ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ: ನಿಖಿಲ್​​ ಯುವತಿಯರ ಜತೆಗೆ ಖುಲ್ಲಂ ಖುಲ್ಲಾ – Kannada News | Bengaluru College Student Rape Case: Exclusive Villa Party Footage Surfaces

ಬೆಂಗಳೂರು, ಫೆ.28: ಬೆಂಗಳೂರು ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ವಿಡಿಯೋವೊಂದು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಹುಡುಗಿಯರ ಜತೆಗೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್​​ ಆಗಿದೆ. ವಿಲ್ಲಾ ಪಾರ್ಟಿಯ ಎಕ್ಸ್ಕ್ಲೂಸಿವ್ ದೃಶ್ಯ ಲಭ್ಯವಾಗಿದೆ. ಅಮೃತಹಳ್ಳಿ ವಿಲ್ಲಾ ಪಾರ್ಟಿಯಲ್ಲಿ ಆರೋಪಿ ಡಿಕ್ಸನ್ ಸಂತ್ರಸ್ತೆ ಇದ್ದ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜೊತೆ ಜೋರಾಗಿ ಮ್ಯೂಸಿಕ್ ಹಾಕಿ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಐವರು ಯುವತಿಯರು ಹಾಗೂ ಆರೋಪಿಗಳು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಈ ಪಾರ್ಟಿಯ ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಯುವತಿಯರನ್ನ ಪುಸಲಾಯಿಸಿ ಅವರ ಜೊತೆಗೆ ಸ್ನೇಹ ಬೆಳೆಸುದು ನಂತರದಲ್ಲಿ ಅವರನ್ನ ಕರ್ಕೊಂಡು ಬರೋದು ಕುಡಿಸಿ, ಅತ್ಯಾಚಾರ ಮಾಡುವುದು ಎಂದು ಹೇಳಿದ್ದಾರೆ. ಇನ್ನು ಈ ಪಾರ್ಟಿಯಲ್ಲಿ ಎಂಟು ಮಂದಿ ಭಾಗಿಯಾಗಿದ್ರು ಐದು ಮಂದಿ ಹುಡುಗಿಯರು ಮೂವರು ಹುಡುಗರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅನಿರುದ್ಧ ಇದೀಗ ಪೊಲೀಸರ ವಶದಲ್ಲಿ ಇದ್ದಾನೆ. ಈತ ದಾವಣಗೆರೆಯಲ್ಲಿ ಕಾಂಟ್ರಾಕ್ಟರ್ ಕೆಲಸವನ್ನ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕೆಮ್ಮು, ಶೀತ ಇರುವಾಗ ಬಾಳೆಹಣ್ಣಿನ ಸೇವನೆ ಒಳ್ಳೆಯದಲ್ಲವೇ? ಆಯುರ್ವೇದ ತಜ್ಞರ ಅಭಿಪ್ರಾಯವೇನು? – Kannada News | Banana Good or Bad for Cough and Cold?

ಸಾಮಾನ್ಯವಾಗಿ ಬಾಳೆಹಣ್ಣು (Banana) ಎಲ್ಲಾ ಋತುವಿನಲ್ಲಿ ಸಿಗುವಂತಹ ಹಣ್ಣಾಗಿದ್ದರೂ ಕೂಡ ಕೆಮ್ಮು ಅಥವಾ ಶೀತ ಇರುವವರು, ಬಾಳೆಹಣ್ಣು ತಿನ್ನಬಾರದು ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಅವು ಸ್ವಭಾವತಃ ಶೀತ ಸ್ವಭಾವದ್ದಾಗಿದ್ದು ದೇಹದಲ್ಲಿ ಲೋಳೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆದರೆ ಇದು ನಿಜವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಮಾತ್ರವಲ್ಲದೆ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕೂಡ ಇದ್ದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣು ತಿನ್ನುವುದರಿಂದ ಶೀತ ಉಂಟಾಗುತ್ತದೆ ಅಥವಾ ಶೀತ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೌದು, ಯಾರಿಗಾದರೂ ಕಫ ಸಮಸ್ಯೆ ಇದ್ದರೆ, ಬಾಳೆಹಣ್ಣು ತಿನ್ನುವುದರಿಂದ ಕಫ ಹೆಚ್ಚಾಗುತ್ತದೆ ಎಂಬುದು ನಿಜ. ಆದರೆ ಬಾಳೆಹಣ್ಣುಗಳು ಕೆಮ್ಮು ಅಥವಾ ಶೀತವನ್ನು ನೇರವಾಗಿ ಉಲ್ಬಣಗೊಳಿಸುವುದಿಲ್ಲ. ಆದರೆ ಮಲಬದ್ಧತೆ ಸಮಸ್ಯೆ ಇರುವವರು ಮಾತ್ರ ಬಾಳೆಹಣ್ಣಿನ ಸೇವನೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು ಎಂದಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

ಆಯುರ್ವೇದದಲ್ಲಿ ಬಾಳೆಹಣ್ಣು ಕಫವನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಶೀತ ವಾತಾವರಣದಲ್ಲಿ ಬಾಳೆಹಣ್ಣುಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆಯುರ್ವೇದದ ಪ್ರಕಾರ, ಶೀತ ಸ್ವಭಾವದ ದೇಹವುಳ್ಳ ಜನರು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಶೀತ ಮತ್ತು ಕೆಮ್ಮು ಹೆಚ್ಚಾಗುತ್ತದೆ ಎಂದು ಕಂಡುಕೊಳ್ಳಬಹುದು. ಆದರೆ ಸಾಮಾನ್ಯ ಸ್ವಭಾವದ ವ್ಯಕ್ತಿಗೆ ಸಾಮಾನ್ಯ ದಿನಗಳಲ್ಲಿ ಬಾಳೆಹಣ್ಣು ತಿಂದರೆ ಕೆಮ್ಮು- ಶೀತ ಬರುತ್ತದೆ ಅಥವಾ ಬಾಳೆಹಣ್ಣು ಕೆಮ್ಮು- ಶೀತವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂಬುದು ನಿಜವಲ್ಲ.

ಇದನ್ನೂ ಓದಿ: ದಿನಕ್ಕೆ ಕೇವಲ 2 ಬಾಳೆಹಣ್ಣು ತಿನ್ನಿ ಎಷ್ಟೆಲ್ಲಾ ಪ್ರಯೋಜನವಾಗುತ್ತೆ ನೋಡಿ

ಬಾಳೆಹಣ್ಣು ಯಾರಿಗೆ ಒಳ್ಳೆಯದಲ್ಲ?

  • ಕಫ ಹೆಚ್ಚಾಗುವವರಿಗೆ
  • ಅಲರ್ಜಿಕ್ ರಿನಿಟಿಸ್ ರೋಗಿಗಳು
  • ಗಂಟಲಿನ ಸೋಂಕು ಅಥವಾ ಟಾನ್ಸಿಲ್ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಸತಿ ಶಾಲೆಯ ಬಾಲಕಿಯರ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಶಾಲೆ ನಡೆಸಲು ಅನುಮತಿಯೇ ಪಡೆದಿರಲಿಲ್ಲ ಆಸಾಮಿ! – Kannada News | Devanahalli Residential School Sexual Harassment: Owner Operated Girls’ Wing Without Permit

ವಸತಿ ಶಾಲೆಯ ಬಾಲಕಿಯರ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಶಾಲೆ ನಡೆಸಲು ಅನುಮತಿಯೇ ಪಡೆದಿರಲಿಲ್ಲ ಆಸಾಮಿ!

ದೇವನಹಳ್ಳಿ, ಫೆಬ್ರವರಿ 28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದಲ್ಲಿನ ವಸತಿ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಆರೋಪಿ ಧನಂಜಯ್ ಬಾಲಕರ ಹಾಸ್ಟೆಲ್‌ಗೆ ಮಾತ್ರ ಅನುಮತಿ ಪಡೆದಿದ್ದರೂ, ಬಾಲಕಿಯರ ವಸತಿ ವ್ಯವಸ್ಥೆಯನ್ನು ಅನುಮತಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.

ಬಾಲಕರ ವಸತಿ ಶಾಲೆಯ ಪರವಾನಗಿಯನ್ನೂ ನವೀಕರಿಸಿಲ್ಲ

ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಬೆನ್ನಲ್ಲೇ ಧನಂಜಯ್​ನ ಮತ್ತೊಂದು ಅವ್ಯವಹಾರ ಬಟಾಬಯಲಾಗಿದೆ. ಬಾಲಕ ಮತ್ತು ಬಾಲಕಿಯರ ವಸತಿ ಶಾಲೆ ನಡೆಸುತ್ತಿದ್ದ ಧನಂಜಯ್ ಕೇವಲ ಬಾಲಕರ ಶಾಲೆಗೆ ಮಾತ್ರ ಅನುಮತಿ ಪಡೆದಿದ್ದು, ಬಾಲಕಿಯರ ವಸತಿ ಶಾಲೆ ನಡೆಸಲು ಪರವಾನಗಿ ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದಲ್ಲದೆ ಕಳೆದ ವರ್ಷದಿಂದ ಬಾಲಕರ ಹಾಸ್ಟೆಲ್ ಲೈಸನ್ಸ್‌ ನವೀಕರಣವೂ ಮಾಡಿಸದ ಆಡಳಿತ ಮಂಡಳಿ ವಸತಿ ಶಾಲೆ ನಡೆಸುತ್ತಿತ್ತು ಎನ್ನಲಾಗಿದೆ.

ದೌರ್ಜನ್ಯದ ಘಟನೆ ಬಹಿರಂಗವಾದ ನಂತರವೇ ಹಾಸ್ಟೆಲ್ ಕಾರ್ಯಾಚರಣೆ ಕುರಿತು ಗಮನಕ್ಕೆ ಬಂದಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ವಸತಿ ಶಾಲೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಅನುಮತಿ ಅಗತ್ಯವೆಂದು ಡಿಡಿಪಿಐ ಸ್ಪಷ್ಟಪಡಿಸಿದ್ದರೆ, ಖಾಸಗಿ ಶಾಲೆಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ. ಇದರಿಂದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ನಿರ್ಲಕ್ಷ್ಯ ಬಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!

ನಡೆದಿದ್ದೇನು?

ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಅದರ ಮಾಲೀಕ ಧನಂಜಯ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ದೂರು ದಾಖಲಿಸಿದ್ದಾರೆ. ಧನಂಜಯ್ ರಾತ್ರಿವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ, ಒಮ್ಮೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದ. ತಾತನ ವಯಸ್ಸಾಗಿದ್ದರೂ ಪುಟ್ಟ ಬಾಲಕಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದವನ ಕರ್ಮಕಾಂಡವನ್ನು ಸಹಿಸಲಾಗದ ಮಕ್ಕಳು ಆತನ ಪತ್ನಿ ಶೈಲಜಾಗೆ ಈ ಬಗ್ಗೆ ಹೇಳಿದ್ದರು. ಆದರೆ ಆಕೆಯೂ ಗಂಡನ ನೀಚ ಕೃತ್ಯಕ್ಕೆ ಸಾಥ್ ನೀಡಿ, ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಗಿಣಿ ಪ್ರಜ್ವಲ್ ಡ್ಯಾನ್ಸ್​​​ಗೆ ಅವರೇ ಸರಿಸಾಟಿ

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಜೂನಿಯರ್ಸ್ ಕಿಲಾಡಿಗಳು’ ಶೋಗೆ ಫಿನಾಲೆ ಸಮೀಪಿಸಿದೆ. ಇಂದು (ಫೆಬ್ರವರಿ 28) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಫಿನಾಲೆ ಎಪಿಸೋಡ್​​ನಲ್ಲಿ ವಿನ್ನರ್ ಯಾರು ಎಂದು ತಿಳಿಯಲಿದೆ. ಈ ಬಾರಿ ಸೀನಿಯರ್ಸ್ ಹಾಗೂ ಜೂನಿಯರ್ಸ್ ಸಮಾಗಮ ಆಗಿತ್ತು. ಈ ಶೋಗೆ ಕೊನೆಗೂ ಫಿನಾಲೆ ನಡೆಯೋ ದಿನ ಸಮೀಪಿಸಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಕುಂಭ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Impact on Aquarius; checkout details here

2026ರ ಕೇತುಗ್ರಸ್ತ ಚಂದ್ರಗ್ರಹಣವು ಕುಂಭ ರಾಶಿಯವರ ಮೇಲೆ ಮಧ್ಯಮ ಫಲಗಳನ್ನು ನೀಡಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಶನಿಯ ಅಧಿಪತ್ಯದ ಈ ರಾಶಿಯವರಿಗೆ ಗ್ರಹಣವು ಏಳನೇ ಮನೆಯಾದ ಕಳತ್ರ ಸ್ಥಾನದಲ್ಲಿ ಸಂಭವಿಸಲಿದೆ. ಇಲ್ಲಿ ರವಿ, ರಾಹು, ಬುಧ, ಕುಜ ಗ್ರಹಗಳ ಉಪಸ್ಥಿತಿ ಮತ್ತು ಕೇತುವಿನ ಪ್ರಭಾವ ಇರುವುದರಿಂದ ನಿರ್ಲಕ್ಷ್ಯ, ವೈರಾಗ್ಯ ಭಾವನೆಗಳು ಮೂಡಬಹುದು. ಆದಾಗ್ಯೂ, ಆದಾಯದಲ್ಲಿ ಏರಿಕೆ, ದೈವಬಲ ವೃದ್ಧಿ, ಆರೋಗ್ಯದಲ್ಲಿ ಚೇತರಿಕೆ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು.

ಮನೆ, ಸೈಟ್, ಭೂಮಿ ಖರೀದಿ ಯೋಗವಿದ್ದು, ಸ್ನೇಹಿತರ ಪ್ರಭಾವವೂ ಹೆಚ್ಚಲಿದೆ. ಆದರೆ, ಆಕಸ್ಮಿಕ ಕಲಹಗಳು, ಪೋಷಕರ ಆರೋಗ್ಯದ ಚಿಂತೆ, ಪ್ರೇಮ ವಿಚಾರಗಳಲ್ಲಿ ಅಡೆತಡೆಗಳು ಮತ್ತು ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಮಹಿಳಾ ಪೊಲೀಸ್ ಅಧಿಕಾರಿಗಳು, ವೈದ್ಯರು ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕು. ಶನಿ ಭಗವಾನರ ಸ್ತೋತ್ರ ಪಠಣ, ಶನಿ ಗಾಯತ್ರಿ ಮಂತ್ರ ಜಪ ಮತ್ತು ಕಪ್ಪು ಎಳ್ಳು, ಬಟ್ಟೆ ದಾನ ಮಾಡುವುದು ಉತ್ತಮ ಪರಿಹಾರವಾಗಿದೆ. ಮೂವರು ಯೋಗಿಗಳು ಅಥವಾ ಸಜ್ಜನರಿಗೆ ಭೋಜನ ನೀಡುವುದು ಶುಭ ಫಲ ನೀಡುತ್ತದೆ.

 

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪ್ರಭಾಸ್ ಸಿನಿಮಾದಿಂದ ಹೊರಬಂದ ಪ್ರಕಾಶ್ ರೈ: ಕಾರಣವೇನು? – Kannada News | Prakash Raj out of Prabhas starrer Spirit movie

ಪ್ರಕಾಶ್ ರೈ (Prakash Raj) ಭಾರತದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ಭಾಷೆಯ ಹಂಗಿಲ್ಲದೆ ಹಲವಾರು ಭಾಷೆಗಳಲ್ಲಿ ಪೋಷಕ ನಟ, ವಿಲನ್ ಹೀಗೆ ಹಲವಾರು ಪಾತ್ರಗಳಲ್ಲಿ ಪ್ರಕಾಶ್ ರೈ ನಟಿಸುತ್ತಾ ಬರುತ್ತಿದ್ದಾರೆ. ಆದರೆ ಪ್ರಕಾಶ್ ರೈ ಇದೀಗ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅದುವೇ ಪ್ರಭಾಸ್ ನಟನೆಯ ‘ಸ್ಪಿರಿಟ್’. ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಭಿನ್ನಾಭಿಪ್ರಾಯವೇ ಈ ನಿರ್ಧಾರಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಸಲಿಗೆ ಪ್ರಕಾಶ್ ರೈ ‘ಸ್ಪಿರಿಟ್’ ಸಿನಿಮಾದಿಂದ ಹೊರ ಬಂದಿದ್ದಾರೆಂದು ಮೂರು ವಾರಗಳು ಹಿಂದೆಯೇ ಸುದ್ದಿ ಹರಡಿತ್ತು, ಆದರೆ ಆಗ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ಸುಳ್ಳು ಸುದ್ದಿ ಹಬ್ಬಿಸಬೇಡಿ, ನನ್ನ ಪಾತ್ರದ ಶೂಟಿಂಗ್ ಇನ್ನೂ ಶುರುವೇ ಆಗಿಲ್ಲ’ ಎಂದಿದ್ದರು. ಆ ಮೂಲಕ ತಾವಿನ್ನೂ ಸಿನಿಮಾ ತಂಡದ ಜೊತೆಗೆ ಇದ್ದೀವಿ ಎಂದಿದ್ದರು. ಆದರೆ ಇದೀಗ ಬಂದಿರುವ ಸುದ್ದಿಯಂತೆ ಪ್ರಕಾಶ್ ರೈ ಅವರು ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿರುವುದು ಖಾತ್ರಿ ಎನ್ನಲಾಗಿದೆ.

‘ಸ್ಪಿರಿಟ್’ ಸಿನಿಮಾ ತಂಡವು ಇತ್ತೀಚೆಗಷ್ಟೆ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಪೋಸ್ಟರ್​​ ಜೊತೆಗೆ ಸಿನಿಮಾದ ಮುಖ್ಯ ನಟರುಗಳು, ತಂತ್ರಜ್ಞರ ಇನ್​​ಸ್ಟಾಗ್ರಾಂ ಹ್ಯಾಂಡಲ್ ಅನ್ನು ಸಹ ಹಾಕಲಾಗಿದೆ. ಆದರೆ ಅದರಲ್ಲಿ ಪ್ರಕಾಶ್ ರೈ ಹೆಸರನ್ನು ಕೈಬಿಡಲಾಗಿದೆ. ಇದು ಪ್ರಕಾಶ್ ರೈ ಅವರು ಸಿನಿಮಾದಿಂದ ಹೊರಬಂದಿರುವ ಅನುಮಾನಗಳನ್ನು ಮೂಡಿಸಿದೆ. ಅಲ್ಲದೆ ಪ್ರಕಾಶ್ ರೈ ಅವರು ‘ಸ್ಪಿರಿಟ್’ ತಂಡದಲ್ಲಿಲ್ಲವೆಂದು ಚಿತ್ರತಂಡದಿಂದ ಮಾಹಿತಿ ಬಂದಿರುವುದಾಗಿ ಕೆಲ ಮಾಧ್ಯಮಗಳು ವರದಿ ಸಹ ಮಾಡಿವೆ.

ಇದನ್ನೂ ಓದಿ:ಸಚಿವ ಎಂಬಿ ಪಾಟೀಲ್​ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್

‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಟ್ಟಿಗಿನ ಭಿನ್ನಾಭಿಪ್ರಾಯವೇ ಪ್ರಕಾಶ್ ರೈ ಅವರ ನಿರ್ಗಮನಕ್ಕೆ ಕಾರಣ ಎನ್ನಲಾಗಿದೆ. ತಮಗೆ ನೀಡಲಾಗಿದ್ದ ಸೀನ್​​ನ ಬಗ್ಗೆ ಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಬಳಿಕ ಪ್ರಕಾಶ್ ರೈ ಅವರು ಸಿನಿಮಾದಿಂದ ನಿರ್ಗಮಿಸಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ದೀಪಿಕಾ ಪಡುಕೋಣೆ ಸಹ ‘ಸ್ಪಿರಿಟ್’ ಸಿನಿಮಾದಿಂದ ಹೊರಬಂದಿದ್ದರು. ಅವರು ‘ಸ್ಪಿರಿಟ್’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರು, ಅವರ ಸಂಭಾವನೆ ಮತ್ತು ಶಿಸ್ತಿನ ನಿಯಮಗಳ ಕಾರಣದಿಂದ ಅವರನ್ನು ಸಿನಿಮಾದಿಂದ ಕೈಬಿಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗದಗ: ಕೆರೆಯಲ್ಲಿ ಈಜಲು ತೆರಳಿದ್ದ 9ನೇ ತರಗತಿ ವಿದ್ಯಾರ್ಥಿಗಳಿಬ್ಬರು ಸಾವು; ಓರ್ವ ಬಚಾವ್​ – Kannada News | Gadag Lake Tragedy: Two Morarji School Students Drown in Chinchali Village

ಗದಗ, ಫೆಬ್ರವರಿ 28: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯ ಮೂವರು ಪೈಕಿ ಇಬ್ಬರು ವಿದ್ಯಾರ್ಥಿಗಳು (Students) ಕೆರೆಯಲ್ಲಿ ಈಜಲು ತೆರಳಿ ಸಾವನ್ನಪ್ಪಿರುವಂತಹ (death) ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ ವಡ್ಡರ ಮತ್ತು ಬಸವರಾಜ ಬಡಿಗೇರ ಮೃತ ವಿದ್ಯಾರ್ಥಿಗಳು. ಓರ್ವ ವಿದ್ಯಾರ್ಥಿ ಬಚಾವ್ ಆಗಿದ್ದಾನೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಪರಶುರಾಮ ವಡ್ಡರ, ಬೆಳದಡಿ ಗ್ರಾಮದ ಬಸವರಾಜ ಬಡಿಗೇರ ಮತ್ತು ಇನ್ನೋರ್ವ ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದರು. ಇಂದು ಶಾಲೆ ಮುಗಿಸಿಕೊಂಡು 3 ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ತೆರಳಿದ್ದಾರೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ವ್ಯಕ್ತಿ ಮೇಲೆ ಕಾರು ಹರಿಸಿ ಕೊಲೆ; ಪ್ರಭಾವಿ ಮುಖಂಡರ ಮಕ್ಕಳು ಅಂದರ್!

ಈ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ವಿದ್ಯಾರ್ಥಿ ಬಚಾವ್​ ಆಗಿದ್ದಾನೆ. ಸದ್ಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಬರದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು 20 ಅಡಿ ಆಳದ ಕೆರೆಯಲ್ಲಿ ಸ್ಥಳೀಯರು ಮತ್ತು ಮುಳುಗು ತಜ್ಞರಿಂದ ಶೋಧ ನಡೆದಿದೆ.

ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರ ಹತ್ಯೆ

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ದುಷ್ಕರ್ಮಿಗಳಿಂದ ಯುವಕನ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಶಿಗ್ಲಿ ಗ್ರಾಮದ ಮೊಹ್ಮದ್ ಫಾರೂಕ್ ಶೇಖ್ ಸನದಿ(25) ಕೊಲೆ ಆದ ಯುವಕ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ SSLC ವಿದ್ಯಾರ್ಥಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​: ಸಂಕೇತ್ ಕೊಲೆ ರಹಸ್ಯ ಬಯಲು!

ಸದ್ಯ ಪೊಲೀಸರಿಗೆ ಯುವಕನ ಕೊಲೆ ಕೇಸ್​ ತಲೆನೋವಾಗಿದೆ. ಹಂತಕರ ಸುಳಿವಿಗಾಗಿ ಖಾಕಿ ತೀವ್ರ ಶೋಧ ನಡೆಸಿದೆ. ಸೋಕೋ ತಂಡದಿಂದ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗಾಗಿ ಶ್ವಾನ ದಳದಿಂದ ಶೋಧ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಫೋನ್ ಕಾಲ ಬಂದ ಬಳಿಕ ಮನೆಯಿಂದ ಹೋಗಿದ್ದ ಯುವಕ ಇದೀಗ ಹೆಣವಾಗಿ ಪತ್ತೆ ಆಗಿದ್ದಾನೆ. ಸದ್ಯ ಯುವಕನ ಹತ್ಯೆ ಲಕ್ಷ್ಮೇಶ್ವರ ಪಟ್ಟಣವನ್ನು ಬೆಚ್ಚಿಬಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs WI: 15 ಮಂದಿಯಲ್ಲಿ ಯಾರಿಗೆ ಸಿಗಲಿದೆ ಚಾನ್ಸ್​ – Kannada News | T20 World Cup 2026: Predicted India Playing XI vs West Indies

T20 World Cup 2026: ಟಿ20 ವಿಶ್ವಕಪ್​ ಸೂಪರ್-8 ಸುತ್ತಿನ ಕೊನೆಯ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಾಳೆ (ಮಾ.1) ನಡೆಯಲಿರುವ ಈ ಪಂದ್ಯದಲ್ಲಿ ಕಣಕ್ಕಿಳಿಯುವವರು ಯಾರು ಎಂಬುದೇ ಪ್ರಶ್ನೆ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲಿದೆ. ಹೀಗಾಗಿ ಭಾರತ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಬೇಕು.

ಅದರಂತೆ ಈ ಮ್ಯಾಚ್​ನಲ್ಲೂ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವುದು ಖಚಿತ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಿದರೆ, ಐದನೇ ಕ್ರಮಾಂಕದಲ್ಲಿ ಹಾರ್ದಿಕ್  ಪಾಂಡ್ಯ ಬ್ಯಾಟ್ ಬೀಸಲಿದ್ದಾರೆ.

ಇದಾದ ಬಳಿಕ ತಿಲಕ್ ವರ್ಮಾ ಹಾಗೂ ಶಿವಂ ದುಬೆ ಕಣಕ್ಕಿಳಿಯಲಿದ್ದಾರೆ. ಇನ್ನು ಸ್ಪಿನ್ ಆಲ್​ರೌಂಡರ್ ಆಗಿ ಅಕ್ಷರ್ ಪಟೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಜಸ್​ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಕಣಕ್ಕಿಳಿಯಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  • ಅಭಿಷೇಕ್ ಶರ್ಮಾ
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ಹಾರ್ದಿಕ್ ಪಾಂಡ್ಯ
  • ತಿಲಕ್ ವರ್ಮಾ
  • ಶಿವಂ ದುಬೆ
  • ಅಕ್ಷರ್ ಪಟೇಲ್
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ವರುಣ್ ಚಕ್ರವರ್ತಿ

ವೆಸ್ಟ್ ಇಂಡೀಸ್ ವಿರುದ್ಧ ಈ ಹನ್ನೊಂದು ಆಟಗಾರರು ಕಣಕ್ಕಿಳಿದರೆ ರಿಂಕು ಸಿಂಗ್, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: 12.4, 13.2, 13.5: ಹೀಗಿದೆ ಪಾಕಿಸ್ತಾನ್ ತಂಡದ ಸೆಮಿಫೈನಲ್ ಲೆಕ್ಕಾಚಾರ

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published On – 2:10 pm, Sat, 28 February 26

Source link

Ranji Trophy Final: ಕರ್ನಾಟಕವನ್ನು ಮಣಿಸಿ ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕಿದ ಜಮ್ಮುಕಾಶ್ಮೀರ

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳು ಮುಖಾಮುಖಿಯಾಗಿದ್ದವು. ಇದೇ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್​ಗೇರಿದ್ದ ಜಮ್ಮು ಕಾಶ್ಮೀರ ತಂಡ ಬಲಿಷ್ಠ ಕರ್ನಾಟಕ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Source link

ವಿವಾಹದ ಬೆನ್ನಲ್ಲೇ ಫ್ಯಾನ್ಸ್​​ಗೆ ಸರ್​​ಪ್ರೈಸ್ ಕೊಟ್ಟ ರಶ್ಮಿಕಾ-ವಿಜಯ್​​ ಜೋಡಿ – Kannada News | Rashmika and Vijay: ‘Ranabaali’ Film Poster Song Out! Big Surprise Post Marriage Buzz

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಸಂಭ್ರಮ ಇನ್ನೂ ಮುಗಿದಿಲ್ಲ.
ಈ ಖುಷಿಯನ್ನು ಅಭಿಮಾನಿಗಳು ಇನ್ನೂ ಆಚರಿಸುತ್ತಿರುವಾಗಲೇ ಫ್ಯಾನ್ಸ್​​ಗೆ ಒಂದು ದೊಡ್ಡ ಸರ್​​ಪ್ರೈಸ್​ ಸಿಕ್ಕಿದೆ. ಅವರ ಮುಂದಿನ ಚಿತ್ರ ‘ರಣಬಾಲಿ’ ಚಿತ್ರದ ಮೊದಲ ಪೋಸ್ಟರ್​​ನ ಹಾಡಿನ ಜೊತೆ ರಿವೀಲ್ ಮಾಡಿದೆ. ಇದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮೊದಲ ಬಾರಿಗೆ ಭೇಟಿ ಆಗಿದ್ದು ‘ಗೀತ ಗೋವಿಂದಂ’ ಚಿತ್ರದ ಸೆಟ್​​ ಅಲ್ಲಿ. ಮೊದಲ ಭೇಟಿಗೆ ಸುಮಾರು 9 ವರ್ಷಗಳು ತುಂಬುತ್ತಿವೆ. ಆ ಬಳಿಕ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಈ ಮಧ್ಯೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಕಡೆಯಿಂದ ಒಂದು ಬಿಗ್ ಸರ್​​ಪ್ರೈಸ್ ಸಿಕ್ಕಿದೆ.

ರಶ್ಮಿಕಾ ಹಾಗೂ ವಿಜಯ್ ಮುಂದಿನ ಚಿತ್ರಕ್ಕೆ ‘ರಣಬಾಲಿ’ ಎಂದು ಹೆಸರು ಇಡಲಾಗಿದೆ. ವಿಜಯ್ ಅವರು ರಾಣಬಾಲಿಯಾಗಿ ರಶ್ಮಿಕಾ ಮಂದಣ್ಣ ಅವರು ಜಯಮ್ಮನಾಗಿ ಗಮನ ಸೆಳೆಯುತ್ತಿದ್ದಾರೆ. ಸಾಂಗ್ ಮೂಲಕ ಮೊದಲ ಪೋಸ್ಟರ್ ರಿವೀಲ್ ಆಗಿದೆ. ಡಿ ಗ್ಲಾಮ್ ಲುಕ್ ಅಲ್ಲಿ ಇವರು ಗಮನ ಸೆಳೆದಿದ್ದಾರೆ. ತೆರೆಮೇಲೆ ಹಾಗೂ ತೆರೆ ಹಿಂದೆ ಇವರ ಕೆಮಿಸ್ಟ್ರಿ ಗಮನ ಸೆಳೆಯೋ ರೀತಿಯಲ್ಲಿ ಇದೆ. ರಾಹುಲ್ ಸಂಕ್ರಿತ್ಯನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಾ ಇದ್ದಾರೆ.

ಇದನ್ನೂ ಓದಿ: ನಗು ಚೆಲ್ಲುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿಷಯದ ಕುರಿತೇ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇವರು ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಬಗ್ಗೆ ಮಾಹಿತಿ ಕೊಟ್ಟರೆ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಂತೆ ಆಗುತ್ತದೆ ಎಂಬುದು ಚಿತ್ರತಂಡದ ಆಲೋಚನೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version