ಪ್ರಯಾಣಿಕರ ಮುಂದೆಯೇ ಧಗಧಗನೆ ಹೊತ್ತಿ ಉರಿದ ದುರ್ಗಾಂಬಾ ಬಸ್: ಓಡಿ ಬನ್ನಿ ಎಂದ ಕಂಡಕ್ಟರ್ – Kannada News | Kundapura Shivamogga Bus Catches Fire at Hulikal Ghat; All 20+ Passengers Safe

ಶಿವಮೊಗ್ಗ ಫೆ.28: ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಇಡೀ ಬಸ್ ಸಂಪೂರ್ಣ ಭಸ್ಮವಾಗಿರುವ ಘಟನೆ ಹುಲಿಕಲ್ ಬಾಳೆಬರೇ ಘಾಟಿಯ ಫಾಲ್ಸ್ ಸಮೀಪ ಇಂದು ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಮಯಪ್ರಜ್ಞೆಯಿಂದ ಕೆಳಗಿಳಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸಂಚರಿಸುತ್ತಿದ್ದ ಜನಪ್ರಿಯ ದುರ್ಗಾಂಬಾ ಖಾಸಗಿ ಬಸ್. ಘಾಟ್ ರಸ್ತೆಯ ಫಾಲ್ಸ್ ಹತ್ತಿರ ಮುಖ್ಯ ರಸ್ತೆಯಲ್ಲಿ ವಿಪರೀತ ತಿರುವುಗಳಿರುವ ಜಾಗದಲ್ಲಿ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಲಿಸುತ್ತಿದ್ದ ಬಸ್ಸಿನ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿದ್ದು, ನೋಡನೋಡುತ್ತಿದ್ದಂತೆಯೇ ಬಸ್ ಬೆಂಕಿಯ ಹತ್ತಿಕೊಂಡಿದೆ. ಘಟನೆ ನಡೆದ ವೇಳೆ ಬಸ್ಸಿನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಇಂಜಿನ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಯಲು ಸೂಚಿಸಿದ್ದಾರೆ. ಇದರಿಂದಾಗಿ ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ದೃಶ್ಯವನ್ನು ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಯಡೂರಿನ ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಾಟ್ ರಸ್ತೆಯಲ್ಲಿ ಬಸ್ ಸುಟ್ಟು ಹೋಗಿರುವುದರಿಂದ ಕೆಲಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಸರ್ವೋಚ್ಚ ನಾಯಕನೇ ನಮ್ಮ ಟಾರ್ಗೆಟ್ ಎಂದ ಇಸ್ರೇಲ್; ಯಾರು ಈ ಖಮೇನಿ? – Kannada News | Who is Iran’s supreme leader Ayatollah Ali Khamenei? Why he is a Target?

ನವದೆಹಲಿ, ಫೆಬ್ರವರಿ 28: “ಇರಾನಿನ ಸರ್ವೋಚ್ಚ ನಾಯಕ ಖಮೇನಿ ಮತ್ತು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಟಾರ್ಗೆಟ್ ಮಾಡಿಯೇ ದಾಳಿಯನ್ನು ನಡೆಸಲಾಗಿತ್ತು” ಎಂದು ಇಸ್ರೇಲ್ (Israel Attack) ಹೇಳಿದೆ. ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಬಳಿ ಆರಂಭಿಕ ದಾಳಿಗಳು ನಡೆದಿತ್ತು. ಆದರೆ, ಆಗ 86 ವರ್ಷದ ಖಮೇನಿ ಟೆಹ್ರಾನ್‌ನಲ್ಲಿ ಇರಲಿಲ್ಲ. ಆ ಸಮಯದಲ್ಲಿ ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಟೆಹ್ರಾನ್ ಮೇಲೆ ದಾಳಿ ನಡೆಸಿದ ನಂತರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಎಲ್ಲಿದ್ದಾರೆ ಎಂಬ ಪ್ರಶ್ನೆಗಳು ಹೆಚ್ಚಾದವು. ಅವರನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂಬುದರ ಕುರಿತು ಯಾವುದೇ ವಿವರಗಳು ಸಿಕ್ಕಿಲ್ಲ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ಗುರಿಯಾಗಿಸಿಕೊಂಡ ಪ್ರದೇಶಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಗೆ ಸಂಬಂಧಿಸಿದ ಸ್ಥಳಗಳು ಸೇರಿವೆ.

ಇದನ್ನೂ ಓದಿ: ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ

86 ವರ್ಷದ ಖಮೇನಿ 1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದಾರೆ. ಅವರು ಸರ್ಕಾರದ ಎಲ್ಲಾ ಶಾಖೆಗಳು, ಮಿಲಿಟರಿ ಮತ್ತು ನ್ಯಾಯಾಂಗದ ಮೇಲೆ ಸರ್ವೋಚ್ಚ ಅಧಿಕಾರವನ್ನು ಹೊಂದಿದ್ದಾರೆ ಮತ್ತು ದೇಶದ ಆಧ್ಯಾತ್ಮಿಕ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಅಮೆರಿಕವನ್ನು ಇರಾನ್‌ನ “ಪ್ರಥಮ ಶತ್ರು” ಎಂದು ಕರೆದಿದ್ದರು. ಖಮೇನಿಯ ಶಕ್ತಿಗೆ ನಿರ್ಣಾಯಕವೆಂದರೆ ಇರಾನ್‌ನ ಎರಡು ಪ್ರಮುಖ ಭದ್ರತಾ ಸಂಸ್ಥೆಗಳಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಬಸಿಜ್ ಅರೆಸೈನಿಕ ಪಡೆಗಳು. ಇವು ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿವೆ.

ಇದನ್ನೂ ಓದಿ: ಜಗತ್ತಿನಲ್ಲಿ ಮೂರನೇ ಯುದ್ಧ ಆರಂಭ; ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದೆಂದು ಘೋಷಿಸಿದ ಅಮೆರಿಕ

ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುವುದಿಲ್ಲ ಮತ್ತು ಅದರ ಪರಮಾಣು ಕಾರ್ಯಕ್ರಮವು ನಾಗರಿಕ ಉದ್ದೇಶಗಳಿಗಾಗಿ ಮಾತ್ರ ಎಂದು ಖಮೇನಿ ಬಹಳ ಹಿಂದಿನಿಂದಲೂ ಹೇಳುತ್ತಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅನುಸರಿಸುತ್ತಿದೆ ಎಂಬುದಕ್ಕೆ ಯುಎಸ್ ಗುಪ್ತಚರ ಅಥವಾ ಯುಎನ್ ಪರಮಾಣು ಕಾವಲು ಸಂಸ್ಥೆ ಯಾವುದೇ ಪುರಾವೆಗಳನ್ನು ಕಂಡುಕೊಂಡಿಲ್ಲ. ಸದ್ಯಕ್ಕೆ ಇಸ್ರೇಲ್ ಮತ್ತು ಅಮೆರಿಕ ಎರಡೂ ದೇಶಗಳ ಟಾರ್ಗೆಟ್ ಖಮೇನಿ ಎಂಬುದನ್ನು ಆ ದೇಶಗಳ ನಾಯಕರೇ ಬಹಿರಂಗಪಡಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೊನೆಗೂ ಲ್ಯಾಂಡ್​ ಆದ ವಿಮಾನ: ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟ 180 ಪ್ರಯಾಣಿಕರು – Kannada News | Air India Express Kathmandu Flight Ordeal: 180 Passengers Stranded 3 Days Finally Reach Destination

ದೇವನಹಳ್ಳಿ, ಫೆಬ್ರವರಿ 28: ಮೂರು ಗಂಟೆಗಳಲ್ಲಿ ಮುಗಿಯುವ ಪ್ರವಾಸಕ್ಕೆ ಮೂರು ರಾಜ್ಯಗಳನ್ನು ಸುತ್ತಾಡಿಸಿದ್ದರು. ಮೂರು ನಿಮಿಷದ ಲ್ಯಾಂಡಿಂಗ್​ಗೆ ಮೂರು ದಿನಗಳ ಕಾಲ ವಿಮಾನದಲ್ಲೇ ಕೂರಿಸಿ ಸಿಬ್ಬಂದಿ ಸೂಕ್ತ ಮಾಹಿತಿ ನೀಡದೆ ಪರದಾಡಿಸಿದರು. ಆದರೆ ಇದೀಗ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು, ಮೂರು ದಿನಗಳ ಬಳಿಕ ನೂರಾರಕ್ಕೂ ಹೆಚ್ಚು ಪ್ರಯಾಣಿಕರು (passenger) ಸುರಕ್ಷಿತವಾಗಿ ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟಿದ್ದಾರೆ.

ಸುರಕ್ಷಿತವಾಗಿ ಗುರಿ ತಲುಪಿದ ಪ್ರಯಾಣಿಕರು

ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್​ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ ಭುಗಿಲೆದ್ದಿತ್ತು. ಒಂದಲ್ಲ, ಎರಡಲ್ಲ ಮೂರು ದಿನ ಏರ್ಪೋರ್ಟ್​​ಗಳಲ್ಲೆ ಸುತ್ತಾಡಿಸುತ್ತಿದ್ದಾರೆ ಅಂತ ಟರ್ಮಿನಲ್ ಒಳಗಡೆ ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ಈ ಬಗ್ಗೆ ಟಿವಿ9ಗೆ ಪ್ರವಾಸಿಗರ ಪರದಾಟದ ಬಗ್ಗೆ ವಿಸ್ಕ್ರತ ವರದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಗುರಿ ತಲುಪಿಸಿದೆ.

ಇದನ್ನೂ ಓದಿ: ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

ಅಂದಹಾಗೆ ಗುರುವಾರ ಬೆಳಗ್ಗೆಯಿಂದ ಇಂದು ಮುಂಜಾನೆವರೆಗೂ ಕೆಂಪೇಗೌಡ ಏರ್ಪೋರ್ಟ್​ನಿಂದ ನೇಪಾಳಕ್ಕೆ ಅಂತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಹೊರಟಿದ್ದ ಪ್ರಯಾಣಿಕರು ಕಠ್ಮಂಡು ತಲುಪಿದ್ದರು. ಆದರೆ ವಿಮಾನ ಲ್ಯಾಂಡ್ ಆಗದ ಕಾರಣ ವಾಪಸ್ ಬಂದಿದ್ದರು. ಎರೆಡೆರಡು ದಿನ ಬೆಂಗಳೂರು ಟು ಕಠ್ಮಂಡು ಅಂತ ಮೂರು-ನಾಲ್ಕು ಗಂಟೆ ಪ್ರವಾಸ ಮಾಡಿದರು ನಿಗದಿತ ಸ್ಥಳದಲ್ಲಿ ಇಳಿಯದೆ ವಾರಣಾಸಿ, ಲಕ್ನೋ ಏರ್ಪೋರ್ಟ್​​ಗಳಲ್ಲಿ ಕಾಲಹರಣ ಮಾಡಿ ಬಂದಿದ್ದರು. ಹೀಗಾಗಿ ಕಳೆದ ಎರಡು ದಿನಗಳಿಂದ ಊಟ, ನೀರು ಇಲ್ಲದೆ ಪ್ರಯಾಣಿಕರು ನರಕಯಾತನೆ ಅನುಭವಿಸಿದ್ದಾರೆ.

ಟಿವಿ9 ವರದಿ ಪ್ರಸಾರ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್‌ಪ್ರೆಸ್​ ಸಂಸ್ಥೆ ಎಚ್ಚೆತ್ತುಕೊಂಡಿದೆ. ಇಂದು ಬೆಳಗ್ಗೆ 10:30ಕ್ಕೆ 180 ಜನ ಪ್ರಯಾಣಿಕರನ್ನ ಹೊತ್ತು ಕೆಂಪೇಗೌಡ ಏರ್ಪೋರ್ಟ್​​ನಿಂದ ತೆರಳಿದ ವಿಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊನೆಗೂ ಕಠ್ಮಂಡುನಲ್ಲಿ ಲ್ಯಾಂಡ್​ ಆಗಿದೆ.

ಕಳೆದ ಎರಡು ದಿನಗಳಿಂದ ಕಠ್ಮಂಡುದಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ಎಕ್ಸ್‌ಪ್ರೆಸ್​ ಸಂಸ್ಥೆಯ 2 ವಿಮಾನಗಳು ಸುತ್ತಾಡಿ ಸುತ್ತಾಡಿ ವಾಪಸ್ ಬಂದಿದ್ದ ಕಾರಣ ಕೆಲವರು ಪ್ರವಾಸ ರದ್ದು ಮಾಡಿಕೊಂಡು ವಾಪಸ್ ಹೋಗಿದ್ದರು. ಹೀಗಾಗಿ ನೇಪಾಳಕ್ಕೆ ಹೋಗಲೆಬೇಕು ಅಂತ ಕಾದುಕುಳಿತಿದ್ದ 180 ಜನರನ್ನ ಒಂದೇ ವಿಮಾನದಲ್ಲಿ ಇಂದು ಬೆಳಗ್ಗೆ ಕೆಐಎಬಿಯಿಂದ ಕಠ್ಮಂಡುಗೆ ರವಾನಿಸಲಾಗಿದೆ. ಇಂದು ತೆರಳಿದ ವಿಮಾನ ಕೂಡ ಕೂಡಲೇ ಲ್ಯಾಂಡ್​ ಆಗದೆ ಕೆಲಕಾಲ ಕಠ್ಮಂಡುನಲ್ಲಿ ಆಗಸದಲ್ಲೇ 2 ರೌಂಡ್ ಹಾಕಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್​!

ಇನ್ನು ವಿಮಾನ ರೌಂಡ್ ಹಾಕ್ತಿದ್ದಂತೆ ಇಂದು ಸಹ ಲ್ಯಾಂಡ್ ಆಗುತ್ತೋ, ಇಲ್ವೋ ಅಂತ ಪ್ರಯಾಣಿಕರು ಆತಂಕಗೊಂಡಿದ್ದರು. ಅಷ್ಟರಲ್ಲೇ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಮೂರು ದಿನಗಳಿಂದ ಫ್ಲೈಟ್ ಜರ್ನಿ ಮಾಡಿ ಮಾಡಿ ಸುಸ್ತಾಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ಟಾರೆ ಹಣ ಖರ್ಚಾದರೂ ಪರವಾಗಿಲ್ಲ ಸಮಯಕ್ಕೆ ಸರಿಯಾಗಿ ಹೋಗುತ್ತೇವೆ ಅಂತ ಬಂದಿದ್ದ 180 ಜನ ಪ್ರಯಾಣಿಕರು ಕೊನೆಗೂ ಕಠ್ಮಂಡುವನ್ನ ಯಶಸ್ವಿಯಾಗಿ ತಲುಪಿದ್ದಾರೆ. ಮೂರು ಗಂಟೆಯ ಅವಧಿಯ ಪ್ರಯಾಣವನ್ನ ಏರ್ ಇಂಡಿಯಾ ಎಕ್ಸ್‌ಪ್ರೆಸ್​ ಸಂಸ್ಥೆಯ ವಿಮಾನ ಲ್ಯಾಂಡ್​ ಆಗಲು ಮೂರು ದಿನಗಳವರೆಗೂ ತೆಗೆದುಕೊಂಡು ಬಂದಿದ್ದು ಏಕೆ ಅನ್ನೋ ಪ್ರಶ್ನೆ ಪ್ರಶ್ನೆಯಾಗೆ ಉಳಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Lunar Eclipse 2026: ಮೀನ ರಾಶಿಯ ಮೇಲೆ ಕೇತುಗ್ರಸ್ತ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Dr. Basavaraj Gurujis Positive Forecast for Pisces Zodiac Sign

ಅಕ್ಷತಾ ವರ್ಕಾಡಿ |

Updated on:Feb 28, 2026 | 4:21 PM

2026ರ ಕೇತುಗ್ರಸ್ತ ಚಂದ್ರಗ್ರಹಣವು ಮೀನ ರಾಶಿಯವರ ಆರನೇ ಮನೆಯಲ್ಲಿ ಸಂಭವಿಸುತ್ತಿದ್ದು, ಇದು ಆರ್ಥಿಕ ಸುಧಾರಣೆ, ಆರೋಗ್ಯ ಚೇತರಿಕೆ, ಸಂಬಂಧಗಳ ಸಾಮರಸ್ಯ ಮತ್ತು ವೃತ್ತಿ ಬೆಳವಣಿಗೆಯಂತಹ ಹಲವು ಶುಭ ಫಲಗಳನ್ನು ತರಲಿದೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಜಾಗರೂಕತೆ ವಹಿಸಿ, ಕಾಲಭೈರವ ಮಂತ್ರ ಜಪ ಮತ್ತು ದಾನಾದಿಗಳಿಂದ ಉತ್ತಮ ಫಲ ಪಡೆಯಬಹುದು.

Published on: Feb 28, 2026 04:20 PM

Source link

Holi 2026: ಮೈಮೇಲೆ ಅಂಟಿದ ಹೋಳಿ ಬಣ್ಣವನ್ನು ತೆಗೆದು ಹಾಕಲು ಈ ಸಲಹೆಯನ್ನು ಪಾಲಿಸಿ – Kannada News | Holi 2026: Try these home remedies to easily remove holi color from skin and hair

ಹೋಳಿ (Holi) ಅಂದ್ರೆನೇ ಬಣ್ಣಗಳ ಹಬ್ಬ. ದೇಶಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಣ್ಣಗಳೊಂದಿಗೆ ಓಕುಳಿಯಾಡುವ ಮೂಲಕ ಜನ ಸಂಭ್ರಮ ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಓಕುಳಿಯಾಡುವಾಗ ಎಷ್ಟು ಖುಷಿ ಇರುತ್ತೋ, ಮೈಗಂಟಿದ ಹೋಳಿ ಬಣ್ಣ ಆದಷ್ಟು ಬೇಗ ಹೋದ್ರೆ ಸಾಕು ಅನ್ನೋ ಟೆನ್ಷನ್‌ ಕೂಡ ಇದ್ದೇ ಇರುತ್ತದೆ. ಹೆಚ್ಚಿನವರು ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕಯುಕ್ತ ಬಣ್ಣಗಳನ್ನು ಉಪಯೋಗಿಸುವ ಕಾರಣ ಆ ಬಣ್ಣಗಳು ಮೈಯಿಂದ ಮಾಸುವುದೇ ಇಲ್ಲ. ಇದನ್ನು ಹೋಗಲಾಡಿಸಲು ಹಲವು ಸರ್ಕಸ್‌ಗಳನ್ನು ಮಾಡಬೇಕಾಗುತ್ತದೆ. ಹೀಗಿರುವಾಗ ಈ ಕೆಲವೊಂದು ಸಿಂಪಲ್‌ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಬಲು ಸುಲಭವಾಗಿ ಮೈಗಂಟಿದ ಬಣ್ಣವನ್ನು ಸುಲಭವಾಗಿ ಹೋಗಲಾಡಿಸಬಹುದು.

ತ್ವಚೆ ಮೇಲೆ ಅಂಟಿದ ಹೋಳಿ ಬಣ್ಣವನ್ನು ಹೋಗಲಾಡಿಸುವುದು ಹೇಗೆ?

ತೆಂಗಿನ ಎಣ್ಣೆ: ಓಕುಳಿಯಾಡಿದ ನಂತರ ಮೈಗಂಟಿದ ಬಣ್ಣಗಳನ್ನು ಸುಲಭವಾಗಿ ತೆಗೆದುಹಾಕಬೇಕೆಂದಿದ್ದರೆ ಓಕುಳಿಯಾಡುವ ಮೊದಲು ತೆಂಗಿನ ಎಣ್ಣೆಯನ್ನು ನಿಮ್ಮ ಚರ್ಮ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿಕೊಳ್ಳಿ.  ಇದು ಬಣ್ಣಗಳು ಚರ್ಮಕ್ಕೆ ಆಳವಾಗಿ ತೂರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಅವುಗಳನ್ನು ಸುಲಭವಾಗಿ ತೆಗೆಯಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ತ್ವಚೆಗೆ ಅಂಟಿದ ಬಣ್ಣವನ್ನು ಸುಲಭವಾಗಿ ತೆಗೆದು ಹಾಕಲು ಮೈಗೆ ಎಣ್ಣೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕಡ್ಲೆಹಿಟ್ಟು ಮತ್ತು ಮೊಸರು: ಮುಖದ ಮೇಲೆ ಅಂಟಿದ ಹೋಳಿ ಬಣ್ಣವನ್ನು ತೆಗೆದುಹಾಕಲು, ಎರಡು ಟೀ ಚಮಚ ಕಡಲೆ ಹಿಟ್ಟನ್ನು ಮೊಸರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ನಿಮ್ಮ ಮುಖ ಮತ್ತು ದೇಹದ ಮೇಲೆ ಇದನ್ನು ಹಚ್ಚಿ. ಇದು ಸ್ವಲ್ಪ ಒಣಗಿದ ನಂತರ, ಒದ್ದೆಯಾದ ಕೈಗಳಿಂದ ಮಸಾಜ್ ಮಾಡಿ ಮತ್ತು ತೊಳೆಯಿರಿ. ಈ ಮಿಶ್ರಣವು ಬಣ್ಣಗಳನ್ನು ತೆಗೆದುಹಾಕುವುದಲ್ಲದೆ ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ.

ಮೊಸರು ಮತ್ತು ನಿಂಬೆ ರಸ: ತ್ವಚೆಗೆ ಅಂಟಿಗ ಬಣ್ಣವನ್ನು ತೆಗೆದುಹಾಕಲು, ಸ್ವಲ್ಪ ನಿಂಬೆ ರಸವನ್ನು ಒಂದು ಬೌಲ್ ಮೊಸರಿನೊಂದಿಗೆ ಬೆರೆಸಿ ನಿಮ್ಮ ಮುಖ ಮತ್ತು ದೇಹಕ್ಕೆ ನಿಧಾನವಾಗಿ ಹಚ್ಚಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಮೊಸರು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ನಿಂಬೆ‌ ರಸ ಕಲೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಬಣ್ಣವನ್ನು ಸುಲಭವಾಗಿ ಹೋಗಲಾಡಿಸಬಹುದು.

ಇದನ್ನೂ ಓದಿ: ವರ್ಷ ಹೋಳಿ ಹಬ್ಬ ಯಾವಾಗ? ಹೋಲಿಕಾ ದಹನದ ಶುಭ ಮುಹೂರ್ತ ಇಲ್ಲಿದೆ

ಹಸಿ ಹಾಲು: ನೀವು ಹಸಿ ಹಾಲು ಮತ್ತು ಹತ್ತಿಯನ್ನು ಬಳಸಿ ಮೈಗಂಟಿದ ಹೋಳಿ ಬಣ್ಣಗಳನ್ನು ತೆಗೆದುಹಾಕಬಹುದು. ಹತ್ತಿ ಉಂಡೆಯನ್ನು ಹಸಿ ಹಾಲಿನಲ್ಲಿ ಅದ್ದಿ ಬಣ್ಣಗಳಿರುವ ಜಾಗಕ್ಕೆ ಒರೆಸಿಕೊಳ್ಳಿ.  ನೀವು ಮಿಶ್ರಣಕ್ಕೆ ಜೇನುತುಪ್ಪವನ್ನು ಕೂಡ ಸೇರಿಸಬಹುದು. ಇದು ಹಠಮಾರಿ  ಬಣ್ಣಗಳನ್ನು ತೆಗೆದುಹಾಕುವುದಲ್ಲದೆ ಚರ್ಮವನ್ನು ತೇವಗೊಳಿಸುತ್ತದೆ.

ರೋಸ್‌ ವಾಟರ್‌: ನಿಮ್ಮ ಚರ್ಮವು ಬಣ್ಣದ ಕಾರಣದಿಂದಾಗಿ  ಕೆಂಪು ಬಣ್ಣಕ್ಕೆ ತಿರುಗಿದರೆ ಅಥವಾ  ತ್ವಚೆ ಸೂಕ್ಷ್ಮವಾಗಿದ್ದರೆ, ರೋಸ್ ವಾಟರ್ ನೊಂದಿಗೆ ಅಲೋವೆರಾ ಜೆಲ್ ಬೆರೆಸಿ ಮೈಗೆ ಹಚ್ಚಿ. 10 ರಿಂದ 15 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮವನ್ನು ಶಾಂತಗೊಳಿಸುತ್ತದೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೊಸರು ಮತ್ತು ಜೇನುತುಪ್ಪ: ನಿಮ್ಮ ಕೂದಲಿಗೆ ಮೊಸರು ಮತ್ತು ಜೇನುತುಪ್ಪದ ಮಿಶ್ರಣವನ್ನು ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಬಣ್ಣವನ್ನು ತೆಗೆದುಹಾಕುವುದಲ್ಲದೆ ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ!

ತುಮಕೂರು, ಫೆ.28: ಜನವರಿ 30ರಂದು ಸಂಭವಿಸಿದ ಪರಮೇಶ್ ಎಂಬುವವರ ಸಾವು ಈಗ ಪೊಲೀಸ್ ತನಿಖೆಯ ಕೌತುಕಕ್ಕೆ ಕಾರಣವಾಗಿದೆ. ಮೊದಲಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ, ಪತಿ ಸತ್ತ ಕೇವಲ 20 ದಿನಕ್ಕೆ ಪತ್ನಿ ಮತ್ತೊಂದು ಮದುವೆಯಾಗಿರುವುದು ಈಗ ಅನುಮಾನಕ್ಕೆ ನಾಂದಿ ಹಾಡಿದೆ. ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿದ್ದ ಪರಮೇಶ್ ಮತ್ತು ಆಶಾ ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಪರಮೇಶ್‌ಗೆ ಆಶಾ ಎರಡನೇ ಹೆಂಡತಿಯಾಗಿದ್ದರೆ, ಆಶಾಗೆ ಪರಮೇಶ್ ಎರಡನೇ ಗಂಡನಾಗಿದ್ದರು.

ಕಳೆದ ಒಂದೂವರೆ ವರ್ಷದಿಂದ ಆಶಾ ಕ್ಯಾಟರಿಂಗ್ ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ದಂಪತಿಗಳ ನಡುವೆ ಜಗಳ ಶುರುವಾಗಿತ್ತು. ಆಶಾ ತನ್ನ ಪತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಳು ಎಂದು ಪರಮೇಶ್ ಸಹೋದರಿ ಆರೋಪಿಸಿದ್ದಾರೆ. ಜನವರಿ 30ರಂದು ಪರಮೇಶ್ ಮೃತಪಟ್ಟಾಗ, ಯಾವುದೇ ಪೊಲೀಸ್ ದೂರು ನೀಡದೆ ಅಂದೇ ಮಣ್ಣು ಮಾಡಲಾಗಿತ್ತು.

ಇದನ್ನೂ ಓದಿ: ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ: ನಿಖಿಲ್​​ ಯುವತಿಯರ ಜತೆಗೆ ಖುಲ್ಲಂ ಖುಲ್ಲಾ

ಪತಿ ಸತ್ತು ತಿಂಗಳು ಕಳೆಯುವ ಮೊದಲೇ ಆಶಾ ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು 3ನೇ ಮದುವೆಯಾಗಿದ್ದಾಳೆ.ಮೃತನ ಸಹೋದರಿ ಕೇವಲ ಆಶಾ ಮೇಲೆ ಮಾತ್ರವಲ್ಲದೆ, ಆಕೆಯ ಗೆಳತಿ ಮತ್ತು ಆಶಾ ಮದುವೆಯಾಗಿರುವ ಹೊಸ ವ್ಯಕ್ತಿಯ ಮೇಲೆಯೂ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.ಸಹೋದರಿಯ ದೂರಿನ ಮೇರೆಗೆ ಹೆಬ್ಬೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ದಾಸರಹಳ್ಳಿಯಲ್ಲಿ ಹೂತುಹಾಕಲಾಗಿದ್ದ ಪರಮೇಶ್ ಮೃತದೇಹವನ್ನು ಹೊರತೆಗೆಯಲಾಗಿದೆ. ಸ್ಥಳದಲ್ಲೇ ಎಫ್‌ಎಸ್‌ಎಲ್ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕತಾರ್, ಬಹ್ರೇನ್, ಸೌದಿಯ ಯುಎಸ್​ ವಾಯುನೆಲೆಗಳ ಮೇಲೆ ಇರಾನ್ ದಾಳಿ – Kannada News | Iranian Missile Attack on Bahrain Abu Dhabi, Qatar US naval base

ನವದೆಹಲಿ, ಫೆಬ್ರವರಿ 28: ಇಸ್ರೇಲ್ ಮತ್ತು ಅಮೆರಿಕ ಇರಾನ್ (Iran Attack) ಮೇಲೆ ಜಂಟಿಯಾಗಿ ದಾಳಿ ನಡೆಸಿವೆ. ಇದರಿಂದ ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಇದಾದ ಕೆಲವೇ ಗಂಟೆಗಳ ನಂತರ ಯುಎಇಯ ಅಬುಧಾಬಿ, ಕತಾರ್‌, ಬಹ್ರೇನ್, ಕುವೈತ್ ಮೇಲೆ ದಾಳಿ ನಡೆಸಿದೆ. ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಇರಾನ್ ನಾನಾ ದೇಶಗಳಲ್ಲಿ ಇರುವ ಯುಎಸ್​ ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸತೊಡಗಿದೆ. ಇದರಿಂದಾಗಿ ಬೇರೆ ದೇಶಗಳಲ್ಲೂ ಭೀತಿ ಹೆಚ್ಚಾಗಿದೆ.

ಸೌದಿ ಅರೇಬಿಯಾದಲ್ಲಿ ಅಮೆರಿಕ 2,000ಕ್ಕೂ ಹೆಚ್ಚು ಸೈನಿಕರನ್ನು ಹೊಂದಿದೆ ಎಂದು ವರದಿಯಾಗಿದೆ. ಅವರಲ್ಲಿ ಕೆಲವರು ರಿಯಾದ್‌ನಿಂದ ಸುಮಾರು 60 ಕಿ.ಮೀ ದಕ್ಷಿಣದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯಲ್ಲಿ ನೆಲೆಸಿದ್ದಾರೆ. ಯುಎಇ ಸುತ್ತಮುತ್ತ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ. ಇರಾನ್ ದಾಳಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರಕ್ತಚರಿತ್ರೆಯ ನಾಡಿನಲ್ಲಿ ಕ್ರಿಕೆಟ್ ಕ್ರಾಂತಿ; ಭೂಲೋಕದ ಸ್ವರ್ಗಕ್ಕೆ ಮೊಟ್ಟ ಮೊದಲ ರಣಜಿ ಕಿರೀಟ – Kannada News | Jammu & Kashmir’s Ranji Cup Dream Achieved: A Decade of Transformation Through Cricket

ಜಮ್ಮು ಕಾಶ್ಮೀರ ಅಂದ್ರೆ ಥಟ್ಟನೆ ನೆನಪಾಗೋದು ಅಲ್ಲಿನ ಹಿಂಸಾಚಾರಗಳು, ಭಯೋತ್ಪಾದಕ ದಾಳಿಗಳು, ಇಂಡಿಯಾ ಪಾಕಿಸ್ತಾನ ಸಂಘರ್ಷ ಸೇರಿದಂತೆ ಅನೇಕ ಘಟನೆಗಳು. ಇದೇ ಕಾರಣಕ್ಕೆ ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರ ಕೆಟ್ಟ ಘಟನೆಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಆದ್ರೆ ಅದೇ ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ದಶಕದಿಂದ ಪರಿಸ್ಥಿತಿ ಬದಲಾಗುತ್ತಿದೆ. ಬಂದೂಕು ಹಿಡಿಯೋ ಕೈಗಳು ಇದೀಗ ಕ್ರಿಕೆಟ್ ಬ್ಯಾಟ್ ಬಾಲ್ ಹಿಡಿಯುತ್ತಿವೆ. ಜಮ್ಮು ಕಾಶ್ಮೀರ ದಲ್ಲಿ ಅದ್ಯಾವ ಮಟ್ಟಿಗೆ ಕ್ರಿಕೆಟ್ ಕ್ರೇಜ್ ಬೆಳದಿದೆ ಅಂದ್ರೆ ಇಂದು ಮೊಟ್ಟಮೊದಲ ಬಾರಿಗೆ ರಣಜಿ ಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಹೌದು ಇದೇ ಮೊದಲ ಬಾರಿಗೆ ರಣಜಿ ಪೈನಲ್​ಗೇರಿದ್ದ ಜಮ್ಮು ಕಾಶ್ಮೀರ ಮೊದಲ ಯತ್ನದಲ್ಲಿಯೇ ರಣಜಿ ಕಪ್ ಗೆದ್ದು ಬೀಗಿದೆ.

ಪಂದ್ಯ ಹೀಗಿತ್ತು

ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್​ಸಿಎ ಸ್ಟೇಡಿಯಂನಲ್ಲಿ ಇದೇ ಪೆಬ್ರವರಿ 24 ರಿಂದ ರಣಜಿ ಪೈನಲ್ ಪಂದ್ಯ ಆರಂಭವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಜಮ್ಮು ಕಾಶ್ಮೀರ ತಂಡ ಸುಡು ಬಿಸಿಲಿನ ಹುಬ್ಬಳ್ಳಿ ಮೈದಾನದಲ್ಲಿ ರನ್ ಹೊಳೆಯನ್ನೇ ಹರಿಸಿತ್ತು. ಒಂದುವರೆ ದಿನ ಆಟವಾಡಿದ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 584 ರನ್​ಗಳ ಬೃಹತ್ ಮೊತ್ತ ಕಲೆಹಾಕಿ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್​ಗೆ ಇಳದಿದ್ದ ಕರ್ನಾಟಕ ತಂಡ 293 ರನ್​ಗಳಿಗೆ ಅಲೌಟ್ ಆಗಿತ್ತು.

ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತುಪಡಿಸಿದ್ರೆ ಬೇರಾವ ಆಟಗಾರರು ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್​ನಲ್ಲಿ 293 ರನ್​ಗಳಿಗೆ ಸುಸ್ತಾಗಿತ್ತು. ಪಂದ್ಯದ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮುಕಾಶ್ಮಿರ ತಂಡ ಎರಡನೇ ಇನ್ನಿಂಗ್ಸ್​ನಲ್ಲಿಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಜಮ್ಮು ಆಟಗಾರ ಇಕ್ಬಾಲ್ ಶತಕ, ಕರ್ನಾಟಕದ ಜಯವನ್ನು ಮತ್ತಷ್ಟು ದೂರ ಮಾಡಿತು.

ಎಲ್ಲರ ಲೆಕ್ಕಾಚಾರ ಸುಳ್ಳು ಮಾಡಿದ ಜೆಕೆ

ಕಳೆದ 67 ವರ್ಷಗಳಿಂದ ಜಮ್ಮುಕಾಶ್ಮಿರ ತಂಡ ಕ್ರಿಕೆಟ್ ಆಡುತ್ತಿದೆ. ಆದ್ರೆ ಇತಿಹಾಸದಲ್ಲಿ ಮೊದಲ ಗೆಲುವಿಗಾಗಿ ಜಮ್ಮು ಕಾಶ್ಮೀರ ತಂಡ 23 ವರ್ಷಗಳ ಕಾಲ ಕಾಯಬೇಕಾಯಿತು. 1982-83ರಲ್ಲಿ ಸರ್ವಿಸಸ್ ತಂಡದ ವಿರುದ್ಧ ಮೊದಲ ಜಯ ಸಾಧಿಸಿತ್ತು. ಅನಂತರ ದೇಶಿ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತಂಡದಿಂದ ಬರದೇ ಇದ್ರು ಕಳೆದ ಕೆಲ ವರ್ಷಗಳಿಂದ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಆದ್ರೆ ಇದೇ ಮೊದಲ ಬಾರಿಗೆ 67 ವರ್ಷದ ಇತಿಹಾಸದಲ್ಲಿ ಪೈನಲ್ ಪ್ರವೇಶಿಸಿದ್ದ ಜಮ್ಮುಕಾಶ್ಮಿರ ತಂಡ ಮೊದಲ ಯತ್ನದಲ್ಲಿಯೇ ಗೆಲವು‌ ಸಾಧಿಸಿದೆ.

ಕ್ರಿಕೆಟ್ ನೋಡಲು ಬಂದ ಜಮ್ಮುಕಾಶ್ಮಿರ ಸಿಎಂ

ಇನ್ನು ಜಮ್ಮುಕಾಶ್ಮಿರ ತಂಡ ಮೊದಲ ಬಾರಿಗೆ ರಣಜಿ ಕಪ್ ಎತ್ತಿಹಿಡಿಯೋದು ಖಾತ್ರಿಯಾಗುತ್ತಿದ್ದಂತೆ ಜಮ್ಮುಕಾಶ್ಮಿರ ದ ಸಿಎಂ ಓಮರ್ ಅಬ್ದುಲ್ಲಾ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹುಬ್ಬಳ್ಳಿಗೆ ಆಗಮಿಸಿದ್ದರು. ನಿನ್ನೆ ರಾತ್ರಿಯೇ ಹುಬ್ಬಳ್ಳಿಗೆ ಬಂದಿದ್ದ ಓಮರ್ ಅಬ್ದುಲ್ಲಾ, ಇಂದು ಕೆಎಸ್​ಸಿ‌ಎ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಿಸಿದರು. ತಮ್ಮ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡಿದ್ರು. ಇಡೀ ದಿನ ಮೈದಾನದಲ್ಲಿ ಇದ್ದು ಐತಿಹಾಸಿಕ ಕ್ಷಣಗಳನ್ನು, ತಮ್ಮ ತಂಡದ ಆಟಗಾರರ ಆಟವನ್ನು ನೋಡಿ ಸಂತೋಷ ಪಟ್ಟರು. ಈ ಬಗ್ಗೆ ಮಾತನಾಡಿರೋ ಓಮರ್ ಅಬ್ದುಲ್ಲಾ, ನಮ್ಮ ತಂಡ ಈ ಹಂತಕ್ಕೆ ಬರೋದಿಲ್ಲಾ ಅಂತ ಎಲ್ಲರು ಹೇಳ್ತಿದ್ದರು. ಆದ್ರೆ ನಮ್ಮ ಆಟಗಾರರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪೈನಲ್​ಗೆ ಬಂದಿದ್ದಾರೆ. ಪೈನಲ್​ನಲ್ಲಿ ಕೂಡಾ ಉತ್ತಮ ಆಟವಾಡಿದ್ದಾರೆ. ಈ ಬಾರಿ ಕಪ್ ನಾವು ತೆಗೆದುಕೊಂಡು ಹೋಗ್ತೇವೆ ಅಂತ ಹೇಳಿದ್ದರು. ಅದರಂತೆ ಜೆಕೆ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದ ಶಾಸಕ ಇಕ್ಬಾಲ್ ಹುಸೇನ್ – Kannada News | MLA Iqbal Hussain once again predicted that DK Shivakumar will become CM

ರಾಮನಗರ, ಫೆಬ್ರವರಿ 28: ಗುರುಗಳು ಧ್ಯಾನದಿಂದ ಎದ್ದಿಲ್ಲ, ಎದ್ದ ತಕ್ಷಣ ಡೇಟ್ ಹೇಳುತ್ತಾರೆ. ಅವರು ಕೊಟ್ಟ ದಿನಾಂಕದೊಳಗೆ ಡಿಕೆ ಶಿವಕುಮಾರ್​ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್​ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೆಜ್ಜರಹಳ್ಳಿಕಟ್ಟೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ನಾನು ನಿಜವಾಗಿಯೂ ಹೇಳುತ್ತಿದ್ದೇನೆ, ನಾನು ಸುಳ್ಳು ಹೇಳುತ್ತಿಲ್ಲ. ಗುರುಗಳು ಧ್ಯಾನದಿಂದ ಎದ್ದ ತಕ್ಷಣ ಒಂದು ಡೇಟ್ ಕೊಡುತ್ತಾರೆ. ಆ ದಿನಾಂಕವೇ ಅಂತಿಮವಾಗಿರುತ್ತದೆ. ಗುರುಗಳು ಹೇಳಿದಂತೆ ಆಗಿಲ್ಲ ಅಂದರೆ ನನಗೆ ರಾಜಕಾರಣ ಬೇಡ ಎಂದಿದ್ದಾರೆ. ಆ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಇಕ್ಬಾಲ್ ಹುಸೇನ್ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜಗತ್ತಿನಲ್ಲಿ ಮೂರನೇ ಯುದ್ಧ ಆರಂಭ; ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದೆಂದು ಘೋಷಿಸಿದ ಅಮೆರಿಕ – Kannada News | Donald Trump confirms US Attack on Iran Pakistan says no dialogue with Afghanistan

ನವದೆಹಲಿ, ಫೆಬ್ರವರಿ 28: ಇರಾನ್ ಮೇಲೆ ಯುದ್ಧ (Iran War) ಆರಂಭವಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಇರಾನ್ ಮೇಲೆ ದಾಳಿ ಆರಂಭಿಸಿದ್ದೇವೆ ಎಂದು ಘೋಷಿಸಿದ್ದಾರೆ. ಇಷ್ಟು ದಿನ ಇಸ್ರೇಲ್​ಗೆ ಬಾಹ್ಯ ಬೆಂಬಲ ನೀಡುತ್ತಿದ್ದ ಅಮೆರಿಕ ಇದೀಗ ನೇರವಾಗಿಯೇ ಅಖಾಡಕ್ಕಿಳಿದಿದೆ. ಹೀಗಾಗಿ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್​ನ ಯುದ್ಧ ಆರಂಭವಾಗಿದೆ. ಇದು ಜಗತ್ತಿನಲ್ಲಿ ನಡೆಯುತ್ತಿರುವ ಮೂರನೇ ಯುದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗಲೇ ಇರಾನ್ ಮೇಲಿನ ಯುದ್ಧ ಕೂಡ ಆರಂಭವಾಗಿದೆ.

ವಿಶೇಷವೆಂದರೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತ ರಷ್ಯಾದ ಪರವಾಗಿದ್ದರೆ ಅಮೆರಿಕ ಉಕ್ರೇನ್ ಪರವಾಗಿದೆ. ಹಾಗೆಂದು ಭಾರತವೇನೂ ತಾನು ಉಕ್ರೇನ್ ವಿರುದ್ಧವೆಂದು ಹೇಳಿಕೊಂಡಿಲ್ಲ. ಭಾರತ ಕೂಡ ಉಕ್ರೇನ್ ಜೊತೆಗೆ ಉತ್ತಮ ಸಂಬಂಧ ಹೊಂದಿದೆ, ಶಾಂತಿಯುತವಾದ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಕರೆ ನೀಡುತ್ತಲೇ ಇದೆ. ಆದರೂ ಉಕ್ರೇನ್​ಗೆ ಹೋಲಿಸಿದರೆ ರಷ್ಯಾದ ನಾಯಕ ಪುಟಿನ್ ಜೊತೆ ಮೋದಿ ಹೆಚ್ಚು ಆಪ್ತ ಸಂಬಂಧ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಭಾರತ ಅಮೆರಿಕದ ಕೆಂಗಣ್ಣಿಗೆ ತುತ್ತಾಗಿತ್ತು.

ಇದನ್ನೂ ಓದಿ: ನನ್ನನ್ನು ಕೊಲೆ ಮಾಡಿದ್ರೆ, ಇರಾನ್​ ಅನ್ನು ವಿಶ್ವದ ಭೂಪಟದಿಂದಲೇ ಅಮೆರಿಕ ಅಳಿಸಿ ಹಾಕುತ್ತೆ: ಟ್ರಂಪ್

ಇನ್ನು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಯುದ್ಧದಲ್ಲೂ ಭಾರತ ಅಫ್ಘಾನಿಸ್ತಾನದ ಪರವಾಗಿದೆ. ಅಮೆರಿಕ ಪಾಕಿಸ್ತಾನದ ಪರವಾಗಿದೆ. ಇದನ್ನೂ ಕೂಡ ಭಾರತ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೂ ಅಫ್ಘಾನಿಸ್ತಾನದ ನಾಯಕರ ಜೊತೆ ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ, ಟ್ರಂಪ್ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದಾರೆ. ಈ ಎರಡೂ ಯುದ್ಧಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನಾದ ಅಮೆರಿಕದ ವಿರುದ್ಧ ನಿಂತಿದೆ. ಆದರೆ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಭಾರತ ಮತ್ತು ಅಮೆರಿಕವೆರಡೂ ಒಟ್ಟಾಗಿ ಇಸ್ರೇಲ್​ಗೆ ಬೆಂಬಲ ನೀಡುತ್ತಿವೆ. ಇರಾನ್​ ಪರವಾಗಿರುವ ದೇಶಗಳ ಸಂಖ್ಯೆ ಬಹಳ ಕಡಿಮೆಯಿದೆ.

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಘೋಷಿಸಲಾಗಿತ್ತು. ಆದರೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾವು ಇರಾನ್ ಮೇಲೆ ಯುದ್ಧ ಸಾರಿದ್ದೇವೆ. ಅಮೆರಿಕನ್ನರನ್ನು ರಕ್ಷಿಸುವುದು ನಮ್ಮ ಉದ್ದೇಶ. ಹೀಗಾಗಿ ಇರಾನ್‌ನಲ್ಲಿ ಅಮೆರಿಕ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ನಡೆಸಿದೆ’ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ಇರಾನ್ ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳ ದಾಳಿಯನ್ನು ಎದುರಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್

“ಸ್ವಲ್ಪ ಸಮಯದ ಹಿಂದೆ, ಯುನೈಟೆಡ್ ಸ್ಟೇಟ್ಸ್ ಸೈನ್ಯವು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಇರಾನ್ ಆಡಳಿತದ ಬೆದರಿಕೆಗಳನ್ನು ತೆಗೆದುಹಾಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಇದಲ್ಲದೆ, ಅಮೆರಿಕದ ಹಿತಾಸಕ್ತಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ದಶಕಗಳಿಂದ ನಡೆಸುತ್ತಿರುವ ಅಭಿಯಾನವನ್ನು ಟೆಹ್ರಾನ್ ನಡೆಸುತ್ತಿದೆ. ನಾವು ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

ಅತ್ತ ಪಾಕಿಸ್ತಾನ ಮತ್ತು ಅಮೆರಿಕದ ನಡುವೆಯೂ ಯುದ್ಧ ಜೋರಾಗಿದೆ. ಹೀಗಾಗಿ, ವಿವಿಧ ದೇಶಗಳ ನಾಯಕರು ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿದ್ದು, ಯುದ್ಧವನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆಗೆ ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನ ಇದೀಗ ತಾವು ಯಾವುದೇ ಮಾತುಕತೆಗೆ ಸಿದ್ಧವಿಲ್ಲ. ಅಫ್ಘಾನಿಸ್ತಾನ ಭಯೋತ್ಪಾದನೆಯನ್ನು ಆಶ್ರಯಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. “ತಾಲಿಬಾನ್ ಜೊತೆ ಯಾವುದೇ ಮಾತುಕತೆ ಇಲ್ಲ. ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಕೊನೆಗೊಳ್ಳಬೇಕು. ಪಾಕಿಸ್ತಾನದ ನಾಗರಿಕರು ಮತ್ತು ಪ್ರದೇಶವನ್ನು ರಕ್ಷಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ” ಎಂದು ಪಾಕಿಸ್ತಾನ ಪ್ರಧಾನಿಯವರ ವಿದೇಶಿ ಮಾಧ್ಯಮ ವಕ್ತಾರ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:09 pm, Sat, 28 February 26

Source link

Exit mobile version