Headlines

11 ವರ್ಷಗಳ ಬಳಿಕ ಫೈನಲ್​ಗೇರಿದ ಕರ್ನಾಟಕ – Kannada News | Karnataka enters the Ranji Trophy final11

ಬರೋಬ್ಬರಿ 11 ವರ್ಷಗಳ ಬಳಿಕ ಕರ್ನಾಟಕ ತಂಡ ರಣಜಿ ಟೂರ್ನಿಯ ಫೈನಲ್​ಗೇರಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ್ ಮತ್ತು ಕರ್ನಾಟಕ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ ಮೊದಲ ಇನಿಂಗ್ಸ್​ನಲ್ಲಿನ 503 ರನ್​ಗಳ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ್ ತಂಡದ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ…

Read More

3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ – Kannada News | 3 year old child sexually assaulted by her fathers friend in Visakhapatnam case registered

ವಿಶಾಖಪಟ್ಟಣಂ, ಫೆಬ್ರವರಿ 19: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಡಗಂಟ್ಯಾಡ ಮಂಡಲದಲ್ಲಿ 3 ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ (Sexually Harassment) ಎಸಗಿದ್ದಾನೆ. ಆಕೆಯ ತಂದೆಯನ್ನು ಭೇಟಿಯಾಗುವ ನೆಪದಲ್ಲಿ ಆತ ಮನೆಗೆ ಬಂದಿದ್ದ. ಆದರೆ, ಆಕೆಯ ಅಪ್ಪ ಮನೆಯಲ್ಲಿರಲಿಲ್ಲ. ಅಮ್ಮ ಒಳಗೆ ಅಡುಗೆ ಮಾಡುತ್ತಿದ್ದರು. ಈ ವೇಳೆ ಆ ಆರೋಪಿಯು ಮಗುವಿಗೆ ಬಿಸ್ಕತ್ ಕೊಡಿಸುತ್ತೇನೆ ಎಂದು ಹತ್ತಿರದ ದಿನಸಿ ಅಂಗಡಿಗೆ ಕರೆದೊಯ್ದನು. ಆಕೆಯನ್ನು ಅಂಗಡಿಗೆ ಕರೆದುಕೊಂಡು ಹೋಗುವಾಗ ಮಧ್ಯದಲ್ಲೇ ಆಕೆಯ ಮೇಲೆ ಅತ್ಯಾಚಾರ…

Read More

Karachi Blast: ಕರಾಚಿಯಲ್ಲಿ ಸ್ಫೋಟ, ಮಕ್ಕಳು ಸೇರಿ 16 ಮಂದಿ ಸಾವು – Kannada News | Deadly Blast in Karachi Claims 16 Lives, Children Among Victims

ಕರಾಚಿ, ಫೆಬ್ರವರಿ 19: ಪಾಕಿಸ್ತಾನದ ಕರಾಚಿಯಲ್ಲಿ ಭಾರಿ ಸ್ಫೋಟ(Blast) ಸಂಭವಿಸಿದ್ದು, ಮಕ್ಕಳು ಸೇರಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಸತಿ ಕಟ್ಟಡವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಓಲ್ಡ್ ಸೋಲ್ಜರ್ ಬಜಾರ್ ಪ್ರದೇಶದ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ, ಪಾಕಿಸ್ತಾನದಲ್ಲಿ ಇಂದು ರಂಜಾನ್ ಮೊದಲ ದಿನವನ್ನು ಆಚರಿಸಲಾಗುತ್ತಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಹುತೇಕ ಮನೆಗಳಲ್ಲಿ ದೈನಂದಿನ ಬಳಕೆಗಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ…

Read More

ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ? – Kannada News | Shiva Rajkumar wants to act in Bakta Kumbara character

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್ (Shiva Rajkumar) ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ಯಶಸ್ವಿ 40 ವರ್ಷಗಳನ್ನು ಪೂರೈಸಿದ್ದಾರೆ. ಈ ಸುದೀರ್ಘ ಪಯಣದಲ್ಲಿ ಅವರು ಹಲವಾರು ರೀತಿಯ ಪಾತ್ರಗಳು, ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಆನಂದ್’ ಇಂದ ಆರಂಭಿಸಿ ಇತ್ತೀಚೆಗಿನ ‘45’ ಸಿನಿಮಾದ ವರೆಗೆ ನಾನಾ ರೀತಿಯ ಪಾತ್ರಗಳಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ. ಆದರೆ ಶಿವಣ್ಣ ಅವರಿಗೆ ಆ ಒಂದು ಪಾತ್ರದಲ್ಲಿ ನಟಿಸುವ ಆಸೆ ಇದ್ದು, ಆ ಆಸೆ ಇನ್ನೂ ಈಡೇರಿಲ್ಲವಂತೆ. ಅಂದಹಾಗೆ ಶಿವಣ್ಣನ ಆ…

Read More

AI Professional Courses: AI ಕೌಶಲ್ಯ ಹೆಚ್ಚಿಸಲು ಗೂಗಲ್​​ನಿಂದ ಹೊಸ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ – Kannada News | Google Launches 7 AI Professional Certificate Courses: Sundar Pichai’s India Announcement

ಗೂಗಲ್ ಕೃತಕ ಬುದ್ಧಿಮತ್ತೆ (AI) ಕುರಿತು ಪ್ರಮುಖ ಘೋಷಣೆ ಮಾಡಿದೆ. ಗೂಗಲ್ AI ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದು, ಈ ಕಾರ್ಯಕ್ರಮದಡಿಯಲ್ಲಿ, ಗೂಗಲ್ ಒಟ್ಟು 7 AI ಪ್ರಮಾಣಪತ್ರ ಕೋರ್ಸ್‌ಗಳನ್ನು ನಡೆಸಲಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಬುಧವಾರ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಜಾಗತಿಕ AI ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದರು. ಗೂಗಲ್ ಸಿಇಒ ಸುಂದರ್ ಪಿಚೈ ಭಾರತ-ಅಮೆರಿಕಾ ಸಂಪರ್ಕ ಉಪಕ್ರಮವನ್ನು ಘೋಷಿಸುವಾಗ ಈ ಕಾರ್ಯಕ್ರಮವನ್ನು ಘೋಷಿಸಿದರು. ಭಾರತ್ ಮಂಟಪದಲ್ಲಿ ನಡೆದ AI ಸಮ್ಮೇಳನದಲ್ಲಿ, ಗೂಗಲ್…

Read More

ನಾವು ಭಾರತವನ್ನು ಸೋಲಿಸಿದ್ದೇವೆ: ಪಾಕ್ ಆಟಗಾರನ ತಿರುಗೇಟು! – Kannada News | We beat India in the World Cup: Shadab Khan

T20 World Cup 2026: ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ತಂಡದ ಪರಾಜಯ ಮುಂದುವರೆದಿದೆ. ಈ ಪರಾಜಯದ ಬೆನ್ನಲ್ಲೇ ಪಾಕ್ ತಂಡದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಅದರಲ್ಲೂ ಬಾಸಿತ್ ಅಲಿ, ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ಸೇರಿದಂತೆ ಕೆಲ ಮಾಜಿ ಆಟಗಾರರು ಹಿರಿಯ ಆಟಗಾರರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗಳಿಗೆ ಪಾಕ್ ಆಲ್​ರೌಂಡರ್ ಶಾದಾಬ್ ಖಾನ್ ತಿರುಗೇಟು ನೀಡಿದ್ದಾರೆ. ನಮೀಬಿಯ ವಿರುದ್ಧದ ಪಂದ್ಯದ ಬಳಿಕ ಸುದ್ದಿಗೋಷ್ಠಿ ಮಾತನಾಡಿದ ಶಾದಾಬ್ ಖಾನ್,…

Read More

ನಂದಿನಿ ಉತ್ಪನ್ನ ತಿಂದರೆ ಕ್ಯಾನ್ಸರ್‌ ಬರುತ್ತಾ? ಅಂತೆ-ಕಂತೆಗಳಿಗೆ ಕೆಎಂಎಫ್‌ ಎಂಡಿ ಸ್ಪಷ್ಟನೆ – Kannada News | Do Nandini Products Cause Cancer; KMF Debunks Cancer Claims as Fake News

ಕೆಎಂಎಫ್‌ ಉತ್ಪನ್ನಗಳುImage Credit source: deccanherald ಬೆಂಗಳೂರು, ಫೆಬ್ರವರಿ 19: ಕೆಎಂಎಫ್​​ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್. ಕೆಎಂಎಫ್​​​ ಉತ್ಪನ್ನಗಳು (KMF Products) ದೇಶ-ವಿದೇಶಗಳಿಗೆ ಸರಬರಾಜು ಆಗುತ್ತದೆ. ಇದೀಗ ಈ ಬ್ರ್ಯಾಂಡ್​​ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಂದಿನ ಉತ್ಪನ್ನಗಳ ಬಗ್ಗೆ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ. ಆ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕೆ ಕೆಎಂಎಫ್​​ ಸಜ್ಜಾಗಿದ್ದು, ಸುಳ್ಳು ಸುದ್ದಿ ಹರಿಬಿಡುತ್ತಿರುವವರ ಮೇಲೆ ಕ್ರಿಮಿನಲ್ ಕೇಸ್​​ ದಾಖಲಿಸಲು ಮುಂದಾಗಿದೆ. ಇದು…

Read More

ಭಾರತೀಯ ಸಿನಿಮಾ ಬಗ್ಗೆ ತನಗಿರುವ ಕನಸು ಹಂಚಿಕೊಂಡ ರಾಜಮೌಳಿ – Kannada News | SS Rajamouli shared his dream about Indian Cinema

ರಾಜಮೌಳಿ (Rajamouli) ಪ್ರಸ್ತುತ ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಸಿನಿಮಾಗಳಿಗೆ ವಿಶ್ವ ಮಟ್ಟದಲ್ಲಿ ಮಾರುಕಟ್ಟೆ, ಗೌರವ, ಪ್ರೇಕ್ಷಕರನ್ನು ತಂದುಕೊಟ್ಟ ಶ್ರೇಯ ಎಸ್​​ಎಸ್ ರಾಜಮೌಳಿ ಅವರಿಗೆ ಸಲ್ಲಬೇಕು. ಅವರ ನಿರ್ದೇಶನದ ‘ಆರ್​​ಆರ್​​ಆರ್’ ಸಿನಿಮಾ ವಿದೇಶಗಳಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ಹಾಲಿವುಡ್​ನ ಕೆಲವು ಲಿಜೆಂಡರಿ ನಿರ್ದೇಶಕರುಗಳು ಸಹ ರಾಜಮೌಳಿಗೆ ಹಾಲಿವುಡ್ ಸಿನಿಮಾ ಮಾಡುವಂತೆ ಆಫರ್ ಮಾಡಿದ್ದರು. ಆದರೆ ನಯವಾಗಿ ಆಫರ್ ಅನ್ನು ನಿರಾಕರಿಸಿದ್ದಾರೆ ರಾಜಮೌಳಿ. ಆದರೆ ರಾಜಮೌಳಿ ಅವರಿಗೆ ಭಾರತೀಯ ಸಿನಿಮಾಗಳ ಬಗ್ಗೆ ಒಂದು ಕನಸಿದೆ….

Read More

ವಾರಾಂತ್ಯಕ್ಕೆ ಜೀ5ನಲ್ಲಿ ನೋಡಿ ‘ರಾಕ್ಷಸ’; ಉತ್ತರ ಕರ್ನಾಟಕದ ಕಥೆಯಲ್ಲಿ ಕ್ರೈಮ್​ ಥ್ರಿಲ್ಲರ್ ಸರಣಿ – Kannada News | Rakshasa Web Series: Vijay Raghavendra’s Kannada Thriller on Zee5 North Karnataka Story

ಒಟಿಟಿ ವ್ಯಾಪ್ತಿ ತುಂಬಾನೇ ಹಿರಿದಾಗಿದೆ. ಸಾಕಷ್ಟು ಸಿನಿಮಾಗಳು, ಸರಣಿಗಳು ರಿಲೀಸ್ ಆಗುತ್ತಿವೆ. ಪರಭಾಷೆಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ವೆಬ್ ಸರಣಿಗಳ ಸಂಖ್ಯೆ ಕಡಿಮೆ. ಆದರೆ, ಜೀ5 ಹಲವು ವೆಬ್​ ಸೀರಿಸ್​​ಗಳನ್ನು ಕನ್ನಡಿಗರ ಮಡಿಲಿಗೆ ಹಾಕುತ್ತಾ ಇದೆ. ಈಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಿದ್ಧವಾದ ವೆಬ್ ಸೀರಿಸ್​​​ನ ವೀಕ್ಷಕರ ಮುಂದಿಡುತ್ತಿದೆ. ವೀಕೆಂಡ್​​​ನಲ್ಲಿ ಈ ಸರಣಿ ವೀಕ್ಷಣೆಗೆ ಒಂದೊಳ್ಳೆಯ ಆಯ್ಕೆ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ. ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ, ಹೀರೋ ಆಗಿ ಮಿಂಚಿದ್ದಾರೆ. ಅವರ ವೃತ್ತಿ…

Read More

ಹೆಂಡತಿಯ ಮೂಳೆ ಮುರಿಯುವವರೆಗೂ, ಗಾಯ ಆಗುವವರೆಗೂ ಹೊಡೀಬಹುದು, ತಾಲಿಬಾನ್​​ನ ಭಯಾನಕ ಕಾನೂನಿಂದ ಬೆಚ್ಚಿಬಿದ್ದ ಮಹಿಳೆಯರು – Kannada News | Taliban’s New Criminal Code Legalizes Domestic Violence in Afghanistan: A Blow to Women’s Rights

ಅಫ್ಘಾನಿಸ್ತಾನImage Credit source: Observer Research Foundation ತಾಲಿಬಾನ್, ಫೆಬ್ರವರಿ 19: ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡಿರುವ ತಾಲಿಬಾನ್(Taliban), 90 ಪುಟಗಳ ಹೊಸ ‘ಕ್ರಿಮಿನಲ್ ಕೋಡ್’ ಅನ್ನು ಜಾರಿಗೆ ತಂದಿದೆ. ಈ ಹೊಸ ಕೋಡ್ ಮಹಿಳೆಯರು ಮತ್ತು ಮಕ್ಕಳ ಮೇಲಿನ ಕೌಟುಂಬಿಕ ಹಿಂಸಾಚಾರಕ್ಕೆ ಕಾನೂನು ಮಾನ್ಯತೆ ನೀಡುತ್ತದೆ. ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಸಹಿ ಮಾಡಿದ ಈ ಕಾನೂನು, ಗಂಡಂದಿರು ತಮ್ಮ ಹೆಂಡತಿಯರು ಮತ್ತು ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸಬಹುದು ಎಂದು ಹೇಳುತ್ತದೆ. ಮೂಳೆ ಮುರಿಯಬಾರದು, ಗಾಯಗಳಾಗಬಾರದು ಅಷ್ಟೇ. ಈ…

Read More