ನಿರ್ಣಾಯಕ ಪಂದ್ಯಕ್ಕೆ ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11 – Kannada News | India playing 11 for zimbabwe match

T20 World Cup 2026: ಟಿ20 ವಿಶ್ವಕಪ್​ನ 48ನೇ ಪಂದ್ಯದಲ್ಲಿ ಭಾರತ ಮತ್ತು ಝಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಾಳೆ (ಫೆ.26) ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಏಕೆಂದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ನಿರ್ಣಾಯಕ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್​ ಲೈನಪ್​ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಅದರಂತೆ ಝಿಂಬಾಬ್ವೆ ವಿರುದ್ಧ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯಬಹುದು. ಇನ್ನು ತಿಲಕ್ ವರ್ಮಾ ಬದಲಿಗೆ ಇಶಾನ್ ಕಿಶನ್​ನ ಮೂರನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಬಹುದು.

ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ವಾಷಿಂಗ್ಟನ್ ಸುಂದರ್​ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಇನ್ನು ವೈಯುಕ್ತಿಕ ಕಾರಣಗಳಿಂದಾಗಿ ಮನೆಗೆ ತೆರಳಿರುವ ರಿಂಕು ಸಿಂಗ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಅಕ್ಷರ್ ಪಟೇಲ್​ಗೆ ಅವಕಾಶ ಸಿಗಬಹುದು.

ಇನ್ನುಳಿದಂತೆ ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಜಸ್​ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಸಂಜು ಸ್ಯಾಮ್ಸನ್
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ವಾಷಿಂಗ್ಟನ್ ಸುಂದರ್
  • ಅಕ್ಷರ್ ಪಟೇಲ್
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ವರುಣ್ ಚಕ್ರವರ್ತಿ

ಚೆನ್ನೈ ಪಿಚ್​ನಲ್ಲಿ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ಸ್ವಿಂಗ್ ದೊರೆತರೂ, ಪಂದ್ಯ ಮುಂದುವರಿದಂತೆ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಟೀಮ್ ಇಂಡಿಯಾ ಮೂವರು ಸ್ಪಿನ್ನರ್​ಗಳೊಂದಿಗೆ ರಣತಂತ್ರ ರೂಪಿಸುವ ಸಾಧ್ಯತೆಯಿದೆ.

ಅದರಂತೆ ಟೀಮ್ ಇಂಡಿಯಾ ಪರ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಕಣಕ್ಕಿಳಿಯುವುದು ಖಚಿತ. ಅವರೊಂದಿಗೆ ಸ್ಪಿನ್ ಆಲ್​ರೌಂಡರ್​ಗಳಾಗಿ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್​ಗೆ ಚಾನ್ಸ್ ನೀಡುವ ಸಾಧ್ಯತೆಯಿದೆ. ಈ ಮೂಲಕ ಮೂವರು ಸ್ಪಿನ್ನರ್​ಗಳೊಂದಿಗೆ ಟೀಮ್ ಇಂಡಿಯಾ ಝಿಂಬಾಬ್ವೆ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಪ್ಲ್ಯಾನ್ ರೂಪಿಸಬಹುದು.

ಇದನ್ನೂ ಓದಿ: ಇಂಗ್ಲೆಂಡ್​ಗೆ ಜಯ… ಭಾರತ vs ಪಾಕಿಸ್ತಾನ್ ‘ಸೆಮಿ’ ಮುಖಾಮಖಿ ಇಲ್ಲ!

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published On – 2:08 pm, Wed, 25 February 26

Source link

ರಶ್ಮಿಕಾ ಮಂದಣ್ಣ ಮದುವೆ ಸಿಂಗಾರಗೊಂಡ ಕೊಡಗಿನ ಮನೆ: ವಿಡಿಯೋ ನೋಡಿ – Kannada News | Rashmika Mandanna wedding her Kodagu house decorated with flower and light

ರಶ್ಮಿಕಾ ಮಂದಣ್ಣ (Rashmika Mandanna) ಮೂಲತಃ ಕೊಡಗಿನವರು. ಕೊಡಗಿನ ವಿರಾಜಪೇಟೆ ಸಮೀಪದ ಕದಿಲೂರು ಗ್ರಾಮದವರು. ರಶ್ಮಿಕಾ ಅವರ ಪೋಷಕರು ಇಂದಿಗೂ ಅಲ್ಲಿಯೇ ವಾಸವಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಜೊತೆಗೆ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ಆಗುತ್ತಿದ್ದಾರೆ. ರಶ್ಮಿಕಾ ಮದುವೆ ಕಾರಣಕ್ಕೆ ಅವರ ಮೂಲ ಮನೆಯನ್ನು ಸಿಂಗರಿಸಲಾಗಿದೆ. ಮನೆಯ ಮುಂಚೆ ಚಪ್ಪರ ಹಾಕಲಾಗಿದೆ, ಮನೆಯ ಬಾಗಿಲನ್ನು ಹೂವಿನಿಂದ ಅಲಂಕರಿಸಲಾಗಿದೆ. ಮನೆಯಲ್ಲಿ ಈಗ ಯಾರೂ ಇಲ್ಲವಾದರೂ ಮನೆಯನ್ನು ನೋಡಿಕೊಳ್ಳುತ್ತಿರುವ ಮಹಿಳೆ ಟಿವಿ9 ಜೊತೆಗೆ ಮಾತನಾಡಿದ್ದು, ರಶ್ಮಿಕಾ ಅವರ ಕುಟುಂಬದ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಮೂಲದ ಅರವಿಂದ್ ಕೆ.ಸಿ. ಓಪನ್​ಎಐನ ನೂತನ ಸಿಪಿಒ; ಯಾವುದಿದು ಹುದ್ದೆ? – Kannada News | Indian origin Arvind KC appointed as Chief People Office at OpenAI

ಸ್ಯಾನ್ ಫ್ರಾನ್ಸಿಸ್ಕೋ, ಫೆಬ್ರುವರಿ 25: ವಿಶ್ವದ ನಂಬರ್ ಒನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಎನಿಸಿರುವ ಓಪನ್​ಎಐನ ಚೀಫ್ ಪೀಪಲ್ ಆಫೀಸರ್ ಹುದ್ದೆಗೆ (OpenAI Chief People Officer) ಭಾರತ ಮೂಲದ ಅರವಿಂದ್ ಕೆ.ಸಿ. (Arvind KC) ನೇಮಕವಾಗಿದ್ದಾರೆ. ಓಪನ್​ಎಐನ ಚಟುವಟಿಕೆ ಮತ್ತು ಬ್ಯುಸಿನೆಸ್ ವಿಸ್ತರಣೆ ಬಹಳ ವೇಗದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರವಿಂದ್ ಕೆ.ಸಿ. ಅವರಿಗೆ ಹೊಣೆಗಾರಿಕೆ ಬಹಳ ದೊಡ್ಡದಿದೆ.

ಚೀಫ್ ಪೀಟಲ್ ಆಫೀಸರ್ ಎಂಬುದು ಎಚ್​ಆರ್​ಗೆ ಸಂಬಂಧಿಸಿದ ಹುದ್ದೆ. ಮಾನವ ಸಂಪನ್ಮೂಲದ ಹಂಚಿಕೆಯ ಜವಾಬ್ದಾರಿ ಇರುವಂತಹ ಹುದ್ದೆ. ನೇಮಕಾತಿ, ಪ್ರತಿಭಾ ಬಳಕೆ, ಉದ್ಯೋಗಿ ಕ್ಷಮತೆ ಅಭಿವೃದ್ಧಿ ಇತ್ಯಾದಿ ಕಾರ್ಯಗಳನ್ನು ಗಮನಿಸುವುದು ಈ ಹುದ್ದೆಯಲ್ಲಿರುವವರ ಜವಾಬ್ದಾರಿ.

ಓಪನ್​ಎಐನಲ್ಲಿ ಈ ಮುಂಚೆ ಚೀಫ್ ಪೀಪಲ್ ಆಫೀಸರ್ ಆಗಿದ್ದ ಜೂಲಿಯಾ ವಿಲ್ಲಾಗ್ರ ಅವರು 2025ರ ಆಗಸ್ಟ್​ನಲ್ಲೇ ಕಂಪನಿ ತರೆದಿದ್ದರು. ಐದಾರು ತಿಂಗಳ ನಂತರ ಹೊಸ ನೇಮಕಾತಿ ಆಗಿದೆ. ಅರವಿಂದ್ ಕೆ.ಸಿ. ಅವರು ಮಹಾರಾಷ್ಟ್ರದ ಯೂನಿವರ್ಸಿಟಿ ಇನ್ಸ್​ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಿಂದ ಕೆಮಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕದ ಸಂಟಾ ಕ್ಲಾರಾ ಯೂನಿವರ್ಸಿಟಿಯಲ್ಲಿ ಎಂಬಿಎಂ ಮಾಡಿದ್ದಾರೆ. ರೋಬ್ಲೋಕ್ಸ್, ಗೂಗಲ್, ಪಲಂಟಿರ್ ಟೆಕ್ನಾಲಜೀಸ್, ಮೆಟಾ ಪ್ಲಾಟ್​ಫಾರ್ಮ್ಸ್ ಮೊದಲಾದ ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಿರ್ವಹಣೆ, ಹೀಗೆ ಎರಡು ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವ ಅವರಿಗಿದೆ.

ಇದನ್ನೂ ಓದಿ: ನಮ್ಮನ್ನು ಕಿತ್ತು ತಿನ್ನುತ್ತಿದ್ದವರು ಇವತ್ತು ಟ್ಯಾರಿಫ್ ಕಟ್ತಿದಾರೆ, ಅವರೂ ಖುಷ್, ನಾವೂ ಖುಷ್: ಡೊನಾಲ್ಡ್ ಟ್ರಂಪ್

ಅರವಿಂದ್ ಕೆ.ಸಿ. ಅವರು ಓಪನ್​ಎಐನ ಚೀಫ್ ಸ್ಟ್ರಾಟಿಜಿ ಆಫೀಸರ್ ಆಗಿರುವ ಜೇಸನ್ ಕ್ವೋನ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಜಾಗತಿಕವಾಗಿ ಎಐ ಬೂಮ್ ಹೆಚ್ಚುತ್ತಿದ್ದು, ಆ ಕ್ಷೇತ್ರದಲ್ಲಿ ಪರಿಣಿತರ ಅವಶ್ಯಕತೆ ಬಹಳ ಹೆಚ್ಚಿದೆ. ಎಐ ಪರಿಣಿತರಿಗೆ ಬೇಡಿಕೆ ಬಹಳ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೆ.ಸಿ. ಅವರು ಚೀಫ್ ಪೀಪಲ್ ಆಫೀಸರ್ ಆಗಿ ಗುರುತರ ಹೊಣೆ ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

3 ವರ್ಷಗಳಲ್ಲಿ ರಾಜ್ಯ ಸರ್ಕಾರ ಭರ್ತಿ ಮಾಡಿರುವ ಉದ್ಯೋಗ 40 ಸಾವಿರವಲ್ಲ, ಕೇವಲ 8 ಸಾವಿರ? – Kannada News | Karnataka Govt Jobs: CM Siddaramaiah’s 40,000 Recruitment Claim Under BJP Scrutiny

ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕೌಂಟರ್​Image Credit source: Google

ಬೆಂಗಳೂರು, ಫೆಬ್ರವರಿ 25: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ ಎಂದು ತಿಳಿಸಿದ್ದರು. ಆದ್ರೆ ಮುಖ್ಯಮಂತ್ರಿಗಳ ಹೇಳಿಕೆ ಹಸೀ ಸುಳ್ಳು ಎಂದು ವಿಪಕ್ಷ ಬಿಜೆಪಿ ಆರೋಪಿಸಿದ್ದು, ಮಿಂಚಿನ ವೇಗಕ್ಕಿಂತಲೂ ಸಿದ್ದರಾಮಯ್ಯನವರು ಹೇಳುವ ಸುಳ್ಳಿನ ವೇಗವೇ ಹೆಚ್ಚು ಎಂದು ವ್ಯಂಗ್ಯವಾಡಿದೆ.

ಬಿಜೆಪಿ ಆರೋಪವೇನು?

ಸುಳ್ಳು ಹೇಳಿದರೂ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳಬೇಕು ಎಂಬ ನಾಣ್ಣುಡಿ ಇದೆ. ಆದರೆ ಸಿದ್ದರಾಮಯ್ಯ ಅವರು ಸತ್ಯದ ತಲೆ ಮೇಲೆ ಮಾತ್ರವಲ್ಲ, ಸತ್ಯದ ಪೂರ್ತಿ ದೇಹದ ಮೇಲೆಯೇ ಹೊಡೆಯುವಂತಹ ಸುಳ್ಳು ಹೇಳಿದ್ದಾರೆ. ತಮ್ಮ ಕರ್ನಾಟಕ ನಿರ್ನಾಮದ ಬೋಗಸ್‌ ಗ್ಯಾರಂಟಿ ಸರ್ಕಾರದ ಈ ಅವಧಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ನಿನ್ನೆ ಹಸಿಹಸಿ ಸುಳ್ಳು ಹೇಳಿದ್ದರು. ಆದರೆ ಕಾಂಗ್ರೆಸ್​​ ಸರ್ಕಾರದ ಈ ಅವಧಿಯಲ್ಲಿ ನೇಮಕಾತಿ ಪೂರ್ಣಗೊಂಡ ಸರ್ಕಾರಿ ಹುದ್ದೆಗಳು ಕೇವಲ 8,157 ಹಾಗೂ ನೇಮಕಾತಿ ಪ್ರಗತಿಯಲ್ಲಿರುವ ಹುದ್ದೆಗಳು ಕೇವಲ 3,081. ಈ ಮಾಹಿತಿಯನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಎರಡು ತಿಂಗಳ ಹಿಂದೆ ನಡೆದ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ ಸಿದ್ದರಾಮಯ್ಯ

2025ರ ಡಿಸೆಂಬರ್​​ 18ರಂದು ಈ ಬಗ್ಗೆ ಸತ್ಯ ಮಾಹಿತಿ ನೀಡಿದ್ದ ಸಿಎಂ 2026ರ ಫೆಬ್ರವರಿ 24ರಂದು ಸುಳ್ಳು ಹೇಳಿದ್ದಾರೆ. ಸತ್ಯ ಏನೆಂಬುದು ತಿಳಿದಿದ್ದರೂ, ಸಿಎಂ ಹುದ್ದೆಯಲ್ಲಿ ಕುಳಿತು ಹೀಗೆ ಹಸಿಹಸಿ ಸುಳ್ಳು ಹೇಳುವುದಕ್ಕೆ ಅವರಿಗೆ ನಾಚಿಕೆಯಾಗಬೇಕು ಎಂದು ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸದನದ ಒಳಗೊಂದು ಮಾಹಿತಿ, ಹೊರಗೆ ಸುಳ್ಳಿನ ಪ್ರದರ್ಶನ ಮಾಡಿ ಇನ್ನೂ ಎಷ್ಟು ದಿನ ಜನರನ್ನು ವಂಚಿಸುವಿರಿ? ಜನರ ಮುಂದೆ, 40,000 ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳುವುದು ರಾಜ್ಯದ ನಿರುದ್ಯೋಗಿ ಯುವಜನತೆಗೆ ಮಾಡುತ್ತಿರುವ ನೇರ ವಂಚನೆಯಲ್ಲವೇ? ರಾಜ್ಯದ ಅತಿ ದೀರ್ಘಾವಧಿ ಮುಖ್ಯಮಂತ್ರಿಗಳಾಗಿರುವ ತಾವೇ ಈ ರೀತಿ ರಾಜ್ಯದ ಜನತೆಯ ದಾರಿ ತಪ್ಪಿಸಿದರೆ ಹೇಗೆ? ದಯವಿಟ್ಟು ಸುಳ್ಳಿನ ಪ್ರಚಾರ ನಿಲ್ಲಿಸಿ, ಯುವಜನರ ಆಕ್ರೋಶ, ನೋವನ್ನು ಅರ್ಥಮಾಡಿಕೊಳ್ಳಿ. ಪರಿಸ್ಥಿತಿ ಕೈಮೀರುವ ಮುನ್ನ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಿ, ನಮ್ಮ ಯುವಜನತೆಗೆ ನ್ಯಾಯ ಒದಗಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಕೌಂಟರ್​​ ಕೊಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಸಿಕ್ಕಿದೆ ರಶ್ಮಿಕಾ-ವಿಜಯ್ ಮದುವೆ ಆಹ್ವಾನ? – Kannada News | Which Kannada movie celebrities got Rashmika Vijay wedding invitation

ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ತೆಲಂಗಾಣ ಯುವಕ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಾರೆ. ನಾಳೆ (ಫೆಬ್ರವರಿ 26) ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದ್ದು, ಇಂದು ಸಂಗೀತ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಬಲು ಅದ್ಧೂರಿಯಾಗಿ ಮದುವೆ ನಡೆಯುತ್ತಿದ್ದು ವಧು-ವರರಿಗೆ ಆಪ್ತವಾಗಿರುವ ಕೆಲವು ಸಿನಿಮಾ ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಅವರು ಸಹ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಅವರ ಹೊರತಾಗಿ ಕನ್ನಡ ಚಿತ್ರರಂಗದ ಇನ್ಯಾರಿಗೂ ಆಹ್ವಾನ ಇಲ್ಲವೇ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ದೊರಕಿದೆ.

ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟ, ನಟಿಯರು ಮತ್ತು ನಿರ್ದೇಶಕರುಗಳಿಗೆ ಆಹ್ವಾನ ನೀಡಿದ್ದಾರೆ ಆದರೆ ಮದುವೆಗಲ್ಲ ಬದಲಿಗೆ ರಿಸೆಪ್ಷನ್​​ಗೆ. ಮದುವೆಗೆ ಕುಟುಂಬ ಸದಸ್ಯರು ಮತ್ತು ಬಹಳ ಆಪ್ತವಾಗಿರುವ ಕೆಲವೇ ಸ್ನೇಹಿತರನ್ನು ಹೊರತುಪಡಿಸಿ ಇನ್ಯಾರಿಗೂ ಆಹ್ವಾನ ನೀಡಿಲ್ಲ. ಆದರೆ ಮಾರ್ಚ್ 4 ರಂದು ನಡೆಯಲಿರುವ ಅದ್ಧೂರಿ ರಿಸೆಪ್ಷನ್​​ಗೆ ತೆಲುಗು, ಬಾಲಿವುಡ್ ಮತ್ತು ಸ್ಯಾಂಡಲ್​​ವುಡ್​​ನ ಹಲವು ನಟ-ನಟಿಯರಿಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಆಹ್ವಾನ ನೀಡಿದ್ದಾರೆ.

ಕನ್ನಡ ಚಿತ್ರರಂಗದವರಾದರೂ ನಾನಾ ಕಾರಣಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿರುವ ರಶ್ಮಿಕಾ ತಮ್ಮ ಮದುವೆಗೂ ಸಹ ಕನ್ನಡ ಚಿತ್ರರಂಗದ ಯಾರನ್ನೂ ಆಹ್ವಾನಿಸಿಲ್ಲ ಎನ್ನಲಾಗಿತ್ತು, ಶೆಟ್ಟಿ ಗ್ಯಾಂಗಿನ ಪ್ರಮೋದ್ ಶೆಟ್ಟಿ ಅವರಂತೂ ರಶ್ಮಿಕಾ ನಮ್ಮನ್ನು ಕರೆಯುವುದಿಲ್ಲ ಎಂಬುದು ಗೊತ್ತಿರುವುದೇ ಎಂದು ವ್ಯಂಗ್ಯ ಮಾಡಿದ್ದರು. ಆದರೆ ರಶ್ಮಿಕಾ ಅವರು ಕನ್ನಡ ಚಿತ್ರರಂಗದ ಕೆಲವು ಪ್ರಮುಖ ನಟ-ನಟಿಯರಿಗೆ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ:ವಿಜಯ್ ಪಾಲಕರು ರಶ್ಮಿಕಾ ಮಂದಣ್ಣಗೆ ಹಾಕಿದ ಷರತ್ತು ಏನು?

ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಆಶಿಕಾ ರಂಗನಾಥ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್, ನಿರ್ದೇಶಕರಾದ ಎ ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಸೇರಿ ಒಟ್ಟು 11 ಜನರಿಗೆ ಆರತಕ್ಷತೆಯ ಆಮಂತ್ರಣ ಪತ್ರಿಕೆಯನ್ನು ರಶ್ಮಿಕಾ ಮಂದಣ್ಣ ತಲುಪಿಸಿದ್ದಾರೆ. ಇದರ ಜೊತೆಗೆ ಖುದ್ದು ಸಂದೇಶ ಕಳಿಸಿ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ರಶ್ಮಿಕಾರನ್ನು ಚಿತ್ರರಂಗಕ್ಕೆ ಲಾಂಚ್ ಮಾಡಿದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಅಥವಾ ಒಟ್ಟಾರೆ ಶೆಟ್ಟಿ ಗ್ಯಾಂಗಿಗೆ ಆಹ್ವಾನವನ್ನು ರಶ್ಮಿಕಾ ನೀಡಿಲ್ಲ.

ಆಹ್ವಾನ ಸಿಕ್ಕಿರುವ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ನಟಿ ಆಶಿಕಾ ರಂಗನಾಥ್ ಈಗಾಗಲೇ ಮದುವೆಗೆ ತೆರಳಿದ್ದಾರೆ. ಆರತಕ್ಷತೆಗೆ ಯಾರ್ಯಾರು ಹೋಗಲಿದ್ದಾರೆ ಎಂಬುದು ಮಾರ್ಚ್ 04 ರಂದು ತಿಳಿಯಲಿದೆ. ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣ ಐಶಾರಾಮಿ ಹೋಟೆಲ್​​ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ತೆಲುಗು ಚಿತ್ರರಂಗದ ಹಲವಾರು ಮಂದಿ ಸೆಲೆಬ್ರಿಟಿಗಳು, ಬಾಲಿವುಡ್​ನ ಸೆಲೆಬ್ರಿಟಿಗಳ ಜೊತೆಗೆ ಆಂಧ್ರ ಮತ್ತು ತೆಲಂಗಾಣದ ರಾಜಕಾರಣಿಗಳು ಸಹ ಆರತಕ್ಷತೆಯಲ್ಲಿ ಭಾಗಿ ಆಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವಕಪ್​ನಲ್ಲಿ ‘ಬ್ರೂಕ್ ಬ್ಲಸ್ಟರ್’ ವಿಶ್ವ ದಾಖಲೆ – Kannada News | Harry Brook Creates New World Record in T20 World Cup 2026

T20 World Cup 2026: ಟಿ20 ವಿಶ್ವಕಪ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ಬರೆದಿರುವುದು ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ (Harry Brook). ಅದು ಸಹ ಭರ್ಜರಿ ಶತಕ ಸಿಡಿಸುವ ಮೂಲಕ. ಈ ಶತಕದೊಂದಿಗೆ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

Source link

ಧಾರವಾಡ ಮೂಲದ ವಿಜ್ಞಾನಿ ಡಾ. ಕಟ್ಟಿಗೆ ಕ್ಯಾನರ್ ಸಂಶೋಧನೆಗೆ ಸಂದಿದೆ ಅಂತರಾಷ್ಟ್ರೀಯ ಮನ್ನಣೆ – Kannada News | Dr. Kattesh V. Katti: Top Innovator of the Year in Healthcare

Dr. Kattesh V. Katti: Top Innovator of the Year in HealthcareImage Credit source: Getty Images

ವಿಜ್ಞಾನ ಕ್ಷೇತ್ರದಲ್ಲಿ ಭಾರತ ಮೂಲದ ಅನೇಕ ಮಹನೀಯರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಂತಹವರಲ್ಲಿ ಒಬ್ಬರು ಡಾ. ಕಟ್ಟೇಶ್ ವಿ. ಕಟ್ಟಿ (Dr. Kattesh V. Katti). ಇವರು ಮೂಲತಃ ಧಾರಾವಾಡದವರಾಗಿದ್ದು, ಇವರ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯೇ. ಇವರನ್ನು “ಹಸಿರು ನ್ಯಾನೊತಂತ್ರಜ್ಞಾನದ ಪಿತಾಮಹ” (Father of Green Nanotechnology) ಎಂದೇ ಕರೆಯಲಾಗುತ್ತದೆ. ಗ್ರೀನ್ ನ್ಯಾನೋಟೆಕ್ನಾಲಜಿ ಕ್ಷೇತ್ರದಲ್ಲಿ ಇವರ ಸಾಧನೆ ಅಪಾರವಾಗಿದ್ದು, ಸಾಂಪ್ರದಾಯಿಕ ಆಯುರ್ವೇದ ಔಷಧಿಗಳನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ‘ನ್ಯಾನೋ-ಆಯುರ್ವೇದ’ ಪರಿಕಲ್ಪನೆಯನ್ನು ಪರಿಚಯಿಸಿದ್ದು. ಈ ಸಾಧನೆಗಾಗಿ ಡಾ. ಕಟ್ಟಿ ಅವರನ್ನು ಐಎಓಟಿಪಿ (IAOTP- International Association of Top Professionals) ಸಂಸ್ಥೆ 2026ನೇ ಸಾಲಿನ ಹೆಲ್ತ್‌ಕೇರ್ ಟಾಪ್ ಇನೋವೇಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಗೌರವ ಸಮಾರಂಭವು ಡಿಸೆಂಬರ್‌ನಲ್ಲಿ ನ್ಯೂಯಾರ್ಕ್ ನಗರದ ಐತಿಹಾಸಿಕ ದಿ ಪ್ಲಾಜಾ ಹೋಟೆಲ್ ನಲ್ಲಿ ನಡೆಯಲಿದೆ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಗ್ರೀನ್ ನ್ಯಾನೋಟೆಕ್ನಾಲಜಿಯ ಪಿತಾಮಹ

ಡಾ. ಕಟ್ಟೇಶ್ ವಿ. ಕಟ್ಟಿ ಅವರು ವಿಶ್ವವಿಖ್ಯಾತ ಭಾರತೀಯ- ಅಮೇರಿಕನ್ ವಿಜ್ಞಾನಿ, ಮಿಸೌರಿ ವಿಶ್ವವಿದ್ಯಾಲಯದ ಮೆಡಿಕಲ್ ಸ್ಕೂಲ್‌ನಲ್ಲಿ ಪ್ರಾಧ್ಯಾಪಕರಾಗಿರುವ ಇವರು, ಆಯುರ್ವೇದ ಮತ್ತು ಆಧುನಿಕ ನ್ಯಾನೊತಂತ್ರಜ್ಞಾನವನ್ನು ಸಂಯೋಜಿಸಿ (Nano-Ayurvedic Medicine) ಕ್ಯಾನ್ಸರ್ ಚಿಕಿತ್ಸೆಗಾಗಿ ಟೀ, ದಾಲ್ಚಿನ್ನಿ ಮುಂತಾದ ನೈಸರ್ಗಿಕ ಮೂಲಗಳಿಂದ (phytochemicals) ವಿಷಕಾರಿಯಲ್ಲದ ನ್ಯಾನೊಪಾರ್ಟಿಕಲ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸಸ್ಯ ಮೂಲದ ಫೈಟೋಕೇಮಿಕಲ್‌ಗಳನ್ನು ಬಳಸಿ 100% ಹಸಿರು ವಿಧಾನದಲ್ಲಿ ನ್ಯಾನೋ ವಸ್ತುಗಳನ್ನು ಅಭಿವೃದ್ಧಿಪಡಿಸುವುದು ಅವರ ಸಂಶೋಧನೆಯ ವಿಶೇಷತೆ. ಈ ವಿಧಾನವು ಪರಿಸರ ಸ್ನೇಹಿ ಹಾಗೂ ಆರೋಗ್ಯಪರವಾಗಿರುವುದು ಗಮನಾರ್ಹ. ಇವರ ಈ ಸಂಶೋಧನೆಯು ಕ್ಯಾನ್ಸರ್ ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿಯಲು ಸಹಾಯ ಮಾಡಿದೆ.

ಇದನ್ನೂ ಓದಿ: ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ಕ್ಯಾನ್ಸರ್ ಚಿಕಿತ್ಸೆಯಲ್ಲಿ ನವೀನ ತಂತ್ರಜ್ಞಾನ

ಡಾ. ಕಟ್ಟಿ ಅಭಿವೃದ್ಧಿಪಡಿಸಿದ ಕಟ್ಟಿ ಪೆಪ್ಟೈಡ್ಸ್ (Katti Peptides) ನ್ಯಾನೋ ಕಣಗಳು ಕೋಶ ಮಟ್ಟದಲ್ಲಿ ರೋಗ ಪತ್ತೆಹಚ್ಚಲು ಸಹಕಾರಿಯಾಗಿವೆ. ವಿಶೇಷವಾಗಿ ಈ ನ್ಯಾನೋ ಕಣಗಳನ್ನು ಟ್ಯೂಮರ್ ಪ್ರದೇಶಗಳಲ್ಲಿ ಬಳಸುವ ಮೂಲಕ ಸ್ತನ, ಯಕೃತ್, ಶ್ವಾಸಕೋಶ, ಬಾಯಿ, ಪ್ರೋಸ್ಟೇಟ್ ಹಾಗೂ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೆ, ಆಸ್ಟಿಯೋಆರ್ಥ್ರೈಟಿಸ್ ಮತ್ತು ಪಾರ್ಕಿನ್ಸನ್‌ಗಳಂತಹ ದೀರ್ಘಕಾಲದ ಕಾಯಿಲೆಗಳಿಗೂ ಅವರ ಸಂಶೋಧನೆ ವಿಸ್ತರಿಸಿದೆ. ಇದಲ್ಲದೆ ನ್ಯಾನೋ ಆಯುರ್ವೇದಿಕ್ ಮೆಡಿಸಿನ್ ಎಂಬ ಹೊಸ ವೈದ್ಯಕೀಯ ವಿಧಾನವನ್ನು ಪರಿಚಯಿಸಲಾಗಿದೆ. ಈ ಉತ್ಪನ್ನಗಳಲ್ಲಿ ಕೆಲವು ಭಾರತ ಸರ್ಕಾರದ ಅನುಮೋದನೆ ಪಡೆದಿವೆ.

ಡಾ. ಕಟ್ಟಿ ಅವರ ಸಂಶೋಧನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದು, ಹಸಿರು ತಂತ್ರಜ್ಞಾನವನ್ನು ಬಳಸಿಕೊಂಡು ಜೀವ ಉಳಿಸುವ ಔಷಧಿಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ರೀನ್ ನ್ಯಾನೋಟೆಕ್ನಾಲಜಿಯನ್ನು ಇನ್ನಷ್ಟು ವಿಸ್ತರಿಸಿ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಉದ್ದೇಶ ಅವರದ್ದಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತನೆಂದು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ ಕಳ್ಳ: 18 ವರ್ಷ ತುಂಬುತ್ತಿದ್ದಂತೆ ಕೇಕ್​​​ ಕಟ್​ ಮಾಡಿ ಜೈಲಿಗೆ ಕಳುಹಿಸಿದ ಪೊಲೀಸರು – Kannada News | Paulo das Neves Arrested on 18th Birthday by Brazil Police in Mock Celebration

ಬ್ರೆಜಿಲ್‌ನ ರಿಯೊ ಗ್ರಾಂಡೆ ದೊ ನಾರ್ಟೆ (Rio Grande do Norte) ಪ್ರಾಂತ್ಯದಲ್ಲಿ ವಿಚಿತ್ರ ಮತ್ತು ಸ್ವಾರಸ್ಯಕರ ಘಟನೆ ನಡೆದಿದೆ. ಪೌಲೊ ರೋಡ್ರಿಗೋ ದಾಸ್ ನೆವೆಸ್ (Paulo Rodrigo das Neves) ಎಂಬ ಯುವಕ ದೀರ್ಘಕಾಲದಿಂದ ಬ್ರೆಜಿಲ್ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈತ ಕಾರುಗಳ ಸೌಂಡ್ ಸಿಸ್ಟಮ್ ಮತ್ತು ಇತರ ಬಿಡಿಭಾಗಗಳನ್ನು ಕಳವು ಮಾಡುತ್ತಿದ್ದ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಈತನ ಕೃತ್ಯಗಳು ಹಲವಾರು ಬಾರಿ ಸೆರೆಯಾಗಿದ್ದವು. ಆದರೆ, ಬ್ರೆಜಿಲ್‌ನ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಗಂಭೀರ ಅಪರಾಧಗಳಿಗಾಗಿ ಬಂಧಿಸಿ ಜೈಲಿಗೆ ಹಾಕಲು ಸಾಧ್ಯವಿರಲಿಲ್ಲ. ಪೌಲೊ ತನ್ನ 18ನೇ ವರ್ಷಕ್ಕೆ ಕಾಲಿಡುವ ದಿನದವರೆಗೂ ಪೊಲೀಸರು ಕಾದು ಕುಳಿತಿದ್ದರು. ಆತ 18ನೇ ವರ್ಷಕ್ಕೆ ಕಾಲಿಟ್ಟ ತಕ್ಷಣವೇ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧನದ ನಂತರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಆತನಿಗೆ ಒಂದು ಸರ್ಪ್ರೈಸ್ ನೀಡಿದರು. ಕೇಕ್ ಮತ್ತು ಕೋಕಾಕೋಲಾ ತಂದು ಪೊಲೀಸರು ಆತನ ಸುತ್ತಲೂ ನಿಂತು ವ್ಯಂಗ್ಯವಾಗಿ “ಹ್ಯಾಪಿ ಬರ್ತ್ ಡೇ” ಹಾಡನ್ನು ಹಾಡಿದ್ದಾರೆ. ಈ ಅವಮಾನಕರ ಮತ್ತು ವಿಚಿತ್ರ ಹುಟ್ಟುಹಬ್ಬದ ಆಚರಣೆಯ ವೇಳೆ ಆತನ ತಾಯಿಯೂ ಅಲ್ಲೇ ಇದ್ದರು. ಕೇಕ್ ಕತ್ತರಿಸಿದ ನಂತರ ಪೊಲೀಸರು ಆತನಿಗೆ ಕೈಕೋಳ ತೊಡಿಸಿ ಜೈಲಿಗೆ ಕಳುಹಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉರ್ದುವಿನಲ್ಲಿ ಪ್ರಕಟವಾಯ್ತು ಸರ್ಕಾರಿ ಆಹ್ವಾನ ಪತ್ರಿಕೆ! ಸಚಿವ ದಿನೇಶ್ ಗುಂಡೂರಾವ್ ಉಡಾಫೆ ಉತ್ತರ – Kannada News | Karnataka Govt Invitation in Urdu Sparks Row; Minister Dinesh Gundu Rao Responds to Language Controversy

ಉರ್ದುವಿನಲ್ಲಿ ಪ್ರಕಟವಾಯ್ತು ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ!Image Credit source: tv9

ಬೆಂಗಳೂರು, ಫೆಬ್ರವರಿ 25: ಕರ್ನಾಟಕದಲ್ಲಿ (Kanataka) ಅಧಿಕೃತ ಆಡಳಿತ ಭಾಷೆಯಾದ ಕನ್ನಡವನ್ನೇ (Kannada) ನಿರ್ಲಕ್ಷಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ (Urdu) ಪ್ರಕಟಿಸಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಿಮೋಫಿಲಿಯಾ ರೋಗಿಗಳಿಗೆ ರೋಗನಿರೋಧಕ ಚಿಕಿತ್ಸೆ ಹಾಗೂ 108 ಆಂಬುಲೆನ್ಸ್ ಸೇವೆಗಳ ಲೋಕಾರ್ಪಣೆಗೊಳಿಸುವ ಮಹತ್ವದ ಕಾರ್ಯಕ್ರಮವನ್ನು ನೆಹರೂ ತಾರಾಲಯದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಕೇವಲ ಉರ್ದುವಿನಲ್ಲಿ ಮುದ್ರಿಸಲಾಗಿದೆ ಎನ್ನಲಾಗಿದ್ದು, ಕನ್ನಡ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸರ್ಕಾರ ಆಡಳಿತ ಭಾಷೆ ಕನ್ನಡವನ್ನೇ ಮರೆತುಬಿಟ್ಟಿದೆಯೇ, ಅಥವಾ ಯಾವುದಾದರೂ ಒಂದು ಸಮುದಾಯವನ್ನು ಓಲೈಸುವ ರಾಜಕಾರಣಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಕರ್ನಾಟಕ ರಾಜ್ಯ ಅಧಿಕೃತ ಭಾಷಾ ನಿಮಯದಲ್ಲೇನಿದೆ?

ಕರ್ನಾಟಕ ರಾಜ್ಯ ಅಧಿಕೃತ ಭಾಷಾ ಕಾಯ್ದೆಯ ಅನ್ವಯ, ಸರ್ಕಾರವು ಆಹ್ವಾನ ಪತ್ರಿಕೆಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸುವುದು ಶಿಷ್ಟಾಚಾರವಾಗಿದೆ. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇಲಾಖೆಯ ಈ ನಡೆ ಒಂದು ನಿರ್ದಿಷ್ಟ ವರ್ಗವನ್ನು ಓಲೈಸುವ ಪ್ರಯತ್ನ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಉರ್ದು ಭಾಷೆ ಮಾತನಾಡುವವರು ಕರ್ನಾಟಕದಲ್ಲಿ ಇಲ್ಲವೇ ಎಂದು ಉಡಾಫೆಯಿಂದ ಪ್ರಶ್ನಿಸಿದ್ದಾರೆ. ಆದರೆ, ರಾಜ್ಯದಲ್ಲಿ ಉರ್ದು ಮಾತನಾಡುವವರಷ್ಟೇ ಅಲ್ಲದೆ, ತುಳು, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹೀಗಿರುವಾಗ, ಸರ್ಕಾರವು ಎಲ್ಲಾ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ, ಆಯಾ ಭಾಷೆಗಳಲ್ಲೂ ಆಹ್ವಾನ ಪತ್ರಿಕೆಗಳನ್ನು ಪ್ರಕಟಿಸಬೇಕಾಗಿತ್ತು ಎಂಬ ವಾದ ಕೂಡ ಕೇಳಿಬಂದಿದೆ. ಕೇವಲ ಉರ್ದುವಿನಲ್ಲಿ ಮಾತ್ರ ಪ್ರಕಟಿಸಿದ್ದು, ಸರ್ಕಾರದ ಉದ್ದೇಶದ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಅರೆಬೆತ್ತಲೆ ಪ್ರತಿಭಟನೆಗೆ ಖರ್ಗೆ ಸಮರ್ಥನೆ: ದೇಶದ ಹಿತಕ್ಕಾಗಿ ಪ್ರೊಟೆಸ್ಟ್​​​​ ಎಂದ AICC ಅಧ್ಯಕ್ಷ

ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿವೆ. ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡುವ ಬದಲು, ಇಂತಹ ರಾಜಕೀಯ ಚಟುವಟಿಕೆಗಳಲ್ಲಿ ಸರ್ಕಾರ ನಿರತವಾಗಿದೆ ಎಂದು ಆರೋಪಿಸಿವೆ.

ಕಾಂಗ್ರೆಸ್ ಸರ್ಕಾರದ ಉರ್ದು ವ್ಯಾಮೋಹ ಇದೇ ಮೊದಲಲ್ಲ!

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉರ್ದು ಭಾಷೆಯ ಅಭಿವೃದ್ಧಿಗೆ 110 ಕೋಟಿ ರೂಪಾಯಿ ಅನುದಾನ ನೀಡಿ, ಕನ್ನಡ ಭಾಷೆಗೆ ಕೇವಲ 32 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು ಎಂಬ ಆರೋಪವೂ ಕೇಳಿಬಂದಿತ್ತು. ಈ ರೀತಿಯ ಬೆಳವಣಿಗೆಗಳು ಸರ್ಕಾರವು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದನ್ನು ಮತ್ತಷ್ಟು ದೃಢಪಡಿಸಿವೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಕುರಿತು ಸುಪ್ರೀಂ ಗರಂ – Kannada News | Top Court Stresses Protection of Institutional Integrity in NCERT Matter

ನವದೆಹಲಿ, ಫೆಬ್ರವರಿ 25: ಎನ್‌ಸಿಇಆರ್‌ಟಿಯ 8 ನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ(Corruption)ದ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ . ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ, ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನಗೊಂಡಿದ್ದಾರೆ. ನಾನು ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ. ಸಂಸ್ಥೆಯನ್ನು ಕೆಣಕಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ  ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸೋಮವಾರ 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಹೊಸ ಪುಸ್ತಕವು ನ್ಯಾಯಾಂಗ(Judiciary)ದ ಪಾತ್ರವನ್ನು ವಿವರಿಸುವ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಂತಹ ಸವಾಲುಗಳನ್ನು ಪರಿಹರಿಸುವ ಹೊಸ ವಿಭಾಗವನ್ನು ಒಳಗೊಂಡಿದೆ. ಈ ವಿಷಯಗಳನ್ನು ಹಳೆಯ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸದ ಕಾರಣ ಈ ಬದಲಾವಣೆಯು ಮಹತ್ವದ್ದಾಗಿದೆ.

ಮತ್ತಷ್ಟು ಓದಿ: NCERT: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ಹೊಸ ಪುಸ್ತಕವು ನ್ಯಾಯಾಲಯಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುತ್ತದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವು ಪ್ರಚಲಿತವಾಗಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ನ್ಯಾಯಾಧೀಶರ ಕೊರತೆ, ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಮತ್ತು ನ್ಯಾಯಾಲಯಗಳಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಂತಹ ಹಲವಾರು ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದನ್ನು ಪುಸ್ತಕವು ಎತ್ತಿ ತೋರಿಸುತ್ತದೆ.

ಹೊಸ ಪುಸ್ತಕವು ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂದಾಜು ಅಂಕಿಅಂಶಗಳನ್ನು ಸಹ ಒದಗಿಸುತ್ತದೆ. ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 81,000 ಪ್ರಕರಣಗಳು ಬಾಕಿ ಉಳಿದಿವೆ. ಏತನ್ಮಧ್ಯೆ, ಭಾರತದ ಹೈಕೋರ್ಟ್‌ಗಳಲ್ಲಿ ಸುಮಾರು 6,240,000 ಪ್ರಕರಣಗಳು ಬಾಕಿ ಉಳಿದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version