Video: ಆರ್ಡರ್ ಮಾಡಿದ್ದ ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ – Kannada News | Blinkit Delivery Worker’s Quiet Cricket Ritual Wins Hearts Online

ನಿತ್ಯದ ಜಂಜಾಟ, ಹೊಟ್ಟೆಪಾಡಿನ ಕೆಲಸ ಮತ್ತು ಜವಾಬ್ದಾರಿಗಳ ಮಧ್ಯೆ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬದಿಗಿಡುತ್ತಾನೆ ಮತ್ತು ಆ ಕನಸುಗಳು ಒಳಗೆಲ್ಲೋ ಹೇಗೆ ಜೀವಂತವಾಗಿರುತ್ತವೆ ಎಂಬುದಕ್ಕೆ ಈ ಸಣ್ಣ ವಿಡಿಯೋ ಒಂದು ಉತ್ತಮ ಉದಾಹರಣೆ.
ಬ್ಲಿಂಕಿಟ್ ವಿತರಣಾ ಸಂಸ್ಥೆಯಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವವರೊಬ್ಬರು ಎಂದಿನಂತೆ ಗ್ರಾಹಕರೊಬ್ಬರ ಮನೆಗೆ ಆರ್ಡರ್ ಮಾಡಿದ್ದ ವಸ್ತುಗಳನ್ನು ತಲುಪಿಸಲು ಹೋಗಿದ್ದರು. ಕೆಲಸದ ಅವಸರದಲ್ಲಿದ್ದ ಆ ವ್ಯಕ್ತಿ, ಮನೆಯ ಹೊರಗಿನ ಲಾಬಿಯಲ್ಲಿ ಇರಿಸಲಾಗಿದ್ದ ಒಂದು ಕ್ರಿಕೆಟ್ ಬ್ಯಾಟ್ ಅನ್ನು ಗಮನಿಸಿದ್ದರು.

ಅಷ್ಟೇ, ಆ ಬ್ಯಾಟ್ ಕಂಡ ತಕ್ಷಣ ಒಂದು ನಿಮಿಷ ಕೆಲಸಕ್ಕೆ ವಿರಾಮ ತೆಗೆದುಕೊಂಡು ಆ ಬ್ಯಾಟ್ ಹಿಡಿದು ಆಟವಾಡಿ ಕೊನೆಗೆ ಅದಕ್ಕೆ ಮುತ್ತಿಟ್ಟು, ಎಲ್ಲಿಂದ ತೆಗೆದುಕೊಂಡಿದ್ದರೋ ಅದೇ ಜಾಗದಲ್ಲಿ ಇಟ್ಟು ಹೋಗಿರುವ ವಿಡಿಯೋ ವೈರಲ್ ಆಗಿದೆ.
ಮನೆಯ ಹೊರಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಈ ಇಡೀ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಶರವೇಗದಲ್ಲಿ ವೈರಲ್ ಆಗಿದೆ. ಈ ವೀಡಿಯೊ ಇಂಟರ್ನೆಟ್‌ನಾದ್ಯಂತ ಇರುವ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ತಟ್ಟಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಾಗರಹೊಳೆ, ಬಂಡೀಪುರದಲ್ಲಿ ಹೆಚ್ಚಿದ ವ್ಯಾಘ್ರಗಳ ಗರ್ಜನೆ: ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು! – Kannada News | Karnataka’s Tiger Conservation Success: Nagarahole, Bandipur Boost Wildlife Tourism

ಮೈಸೂರು, ಮೇ,21: ಪ್ರಕೃತಿ ಪ್ರೇಮಿಗಳು ಹಾಗೂ ವನ್ಯಜೀವಿ ಆಸಕ್ತರಿಗೆ ಒಂದು ಸಂತಸದ ಸುದ್ದಿಯೊಂದು ಇದೆ. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು ಮತ್ತು ಪೂರಕ ವಾತಾವರಣದಿಂದಾಗಿ ಈ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ (Increase in Tiger Population) ಕಂಡಿದೆ. ಇದರ ಬೆನ್ನಲ್ಲೇ, ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನ ಭಾಗ್ಯ ನಿರಂತರವಾಗಿ ಸಿಗುತ್ತಿದೆ. ಇತ್ತೀಚೆಗಷ್ಟೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ ದೃಶ್ಯವೊಂದು ಕಂಡಿದೆ. ಅರಣ್ಯದ ಹಸಿರ ಮಧ್ಯೆ ರಾಜಗಾಂಭೀರ್ಯದಿಂದ ಓಡಾಡುತ್ತಿದ್ದ ಎರಡು ದೊಡ್ಡ ಗಾತ್ರದ ಹುಲಿಗಳು ಏಕಕಾಲದಲ್ಲಿ ಪ್ರವಾಸಿಗರ ಕಣ್ಣಿಗೆ ಬಿದ್ದಿವೆ. ಸಫಾರಿ ವಾಹನವನ್ನು ಕಂಡು ಕಿಂಚಿತ್ತೂ ಹೆದರದೆ, ಈ ಜೋಡಿ ಹುಲಿಗಳು ಪ್ರವಾಸಿಗರ ಕ್ಯಾಮೆರಾಗೆ ಅತ್ಯಂತ ‘ಬಿಂದಾಸ್’ ಆಗಿ ಪೋಸ್ ನೀಡಿವೆ. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಹುಲಿಗಳ ದರ್ಶನವಾಗುವುದು ಅತ್ಯಂತ ಅಪರೂಪ. ಆದರೆ ಒಂದೇ ಬಾರಿಗೆ ಎರಡು ಹುಲಿಗಳು ಅತ್ಯಂತ ಹತ್ತಿರದಿಂದ ಕಾಣಿಸಿಕೊಂಡು, ಗಂಟೆಗಟ್ಟಲೆ ಪ್ರವಾಸಿಗರ ಕಣ್ಣಮುಂದೆ ವಿಹರಿಸಿದ್ದನ್ನು ಕಂಡು ಸಫಾರಿಯಲ್ಲಿದ್ದ ಪ್ರವಾಸಿಗರು ಅಕ್ಷರಶಃ ಮಂತ್ರಮುಗ್ಧರಾಗಿದ್ದಾರೆ. ತಮ್ಮ ಪ್ರವಾಸದ ಅತ್ಯುತ್ತಮ ಕ್ಷಣಗಳನ್ನು ಪ್ರವಾಸಿಗರು ಮೊಬೈಲ್ ಹಾಗೂ ವೃತ್ತಿಪರ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡಿದ್ದು, ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ನಾಗರಹೊಳೆ ಮತ್ತು ಬಂಡೀಪುರ ಪ್ರವಾಸೋದ್ಯಮಕ್ಕೆ ಈ ವ್ಯಾಘ್ರಗಳ ಸಂಖ್ಯೆ ಹೆಚ್ಚಳವು ಮತ್ತಷ್ಟು ಆನೆಬಲ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ಹೀಗಿದೆ ದಳಪತಿಗಳ ಲೆಕ್ಕಾಚಾರ – Kannada News | JDS Aims for Hiriyur By Election Victory with Strategic Candidate Selection

ಚಿತ್ರದುರ್ಗ, ಮೇ 21: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಸಿದ್ಧತೆ ನಡೆಸುತ್ತಿದೆ. ಸಚಿವ ಡಿ. ಸುಧಾಕರ್ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರವನ್ನು ಗೆಲ್ಲಲು ಜೆಡಿಎಸ್ ಉತ್ಸುಕವಾಗಿದೆ. ಪಕ್ಷದ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಿ, ಟಿಕೆಟ್ ತರುವುದು ನನ್ನ ಜವಾಬ್ದಾರಿ, ಗೆಲ್ಲಿಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಯಾದವ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಈ ಸಮುದಾಯಗಳಿಂದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಲೆಕ್ಕಾಚಾರವಿದೆ. 2023ರ ಚುನಾವಣೆಯಲ್ಲಿ ಜೆಡಿಎಸ್ 38,686 ಮತಗಳನ್ನು ಪಡೆದಿದ್ದರೆ, ಬಿಜೆಪಿ 61,728 ಮತಗಳನ್ನು ಗಳಿಸಿತ್ತು. ಹೀಗಾಗಿ ಎನ್‌ಡಿಎ ಮೈತ್ರಿ ಅಭ್ಯರ್ಥಿಗೆ ಗೆಲುವು ಖಚಿತ ಎಂಬ ವಿಶ್ವಾಸ ಜೆಡಿಎಸ್ ನಾಯಕರಿಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Guru Sanchara 2026: ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು – Kannada News | Jupiter Transit 2026: Auspicious Outcomes for Gemini or Mithuna Rashi

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಮಿಥುನ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮಿಥುನ ರಾಶಿಯವರಿಗೆ 2026ರ ಗುರು ಸಂಚಾರವು ಅನೇಕ ಶುಭ ಫಲಗಳನ್ನು ತರಲಿದೆ. ಗುರು ಎರಡನೇ ಮನೆಗೆ ಪ್ರವೇಶಿಸುವುದರಿಂದ ಧನಸ್ಥಾನ, ವಾಕ್ಸ್ಥಾನ ಮತ್ತು ಕುಟುಂಬ ಸ್ಥಾನಗಳಿಗೆ ಬಲ ಸಿಗಲಿದೆ. ಆಕಸ್ಮಿಕ ಧನಯೋಗ, ಹಳೆಯ ಬಾಕಿ ವಸೂಲಿ, ಆರ್ಥಿಕ ಸ್ಥಿರತೆ, ಆಸ್ತಿ ಸಂಪಾದನೆ ಮತ್ತು ಹೂಡಿಕೆಯಿಂದ ಲಾಭಗಳ ನಿರೀಕ್ಷೆ ಇದೆ. ವೃತ್ತಿಯಲ್ಲಿ ವೇತನ ವೃದ್ಧಿ, ಬಡ್ತಿ ಮತ್ತು ಬೋನಸ್ ಸಿಗುವ ಸಾಧ್ಯತೆಗಳಿದ್ದು, ಉನ್ನತ ಶಿಕ್ಷಣಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

ಮಂಗಳ ಕಾರ್ಯಗಳು, ಮನೆ ಕಟ್ಟುವ ಯೋಗ ಮತ್ತು ವಿದೇಶ ಪ್ರಯಾಣದಂತಹ ಶುಭ ಸನ್ನಿವೇಶಗಳು ಒದಗಿ ಬರುತ್ತವೆ. ಮಾನಸಿಕ ಶಾಂತಿ ಹೆಚ್ಚಲಿದ್ದು, ಮಾತಿನಿಂದ ಅದೃಷ್ಟ ಕೂಡಿಬರಲಿದೆ. ಆರೋಗ್ಯ ಸುಧಾರಿಸುತ್ತದೆ ಮತ್ತು ಹಳೆಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ. ರೈತರಿಗೆ ಭೂಮಿ ಕಲಹ ನಿವಾರಣೆ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಸಣ್ಣಪುಟ್ಟ ವಾಹನ ಕಂಟಕಗಳ ಬಗ್ಗೆ ಎಚ್ಚರಿಕೆ ಇರಲಿ. ಮಕ್ಕಳನ್ನು ನಿಂದಿಸುವುದನ್ನು ಹಾಗೂ ಪ್ರೀತಿ-ಪ್ರೇಮ ವ್ಯವಹಾರಗಳಲ್ಲಿ ಸುಳ್ಳು ಹೇಳುವುದನ್ನು ತಪ್ಪಿಸಿ. ಗುರು ಅನುಗ್ರಹಕ್ಕಾಗಿ ದಾನ, ಗುರುಗಳಿಗೆ ಗೌರವ ಮತ್ತು ನಿತ್ಯ ಮಂತ್ರ ಜಪ (ಓಂ ಗ್ರಾಂ ಗ್ರೀಂ ಗ್ರೌಂ ಸಹ ಗುರುವೇ ನಮಃ) ಅಭ್ಯಾಸ ಮಾಡಿ. ನಿಮ್ಮ ಪರ್ಸ್‌ನಲ್ಲಿ ಎರಡು ಅರಿಶಿನ ಕೊಂಬು ಇಟ್ಟುಕೊಳ್ಳುವುದು ಶುಭ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

International Tea Day 2026: ಚಹಾದ ಹಿತಮಿತ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | International Tea Day 2026: Health benefits of drinking tea

ಅಂತಾರಾಷ್ಟ್ರೀಯ ಚಹಾ ದಿನImage Credit source: vecteezy

ಚಹಾ (tea) ಎಂದರೆ ಬಹುತೇಕರಿಗೆ ಅಮೃತವಿದ್ದಂತೆ. ಈ ಟೀ ಇಲ್ಲದೆ ಅವರ ದಿನವೇ ಆರಂಭವಾಗೋದಿಲ್ಲ. ಒಂದು ಕಪ್‌ ಚಹಾ ಕುಡಿಯುವುದರಿಂದ ನಮ್ಮ ಮನಸ್ಸು ಮತ್ತು ದೇಹ ಉಲ್ಲಾಸಗೊಳ್ಳುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ಪ್ರತಿನಿತ್ಯ ಟೀ ಕುಡಿಯುತ್ತಾರೆ. ಈ ಟೀ ಮನಸ್ಸು ದೇಹವನ್ನು ರಿಫ್ರೆಶ್‌ ಮಾಡೋದು ಮಾತ್ರವಲ್ಲ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ಹೀಗೆ ದೀರ್ಘ ಇತಿಹಾಸವನ್ನು ಹೊಂದಿರುವ ಹಾಗೂ ವಿವಿಧ ದೇಶಗಳ ಸಂಸ್ಕೃತಿಗಳಲ್ಲಿ ಆಳವಾಗಿ ಬೇರೂರಿರುವ  ಚಹಾದ ಇತಿಹಾಸ ಸಂಸ್ಕೃತಿ ಮತ್ತು ಅದರ ಆರ್ಥಿಕ ಮಹತ್ವ ಹಾಗೂ ಚಹಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಚಹಾ ದಿನದ ಮೊದಲ ಆಚರಣೆಯು 2005 ರಲ್ಲಿ ಪ್ರಾರಂಭವಾಯಿತು, ಇದನ್ನು ಏಷ್ಯಾ ಮತ್ತು ಆಫ್ರಿಕಾದ ಕಾರ್ಮಿಕ ಸಂಘಗಳು, ಸಣ್ಣ ಚಹಾ ಉತ್ಪಾದಕರು ಮತ್ತು ಸಾಮಾಜಿಕ ಸಂಸ್ಥೆಗಳು ಬೆಂಬಲಿಸಿದವು. ಚಹಾ ಉತ್ಪಾದಕರಿಗೆ ನ್ಯಾಯಯುತ ಬೆಲೆ ಮತ್ತು ಕಾರ್ಮಿಕರ ಜೀವನಮಟ್ಟ ಮತ್ತು ವೇತನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅದರ ಗುರಿಯಾಗಿತ್ತು. ನಂತರ 2015 ರಲ್ಲಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲು ಅಧಿಕೃತವಾಗಿ ಪ್ರಸ್ತಾಪಿಸಿತು. ಆ ಬಳಿಕ ಅಂತರರಾಷ್ಟ್ರೀಯ ಚಹಾ ದಿನವನ್ನು ಮೊದಲ ಬಾರಿಗೆ ಮೇ 21, 2020 ರಂದು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಚಹಾ ದಿನವನ್ನು ಮೇ 21 ರಂದೇ ಏಕೆ ಆಚರಿಸಲಾಗುತ್ತದೆ?

ವಿಶ್ವಸಂಸ್ಥೆಯು ಪ್ರತಿ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸುತ್ತದೆ. ವಾಸ್ತವವಾಗಿ, ಹೆಚ್ಚಿನ ದೇಶಗಳಲ್ಲಿ ಮೇ ತಿಂಗಳಲ್ಲಿ ಚಹಾ ಉತ್ಪಾದನೆ ಪ್ರಾರಂಭವಾಗುವುದರಿಂದ ಮೇ 21 ರಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಚಹಾ ದಿನದ ಮಹತ್ವವೇನು?

  • ಚಹಾದ ಆರ್ಥಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಜಗತ್ತಿಗೆ ಎತ್ತಿ ತೋರಿಸುವುದು ಮತ್ತು ಚಹಾ ಉದ್ಯಮದಲ್ಲಿ ತೊಡಗಿರುವ ರೈತರು ಮತ್ತು ಕಾರ್ಮಿಕರ ಸ್ಥಿತಿಗತಿಗಳನ್ನು ಸುಧಾರಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
  • ಈ ದಿನ ಸುಸ್ಥಿರ ಚಹಾ ಉತ್ಪಾದನೆ ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಚಹಾವು ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಚಹಾ ಸೇವನೆಯ ಈ ಸಂಭಾವ್ಯ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಚಹಾ ದಿನವನ್ನು ಸಹ ಆಚರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ದೂರಸಂಪರ್ಕ ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ

ಚಹಾ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು?

  • ಗ್ರೀನ್‌ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ ಪೋಷಕಾಂಶಗಳಿದ್ದು, ಇದು ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತದೆ. ಗ್ರೀನ್‌ ಟೀ ಕುಡಿಯುವುದರಿಂದ ಕೆಲವು ರೀತಿಯ ಕ್ಯಾನ್ಸರ್‌ ಬರುವುದನ್ನು ತಡೆಯಬಹುದು ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
  • ತುಳಸಿ ಟೀ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಇದು ಇದು ಶೀತ, ಗಂಟಲು ನೋವು ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.
  • ದಿನವಿಡೀ ಕೆಲಸ ಮಾಡಿ ದಣಿದಿದ್ದರೆ ಲ್ಯಾವೆಂಡರ್‌ ಟೀ ನಿಮಗೆ ಶಕ್ತಿಯನ್ನು ನೀಡುತ್ತದೆ. ನೀವು ಚೆನ್ನಾಗಿ ನಿದ್ದೆ ಮಾಡಲು ಈ ಟೀ ಸಹಕಾರಿಯಾಗಿದೆ. ಇದಲ್ಲದೆ ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
  • ಟೀಯಲ್ಲಿ ಕ್ಯಾಟೆಚಿನ್‌ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿದ್ದು, ಈ ಸಂಯುಕ್ತಗಳು ಆಕ್ಸಿಡೇಟಿವ್‌ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ.
  • ಶುಂಠಿ, ಪುದೀನಾ ಮತ್ತು ಕ್ಯಾಮೊಮೈಲ್‌ನಂತಹ ಗಿಡಮೂಲಿಕೆ ಚಹಾಗಳು ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ವಾಕರಿಕೆಯಂತಹ ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ.
  • ಟೀ ಕುಡಿಯುವುದರಿಂದ ದೇಹಕ್ಕೆ ವಿಶ್ರಾಂತಿ ಲಭಿಸುತ್ತದೆ. ಅಲ್ಲದೆ ಟೆನ್ಶನ್‌ ಆದಾಗ ಒಂದು ಕಪ್‌ ಟೀ ಕುಡಿದರೆ ಮನಸ್ಸು ನಿರಾಳವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ.
  • ಚಹಾವು ಫ್ಲೋರೈಡ್‌ ಮತ್ತು ಟ್ಯಾನಿನ್‌ಗಳನ್ನು ಹೊಂದಿರುತ್ತದೆ. ಇದು ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ವಿಶೇಷವಾಗಿ ಗಿಡಮೂಲಿಕೆ ಚಹಾಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
  • ಚಹಾದಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ.
  • ಚಹಾವು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಇವು ಹೃದ್ರೋಗ ಬಾರದಂತೆ ತಡೆಯುತ್ತವೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
  • ಚಹಾದಲ್ಲಿನ ಕೆಲವು ಸಂಯುಕ್ತಗಳಾದ ಕ್ಯಾಟೆಚಿನ್‌ಗಳು ಮತ್ತು ಕೆಫೀನ್‌ ಅಂಶವು ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
  • ಚಹಾವು ಚಣ್ಣ ಪ್ರಮಾಣದಲ್ಲಿ ಕೆಫೀನ್‌ ಅಂಶವನ್ನು ಹೊಂದಿದ್ದು, ಇದು ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಹೆಜ್ಜೆ ಇಟ್ಟ ಕೆವಿಎನ್ ಸಂಸ್ಥೆ; ಚಿರಂಜೀವಿ ಜೊತೆ ಬಿಗ್ ಬಜೆಟ್ ಸಿನಿಮಾ – Kannada News | KVN Productions Backs Chiranjeevi’s Mega 158: New Big Budget Action Film

‘ಟಾಕ್ಸಿಕ್’, ‘ಕೆಡಿ’, (KD Movie) ‘ಜನ ನಾಯಗನ್’ ರೀತಿಯ ಬಿಗ್ ಬಜೆಟ್ ಸಿನಿಮಾ ನಿರ್ಮಿಸೋ ಕೆವಿಎನ್ ಸಂಸ್ಥೆ ಈಗ ಹೊಸ ಹೆಜ್ಜೆ ಇಟ್ಟಿದೆ. ಚಿರಂಜೀವಿ ಅವರ 158ನೇ ಸಿನಿಮಾಗೆ ಈ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಮೆಗಾ 158’ ಎಂದು ಹೆಸರಿಡಲಾಗಿದೆ. ಸಿನಿಮಾದ ಮುಹೂರ್ತ ಇಂದು (ಮೇ 21) ಅದ್ದೂರಿಯಾಗಿ ನೆರವೇರಿದೆ. ಆಂಧ್ರ ಪ್ರದೇಶದ ಉಪಮುಖ್ಯಮಂಯತ್ರಿ ಪವನ್ ಕಲ್ಯಾಣ್, ಚಿರಂಜೀವಿ ಸಹೋದರ, ನಟ ಪವನ್ ಕಲ್ಯಾಣ್ ಅವರು ಸಿನಿಮಾಗೆ ಕ್ಲ್ಯಾಪ್ ಮಾಡಿದ್ದಾರೆ.

ಕೆವಿಎನ್ ಸಂಸ್ಥೆ ಈಗಾಗಲೇ ಮೂರು ಸಿನಿಮಾಗಳಿಂದ ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಪೈಕಿ ‘ಕೆಡಿ’ ಸಿನಿಮಾ ರಿಲೀಸ್ ಆಗಿದೆ. ‘ಟಾಕ್ಸಿಕ್’ ಹಾಗೂ ‘ಜನ ನಾಯಗನ್’ ತೆರೆಗೆ ಬರೋ ಬಗ್ಗೆ ಸದ್ಯಕ್ಕೆ ಯಾವುದೇ ಅಪ್​​ಡೇಟ್​ ಇಲ್ಲ. ಹೀಗಿರುವಾಗಲೇ ‘ಮೆಗಾ 158’ ಅನೌನ್ಸ್ ಆಗಿದೆ. ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ನೀಡಿದ್ದ ಬಾಬಿ ಕೊಲ್ಲಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ.

ಚಿತ್ರದ ಮುಹೂರ್ತ ಸಮಾರಂಭವು ಇಂದು ಮೇ ಅದ್ಧೂರಿಯಾಗಿ ನೆರವೇರಿದೆ. ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನಲಾಗಿದೆ. ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಚಿತ್ರವು 2027ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೋಮವಾರವೂ ‘ಕೆಡಿ’ ಭರ್ಜರಿ ಕಲೆಕ್ಷನ್; ಕೆವಿಎನ್​​ಗೆ ಒಂದೇ ದಿನ ಡಬಲ್ ಧಮಾಕ

ಕೆವಿಎನ್ ಸಿನಿಮಾ ದೊಡ್ಡ ದೊಡ್ಡ ರಿಸ್ಕ್​​ಗಳನ್ನು ತೆಗೆದುಕೊಳ್ಳುತ್ತಿದೆ. ಸಿನಿಮಾ ಬಜೆಟ್​ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ‘ಕೆಡಿ’ ಹಾಗೂ ‘ಟಾಕ್ಸಿಕ್’ ರಿಲೀಸ್ ಆದರೆ, ನಿರ್ಮಾಪಕರು ಲಾಭ ಕಾಣಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ: ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ – Kannada News | High Drama In Nippani: Congress BJP Workers Clash At Housing Event, MLA Shashikala Jolle Breaks Down

ನಿಪ್ಪಾಣಿಯಲ್ಲ ಬಿಜೆಪಿ, ಕಾಂಗ್ರೆಸ್ ಕಿತ್ತಾಟImage Credit source: Tv9 Kannada

ಬೆಂಗಳೂರು, ಮೇ 21: ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿರುವ ಆರೋಪ ಕೇಳಿಬಂದಿದೆ. ನಿಪ್ಪಾಣಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ನಡೆಯುತ್ತಿದ್ದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ. ಪರಿಣಾಮ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಟರಿ ಮ‌ೂಲಕ 950 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿದೆ.

ಆಶ್ರಯ ಕಮಿಟಿ ಅಧಿಕಾರಿಗಳು, ಸದಸ್ಯರ ಸಮ್ಮುಖದಲ್ಲಿ ಲಾಟರಿ ಮೂಲಕ ಮನೆಗಳ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವೇಳೆ ಏಕಾ ಏಕಿ ಬೆಂಬಲಿಗರ ಜೊತೆಗೆ ಕಾರ್ಯಕ್ರಮಕ್ಕೆ ನುಗ್ಗಿದ ಲಕ್ಷ್ಮಣರಾವ್ ಚಿಂಗಳೆ, ಬೇಕಾದವರಿಗೆ ನೀವು ಮನೆಗಳನ್ನ ಹಂಚಲು ಮುಂದಾಗಿದ್ದೀರಿ. ಮನೆಗಳ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಶಾಸಕಿಗೆ ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ‌ಯನ್ನ ಏಕೆ ಕರೆದಿಲ್ಲಾ ಎಂದು ಪ್ರಶ್ನಿಸಿದ್ದು, ಈ ವೇಳೆ ಶಾಸಕಿ ಜೊಲ್ಲೆ ಹಾಗೂ ಚಿಂಗಳೆ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?; ಸಾಧ್ಯಾಸಾಧ್ಯತೆ ಬಗ್ಗೆ ‘ಕೈ; ಪಾಳಯದಲ್ಲೇ ಹೀಗೊಂದು ಚರ್ಚೆ

ಕಣ್ಣೀರು ಹಾಕಿದ ಶಶಿಕಲಾ ಜೊಲ್ಲೆ

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆಯೂ ವಾಗ್ವಾದ ಶುರುವಾಗಿದ್ದು, ಕಾರ್ಯಕರ್ತರು ತಳ್ಳಾಡಿಕೊಂಡಿದ್ದಾರೆ. ವಾಗ್ವಾದ ತಾರಕ್ಕೆರುತ್ತಿದ್ದಂತೆ ಲಕ್ಷ್ಮಣರಾವ್ ಚಿಂಗಳೆಯನ್ನ ಪೋಲಿಸರು ಕರೆದುಕೊಂಡು ಹೋಗಿದ್ದು, ಗದ್ದಲ ಹಿನ್ನೆಲೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಅಧಿಕಾರಿಗಳು ಮುಂದೂಡಿದ್ದಾರೆ. ಇದೇ ವೇಳೆ ಭಾವುಕರಾದ ಶಾಸಕಿ ಶಶಿಕಲಾ ಜೊಲ್ಲೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ. ಕಾರ್ಯಕ್ರಮ ರದ್ದಾದ ಬಳಿಕ ಮಹಿಳೆಯರ ಜೊತೆಗೆ ಮಾತನಾಡಿದ ಶಶಿಕಲಾ ಜೊಲ್ಲೆ, ಚಿಕ್ಕ ಮಕ್ಕಳ ಜೊತೆ ಮನೆ ಕನಸು ಕಟ್ಟಿಕೊಂಡು ನೀವು ಇಲ್ಲಿಗೆ ಬಂದಿದ್ದೀರಿ. ಆದರೆ ರಾಜಕೀಯ ಮಾಡಿ ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:00 am, Thu, 21 May 26

Source link

‘ಕರ್ಣ’ ಧಾರಾವಾಹಿ; ನೆರವೇರಿತು ಕರ್ಣ-ನಿಧಿ ಮದುವೆ – Kannada News | Karna Nidhi Wedding: Zee Kannada’s ‘Karna’ Serial Sees Major Twist

ಝೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಕುತೂಹಲ ಕೆರಳಿಸಿರುವ ‘ಕರ್ಣ’ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಮಹಾ ತಿರುವು ಎದುರಾಗಿದೆ. ಕಥೆಯ ನಾಯಕ ಕರ್ಣ ಹಾಗೂ ನಿಧಿ ನಡುವಿನ ವಿವಾಹ ಮಹೋತ್ಸವವು ಹಿರಿಯರ ಸಮ್ಮುಖದಲ್ಲಿ ಅತ್ಯಂತ ನಾಟಕೀಯವಾಗಿ ಮತ್ತು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಮಹತ್ವದ ಬೆಳವಣಿಗೆಯು ಸೀರಿಯಲ್ ಪ್ರೇಕ್ಷಕರಲ್ಲಿ ಭಾರಿ ರೋಮಾಂಚನ ಉಂಟುಮಾಡಿದೆ.

ಈ ಹಿಂದೆ ಕಥೆಯಲ್ಲಿ ಕರ್ಣ ಮತ್ತು ನಿತ್ಯಾ ಮದುವೆ ನಡೆದಂತೆ ಬಿಂಬಿಸಲಾಗಿದ್ದರೂ, ಅದು ಕೇವಲ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಡೆದ ನಾಟಕವಾಗಿತ್ತೇ ಹೊರತು ಅಧಿಕೃತವಾಗಿರಲಿಲ್ಲ. ಕರ್ಣನ ನಿಜವಾದ ಪ್ರೀತಿ ನಿಧಿಯಾಗಿದ್ದರಿಂದ, ಇಬ್ಬರ ಮದುವೆ ಯಾವಾಗ ಆಗುತ್ತದೆ ಎಂಬ ತಳಮಳ ವೀಕ್ಷಕರಲ್ಲಿತ್ತು. ಈಗ ಆ ಎಲ್ಲಾ ಗೊಂದಲಗಳು ಹಾಗೂ ಅಡೆತಡೆಗಳಿಗೆ ಸಂಪೂರ್ಣವಾಗಿ ತೆರೆ ಬಿದ್ದಿದೆ. ವಿಶೇಷವೆಂದರೆ, ಸ್ವತಃ ನಿತ್ಯಾ ಸಮ್ಮುಖದಲ್ಲೇ ಕರ್ಣ ಮತ್ತು ನಿಧಿ ಇಬ್ಬರೂ ಹಸೆಮಣೆ ಏರಿ ಸಪ್ತಪದಿ ತುಳಿದಿದ್ದಾರೆ.

ಕರ್ಣ ತನ್ನ ಪ್ರೀತಿಯ ನಿಧಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅವಳನ್ನು ತನ್ನ ಅಧಿಕೃತ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಇಡೀ ಕುಟುಂಬ ಸಡಗರದಿಂದ ಈ ಮದುವೆಯಲ್ಲಿ ಭಾಗಿಯಾಗಿದೆ.

ಕರ್ಣ-ನಿಧಿ ಕಲ್ಯಾಣ’ದ ಈ ವಿಶೇಷ ಸಂಚಿಕೆಯು ಜೀ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಶುಭ ಮುಹೂರ್ತದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಯಾವೆಲ್ಲಾ ಹೊಸ ಸವಾಲುಗಳು ಎದುರಾಗಲಿವೆ ಮತ್ತು ಕಥೆ ಯಾವ ಹೊಸ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ

ರಮೇಶ್​​ಗೆ ಈಗಾಗಲೇ ಕರ್ಣ ಹಾಗೂ ನಿಧಿ, ನಿತ್ಯಾ ಮೇಲೆ ದ್ವೇಷ ಇದೆ. ಮಗನ ಯಶಸ್ಸನ್ನು ಅವನು ಎಂದಿಗೂ ಸಹಿಸೋದಿಲ್ಲ. ಕರ್ಣ ಬೀದಿಯಲ್ಲಿ ಸಿಕ್ಕ ಮಗ ಎಂದು ಅವನು ಭಾವಿಸಿದ್ದಾನೆ. ಆದರೆ, ಕರ್ಣನೇ ಅವನ ನಿಜವಾದ ಮಗ ಎಂಬ ವಿಷಯ ಇನ್ನೂ ಆತನಿಗೆ ತಿಳಿದಿಲ್ಲ. ಅದು ತಿಳಿದ ಬಳಿಕ ಕಥೆಗೆ ಮತ್ತಷ್ಟು ತಿರುವು ಎದುರಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪಘಾತದಲ್ಲಿ ಕಾಲು ಹೋದರೂ ಸ್ಟ್ರೇಚರ್‌ನಲ್ಲೇ ಮಲಗಿ SSLC ಪರೀಕ್ಷೆ ಬರೆದು ಪಾಸ್ ಆದ ಕುಸುಮಾಗೆ ಶಾಸಕಿ ರೂಪಕಲಾ ಬಂಪರ್ ಗಿಫ್ಟ್! – Kannada News | Inspiring Kolar Girl Kusuma Overcomes Tragedy, Achieves SSLC Success

ಕುಸುಮಾಕ್ಕೆ ರೋಬೋಟಿಕ್ ಕಾಲುಗಳು ನೀಡಿದ ಶಾಸಕಿ

ಕೋಲಾರ, ಮೇ.21: ಸಂಕಲ್ಪ ಬಲವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಗೆದ್ದು ಬರಬಹುದು ಎಂಬುದನ್ನು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿಯ ಹೆಣ್ಣುಮಗಳು ಕುಸುಮಾ ಇಡೀ ಸಮಾಜಕ್ಕೆ ಸಾಬೀತುಪಡಿಸಿದ್ದಾಳೆ. ರಸ್ತೆ ಅಪಘಾತವೊಂದರಲ್ಲಿ ತನ್ನ ಕಾಲನ್ನೇ ಕಳೆದುಕೊಂಡರೂ ಧೃತಿಗೆಡದ ಈಕೆ, ಇತ್ತೀಚೆಗಷ್ಟೇ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ (First Class) ತೇರ್ಗಡೆಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಕೆಲವು ತಿಂಗಳ ಮುನ್ನ ನಡೆದ ಭೀಕರ ಅಪಘಾತದಲ್ಲಿ ಕುಸುಮಾ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು. ವೈದ್ಯರು ಆಕೆಗೆ ಕಡ್ಡಾಯ ಚಿಕಿತ್ಸೆ ಮತ್ತು ಸಂಪೂರ್ಣ ವಿಶ್ರಾಂತಿ ಅಗತ್ಯ ಎಂದು ಸೂಚಿಸಿದ್ದರು. ಆದರೆ, ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು ಎಂಬ ದೃಢ ನಿರ್ಧಾರದಿಂದ ಕುಸುಮಾ ಆಸ್ಪತ್ರೆಯ ಬೆಡ್‌ನಿಂದ ನೇರವಾಗಿ ಸ್ಟ್ರೇಚರ್ ಮೇಲೆಯೇ ಮಲಗಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಳು. ಕೇವಲ ಪರೀಕ್ಷೆ ಬರೆಯುವುದಷ್ಟೇ ಅಲ್ಲದೆ, ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾಳೆ.

ಬಾಲಕಿ ಕುಸುಮಾಳ ಈ ಅದ್ಭುತ ಸಾಧನೆ ಮತ್ತು ಕರುಣಾಜನಕ ಸ್ಥಿತಿಯ ಸುದ್ದಿ ತಿಳಿಯುತ್ತಿದ್ದಂತೆ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರು ತಕ್ಷಣವೇ ಸ್ಪಂದಿಸಿದ್ದಾರೆ. ಚಿನ್ನನಾಗನಹಳ್ಳಿಯಲ್ಲಿರುವ ಕುಸುಮಾಳ ಮನೆಗೆ ಖುದ್ದಾಗಿ ಭೇಟಿ ನೀಡಿ, ಬಾಲಕಿಯ ಧೈರ್ಯವನ್ನು ಶ್ಲಾಘಿಸಿ ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ವಕ್ಫ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ!

ಅಷ್ಟೇ ಅಲ್ಲದೆ, ಬಾಲಕಿ ಮತ್ತೆ ಸ್ವಾವಲಂಬಿಯಾಗಿ ತನ್ನ ಕಾಲಿನ ಮೇಲೆ ನಿಲ್ಲಲು ಅನುವಾಗುವಂತೆ ‘ಲೈಫ್ ಸೇವರ್’ (Life Saver) ಸಾಮಾಜಿಕ ಸಂಸ್ಥೆಯ ಗೌರಿಶಂಕರ್ ಅವರ ಸಹಯೋಗದೊಂದಿಗೆ ಅತ್ಯಾಧುನಿಕ ರೋಬೋಟಿಕ್ ಕೃತಕ ಕಾಲುಗಳನ್ನು (Robotic Artificial Legs) ಜೋಡಿಸಲು ಸಂಪೂರ್ಣ ಅಗತ್ಯ ವ್ಯವಸ್ಥೆ ಹಾಗೂ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶಾಸಕಿಯ ಈ ಶ್ಲಾಘನೀಯ ಮಾನವೀಯ ಕಾರ್ಯಕ್ಕೆ ಹಾಗೂ ಬಾಲಕಿಯ ಅಪ್ರತಿಮ ಛಲಕ್ಕೆ ಇಡೀ ಕೋಲಾರ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version