ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ.. – Kannada News | Rashmika Mandanna Vijay Deverakonda marriage costume and jewellery interesting facts

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮದುವೆಯಲ್ಲಿ ಅವರು ಧರಿಸಿದ್ದ ಕಾಸ್ಟ್ಯೂಮ್ ಮತ್ತು ಆಭರಣಗಳು ಸಖತ್ ಹೈಲೈಟ್ ಆಗಿವೆ. ಭಾರಿ ಬೆಲೆಬಾಳುವ ಆಭರಣಗಳನ್ನು ಧರಿಸಿ ಅವರು ಹಸೆಮಣೆ ಏರಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಹಾರಾಜ ಮತ್ತು ಮಹಾರಾಣಿ ರೀತಿಯಲ್ಲಿ ಉಡುಗೆ ಧರಿಸಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಮಿರಿಮಿರಿ ಮಿಂಚಿದ್ದಾರೆ. ಈ ಬಟ್ಟೆಗಳ ವಿನ್ಯಾಸದ ಬಗ್ಗೆ ಅಭಿಮಾನಿಗಳು ಮತ್ತು ಫ್ಯಾಷನ್​ಪ್ರಿಯರು ಮಾತನಾಡುತ್ತಿದ್ದಾರೆ. ರಾಯಲ್​ ಲುಕ್​​ನಲ್ಲಿ ವಿರೋಶ್ ಜೋಡಿ ಕಾಣಿಸಿಕೊಂಡಿದೆ. ವಿರೋಶ್ ಮದುವೆಯ ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆಗೆ ನಿರಾಕರಣೆ: ಮಾತನಾಡಲು ಕರೆದು ಜಿಮ್ ಟ್ರೈನರ್​ಗೆ ಚಾಕು ಹಾಕಿದ ಪ್ರೇಯಸಿ – Kannada News | Bengaluru: A Woman Stabs Lover for Refusing Marriage

ರಾಮನಗರ, ಫೆಬ್ರವರಿ 27: ಸಾಮಾನ್ಯವಾಗಿ ಲವ್ ಫೇಲ್ಯೂರ್ ಆದಾಗ ಯುವತಿಯ ಮೇಲೆ ಪಾಗಲ್ ಪ್ರೇಮಿ, ಅಟ್ಯಾಕ್ ಮಾಡುವುದನ್ನ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಭಗ್ನ ಪ್ರೇಯಸಿ, ತನ್ನ ಲವರ್​ಗೆ ಚಾಕುವಿನಿಂದ ಇರಿದಿರುವಂತಹ (stabbing) ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ನಡೆದಿದೆ. ಸದ್ಯ ಯುವಕ ಆಸ್ಪತ್ರೆಗೆ ದಾಖಲಾದರೆ, ಯುವತಿ ಪೊಲೀಸ್ ಠಾಣೆ ಪಾಲಾಗಿದ್ದಾಳೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಹುಚ್ಚಿಯಂತೆ ಪ್ರೀತಿಸಿದ ಹುಡುಗ ಸಾಕಷ್ಟು ಅವೈಡ್​ ಮಾಡಿದ್ದಲ್ಲದೇ ಮದುವೆಯಾಗಲು ಕೂಡ ನಿರಾಕರಿಸಿದ್ದಕ್ಕೆ ಪ್ರೇಯಿಸಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕುವಿನಿಂದ ‌ಚುಚ್ಚಿ ಹತ್ಯೆಗೆ ಯತ್ನಿಸಿದ್ದಾಳೆ. ಪ್ರೇಯಸಿ ಸುಧಾ(30)ಳಿಂದ ಪ್ರಿಯಕರ ವೇಣುಗೋಪಾಲ್ (27)​ಗೆ ಚಾಕು ಇರಿಯಲಾಗಿದೆ.

ಇದನ್ನೂ ಓದಿ: ಅಪ್ರಾಪ್ತೆ ಮನೆ ಮುಂದೆ ಲಾಂಗು ಮಚ್ಚು ಹಿಡಿದು ಗಲಾಟೆ ಮಾಡಿದ ಪಾಗಲ್‌ ಪ್ರೇಮಿ ಅರೆಸ್ಟ್‌

ವೇಣುಗೋಪಾಲ್ ಬಿಡದಿಯಲ್ಲಿ ಜಿಮ್ ಟ್ರೈನರ್ ಆಗಿದ್ದಾರೆ. ಸುಧಾ ಖಾಸಗಿ ಕಂಪನೊಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಜಿಮ್​ವೊಂದರಲ್ಲಿ ಪರಿಚಯವಾದ ಇವರು, ವಯಸ್ಸಿನ ಅಂತರವಿದ್ದರೂ ಪ್ರೇಮಾಂಕುರವಾಗಿತ್ತು. ಕಳೆದ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಎಲ್ಲೆಡೆ ಕೈಕೈ ಹಿಡಿದು ಸುತ್ತಿದ್ದಾರೆ. ವೇಣು ಮನೆಗೆ  ಸುಧಾ ಬಂದು ಹೋಗುತ್ತಿದ್ದಳು. ಹೀಗಿರುವಾಗ ಕಳೆದ ನಾಲ್ಕು ‌ತಿಂಗಳಿಂದ ವೇಣುಗೋಪಾಲ್, ಸುಧಾಳನ್ನು ಅವೈಡ್ ಮಾಡುತ್ತಿದ್ದನಂತೆ. ವಿವಾಹವಾಗಲು ಸಹ ನಿರಾಕರಿಸಿದನಂತೆ. ಈ ಮಧ್ಯೆ ಬೇರೊಬ್ಬ ಯುವತಿ ಜೊತೆ ವೇಣುಗೋಪಾಲ್ ಸುತ್ತಾಡುತ್ತಿದ್ದರಿಂದ ಕೋಪಗೊಂಡ ಸುಧಾ, ವೇಣುಗೋಪಾಲ್​​ ಎದೆ, ಹೊಟ್ಟೆ, ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾಳೆ.

ಮಾತನಾಡಲು ಕರೆಸಿ ಚಾಕು ಹಾಕಿದ ಪ್ರೇಯಸಿ

ಅಂದಹಾಗೆ ಕಳೆದ ಒಂದು ತಿಂಗಳಿಂದ ಮಾತನಾಡಬೇಕು ಅಂತಾ ಸುಧಾ ಕರೆದಾಗೆಲ್ಲಾ ಏನೇನೋ ಕಾರಣ ಹೇಳಿ ವೇಣು‌ ತಪ್ಪಿಸಿಕೊಂಡಿದ್ದಾನೆ. ಸಿಕ್ಕಿದ್ರು ಕೂಡ ವೇಣು ಕಿರಿಕಿರಿ ಮಾಡುತ್ತಿದ್ದನಂತೆ. ಹೀಗಾಗಿ ಒಂದು ವಾರದಿಂದ ತನ್ನ ಬ್ಯಾಗ್​ನಲ್ಲಿ ಸುಧಾ ಚಾಕು ಇಟ್ಟುಕೊಂಡು ಸುತ್ತಾಡಿದ್ದಾಳೆ. ನಿನ್ನ ಜೊತೆ ಮಾತನಾಡಬೇಕು ಎಂದು ನಿನ್ನೆ ಸಂಜೆ ವೇಣುಗೋಪಾಲ್​ನನ್ನ ಮನೆಯಿಂದ ಹೊರಕ್ಕೆ ಕರೆಸಿಕೊಂಡು ಕೆಲಕಾಲ ಮಾತನಾಡಿದ ಸಾಧಾ ಬಳಿಕ ಏಕಾಏಕಿ ಹೊಟ್ಟೆ, ಎದೆ, ಕೈಗೆ ಚಾಕು ಹಾಕಿದ್ದಾಳೆ. ಆನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ರಕ್ತದ ಮಡುವಿನಲ್ಲಿಯೇ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ವೇಣು ಕರೆ ಮಾಡಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದೇ ಹರಿದ ನೆತ್ತರು: ಲವ್​ ಪ್ರಪೋಸಲ್​​ ಒಪ್ಪದಿದ್ದಕ್ಕೆ ಯುವತಿಗೆ ಇರಿದ ಪಾಗಲ್​​

ಇನ್ನು ಘಟನೆ ನಂತರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸುಧಾಳನ್ನ ವಶಕ್ಕೆ ಪಡೆದು ವಿಚಾರ ಮಾಡುತ್ತಿದ್ದಾರೆ. ಒಟ್ಟಾರೆ ಪ್ರೀತಿಯಲ್ಲಿ ಮೋಸ, ವಿವಾಹಕ್ಕೆ ನಿರಾಕರಣೆ ಹಿನ್ನೆಲೆ ಲವರ್​ಗೆ ಭಗ್ನ ಪ್ರೇಯಿಸಿ ಚಾಕುವಿನಿಂದ ಚುಚ್ಚಿ ಇದೀಗ ಪೊಲೀಸರ ಅಥಿತಿಯಾಗಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿಯಲ್ಲಿ ಚುನಾವಣೆ ನಡೆದು, ಬಿಜೆಪಿ 10ಕ್ಕೂ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯವನ್ನೇ ಬಿಡುತ್ತೇನೆ; ಕೇಜ್ರಿವಾಲ್ ಶಪಥ – Kannada News | Hold election in Delhi will quit politics if BJP wins over 10 seats Arvind Kejriwal challenges

ನವದೆಹಲಿ, ಫೆಬ್ರವರಿ 27: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರಿಗೆ ದೆಹಲಿ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ.

ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ಮೋದಿ, ಅಮಿತ್ ಶಾ ದೇಶದ ಕ್ಷಮೆ ಯಾಚಿಸಬೇಕು. ನ್ಯಾಯಾಲಯವು ಈ ಪ್ರಕರಣವನ್ನು ಸಂಪೂರ್ಣವಾಗಿ ನಕಲಿ, ವಿಚಾರಣೆಗೆ ಅನರ್ಹ ಎಂದು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣ; ಕೇಜ್ರಿವಾಲ್ ಬಿಡುಗಡೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ದೆಹಲಿಯಲ್ಲಿ ಚುನಾವಣೆ ನಡೆಸಿ ಏನಾಗುತ್ತದೆ ಎಂದು ನೋಡೋಣ ಎಂದು ಸವಾಲು ಹಾಕಿದ್ದಾರೆ. “ಬಿಜೆಪಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ” ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಗೊಳಿಸಲಾಯಿತು. ರೌಸ್ ಅವೆನ್ಯೂ ಸಿಬಿಐಗೆ ತೀಕ್ಷ್ಣವಾದ ಛೀಮಾರಿ ಹಾಕಿತ್ತು. ಪ್ರಾಸಿಕ್ಯೂಷನ್ ತನ್ನ ಆರೋಪಗಳನ್ನು ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಎಂದು ತೀರ್ಪು ನೀಡಿತು. 2021-22ರಲ್ಲಿ ಆಗಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿಗೆ ಹೊಸ ಅಬಕಾರಿ ನೀತಿ ರೂಪಿಸುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ಆರೋಪಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Trophy Final: ತವರಿನಲ್ಲಿ ಎಡವಿದ ಕರ್ನಾಟಕ; ಚಾಂಪಿಯನ್ ಪಟ್ಟದತ್ತ ಜಮ್ಮುಕಾಶ್ಮೀರ – Kannada News | Jammu Kashmir Nears Historic Ranji Trophy 2025 26 Title; Karnataka Struggles in Final

2025-26ರ ರಣಜಿ ಟ್ರೋಫಿಯ ಫೈನಲ್ (Ranji Trophy 2025-26 Final) ಪಂದ್ಯ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ (Jammu Kashmir vs Karnataka) ನಡುವೆ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಾರುಪತ್ಯ ನಾಲ್ಕನೇ ದಿನವೂ ಮುಂದುವರೆದಿದೆ. ಮೊದಲು ಬ್ಯಾಟಿಂಗ್​ನಲ್ಲಿ ಕರ್ನಾಟಕ ವೇಗಿಗಳನ್ನು ಹೈರಾಣಾಗಿಸಿದ್ದ ಜೆಕೆ ತಂಡ, ಆ ಬಳಿಕ ಬೌಲಿಂಗ್​ನಲ್ಲೂ ಕರ್ನಾಟಕ ತಂಡವನ್ನು ಕಟ್ಟಿಹಾಕಿದೆ. ಈಗಾಗಲೇ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಪಡೆದುಕೊಂಡಿರುವ ಜೆಕೆ ತಂಡ ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಎತ್ತಿಹಿಡಿಯುವ ಸನಿಹದಲ್ಲಿದೆ.

293 ರನ್​ಗಳಿಗೆ ಕರ್ನಾಟಕ ಆಲೌಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 584 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡದಿಂದ ಪ್ರತಿರೋಧವನ್ನು ನಿರೀಕ್ಷಿಸಲಾಗಿತ್ತು. ಆದರೆ ಅನುಭವಿ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದ ಕರ್ನಾಟಕ ತಂಡಕ್ಕೆ ಜೆಕೆ ಬೌಲಿಂಗ್ ವಿಭಾಗದ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಏಕಾಂಗಿ ಹೋರಾಟ ನೀಡಿದ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಶತಕದ ಇನ್ನಿಂಗ್ಸ್ ಆಡಿದರಾದರೂ ಅವರಿಗೆ ಇತರರಿಂದ ಬೆಂಬಲ ಸಿಗಲಿಲ್ಲ. ಹೀಗಾಗಿ ಕರ್ನಾಟಕ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 293 ರನ್‌ಗಳಿಗೆ ಆಲೌಟ್ ಆಯಿತು.

477 ರನ್​ಗಳ ಮುನ್ನಡೆ

ಇದರಿಂದಾಗಿ, ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಸಿಕ್ಕಿತು. ಈ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ತಂಡ ನಾಲ್ಕನೇ ದಿನದಂದು 4 ವಿಕೆಟ್‌ಗಳನ್ನು ಕಳೆದುಕೊಂಡು 186 ರನ್‌ ಬಾರಿಸಿದೆ. ಇದರೊಂದಿಗೆ ಜೆಕೆ ತಂಡದ ಮುನ್ನಡೆ 477 ರನ್‌ಗಳಿಗೇರಿದೆ. ಹೀಗಾಗಿ ಐದನೇ ದಿನ ಕೇವಲ ಔಪಚಾರಿಕವಾಗಿದ್ದು, ಬೃಹತ್ ಮುನ್ನಡೆ ಸಾಧಿಸಿರುವ ಜಮ್ಮು ಕಾಶ್ಮೀರ ತಂಡ ಈ ಬಾರಿಯ ರಣಜಿ ಚಾಂಪಿಯನ್ ಆಗುವುದು ಬಹುತೇಕ ಖಚಿತವಾಗಿದೆ.

ಜೆಕೆ ಎರಡನೇ ಇನ್ನಿಂಗ್ಸ್

ಜಮ್ಮು ಮತ್ತು ಕಾಶ್ಮೀರ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ತಂಡ 6 ರನ್‌ಗಳಲ್ಲಿದ್ದಾಗ, ಯಾವರ್ ಹಸನ್ 1 ರನ್ ಗಳಿಸಿ ಔಟಾದರು. ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಶುಭಂ ಪುಂಡಿರ್ ಕೇವಲ 4 ರನ್​ಗಳಿಗೆ ಸುಸ್ತಾದರು. ಪರಾಸ್ ಡೋಗ್ರಾ 16 ರನ್‌ಗಳಿಗೆ ಮತ್ತು ಅಬ್ದುಲ್ ಸಮದ್ 32 ರನ್‌ಗಳಿಗೆ ಔಟಾದರು. ಆದರೆ ಕಮ್ರಾನ್ ಇಕ್ಬಾಲ್ ಒಂದು ಕಡೆಯಿಂದ ಹೋರಾಟ ಮುಂದುವರಿಸಿ ಶತಕದ ಸಮೀಪಕ್ಕೆ ತಲುಪಿದ್ದಾರೆ.

ರಣಜಿ ಟ್ರೋಫಿ ಫೈನಲ್: ಕರ್ನಾಟಕದ ಆಟಗಾರನ ಜೊತೆ ಕಾಲ್ಕೆರೆದು ಜಗಳಕ್ಕಿಳಿದ ಜೆಕೆ ನಾಯಕ

ಜೆಕೆ ತಂಡಕ್ಕ ಚೊಚ್ಚಲ ಪ್ರಶಸ್ತಿ

ಮೇಲೆ ಹೇಳಿದಂತೆ ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿಯ ಫೈನಲ್ ತಲುಪಿದ್ದು, ಇತಿಹಾಸ ಸೃಷ್ಟಿಸುವ ಅವಕಾಶ ಹೊಂದಿದೆ. ಐದನೇ ದಿನದಂದು ಜಮ್ಮು ಮತ್ತು ಕಾಶ್ಮೀರ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ ಎಲೈಟ್ ಡಿ ಗುಂಪಿನಲ್ಲಿತ್ತು. ಈ ಗುಂಪಿನಲ್ಲಿ ದೆಹಲಿ ಮತ್ತು ಮುಂಬೈನಂತಹ ಬಲಿಷ್ಠ ತಂಡಗಳಿದ್ದವು. ಇದರ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರ ಈ ಗುಂಪಿನಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಕ್ವಾರ್ಟರ್ ಫೈನಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಮಧ್ಯಪ್ರದೇಶವನ್ನು 56 ರನ್‌ಗಳಿಂದ ಸೋಲಿಸಿತು. ಬಳಿಕ ಸೆಮಿಫೈನಲ್‌ನಲ್ಲಿ ಬಂಗಾಳವನ್ನು 6 ವಿಕೆಟ್‌ಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು – Kannada News | Kannadigas two Days in Air India Flight for Landing Problem In kathmandu Airport

ಬೆಂಗಳೂರು, (ಫಬ್ರವರಿ 27): ಏರ್​ ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ (Nepal) ಕಠ್ಮಂಡು (Kathmandu) ಹೊರಟಿದ್ದ ಕನ್ನಡಿಗರು (Kolar) ಪರದಾಡಿರುವ ಘಟನೆ ನಡೆದಿದೆ. ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ಎರಡು ದಿನ ವಿಮಾನದಲ್ಲೇ ಉಳಿಯುವಂತಾಗಿದೆ. ವಿಮಾನವು ಸಹ ಎಲ್ಲೂ ಲ್ಯಾಡ್ ಆಗದೇ ಆಕಾಶದಲ್ಲಿ ರೌಂಡ ಹಾಕಿದೆ.ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ಎರಡು ದಿನಗಳಿಂದ ಪ್ಲೈಟ್ ನಲ್ಲೇ ಸಿಲುಕಿ ಪರದಾಡಿದ್ದಾರೆ. ಇನ್ನು ವಿಮಾನದಲ್ಲಿ ಸರಿಯಾದ ಊಟ ನೀರು ಕೊಡದೆ ತೊಂದರೆ ಕೊಡ್ತಿದ್ದಾರೆ ಎಂದು ಪ್ರಯಾಣಿಕರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ(ಫೆಬ್ರವರಿ 26) ಬೆಳಗ್ಗೆ ಕಠ್ಮಂಡುಗೆ ಪ್ರಯಾಣ ಬೆಳೆಸಿದ್ದರು. ಆದ್ರೆ ಹವಾಮಾನ ವೈಪರಿತ್ಯದಿಂದಾಗಿ ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್​ಗೆ ಅನುಮತಿ ಸಿಗದ ಕಾರಣ ವಿಮಾನ, ದಿನ ಪೂರ್ತಿ ಸುತ್ತಾಡಿ ರಾತ್ರಿ ವಾಪಸ್ ಬೆಂಗಳೂರಿಗೆ ಬಂದಿದೆ. ನಂತರ ಇಂದು (ಫೆಬ್ರವರಿ 27) ಬೆಳಗ್ಗೆ ಮತ್ತೆ ಬೆಳಗ್ಗೆ ಅದೇ ಪ್ಲೈಟ್ ನಲ್ಲಿ 170 ಜನ ಪ್ರಯಾಣಿಕರನ್ನ ಕರೆದೊಯ್ದಿದೆ.

Source link

ಹೈದ್ರಾಬಾದ್​​ನಲ್ಲಿ ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಸೈಬರ್​ ವಂಚಕರ ಹೆಡೆಮುರಿ ಕಟ್ಟಿದ್ರು – Kannada News | Mangaluru Police Bust Hyderabad Cyber Fraud Ring: 6 Arrested for OTP Scam

ಪೊಲೀಸರು ಜಪ್ತಿ ಮಾಡಿರುವ ವಸ್ತುಗಳು

ಮಂಗಳೂರು, ಫೆಬ್ರವರಿ 27: ವಿದೇಶದಲ್ಲಿದ್ದವರ ಜೊತೆ ಕೈಜೋಡಿಸಿ ಸೈಬರ್ ಕ್ರೈಂ (Cyber Crime) ಮಾಡುತ್ತಿದ್ದ ಆರು ಜನರ ತಂಡವನ್ನು ಹೈದರಾಬಾದ್​​ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ (Arrest). ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಬಂಧಿತರು. ದುರುಳರು ನಿನ್ನೆ ಒಂದೇ ದಿನ 2 ಕೋಟಿ ರೂ ವಹಿವಾಟು ಮಾಡಿದ್ದಾರೆ.

ಕಮಿಷನ್​​ ಆಸೆ ತೋರಿಸುವ ಖದೀಮರು

ಬ್ಯಾಂಕ್ ಖಾತೆದಾರರಿಗೆ 4 ರಿಂದ 6% ಕಮಿಷನ್ ನೀಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜಾಹಿರಾತು ನೀಡುತ್ತಿದ್ದರು. ಅದನ್ನು ನಂಬಿ ಬಂದವರಿಂದ ಓಟಿಪಿ ಪಡೆದು ವಿದೇಶಕ್ಕೆ ರವಾನಿಸುತ್ತಿದ್ದರು. ಅಲ್ಲಿರುವ ಸೈಬರ್ ಕ್ರೈಂ ಖದೀಮರು ಹಣ ಎಗರಿಸುತ್ತಿದ್ದರು.

ಇದನ್ನೂ ಓದಿ: ಸಾಲ ತೀರಿಸಲು ಕೆನರಾ, HDFC ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ: ಸೈರನ್ ಸದ್ದಿಗೆ ಬೆದರಿ ಓಡಿದ್ದ ಕಳ್ಳ ಈಗ ಪೊಲೀಸ್ ವಶಕ್ಕೆ!

ಸದ್ಯ ಮಂಗಳೂರಿನ ಮೊಹ್ಮದ್​ ಇಕ್ಬಾಲ್​ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿಗಳು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ 18 ಮೊಬೈಲ್, 12 ಸಿಮ್ ಕಾರ್ಡ್,​ 1 ಲ್ಯಾಪ್ ಟಾಪ್, 15 ಚೆಕ್​ಬುಕ್, 18 ಡೆಬಿಟ್ ಕಾರ್ಡ್​ ಮತ್ತು 12 ಬ್ಯಾಂಕ್ ಪಾಸ್ ಬುಕ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗಡಿ ದಾಟಿ‌ ಹಂತಕರ ಬಂಧಿಸಿದ ಮಂಗಳೂರು ಪೊಲೀಸರು

ಇನ್ನು ಇತ್ತೀಚೆಗೆ ಮಂಗಳೂರು ಪೊಲೀಸರು ಗಡಿ ಮೀರಿ ನಡೆಸಿದ ಕಾರ್ಯಾಚರಣೆಯಲ್ಲಿ ಸೈಬರ್‌ ವಂಚಕರ ಮೂಲವನ್ನೇ ಭೇದಿಸಿದ್ದರು. ಆ ಮೂಲಕ ದೇಶದಲ್ಲಿ ಇದುವರೆಗೂ ಯಾರೂ ಮಾಡದ ಆಪರೇಷನ್‌ ಮೂಲಕ ಖದೀಮರ ಹೆಡೆಮುರಿ ಕಟ್ಟಿದ್ದರು. ಮಂಗಳೂರು ಸೆನ್‌ ಪೊಲೀಸರ ಕಾರ್ಯಾಚರಣೆಗೆ ನೇಪಾಳ ಪೊಲೀಸರು ಸಾಥ್‌ ನೀಡಿದ್ದರು.

ಇದನ್ನೂ ಓದಿ: ಸ್ನೇಹಿತರಿಗೆ ಪ್ರಾಣವನ್ನಾದರೂ ಕೊಡಿ, ಬ್ಯಾಂಕ್ ಡೀಟೇಲ್ಸ್ ಕೊಡ್ಬೇಡಿ! ಯಾಕೆ ಗೊತ್ತಾ?

ಮಂಗಳೂರು ಪೊಲೀಸರು 11 ಜನರನ್ನು ಬಂಧಿಸಿದ್ದರು. ಬಂಧಿತರಿಂದ ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಂಧಿತರ ಬಳಿಯಿದ್ದ ಒಟ್ಟು 624 ಬ್ಯಾಂಕ್‌ ಖಾತೆಗಳ ವಿವರ ಸಂಗ್ರಹಿಸಲಾಗಿತ್ತು. ವಿಚಿತ್ರ ಅಂದರೆ ಒಂದು ಖಾತೆಯಲ್ಲಿ 167 ಕೋಟಿ ರೂ ಹಣ ವರ್ಗಾವಣೆ ಆಗಿರುವುದು ಕೂಡ ಪತ್ತೆ ಆಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs WI: ಭಾರತ- ವಿಂಡೀಸ್ ಪಂದ್ಯ ರದ್ದಾದರೆ ಯಾರಿಗೆ ಸೆಮಿಫೈನಲ್ ಟಿಕೆಟ್? – Kannada News | India vs West Indies T20 WC Semi Final Decider: NRR Battle and Rain Impact

2026ರ ಟಿ20 ವಿಶ್ವಕಪ್​ನ (T20 World Cup 2026) ಸೂಪರ್ 8 ಸುತ್ತಿನಲ್ಲಿ ಒಂದು ಪಂದ್ಯವನ್ನು ಸೋತು ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇದೀಗ ಸೆಮಿಫೈನಲ್​ಗೇರಬೇಕೆಂದರೆ ತನ್ನ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಅದರಂತೆ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿರುವ ಟೀಂ ಇಂಡಿಯಾ (India vs West Indies) ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಮಾರ್ಚ್ 1, 2026 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ವರ್ಚುವಲ್ ಕ್ವಾರ್ಟರ್ ಫೈನಲ್‌ನಂತಿದ್ದು, ಗುಂಪು 1 ರಿಂದ ಯಾವ ತಂಡ ಎರಡನೇ ತಂಡವಾಗಿ ಸೆಮಿಫೈನಲ್ ತಲುಪಲಿದೆ ಎಂಬುದನ್ನು ನಿರ್ಧರಿಸುತ್ತದೆ. ಆದಾಗ್ಯೂ ಯಾವುದಾದರೂ ಕಾರಣದಿಂದ ಈ ಪಂದ್ಯ ರದ್ದಾದರೆ ಯಾರಿಗೆ ಸೆಮಿಫೈನಲ್‌ ಟಿಕೆಟ್ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ.

ಪಂದ್ಯ ರದ್ದಾದರೆ, ಸೆಮಿಫೈನಲ್‌ ಟಿಕೆಟ್ ಯಾರಿಗೆ?

ಗ್ರೂಪ್ 1 ಅಂಕ ಪಟ್ಟಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪ್ರಸ್ತುತ ಸಮಾನ ಅಂಕಗಳನ್ನು ಹೊಂದಿವೆ. ವೆಸ್ಟ್ ಇಂಡೀಸ್ ಎರಡು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಭಾರತ ಕೂಡ ಎರಡು ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್​ ವಿಚಾರದಲ್ಲಿ ವಿಂಡೀಸ್​ಗಿಂತ ಭಾರತ ಹಿಂದೆ ಇರುವುದರಿಂದ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದ ತಂಡವು ನಾಲ್ಕು ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ. ಆದಾಗ್ಯೂ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ಮಳೆಯಿಂದ ರದ್ದಾದರೆ ಅಥವಾ ಫಲಿತಾಂಶವಿಲ್ಲದೆ ಕೊನೆಗೊಂಡರೆ, ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ.

ವಿಂಡೀಸ್​ಗೆ ಸೆಮೀಸ್ ಟಿಕೆಟ್!

ಈ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ಒಟ್ಟು ತಲಾ 3 ಅಂಕಗಳನ್ನು ಪಡೆಯುತ್ತವೆ. ಹೀಗಾಗಿ ಸೆಮಿಫೈನಲ್‌ಗೆ ಮುನ್ನಡೆಯುವ ತಂಡವನ್ನು ನೆಟ್ ರನ್​ ರೇಟ್​ (NRR) ಮೂಲಕ ನಿರ್ಧರಿಸಲಾಗುತ್ತದೆ. ವೆಸ್ಟ್ ಇಂಡೀಸ್‌ನ ನೆಟ್ ರನ್​ ರೇಟ್ +1.791 ಆಗಿದ್ದು, ಭಾರತದ ನೆಟ್ ರನ್​ ರೇಟ್ -0.100 ಆಗಿದೆ. ಅಂದರೆ ನೆಟ್ ರನ್​ ರೇಟ್ ವಿಚಾರದಲ್ಲಿ ಭಾರತಕ್ಕಿಂತ ವೆಸ್ಟ್ ಇಂಡೀಸ್ ಮುಂದಿದೆ. ಆದ್ದರಿಂದ, ಮಳೆ ಅಥವಾ ಯಾವುದೇ ಇತರ ಕಾರಣದಿಂದಾಗಿ ಪಂದ್ಯ ರದ್ದಾದರೆ, ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ ಮತ್ತು ಭಾರತ ಪಂದ್ಯಾವಳಿಯಿಂದ ಹೊರಹೋಗುತ್ತದೆ.

T20 World Cup: ಬುಮ್ರಾರನ್ನು ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಅರ್ಷದೀಪ್ ಸಿಂಗ್

ಪಂದ್ಯದ ದಿನದಂದು ಕೋಲ್ಕತ್ತಾದ ಹವಾಮಾನ ಹೇಗಿರುತ್ತದೆ?

ಹವಾಮಾನ ವರದಿಗಳ ಪ್ರಕಾರ, ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಪಂದ್ಯದ ಸಮಯದಲ್ಲಿ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರರ್ಥ ಅಭಿಮಾನಿಗಳು ಇಡೀ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಮತ್ತು ತಂಡಗಳು ತಮ್ಮ ಪ್ರದರ್ಶನದ ಆಧಾರದ ಮೇಲೆ ತಮ್ಮ ಸೆಮಿಫೈನಲ್ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುತ್ತವೆ. 10 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಪರಸ್ಪರ ಎದುರಾಗಲಿವೆ. ಕಳೆದ ಮುಖಾಮುಖಿಯಲ್ಲಿ ಭಾರತ ಸೋತಿತ್ತು. ಆದ್ದರಿಂದ, ಭಾರತ ತಂಡ ತನ್ನ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿ ಅಬಕಾರಿ ಹಗರಣ; ಕೇಜ್ರಿವಾಲ್ ಬಿಡುಗಡೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ – Kannada News | CBI appeal Delhi High Court to challenging Arvind Kejriwal acquittal order in liquor policy case

ನವದೆಹಲಿ, ಫೆಬ್ರವರಿ 27: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ 23 ಜನರನ್ನು ಖುಲಾಸೆಗೊಳಿಸಿ ಇಂದು (ಫೆಬ್ರವರಿ 27) ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಸಿಬಿಐ) ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಮೇಲ್ಮನವಿ ಸಲ್ಲಿಸಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ವಿಜಯೋತ್ಸವದ ಆಚರಣೆಯ ಹೊರತಾಗಿಯೂ ಕಾನೂನು ಹೋರಾಟ ಇನ್ನೂ ಮುಗಿದಿಲ್ಲ. ಸಿಬಿಐ ಮತ್ತೆ ಮೇಲ್ಮನವಿ ಸಲ್ಲಿಸಿದ್ದು, ಕೇಜ್ರಿವಾಲ್ (Arvind Kejriwal) ಅವರ ಖುಲಾಸೆಯನ್ನು ರದ್ದುಗೊಳಿಸಲು ಮನವಿ ಮಾಡಿದೆ.

ದೆಹಲಿ ರೌಸ್ ಅವೆನ್ಯೂ ನ್ಯಾಯಾಲಯವು ಆರೋಪಪಟ್ಟಿಯನ್ನು ತಿರಸ್ಕರಿಸಿ, ಪ್ರಮುಖ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆಮ್ ಆದ್ಮಿ ಪಕ್ಷ (ಎಎಪಿ) ಈ ತೀರ್ಪನ್ನು ಸತ್ಯದ ಐತಿಹಾಸಿಕ ವಿಜಯವೆಂದು ಬಣ್ಣಿಸಿತ್ತು, ಆಮ್ ಆದ್ಮಿ ಪಕ್ಷದ ನಾಯಕರು “ಸತ್ಯಮೇವ ಜಯತೇ” ಎಂದು ಕರೆದು ಸಂಭ್ರಮಿಸಿದ್ದರು. ಆದರೆ, ಇದೀಗ ಸಿಬಿಐ ದೆಹಲಿ ಹೈಕೋರ್ಟ್​ ಮೊರೆಹೋಗಿದೆ. ಆರೋಪಿಗಳು ಫೋನ್‌ಗಳು ಮತ್ತು ಸಿಮ್‌ಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪವನ್ನೂ ಸಿಬಿಐ ಮಾಡಿದೆ.

ಇದನ್ನೂ ಓದಿ: 27 ವರ್ಷದ ವನವಾಸದ ಬಳಿಕ ದೆಹಲಿಯಲ್ಲಿ ಅರಳಿದ ಬಿಜೆಪಿ; ಆಮ್ ಆದ್ಮಿ ಪಕ್ಷಕ್ಕೆ ಹೀನಾಯ ಸೋಲು

ಇದಕ್ಕೂ ಮೊದಲು, ಕೆಳ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿದ್ದ ಆಮ್ ಆದ್ಮಿ ಪಕ್ಷ (ಎಎಪಿ), “ದೇಶದ ಅತ್ಯಂತ ಪ್ರಾಮಾಣಿಕ ಪಕ್ಷವಾದ ಎಎಪಿ ಮತ್ತು ಅದರ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಹೆಸರು ಕೆಡಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇಡೀ ಬಿಜೆಪಿ ಮದ್ಯ ಹಗರಣವನ್ನು ಸೃಷ್ಟಿಸಿದ್ದಾರೆ. ಇಡೀ ಸರ್ಕಾರ ಮತ್ತು ಅದರ ಎಲ್ಲಾ ತನಿಖಾ ಸಂಸ್ಥೆಗಳು ಇದನ್ನು ಸಾಬೀತುಪಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದವು, ಆದರೆ ಅವರು ಒಂದು ಪೈಸೆ ಭ್ರಷ್ಟಾಚಾರವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದೆ.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ; ಕೇಜ್ರಿವಾಲ್, ಸಿಸೋಡಿಯಾ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ?

“ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕರ ಹೆಸರು ಕೆಡಿಸಲು ಈ ಸಂಪೂರ್ಣ ಪಿತೂರಿಯನ್ನು ರೂಪಿಸಲಾಗಿದೆ ಎಂದು ಇಂದು ನ್ಯಾಯಾಲಯವು ಸಾಬೀತುಪಡಿಸಿದೆ. ಇಂದಿನ ನ್ಯಾಯಾಲಯದ ತೀರ್ಪು ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷವು ಅತ್ಯಂತ ಪ್ರಾಮಾಣಿಕರು ಎಂಬುದನ್ನು ಸಾಬೀತುಪಡಿಸಿದೆ. ಪಕ್ಷವು ಎಲ್ಲಾ ಪಿತೂರಿಗಳು ಮತ್ತು ಪಿತೂರಿಗಳ ವಿರುದ್ಧ ಹೋರಾಡುತ್ತದೆ, ಬಿಜೆಪಿಯ ಸುಳ್ಳು ಮತ್ತು ವಂಚನೆಯ ರಾಜಕೀಯವನ್ನು ಕೊನೆಗೊಳಿಸುತ್ತದೆ ಮತ್ತು ಭಾರತವನ್ನು ವಿಶ್ವದ ನಂಬರ್ ಒನ್ ರಾಷ್ಟ್ರವನ್ನಾಗಿ ಮಾಡುತ್ತದೆ” ಎಂದು ಆಪ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ಬಿಗ್​​ ಅಪ್ಡೇಟ್​​ ಕೊಟ್ಟ ರಾಬರ್ಟ್ ವಾದ್ರಾ – Kannada News | Robert Vadra Reacts to CM Post Tussle in Karnataka Congress

ಬೆಂಗಳೂರು, ಫೆಬ್ರವರಿ 27: ಕಾಂಗ್ರೆಸ್​​ ವರಿಷ್ಠೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಬೆಂಗಳೂರಿಗೆ ಆಗಮಿಸಿದ್ದು, ನಗರದ ವಿವಿಧ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇಸ್ಕಾನ್ ದೇವಸ್ಥಾನ ಮತ್ತು ಮಸೀದಿಗೆ ಭೇಟಿ ನೀಡಿದ ಅವರು, ಮಿಷನರೀಸ್ ಆಫ್ ಚಾರಿಟಿ ಸೇವಾ ಕೇಂದ್ರದಲ್ಲಿಯೂ ಸಮಯ ಕಳೆದಿದ್ದಾರೆ. ಬೆಂಗಳೂರಿನಲ್ಲಿ ತಮಗೆ ದೊರೆತ ಅಪಾರ ಪ್ರೀತಿ ಮತ್ತು ಅಭಿಮಾನವನ್ನು ವಾದ್ರಾ ಶ್ಲಾಘಿಸಿದ್ದು, ಬೆಂಗಳೂರು ತಮಗೆ ಎರಡನೇ ಮನೆಯಂತಿದೆ ಎಂದು ಬಣ್ಣಿಸಿದ್ದಾರೆ. ಕರ್ನಾಟಕದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತಾಗಿಯೂ ಮಾತನಾಡಿರುವ ವಾದ್ರಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕದ ಜನರ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಅವರು ಒಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆಯ ಯಾವುದೇ ಸಾಧ್ಯತೆಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ವಾದ್ರಾ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಿಡುಗಡೆಗೆ ಅನುಮತಿ ನೀಡಿದ ಹೈಕೋರ್ಟ್ – Kannada News | High Court lifts the stay on The Kerala Story 2 Goes Beyond and allows its release

ಟ್ರೇಲರ್ ರಿಲೀಸ್ ಬೆನ್ನಲ್ಲೇ ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿತ್ತು. ಆದರೆ ಈಗ ಚಿತ್ರತಂಡ ನಿಟ್ಟುಸಿರು ಬಿಡುವಂತಾಗಿದೆ. ಈ ಮೊದಲು ‘ದಿ ಕೇರಳ ಸ್ಟೋರಿ 2’ ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ (Kerala High Court) ತಡೆ ನೀಡಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಮರು ವಿಚಾರಣೆ ನಡೆಸಿ, ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಈಗ ನಿರ್ಮಾಪಕರು ಹೊಸ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ವಿಪುಲ್ ಅಮೃತ್​ಲಾಲ್ ಶಾ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಮೊದಲು ಕೇರಳ ಹೈಕೋರ್ಟ್ ತಡೆ ನೀಡಿದ್ದನ್ನು ಪ್ರಶ್ನಿಸಿ ಕೂಡಲೇ ಮೇಲ್ಮನವಿ ಸಲ್ಲಿಸಲಾಗಿತ್ತು. ತುರ್ತು ಪ್ರಕರಣ ಎಂದು ಪರಿಗಣಿಸಿದ ವಿಭಾಗೀಯ ಪೀಠವು ಅದೇ ದಿನ ಸಂಜೆ 7.30ಕ್ಕೆ ವಿಚಾರಣೆ ನಡೆಸಿತು. ಇಂದು (ಫೆಬ್ರವರಿ 27) ಸಂಜೆ ತೀರ್ಪು ಪ್ರಕಟಿಸಿತು.

‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಲವ್ ಜಿಹಾದ್ ಕುರಿತ ಕಥೆಯನ್ನು ಹೇಳಲಾಗುತ್ತಿದೆ. ಆದರೆ ಚಿತ್ರದ ಟೀಸರ್​ನಲ್ಲಿ ತೋರಿಸಿದ ಅಂಶಗಳು ವಿವಾದಾತ್ಮಕವಾಗಿವೆ ಎಂದು ಅನೇಕರು ತಕರಾರು ತೆಗೆದಿದ್ದರು. ಆ ವಿವಾದವು ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಚಿತ್ರದ ಟೀಸರ್ ಅನ್ನು ತೆಗೆದು ಹಾಕುವಂತೆ ಸೂಚನೆ ನೀಡಿತ್ತು. ಬಳಿಕ ಸಿನಿಮಾದ ಬಿಡುಗಡೆಯನ್ನು ಮುಂದೂಡುವಂತೆ ಆದೇಶಿಸಿತ್ತು.

ಆದರೆ ಈಗ ‘ದಿ ಕೇರಳ ಸ್ಟೋರಿ 2’ ಚಿತ್ರತಂಡಕ್ಕೆ ಹೈಕೋರ್ಟ್​​ನ ಹೊಸ ಆದೇಶದಿಂದ ರಿಲೀಫ್ ಸಿಕ್ಕಂತೆ ಆಗಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ. ಗುರುವಾರ (ಫೆಬ್ರವರಿ 26) ಈ ಸಿನಿಮಾಗೆ ಅನೇಕ ಕಡೆಗಳಲ್ಲಿ ಬುಕಿಂಗ್ ಆಗಿತ್ತು. ಆದರೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರದರ್ಶನಗಳನ್ನು ರದ್ದು ಮಾಡಲಾಗಿತ್ತು.

ಇದನ್ನೂ ಓದಿ: ಹಿಂದೂ ಯುವತಿಯರೇ ಟಾರ್ಗೆಟ್: ಶಾಕಿಂಗ್ ಆಗಿದೆ ‘ದಿ ಕೇರಳ ಸ್ಟೋರಿ 2’ ಟ್ರೇಲರ್

ಇಷ್ಟೆಲ್ಲ ಸುದ್ದಿ ಆಗಿರುವ ‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಅಂಥದ್ದೇನಿದೆ ಎಂದು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಹೆಚ್ಚಿದೆ. ಕೇರಳದಲ್ಲಿ ಈ ಚಿತ್ರಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಮಾಕ್ಯ ನಾರಾಯಣ್ ಸಿಂಗ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಉಲ್ಕಾ ಗುಪ್ತಾ, ಐಶ್ವರ್ಯಾ ಊಜಾ, ಅದಿತಿ ಭಾಟಿಯಾ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version