ಊಟ ಮಾಡಿದ ನಂತರ ಹೊಟ್ಟೆ ನೋವು ಬರುತ್ತಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | Stomach Pain Warning Signs: Seek Medical Help

ಕೆಲವರಿಗೆ ಊಟ ಮಾಡಿದ ನಂತರ ಹೊಟ್ಟೆ ನೋವು (Stomach Pain) ಕಾಣಿಸಿಕೊಳ್ಳುತ್ತದೆ. ಈ ನೋವು ಕೆಲವೊಮ್ಮೆ ಸಣ್ಣ ಮಟ್ಟದಲ್ಲಿರಬಹುದು, ಕೆಲವೊಮ್ಮೆ ತೀವ್ರವಾಗಿರಬಹುದು. ಹಲವರು ಇದನ್ನು ಗ್ಯಾಸ್ ಸಮಸ್ಯೆ ಅಥವಾ ದಿನನಿತ್ಯದ ಸಾಮಾನ್ಯ ತೊಂದರೆ ಎಂದು ನಿರ್ಲಕ್ಸ್ಯ ಮಾಡುತ್ತಾರೆ. ಆದರೆ ಈ ತೊಂದರೆ ಮತ್ತೆ ಮತ್ತೆ ಕಾಣಿಸಿಕೊಂಡರೆ, ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸುವುದು ದೇಹದ ಒಳಗಿರುವ ಸಮಸ್ಯೆಯ ಮುನ್ಸೂಚನೆಯಾಗಿರಬಹುದು. ಈ ನೋವು ಹೊಟ್ಟೆಯ ಮೇಲ್ಭಾಗದಲ್ಲಿ, ನಾಭಿ ಸುತ್ತಮುತ್ತ ಅಥವಾ ಸಂಪೂರ್ಣ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಇದರಿಂದ ಕೆಲವರು ಸರಿಯಾಗಿ ಊಟ ಮಾಡುವುದಕ್ಕೂ ಭಯಪಡುತ್ತಾರೆ. ಇದರಿಂದ ಹಸಿವು ಹಾಗೂ ದಿನಚರಿ ಎರಡರ ಮೇಲೂ ಪರಿಣಾಮಬೀರುತ್ತದೆ. ಆದ್ದರಿಂದ ಈ ರೀತಿಯ ನೋವಿಗೆ ಕಾರಣ ಅರ್ಥಮಾಡಿಕೊಳ್ಳುವುದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗುತ್ತದೆ.

ಊಟ ಮಾಡಿದ ನಂತರ ಹೊಟ್ಟೆ ನೋವು ಬರುವುದಕ್ಕೆ ಕಾರಣವೇನು?

ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ಊಟದ ನಂತರ ಹೊಟ್ಟೆ ನೋವಿಗೆ ಜೀರ್ಣಕ್ರಿಯೆ ಸಂಬಂಧಿತ ಕಾರಣಗಳಿರಬಹುದು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆಯಲ್ಲಿ ಭಾರವಾಗಿರುವ ಅನುಭವ ಮತ್ತು ನೋವು ಉಂಟಾಗಬಹುದು. ಇಲ್ಲವಾದಲ್ಲಿ ಗ್ಯಾಸ್ಟ್ರೋಈಸೋಫೇಜಿಯಲ್ ರಿಫ್ಲಕ್ಸ್ ರೋಗ ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಕೆಲವರಿಗೆ ಎಣ್ಣೆಯುಕ್ತ ಆಹಾರ ತಿಂದ ನಂತರ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಬಹುದು. ಹೊಟ್ಟೆಯ ಒಳಪದರದಲ್ಲಿ ಗಾಯಗಳು ಉಂಟಾದರೂ ಕೂಡ ಊಟವಾದ ಮೇಲೆ ನೋವು ಹೆಚ್ಚಾಗಬಹುದು. ಅಷ್ಟೇಅಲ್ಲ, ಹೊಟ್ಟೆ ನೋವಿನ ಜೊತೆಗೆ ಗ್ಯಾಸು, ಅತಿಸಾರ ಅಥವಾ ಮಲಬದ್ಧತೆ ಕಾಣಿಸಬಹುದು.

ಇದನ್ನೂ ಓದಿ: ಊಟ ಕಡಿಮೆ ಮಾಡಿದ್ರೂ ಅಸಿಡಿಟಿಯಾಗುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?

ಹೊಟ್ಟೆ ನೋವಿನ ಜೊತೆಗೆ ಕಾಣಿಸಬಹುದಾದ ಇತರ ಲಕ್ಷಣಗಳು:

  • ಹೊಟ್ಟೆಯಲ್ಲಿ ಗ್ಯಾಸು ಮತ್ತು ಊತ
  • ಭಾರವಾಗಿರುವ ಅನುಭವ
  • ಹುಳಿ ತೆಗು ಅಥವಾ ಎದೆಜ್ವಾಲೆ
  • ವಾಕರಿಕೆ ಅಥವಾ ವಾಂತಿಯ ಭಾವನೆ
  • ಮಲಬದ್ಧತೆ ಅಥವಾ ಅತಿಸಾರ
  • ಹಸಿವು ಕಡಿಮೆ ಆಗುವುದು
  • ಈ ಲಕ್ಷಣಗಳು ನಿರಂತರವಾಗಿದ್ದರೆ, ಅದು ದೇಹ ನೀಡುತ್ತಿರುವ ಎಚ್ಚರಿಕೆಯ ಸೂಚನೆಯಾಗಿರಬಹುದು.

ಹೇಗೆ ತಡೆಗಟ್ಟುವುದು?

  • ಸಮಯಕ್ಕೆ ಸರಿಯಾಗಿ ಊಟ ಮಾಡಿ
  • ನಿಧಾನವಾಗಿ ಚೆನ್ನಾಗಿ ಚಪ್ಪರಿಸಿ ತಿನ್ನಿ
  • ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆ ಆಹಾರ ಸೇವನೆ ಮಾಡುವುದನ್ನು ಕಡಿಮೆ ಮಾಡಿ
  • ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
  • ಒತ್ತಡ ಕಡಿಮೆ ಮಾಡಲು ಯೋಗ ಅಥವಾ ಧ್ಯಾನ ಮಾಡಿ
  • ರಾತ್ರಿ ತಡವಾಗಿ ಊಟ ಮಾಡುವುದನ್ನು ತಪ್ಪಿಸಿ
  • ಊಟದ ನಂತರ ಸ್ವಲ್ಪ ವಾಕಿಂಗ್ ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್​​ನಲ್ಲಿ ಮೈಕ್ರಾನ್‌ನ ಸೆಮಿಕಂಡಕ್ಟರ್ ಸೌಲಭ್ಯ ಉದ್ಘಾಟಿಸಿದ ಪ್ರಧಾನಿ ಮೋದಿ – Kannada News | PM Modi inaugurates Micron semiconductor ATMP facility in Gujarat

ಅಹಮದಾಬಾದ್, ಫೆಬ್ರವರಿ 28: ಇಂದು ಗುಜರಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸನಂದ್‌ನಲ್ಲಿರುವ ಮೈಕ್ರಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಸೌಲಭ್ಯವನ್ನು ಉದ್ಘಾಟಿಸಿದರು. ಈ ಉದ್ಘಾಟನೆಯು ಭಾರತದ ಸೆಮಿಕಂಡಕ್ಟರ್ ಉತ್ಪಾದನಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಸನಂದ್ ಎಟಿಎಂಪಿ ಸೌಲಭ್ಯದಿಂದ ಭಾರತದಲ್ಲಿ ತಯಾರಿಸಿದ ಮೊದಲ ಸೆಮಿಕಂಡಕ್ಟರ್ ಮೆಮೊರಿ ಮಾಡ್ಯೂಲ್‌ಗಳ ವಾಣಿಜ್ಯ ಉತ್ಪಾದನೆ ಮತ್ತು ಸಾಗಣೆಯನ್ನು ಪ್ರಾರಂಭಿಸಿದೆ.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತವು ತನ್ನ ಸಾಫ್ಟ್‌ವೇರ್ ಬಲಕ್ಕೆ ಹೆಸರುವಾಸಿಯಾಗಿದೆ, ಈಗ ಹಾರ್ಡ್‌ವೇರ್ ವಲಯದಲ್ಲೂ ತನ್ನ ಗುರುತನ್ನು ದೃಢವಾಗಿ ಸ್ಥಾಪಿಸುತ್ತಿದೆ. ನಾನೇ ಸ್ವತಃ ಸನಂದ್ ಕಾರು ಕಾರ್ಖಾನೆಯಿಂದ ದೇಶದ ಪ್ರಮುಖ ಆಟೋಮೊಬೈಲ್ ಕೇಂದ್ರಗಳಲ್ಲಿ ಒಂದಾಗಿ ರೂಪಾಂತರಗೊಳ್ಳುವುದನ್ನು ನೋಡಿದ್ದೇನೆ. ಒಂದು ದೊಡ್ಡ ಆಟೋಮೊಬೈಲ್ ಕಂಪನಿ ಇಲ್ಲಿಗೆ ಬಂದಾಗ, ಅದರೊಂದಿಗೆ ಇಡೀ ಪರಿಸರ ವ್ಯವಸ್ಥೆಯೂ ಅಭಿವೃದ್ಧಿಗೊಂಡಿತು. ಒಂದು ಕಂಪನಿಯ ಆಗಮನವು ಅನೇಕ ಪೂರಕ ಘಟಕಗಳ ಸ್ಥಾಪನೆಗೆ ಕಾರಣವಾಯಿತು, ಪೂರೈಕೆದಾರರ ಜಾಲವನ್ನು ನಿರ್ಮಿಸಲಾಯಿತು, ಸ್ಥಳೀಯ ಉದ್ಯಮವನ್ನು ಬಲಪಡಿಸಲಾಯಿತು. ಇದರಿಂದ ಉದ್ಯೋಗ ಮತ್ತು ಹೂಡಿಕೆ ಎರಡೂ ಹೆಚ್ಚಾಯಿತು. ದೇಶ ಮತ್ತು ಪ್ರಪಂಚದಾದ್ಯಂತದ ಜನರು ಈಗ ಇಲ್ಲಿ ಕೆಲಸ ಮಾಡಲು ಬರುತ್ತಿದ್ದಾರೆ. ಒಂದು ಸಣ್ಣ ಪಟ್ಟಣವು ಜಾಗತಿಕ ನಕ್ಷೆಯಲ್ಲಿ ಇದ್ದಕ್ಕಿದ್ದಂತೆ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂಬುದು ನಿಜ. ನೀವು ಬಯಸುವ ಜೀವನಶೈಲಿ, ನೀವು ಬಯಸುವ ಸಾಮಾಜಿಕ ಜೀವನ ಮತ್ತು ನೀವು ಬದುಕಲು ಬಯಸುವ ರೀತಿಯಲ್ಲಿ ಗುಜರಾತ್ ನಿಮಗಾಗಿ ಎಲ್ಲವನ್ನೂ ಸೃಷ್ಟಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದಿದ್ದಾರೆ.”

ಇದನ್ನೂ ಓದಿ: ನರೇಂದ್ರ ಮೋದಿ ಮಲೇಷ್ಯಾ ಭೇಟಿ; ಯುಪಿಐನಿಂದ ಹಿಡಿದು ಸೆಮಿಕಂಡಕ್ಟರ್​ವರೆಗೆ ಹಲವು ಜಂಟಿ ಉಪಕ್ರಮಗಳ ಅನಾವರಣ

“ಈ ಮೈಕ್ರಾನ್ ಸೌಲಭ್ಯ ಮತ್ತು ಇಂದಿನ ಕಾರ್ಯಕ್ರಮವು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಬಲವಾದ ಸಹಕಾರ ಮತ್ತು ಪಾಲುದಾರಿಕೆಗೆ ಸಾಕ್ಷಿಯಾಗಿದೆ. ವಿಶೇಷವಾಗಿ AI ಮತ್ತು ಸೆಮಿಕಂಡಕ್ಟರ್‌ಗಳಂತಹ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಭಾರತ-ಯುಎಸ್ ಪಾಲುದಾರಿಕೆ ಅತ್ಯಂತ ಮುಖ್ಯವಾಗಿದೆ. AI ಶೃಂಗಸಭೆಯ ಸಮಯದಲ್ಲಿ ಭಾರತ ಮತ್ತು ಯುಎಸ್ ನಡುವಿನ ಪ್ಯಾಕ್ ಸಿಲಿಕಾನ್ ಉಪಕ್ರಮಕ್ಕೆ ಸಂಬಂಧಿಸಿದ ಒಪ್ಪಂದವು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ನಮ್ಮ ಜಂಟಿ ಪ್ರಯತ್ನಗಳು ನಿರ್ಣಾಯಕ ಖನಿಜಗಳ ಜಾಗತಿಕ ಪೂರೈಕೆ ಸರಪಳಿಗಳನ್ನು ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.

“ಭಾರತೀಯ ಜನಸಂಖ್ಯೆಯ ದೊಡ್ಡ ಜನಸಂಖ್ಯೆಯು ಗ್ಯಾಜೆಟ್‌ಗಳ ದೊಡ್ಡ ಗ್ರಾಹಕರಾಗುತ್ತಿದೆ ಮತ್ತು ದೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮೇಕ್ ಇನ್ ಇಂಡಿಯಾ ಪೂರ್ಣ ಪ್ರಮಾಣದಲ್ಲಿ ಮುಂದುವರಿಯುತ್ತಿದೆ. ಕಳೆದ 11 ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆ ಮತ್ತು ರಫ್ತು ಬಹುಪಟ್ಟು ಹೆಚ್ಚಾಗಿದೆ” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನಿಂದ ಭಾರತದ ವರ್ಚಸ್ಸು ನಾಶಮಾಡುವ ಪ್ರಯತ್ನ; ಪ್ರಧಾನಿ ಮೋದಿ ವಾಗ್ದಾಳಿ

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, “ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತವು ಜಾಗತಿಕ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸಿದೆ. ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 6 ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ಸ್ ರಫ್ತು 8 ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮೊಬೈಲ್ ಫೋನ್‌ಗಳು ಈಗ ದೇಶದ ಪ್ರಮುಖ ರಫ್ತು ವಸ್ತುಗಳಲ್ಲಿ ಒಂದಾಗಿದೆ” ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮನೆಯಲ್ಲಿ ಹಣ ಉಳಿಯದಿರಲು ಕಾರಣವೇ ಈ ತಪ್ಪುಗಳು – Kannada News | Chanakya Niti: Chanakya Says These mistakes are the reason why money is not stay at home

ಹಣ (money) ಗಳಿಸಬೇಕು, ಶ್ರೀಮಂತಿಕೆ ಗಳಿಸಬೇಕು, ಒಂದೊಳ್ಳೆ ಜೀವನ ನಡೆಸಬೇಕು ಎಂಬ ಕಾರಣಕ್ಕಾಗಿ ಪ್ರತಿಯೊಬ್ಬರೂ ಸಹ ಕಷ್ಟಪಟ್ಟು ಹಗಲಿರುಳು ದುಡಿಯುತ್ತಾರೆ. ಹೀಗೆ ದುಡಿದು ಎಷ್ಟೇ ಹಣ ಸಂಪಾದಿಸಿದರೂ ಸಹ ಹಲವರ ಕೈಯಲ್ಲಿ ಹಣ ಎನ್ನುವುದು ನಿಲ್ಲುವುದೇ ಇಲ್ಲ. ಹಣ ಹೇಗಾದ್ರೂ ಖರ್ಚಾಗುತ್ತಿರುತ್ತದೆ. ಈ ರೀತಿ ಕೈಯಲ್ಲಿ ಹಣ ಉಳಿಯದಿರಲು ಕಾರಣವೇ ಒಂದಷ್ಟು ತಪ್ಪುಗಳು ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಆ ತಪ್ಪಗಳು ಸರಿಪಡಿಸಿದರೆ ಖಂಡಿತವಾಗಿ ನಿಮ್ಮ ಕೈಯಲ್ಲಿ ಹಣ ಉಳಿಯುತ್ತೆ ಎಂದಿದ್ದಾರೆ. ಹಾಗಿದ್ರೆ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಹಣ ಉಳಿಯದಿರಲು ಕಾರಣವೇ ಈ ತಪ್ಪುಗಳು:

ಉಳಿತಾಯ ಮಾಡದಿರುವುದು: ಅನೇಕ ಜನರು ಹಣ ಸಂಪಾದನೆ ಮಾಡುತ್ತಾರೆ, ಆ ಹಣವನ್ನು ತಕ್ಷಣವೇ ಖರ್ಚು ಮಾಡಿಬಿಡುತ್ತಾರೆ, ಏನಾದ್ರೂ ಅನಗತ್ಯ ವಸ್ತುಗಳನ್ನು ಖರೀದಿ ಮಾಡಿ ದುಡ್ಡನ್ನೆಲ್ಲಾ ವೇಸ್ಟ್‌ ಮಾಡುತ್ತಾರೆ. ಪರಿಣಾಮವಾಗಿ, ಅವರಿಗೆ ಹಣದ ಅಗತ್ಯವಿದ್ದಾಗ ಅವರ ಬಳಿ ಹಣವಿರುವುದಿಲ್ಲ. ಹಾಗಾಗಿ ಸಂಪಾದನೆಯ ಒಂದಷ್ಟು ಭಾಗವನ್ನು ಉಳಿತಾಯ ಮಾಡಬೇಕು.

ದಾನ ಧರ್ಮ ಮಾಡದಿರುವುದು: ಚಾಣಕ್ಯ ನೀತಿಯು ದಾನ ನೀಡುವುದನ್ನು ಅತ್ಯಂತ ಪುಣ್ಯ ಕಾರ್ಯವೆಂದು ವಿವರಿಸುತ್ತದೆ. ದಾನ ಮಾಡುವವರನ್ನು ಲಕ್ಷ್ಮಿ ದೇವಿ ಯಾವಾಗಲೂ ಮೆಚ್ಚುತ್ತಾಳೆ. ಆಚಾರ್ಯ ಚಾಣಕ್ಯರ ಪ್ರಕಾರ, ದಾನ ಮಾಡದ ಯಾರಾದರೂ ಯಾವಾಗಲೂ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಾರೆ. ಅಂತಹ ಜನರು ತಮ್ಮ ಜೀವನದಲ್ಲಿ ಯಾವಾಗಲೂ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಾರೆ.

ಮನೆಯಲ್ಲಿ ನಕಾರಾತ್ಮಕ ವಾತಾವರಣ: ನೀವು ಎಷ್ಟೇ ಹಣ ಸಂಪಾದಿಸಿದರೂ, ಮನೆಯಲ್ಲಿ ಶಾಂತಿ ಇಲ್ಲದಿದ್ದರೆ, ಅದು ವ್ಯರ್ಥ. ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುವುದಿಲ್ಲ ಜೊತೆಗೆ  ಹಣವೂ ಉಳಿಯುವುದಿಲ್ಲ ಎಂದಿದ್ದಾರೆ ಚಾಣಕ್ಯ.

ಪ್ರದರ್ಶನ: ಕೆಲವರು ಇತರರಿಗೆ ತೋರಿಸಿಕೊಳ್ಳಲು ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಕೇವಲ ಪ್ರದರ್ಶನಕ್ಕಾಗಿ ಬದುಕುವವರು ತಮ್ಮ ಸಂಪತ್ತನ್ನು ಬೇಗನೆ ಕಳೆದುಕೊಳ್ಳುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ. ಆದ್ದರಿಂದ ಸರಳವಾಗಿ ಬದುಕುವುದು ಮತ್ತು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಉತ್ತಮ.

ಇದನ್ನೂ ಓದಿ: ಅಭ್ಯಾಸಗಳು ಸಮಾಜದಲ್ಲಿ ನಿಮ್ಮ ಗೌರವವನ್ನೇ ಹಾಳುಮಾಡಿಬಿಡುತ್ತದೆ

ಹಣಕ್ಕೆ ಅಗೌರವ ತೋರುವುದು: ಕೆಲವರು ಹಣವನ್ನು ಗೌರವಿಸುವುದಿಲ್ಲ. ಅವರು ಅದನ್ನು ಅಜಾಗರೂಕತೆಯಿಂದ ಪೋಲು ಮಾಡುತ್ತಾರೆ, ಇದರಿಂದಾಗಿ ಎಷ್ಟೇ ಸಂಪಾದನೆ ಮಾಡಿದರೂ ಹಣ ಉಳಿಯುವುದಿಲ್ಲ.

ಹೂಡಿಕೆ ಮಾಡದಿರುವುದು: ಚಾಣಕ್ಯನ ಪ್ರಕಾರ,  ಹಣವನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದು ತಿಳಿದಿರಬೇಕು. ಇದರಿಂದ ಮಾತ್ರ ಹಣ ಉಳಿಯುತ್ತದೆ. ಕೆಲವರು ಹಣವನ್ನು ಉಳಿತಾಯ ಮಾಡುತ್ತಾರೆ ಆದ್ರೆ ಸರಿಯಾಗಿ ಹೂಡಿಕೆ ಮಾಡುವುದಿಲ್ಲ. ಹೀಗೆ ಹಣವನ್ನು ಸರಿಯಾಗಿ ಬಳಸದಿದ್ದರೆ ಅದರ ಮೌಲ್ಯ ಕಳೆದುಹೋಗುತ್ತದೆ. ಹಾಗಾಗಿ ಹಣವನ್ನು ಸರಿಯಾಗಿ ಹೂಡಿಕೆ ಮಾಡಲು ಕಲಿಯಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯಕ್ಕೆ ಹೋಗುವುದು ಅವರ ಕನಸಾಗಿತ್ತು: ಹರಕೆ ತೀರಿಸಿ ರಾಯರ ದರ್ಶನ ಪಡೆಯಲು ಹೋದ ವ್ಯಕ್ತಿ ನಾಪತ್ತೆ – Kannada News | Mantralaya Mystery: Chamarajanagar Devotee Doreswamy Missing Since Feb 9, Police Probe

ಚಾಮರಾಜನಗರ, ಫೆ.28: ರಾಯರನ್ನು ನೋಡಲು ಸಾವಿರಾರೂ ಭಕ್ತರು ಪ್ರತಿದಿನ ಬರುತ್ತಾರೆ. ಅದೊಂದು ಕಾರ್ಣಿಕದ ಸ್ಥಳ, ನೆಮ್ಮದಿ, ಸಂಕಷ್ಟಕ್ಕೆ ಮುಕ್ತಿ ನೀಡುವ ಸ್ಥಳ, ಹೀಗೆ ರಾಯರ ಮೇಲೆ ಅಪಾರ ಭಕ್ತಿ ಹೊಂದಿದ್ದ ವ್ಯಕ್ತಿಯೊಬ್ಬರು ಹರಕೆ ತೀರಿಸಲು ಮಂತ್ರಾಲಯಕ್ಕೆ ಹೋಗಿ ಈಗ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ ದೊರೆಸ್ವಾಮಿ (55) ನಾಪತ್ತೆಯಾದ ದುರ್ದೈವಿ. ದೊರೆಸ್ವಾಮಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರೂ ಪ್ರತಿ ಗುರುವಾರ ತಪ್ಪದೇ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುತ್ತಿದ್ದರು. ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ಹೋಗಿ ಮುಡಿ ಕೊಟ್ಟು (ಹರಕೆ ತೀರಿಸಿ) ರಾಯರ ದರ್ಶನ ಪಡೆಯಬೇಕು ಎಂಬುದು ಅವರ ದೊಡ್ಡ ಕನಸಾಗಿತ್ತು.

ಫೆಬ್ರವರಿ 9ರಂದು ದೊರೆಸ್ವಾಮಿ ಅವರು ಚಾಮರಾಜನಗರದಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದರು. ಅವರ ಪುತ್ರ ತೇಜಸ್ ಅವರೇ ಸ್ವತಃ ರೈಲ್ವೆ ಟಿಕೆಟ್ ತೆಗೆಸಿಕೊಟ್ಟು, ತಂದೆಯ ಖರ್ಚಿಗೆ 2 ಸಾವಿರ ರೂಪಾಯಿ ಹಣ ನೀಡಿ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು. “ಮೂರು ದಿನಗಳಲ್ಲಿ ದರ್ಶನ ಮುಗಿಸಿ ವಾಪಸ್ ಬರುತ್ತೇನೆ” ಎಂದು ಹೋದವರು ಫೆಬ್ರವರಿ 28 ಕಳೆದರೂ ವಾಪಸ್ ಬಂದಿಲ್ಲ. ಅವರು ಮೊಬೈಲ್ ಕೂಡ ಬಳಸದ ಕಾರಣ ಕುಟುಂಬಸ್ಥರಿಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್: ಓಡಿ ಬನ್ನಿ ಎಂದ ಕಂಡಕ್ಟರ್

ದೊರೆಸ್ವಾಮಿ ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಅವರ ಪತ್ನಿ ರೇಖಾ ಮತ್ತು ಮಗ ತೇಜಸ್ ಮಂತ್ರಾಲಯಕ್ಕೆ ತೆರಳಿ ರೈಲ್ವೆ ನಿಲ್ದಾಣ ಹಾಗೂ ಮಠದ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ್ದಾರೆ. ಆರ್‌ಪಿಎಫ್ (RPF) ಸಿಬ್ಬಂದಿಗೂ ಮಾಹಿತಿ ನೀಡಿದ್ದಾರೆ. ಸದ್ಯ ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ (Missing Case) ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ? – Kannada News | Thalapathy Vijay’s Wife applied for Divorce Trisha’s old video getting viral

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇಬ್ಬರ 27 ವರ್ಷಗಳ ದಾಂಪತ್ಯ ಮುರಿದು ಬೀಳುವ ಸ್ಥಿತಿಯಲ್ಲಿದೆ. ನಟಿಯೊಬ್ಬರೊಟ್ಟಿಗೆ ವಿಜಯ್ ಸಂಬಂಧ ಹೊಂದಿದ್ದು, ಅದೇ ಕಾರಣಕ್ಕೆ ತಮಗೆ ಅವರಿಂದ ವಿಚ್ಛೇದನ ಕೊಡಿಸಬೇಕೆಂದು ವಿಜಯ್ ಪತ್ನಿ ಸಂಗೀತ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನಲಾಗುತ್ತಿದೆ. ದಂಪತಿಯ ವಿಚ್ಛೇದನಕ್ಕೆ ನಟಿ ತ್ರಿಷಾ ಕಾರಣ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ನಡವೆಯೇ ತ್ರಿಷಾ ಅವರ ಹಳೆಯ ವಿಡಿಯೋ ಒಂದನ್ನು ಟ್ರೋಲ್​ ಪೇಜುಗಳು ಹಂಚಿಕೊಳ್ಳುತ್ತಿವೆ.

ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಮೊದಲಿನಿಂದಲೂ ಗುಸು-ಗುಸು ನಡೆದೇ ಇತ್ತು. ಇದೀಗ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿ ಅದರಲ್ಲೂ ನಟಿಯ ಉಲ್ಲೇಖ ಮಾಡುತ್ತಿದ್ದಂತೆ, ವಿಜಯ್ ಜೊತೆಗೆ ಸಂಬಂಧದಲ್ಲಿರುವುದು ತ್ರಿಷಾ ಅವರೇ ಎಂಬ ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜೊತೆಗೆ ವಿಜಯ್ ಹಾಗೂ ತ್ರಿಷಾ ಅವರ ಹಳೆಯ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿವೆ. ಅದರಲ್ಲೂ ಒಂದು ವಿಡಿಯೋ ಅಂತೂ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ: ನಟಿ ಜೊತೆ ಅನೈತಿಕ ಸಂಬಂಧ ಆರೋಪ

ಇದೀಗ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ವಿಜಯ್, ಡಿಎಂಕೆಗೆ ಗಟ್ಟಿ ಎದುರಾಳಿ ಎನಿಸಿಕೊಂಡಿದ್ದಾರೆ. ಇದೀಗ ಅವರ ವಿಚ್ಛೇದನ ಸುದ್ದಿ ಹೊರಬೀಳುತ್ತಿದ್ದಂತೆ ತ್ರಿಷಾ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಸಂದರ್ಶನವೊಂದರಲ್ಲಿ ತ್ರಿಷಾ ಅವರು ತಮಗೆ ತಮಿಳುನಾಡಿನ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ್ದರು. ಇದೀಗ ನೆಟ್ಟಿಗರು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದು, ತ್ರಿಷಾ ಸಿಎಂ ಆಗುವ ಆಸೆಯಿಂದ ವಿಜಯ್ ಜೊತೆಗೆ ಇದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ಇನ್ನು ಕೆಲವರು ತ್ರಿಷಾ ಅವರನ್ನು ಜಯಲಲಿತಾ ಅವರೊಟ್ಟಿಗೆ ಹೋಲಿಕೆ ಮಾಡುತ್ತಿದ್ದಾರೆ. ಜಯಲಲಿತಾ, ಎಂಜಿಆರ್ ಜೊತೆಗೆ ಆಪ್ತ ಸಂಬಂಧ ಹೊಂದಿದ್ದರು. ಎಂಜಿಆರ್​​ಗೂ ಸಹ ಬೇರೆ ಮದುವೆ ಆಗಿತ್ತು. ಆದರೆ ಎಂಜಿಆರ್ ಕಾಲವಾದ ಬಳಿಕ ಜಯಲಲಿತಾ ಸಿಎಂ ಆದರು. ಈಗ ತ್ರಿಷಾ ಅವರನ್ನು ಜಯಲಲಿತಾ ಅವರೊಟ್ಟಿಗೆ ಹೋಲಿಸಲಾಗುತ್ತಿದ್ದು, ತ್ರಿಷಾ ಸಹ ಮುಂದೊಮ್ಮೆ ಸಿಎಂ ಆಗುತ್ತಾರೆ ಎನ್ನುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟ್ರಂಪ್​ಗೆ ಖಮೇನಿ ತಿರುಗೇಟು; 6 ದೇಶಗಳ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ – Kannada News | Iran attacks 7 cities including israel abu dhabi qatar bahrain after us israel strikes

ನವದೆಹಲಿ, ಫೆಬ್ರವರಿ 28: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಸಾರಿವೆ. ಇರಾನ್ (Iran) ಮೇಲೆ ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ. ಇದರಿಂದ ಹೆದರಿ ಸುಮ್ಮನೆ ಕೂರದ ಇರಾನ್ ಇಸ್ರೇಲ್ ಹಾಗೂ 6 ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಆ 6 ದೇಶಗಳೆಂದರೆ ಯುಎಇ, ಸೌದಿ ಅರೇಬಿಯಾ, ಕುವೈತ್, ಜೋರ್ಡಾನ್, ಕತಾರ್ ಮತ್ತು ಬಹ್ರೇನ್. ಇರಾನ್ ತನ್ನ 6 ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಏಕಕಾಲದಲ್ಲಿ ನಾಶಪಡಿಸಿದ್ದರಿಂದ, ಇರಾನ್‌ನ ಪ್ರತೀಕಾರದಿಂದ ಅಮೆರಿಕ ಹೆಚ್ಚು ಹಾನಿಯನ್ನು ಅನುಭವಿಸಿದೆ. ಹೀಗಾಗಿ, ಈ ಯುದ್ಧ ಇನ್ನಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇರಾನ್ ಯಾವ ದೇಶಗಳ ಮೇಲೆ ದಾಳಿ ಮಾಡಿತು?

  1. ಇರಾನ್ ತನ್ನ ಮೊದಲ ದಾಳಿಯನ್ನು ಟೆಲ್ ಅವೀವ್ ಮೇಲೆ ನಡೆಸಿತು. ಇರಾನ್ ಇಸ್ರೇಲ್ ರಾಜಧಾನಿಯ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಇಸ್ರೇಲ್ ತುರ್ತು ಪರಿಸ್ಥಿತಿಯನ್ನು ಘೋಷಿಸಿತು.
  2. ನಂತರ ಇರಾನ್ ಬಹ್ರೇನ್‌ನಲ್ಲಿರುವ ಅಮೆರಿಕದ ನೆಲೆಯನ್ನು ಗುರಿಯಾಗಿಸಿಕೊಂಡಿತು. ಅಲ್ಲಿ ಅಮೆರಿಕ ಎಫ್-12 ವಿಮಾನಗಳನ್ನು ನಿಯೋಜಿಸಿತ್ತು. ಇರಾನ್ ಈ ನೆಲೆಯನ್ನು ನಾಶಮಾಡಿತು.
  3. ಇರಾನ್ ಬಳಿಕ ಯುಎಇಯ ಅಬುಧಾಬಿಯಲ್ಲಿರುವ ಅಮೆರಿಕದ ನೆಲೆಯನ್ನು ಗುರಿಯಾಗಿಸಿಕೊಂಡಿತು. ಅಬುಧಾಬಿಯಲ್ಲಿ ನಡೆದ ಈ ದಾಳಿಯು ಯುಎಇಯಲ್ಲಿ ರಾಜ್ಯಾದ್ಯಂತ ಎಚ್ಚರಿಕೆಯನ್ನು ನೀಡಿದೆ. ಯುಎಇಯ ರಾಜ್ಯ ಸುದ್ದಿ ಸಂಸ್ಥೆಯ ಪ್ರಕಾರ, ಇರಾನಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.
  4. ಬಳಿಕ, ದೋಹಾದಲ್ಲಿರುವ ಅಮೆರಿಕದ ನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಕತಾರ್ ರಕ್ಷಣಾ ಸಚಿವರು ಹೇಳಿದ್ದಾರೆ. ಇಲ್ಲಿ ಕೂಡ ಕ್ಷಿಪಣಿ ದಾಳಿ ನಡೆಸಲಾಗಿದೆ.
  5. ಇರಾನ್ ಸೌದಿ ಅರೇಬಿಯಾದ ರಿಯಾದ್ ಮೇಲೆ ದಾಳಿ ಮಾಡಿದೆ. ಇರಾನ್ ಅಲ್ಲಿನ ಅಮೆರಿಕದ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
  6. ಬಳಿಕ ಜೋರ್ಡಾನ್‌ನಲ್ಲಿರುವ ಅಮೆರಿಕದ ಪ್ರಧಾನ ಕಚೇರಿಯ ಮೇಲೆ ಇರಾನ್ ದಾಳಿ ಮಾಡಿದೆ. ಜೋರ್ಡಾನ್ ಇಸ್ರೇಲ್‌ನ ನೆರೆಯ ರಾಷ್ಟ್ರ. ಜೋರ್ಡಾನ್ ಬಳಿ ಅಮೆರಿಕ ಎಫ್ -22 ಗಳನ್ನು ನಿಯೋಜಿಸಿದೆ.
  7. ನಂತರ ಇರಾನ್ ಕುವೈತ್ ಮೇಲೆ ದಾಳಿ ಮಾಡಿದೆ. ಅಲ್ಲಿಯೂ ಅಮೆರಿಕದ ವಾಯು ನೆಲೆ ಇದೆ. ಕುವೈತ್ ಮೇಲೆ ದಾಳಿ ಮಾಡುವ ಮೂಲಕ ಯುದ್ಧ ಮುಂದುವರಿದರೆ, ಇಡೀ ಮಧ್ಯಪ್ರಾಚ್ಯವೇ ಪ್ರಕ್ಷುಬ್ಧವಾಗಬಹುದು ಎಂದು ಇರಾನ್ ತೋರಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Ranji Trophy Final: ಚಾಂಪಿಯನ್ ತಂಡಕ್ಕೆ 2 ಕೋಟಿ ಬಹುಮಾನ ಘೋಷಿಸಿದ ಸಿಎಂ; ಬಿಸಿಸಿಐನಿಂದ ಸಿಕ್ಕಿದೆಷ್ಟು? – Kannada News | Ranji Trophy 2025 26 final Prize Money Jammu Kashmir vs Karnataka KSCA Hubli Cricket Ground Hubli

2025-26 ರ ರಣಜಿ ಟ್ರೋಫಿಯ ಫೈನಲ್ ಪಂದ್ಯವು ಭಾರತೀಯ ದೇಶೀಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಅಧ್ಯಾಯವಾಗಿದೆ. ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಕರ್ನಾಟಕ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿದ್ದ ಜಮ್ಮು ಮತ್ತು ಕಾಶ್ಮೀರ ಬರೋಬ್ಬರಿ 67 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿದೆ.

ಈ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 293 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 291 ರನ್‌ಗಳ ಮುನ್ನಡೆ ಸಿಕ್ಕಿತು.

ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಾಬಲ್ಯ ಕಾಯ್ದುಕೊಂಡು ಮುನ್ನಡೆಯನ್ನು 630 ರನ್‌ಗಳಿಗೆ ಕೊಂಡೊಯ್ಯಿತು. ಅಂತಿಮವಾಗಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲಾಯಿತು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ 291 ರನ್​ಗಳ ಮುನ್ನಡೆ ಪಡೆದುಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಿತು. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಜೆಕೆ ತಂಡಕ್ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬರೋಬ್ಬರಿ 2 ಕೋಟ ರೂ. ಬಹುಮಾನ ಘೋಷಿಸಿದ್ದಾರೆ. ಇದರ ಜೊತೆಗೆ ಬಿಸಿಸಿಐನಿಂದಲೂ ಕೋಟಿ ಮೊತ್ತದ ಬಹುಮಾನ ಸಿಕ್ಕಿದೆ.

ರಣಜಿ ಟ್ರೋಫಿ ಚಾಂಪಿಯನ್ ಆಗಿರುವ ಜಮ್ಮುಕಾಶ್ಮಿರ ತಂಡ ಬಿಸಿಸಿಐನಿಂದ 5 ಕೋಟಿ ರೂ. ಬಹುಮಾನವನ್ನು ಪಡೆಯಲಿದೆ. ಹಾಗೆಯೇ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ 3 ಕೋಟಿ ರೂಗಳನ್ನು ಪಡೆಯಲಿದೆ. ಈ ಬಹುಮಾನದ ಹಣವು ತಂಡದ ಕಠಿಣ ಪರಿಶ್ರಮವನ್ನು ಗುರುತಿಸುವುದಲ್ಲದೆ, ಆಟಗಾರರಿಗೆ ಪ್ರೋತ್ಸಾಹವನ್ನೂ ನೀಡುತ್ತದೆ.

Source link

ಯಾರೂ ಹೊರಗೆ ಬರಬೇಡಿ; ಇಸ್ರೇಲ್​, ಇರಾನ್, ಕತಾರ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ – Kannada News | Remain close to designated shelters Indias advisory for Indian nationals amid Israel, US attack on Iran

ನವದೆಹಲಿ, ಫೆಬ್ರವರಿ 28: ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶನಿವಾರ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಮತ್ತು ಜಾಗರೂಕರಾಗಿರಲು ಸಲಹೆ ನೀಡಿದೆ. ತುರ್ತು ಸಲಹೆ ಬಿಡುಗಡೆ ಮಾಡಿರುವ ಭಾರತ, ಇಸ್ರೇಲಿ ಅಧಿಕಾರಿಗಳು ಮತ್ತು ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಭಾರತೀಯರಿಗೆ ಸೂಚಿಸಿದೆ. ಭಾರತೀಯರು ಅಧಿಕೃತ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್‌ನಲ್ಲಿ ನವೀಕರಿಸಿದ ಸೂಚನೆಗಳನ್ನು ನಿಯಮಿತವಾಗಿ ಪರಿಶೀಲಿಸಲು, ಗೊತ್ತುಪಡಿಸಿದ ಆಶ್ರಯ ತಾಣಗಳ ಬಳಿಯೇ ಇರಲು, ಅವರ ನಿವಾಸ ಅಥವಾ ಕೆಲಸದ ಸ್ಥಳದ ಬಳಿ ಇರುವ ಸುರಕ್ಷಿತ ಸ್ಥಳಗಳನ್ನು ಸೇರಿಕೊಳ್ಳಲು ಭಾರತ ಸಲಹೆ ನೀಡಿದೆ.

“ಈ ಪ್ರದೇಶದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಅತ್ಯಂತ ಎಚ್ಚರಿಕೆಯಿಂದ ವರ್ತಿಸಲು ಮತ್ತು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಲು ಸೂಚಿಸಲಾಗಿದೆ” ಎಂದು ಭಾರತ ತನ್ನ ಸಲಹೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಜಗತ್ತಿನಲ್ಲಿ ಮೂರನೇ ಯುದ್ಧ ಆರಂಭ; ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದೆಂದು ಘೋಷಿಸಿದ ಅಮೆರಿಕ

ಮುಂದಿನ ಸೂಚನೆ ಬರುವವರೆಗೂ ಇಸ್ರೇಲ್‌ನೊಳಗೆ ಯಾವುದೇ ರೀತಿಯ ಅನಗತ್ಯ ಪ್ರಯಾಣವನ್ನು ಮಾಡಬಾರದು ಎಂದು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಹಾಗೇ, ಸ್ಥಳೀಯ ಸುದ್ದಿಗಳು, ಅಧಿಕೃತ ಪ್ರಕಟಣೆಗಳು ಮತ್ತು ತುರ್ತು ಎಚ್ಚರಿಕೆಗಳನ್ನು ನಿಯಮಿತವಾಗಿ ಗಮನಿಸುತ್ತಿರಲು ಸೂಚಿಸಲಾಗಿದೆ.

“ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು ಸಹಾಯವಾಣಿ ಮೂಲಕ ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು: ದೂರವಾಣಿ: +972-54-7520711; ಇ-ಮೇಲ್: cons1.telaviv@mea.gov.in ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕನೇ ನಮ್ಮ ಟಾರ್ಗೆಟ್ ಎಂದ ಇಸ್ರೇಲ್; ಯಾರು ಈ ಖಮೇನಿ?

ಹಾಗೇ, ಇರಾನ್, ಕತಾರ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಕೂಡ ಸಲಹೆ ನೀಡಲಾಗಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಅತ್ಯಂತ ಎಚ್ಚರಿಕೆಯಿಂದ ವರ್ತಿಸಲು, ಅನಗತ್ಯ ಓಡಾಟವನ್ನು ತಪ್ಪಿಸಲು ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಇರಲು ಸೂಚಿಸಿದೆ. ಸುದ್ದಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು, ರಾಯಭಾರ ಕಚೇರಿಯಿಂದ ಹೊರಡಿಸಲಾದ ಯಾವುದೇ ಹೆಚ್ಚಿನ ಮಾರ್ಗದರ್ಶನವನ್ನು ಅನುಸರಿಸಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ, ಭಾರತೀಯರು ಈ ಕೆಳಗಿನ ಸಂಖ್ಯೆಗಳಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು: +989128109115, +989128109109, +989128109102 ಮತ್ತು +989932179359.

ಕತಾರ್‌ನಲ್ಲಿರುವ ಭಾರತೀಯ ಪ್ರಜೆಗಳು “ಅತ್ಯಂತ ಎಚ್ಚರಿಕೆಯಿಂದ” ಮತ್ತು ರಾಯಭಾರ ಕಚೇರಿ ಮತ್ತು ಸ್ಥಳೀಯ ಅಧಿಕಾರಿಗಳಿಂದ ಬರುವ ಎಲ್ಲಾ ನವೀಕರಣಗಳನ್ನು ಮತ್ತು ಇತರ ಯಾವುದೇ ಸಂಬಂಧಿತ ಮಾಹಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. “ನಮ್ಮ ರಾಯಭಾರ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆ 00974-55647502 ಸಂಪರ್ಕಿಸಿ. ಯಾವುದೇ ಪ್ರಶ್ನೆಗಳಿಗೆ cons.doha@mea.gov.inಗೆ ಇಮೇಲ್ ಮಾಡಿ” ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್​​​-ಇಸ್ರೇಲ್​​​ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು

ಬೆಂಗಳೂರು, ಫೆಬ್ರವರಿ 28: ಇಸ್ರೇಲ್ ಮತ್ತು ಇರಾನ್ ನಡುವೆ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಇರಾನ್ ಇಸ್ರೇಲ್ ವಿರುದ್ಧ ನಿರೀಕ್ಷಿತವಲ್ಲದ ಪ್ರತಿದಾಳಿ ನಡೆಸಿದೆ. ಟೆಲ್ ಅವಿವ್ ಸೇರಿದಂತೆ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಸುಮಾರು 400 ಕ್ಷಿಪಣಿಗಳನ್ನು ಹಾರಿಸಲಾಗಿದೆ. ಇಸ್ರೇಲ್‌ನ ಹೋಲೋನ್‌ನಲ್ಲಿ ಕ್ಷಿಪಣಿಗಳು ಅಪ್ಪಳಿಸಿದ್ದು, ದಟ್ಟ ಹೊಗೆ ಆವರಿಸಿದೆ. ಇನ್ನು ಈ ಸಂಘರ್ಷ ಇಸ್ರೇಲ್‌ಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ಅರಬ್ ರಾಷ್ಟ್ರಗಳಾದ ಬಹರೈನ್, ಕತಾರ್, ಕುವೈತ್, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಮೇಲೂ ದಾಳಿ ನಡೆಸಿದೆ. ಬಹರೈನ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳು ಸಹ ಇರಾನ್‌ನ ಗುರಿಯಾಗಿವೆ. ಕತಾರ್ ರಾಜಧಾನಿ ದೋಹಾದಲ್ಲಿ ಸ್ಪೋಟದ ಸದ್ದು ಕೇಳಿಬಂದಿದೆ. ಇದರ ಪರಿಣಾಮವಾಗಿ ಭಾರತಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಗಳು ರದ್ದುಗೊಂಡಿದ್ದು, ಭಾರತಕ್ಕೆ ವಾಪಸಾಗಿವೆ. ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಕನ್ನಡಿಗರು ಸುರಕ್ಷಿತ ಸ್ಥಳಗಳಾದ ಬಂಕರ್‌ಗಳಿಗೆ ತೆರಳಿ ಆಶ್ರಯ ಪಡೆಯುತ್ತಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಕನ್ನಡಿಗರೊಬ್ಬರು ಮಾತನಾಡಿದ್ದು ಹೀಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Lunar Eclipse 2026: ಮಾ.03 ಸಂಪೂರ್ಣ ಚಂದ್ರಗ್ರಹಣ; ಕರ್ನಾಟಕದಲ್ಲಿ ಎಷ್ಟು ನಿಮಿಷಗಳ ಕಾಲ ಗೋಚರಿಸಲಿದೆ? – Kannada News | Lunar Eclipse 2026: Director Gurusprasad Explains the Blood Moon Phenomenon

ಮಾರ್ಚ್ 3 ರಂದು ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದ್ದು, ಇದು ರಕ್ತಚಂದ್ರ ಗ್ರಹಣ ಎಂದು ಸಹ ಗುರುತಿಸಲ್ಪಟ್ಟಿದೆ. ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್ ಅವರು ಈ ಅಪರೂಪದ ಖಗೋಳ ವಿದ್ಯಮಾನದ ಬಗ್ಗೆ ವಿವರಣೆ ನೀಡಿದ್ದಾರೆ. ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸಿದಾಗ, ಭೂಮಿಯ ವಾತಾವರಣದಿಂದ ಸೂರ್ಯನ ಕಿರಣಗಳು ವಕ್ರೀಭವನಗೊಂಡು ಚಂದ್ರನ ಮೇಲೆ ಬಿದ್ದು ಅದು ಕೆಂಪು, ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಗೋಚರಿಸುತ್ತದೆ.

ಭಾರತದ ಎಲ್ಲೆಡೆ ಈ ಗ್ರಹಣ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಮುಖ್ಯವಾಗಿ ಅಸ್ಸಾಂ, ಮೇಘಾಲಯ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ಈಶಾನ್ಯ ರಾಜ್ಯಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸಲಿದೆ. ಬೆಂಗಳೂರು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕೇವಲ 10-12 ನಿಮಿಷಗಳ ಕಾಲ ಮಾತ್ರ ಕಾಣುವ ಸಾಧ್ಯತೆ ಇದೆ. ಜ್ಯೋತಿಷಿಗಳ ಪ್ರಕಾರ, ಚಂದ್ರ ಮನಸ್ಸಿನ ಮೇಲೆ ಪರಿಣಾಮ ಬೀರುವ ಕಾರಣ, ಈ ಗ್ರಹಣದ ಸಂದರ್ಭದಲ್ಲಿ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version