Headlines

ಬಂಗಾಳಕೊಲ್ಲಿಯಲ್ಲಿ ಭಾರತದ ಸಮರ ಗರ್ಜನೆ: ಅಗ್ನಿ-IV ಕ್ಷಿಪಣಿ ಪರೀಕ್ಷೆಗೆ ಸಕಲ ಸಿದ್ಧತೆ – Kannada News | India’s Agni IV Missile Test: Bay of Bengal Gears Up for Defense Might and NOTAM

ನವದೆಹಲಿ, ಮೇ 05: ಭಾರತವು ತನ್ನ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಬಂಗಾಳಕೊಲ್ಲಿ(Bay Of Bengal)ಯ ಸುಮಾರು 3,550 ಕಿ.ಮೀ. ವ್ಯಾಪ್ತಿಯನ್ನು ‘ಅಪಾಯಕಾರಿ ವಲಯ’ವೆಂದು ಘೋಷಿಸಿ NOTAM ಸೂಚನೆ ಹೊರಡಿಸಿದೆ. ಈ ದೀರ್ಘ ವ್ಯಾಪ್ತಿಯ ಕಾರಿಡಾರ್ ಭಾರತದ ಪ್ರಮುಖ ಪರಮಾಣು ಸಾಮರ್ಥ್ಯದ ಅಗ್ನಿ-IV (Agni-IV) ಕ್ಷಿಪಣಿ(Missile)ಯ ಉಡಾವಣೆಯ ಮುನ್ಸೂಚನೆಯನ್ನು ನೀಡುತ್ತಿದೆ. ಅಗ್ನಿ-IV: ಭಾರತದ ಪರಮಾಣು ತ್ರಿಕೋನದ ಬಲ ರಕ್ಷಣಾ ಮೂಲಗಳ ಪ್ರಕಾರ, ಪ್ರಸ್ತುತ ಘೋಷಿಸಲಾಗಿರುವ 3,500–4,000 ಕಿ.ಮೀ ವ್ಯಾಪ್ತಿಯು ಮಧ್ಯಂತರ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾದ (IRBM) ಅಗ್ನಿ-IV…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್​ – Kannada News | Bengaluru temperature: Thundershowers in Bengaluru and most of the state, Rainy weather till next 3 days

ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! Image Credit source: MediaForge AI ಬೆಂಗಳೂರು, ಮೇ 05: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ (Karnataka Weather) ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದೆಲ್ಲೆಡೆ ಮುಂದಿನ ನಾಲ್ಕು ದಿನ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಎಲ್ಲೆಲ್ಲಿ  ಮಳೆ ಕರಾವಳಿಯ ದಕ್ಷಿಣ ಕನ್ನಡ…

Read More

ಸೋಮವಾರವೂ ‘ಕೆಡಿ’ ಭರ್ಜರಿ ಕಲೆಕ್ಷನ್; ಕೆವಿಎನ್​​ಗೆ ಒಂದೇ ದಿನ ಡಬಲ್ ಧಮಾಕ – Kannada News | KD Movie Box Office: Strong Monday Collection, Dhruva Sarja’s Film Passes Key Test

‘ಈ ಸಿನಿಮಾ ನಿಜಕ್ಕೂ ಗೆಲ್ಲುತ್ತಾ’ ಎಂದು ಪ್ರಶ್ನೆ ಮಾಡಿದವರಿಗೆಲ್ಲ ‘ಕೆಡಿ’ ಚಿತ್ರ ಸರಿಯಾದ ಉತ್ತರವನ್ನೇ ನೀಡಿದೆ. ಧ್ರುವ ಸರ್ಜಾ ವೃತ್ತಿ ಜೀವನಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಪ್ರೇಮ್ ಅವರು ನಿರ್ದೇಶನದಲ್ಲಿ ತಾವು ಗ್ರಿಪ್ ಕಳೆದುಕೊಂಡಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ‘ಕೆಡಿ’ ಸಿನಿಮಾ (KD Movie) ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಗುರುವಾರದಿಂದ ಭಾನುವಾರದವರೆಗೆ ಸಿನಿಮಾ ಗೆದ್ದು ಬೀಗಿದೆ. ಸೋಮವಾರದ ಪರೀಕ್ಷೆಯಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಮೂಲಕ ಸಿನಿಮಾ ಗೆದ್ದಿದೆ ಎಂಬ ಅಭಿಪ್ರಾಯವನ್ನು ಬಾಕ್ಸ್…

Read More

ಪಂಚರಾಜ್ಯ ಫಲಿತಾಂಶ: ಬಂಗಾಳದಲ್ಲಿ ಅರಳಿದ ಕಮಲ, ತಮಿಳುನಾಡಿನಲ್ಲಿ ವಿಜಯ್ ಸುನಾಮಿ; ದೀದಿ-ಸ್ಟಾಲಿನ್-ಪಿಣರಾಯಿ ಮಹಾ ಪತನ – Kannada News | Assembly Election Results 2026: BJP Wins West Bengal, Vijay’s TVK Storms Tamil Nadu, UDF Wins Kerala Full details here with numbers

ಪ್ರಧಾನಿ ಮೋದಿ ಹಾಗೂ ವಿಜಯ್Image Credit source: PTI ನವದೆಹಲಿ, ಮೇ 5: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ (Assembly Election Results 2026) ಪ್ರಕಟವಾಗಿದ್ದು, ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಇತ್ತ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಡಿಎಂಕೆ ಮತ್ತು ಎಐಎಡಿಎಂಕೆ ಭದ್ರಕೋಟೆಯನ್ನು ಪುಡಿಗಟ್ಟುವ ಮೂಲಕ ಇತಿಹಾಸ…

Read More

Daily Devotional: ದೇವರ ಮನೆಯಲ್ಲಿ ಯಾವಾಗಲೂ ದೀಪ ಉರಿಯುತ್ತಿರಬೇಕು ಯಾಕೆ? – Kannada News | Akhanda Jyoti: Puja room should always be lit up, know why

ದೇವರ ಮನೆಯಲ್ಲಿ ಯಾವಾಗಲೂ ದೀಪ ಉರಿಯುತ್ತಿರಬೇಕು ಯಾಕೆ? ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಕೋಣೆ ಅಥವಾ ಪೂಜಾ ಸ್ಥಳವು ಸಕಾರಾತ್ಮಕ ಶಕ್ತಿಗಳ ಆಗರವಾಗಬೇಕೆಂಬ ಆಶಯವಿರುತ್ತದೆ. ಈ ನಿಟ್ಟಿನಲ್ಲಿ ಅಖಂಡ ಜ್ಯೋತಿ ಅಥವಾ ನಿರಂತರ ದೀಪಕ್ಕೆ ನಮ್ಮ ಸಂಪ್ರದಾಯದಲ್ಲಿ ಮಹತ್ವದ ಸ್ಥಾನವಿದೆ. 24 ಗಂಟೆಯೂ ದೀಪ ಉರಿಯುವುದರಿಂದ ಮನೆಯಲ್ಲಿ ಧನಾತ್ಮಕ ಭಾವನೆಗಳು ಹೆಚ್ಚಿ, ಯಾವುದೇ ಕಷ್ಟಗಳಿದ್ದರೂ ಅವುಗಳ ತೀವ್ರತೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಆದರೆ, ಎಣ್ಣೆ ದೀಪ…

Read More

Horoscope Today: ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 5, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷದ ಚೌತಿ ಮತ್ತು ಅನುರಾಧ ನಕ್ಷತ್ರದ ಈ ದಿನದ ಮಹತ್ವವನ್ನು ವಿವರಿಸಿದ್ದಾರೆ. ಈ ಮಂಗಳವಾರವು ಸಂಕಷ್ಟ ಚತುರ್ಥಿಯ ವಿಶೇಷ ದಿನವಾಗಿದೆ. ವಿನಾಯಕನ ಪೂಜೆ ಮತ್ತು ಆರಾಧನೆಗಳಿಂದ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ. ರವಿ ಮೇಷ ರಾಶಿಯಲ್ಲಿ ಮತ್ತು…

Read More

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಒತ್ತಡದ ಕಾರ್ಯವನ್ನು ನಿರ್ವಹಿಸಲು ಅಸಾಧ್ಯ – Kannada News | Horoscope May 05 Tuesday 2026; Dina Rashi Bhavishya Today, Checkout the details here

ಮೇಷ ರಾಶಿ: ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿದರೆ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಇದು ನಿಮಗೆ ಬೇಸರ ತರಿಸುವ ಕೆಲಸವಾಗಿರುತ್ತದೆ. ಹೊಸ ಯೋಜನೆಗಳು ಸಿಗಲಿದೆ. ಸಂಬಂಧಗಳು ಸುಧಾರಿಸುವ ಹಂತಕ್ಕೆ ಹೋಗಲಿವೆ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ವೃಷಭ ರಾಶಿ: ಅತಿಯಾದ ದೇಹಾಲಸ್ಯದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿಳಂಬವಾಗಲಿದೆ. ನಿಮ್ಮ‌ಅಜ್ಞಾನವನ್ನು ನೀವೇ ಪ್ರದರ್ಶಿಸುವಿರಿ‌. ನೀವು ನಿರ್ಮಿಸಿಕೊಂಡ ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಸ್ವಯಂ ಕೃತ ಅಪರಾಧವೇ…

Read More

MI vs LSG: ರೋಹಿತ್, ರಿಕಲ್ಟನ್ ಅಬ್ಬರಕ್ಕೆ ಮಂಡಿಯೂರಿದ ಲಕ್ನೋ – Kannada News | MI Break Losing Streak at Wankhede: Beat LSG in IPL 2026 Match 47, Dim Playoff Hopes

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಮುಂಬೈ ತಂಡ ತನ್ನ ತವರಿನಲ್ಲಿ ಸೋಲುಗಳ ಸರಮಾಲೆ ಮುರಿದಿದೆ. ಇದು ಈ ಆವೃತ್ತಿಯಲ್ಲಿ ಮುಂಬೈ ತಂಡದ ಮೂರನೇ ಗೆಲುವಾದರೆ, ಇತ್ತ ಇದು ಲಕ್ನೋ ತಂಡದ 7ನೇ ಸೋಲಾಗಿದೆ. ಈ ಸೋಲಿನೊಂದಿಗೆ ಮುಂಬೈನಂತೆ ಲಕ್ನೋ ತಂಡದ ಪ್ಲೇ ಆಫ್ ಕನಸು ಕೂಡ ಭಾಗಶಃ ಭಗ್ನವಾಗಿದೆ. ಈ ಪಂದ್ಯದಲ್ಲಿ…

Read More

ದಳಪತಿ ವಿಜಯ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳು; ಧನ್ಯವಾದ ತಿಳಿಸಿದ ನಟ – Kannada News | Thalapathy Vijay waves at fans gathered in front of his house after TVK win

ನಟ ದಳಪತಿ ವಿಜಯ್ (Thalapathy Vijay) ಅವರು ತಮಿಳುನಾಡು ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಅವರ ಟಿವಿಕೆ (TVK) ಪಕ್ಷ ಬರೋಬ್ಬರಿ 107 ಸ್ಥಾನಗಳನ್ನು ಗೆದ್ದಿದೆ. ಈ ಗೆಲುವಿಗಾಗಿ ಎಲ್ಲರೂ ದಳಪತಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ವಿಜಯ್ ನಿವಾಸದ ಎದುರು ಜಮಾಯಿಸಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಪೋಷಕರ ಮನೆಯ ಹೊರಗೆ ಜಮಾಯಿಸಿದ್ದ ಜನಸಮೂಹವನ್ನು ನೋಡಿ ವಿಜಯ್ ಅವರು ಕೈಬೀಸಿ ಧನ್ಯವಾದ ತಿಳಿಸಿದರು. ತಮಿಳುನಾಡು ಚುನಾವಣೆಯಲ್ಲಿ ಅವರ ಪಕ್ಷವು ಗರಿಷ್ಠ ಮುನ್ನಡೆ ಸಾಧಿಸಿದೆ. ಮೊದಲ ಪ್ರಯತ್ನದಲ್ಲೇ…

Read More

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಬಂಗಾಳದಲ್ಲಿ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಿ ಧ್ವಂಸ – Kannada News | TMC party office set ablaze amid clashes with BJP workers in West Bengal

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Election Results) ಬಿಜೆಪಿ ಸರ್ಕಾರ ರಚಿಸುವ ಹಂತದಲ್ಲಿರುವಾಗ ಘರ್ಷಣೆಯ ನಡುವೆ ಟಿಎಂಸಿ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಸನ್ಸೋಲ್‌ನ ಗೋಧೂಲಿ ಪ್ರದೇಶದಲ್ಲಿ ಟಿಎಂಸಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೀನಾಯ ಸೋಲನ್ನು ಕಂಡಿದೆ. ಬಿಜೆಪಿ ಸರ್ಕಾರ ರಚನೆಯಾಗಲಿದೆ. ಇದರ ನಡುವೆ ಟಿಎಂಸಿ ಕಚೇರಿಯನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇದರಿಂದ ಟಿಎಂಸಿ ಕಚೇರಿಯ ಆವರಣವು ತೀವ್ರವಾಗಿ ಹಾನಿಗೊಳಗಾಗಿದ್ದು, ಪೀಠೋಪಕರಣಗಳು, ಧ್ವಜಗಳು, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಹರಿದುಹೋಗಿವೆ. ಕಟ್ಟಡಕ್ಕೆ…

Read More