ಬಹುತೇಕ ಗಲ್ಫ್ ರಾಷ್​ಟ್ರಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಅಮೆರಿಕಕ್ಕೆ ಇರಾನ್​ನಿಂದ ಹಲವು ದಶಕಗಳ ಕಾಲ ಪ್ರತಿರೋಧ ಇದೆ. ಇರಾನ್ ಪರಮಾಣು ಶಸ್ತ್ರ ತಯಾರಿಸುತ್ತಿರುವುದಕ್ಕೆ ಅಮೆರಿಕ ಆಗಿನಿಂದಲೂ ತಗಾದೆ ಎತ್ತಿದೆ. ಹೀಗಾಗಿಯೇ ಇರಾನ್ ಮೇಲೆ ಹಲವಾರು ವರ್ಷಗಳಿಂದ ಆರ್ಥಿಕ ಮತ್ತು ರಾಜಕೀಯ ದಿಗ್ಬಂಧನ ಹಾಕಿದೆ. ಇರಾನ್​ನಲ್ಲಿ ತನ್ನ ಅಣತಿಯಂತೆ ನಡೆಯುವ ಸರ್ಕಾರ ಸ್ಥಾಪಿಸುವುದು ಅಮೆರಿಕದ ಗುರಿ. ಈಗ ಇರಾನ್ ಮುಖ್ಯಸ್ಥ ಅಯತೊಲ್ಲಾ ಖಮೇನಿ ಅವರನ್ನು ಹತ್ಯೆಗೈದಿರುವ ಅಮೆರಿಕವು ಹೊಸ ನಾಯಕನನ್ನು ಎದಿರುನೋಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ – Kannada News | Woman Known for Lighting Cigarette with Burning Khamenei Portrait Reacts to His Demise

ಕೆನಡಾ, ಮಾರ್ಚ್​ 01: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಯುವತಿಯೊಬ್ಬಳು ಸಿಗರೇಟ್ ಹೊತ್ತಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕನ ಹತ್ಯೆಗೆ ಆಕೆ ಹೀಗೆ ಪ್ರತಿಕ್ರಿಯಿಸಿದ್ದಾಳೆ. ಕೆನಡಾದಲ್ಲಿ ನಡೆದ ಇರಾನ್ ಆಡಳಿತ ವಿರೋಧಿ ರ್ಯಾಲಿಯಲ್ಲಿ ಆಕೆ ಪಾಲ್ಗೊಂಡಿರುವುದಾಗಿ ಪೋಸ್ಟ್ ಮಾಡಿದ್ದಾಳೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಜೇನು ನೊಣವನ್ನು ಗುರುತಿಸಬಲ್ಲಿರಾ – Kannada News | Optical illusion if you have eagle eyes find the honeybee in this park

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಒಗಟುಗಳನ್ನು ಬಿಡಿಸುವುದೆಂದರೆ ಹೆಚ್ಚಿನವರಿಗೆ ಇಷ್ಟ. ಹೀಗಾಗಿ ಆಸಕ್ತಿಯುಳ್ಳವರು ಇಂತಹ ಒಗಟಿನ ಚಿತ್ರಗಳತ್ತ ಕಣ್ಣು ಹಾಯಿಸುತ್ತಾರೆ. ಆಪ್ಟಿಕಲ್‌ ಇಲ್ಯೂಷನ್‌ ನಂತಹ (Optical Illusion) ಒಗಟಿನ ಚಿತ್ರವನ್ನು ಬಿಡಿಸಲು ನೀವು ರೆಡಿ ಇದ್ದೀರಾ. ಹಾಗಾದ್ರೆ ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದತ್ತ ಕಣ್ಣು ಹಾಯಿಸಿ. ಈ ಉದ್ಯಾನವನದಲ್ಲಿ ಅಡಗಿ ಕುಳಿತಿರುವ ಜೇನುನೊಣವನ್ನು ಹುಡುಕಬೇಕು. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸುವಿರಾ.

ಈ ಚಿತ್ರದಲ್ಲಿ ಏನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರವೂ ಸಾಮಾನ್ಯವಾಗಿರುವಂತೆ ಕಾಣುತ್ತದೆ. ಇಲ್ಲಿ ನೀವು ಹೂವಿನ ಉದ್ಯಾನವನವನ್ನು ಕಾಣಬಹುದು. ಹಳದಿ ಹೂವುಗಳ ಜತೆಗೆ ವಿಭಿನ್ನ ಪ್ರಾಣಿಗಳು ಸಹ ಇವೆ. ಈ ಉದ್ಯಾನವನದಲ್ಲಿ ಜೇನುನೊಣವೂ ಇದೆ. ನೀವು ಈ ಜೇನುನೊಣವನ್ನು ಹತ್ತು ಸೆಕೆಂಡುಗಳೊಳಗೆ  ಹುಡುಕುತ್ತೀರಿ ಅಂತಾದ್ರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನಾವು ಹ್ಯಾಟ್ಸ್ ಆಫ್ ಹೇಳುತ್ತೇವೆ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಮೀನನ್ನು ಹುಡುಕಿದ್ರೆ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ

ಜೇನು ನೊಣ ನಿಮ್ಮ ಕಣ್ಣಿಗೆ ಕಾಣಿಸಿತೇ?

ಹೂವುಗಳ ನಡುವೆ ಅಡಗಿರುವ ಜೇನು ನೊಣವನ್ನು ಕಂಡು ಹಿಡಿಯಲು ನಿಮಗೆ ಕಷ್ಟವಾಗಬಹುದು. ಈ ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಸೂಕ್ಷ್ಮವಾಗಿ ನೋಡಿ. ಆಗ ನಿಮ್ಮ ಕಣ್ಣಿಗೆ ಜೇನು ನೊಣ ಕಾಣಿಸುತ್ತದೆ. ಎಷ್ಟೇ ದೃಷ್ಟಿ ಹಾಯಿಸಿದರೂ ಜೇನು ನೊಣ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ಜೇನುನೊಣವನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ! – Kannada News | Lunar Eclipse 2026: No Restrictions at Raghavendra Swamy Mutt in Mantralayam; Darshan Allowed During Chandra Grahan

ರಾಯಚೂರು, ಮಾರ್ಚ್ 1: ವರ್ಷದ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 3ರಂದು ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಧಾರ್ಮಿಕ ಕೇಂದ್ರಗಳು ಮತ್ತು ದೇವಸ್ಥಾನಗಳನ್ನು ಮುಚ್ಚಿ, ಧಾರ್ಮಿಕ ಕೈಂಕರ್ಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ, ಮಂತ್ರಾಲಯದ ರಾಯರ ಮಠ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಭಕ್ತರಿಗೆ ಯಾವುದೇ ನಿರ್ಬಂಧ ಅಥವಾ ನಿಷೇಧಗಳು ಇರುವುದಿಲ್ಲ ಎಂದು ತಿಳಿಸಿದೆ. ಚಂದ್ರಗ್ರಹಣದ ಸಂದರ್ಭದಲ್ಲಿಯೂ ಭಕ್ತರು ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯಬಹುದು. ಬೆಳಗಿನ ಸೂರ್ಯೋದಯದ ನಂತರ ಯಾವುದೇ ವಿಶೇಷ ಸೇವೆಗಳು, ರಾಯರ ಅಲಂಕಾರ ಅಥವಾ ವಿಶೇಷ ಪೂಜೆಗಳು ಇರುವುದಿಲ್ಲ. ಕೇವಲ ಜಲಾಭಿಷೇಕದ ಮೂಲಕ ರಾಯರನ್ನು ಅರ್ಪಿಸಲಾಗುತ್ತದೆ. ಭಕ್ತರು ಮಠದ ನಿಗದಿತ ಸಮಯದ ಅವಧಿಯಲ್ಲೇ ಎಂದಿನಂತೆ ರಾಯರ ದರ್ಶನ ಪಡೆಯಲು ಅವಕಾಶವಿದೆ. ಗ್ರಹಣದ ಅವಧಿಯಲ್ಲಿಯೂ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದೆ.

ಗ್ರಹಣ ಮುಗಿಯುವವರೆಗೆ ಯಾವುದೇ ಸಾಮಾನ್ಯ ಪ್ರಸಾದ ವಿತರಣೆ ಇರುವುದಿಲ್ಲ. ಬದಲಾಗಿ ತೀರ್ಥ ಪ್ರಸಾದವನ್ನು ಮಾತ್ರ ನೀಡಲಾಗುತ್ತದೆ. ಗ್ರಹಣದ ಸಂದರ್ಭದಲ್ಲಿ ವಿಶೇಷ ಹೋಮಗಳನ್ನು ಸಹ ಆಯೋಜಿಸಲಾಗಿದ್ದು, ಭಕ್ತರು ಅದರಲ್ಲಿ ಭಾಗವಹಿಸಬಹುದು ಎಂದು ಮಠದ ಆಡಳಿತ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು – Kannada News | LPG cooking gas prices revised, commercial lpg cylinder prices hiked for 4th time in 6 months

ನವದೆಹಲಿ, ಮಾರ್ಚ್ 1: ಕಮರ್ಷಿಯಲ್ ಎಲ್​ಪಿಜಿ ದರಗಳು (Commercial LPG prices) ಸತತ ಮೂರನೇ ತಿಂಗಳು ಏರಿಕೆ ಆಗಿವೆ. ಕಳೆದ ಆರು ತಿಂಗಳಲ್ಲಿ ನಾಲ್ಕನೇ ಬಾರಿ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಳ ಆಗಿದೆ. ತಿಂಗಳ ಮೊದಲ ದಿನವಾದ ಮಾರ್ಚ್ 1ರಂದು ಭಾರತದಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳು 28ರಿಂದ 31ರೂವರೆಗೆ ಏರಿವೆ. ದೆಹಲಿ, ಮುಂಬೈ ಮೊದಲಾದೆಡೆ ಇದರ ಬೆಲೆ 28 ರೂ ಹೆಚ್ಚಿದರೆ, ಕೋಲ್ಕತಾದಲ್ಲಿ 31 ರೂ ಹೆಚ್ಚಿದೆ. 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ದರಗಳೂ ಕೂಡ ಭರ್ಜರಿ ಏರಿವೆ. ಆದರೆ, 14.2 ಕಿಲೋ ಹಾಗೂ 5 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಯಥಾಸ್ಥಿತಿ ಮುಂದುವರಿದೆ.

ಬೆಂಗಳೂರಿನಲ್ಲಿ ಎಲ್​ಪಿಜಿ ದರಗಳು (ಮಾರ್ಚ್ 1ಕ್ಕೆ)

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್: 855.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್: 318.50 ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್: 1,842.50 ರೂ (28.50 ರೂ ಏರಿಕೆ)
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್:

ಇದನ್ನೂ ಓದಿ: Gold Rate Today: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಜನವರಿಯಲ್ಲಿ 110.50 ರೂ, ಫೆಬ್ರುವರಿಯಲ್ಲಿ 49.50 ರೂ ಏರಿತ್ತು. 47.5 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಫೆಬ್ರುವರಿಯಲ್ಲಿ 125 ರೂ ನಷ್ಟು ಏರಿ 4,532 ರೂ ಆಗಿತ್ತು. ಮಾರ್ಚ್ ತಿಂಗಳಲ್ಲಿ ಈ ಬೃಹತ್ ಸಿಲಿಂಡರ್ ಬೆಲೆ 4,600 ರೂ ದಾಟಿ ಹೋಗಿದೆ.

2025ರ ಏಪ್ರಿಲ್ 1ರಂದು 14.2 ಕಿಲೋ ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆ ಆಗಿತ್ತು. ಅದಾದ ಬಳಿಕ ಮತ್ತೆಂದೂ ಇದರ ಬೆಲೆ ಏರಿಕೆ ಆಗಿಲ್ಲ. ಇನ್ನೊಂದೆಡೆ, ಈ ಹಣಕಾಸು ವರ್ಷದಲ್ಲಿ ಮೊದಲ ಆರು ತಿಂಗಳು ಸತತವಾಗಿ ಇಳಿಕೆ ಕಂಡಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಳ ಕಂಡಿವೆ.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಈಗ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್, ಎಲ್​ಪಿಜಿ ಸೇರಿದಂತೆ ಪೆಟ್ರೋಲಿಯಂ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಆಗುವ ಸಂಭವ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಟ ದುಷ್ಯಂತ್ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದು ಶುಭ ಕೋರಿದ ಸಿದ್ದರಾಮಯ್ಯ – Kannada News | CM Siddaramaiah attends Gatha Vaibhava actor Dushyanth wedding reception

ಇತ್ತೀಚೆಗೆ ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಅನೇಕ ಗಣ್ಯರು ಆಗಮಿಸಿದ್ದಾರೆ.

Source link

Exit mobile version