ಕ್ಷುಲ್ಲಕ ಕಾರಣಕ್ಕೆ ಹರಿದ ನೆತ್ತರು: ಮದ್ಯಕ್ಕೆ ನೀರು ತರಲು ನಿರಾಕರಿಸಿದ್ದಕ್ಕೆ 9 ವರ್ಷದ ಬಾಲಕನಿಗೆ ಗುಂಡು ಹಾರಿಸಿ ಕೊಲೆ – Kannada News | Kasganj Boy Shot Dead for Refusing Water for Alcohol: Naming Ceremony Tragic
ಗುಂಡಿನ ದಾಳಿ ಸಾಂದರ್ಭಿಕ ಚಿತ್ರ Image Credit source: Shutterstock ಲಕ್ನೋ, ಮೇ 03: ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಸಂಭ್ರಮದ ಮನೆಯೊಂದು ಮದ್ಯದ ಅಮಲಿನಿಂದಾಗಿ ಕ್ಷಣಮಾತ್ರದಲ್ಲಿ ಸ್ಮಶಾನ ಮೌನಕ್ಕೆ ಸಾಕ್ಷಿಯಾದ ದಾರುಣ ಘಟನೆ ನಡೆದಿದೆ. ಕೇವಲ ನೀರು ತರಲು ನಿರಾಕರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಒಂಬತ್ತು ವರ್ಷದ ಬಾಲಕನನ್ನು ಗುಂಡಿಕ್ಕಿ ಕೊಲೆ(Murder) ಮಾಡಲಾಗಿದೆ. ಕಾಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ಠಾಣೆ ವ್ಯಾಪ್ತಿಯ ಯಾಕುತ್‌ಗಂಜ್ ಗ್ರಾಮದಲ್ಲಿ ಕಳೆದ ಶುಕ್ರವಾರದಂದು ನಾಮಕರಣ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಸಂಬಂಧಿಕರು ಮತ್ತು ಗ್ರಾಮಸ್ಥರು…