ಭೋಪಾಲ್, ಫೆ.27: ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜನಸಾಮಾನ್ಯರ ಕಷ್ಟಕ್ಕೆ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಕೇಂದ್ರ ಸಚಿವ ಶಿವ್‌ರಾಜ್ ಸಿಂಗ್ ಚೌಹಾಣ್ ಅವರು ಸಾಕ್ಷಿಯಾಗಿದ್ದಾರೆ. ಭೋಪಾಲ್‌ನ ಚೆತಕ್ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಕಂಡು, ತಮ್ಮ ಬೆಂಗಾವಲು ಪಡೆಯನ್ನು (Convoy) ತಡೆದು ನಿಲ್ಲಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಜೀವ ಉಳಿಸಿದ್ದಾರೆ. ಶಿವ್‌ರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಚೆತಕ್ ಬ್ರಿಡ್ಜ್ ಬಳಿ ಜನಸಂದಣಿ ಇರುವುದನ್ನು ಗಮನಿಸಿದರು. ತಕ್ಷಣ ವಾಹನ ನಿಲ್ಲಿಸಿ ವಿಚಾರಿಸಿದಾಗ, ಅಪಘಾತವಾಗಿ ಯುವಕನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವುದು ತಿಳಿದುಬಂದಿತು. ಸಚಿವರು ವಿಳಂಬ ಮಾಡದೆ ತಮ್ಮ ಬೆಂಗಾವಲು ಪಡೆಯಲ್ಲಿದ್ದ ವಾಹನವೊಂದರಲ್ಲಿ ಸಂತ್ರಸ್ತನನ್ನು ಹತ್ತಿಸಿ ಹತ್ತಿರದ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಯುವಕನನ್ನು ಕಳುಹಿಸಿಕೊಟ್ಟಿದ್ದಷ್ಟೇ ಅಲ್ಲದೆ, ವೈದ್ಯರಿಗೆ ಖುದ್ದಾಗಿ ಫೋನ್ ಮಾಡಿ ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದರು. ಅಲ್ಲದೆ, ತಮ್ಮ ತಂಡದ ಅಧಿಕಾರಿಯೊಬ್ಬರನ್ನು ಆಸ್ಪತ್ರೆಯಲ್ಲೇ ಉಳಿಸಿ ಯುವಕನ ಆರೋಗ್ಯದ ಬಗ್ಗೆ ಗಮನಹರಿಸುವಂತೆ ತಿಳಿಸಿದರು.
2026ರ ಮಾರ್ಚ್ 3ರ ಫಾಲ್ಗುಣ ಪೂರ್ಣಿಮೆಯ ಆ ರಾತ್ರಿ ಆಕಾಶದಲ್ಲಿ ಒಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಅಂದು ಭೂಮಿಯ ನೆರಳು ಚಂದ್ರನನ್ನು ಆವರಿಸುವ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇದು ಕೇವಲ ಒಂದು ಖಗೋಳ ಘಟನೆಯಲ್ಲ; ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಶಕ್ತಿಯ ಸಮತೋಲನವನ್ನು ಪರೀಕ್ಷಿಸುವ ಆಧ್ಯಾತ್ಮಿಕ ಸಮಯ. ಪೌರಾಣಿಕ ಕಥೆಗಳ ಪ್ರಕಾರ, ರಾಹು ಮತ್ತು ಕೇತುಗಳು ಚಂದ್ರನನ್ನು ಬಾಧಿಸುವ ಈ ಕಾಲದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ. ಈ ಸೂಕ್ಷ್ಮ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ.
ಗ್ರಹಣದ ಆರಂಭಕ್ಕೆ ಸುಮಾರು 9 ಗಂಟೆಗಳ ಮುಂಚಿತವಾಗಿಯೇ ‘ಸೂತಕ ಅವಧಿ’ ಆರಂಭವಾಗುತ್ತದೆ. ಇದು ಸಂಯಮ ಮತ್ತು ಅಂತರಂಗದ ಶುದ್ಧಿಯ ಸಮಯ. ಈ ಅವಧಿಯಲ್ಲಿ ದೇವಾಲಯಗಳ ಬಾಗಿಲುಗಳು ಮುಚ್ಚಲ್ಪಡುತ್ತವೆ, ಮಂಗಳ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ವಿಶೇಷವಾಗಿ ಈ ಸಮಯದಲ್ಲಿ ‘ಪ್ರಯಾಣ’ ಮಾಡಬೇಕೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಶಾಸ್ತ್ರಗಳ ಪ್ರಕಾರ, ಗ್ರಹಣ ಕಾಲದಲ್ಲಿ ಕೈಗೊಳ್ಳುವ ಪ್ರಯಾಣವು ಅಡೆತಡೆಗಳಿಂದ ಕೂಡಿರಬಹುದು ಅಥವಾ ಮನಸ್ಸಿನಲ್ಲಿ ಅನಗತ್ಯ ಆತಂಕವನ್ನು ಉಂಟುಮಾಡಬಹುದು. ಪ್ರಯಾಣವನ್ನು ಕೂಡ ಒಂದು ಶುಭಾರಂಭವೆಂದು ಪರಿಗಣಿಸುವುದರಿಂದ, ಗ್ರಹಣದ ನಕಾರಾತ್ಮಕ ಕಂಪನಗಳಿರುವಾಗ ದೂರದ ಪ್ರಯಾಣ ಅಥವಾ ಪ್ರಮುಖ ವ್ಯವಹಾರದ ಪ್ರವಾಸಗಳನ್ನು ತಪ್ಪಿಸುವುದು ಶ್ರೇಯಸ್ಕರ.
ಒಂದು ವೇಳೆ ಪ್ರಯಾಣ ಅನಿವಾರ್ಯವಾದರೆ ಏನು ಮಾಡಬೇಕು? ಅಂತಹ ಸಂದರ್ಭಗಳಲ್ಲಿ ಧರ್ಮಗ್ರಂಥಗಳು ಭಕ್ತಿಯ ಮಾರ್ಗವನ್ನು ಸೂಚಿಸುತ್ತವೆ. ಮನೆಯಿಂದ ಹೊರಡುವ ಮುನ್ನ ಇಷ್ಟದೈವವನ್ನು ಸ್ಮರಿಸಿ, ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳನ್ನು ಇಟ್ಟುಕೊಳ್ಳಬೇಕು. ಪ್ರಯಾಣ ಮುಗಿಸಿ ಮನೆಗೆ ಬಂದ ನಂತರ ಸ್ನಾನ ಮಾಡಿ, ಶುಭ್ರ ವಸ್ತ್ರ ಧರಿಸಿ ಪ್ರಾರ್ಥನೆ ಸಲ್ಲಿಸುವುದರಿಂದ ಗ್ರಹಣದ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂಬ ವಿಶ್ವಾಸವಿದೆ. ಗ್ರಹಣದ ಸಮಯದಲ್ಲಿ ವ್ಯರ್ಥ ಅಲೆದಾಟದ ಬದಲು ಜಪ, ಧ್ಯಾನ ಮತ್ತು ದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026ರ ಸಾಲಿನಲ್ಲಿ ಹೋಳಿ ಹಬ್ಬವನ್ನು ಮಾರ್ಚ್ 4ರಂದು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೇವಲ ಬಣ್ಣಗಳಾಟವಲ್ಲ, ಬದಲಾಗಿ ಇದು ಸಂಸ್ಕೃತಿ, ಭಕ್ತಿ ಮತ್ತು ಪ್ರಕೃತಿಯ ಬದಲಾವಣೆಯ ಸಂಗಮವಾಗಿದೆ. ಇದು ಪ್ರಕೃತಿಯ ನವೀಕರಣ ಮತ್ತು ಮಾನವ ಸಂಬಂಧಗಳ ಮರುಜೋಡಣೆಯ ಅದ್ಭುತ ಸಂಕೇತವಾಗಿದೆ.
ಹಬ್ಬದ ಆರಂಭವು ಹಿಂದಿನ ದಿನವಾದ ಮಾರ್ಚ್ 3ರ ಸಂಜೆ ನಡೆಯುವ ‘ಹೋಳಿಕಾ ದಹನ’ದೊಂದಿಗೆ ಶುರುವಾಗುತ್ತದೆ. ಸಂಜೆ 6:22 ರಿಂದ 8:50ರವರೆಗಿನ ಶುಭ ಮುಹೂರ್ತದಲ್ಲಿ, ಅಧರ್ಮದ ಸಂಕೇತವಾದ ಹೋಳಿಕೆಯನ್ನು ದಹಿಸಿ, ಸತ್ಯದ ಹಾದಿಯಲ್ಲಿ ನಡೆಯುವ ಭಕ್ತ ಪ್ರಹ್ಲಾದನ ಗೆಲುವನ್ನು ಸ್ಮರಿಸಲಾಗುತ್ತದೆ. ಅಂದು ಬೆಳಗುವ ಅಗ್ನಿಯು ಮನಸ್ಸಿನ ದ್ವೇಷಗಳನ್ನು ಸುಟ್ಟುಹಾಕಿ, ನೈತಿಕತೆಯ ಹೊಸ ದೀಪವನ್ನು ಬೆಳಗುತ್ತದೆ.
ಚಳಿಗಾಲದ ಜಡತೆಯನ್ನು ಕಳೆದು, ವಸಂತದ ಚೈತನ್ಯವನ್ನು ಸ್ವಾಗತಿಸಲು ಈ ಹಬ್ಬವು ವೈಜ್ಞಾನಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಮಗೆ ನೆರವಾಗುತ್ತದೆ. ಪ್ರಾಚೀನ ಕಾಲದಲ್ಲಿ ಹಸಿರು ಮತ್ತು ಹಳದಿ ಬಣ್ಣಗಳಿಗಾಗಿ ಪಲಾಶದ ಹೂವು ಮತ್ತು ಅರಿಶಿನದಂತಹ ನೈಸರ್ಗಿಕ ಮೂಲಗಳನ್ನು ಬಳಸಲಾಗುತ್ತಿತ್ತು, ಇದು ಆರೋಗ್ಯಕ್ಕೆ ಪೂರಕವಾಗಿತ್ತು. ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವಂತೆ, ಮಥುರಾದ ‘ಲಠ್ ಮಾರ್ ಹೋಳಿ’, ಗೋವಾದ ‘ಶಿಗ್ಮೋತ್ಸವ’ ಮತ್ತು ಪಂಜಾಬ್‌ನ ಶೌರ್ಯಪ್ರದರ್ಶಕ ‘ಹೋಲಾ ಮೊಹಲ್ಲಾ’ ದಂತಹ ಆಚರಣೆಗಳು ಈ ಹಬ್ಬಕ್ಕೆ ವಿಶಿಷ್ಟ ಮೆರಗನ್ನು ನೀಡುತ್ತವೆ.
ಹೋಳಿಯ ಅತ್ಯಂತ ಸುಂದರ ಭಾಗವೆಂದರೆ, ಮರೆತ ಹಳೆಯ ವೈಮನಸ್ಸುಗಳನ್ನು ಬಣ್ಣಗಳ ಮೂಲಕ ಅಳಿಸಿಹಾಕಿ, ಹೊಸ ಸ್ನೇಹದ ಬಾಂಧವ್ಯವನ್ನು ಬೆಸೆಯುವುದು. ಈ ದಿನದಂದು ಮನೆಮನೆಗಳಲ್ಲಿ ಗರಿಗರಿಯಾದ ವಿಶೇಷ ಸಿಹಿ ತಿನಿಸುಗಳನ್ನು ಸವಿಯುತ್ತಾ ಜನರು ಸಂಭ್ರಮಿಸುತ್ತಾರೆ. ಈ ವರ್ಷವೂ ಕೂಡ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ಮತ್ತು ನೀರನ್ನು ಉಳಿತಾಯ ಮಾಡುವ ಮೂಲಕ ಹಬ್ಬವನ್ನು ಆಚರಿಸಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಫೆಬ್ರವರಿ 27): ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಸಿಟಿ ಔಟ್ ಸ್ಕಟ್ಸ್ ನಲ್ಲಿ ಕೆಂಪೇಗೌಡ ಏರ್ಪೋಟ್ ನಿಂದ ಪ್ರಸಿದ್ದಿಯಾಗಿರುವ ಪ್ಯೂಚರ್ ಬೆಂಗಳೂರು (Bengaluru) ಅಂತಲೆ ಕರೆಸಿಕೊಳ್ಳುವ ಜಿಲ್ಲೆ. ಹೀಗಾಗಿ ಜಿಲ್ಲೆಗೆ ಬರಲು ಅಧಿಕಾರಿಗಳು ತುದ್ದಿಗಾಲಲ್ಲಿ ನಿಲ್ಲುತ್ತಿದ್ದು, ಡಿಮ್ಯಾಂಡ್ ಸಹ ಹಚ್ಚಿದೆ. ಇಷ್ಟು ಡಿಮ್ಯಾಂಡ್ ನಡುವೆಯೂ ಸಿಇಒ ಆಗಿ ಎರೆಡೂವರೆ ವರ್ಷದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಅನುರಾಧ ಕೆ ಎನ್ ಡಿಸಿಯಾಗಿ ಮುಂಬಡ್ತಿ ಪಡೆದಿದ್ದರೆ, ಬಂದ ಒಂದು ವರ್ಷಕ್ಕೆ ಜಿಲ್ಲಾಧಿಕಾರಿ ಬಸವರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಅಚ್ಚರಿ ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೇ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಈ ಜಾಗಕ್ಕೆ ಇದೀಗ ಸಚಿವ ಆಪ್ತ ಕಾರ್ಯದರ್ಶಿ ಸಿಇಒ ಆಗಿದ್ದ ಅನುರಾಧ ಅವರನ್ನೇ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಚಿವರ ಆಪ್ತ ಕಾರ್ಯದರ್ಶಿಗೆ ಎರಡು ಹುದ್ದೆ
ಹೌದು..ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಿಇಒ ಆಗಿ ಕಳೆದ ಎರಡೂವರೆ ವರ್ಷದಿಂದೆ ಕೆ ಎನ್ ಅನುರಾಧ ಅವರು ಅಧಿಕಾರ ಸ್ವೀಕರಿಸಿದ್ದರು. ಜೊತೆಗೆ ಕಳೆದ ಒಂದು ವರ್ಷದಿಂದ ಜಿಲ್ಲೆಗೆ ಡಿಸಿಯಾಗಿ ಎ ಬಿ ಬಸವರಾಜ್ ಅವರು ಬಂದಿದ್ದರು. ಡಿಸಿ ಮತ್ತು ಸಿಇಒ ಇಬ್ಬರು ಜಿಲ್ಲೆಯಲ್ಲಿ ಆಕ್ಟೀವ್ ಆಗಿ ಓಡಾಡಿಕೊಂಡು ಕೆಲಸ ಮಾಡುತ್ತಾ ಜನಮನ್ನಣೆ ಗಳಿಸಿದ್ದರು. ಆದ್ರೆ ಇದೀಗ ಡಿಸಿಯಾಗಿ ಬಂದ ಒಂದು ವರ್ಷಕ್ಕೆ ಬಸವರಾಜ್ ಅವರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜೊತೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಳೆದ ಎರೆಡೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಿಇಒ ಅನುರಾಧ ಅವರನ್ನ ನೇಮಕ ಮಾಡಲಾಗಿದೆ. ಇನ್ನು ಜಿಲ್ಲಾ ಪಂಚಾಯತಿಯ ಪ್ರಭಾರ ಸಿಇಒ ಆಗಿಯೂ ಅನುರಾಧ ಅವರನ್ನೇ ಮುಂದುವರೆಸಲಾಗಿದೆ. ಅನುರಾಧ ಅವರು ಸಚಿವ ಕೆ.ಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿಯಾಗಿದ್ದಾರೆ. ಹೀಗಾಗಿ ಅವರಿಗೆ ಈ ಭಾಗ್ಯ ದೊರೆತಿದೆ ಎಂದು ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.
ಒಂದೇ ವರ್ಷಕ್ಕೆ ಅದು ಸ್ಥಳ ತೋರಿಸದೇ ವರ್ಗಾವಣೆ ಮಾಡಿರುವುದಕ್ಕೆ ಬಸವರಾಜ್ ಶಾಕ್ ಆಗಿದ್ದಾರೆ. ಜೊತೆಗೆ ನೂತನ ಡಿಸಿಯಾಗಿ ನೇಮಕ ಜೊತೆಗೆ ಜಿಲ್ಲಾ ಪಂಚಾಯತಿ ಸಿಇಒ ಆಗಿಯೂ ಅನುರಾಧ ಅವರನ್ನ ಮುಂದುವರೆಸಿರುವುದು ಜಲ್ಲೆಯಲ್ಲಿ ಹಲವು ಚರ್ಚೆಗಳನ್ನ ಹುಟ್ಟುಹಾಕಿದೆ. ಜೊತೆಗೆ ನೂತನ ಡಿಸಿ ಕೆ ಎನ್ ಅನುರಾಧ ಅವರು ಸಚಿವ ಕೆಹೆಚ್ ಮುನಿಯಪ್ಪ ಅವರ ಆಪ್ತ ಕಾರ್ಯದರ್ಶಿ ಪತ್ನಿ ಅನ್ನೋ ಕಾರಣಕ್ಕೆ ಎರೆಡೂವರೆ ವರ್ಷದಿಂದ ಜಿಲ್ಲೆಯಲ್ಲೆ ಉನ್ನತ ಸ್ಥಾನದಲ್ಲಿ ಮುಂದುವರೆಸಿದ್ದು, ಇದೀಗ ಡಿಸಿಯಾಗಿ ಬಡ್ತಿ ಸಹ ನೀಡಿದ್ದಾರೆ ಅನ್ನೂ ಮಾತು ಸಹ ಕೇಳಿ ಬರುತ್ತಿವೆ. ಇನ್ನೂ ಜಿಲ್ಲೆಯಲ್ಲಿ ಈಗಾಗಲೇ ಸಚಿವರ ಕುಟುಂಬಸ್ಥರು ಮತ್ತು ಆಪ್ತರನ್ನ ಮಾತ್ರ ಉನ್ನತ ಹುದ್ದೇಗಳಿಗೆ ನೇಮಕ ಮಾಡ್ತಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬರ್ತಿದ್ದು, ಇದೀಗ ಡಿಸಿ ದಿಡೀರ್ ವರ್ಗಾವಣೆ ಮಾಡಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಇತ್ತೀಚೆಗಷ್ಟೆ ಅಧಿಕಾರಿಗಳಿಗೆ ಸ್ಥಾನ ತೋರಿಸದೆ ಎತ್ತಂಗಡಿ ಮಾಡುತ್ತಿದ್ದಾರೆ ಅಂತ ಹೈಕೋರ್ಟ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಡಿಸಿ ಬಸವರಾಜ್ ಗೆ ಯಾವುದೇ ಸ್ಥಾನ ತೋರಿಸದೆ ವರ್ಗಾವಣೆ ಮಾಡಿರುವುದು ಸರ್ಕಾರದ ನಡೆ ಬಗ್ಗೆ ನಾನಾ ರೀತಿ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೀದರ್, ಫೆಬ್ರವರಿ 27: ಅವಿರತ ಶ್ರಮಪಟ್ಟು, ಶ್ರದ್ಧೆಯಿಟ್ಟು ಮಾಡಿದರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿ ಚಿನ್ನದ ವಿದ್ಯಾರ್ಥಿಯಾಗಿದ್ದಾರೆ. ಪಶು ವೈದ್ಯಕೀಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನ (gold medals)ಬಾಚಿಕೊಂಡ ಉಡುಪಿಯ ಖುಷಿ, 6 ಚಿನ್ನದ ಪದಕ ಪಡೆದ ತುಮಕೂರಿನ ಭೂಮಿಕಾರ ಯಶೋಗಾಥೆ ಎಂತಹವರನ್ನೂ ಪ್ರೇರೇಪಿಸುತ್ತದೆ.
ಮೀನು ವ್ಯಾಪಾರಿಯ ಮಗಳು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ
ಉಡುಪಿಯ ಮಂದಾರ್ತಿ ಗ್ರಾಮದ ಖುಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ಪದವಿಯಲ್ಲಿ 16 ಚಿನ್ನದ ಪದಕವನ್ನ ಪಡೆದುಕೊಂಡು ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಪಾಸಾಗಿದ್ದಾರೆ. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ಖುಷಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್‌ನ ವಿದ್ಯಾರ್ಥಿನಿ ಖುಷಿ, ಚಿನ್ನದ ಪದಕ ಪಡೆಯುವ ನಿಟ್ಟಿನಲ್ಲಿ ಕಷ್ಟಪಟ್ಟು ಓದಿದ್ದಾರೆ. ಆದರೆ, 16 ಚಿನ್ನದ ಪದಕಗಳು ಒಲಿದು ಬರುತ್ತವೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಈ ವಿಷಯ ಗೊತ್ತಾದ ನಂತರ ‘ಖುಷಿ’ ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ ಎಂದು ಅವರು ಟಿವಿ9 ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.
ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡ ಭೂಮಿಕಾ
ಇನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ರೈತನ ಮಗಳು ಭೂಮಿಕಾ 6 ಚಿನ್ನದ ಪದಕ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಭೂಮಿಕಾ
ಭೂಮಿಕಾ ಅವರು 2024-25ನೇ ಸಾಲಿನಲ್ಲಿ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ ಬಿ.ಟೆಕ್ (ಹೈನು ತಂತ್ರಜ್ಞಾನ) ಪದವಿಯಲ್ಲಿ ಈ ಸಾಧನೆ ಮಾಡಿದ್ದಾರೆ. ತಂದೆ ಕೃಷಿ ಕಾಯಕ ಮಾಡುತ್ತಿದ್ದಾರೆ, ತಾಯಿ ಕೃಷಿ ಕಾಯಕದ ಜೊತೆಗೆ ಮನೆಯ ಕೆಲಸವನ್ನ ಕೂಡ ಮಾಡಿಕೊಂಡು ಮಕ್ಕಳ ಓದುಗೆ ಪ್ರೋತ್ಸಾಹ ನೀಡಿದ ಪರಿಣಾಮ ಇಂದು ಭೂಮಿಕಾ ಈ ಸಾಧನೆ ಮಾಡಲು ಸಾಧ್ಯವಾಗಿದೆ.
ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವಾಸೆ: ಭೂಮಿಕಾ
ತನಗೆ ಆರು ಚಿನ್ನ ಪದಕ ಸಿಕ್ಕಿರುವ ಖುಷಿಯನ್ನ ಹಂಚಿಕೊಂಡಿರುವ ಭೂಮಿಕಾ, ಕಾಲೇಜಿನಲ್ಲಿ ಪ್ರಾಧ್ಯಾಪಕರ ಉತ್ತಮ ಪಾಠ, ಮನೆಯಲ್ಲಿ ಉತ್ತಮ ಬೆಂಬಲ ಸಿಕ್ಕಿದ್ದರಿಂದ ನಿತ್ಯ ಆರೇಳು ತಾಸು ಓದುತ್ತಿದ್ದೆ. ಭವಿಷ್ಯದಲ್ಲಿ ಐಎಎಸ್ ಮಾಡಿ, ನಾಗರಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.
ಕಲಿಯುವ, ಸಾಧಿಸುವ ಛಲವಿದ್ದವರಿಗೆ ಯಾವುದು ಕಷ್ಟವಲ್ಲ. ಸಲೀಸು ಅನ್ನೋದಕ್ಕೆ ಈ ಚಿನ್ನದ ಹುಡುಗಿಯರೇ ಸಾಕ್ಷಿ. ಅಲ್ಲದೇ ಬಡತನ ಗುರಿ ಮುಟ್ಟೋಕೆ ಅಡ್ಡಿಯಾಗಲ್ಲ ಅನ್ನೋದಕ್ಕೆ ತಾಜಾ ನಿದರ್ಶನವಾಗಿದ್ದಾರೆ. ಅದೇನೇ ಇದ್ದರೂ ಈ ಚಿನ್ನದ ಹುಡುಗಿಯರ ಮತ್ತಷ್ಟು ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ.
‘ದೇವಸಸ್ಯ’ (Devasasya) ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ‘ಅನಂತ ಫಿಲ್ಮ್ಸ್’ ಬ್ಯಾನರ್ ಮೂಲಕ ಅನಂತಮೂರ್ತಿ ಎಂ. ಹೆಗಡೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಭಟ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೊನೆಯ ದಿನದ ಶೂಟಿಂಗ್ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಸುದ್ದಿಗೋಷ್ಠಿ ಮಾಡಲಾಯಿತು. ‘1995ರ ಕಾಲಘಟ್ಟದಲ್ಲಿ ನಡೆಯುವ ನಮ್ಮ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ’ ಎಂದು ಚಿತ್ರತಂಡ ಹೇಳಿದೆ.
ಈ ಸಿನಿಮಾದಲ್ಲಿ ಸಿದ್ದಿ ಸಮುದಾಯ ಸೆಲ್ವಿನ್ ದೇಸಾಯಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಊರಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಅವರಿಗೆ ಈ ಚಿತ್ರದ ಮೂಲಕ ಹೀರೋ ಆಗುವ ಅವಕಾಶ ಸಿಕ್ಕಿದೆ. 2 ವರ್ಷಗಳ ತರಬೇತಿ ಪಡೆದು ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಆಹಾನ್ ಗೌಡ ಹಾಗೂ ಬಿಂಬಿಕಾ ಜೆ. ರಾವ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ 150ಕ್ಕೂ ಹೆಚ್ಚು ಸಿದ್ದಿ ಕಲಾವಿದರು ನಟಿಸಿರುವುದು ವಿಶೇಷ.
‘ದೇವಸಸ್ಯ’ ಸಿನಿಮಾಗಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ 93 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಚಿತ್ರದ ಬಗ್ಗೆ ನಿರ್ಮಾಪಕ ಅನಂತಮೂರ್ತಿ ಹೆಗಡೆ ಅವರು ಮಾತನಾಡಿದರು. ‘ಮೊದಲಿಂದಲೂ ನನಗೆ ಸಿನಿಮಾ ಮೇಲೆ ಬಹಳ ಆಸಕ್ತಿ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಇಂತಹ ವಿಶಿಷ್ಟವಾದ ಸ್ಕ್ರಿಪ್ಟ್ ಸಿಕ್ಕಿರೋದು ನಮ್ಮ ಅದೃಷ್ಟ. ನಿರ್ದೇಶಕರು ಈ ಸಿನಿಮಾಗಾಗಿ 3 ವರ್ಷ ಕಷ್ಟಪಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಕೆಲವು ಸಿನಿಮಾ, ಸೀರಿಯಲ್‌ಗಳಿಗೆ ಬರಹಗಾರನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಕಾರ್ತಿಕ್ ಭಟ್ ಅವರು ಮೊದಲ ಬಾರಿಗೆ ನಿರ್ದೇಶಕನಾಗಿ ‘ದೇವಸಸ್ಯ’ ಸಿನಿಮಾ ಮಾಡುತ್ತಿದ್ದಾರೆ. ‘ಶಿರಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಸಿನಿಮಾದಲ್ಲಿ ಹೇಳಲಿದ್ದೇವೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು’ ಎಂದು ಅವರು ಹೇಳಿದರು.
ನಟ ಸೆಲ್ವಿನ್ ದೇಸಾಯಿ ಮಾತನಾಡಿ, ‘ನಾನು ಊರಲ್ಲಿ ಟ್ರ‍್ಯಾಕ್ಟರ್ ಓಡಿಸಿಕೊಂಡಿದ್ದೆ. ನಿರ್ದೇಶಕರು ಬಂದು ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಅಂತ ಕೇಳಿದರು. ನನ್ನಂಥವನಿಂದ ಸಾಧ್ಯವಾ ಅಂತ ನಕ್ಕಿದ್ದೆ. ನಂತರ ಅವರೇ ಕರೆದುಕೊಂಡು ಹೋಗಿ ಅಭಿನಯ, ಸಾಹಸ ಕಲಿಸಿದರು’ ಎಂದರು. ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಗೀತಾ ಸಿದ್ಧಿ ಮುಂತಾದವರ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾಗೆ ಯಶವಂತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಹರಿ ಅಜಯ್ ಅವರು ಸಂಗೀತ ನೀಡಿದ್ದಾರೆ. ಶ್ರೀಕಾಂತ್ ಅವರು ಸಂಕಲನ ಮಾಡುತ್ತಿದ್ದಾರೆ.
‘ದೇವಸಸ್ಯ’ (Devasasya) ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ‘ಅನಂತ ಫಿಲ್ಮ್ಸ್’ ಬ್ಯಾನರ್ ಮೂಲಕ ಅನಂತಮೂರ್ತಿ ಎಂ. ಹೆಗಡೆ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಭಟ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೊನೆಯ ದಿನದ ಶೂಟಿಂಗ್ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಸುದ್ದಿಗೋಷ್ಠಿ ಮಾಡಲಾಯಿತು. ‘1995ರ ಕಾಲಘಟ್ಟದಲ್ಲಿ ನಡೆಯುವ ನಮ್ಮ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ’ ಎಂದು ಚಿತ್ರತಂಡ ಹೇಳಿದೆ.
ಈ ಸಿನಿಮಾದಲ್ಲಿ ಸಿದ್ದಿ ಸಮುದಾಯ ಸೆಲ್ವಿನ್ ದೇಸಾಯಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಊರಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಅವರಿಗೆ ಈ ಚಿತ್ರದ ಮೂಲಕ ಹೀರೋ ಆಗುವ ಅವಕಾಶ ಸಿಕ್ಕಿದೆ. 2 ವರ್ಷಗಳ ತರಬೇತಿ ಪಡೆದು ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಆಹಾನ್ ಗೌಡ ಹಾಗೂ ಬಿಂಬಿಕಾ ಜೆ. ರಾವ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ 150ಕ್ಕೂ ಹೆಚ್ಚು ಸಿದ್ದಿ ಕಲಾವಿದರು ನಟಿಸಿರುವುದು ವಿಶೇಷ.
‘ದೇವಸಸ್ಯ’ ಸಿನಿಮಾಗಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ 93 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಚಿತ್ರದ ಬಗ್ಗೆ ನಿರ್ಮಾಪಕ ಅನಂತಮೂರ್ತಿ ಹೆಗಡೆ ಅವರು ಮಾತನಾಡಿದರು. ‘ಮೊದಲಿಂದಲೂ ನನಗೆ ಸಿನಿಮಾ ಮೇಲೆ ಬಹಳ ಆಸಕ್ತಿ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಇಂತಹ ವಿಶಿಷ್ಟವಾದ ಸ್ಕ್ರಿಪ್ಟ್ ಸಿಕ್ಕಿರೋದು ನಮ್ಮ ಅದೃಷ್ಟ. ನಿರ್ದೇಶಕರು ಈ ಸಿನಿಮಾಗಾಗಿ 3 ವರ್ಷ ಕಷ್ಟಪಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಕೆಲವು ಸಿನಿಮಾ, ಸೀರಿಯಲ್‌ಗಳಿಗೆ ಬರಹಗಾರನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಕಾರ್ತಿಕ್ ಭಟ್ ಅವರು ಮೊದಲ ಬಾರಿಗೆ ನಿರ್ದೇಶಕನಾಗಿ ‘ದೇವಸಸ್ಯ’ ಸಿನಿಮಾ ಮಾಡುತ್ತಿದ್ದಾರೆ. ‘ಶಿರಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಸಿನಿಮಾದಲ್ಲಿ ಹೇಳಲಿದ್ದೇವೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು’ ಎಂದು ಅವರು ಹೇಳಿದರು.
ನಟ ಸೆಲ್ವಿನ್ ದೇಸಾಯಿ ಮಾತನಾಡಿ, ‘ನಾನು ಊರಲ್ಲಿ ಟ್ರ‍್ಯಾಕ್ಟರ್ ಓಡಿಸಿಕೊಂಡಿದ್ದೆ. ನಿರ್ದೇಶಕರು ಬಂದು ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಅಂತ ಕೇಳಿದರು. ನನ್ನಂಥವನಿಂದ ಸಾಧ್ಯವಾ ಅಂತ ನಕ್ಕಿದ್ದೆ. ನಂತರ ಅವರೇ ಕರೆದುಕೊಂಡು ಹೋಗಿ ಅಭಿನಯ, ಸಾಹಸ ಕಲಿಸಿದರು’ ಎಂದರು. ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಗೀತಾ ಸಿದ್ಧಿ ಮುಂತಾದವರ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾಗೆ ಯಶವಂತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಹರಿ ಅಜಯ್ ಅವರು ಸಂಗೀತ ನೀಡಿದ್ದಾರೆ. ಶ್ರೀಕಾಂತ್ ಅವರು ಸಂಕಲನ ಮಾಡುತ್ತಿದ್ದಾರೆ.
ವಿಜಯಪುರ, ಫೆಬ್ರವರಿ 27: ವಿಜಯಪುರದಲ್ಲಿ ಜೆಡಿಎಸ್ ಬೆಳ್ಳಿಹಬ್ಬ ಕಾರ್ಯಕ್ರಮ ನಡೆಯುತ್ತಿರುವಾಗ ಕಾರ್ಯಕರ್ತನೊಬ್ಬ ಪರವಾನಗಿ ಇರುವ ಪಿಸ್ತೂಲ್ ಜೇಬಲ್ಲಿಟ್ಟುಕೊಂಡು ಬಂದಿದ್ದಾರೆ. ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡು ವೇದಿಕೆ ಮುಂಭಾಗ ಬಂದಾಗ, ಭದ್ರತೆಯ ಕಾರಣಕ್ಕೆ ಪೊಲೀಸರು ಆತನನ್ನು ಹೊರ ಕಳುಹಿಸಿದ್ದಾರೆ. ಸದ್ಯ ಜೆಡಿಎಸ್ ಕಾರ್ಯಕರ್ತ ಪಿಸ್ತೂಲ್ನೊಂದಿಗೆ ಬಂದ ವಿಡಿಯೋ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, (ಫೆಬ್ರವರಿ 27): ಸಿದ್ದರಾಮಯ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ (Guaranatee Scheme) ಗೃಹ ಲಕ್ಷ್ಮೀ ಯೋಜನೆ ಸಹ ಒಂದಾಗಿದ್ದು, ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡಲಾಗುತ್ತಿದೆ. ಆದ್ರೆ, ಸತ್ತವರ ಅಕೌಂಟ್ಗೆ (Bank Account) ಗೃಹ ಲಕ್ಷ್ಮೀ ಯೋಜನೆ ಹಣ ಪಾವತಿಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಈ ಯೋಜನೆ ಇದೀಗ ಸರ್ಕಾರವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನಲಾಗಿದೆ. ಹೀಗಾಗಿ ಸರ್ಕಾರ, ಸತ್ತವರ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮೀ ಹಣವನ್ನು ವಾಪಸ್ ಪಡೆದುಕೊಳ್ಳಲು ಮುಂದಾಗಿದೆ.
ಬರೋಬ್ಬರಿ 69 ಸಾವಿರ ಸತ್ತವರ ಬ್ಯಾಂಕ್ ಖಾತೆಗಳಿಗೆ 79 ಕೋಟಿ ರೂ. ಗೃಹಲಕ್ಷ್ಮಿ ಹಣ ಪಾವತಿ ಆಗಿರುವುದನ್ನು ಸರ್ಕಾರ ಪತ್ತೆ ಮಾಡಿದ್ದು, ಈ ಹಣವನ್ನು ಇದೀಗ ವಾಪಸ್ ಪಡೆದುಕೊಳ್ಳಲು ಸರ್ಕಾರ, ಬ್ಯಾಂಕ್ ಅಧಿಕಾರಿಗಳ ಜೊತೆಯೂ ಸಂಪರ್ಕ ಸಾಧಿಸಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಒಳ್ಳೆಯ ಉದ್ಯೋಗ, ಜತೆಗೆ ಸಂಪಾದನೆ ಕೂಡ ಚೆನ್ನಾಗಿದ್ರೆ ಖರ್ಚು ಕೂಡ ಅಷ್ಟೇ ಇರುತ್ತದೆ. ಸಂಪಾದನೆ ಅಥವಾ ಸಂಬಳ ಹೆಚ್ಚಾದಂತೆ, ಖರ್ಚು ಹಾಗೂ ನಿರೀಕ್ಷೆಗಳು ಕೂಡ ಇರುತ್ತದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಜೀವನ ವೆಚ್ಚ (Cost of Living) ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದೀಗ ಬೆಂಗಳೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಮೀನಲ್ ಗೋಯಲ್ ಅವರು ಹಂಚಿಕೊಂಡಿರುವ ತಮ್ಮ ಕುಟುಂಬದ ಮಾಸಿಕ ಖರ್ಚಿನ ಪಟ್ಟಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಕೇವಲ ಇಬ್ಬರು ಇರುವ ಕುಟುಂಬಕ್ಕೆ ತಿಂಗಳಿಗೆ 82,000 ರೂಪಾಯಿ ಖರ್ಚಾಗುತ್ತದೆ ಎಂದು ಅವರು ವಿವರ ನೀಡಿದ್ದಾರೆ.
ಮೀನಲ್ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಖರ್ಚಿನ ಪಟ್ಟಿ ನೋಡಿದ್ರೆ ಶಾಕ್ ಆಗುವುದು ಖಂಡಿತ. 2 ಬಿಹೆಚ್ಕೆ ಮನೆಯ ಬಾಡಿಗೆ 37,000 ರೂ, ಆಹಾರ ಮತ್ತು ದಿನಸಿ 15,000 ರೂ., ವಾಹನದ ಖರ್ಚು 5,000 ರೂ., ವಿದ್ಯುತ್, ನೀರು ಮತ್ತು ಇತರ ಬಿಲ್‌ಗಳು 4 ಸಾವಿರ ರೂ. ಮನೆಗೆಲಸದ ಸಹಾಯಕಿಗೆ 4,000 ರೂ. ಮನೋರಂಜನೆ, ಜಿಮ್ ಮತ್ತು ಹೊರಗಿನ ಊಟ 17,000 ರೂ. ಒಟ್ಟು ಖರ್ಚು ತಿಂಗಳಿಗೆ 82,000 ರೂ., ಇದು ವರ್ಷಕ್ಕೆ ಸುಮಾರು 9.84 ಲಕ್ಷ ರೂ. ಆಗುತ್ತದೆ ಎಂದು ಹೇಳಿದ್ದಾರೆ.
ಈ ಪೋಸ್ಟ್ ನೋಡಿದ ನೆಟ್ಟಿಗರು “ಸಿಲಿಕಾನ್ ಟ್ಯಾಕ್ಸ್” ಅನ್ವಯವಾಗುತ್ತಿದೆ ಎಂದು ತಮಾಷೆ ಮಾಡಿದ್ದಾರೆ. ತಿಂಗಳಿಗೆ 25,000 ರೂ. ಸಂಪಾದಿಸುವವರೂ ಬೆಂಗಳೂರಿನಲ್ಲಿ ಬದುಕುತ್ತಿದ್ದಾರೆ. ಖರ್ಚು ಮಾಡುವುದು ನಮ್ಮ ಜೀವನಶೈಲಿಗೆ ಬಿಟ್ಟಿದ್ದು ಎಂದು ಕೆಲವರು ಹೇಳಿದ್ದಾರೆ. 90 ಸಾವಿರ ಖರ್ಚು ಮಾಡುವ ಬದಲು 45 ಸಾವಿರಕ್ಕೆ ಮಿತಿಗೊಳಿಸಿ, ಉಳಿದ ಹಣವನ್ನು ಎಸ್‌ಐಪಿ (SIP) ಮಾಡಿದರೆ 5 ವರ್ಷದಲ್ಲಿ ದೊಡ್ಡ ಮೊತ್ತ ಸೇರಿಸಬಹುದು ಎಂದು ಹಣಕಾಸು ಸಲಹೆ ನೀಡಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್ ಅಥವಾ ಇತರೆ ಐಟಿ ಹಬ್‌ಗಳಲ್ಲಿ 2BHK ಮನೆಗೆ 37,000 ರೂ. ಬಾಡಿಗೆ ಸಾಮಾನ್ಯವಾಗಿದೆ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ಹೊರಗೆ ಹೆಚ್ಚು ತಿನ್ನುವುದು ಮತ್ತು ಜಿಮ್‌ನಲ್ಲಿ ಖರ್ಚು ಮಾಡುವುದು. ನೀವು ವೆಚ್ಚದಲ್ಲಿ ಯಾವುದನ್ನಾದರೂ ಕಡಿತಗೊಳಿಸಬಹುದು ಎಂದು ಒಬ್ಬರು ಹೇಳಿದ್ದಾರೆ.