ಭಾರತದಲ್ಲಿ ಚೀನೀ ಸ್ಮಾರ್ಟ್​ಫೋನ್​ಗಳ ಆದಾಯ ಮೊದಲ ಬಾರಿಗೆ ಕುಸಿತ; ಐಫೋನ್, ಸ್ಯಾಮ್ಸುಂಗ್​ಗೆ ಧಕ್ಕೆ ಇಲ್ಲ – Kannada News | Chinese smartphone companies see first ever revenue drop in India

ನವದೆಹಲಿ, ಫೆಬ್ರುವರಿ 26: ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಹಲವಾರು ವರ್ಷಗಳಿಂದ ತಮ್ಮ ಬಿಗಿಮುಷ್ಟಿಗಳಲ್ಲಿ ಇಟ್ಟುಕೊಂಡಿದ್ದ ಚೀನೀ ಕಂಪನಿಗಳ (chinese smarphone companies) ಪಾರಮ್ಯ ಮೊದಲ ಬಾರಿಗೆ ದುರ್ಬಲಗೊಂಡಿದೆ. ಭಾರತದಲ್ಲಿ ಅದು ನಿರ್ಮಿಸಿಕೊಂಡಿದ್ದ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಚೀನೀ ಬ್ರ್ಯಾಂಡ್ ಸ್ಮಾರ್ಟ್​ಫೋನ್ ಕಂಪನಿಗಳ ಆದಾಯದಲ್ಲಿ ಕುಸಿತವಾಗಿದೆ. ಶವೋಮಿ, ಓಪ್ಪೋ, ಒನ್​ಪ್ಲಸ್ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಚೀನೀ ಕಂಪನಿಗಳು ವಾರ್ಷಿಕ ಆದಾಯದಲ್ಲಿ ಇಳಿಕೆ ಕಂಡಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ.

ವರದಿ ಪ್ರಕಾರ, ಭಾರತದಲ್ಲಿ ಬ್ಯುಸಿನೆಸ್ ಮಾಡುತ್ತಿರುವ ಚೀನಾದ 9 ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳ ಒಟ್ಟಾರೆ ಆದಾಯ 2024-25ರಲ್ಲಿ ಶೇ. 4.5ರಷ್ಟು ಕಡಿಮೆ ಆಗಿದೆ. ಹಿಂದಿನ ವರ್ಷದಲ್ಲಿ ಈ ಕಂಪನಿಗಳು ಶೇ. 42ರಷ್ಟು ಆದಾಯ ಹೆಚ್ಚಳ ಕಂಡಿದ್ದವು.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

ಒಟ್ಟಾರೆ ಫೋನ್ ಮಾರಾಟ ಸಂಖ್ಯೆಯಲ್ಲಿ ಚೀನೀ ಪ್ರಾಬಲ್ಯ ಮುಂದುವರಿಕೆ

ಅತಿಹೆಚ್ಚು ಸ್ಮಾರ್ಟ್​ಫೋನ್​ಗಳು ಮಾರಾಟ ಆಗುತ್ತಿರುವುದು ಚೀನೀ ಬ್ರ್ಯಾಂಡ್​ನವೇ. 2024-25ರಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳಲ್ಲಿ ಚೀನೀ ಕಂಪನಿಗಳ ಪಾಲು ಶೇ. 73-75ರಷ್ಟು ಇದೆ. ಆದರೆ, ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು ಕಡಿಮೆ ಆಗಿದೆ. 2023ರಲ್ಲಿ ಒಟ್ಟಾರೆ ಮಾರಾಟ ಮೌಲ್ಯದಲ್ಲಿ ಚೀನೀ ಪಾಲು ಶೇ. 54 ಇತ್ತು. 2024ರಲ್ಲಿ ಅದು ಶೇ. 48ಕ್ಕೆ ಇಳಿಕೆ ಆಗಿದೆ.

20,000 ರೂಗಿಂತ ಕಡಿಮೆ ಬೆಲೆಯ ಸ್ಮಾರ್ಟ್​​ಫೊನ್​ಗಳ ಮಾರಾಟ ಮೌಲ್ಯದಲ್ಲಿ ಚೀನೀ ಕಂಪನಿಗಳ ಪಾಲು 2023ರಲ್ಲಿ ಶೇ. 38 ಇದ್ದದ್ದು 2025ರಲ್ಲಿ ಶೇ. 29ಕ್ಕೆ ಇಳಿದಿದೆ.

ಬಜೆಟ್ ಫೋನ್​ಗಳ ಮಾರಾಟ ಪ್ರಮಾಣ ಕಡಿಮೆ ಆಗುತ್ತಿದೆ. ಹೆಚ್ಚಿನ ಮೌಲ್ಯದ ಸ್ಮಾರ್ಟ್​ಫೋನ್​ಗಳ ಮಾರಾಟ ಏರುತ್ತಿರುವುದನ್ನು ಇದು ತೋರಿಸುತ್ತದೆ. 45,000 ರೂಗಿಂತ ಹೆಚ್ಚಿನ ಮೌಲ್ಯದ ಪ್ರೀಮಿಯಮ್ ಸೆಗ್ಮೆಂಟ್ ಸ್ಮಾರ್ಟ್​ಫೋನ್​ಗಳ ರೀಟೇಲ್ ಮಾರಾಟ ಮೌಲ್ಯ 2023ರಲ್ಲಿ ಶೇ. 36 ಇದ್ದದ್ದು 2025ರಲ್ಲಿ ಶೇ. 47ಕ್ಕೆ ಏರಿದೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಉನ್ನತ ಸ್ತರದ ಫೋನ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರ ಲಾಭ ಆ್ಯಪಲ್ ಮತ್ತು ಸ್ಯಾಮ್ಸುಂಗ್ ಕಂಪನಿಗಳಿಗೆ ದಕ್ಕುತ್ತಿದೆ. 2024-25ರಲ್ಲಿ ಭಾರತದಲ್ಲಿ ಆ್ಯಪಲ್​ನ ಮಾರಾಟ ಆದಾಯ ಶೇ. 18ರಷ್ಟು ಹೆಚ್ಚಿದರೆ, ಸ್ಯಾಮ್ಸುಂಗ್ ಶೇ. 12ರಷ್ಟು ಹೆಚ್ಚು ಮಾರಾಟ ಕಂಡಿದೆ.

ಚೀನೀ ಕಂಪನಿಗಳ ಪೈಕಿ ವಿವೊ ಉತ್ತಮ ಸಾಧನೆ ತೋರಿದೆ. ಶೇ. 11ರಷ್ಟು ಆದಾಯ ಏರಿಕೆ ಕಂಡಿದೆ. ಪ್ರೀಮಿಯಮ್ ಸೆಗ್ಮೆಂಟ್​ನಲ್ಲಿ ಇದರ ಪ್ರಬಲ ಉಪಸ್ಥಿತಿ ಇರುವುದರಿಂದ ಆದಾಯ ಕಾಯ್ದುಕೊಳ್ಳಲು ಅದಕ್ಕೆ ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮೂರು ದಾರಿ ಸೇರುವ ಜಾಗದಲ್ಲಿಟ್ಟ ನಿಂಬೆಹಣ್ಣು ತುಳಿದ್ರೆ ಅಪಾಯನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Crossroads Rituals: Understanding the Beliefs Behind Lemons and Offerings

ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ, ನಿಂಬೆಹಣ್ಣು, ರಂಗೋಲಿ, ಅರಿಶಿನ-ಕುಂಕುಮ, ಕುಂಬಳಕಾಯಿ, ತೆಂಗಿನಕಾಯಿ, ದೀಪಗಳು ಅಥವಾ ಸಣ್ಣ ಮಡಕೆಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಮಾಡಿರುವುದನ್ನು ಸಾಮಾನ್ಯವಾಗಿ ಗಮನಿಸಿರುತ್ತೀರಿ. ಇಂತಹ ಸನ್ನಿವೇಶಗಳನ್ನು ನೋಡಿದಾಗ, ಇದು ಶುಭವೇ ಅಥವಾ ಅಶುಭವೇ, ಇದನ್ನು ನೋಡುವುದು ಒಳ್ಳೆಯದೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಆಚರಣೆಗಳ ಹಿಂದಿನ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ದೃಷ್ಟಿ ತೆಗೆಯುವುದು:

ಈ ರೀತಿಯ ಪೂಜೆಗಳನ್ನು ಮಾಡುವ ಪ್ರಮುಖ ಕಾರಣಗಳಲ್ಲಿ ದೃಷ್ಟಿ ತೆಗೆಯುವುದು ಒಂದು. ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ ದೃಷ್ಟಿ ತೆಗೆಯುವುದು ಸಾಮಾನ್ಯ. ಕೆಲವರು ಸುತ್ತಲೂ ಸಗಣಿ ಹಾಕಿ ಸಗಣಿ ದೀಪಗಳನ್ನು ಸಹ ಇಟ್ಟಿರುತ್ತಾರೆ. ಇದು ಒಂದು ರೀತಿಯ ದೃಷ್ಟಿ ನಿವಾರಣೆಯ ವಿಧಾನ.

ವಾಹನ ಅಪಘಾತ:

ಎರಡನೆಯದಾಗಿ, ವಾಹನ ಅಪಘಾತಗಳು ನಡೆದ ಸ್ಥಳಗಳಲ್ಲಿಯೂ ಇಂತಹ ಪೂಜೆಗಳನ್ನು ಮಾಡಲಾಗುತ್ತದೆ. ಅಪಘಾತದಿಂದ ತಪ್ಪಿಸಿಕೊಂಡು ಬಂದಾಗ ಅಥವಾ ಸಣ್ಣಪುಟ್ಟ ಗಾಯಗಳಾದಾಗ, ಹಿರಿಯರು ಅಪಘಾತ ಸಂಭವಿಸಿದ ಜಾಗದಲ್ಲಿ ಪೂಜೆ ಮಾಡಿಸಲು ಸಲಹೆ ನೀಡುತ್ತಾರೆ. ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೂ ಈ ಪೂಜೆಗಳನ್ನು ಮಾಡುವುದುಂಟು.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ರೋಗರುಜಿನಗಳ ನಿವಾರಣೆ:

ಮೂರನೆಯ ಪ್ರಮುಖ ಕಾರಣವೆಂದರೆ ರೋಗರುಜಿನೆಗಳ ನಿವಾರಣೆ. ಪದೇ ಪದೇ ಅನಾರೋಗ್ಯ ಕಾಡುತ್ತಿದ್ದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದಿದ್ದಾಗ, ಅಥವಾ ನಿರಾಸಕ್ತಿ, ಜವಾಬ್ದಾರಿರಹಿತ ವರ್ತನೆ, ಸರಿಯಾಗಿ ಸ್ಪಂದಿಸದಿರುವುದು, ನೆನಪಿನ ಶಕ್ತಿ ಕಳೆದುಕೊಳ್ಳುವುದು ಮುಂತಾದ ಸಮಸ್ಯೆಗಳಿರುವಾಗ ದೇಹದಲ್ಲಿನ ಋಣಾತ್ಮಕ ಶಕ್ತಿಗಳನ್ನು ಅಥವಾ ದುಷ್ಟ ಶಕ್ತಿಗಳನ್ನು ಹೊರಹಾಕಲು ಈ ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ, ಆ ದಾರಿಯಲ್ಲಿ ನಾವು ಸಾಗಿದಾಗ, ಆ ವಸ್ತುಗಳನ್ನು ತುಳಿದಾಗ ಅಥವಾ ಸ್ಪರ್ಶಿಸಿದಾಗ ನಮಗೆ ಏನಾದರೂ ತೊಂದರೆಯಾಗುತ್ತದೆಯೇ? ಆದರೆ, ಈ ಆಚರಣೆಗಳಿಂದ ಇನ್ನೊಬ್ಬ ವ್ಯಕ್ತಿಗಳಿಗೆ ಯಾವುದೇ ನಕಾರಾತ್ಮಕ ಶಕ್ತಿಗಳು ವರ್ಗಾವಣೆಯಾಗುವುದಿಲ್ಲ. ಹಾಗಾಗಿ, ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ತೆಗೆದುಕೊಳ್ಳುವ ಅಗತ್ಯವಿಲ್ಲ. ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ರಸ್ತೆಗಳಲ್ಲಿ ಮಾಡಿದ ಪೂಜೆಯ ನಕಾರಾತ್ಮಕ ಶಕ್ತಿಗಳು ಸ್ವಲ್ಪ ಸಮಯದಲ್ಲೇ ಭೂಮಿಗೆ ಲೀನವಾಗಿ, ಪಂಚಭೂತಗಳಲ್ಲಿ ಸೇರಿಹೋಗುತ್ತವೆ. ಇದರಿಂದ ಬೇರೆಯವರಿಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:22 am, Thu, 26 February 26

Source link

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್​​: ತಲೆಮರೆಸಿಕೊಂಡ ಸ್ವಯಂ ಘೋಷಿತ ದೇವಮಾನವ? – Kannada News | Self Proclaimed Godman Mallikarjuna Mutya Absconds After POCSO Case Filed

ಮಲ್ಲಿಕಾರ್ಜುನ ಮುತ್ಯಾImage Credit source: Google

ಯಾದಗಿರಿ, ಫೆಬ್ರವರಿ 26: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತನೆ ಹಿನ್ನೆಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಂಧನದ ಭೀತಿ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಸುದ್ದಿ ಹರಿದಾಡಿವೆ. ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾರಣ ಸ್ವಯಂ ಘೋಷಿತ ದೇವಮಾನವನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಪೊಲೀಸರಿಂದ ಸ್ಥಳ ಮಹಜರು


ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಹಿನ್ನೆಲೆ ಮಹಲ್ ರೋಜಾದಲ್ಲಿರುವ ಮಠದಲ್ಲಿ ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮುತ್ಯಾ ಮಠದ ಎಲ್ಲಾ ಕೋಣೆಗಳಲ್ಲಿ ಮಹಜರು ನಡೆಸಲಾಗಿದೆ. ಪ್ರಕರಣದ ತನಿಖೆಗೆ ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣನವರ ನೇಮಕ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ನೋಟಿಸ್​ ನೀಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

ಭಕ್ತರ ಆತಂಕ

ಮಲ್ಲಿಕಾರ್ಜುನ ಮುತ್ಯಾನ ಮೇಲೆ ಪೋಕ್ಸೋ ಕೇಸ್ ಹಿನ್ನಲೆ ಮಠದತ್ತ ಭಕ್ತರ ದಂಡೇ ಆಗಮಿಸುತ್ತಿದೆ. ಮುತ್ಯಾನ ಆಶೀರ್ವಾದದಿಂದ ನಮಗೆ ಒಳ್ಳೆಯದಾಗಿದೆ. ಅವರು ಆ ರೀತಿ ಕೆಲಸ ಮಾಡುವ ವ್ಯಕ್ತಿ ಅಲ್ಲ. ಮುತ್ಯಾ ಮತ್ತು ಮಠಕ್ಕೆ ಕಳಂಕ ತರುವ ಕೆಲಸ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ತಪ್ಪಾಗಿ ಬಿಂಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತಾವು ಪೊಲೀಸ್​​ ದೂರು ನೀಡಲಿದ್ದು, ಕ್ರಮವಾಗದಿದ್ದರೆ ಮುಂದೇನು ಎಂಬ ಬಗ್ಗೆ ನಿರ್ಧಾರ ಮಾಡೋದಾಗಿ ಭಕ್ತರು ತಿಳಿಸಿದ್ದಾರೆ.

‘ಮುತ್ಯಾ ಎಲ್ಲೂ ಪರಾರಿ ಆಗಿಲ್ಲ’

ವೈರಲ್​​ ಆಗಿರುವ ವಿಡಿಯೋದಲ್ಲಿರುವ ಅಪ್ರಾಪ್ತ ಬಾಲಕಿ ಪೋಷಕರು ಮಲ್ಲಿಕಾರ್ಜುನ್​​ ಮುತ್ಯಾ ಸಂಬಂಧಿಕರು. ಹೀಗಾಗಿ ಮಠಕ್ಕೆ ಬಂದಾಗ ಬಾಲಕಿ ಜತೆ ಸಹೋದರನ ರೀತಿ ಪ್ರೀತಿ ತೋರಿದ್ದಾರೆ. ಮಗಳು ಖುಷಿಯಿಂದ ಇದ್ದ ಕಾರಣಕ್ಕೆ ಕುಟುಂಬ ಸಮೇತ ಮಠಕ್ಕೆ ಬಂದ ಬಾಲಕಿ ತಂದೆಯೇ ವಿಡಿಯೋ ಮಾಡಿದ್ದಾರೆ. ಆದ್ರೆ ವಿಡಿಯೋವನ್ನು ಕೆಟ್ಟ ದೃಷ್ಟಿಯಿಂದ ಬಿಂಬಿಸಲಾಗಿದೆ. ನನ್ನ ಸಹೋದರನ ವಿರುದ್ಧ ಕೇಸ್​ ದಾಖಲಿಸಿದ್ದನ್ನು ಖಂಡಿಸುತ್ತೇವೆ. ಮುತ್ಯಾ ಎಲ್ಲೂ ಪರಾರಿ ಆಗಿಲ್ಲ, ಬೇರೆ ಬೇರೆ ಮಠಗಳಿಗೆ ಹೋಗ್ತಿದ್ದಾರೆ. ನಾವು ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ಪರಾರಿ ಆಗುತ್ತೇವೆ ಎಂದು ಮಲ್ಲಿಕಾರ್ಜುನ ಮುತ್ಯಾ ಸಹೋದರ ಪರಶುರಾಮ ಮುತ್ಯಾ ಟಿವಿ9ಗೆ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Holi Vastu Tips: ಹೋಳಿ ಹಬ್ಬಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ಹೊರ ಹಾಕಿ – Kannada News | Holi Vastu Tips: Clear Negativity, Attract Wealth and Luck for New Beginnings

ಹೋಳಿ ಹಬ್ಬವು ಬಣ್ಣಗಳ ಸಂಭ್ರಮ ಮಾತ್ರವಲ್ಲ, ಅದು ಬದುಕಿನಲ್ಲಿ ಹೊಸ ಚೈತನ್ಯವನ್ನು ತುಂಬುವ ಮಹತ್ವದ ಪರಿವರ್ತನೆಯ ಸಮಯವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ಮನೆಯನ್ನು ಕೇವಲ ಹೊರಗಿನಿಂದ ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ, ಮನೆಯೊಳಗೆ ಅಡಗಿರುವ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುವುದು ಅತ್ಯಗತ್ಯ.

ಮನೆಯಲ್ಲಿ ಸಂಗ್ರಹವಾಗಿರುವ ಅನಗತ್ಯ ವಸ್ತುಗಳು ನಮ್ಮ ಏಕಾಗ್ರತೆಯನ್ನು ಕುಗ್ಗಿಸಿ, ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು. ಉದಾಹರಣೆಗೆ, ಮನೆಯಲ್ಲಿ ಒಣಗಿದ ಅಥವಾ ಸತ್ತ ಸಸ್ಯಗಳು ಇರುವುದು ದುಃಖ ಮತ್ತು ಕುಂಠಿತ ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳ ಬದಲಿಗೆ ತುಳಸಿ ಅಥವಾ ಮನಿ ಪ್ಲಾಂಟ್‌ನಂತಹ ಹಸಿರು ಗಿಡಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಅದೇ ರೀತಿ, ಉಪಯೋಗಕ್ಕೆ ಬಾರದ ಹಳೆಯ ಮತ್ತು ಹರಿದ ಪಾದರಕ್ಷೆಗಳು ಜೀವನದ ಕಷ್ಟ ಮತ್ತು ಹೋರಾಟವನ್ನು ಪ್ರತಿನಿಧಿಸುವುದರಿಂದ, ಅವುಗಳನ್ನು ಮನೆಯಿಂದ ಹೊರಹಾಕುವುದು ಒಳಿತು.

ಮನೆಯಲ್ಲಿ ಶಕ್ತಿಯ ಹರಿವು ಸುಗಮವಾಗಿರಲು ಒಡೆದ ಕನ್ನಡಿಗಳು ಅಥವಾ ಗಾಜಿನ ವಸ್ತುಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು, ಏಕೆಂದರೆ ಇವು ಅಶುಭದ ಸಂಕೇತಗಳಾಗಿವೆ. ಇನ್ನು ಪೂಜಾ ಕೊಠಡಿಯಲ್ಲಿ ಅಥವಾ ಮನೆಯ ಯಾವುದೇ ಮೂಲೆಯಲ್ಲಿ ದೇವತಾ ವಿಗ್ರಹಗಳು ಭಿನ್ನವಾಗಿದ್ದರೆ, ಅಂತಹ ಮುರಿದ ಪ್ರತಿಮೆಗಳನ್ನು ಕಸದ ಬುಟ್ಟಿಗೆ ಎಸೆಯದೆ ಗೌರವಯುತವಾಗಿ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು ಅಥವಾ ಅರಳಿ ಮರದ ಬುಡದಲ್ಲಿ ಇರಿಸಬೇಕು.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಅಷ್ಟೇ ಅಲ್ಲದೆ, ಕೆಟ್ಟುಹೋದ ಮೊಬೈಲ್ ಫೋನ್‌ಗಳು ಅಥವಾ ಟಿವಿಗಳಂತಹ ಎಲೆಕ್ಟ್ರಾನಿಕ್ ವಸ್ತುಗಳು ರಾಹು ಗ್ರಹದ ಮೇಲೆ ಕೆಟ್ಟ ಪ್ರಭಾವ ಬೀರಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಆದ್ದರಿಂದ, ಈ ಬಾರಿ ಹೋಳಿ ಹಬ್ಬದ ಆಚರಣೆಯ ಮುನ್ನ ಇಂತಹ ಪ್ರಮುಖ ಅಶುಭ ವಸ್ತುಗಳನ್ನು ಮನೆಯಿಂದ ಹೊರಹಾಕಿ, ಅದೃಷ್ಟ ಮತ್ತು ಸಂಪತ್ತನ್ನು ಮುಕ್ತ ಮನಸ್ಸಿನಿಂದ ಆಹ್ವಾನಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:01 pm, Thu, 26 February 26

Source link

ಇಂಗ್ಲೆಂಡ್ ತಂಡ ನಮಗೋಸ್ಕರ ಗೆಲ್ತಾರೆ ಬಿಡಿ..! – Kannada News | England win for us says pakistan captain salman ali agha

T20 World Cup 2026: ಟಿ20 ವಿಶ್ವಕಪ್​ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿ ಫೈನಲ್​ಗೇರಿದರೆ, ಶ್ರೀಲಂಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವೆ ಸೆಮಿ ಫೈನಲ್​ ಪೈಪೋಟಿ ಇದೆ. ಅಂದರೆ ಈ ಎರಡು ತಂಡಗಳಲ್ಲಿ ಒಂದು ಟೀಮ್ ಸೆಮಿ ಫೈನಲ್​ಗೇರಲಿದೆ.

ಆದರೆ ಇಲ್ಲಿ ಪಾಕಿಸ್ತಾನ್ ತಂಡದ ಸೆಮಿ ಫೈನಲ್​ ಹಾದಿಯನ್ನು ನಿರ್ಧರಿಸುವುದು ಇಂಗ್ಲೆಂಡ್ ತಂಡ ಎಂಬುದು ವಿಶೇಷ. ಅಂದರೆ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಗೆದ್ದರೆ ಮಾತ್ರ ಸೆಮಿ ಫೈನಲ್​ಗೇರಲು ಅವಕಾಶ ಇರಲಿದೆ. ಒಂದು ವೇಳೆ ಇಂಗ್ಲೆಂಡ್ ತಂಡ ಸೋತರೆ ನ್ಯೂಝಿಲೆಂಡ್ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.

ಹೀಗಾಗಿಯೇ ನಮಗೋಸ್ಕರ ಇಂಗ್ಲೆಂಡ್ ತಂಡ ಗೆಲ್ಲುತ್ತೆ ಎಂದು ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಪಾಕ್ ಕ್ಯಾಪ್ಟನ್, ನಮ್ಮ ತಂಡದ ಪ್ರದರ್ಶನ ನಿರಾಶಾದಾಯಕವಾಗಿದೆ. ಇದಾಗ್ಯೂ ನಾವು ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿಲ್ಲ.

ನಮಗೋಸ್ಕರ ಇಂಗ್ಲೆಂಡ್ ತಂಡ ನ್ಯೂಝಿಲೆಂಡ್ ಅನ್ನು ಸೋಲಿಸುತ್ತದೆ ಎಂದು ಭಾವಿಸುತ್ತೇವೆ. ನಾವು ಒಂದು ವೇಳೆ ಸೆಮಿಫೈನಲ್ ತಲುಪಿದರೆ, ಫೈನಲ್ ಗೆಲ್ಲುವುದು ನಮಗೆ ಸುಲಭವಾಗಲಿದೆ ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ.

ಇತ್ತ ಸೆಮಿಫೈನಲ್​ಗೇರಲು ಮತ್ತೊಂದು ತಂಡವನ್ನು ಅವಲಂಭಿಸಿರುವ ಪಾಕಿಸ್ತಾನ್ ತಂಡವು ಈಗಲೇ ಫೈನಲ್ ಕನಸು ಕಾಣುತ್ತಿದೆ ಎಂದು ಸಲ್ಮಾನ್ ಅಲಿ ಅಘಾ ಅವರ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 584 ರನ್​ಗಳಿಸಿದ ಜಮ್ಮು-ಕಾಶ್ಮೀರ: ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ

ಪಾಕಿಸ್ತಾನ್ ತಂಡದ ಸೆಮಿಫೈನಲ್ ಲೆಕ್ಕಾಚಾರ:

  •  ಫೆಬ್ರವರಿ 27 ರಂದು ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಸೋಲಿಸಲೇಬೇಕು. ಆಗ ನ್ಯೂಜಿಲೆಂಡ್ 3 ಅಂಕಗಳಲ್ಲೇ ಉಳಿಯುತ್ತದೆ. ನಂತರ ಫೆಬ್ರವರಿ 28 ರಂದು ಪಾಕಿಸ್ತಾನವು ಶ್ರೀಲಂಕಾವನ್ನು ಸೋಲಿಸಿದರೆ, ಪಾಕಿಸ್ತಾನ್ ಕೂಡ 3 ಅಂಕಗಳನ್ನು ಪಡೆಯುತ್ತದೆ.
  • ನ್ಯೂಝಿಲೆಂಡ್ ತಂಡವು ಅತ್ಯುತ್ತಮ NRR (+3.050) ಹೊಂದಿದೆ. ಪಾಕಿಸ್ತಾನವು (-0.461) ಇದನ್ನು ಮೀರಿಸಲು ಸುಮಾರು 70 ರಿಂದ 80 ರನ್‌ಗಳ ಅಂತರದ ಗೆಲುವು ಸಾಧಿಸಬೇಕಾಗುತ್ತದೆ.
  • ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ತಂಡವನ್ನು 40 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನವು ಶ್ರೀಲಂಕಾ ವಿರುದ್ಧ ಸುಮಾರು 30 ರನ್‌ಗಳಿಂದ ಗೆಲ್ಲಬೇಕು (ಪಾಕಿಸ್ತಾನ್ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ).
  • ನ್ಯೂಝಿಲೆಂಡ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು, ಪಾಕಿಸ್ತಾನವು ಶ್ರೀಲಂಕಾವನ್ನು ಭಾರಿ ಅಂತರದಿಂದ ಸೋಲಿಸಿದರೆ ಮಾತ್ರ ನೆಟ್ ರನ್ ರೇಟ್​ ಆಧಾರದಲ್ಲಿ 2ನೇ ತಂಡವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.

Source link

ಕಾಡಾನೆ ದಾಳಿ ಭೀತಿಯಲ್ಲಿರುವ ಚಿಕ್ಕಮಗಳೂರು ನಿವಾಸಿಗಳಿಗೆ ಮತ್ತೊಂದು ಶಾಕ್ – Kannada News | Wild gaur of Over 50 Spotted in Koppa Coffee Estate Amid Elephant Fear in Chikkamagaluru: Video goes viral

ಚಿಕ್ಕಮಗಳೂರು, ಫೆಬ್ರವರಿ 26: ಈಗಾಗಲೇ ಕಾಡಾನೆಗಳ ದಾಳಿಯಿಂದ ಆತಂಕದಲ್ಲಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಇದೀಗ ಕಾಡುಕೋಣಗಳ ಹಾವಳಿಯೂ ತಲೆನೋವಾಗಿ ಪರಿಣಮಿಸಿದೆ. ಕೊಪ್ಪ ತಾಲೂಕಿನ ಬಸ್ರೀಕಟ್ಟೆ ಗ್ರಾಮದ ಕಾಫಿತೋಟದಲ್ಲಿ 50ಕ್ಕೂ ಅಧಿಕ ಕಾಡುಕೋಣಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ. ಕಾಫಿತೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಡುಕೋಣಗಳು ಸಂಚರಿಸುತ್ತಿರುವ ದೃಶ್ಯ ಕಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಕಾಡಾನೆಗಳ ಹಾವಳಿ ಇನ್ನೂ ಕಡಿಮೆಯಾಗದಿರುವಾಗಲೇ ಕಾಡುಕೋಣಗಳ ದಾಳಿ ಭೀತಿ ಹೆಚ್ಚಾಗಿದೆ.

ಇತ್ತೀಚೆಗೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ 55 ವರ್ಷದ ರೈತ ಶಿವಪ್ಪ ಮೇಲೆ ಕಾಡುಕೋಣ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಶಿವಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದ್ದು, ಕಾಡುಕೋಣಗಳ ಹಿಂಡು ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಸಂಚರಿಸುತ್ತಿದೆ. ಇದರಿಂದ ಕಾಫಿತೋಟ ಕಾರ್ಮಿಕರು ಹಾಗೂ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬ್ರೇಕಪ್ ನೋವಲ್ಲಿ ಊಟ, ತಿಂಡಿ ಬಿಟ್ಟ ಮಗ, ಹುಡುಗಿ ಬಳಿ ಹೋಗಿ ಕೈಮುಗಿದು ಬೇಡಿದ ತಂದೆ – Kannada News | Father Pleads With Son’s girlfriend After Breakup Sparks Emotional Scene

ಬ್ರೇಕಪ್ ಎಂಬುದು ಎಂಥವರ ಬಾಳಲ್ಲೂ ಬರಸಿಡಿಲಿನಂತೆ ಎರಗಿ ಬಿಡುತ್ತೆ, ಇಷ್ಟು ದಿನ ಜತೆಗಿದ್ದವರು, ತಮ್ಮ ನೋವು, ನಲಿವಿನಲ್ಲಿ ನಮ್ಮೊಂದಿಗಿದ್ದವರು, ಏನೇ ಸಣ್ಣ ಪುಟ್ಟ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದವರು ಜತೆಗಿಲ್ಲವೆಂದಾದಾಗ ಏನೂ ಬೇಡ ಎನಿಸುವುದು ಸಹಜ. ಹಾಗೆಯೇ ಇಲ್ಲೊಬ್ಬ ಯುವಕ ಬ್ರೇಕಪ್ ನೋವಿನಲ್ಲಿ ಊಟ-ತಿಂಡಿ ಬಿಟ್ಟು ಕೂತಿದ್ದ, ಮಗನ ಸ್ಥಿತಿಯನ್ನು ನೋಡಲಾಗದೆ ತಂದೆ ಮಗನನ್ನು ಕರೆದುಕೊಂಡು ಹುಡುಗಿ ಬಳಿ ಹೋಗಿ ಆಕೆಗೆ ಕೈಮುಗಿದು ತನ್ನ ಮಗನ ಜೀವನಕ್ಕೆ ವಾಪಸಾಗುವಂತೆ ಪರಿಪರಿಯಾಗಿ ಬೇಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದು ತಂದೆಯೊಬ್ಬ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಈ ವಿಡಿಯೋವನ್ನು ರಮೇಶ್ ತಿವಾರಿ ಎಂಬುವವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

“ನೀನೇ ಖುಷಿಯಾಗಿರು, ನಾನು ಈ ಪ್ರಪಂಚವನ್ನೇ ಬಿಟ್ಟು ಹೋಗುತ್ತಿದ್ದೇನೆ”: ಸ್ಟೇಟಸ್ ಹಾಕಿಕೊಂಡು ವಿದ್ಯಾರ್ಥಿ ನೀರಿಗೆ ಬಿದ್ದು ಆತ್ಮಹತ್ಯೆ – Kannada News | Turuvekere Student Suicide: Dhanush’s Emotional Statuses Unveil Tragic End

ತುಮಕೂರು, ಫೆ.26: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದ ಡಿಪ್ಲೊಮಾ ವಿದ್ಯಾರ್ಥಿ ಧನುಷ್ (19) ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದ್ದ ಧನುಷ್, ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾಗಿರುವುದು ಈಗ ಬೆಳಕಿಗೆ ಬಂದಿದೆ. ತುರುವೇಕೆರೆ ತಾಲೂಕಿನ ಗೋಪ್ಪೆನಹಳ್ಳಿ ನಿವಾಸಿಯಾದ ಧನುಷ್, ಪಟ್ಟಣದ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಬಂದಿದ್ದ ಆತ ಸಂಜೆಯಾದರೂ ವಾಪಸ್ ಹೋಗಿರಲಿಲ್ಲ. ಪೋಷಕರು ಕರೆ ಮಾಡಿದರೂ ರಿಸೀವ್ ಮಾಡದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಡಿಪ್ಲೊಮಾ ಕಾಲೇಜಿನ ಹಿಂಭಾಗ ಇರುವ ಕಟ್ಟೆಯೊಂದರ ಬಳಿ ಬ್ಯಾಗ್, ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆ ಕೊಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ. ಇದೇ ವೇಳೆ ನೀರಿನ ಕಟ್ಟೆ ಬಳಿ ವಿದ್ಯಾರ್ಥಿ ಧನುಷ್ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಟ್ಟೆಯಿಂದ ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿತ್ತು. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹೊಸ ಟ್ವಸ್ಟ್​​​ ಸಿಕ್ಕಿದೆ. ಧನುಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮೊಬೈಲ್‌ನಲ್ಲಿ ಮನಕಲಕುವ ಸ್ಟೇಟಸ್ ಹಾಕಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ

ನೀನೇ ಖುಷಿಯಾಗಿರು, ನಾನು ಈ ಪ್ರಪಂಚವನ್ನೇ ಬಿಟ್ಟು ಹೋಗುತ್ತಿದ್ದೇನೆ… ಬಾಯ್” ಎಂದು ಬರೆದುಕೊಂಡು ನೀರಿನ ಕಟ್ಟೆಯ ಫೋಟೋ ಹಾಕಿದ್ದ ಎನ್ನಲಾಗಿದೆ. ಇದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನಡೆದ ಘಟನೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಮಗನ ಸಾವಿನ ಸುದ್ದಿ ಕೇಳಿ ಧನುಷ್ ಮನೆಯವರು ದುಃಖ ಪಡುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ – Kannada News | India rebuts Pakistan and OIC’s allegations on Jammu Kashmir at UNHRC session

ನವದೆಹಲಿ, ಫೆಬ್ರುವರಿ 26: ಸ್ವಿಟ್ಜರ್​ಲ್ಯಾಂಡ್​ನ ಜಿನಿವಾದಲ್ಲಿ ನಡೆಯುತ್ತಿರುವ 61ನೇ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ಸಭೆಯಲ್ಲಿ (UNHRC) ಮಾನವ ಹಕ್ಕು ವಿಚಾರ ಕೆದಗಿದ ಪಾಕಿಸ್ತಾನಕ್ಕೆ ಭಾರತ ಝಾಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಜನರ ಮೇಲೆ ಭಾರತ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎನ್ನುವ ಪಾಕಿಸ್ತಾನದ ಆರೋಪಗಳಿಗೆ ಭಾರತ ತಿರುಗೇಟು ಕೊಟ್ಟಿದೆ. ಆರ್ಥಿಕ ಕುಸಿತ ಹೊಂದಿರುವ ಪಾಕಿಸ್ತಾನವು, ಅಭಿವೃದ್ಧಿ ಹೊಂದುತ್ತಿರುವ ಜಮ್ಮು ಕಾಶ್ಮೀರದ ಬಗ್ಗೆ ಮಾತನಾಡುವ ದಾರ್ಷ್ಟ್ಯತನ ತೋರಿದೆ ಎಂದು ಭಾರತ ಕಿಡಿಕಾರಿದೆ.

ಪಾಕಿಸ್ತಾನ ಐಎಂಎಫ್​ನಲ್ಲಿ ಕೇಳುತ್ತಿರುವ ಸಾಲದ ಹಣಕ್ಕಿಂತ ಎರಡು ಪಟ್ಟು ಹೆಚ್ಚಿದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಬಜೆಟ್ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಭಾರತ ಹೇಳಿದೆ. ಈ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಅನುಪಮಾ ಸಿಂಗ್ ಅವರು, ಪಾಕಿಸ್ತಾನದ ಸುಳ್ಳುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಆರೋಪಗಳಿಗೆ ಬೆಂಬಲ ನೀಡಿದ ಇಸ್ಲಾಮಿಕ್ ಸಹಕಾರ ಸಂಘಟನೆಯನ್ನೂ (ಒಐಸಿ) ಅನುಪಮಾ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಸದಸ್ಯ ದೇಶಕ್ಕಾಗಿ ಈ ಸಂಘಟನೆಯು ಇಕೋ ಚೇಂಬರ್​ನಂತೆ ಕೆಲಸ ಮಾಡುತ್ತಿದೆ ಎಂದು ಒಐಸಿಯನ್ನು ಟೀಕಿಸಿದ್ದಾರೆ.

ಅಕ್ರಮವಾಗಿ ವಶಪಡಿಸಿಕೊಂಡಿರುವುದು ಪಾಕಿಸ್ತಾನವೇ

‘ಜಮ್ಮು ಮತ್ತು ಕಾಶ್ಮೀರವು ಹಿಂದೆಯೂ, ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. 1947ರಲ್ಲಿ ಭಾರತದೊಂದಿಗಿನ ಅದರ ಸೇರ್ಪಡೆ ಸಂಪೂರ್ಣ ಕಾನೂನು ಬದ್ಧವಾಗಿಯೇ ಇತ್ತು. ಒಂದೇ ಸಮಸ್ಯೆ ಎಂದರೆ ಭಾರತದ ಭೂಭಾಗಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದು’ ಎಂದು ಹೇಳಿರುವ ಅನುಪಮಾ ಸಿಂಗ್ ಅವರು, ಈ ಭೂಭಾಗಗಳನ್ನು ಬಿಟ್ಟುಕೊಡುವಂತೆ ಆಗ್ರಹಿಸಿದ್ದಾರೆ. ಅನುಪಮಾ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಗ್ಗಿಟ್ ಬಾಲ್ಟಿಸ್ತಾನ್ ಪ್ರದೇಶಗಳನ್ನು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ಕನಸಿನ ಲೋಕದಲ್ಲಿದೆ ಪಾಕಿಸ್ತಾನ

ಕಣಿವೆ ರಾಜ್ಯವು ಅಭಿವೃದ್ಧಿವಂಚಿತವಾಗಿದೆ ಎನ್ನುವ ಪಾಕಿಸ್ತಾನದ ಆರೋಪಕ್ಕೆ ಯುಎನ್​ಎಚ್​ಆರ್​ಸಿ ಸಭೆಯಲ್ಲಿ ಭಾರತ ಕಟುವಾಗಿ ಪ್ರತ್ಯುತ್ತರ ಕೊಟ್ಟಿದೆ. ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎನಿಸಿದ ಚೆನಾಬ್ ರೈಲ್ ಬ್ರಿಡ್ಜ್​ನ ಉದ್ಘಾಟನೆಯನ್ನು ಅನುಪಮಾ ಸಿಂಗ್ ಉಲ್ಲೇಖಿಸಿದ್ದಾರೆ. ‘ಚೆನಾಬ್ ರೈಲ್ ಬ್ರಿಡ್ಜ್ ಸುಳ್ಳು ಎನ್ನುವುದಾದರೆ ಪಾಕಿಸ್ತಾನ ಯಾವುದೋ ಭ್ರಮೆಯಲ್ಲಿರಬಹುದು, ಅಥವಾ ಲಾ ಲಾ ಲ್ಯಾಂಡ್ನಲ್ಲಿ (ಕನಸಿನ ಲೋಕ) ವಾಸಿಸುತ್ತಿರಬಹುದು’ ಎಂದು ಸಿಂಗ್ ತಿವಿದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾಸನದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಪೊಲೀಸರಿಂದ 18 ಕಾರ್ಮಿಕರ ರಕ್ಷಣೆ – Kannada News | Hassan Police Rescue 18 Bonded Labourers from Exploitative Farm

ಹಾಸನ, ಫೆಬ್ರವರಿ 26: ರಾಜ್ಯದಲ್ಲಿ ಇನ್ನೂ ಅನಿಷ್ಟ ಜೀತ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ಹಾಸನದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹಳೇಬೀಡು ಹೋಬಳಿಯ ಚಟ್ನಹಳ್ಳಿ ಗ್ರಾಮದಲ್ಲಿ ಕೂಡಿಹಾಕಲಾಗಿದ್ದ 18ಕ್ಕೂ ಹೆಚ್ಚು ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ್ದಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಶುಂಠಿ ಕೆಲಸಕ್ಕೆಂದು ಕರೆತರಲಾಗಿದ್ದ ಈ ಕಾರ್ಮಿಕರನ್ನು, ಮಾಲೀಕ ನಾಗರಾಜ್ ಎಂಬಾತ ಕೂಡಿಹಾಕಿ ದುಡಿಸಿಕೊಳ್ಳುತ್ತಿದ್ದ. ಇವರಿಗೆ ಯಾವುದೇ ಹಣ ನೀಡದೆ, ಕೆಲಸ ಮುಗಿದ ನಂತರ ಒಂದೇ ಜಾಗದಲ್ಲಿ ಲಾಕ್ ಮಾಡಲಾಗುತ್ತಿತ್ತು. ಹೊರಗಡೆ ಹೋಗಲು ಯಾವುದೇ ಅವಕಾಶವಿರಲಿಲ್ಲ ಎನ್ನಲಾಗಿದೆ. ಪೊಲೀಸರು ದಾಳಿ ನಡೆಸಿದಾಗ, ಆರೋಪಿ ನಾಗರಾಜ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದ್ದು, ರಕ್ಷಿಸಲ್ಪಟ್ಟ ಕಾರ್ಮಿಕರು ತಾವು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version