ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು
ಬೀಜಿಂಗ್, ಮೇ 3: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ತೆಗೆದುಹಾಕಿ ಅವರ ಜಾಗಕ್ಕೆ AI ಅಳವಡಿಸಿಕೊಳ್ಳುತ್ತಿವೆ. ಆದರೆ ಚೀನಾದ ನ್ಯಾಯಾಲಯವೊಂದು ಈ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ್ದು, “ಕಂಪನಿಗಳು ಲಾಭಕ್ಕಾಗಿ ಅಥವಾ ಕೆಲಸದ ವೇಗಕ್ಕಾಗಿ AI ಬಳಸಿಕೊಳ್ಳುವುದು ಅವರ ವೈಯಕ್ತಿಕ ನಿರ್ಧಾರ. ಆದರೆ ಈ ನಿರ್ಧಾರದ ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಅಥವಾ ಅವರ ಸಂಬಳ ಕಡಿತಗೊಳಿಸುವುದು ಕಾನೂನುಬಾಹಿರ” ಎಂದು ಹೇಳಿದೆ. ಚೀನಾದ ಹ್ಯಾಂಗ್ಝೌ (Hangzhou) ನ್ಯಾಯಾಲಯದಿಂದ ಈ ತೀರ್ಪು…