ಜೈಲಿನಿಂದ ಹೊರಬರುತ್ತಿದ್ದಂತೆಯೇ ಶಾಕಿಂಗ್ ವಿಚಾರ ಬಿಚ್ಚಿಟ್ಟ ಮ್ಯೂಸಿಕ್ ಮೈಲಾರಿ – Kannada News | Pocso case: Singer music mailari first Reaction after Released From Jail

ಬಾಗಲಕೋಟೆ, (ಫೆಬ್ರವರಿ 25): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣದಲ್ಲಿ (pocso case)  ಜೈಲು ಪಾಲಾಗಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ಗೆ (Singer music mailari )  ಜಾಮೀನು ಸಿಕ್ಕಿದೆ. 2025ರ ಡಿಸೆಂಬರ್ 17ರಂದು ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿ ಇಂದು (ಫೆಬ್ರವರಿ 25) ಜಾಮೀನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಟಿವಿ9ಗೆ ಪ್ರತಿಕ್ರಿಯಿಸಿರುವ ಮೈಲಾರಿ, ಡಾ ಅಂಬೇಡ್ಕರ್ ಅವರ ಸಂವಿಧಾನದೊಳಗೆ ನಾವು ಕಾನೂನಾತ್ಮಕವಾಗಿಯೇ ಹೋರಾಟ ‌ಮಾಡುತ್ತಿದ್ದೇವೆ‌. ಯಾವುದು ಸರಿ ಯಾವುದು ತಪ್ಪು ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ತೀರ್ಪಿಗೆ,ಕಾನೂನಿಗೆ ನಾನು ತಲೆ ಬಾಗುತ್ತೇನೆ. ಕೋರ್ಟ್ ತೀರ್ಮಾನಕ್ಕೆ ನಾನು ಬದ್ದವಾಗಿರುತ್ತೇನೆ‌ ಎಂದರು.

ಇನ್ನು ಇದೇ ವೇಳೆ ತಮ್ಮ ಆರ್ಕೆಸ್ಟ್ರಾ ಬಗ್ಗೆ ಮಾತನಾಡಿದ ಮೈಲಾರಿ, ಸದ್ಯಕ್ಕೆ ಏನು‌ ನಿರ್ಧಾರ ಇಲ್ಲ.ಪತ್ನಿಗೆ ಹೆರಿಗೆಯಾಗಿದೆ. ನನ್ನ ತಾಯಿಗೆ ಹುಷಾರಿಲ್ಲ. ಸ್ವಲ್ಪ ಮಾನಸಿಕವಾಗಿ ಬೇಸರವಾಗಿದೆ. ಹೀಗಾಗಿ ಸದ್ಯಕ್ಕೆ ಕಾರ್ಯಕ್ರಮದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲ. ಸ್ವಲ್ಪ ದಿನ ಆದ ಮೇಲೆ ನೋಡೋಣ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

Source link

ವಿದ್ಯುತ್​ ಬಿಲ್ ಪಾವತಿಸದಷ್ಟು ಬಡವಾಯ್ತಾ ಬೀದರ್​​​​​​ ಬ್ರಿಮ್ಸ್ ಆಸ್ಪತ್ರೆ? ಬಾಕಿ ಮೊತ್ತ ಕೇಳಿದ್ರೆ ಶಾಕ್​​​ ಆಗ್ತೀರಾ – Kannada News | Bidar BRIMS Hospital Owes GESCOM 1.70 Cr Electricity Bill: Public Outcry

ಬೀದರ್​​, ಫೆಬ್ರವರಿ 25: ಜನಸಾಮಾನ್ಯರು ಕರೆಂಟ್ ಬಿಲ್ (Current Bill) ಕಟ್ಟುವುದು ತಡವಾದರೆ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಆದರೆ ಬೀದರ್​ನ ಬ್ರಿಮ್ಸ್ ಆಸ್ಪತ್ರೆ 1.70 ಕೋಟಿ ರೂ ಜೆಸ್ಕಾಂಗೆ ಹಣ ಕಟ್ಟಿಲ್ಲ. ಹಣ ಕಟ್ಟಿ ಅಂತಾ ನೋಟಿಸ್ ಮೇಲೆ ನೋಟಿಸ್ ಕೊಟ್ಟರು ಬ್ರಿಮ್ಸ್ ಆಡಳಿತ ಮಂಡಳಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಜೆಸ್ಕಾಂ ಇಲಾಖೆಯ ಈ ತಾರತಮ್ಯ ನೀತಿಗೆ ಗಡೀ ಜಿಲ್ಲೆಯ ಬೀದರ್​ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

1 ಕೋಟಿ 70 ಲಕ್ಷ 80 ಸಾವಿರ ರೂ ಬಿಲ್ ಬಾಕಿ

ಬೀದರ್​ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯ ಕರೆಂಟ್ ಬಿಲ್ ಬಾಕಿ ಇಟ್ಟುಕೊಂಡಿರುವ ಮೊತ್ತ ಕೇಳಿದರೆ, ನೀವು ಶಾಕ್ ಆಗುವುದು ಗ್ಯಾರಂಟಿ. ಬರೋಬ್ಬರಿ 1 ಕೋಟಿ 70 ಲಕ್ಷ 80 ಸಾವಿರ ರೂ ಕರೆಂಟ್ ಬಿಲ್ ಬಾಕಿ ಇದೆ. ಸುಮಾರು 10 ವರ್ಷದಿಂದ ಕರೆಂಟ್ ಬಿಲ್ ಬಾಕಿ ಇದ್ದು, ಹಣ ಕಟ್ಟಿ ಎಂದು ಜೆಸ್ಕಾಂನವರು ನೋಟಿಸ್​ ನೀಡಿದರು ಕೂಡ ಕರೆಂಟ್ ಬಿಲ್ ಮಾತ್ರ ಕಟ್ಟುತ್ತಿಲ್ಲ.

ಇದನ್ನೂ ಓದಿ: ಫುಟ್​ಪಾತ್ ಮೇಲೆಯೇ ಟ್ರಾನ್ಸ್​ಫಾರ್ಮರ್​​ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?

ಇನ್ನು ಜೆಸ್ಕಾಂನವರು ಹೆಸರಿಗೆ ಮಾತ್ರ ನೋಟಿಸ್ ಕೊಟ್ಟು ನಮಗೂ ಆ ಹಣಕ್ಕೂ ಸಂಬಂಧವೇ ಇಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟದೆ ಹೋದರೆ ಅವರ ಮನೆಯ ಕರೆಂಟ್ ಕಟ್ ಮಾಡುತ್ತಾರೆ, ಆದರೆ ಒಂದು ದಶಕದಿಂದ ಬ್ರಿಮ್ಸ್, ಜೆಸ್ಕಾಂಗೆ ಕರೆಂಟ್ ಬಿಲ್ ಕಟ್ಟಿಲ್ಲ. ಹಣ ವಸೂಲಿ ಮಾಡುವಂತೆ ಅಂಬ್ರೇಷ್ ಕೆಂಚಾ ಎಂಬ ನಿವಾಸಿ ಜೆಸ್ಕಾಂಗೆ ಒತ್ತಾಯಿಸಿದ್ದಾರೆ.

ಕೋಟ್ಯಂತರ ರೂ ವಿದ್ಯುತ್‌ ಬಿಲ್‌ ಬಾಕಿ ಉಳಿದಿದ್ದು, ವಸೂಲಿಗಾಗಿ ಜೆಸ್ಕಾಂ ಸರಣಿ ನೋಟಿಸ್ ನೀಡಿದೆ. ಆದರೂ ಬಿಲ್‌ ಮೊತ್ತ ಪಾವತಿಯಾಗದಿರುವುದು ಜೆಸ್ಕಾಂ ಆಡಳಿತವನ್ನು ಹೈರಾಣಾಗಿಸಿದೆ. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ

ಇಲ್ಲಿನ ಜನರು ಕೂಡ ಜೆಸ್ಕಾಂ ಇಲಾಖೆಯ ಇಬ್ಬಗೆ ನೀತಿಯಿಂದ ಜನರು ಆಕ್ರೋಶ ಹೊರಹಾಕುತ್ತಿದ್ದು, ಬಾಕಿ ಮೊತ್ತವನ್ನ ವಸೂಲಿ ಮಾಡಿ ಸರಕಾರದ ಬೊಕ್ಕಸವನ್ನು ತುಂಬಿಸಿ ಎಂದು ಇಲ್ಲಿನ ಜನರು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಲೋಡ್ ಶೆಡ್ಡಿಂಗ್​​ನಿಂದ ಜನತೆ ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಜೆಸ್ಕಾಂಗೆ ಬಾಕಿ ಬರಬೇಕಿರುವ ಹಣ ಪಾವತಿಯಾದರೆ ವಿದ್ಯುತ್ ಖರೀದಿಗೆ ಅನುಕೂಲವಾಗಲಿದೆ. ಈಗಲಾದರೂ ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಮಾತನಾಡಲು ಅಧಿಕಾರಿಗಳು ಹಿಂದೇಟು

ಜೆಸ್ಕಾಂಗೆ ಈಗ ಬರಬೇಕಿರುವ ಹಣದಲ್ಲಿ ಸದ್ಯಕ್ಕೆ ಅರ್ಧ ಹಣ ಪಾವತಿ ಆದರೂ ಸಾಕು ಎನ್ನಲಾಗುತ್ತಿದೆ. ಇದರಿಂದ ವಿದ್ಯುತ್ ಖರೀದಿ ಮತ್ತು ಸಮರ್ಪಕ ಪೂರೈಕೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಮಾತನಾಡಲು ಹಿಂದೇಟು ಹಾಕಿದ್ದಾರೆ. ಒಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಿಂದ ಬರಬೇಕಾಗಿರುವ ಲಕ್ಷಾಂತರ ರೂ ಹಣವನ್ನ ಬ್ರಿಮ್ಸ್​, ಜೆಸ್ಕಾಂಗೆ ಪಾವತಿ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಶ್ಮಿಕಾ, ವಿಜಯ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ಆಶಿಕಾ – Kannada News | Rashmika Mandanna Vijay Deverakonda haldi ceremony begins Ashika Ranganath shares photo

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಈ ವಿವಾಹದಲ್ಲಿ ಭಾಗಿ ಆಗಿದ್ದಾರೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳನ್ನು ಮಾಡಲಾಗಿದೆ. ಬುಧವಾರ (ಫೆಬ್ರವರಿ 25) ಹಳದಿ ಶಾಸ್ತ್ರ ಮಾಡಲಾಗುತ್ತಿದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna), ಆಶಿಕಾ ರಂಗನಾಥ್ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ವಿರೋಶ್ ಮದುವೆ ನಡೆಯುತ್ತಿದೆ.

ಕನ್ನಡ ಚಿತ್ರರಂಗದ ಕೆಲವೇ ಮಂದಿಗೆ ಮಾತ್ರ ರಶ್ಮಿಕಾ ಮಂದಣ್ಣ ಅವರು ಮದುವೆಯ ಆಹ್ವಾನ ನೀಡಿದ್ದಾರೆ. ವೃತ್ತಿಜೀವನದ ಆರಂಭದ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ಆಶಿಕಾ ರಂಗನಾಥ್ ಅವರು ಸ್ನೇಹ ಹೊಂದಿದ್ದಾರೆ. ಹಾಗಾಗಿ ಆಶಿಕಾ ರಂಗನಾಥ್ ಅವರನ್ನು ಆಹ್ವಾನಿಸಲಾಗಿದೆ. ಸಿನಿಮಾ ಕೆಲಸಗಳಿಗೆ ಬಿಡುವು ನೀಡಿದ ಆಶಿಕಾ ಅವರು ಗೆಳತಿಯ ಮದುವೆಗಾಗಿ ಉದಯಪುರಕ್ಕೆ ತೆರಳಿದ್ದಾರೆ.

ಹಳದಿ ಶಾಸ್ತ್ರಕ್ಕೆ ಯಾವ ರೀತಿ ತಯಾರಿ ನಡೆದಿದೆ ಎಂಬುದನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಫೋಟೋಗಳ ಮೂಲಕ ತಿಳಿಸಿದ್ದಾರೆ. ಆಶಿಕಾ ರಂಗನಾಥ್ ಕೂಡ ತಾವು ಹಳದಿ ಶಾಸ್ತ್ರಕ್ಕೆ ಸಜ್ಜಾಗಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆ ಬಗ್ಗೆ ಕ್ಷಣಕ್ಷಣದ ಅಪ್​ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ತಮ್ಮ ಮದುವೆಗೆ ಕೇವಲ 100 ಜನರಿಗೆ ಮಾತ್ರ ಅವರು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ

ಬುಧವಾರ (ಫೆ.25) ರಾತ್ರಿಯೇ ಹಳದಿ ಶಾಸ್ತ್ರದ ನಂತರ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳೆಲ್ಲರೂ ಹಾಡಿ, ಕುಣಿದು ಸಂಭ್ರಮಿಸಲಿದ್ದಾರೆ. ಫೆಬ್ರವರಿ 26ರಂದು ಮದುವೆ ನಡೆಯಲಿದೆ. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Lunar Eclipse 2026: ಮಾ.03 ಚಂದ್ರಗ್ರಹಣ; ಕರ್ಕಾಟಕ ರಾಶಿ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Predictions for Cancer Zodiac Sign by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣ ಕರ್ಕಾಟಕ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಚಂದ್ರಗ್ರಹಣವು ಕರ್ಕಾಟಕ ರಾಶಿಯವರಿಗೆ ಎರಡನೇ ಮನೆಯಲ್ಲಿ, ಅಂದರೆ ಧನ, ವಾಕ್ ಮತ್ತು ಕುಟುಂಬ ಸ್ಥಾನದಲ್ಲಿ ಪ್ರಭಾವ ಬೀರಲಿದೆ. ಪುನರ್ವಸು, ಪುಷ್ಯ ಮತ್ತು ಆಶ್ಲೇಷ ನಕ್ಷತ್ರದಡಿಯಲ್ಲಿ ಬರುವ ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯದಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಎಚ್ಚರ ವಹಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.

ಈ ಗ್ರಹಣದ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಅತಿಯಾದ ಆಲೋಚನೆ, ಕೋಪ, ಆತಂಕ ಹೆಚ್ಚಾಗಬಹುದು. ಸಣ್ಣ ವಿಷಯಗಳಿಗೂ ಸಿಡುಕುವ ಸ್ವಭಾವ ಕಂಡುಬರಬಹುದು. ಮಹಿಳೆಯರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಆರ್ಥಿಕವಾಗಿ ಅಧಿಕ ಖರ್ಚು ಆಗುವ ಸಂಭವವಿದೆ. ರೈತರಿಗೆ ಶುಭವಾಗಿದ್ದು, ಪೂರ್ವಿಕರ ಆಸ್ತಿ ವಿಚಾರದಲ್ಲಿ ಮಧ್ಯಸ್ಥಿಕೆ ಉತ್ತಮ. ವಾಹನ ಖರೀದಿ ಅಷ್ಟು ಶುಭವಲ್ಲ. ವಿವಾಹ ಮತ್ತು ಉದ್ಯೋಗದಲ್ಲಿ ಸ್ನೇಹಿತರ ಬೆಂಬಲದಿಂದ ಶುಭವಾಗಲಿದೆ. ನಂಬಿಕೆ ದ್ರೋಹವಾಗುವ ಸಾಧ್ಯತೆಯಿದ್ದು, ಅನಗತ್ಯ ಹೂಡಿಕೆಗಳಿಂದ ದೂರವಿರಿ. ಗಂಡ-ಹೆಂಡತಿಯರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಬಹುದು. ರಾಜಕೀಯ ವ್ಯಕ್ತಿಗಳು ಮತ್ತು ಉದ್ದಿಮೆದಾರರು ಜಾಗ್ರತೆ ವಹಿಸಬೇಕು. ಗ್ರಹಣದ ಪ್ರಭಾವವನ್ನು ಕಡಿಮೆ ಮಾಡಲು ಶಿವನಿಗೆ ಅರ್ಚನೆ, ಅಭಿಷೇಕ, ಅಲಂಕಾರ, ಪಂಚಾಮೃತ ಸಮರ್ಪಣೆ ಮಾಡಬಹುದು. ದುರ್ಗಾ ಸ್ತೋತ್ರ ಪಠಣ, ನೀರಿನ ದಾನ, ಅಕ್ಕಿಯ ಜೊತೆ ಬೆಲ್ಲವನ್ನು ಹಸುವಿಗೆ ನೀಡುವುದು ಮತ್ತು ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡುವುದು ಶುಭಕರವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Trophy Final: 1 ಶತಕ, 5 ಅರ್ಧಶತಕ; 2ನೇ ದಿನವೂ ಜೆಕೆ ತಂಡದ್ದೇ ಮೇಲುಗೈ – Kannada News | Ranji Final Day 2: Jammu and Kashmir Dominates Karnataka with 527/6 in Hubballi

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ (Ranji Trophy Final) ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ (Karnataka vs J&K) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 527 ರನ್ ಕಲೆಹಾಕಿದೆ. ಆದಾಗ್ಯೂ ಮಂದ ಬೆಳಕಿನಿಂದಾಗಿ ಎರಡನೇ ದಿನದಾಟವನ್ನು ಬೇಗನೇ ಅಂತ್ಯಗೊಳಿಸಲಾಯಿತು. ಆಟವನ್ನು ನಿಲ್ಲಿಸಿದಾಗ ಜೆಕೆ ತಂಡದ ಪರ ಸಾಹಿಲ್ ಲೋತ್ರಾ ಅಜೇಯ 57 ರನ್ ಬಾರಿಸಿದರೆ, ಅಬಿದ್ ಮುಷ್ತಾಕ್ 20 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಮೊದಲ ದಿನದಂತೆ ಎರಡನೇ ದಿನವೂ ಕರ್ನಾಟಕ ಬೌಲರ್​ಗಳು ವಿಕೆಟ್​ಗಾಗಿ ಪರದಾಡಬೇಕಾಯಿತು. ಇತ್ತ ಜೆಕೆ ತಂಡದ ಪರ ಇದುವರೆಗೆ 1 ಶತಕ ಹಾಗೂ 5 ಅರ್ಧಶತಕಗಳು ಸಿಡಿದಿದ್ದು ಪಂದ್ಯದ ಮೇಲೆ ಬಿಗಿ ಹಿಡಿದ ಸಾಧಿಸಿದೆ.

ಮೊದಲ ದಿನದಾಟದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 284 ರನ್ ಕಲೆಹಾಕಿದ್ದ ಜೆಕೆ ತಂಡ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಮುಂದುವರೆಸಿತು. ಮೊದಲ ದಿನದಾಟದಲ್ಲಿ 117 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಶುಭಂ ಪುಂಡೀರ್ ಹಾಗೂ 52 ರನ್ ಗಳಿಸಿ ಅಜೇಯರಾಗಿದ್ದ ಅಬ್ದುಲ್ ಸಮದ್ ಇನ್ನಿಂಗ್ಸ್ ಮುಗಿಸಿದರು. ಆದಾಗ್ಯೂ ಈ ಜೋಡಿಯ ಜೊತೆಯಾಟ 303 ರನ್​ಗಳಿಗೆ ಅಂತ್ಯವಾಯಿತು. ಶತಕ ಬಾರಿಸಿದ್ದ ಶುಭಂ ಪುಂಡೀರ್ ತಮ್ಮ ಖಾತೆಗೆ 4 ರನ್ ಸೇರಿಸಿ 121 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಅಬ್ದುಲ್ ಸಮದ್ ಇನ್ನಿಂಗ್ಸ್ 61 ರನ್​ಗಳಿಗೆ ಅಂತ್ಯವಾಯಿತು.

ಮೊದಲ ದಿನದಾಟದಂದು ಗಾಯದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿದ್ದ ನಾಯಕ ಪರಾಸ್ ಡೋಗ್ರಾ ಎರಡನೇ ದಿನದಂದು ಬ್ಯಾಟಿಂಗ್​ಗೆ ಇಳಿದು 70 ರನ್​ಗಳ ಇನ್ನಿಂಗ್ಸ್ ಆಡಿದರು. ಕನ್ಹಯ್ಯಾ ವಾಧವನ್ ಕೂಡ 70 ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರ ಆಟದಿಂದಾಗಿ ತಂಡ 400 ರನ್​ಗಳ ಗಡಿ ದಾಟಿತು. ಆ ಬಳಿಕ ಬಂದ ಸಾಹಿಲ್ ಲೋತ್ರಾ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು 500 ರನ್​ಗಳ ಗಡಿ ದಾಟಿಸಿದ್ದಾರೆ.

ಇನ್ನು ಮೂರನೇ ದಿನದಾಟದಂದು ಕರ್ನಾಟಕ ತಂಡ ಉಳಿದಿರುವ 4 ವಿಕೆಟ್​ಗಳನ್ನು ಬೇಗನೇ ಉರುಳಿಸಿ ತನ್ನ ಬ್ಯಾಟಿಂಗ್ ಆರಂಭಿಸಬೇಕಿದೆ. ಒಂದು ವೇಳೆ ಜೆಕೆ ತಂಡದ ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳು ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರೆ, ಕರ್ನಾಟಕ ತಂಡಕ್ಕೆ ಹಿನ್ನಡೆಯಾಗುವುದು ಖಚಿತ.ಹೀಗಾಗಿ ಈ ಪಂದ್ಯವನ್ನು ಗೆಲ್ಲಬೇಕಾದರೆ, ಕರ್ನಾಟಕ ತಂಡ ಬೇಗನೇ ಜೆಕೆ ತಂಡವನ್ನು ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಬೇಕಿದೆ.

Published On – 5:49 pm, Wed, 25 February 26

Source link

ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್​ಟಿಸಿ ಬಸ್​ನಲ್ಲಿ ಮಾರಾಮಾರಿ: ಮೂವರಿಗೆ ಗಾಯ – Kannada News | KSRTC Bus Fight: Groundnut Shells Spark Brawl Between Passengers and Conductor in Chamarajanagar

ಚಾಮರಾಜನಗರ, ಫೆಬ್ರವರಿ 25: ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್​ಟಿಸಿ ಬಸ್​ನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸರಗೂರು ಬಳಿ ನಡೆದಿದೆ. ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್​​ನಲ್ಲಿ ಪ್ರಯಾಣಿಕರು ಕಡಲೆಕಾಯಿ ಸಿಪ್ಪೆಯನ್ನು ಬಿಸಾಡಿದ್ದಾರೆ. ಇದನ್ನ ನಿರ್ವಾಹಕ ಪ್ರಶ್ನಿಸಿದ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ, ಸರಗೂರು ಬೈಪಾಸ್ ಬಳಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಬಡಿದಾಟವೇ ನಡೆದಿದೆ.

ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದ ಪರಿಣಾಮ ಚಾಮರಾಜನಗರದ ಪ್ರಯಾಣಿಕರಾದ ಫಯಾಜ್ ಅಹ್ಮದ್ ಮತ್ತು ಶಾರಾನ್, ನಿರ್ವಾಹಕ ಕನಕಪುರದ ಮುನಿಮಾದಯ್ಯಗೆ ಥಳಿಸಿದ್ದಾರೆ. ಘಟನೆಯಲ್ಲಿ ಮೂವರೂ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆ ನಡೆದ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: KSRTC ಬಸ್ ಸೀಜ್; ಪ್ರಯಾಣಿಕರ ಸಮೇತ ಠಾಣೆಗೆ ತಂದ ಟ್ರಾಫಿಕ್ ಪೊಲೀಸ್

ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್

ರಸ್ತೆ ಮಧ್ಯೆಯೇ KSRTC ಬಸ್​ ಕೆಟ್ಟುನಿಂತ ಪರಿಣಾಮ, ವಾಹನ ತಳ್ಳಿ ತಳ್ಳಿ ಪ್ರಯಾಣಿಕರು ಹಾಗೂ ನಿರ್ವಾಹಕ ಹೈರಾಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಬೋಳ ರಾಮೇಶ್ವರ ದೇವಾಲಯ ಬಳಿ ನಡೆದಿದೆ. ಮೂಡಿಗೆರೆಯಿಂದ ಚಿಕ್ಕಮಗಳೂರು ಬಸ್​​ ನಿಲ್ದಾಣಕ್ಕೆ ಬರುತ್ತಿದ್ದ ಬಸ್​​ ಅರ್ಧ ದಾರಿಯಲ್ಲೇ ಕೈಕೊಟ್ಟ ಪರಿಣಾಮ, ಇತರ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಟ್ರಾಫಿಕ್​​ ಜಾಮ್​​ ಉಂಟಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪ್ರಯಾಣಿಕರ ಬಾಯಾರಿಕೆ ನೀಗಿಸುತ್ತಿರುವ ಬಸ್​​ ಸಿಬ್ಬಂದಿ

ಬಿಸಿಲ ಝಳಕ್ಕೆ ತತ್ತರಿಸಿದ ಪ್ರಯಾಣಿಕರಿಗೆ KSRTC ಚಾಲಕ ಮತ್ತು ನಿರ್ವಾಹಕರು ಆಸರೆಯಾಗಿದ್ದು, ಬಸ್​​ನಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಟಿ.ನರಸೀಪುರ , ಬನ್ನೂರು ಮತ್ತು ಮಂಡ್ಯ ಮಾರ್ಗದ ಬಸ್​​ಗಳಲ್ಲಿ ಪ್ರಯಾಣಿಕರ ದಾಹ ನೀಗಿಸಲು ಸಾರಿಗೆ ಸಿಬ್ಬಂದಿ ಕೈಗೊಂಡ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. ಶುದ್ಧ ನೀರಿನ ಘಟಕಗಳಿಂದ ಪ್ರತಿದಿನ 2-3 ಕ್ಯಾನ್ ನೀರು ತರುವ ಸಿಬ್ಬಂದಿ, ಜನರ ಮುಖದಲ್ಲಿನ ತೃಪ್ತಿಯೇ ನಮಗೆ ಸಿಗುವ ದೊಡ್ಡ ಗೌರವ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊರದೇಶಕ್ಕೆ ಹೋದ ವಿದ್ಯಾರ್ಥಿಗಳು ಹೆಚ್ಚು ಖಿನ್ನತೆಗೆ ಒಳಗಾಗುವುದು ಯಾಕೆ? ಇದರಿಂದ ಹೊರಬರುವುದು ಹೇಗೆ? ಇಲ್ಲಿದೆ ಡಾ. ಕೃತಿಶ್ರೀ ಸಲಹೆ – Kannada News | Mental Health Tips for Overseas Students by Dr. Kritishree

Mental Health Tips for Overseas Students by Dr. Kritishree

ಅಮೆರಿಕದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯ ಸಾವು ನಮ್ಮ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ. ಎಷ್ಟೇ ಮೇಧಾವಿಯಾಗಿದ್ದರೂ ತನ್ನದಲ್ಲದ, ತನ್ನವರಿಲ್ಲದ ಪ್ರದೇಶದಲ್ಲಿ ವಾಸ ಮಾಡುವುದು ಸುಲಭವಲ್ಲ. ಆದರೆ ಕನಸನ್ನು ನನಸಾಗಿಸಿಕೊಳ್ಳುವ ಹಂಬಲ ಎಷ್ಟೇ ಕಷ್ಟವಿದ್ದರೂ ನಿಭಾಯಿಸುವ ಹಂತಕ್ಕೆ ಹೋಗಿಬಿಡುತ್ತವೆ. ಆದರೆ ಎಲ್ಲರಿಗೂ ಹೀಗಾಗುವುದಿಲ್ಲ. ಅದರಲ್ಲಿಯೂ ಸಾಕೇತ್ ಶ್ರೀನಿವಾಸಯ್ಯ ಸಾವು ವಿದೇಶಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಹಾಗಾಗಿ ಬೇರೆ ಬೇರೆ ದೇಶಗಳಿಗೆ ತಮ್ಮ ಕನಸು ಕಟ್ಟಿಕೊಳ್ಳಲು ಹೋಗುವವರು ಕೆಲವು ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇಂತಹ ಘಟನೆಗಳನ್ನು ಕೇಳಿದಾಗ ಸಾಮಾಜಿಕ ವ್ಯವಸ್ಥೆಯನ್ನು ದೂಷಿಸಿ ನಂತರ ಕೆಲವೇ ಸಮಯದಲ್ಲಿ ಮರೆತುಬಿಡುತ್ತೇವೆ ಮತ್ತೆ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ಹಾಗಾಗಬಾರದು. ಅದಕ್ಕಾಗಿಯೇ ಈ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್, ಡಾ. ಕೃತಿಶ್ರೀ ಸೋಮಣ್ಣ (Dr. Krithishree S.S.) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ಡಾ. ಕೃತಿಶ್ರೀ ಹೇಳುವ ಪ್ರಕಾರ, ಖಿನ್ನತೆಯು ಸಾಮಾನ್ಯವಾಗಿ ಅನುಭವವಾಗುವ ʻಬೇಸರʼಕ್ಕಿಂತ ಭಿನ್ನವಾಗಿರುತ್ತದೆ. ಸಾಮಾನ್ಯ ಬೇಸರವು ತಾತ್ಕಾಲಿಕ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಉಂಟಾಗುವ ಭಾವನೆಯಾಗಿದ್ದು, ಪರಿಸ್ಥಿತಿ ಸುಧಾರಿಸಿದಂತೆ ಮಾಯವಾಗುತ್ತದೆ. ಆದರೆ, ‘ತೀವ್ರ ಮಟ್ಟದ ಖಿನ್ನತೆ’ (Major Depressive Disorder) ಹೊಂದಿರುವವರು ನಕಾರಾತ್ಮಕ ಭಾವನೆಗಳಿಂದ ಹೊರಬರಲು ಕಷ್ಟಪಡುತ್ತಾರೆ. ಇದು ದೀರ್ಘಕಾಲದ ವರೆಗೆ ಇರುತ್ತದೆ. ಎಷ್ಟೋ ಜನರು ತಮ್ಮ ನಡವಳಿಕೆಯಲ್ಲಿನ ಬದಲಾವಣೆಯನ್ನು ಗುರುತಿಸದೇ ಕಡೆಗಣಿಸುತ್ತಾರೆ, ಇದೇ ಮುಂದೆ ಮಾನಸಿಕ ಸಮಸ್ಯೆಯಾಗಿ ಮುಂದುವರೆಯುತ್ತದೆ.

ಹೊರ ದೇಶಕ್ಕೆ ಹೋದಾಗ, ಹೊಸ ಪದ್ದತಿ ಮತ್ತು ಅಲ್ಲಿನ ವಾತಾವರಣಕ್ಕೆ ಹೊಂದುಕೊಳ್ಳಲು ಸಮಯ ಹಿಡಿಯುತ್ತದೆ, ಆ ಹಂತದಲ್ಲಿ ನಮ್ಮ ಮನಸ್ಥಿತಿಯಲ್ಲಿ ಆಗುವ ಬದಲಾವಣೆಯನ್ನು ಗುರುತಿಸಬೇಕು, ಇಲ್ಲಿ ಆತ್ಮಾವಲೋಕನ, ನಮ್ಮ ನಡವಳಿಕೆಯ ಬದಲಾವಣೆಯನ್ನು ಸ್ವತಃ ಗುರುತಿಸುವುದು ಅತ್ಯಗತ್ಯ, ಇದು ಮುಂದುವರೆದ ಮಾನಸಿಕ ಸಮಸ್ಯೆ ಖಿನ್ನತೆ ಒಳಗಾಗುವುದನ್ನು ತಡೆಯಬಹುದು, ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದರಿಂದ ರಕ್ಷಿಸಬಹುದು.

ಜೊತೆಗಿರುವವರ ಕರ್ತವ್ಯ ಬಹಳ ಮುಖ್ಯ:

ನಮ್ಮ ಸುತ್ತ ಇರುವವರ ನಡೆವಳಿಕೆಯಲ್ಲಿನ ಬದಲಾವಣೆಯನ್ನು ಕೂಡ ಗುರುತಿಸಬೇಕು. ತೀವ್ರ ಮಟ್ಟದಲ್ಲಿ ನಡವಳಿಕೆಯಲ್ಲಿ ಅಸಹಜತೆ ಕಂಡು ಬಂದಾಗ ಅಂತಹವರ ನೆರವಿಗೆ ಧಾವಿಸುವುದು ಮುಖ್ಯ. ಇಂತಹ ಸಂದರ್ಭದಲ್ಲಿ ಅವರ ಜೊತೆಗಿದ್ದವರ ಪಾತ್ರ ಬಹಳ ಮುಖ್ಯವಾಗುತ್ತದೆ. ದೈಹಿಕ ಆರೋಗ್ಯ ಸಮಸ್ಯೆಯಂತೆ ಮಾನಸಿಕ ಆರೋಗ್ಯ ಕೂಡ ಚಿಕಿತ್ಸೆ ಪಡೆಯಬೇಕಾದ ಅಗತ್ಯತೆಯನ್ನು ಹೊಂದಿದೆ. ಜೀವನದಲ್ಲಿ ಏನು ಇಲ್ಲ ಎಂಬ ಭಾವ, ನಿರಾಸಕ್ತಿ, ಅಸಹಜ ನಡವಳಿಕೆ, ಆಹಾರ ಪದ್ದತಿಯಲ್ಲಿ, ಜೀವನಶೈಲಿಯಲ್ಲಿ ತೀವ್ರಮಟ್ಟದ ಅಸಹಜತೆ, ಅಸಹಾಯಕತೆ ಇದನ್ನು ‘ಕಾಗ್ನಿಟಿವ್‌ ಟ್ರಯಾಡ್‌’ ಎಂದು ಪರಿಗಣಿಸಲಾಗುತ್ತದೆ. ಇವು ಮಾನಸಿಕ ಆರೋಗ್ಯ ತುರ್ತು ಪರಿಸ್ಥಿಯನ್ನು ತೋರಿಸುತ್ತದೆ. ಕೇವಲ ಫೋನ್‌ನಲ್ಲಿ ಮಾತನಾಡಿ ಸಲಹೆ ಪಡೆಯುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ವೈದ್ಯರ ಜೊತೆ ನೇರ ಮಾತುಕತೆ ಅಗತ್ಯವಿರುತ್ತದೆ. ಆಪ್ತಸಮಾಲೋಚನೆಯ ಜೊತೆಗೆ ಔಷಧೋಪಚಾರಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಶಮನಕಾರಿ ಔಷಧಗಳು (Antidepressants) ಸುರಕ್ಷಿತವಾಗಿದ್ದು, ಇವು ಅಂತಹ ಆಲೋಚನೆಗಳ ತೀವ್ರತೆಯನ್ನು ಶೀಘ್ರವಾಗಿ ಕಡಿಮೆ ಮಾಡಲು ಸಹಾಯವಾಗುತ್ತದೆ. ಇದೆಲ್ಲದರ ಜೊತೆಗೆ ವಿದೇಶಿ ವಿಶ್ವವಿದ್ಯಾಲಯಗಳು ಕೂಡ ಹೊರಗಿನಿಂದ ಮಕ್ಕಳಿಗೆ ಹೆಚ್ಚು ಸಹಾಯ ಮಾಡಬೇಕು.

ಇದನ್ನೂ ಓದಿ: ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಆರೋಗ್ಯ ಇಲಾಖೆ: ಸಿಟಿ ಜನರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ

ಆತ್ಮಹತ್ಯೆಯ ಅಪಾಯ ಕಡಿಮೆ ಮಾಡುವ ವಿಧಾನಗಳು:

ಎಲೆಕ್ಟ್ರೋ ಕಾನ್ವಲ್ಸಿವ್ ಥೆರಪಿ (ECT) ಮತ್ತು ರಿಪಿಟಿಟಿವ್ ಟ್ರಾನ್ಸ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಶನ್ (rTMS) ನಂತಹ ಮೆದುಳಿನ ಉತ್ತೇಜನ ವಿಧಾನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆಯುಧಗಳ ಲಭ್ಯತೆಯ ಮೇಲೆ ನಿರ್ಬಂಧ ಹೇರುವುದು, ವಿಷಕಾರಿ ವಸ್ತುಗಳು ಅಥವಾ ಔಷಧಿಗಳ ಸುಲಭ ಲಭ್ಯತೆಯನ್ನು ಸೀಮಿತಗೊಳಿಸುವುದು, ಆತ್ಮಹತ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಈ ಎಚ್ಚರಿಕೆ ಸೂಚನೆಗಳನ್ನು ಕಡೆಗಣಿಸಬಾರದು;

ಹಠಾತ್ ಏಕಾಂಗಿ ವರ್ತನೆ, ಒಂದೇ ಪದದ ಉತ್ತರಗಳು, ಸ್ವಚ್ಛತೆಯನ್ನು ಕಡೆಗಣಿಸುವುದು, ಸರಿಯಾಗಿ ಊಟ ಮಾಡದಿರುವುದು, ನಿದ್ರೆಯಲ್ಲಿ ವ್ಯತ್ಯಾಸ, ನಿರಾಶೆಯ ಮಾತುಗಳು ಇವು ಸಾಮಾನ್ಯ ಹೊಂದಾಣಿಕೆ ಸಮಸ್ಯೆಗಳು ಮಾತ್ರವಲ್ಲ; ಆತಂಕ ಅಥವಾ ಹತಾಶೆಯ ಲಕ್ಷಣಗಳಾಗಿರಬಹುದು. ಹಾಗಾಗಿ ನಿಮ್ಮ ಸ್ನೇಹಿತರಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದಾಗ ನಿರ್ಲಕ್ಷ್ಯ ಮಾಡಬೇಡಿ.

ಹೊರದೇಶಕ್ಕೆ ಹೋಗಿರುವ ಹರ್ಷಿತ್ ಹೆಗಡೆಯವರ ಕಿವಿಮಾತು!

ನಮ್ಮ ದೇಶ ಬಿಟ್ಟು ಹೊರಗಡೆ ಹೋಗಿ ಓದುವಾಗ ಅಥವಾ ಕೆಲಸ ಹುಡುಕುವಾಗ ಭಯ, ಆತಂಕವಾಗೋದು ಸಹಜ ಏಕೆಂದರೆ ನಾವು ಹೊಂದಿಕೊಂಡಿದ್ದ ವ್ಯವಸ್ಥೆಯನ್ನು ಬಿಟ್ಟು ಬಂದಿರುತ್ತೇವೆ. ಇದನ್ನು ನಾವು ಮೊದಲು ಒಪ್ಪಿಕೊಳ್ಳಬೇಕು. ಹೊರ ದೇಶದಲ್ಲಿ ಶಿಕ್ಷಣ, ಆಹಾರ ಪದ್ದತಿ, ಜೀವನ ಪದ್ದತಿ ಎಲ್ಲವೂ ಭಾರತಕ್ಕಿಂತ ಭಿನ್ನವಾಗಿ ಇರುವುದರಿಂದ ಅಲ್ಲಿಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು. ಹೊರ ದೇಶದಲ್ಲೂ ಭಾರತದ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ, ಕೆಲವು ಸಮುದಾಯಗಳಿವೆ ಅವರ ಜೊತೆಗೆ ಗೆಳೆತನ ಮಾಡಬೇಕು ಇದರಿಂದ ನಮ್ಮ ಜೊತೆ ನಮ್ಮವರು ಇದ್ದಾರೆ ಎಂಬ ಧೈರ್ಯ ಸಿಗುತ್ತದೆ. ಸೋಷಿಯಲ್‌ ಮೀಡಿಯಾ ಮೂಲಕ ಈಗ ಸುಲಭವಾಗಿ ಕಾಂಟ್ಯಾಕ್ಟ್‌ ಪಡೆಯಬಹುದು. ಜೊತೆಗೆ ನಿತ್ಯ ಕುಟುಂಬದವರ ಜೊತೆ, ಹಳೆ ಗೆಳೆಯರ ಜೊತೆ ಮಾತುಕತೆಯಲ್ಲಿದ್ದರೆ ಒಂದು ಸಮಾಧಾನವಿರುತ್ತದೆ. ಎಲ್ಲದಕ್ಕೂ ತಾಳ್ಮೆ ಮತ್ತು ಆತ್ಮವಿಶ್ವಾಸ ಎರಡೂ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ICC T20 Rankings: ಹ್ಯಾಟ್ರಿಕ್ ಸೊನ್ನೆಯ ನಡುವೆಯೂ ಅಭಿಷೇಕ್ ಅಗ್ರಸ್ಥಾನಕ್ಕಿಲ್ಲ ಭಂಗ

Source link

ರಾಯರಲ್ಲಿ ತಾಯಿ ಹರಕೆ; ರಿಷಬ್ ಶೆಟ್ಟಿ ಜನಿಸಿದ್ದೇ ಗುರುವಾರ: ಅಚ್ಚರಿಯ ವಿಷಯ ತಿಳಿಸಿದ ನಟ – Kannada News | Jai Hanuman actor Rishab Shetty talks about Raghavendra Swamy

ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಜಗ್ಗೇಶ್ (Jaggesh), ರಿಷಬ್ ಶೆಟ್ಟಿ ಮುಂತಾದವರು ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. ‘ಇದು ನಾನು ಎಲ್ಲಿಯೂ ಹಂಚಿಕೊಳ್ಳದೇ ಇರುವ ವಿಚಾರ. ಆಗ ನಾನು ಹುಟ್ಟಿರಲಿಲ್ಲ. ನಮ್ಮ ಮನೆ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ ಅದು. ಮಗ ಹುಟ್ಟಲಿ, ಅವನು ಹುಟ್ಟಿದ ಮೇಲೆ ಒಳ್ಳೆಯದಾಗಲಿ ಅಂತ ರಾಯರಲ್ಲಿ ನಮ್ಮ ತಾಯಿ ಹರಕೆ ಹೊತ್ತುಕೊಂಡರು. ಆನಂತರವೇ ನಾನು ಹುಟ್ಟಿದ್ದು. ನಾನು ಗುರುವಾರವೇ ಜನಿಸಿದ್ದು. ಏನೇ ಕಷ್ಟ ಬಂದರೂ ರಾಯರಿಂದ ಒಳ್ಳೆಯದಾಗತ್ತೆ ಅಂತ ನಮ್ಮ ತಾಯಿ ಹೇಳುತ್ತಾರೆ. ಶೂಟಿಂಗ್ ವೇಳೆ ಏನೇ ಸಮಸ್ಯೆ ಬಂದರೂ ರಾಯರನ್ನು ನೆನಪಿಸಿಕೊಂಡರೆ ಪರಿಹಾರ ಆಗುತ್ತದೆ’ ಎಂದು ರಿಷಬ್ ಶೆಟ್ಟಿ (Rishab Shetty) ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಡೀ ನೆಹರು-ಗಾಂಧಿ ಕುಟುಂಬವೇ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ; ಪಿಯೂಷ್ ಗೋಯಲ್ ಆರೋಪ – Kannada News | Whole Nehru Gandhi family always compromised national interest alleges Piyush Goyal

ನವದೆಹಲಿ, ಫೆಬ್ರವರಿ 25: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ವಿಷಯದಲ್ಲಿ ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ (Rahul Gandhi) ಆರೋಪಕ್ಕೆ ಪ್ರತಿಯಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಗಾಂಧಿ-ನೆಹರು ಕುಟುಂಬ ವಿವಿಧ ಹಂತಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಪದೇ ಪದೇ ರಾಜಿ ಮಾಡಿಕೊಂಡಿದೆ ಎಂದು ಗೋಯಲ್ ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಕೆಲವು ದಿನಗಳ ನಂತರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಗಾಂಧಿ ಕುಟುಂಬದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಮೊದಲು ಜವಾಹರಲಾಲ್ ನೆಹರೂ ಅವರಿಂದ ಪ್ರಾರಂಭಿಸಿ ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾವಾಗಲೂ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಎಐ ಶೃಂಗಸಭೆಯ ಪ್ರತಿಭಟನೆಗೆ ಆಕ್ರೋಶ; ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು

ಯುರೋಪಿಯನ್ ಯೂನಿಯನ್, ಯುಕೆ, ಸ್ವಿಜರ್ಲೆಂಡ್, ಇಎಫ್‌ಟಿಎ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಓಮನ್, ಯುಎಇ ಮತ್ತು ಜಿಸಿಸಿ ದೇಶಗಳೊಂದಿಗೆ ತಮ್ಮ ಸರ್ಕಾರ ಮಾಡಿಕೊಂಡ ವ್ಯಾಪಾರ ಒಪ್ಪಂದಗಳನ್ನು ಸಚಿವ ಪಿಯೂಷ್ ಗೋಯಲ್ ಸಮರ್ಥಿಸಿಕೊಂಡರು. ರೈತರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ಭಾರತವನ್ನು ಮುಜುಗರಕ್ಕೀಡು ಮಾಡಿದ ಎಐ ಶೃಂಗಸಭೆಯ ಸಮಯದಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇದ್ದಾರೆಯೇ ಎಂದು ಗೋಯಲ್ ಪ್ರಶ್ನಿಸಿದ್ದಾರೆ.

ಪಿಯೂಷ್ ಗೋಯಲ್ ಮಾಡಿದ ಆರೋಪಗಳೇನು?:

  1. ಇಂದಿರಾ ಗಾಂಧಿ ದೇಶದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಶಿಮ್ಲಾ ಒಪ್ಪಂದದ ನಂತರ 93,000 ಪಾಕಿಸ್ತಾನಿ ಸೈನಿಕರನ್ನು ಬಿಡುಗಡೆ ಮಾಡಿದಾಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಏಕೆ ವಾಪಾಸ್ ತೆಗೆದುಕೊಳ್ಳಲಿಲ್ಲ? ಎಂದು ಗೋಯಲ್ ಪ್ರಶ್ನಿಸಿದ್ದಾರೆ.
  2. ಜವಾಹರಲಾಲ್ ನೆಹರು ಅವರ ಕಾರ್ಯದರ್ಶಿ ಸಿಐಎ ಮತ್ತು ಕೆಜಿಬಿಗೆ ತೆರೆದ ಪುಸ್ತಕವಾಗಿದ್ದರು. 1954ರಲ್ಲಿ ನೆಹರು ಟಿಬೆಟ್‌ನಲ್ಲಿ ಭಾರತದ ಹಿತಾಸಕ್ತಿಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟರು ಎಂದು ಅವರು ಆರೋಪಿಸಿದ್ದರು. ಭಾರತದ ಬದಲು ಚೀನಾವನ್ನು ಶಾಶ್ವತ ಸದಸ್ಯರನ್ನಾಗಿ ಶಿಫಾರಸು ಮಾಡುವಂತೆ ನೆಹರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರಗಳನ್ನು ಬರೆದಿದ್ದಾರೆ ಎಂದು ಗೋಯಲ್ ಆರೋಪಿಸಿದ್ದಾರೆ.
  3. ರಾಹುಲ್ ಗಾಂಧಿ ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡ ನಕಾರಾತ್ಮಕ ರಾಜಕೀಯದ ಪೋಸ್ಟರ್ ಬಾಯ್. ರಾಹುಲ್ ಗಾಂಧಿ ನಕಾರಾತ್ಮಕ ರಾಜಕೀಯದ ಪೋಸ್ಟರ್ ಬಾಯ್ ಆಗಿದ್ದಾರೆ. ರಾಜಿ ಮಾಡಿಕೊಂಡ ರಾಹುಲ್ ಗಾಂಧಿ 247 ಬಾರಿ ವಿದೇಶ ಪ್ರವಾಸ ಮಾಡುತ್ತಾರೆ. ಅವರು ಸರ್ಕಾರದ ಭದ್ರತಾ ವ್ಯವಸ್ಥೆಗಳನ್ನು ರಾಜಿ ಮಾಡಿಕೊಂಡಿದ್ದಾರೆ. ಅವರು ವಿದೇಶಕ್ಕೆ ಹೋದಾಗ ಭಾರತ ಮತ್ತು ಭಾರತೀಯರನ್ನು ರಾಜಿ ಮಾಡಿಕೊಳ್ಳುತ್ತಾರೆ.
  4. ರಾಹುಲ್ ಗಾಂಧಿ ಯಾವ ರೀತಿಯ ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ನಿಮಗೆಲ್ಲರಿಗೂ ತಿಳಿದಿದೆ. ರಾಹುಲ್ ಗಾಂಧಿ ಸೊರೊಸ್, ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳೊಂದಿಗೆ ತಮ್ಮ ದೇಶವನ್ನು ಹೇಗೆ ರಾಜಿ ಮಾಡಿಕೊಂಡಿದ್ದಾರೆ. ಭಾರತವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಮತ್ತು ಅದರ ಆರ್ಥಿಕತೆಗೆ ಹಾನಿ ಮಾಡಲು ಅವರು OCCRPಯಂತಹ ಸಂಸ್ಥೆಗಳ ಟೂಲ್‌ಕಿಟ್‌ಗಳನ್ನು ಪದೇ ಪದೇ ಬಳಸುತ್ತಾರೆ ಎಂದು ಪಿಯೂಷ್ ಗೋಯಲ್ ಹೇಳಿದರು.
  5. ರಾಹುಲ್ ಗಾಂಧಿಯವರ ಆಜ್ಞೆಯ ಮೇರೆಗೆ, ವಿದೇಶಾಂಗ ಸಚಿವರು ಸ್ವೀಡಿಷ್ ಅಧಿಕಾರಿಗಳನ್ನು ಕೇಳುವ ಮೂಲಕ ಬೋಫೋರ್ಸ್ ಹಗರಣದ ತನಿಖೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಅವರ ಸ್ನೇಹಿತ ಒಟ್ಟಾವಿಯೊ ಕ್ಯಾಟರಾಚಿಯನ್ನು ರಕ್ಷಿಸುವ ಸಲುವಾಗಿ, ಪ್ರಾಮಾಣಿಕ ತನಿಖೆಯನ್ನು ತಡೆಯಲಾಗಿತ್ತು. ಬೋಫೋರ್ಸ್‌ನಲ್ಲಿ ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿ ಯಾವ ಪಾತ್ರ ವಹಿಸಿದ್ದಾರೆ ಎಂಬುದು ತಿಳಿದಿಲ್ಲ. ಆ ಪ್ರಕರಣದ ಮೂಲಕ ಗಾಂಧಿ ಕುಟುಂಬವು ದೇಶವನ್ನು ಪ್ರಪಂಚದ ಮುಂದೆ ಕಳಂಕಿತಗೊಳಿಸಿತು ಮತ್ತು ರಾಜಿ ಮಾಡಿಕೊಂಡಿತು.
  6. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿಯೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಸಾಂವಿಧಾನಿಕವಲ್ಲದ ಅಧಿಕಾರವನ್ನು ಚಲಾಯಿಸಿದ್ದಾರೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. ಅವರು ಪತ್ರಿಕೆಗಳ ಮುಂದೆ ಸಂಪುಟದ ನಿರ್ಧಾರಗಳನ್ನು ಹರಿದು ಹಾಕಿದರು. ಪ್ರಧಾನಿಯನ್ನು ಅಗೌರವಿಸುವುದು, ರಾಷ್ಟ್ರೀಯ ಸಲಹಾ ಮಂಡಳಿಯ ಮೂಲಕ ಸರ್ಕಾರವನ್ನು ನಡೆಸುವುದು ಮತ್ತು ದೇಶದ ಮೇಲೆ ಎಡಪಂಥೀಯ ಸಿದ್ಧಾಂತವನ್ನು ಹೇರುವುದನ್ನು ಮಾಡುತ್ತಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನಮೋಹನ್ ಸಿಂಗ್​ ಸಮಾನವಾಗಿ ಮತ್ತೊಂದು ಸಂಪುಟವನ್ನು ನಡೆಸುತ್ತಿದ್ದರು. ಅವರು ದೇಶದೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದರು.
  7. ಭಾರತ ದೇಶದೊಂದಿಗೆ ರಾಜಿ ಮಾಡಿಕೊಂಡಿದ್ದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರವಲ್ಲ. ಸೂಪರ್ ಪಿಎಂ ಪರವಾಗಿ ಅವರು ತಮ್ಮದೇ ಆದ ರಾಜಕೀಯವನ್ನು ಅನುಸರಿಸುವ ಮೂಲಕ ದೇಶದೊಂದಿಗೆ ರಾಜಿ ಮಾಡಿಕೊಂಡರು. ರಾಜೀವ್ ಗಾಂಧಿ ಕೂಡ ದೇಶದೊಂದಿಗೆ ರಾಜಿ ಮಾಡಿಕೊಂಡಿದ್ದರು” ಎಂದು ಅವರು ಹೇಳಿದ್ದಾರೆ.
  8. ರಾಹುಲ್ ಗಾಂಧಿ ವಿದೇಶಿ ಶಕ್ತಿಗಳು, ಭಾರತ ವಿರೋಧಿ ಶಕ್ತಿಗಳು, ಭಾರತ ವಿರೋಧಿ ಸಂಘಟನೆಗಳು ಮತ್ತು ಭಾರತ ವಿರೋಧಿ ಸರ್ಕಾರಗಳ ಕೈಗೊಂಬೆ ಅಷ್ಟೇ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:02 pm, Wed, 25 February 26

Source link

Exit mobile version