ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ: ಸ್ವ ಪಕ್ಷದ ಸಚಿವರ ವಿರುದ್ಧ ಗುಡುಗಿದ ಕೈ ಶಾಸಕ – Kannada News | MLA Ravikumar Gowda Ganiga Warns His Government And Minister for Mandya VV close
ಮಂಡ್ಯ, (ಮೇ 03): ಮಂಡ್ಯ ವಿಶ್ವವಿದ್ಯಾಯಲಯ (Mandya University) ಮುಚ್ಚುಲು ಮುಂದಾಗಿರುವ ತಮ್ಮದೇ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಕೆಂಡಾಮಂಡಲರಾಗಿದ್ದಾರೆ. ಮಂಡ್ಯ ವಿವಿ ಮುಚ್ಚಿಸಿದ್ರೆ ಬೆಂಕಿ ಹಚ್ಚಿಸುತ್ತೇವೆ. ಸಚಿವನ್ನು ಮಂಡ್ಯ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮಂಡ್ಯ ವಿವಿ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ರವಿ ಗಣಿಗ, ನಾನು ಶಾಸಕನಾಗಿ ಇರ್ತೀನೋ ಇಲ್ಲವೋ. ಆದ್ರೆ ಮಂಡ್ಯ ವಿವಿ ಮುಚ್ಚಲು ಬಿಡಲ್ಲ. ನಾವು ಮೈಸೂರಿನ ಗುಲಾಮರಾಗಿ ಇರುವುದು ಬೇಡ. ನಮಗೆ ಸ್ವಂತ…