Daily Devotional: ಜೀವನ ಪೂರ್ತಿ ಮನುಷ್ಯನಿಗೆ ಗುರುವಿನ ಅನುಗ್ರಹ ಬೇಕೇ ಬೇಕು, ಯಾಕೆ ಗೊತ್ತಾ? – Kannada News | Why a Gurus Guidance is Essential for Human Existence

ಜೀವನ ಪೂರ್ತಿ ಮನುಷ್ಯನಿಗೆಗುರುವಿನ ಅನುಗ್ರಹ ಬೇಕಾ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ನಾವು ಹುಟ್ಟಿದ ಕ್ಷಣದಿಂದ ಸಾವಿನವರೆಗೂ ದೇವರ ಅನುಗ್ರಹ, ತಂದೆ-ತಾಯಿಗಳ ಆಶೀರ್ವಾದದ ಜೊತೆಗೆ, ಗುರುವಿನ ಅನುಗ್ರಹವು ಅತ್ಯಂತ ಮಹತ್ವದ್ದಾಗಿದೆ. “ಹರ ಮುನಿದರೂ ಗುರು ಕಾಯುವನು” ಎಂಬ ನುಡಿಯು ಗುರುವಿನ ಸರ್ವೋಚ್ಚ ಸ್ಥಾನವನ್ನು ಸಾರುತ್ತದೆ.

ತಂದೆ-ತಾಯಿಗಳು ಮೊದಲ ಗುರುಗಳಾದರೆ, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗದಲ್ಲಿ ಮಾರ್ಗದರ್ಶನ ನೀಡುವವರು ಸಹ ಗುರುಗಳೇ. ಪರಿಪೂರ್ಣ ಜೀವನ ಮತ್ತು ಮಾನಸಿಕ ನೆಮ್ಮದಿಗಾಗಿ ಗುರುವಿನ ಆಶ್ರಯ ಅಗತ್ಯ. ಗುರುವು ಅಂಧಕಾರವನ್ನು (ಗು) ಹೋಗಲಾಡಿಸಿ (ಋ) ಜ್ಞಾನದ ದಾರಿಯನ್ನು ತೋರಿಸುವವನು. ಗುರುವಿನ ಕೃಪೆ ಇದ್ದರೆ ನವಗ್ರಹ ದೋಷಗಳು ನಿವಾರಣೆಯಾಗುತ್ತವೆ ಮತ್ತು ಜೀವನದ ಕಷ್ಟಗಳು ದೂರವಾಗುತ್ತವೆ. ಗುರು ಪೂರ್ಣಿಮೆಯಂದು ಮಾತ್ರವಲ್ಲದೆ, ಪ್ರತಿನಿತ್ಯವೂ ಗುರುವಿನ ಸ್ಮರಣೆ ಮತ್ತು ಮಾರ್ಗದರ್ಶನ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತದೆ. ಹೀಗಾಗಿ ಮನುಷ್ಯನ ಜೀವನದುದ್ದಕ್ಕೂ ಗುರುವಿನ ಅನುಗ್ರಹ ಬೇಕೇ ಬೇಕು ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 19, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಬಿದಿಗೆ ತಿಥಿ, ಅಶ್ವಿನಿ ನಕ್ಷತ್ರ, ಆಯುಷ್ಮಾನ್ ಯೋಗ ಮತ್ತು ಕೌಲವ ಕರಣ ಒಳಗೊಂಡಿರುವ ವಿಶೇಷ ದಿನವಾಗಿದೆ. ರವಿ ಮತ್ತು ಚಂದ್ರ ಇಬ್ಬರೂ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ರವಿ ಉಚ್ಚ ಸ್ಥಾನದಲ್ಲಿದ್ದಾನೆ ಎಂದು ಗುರೂಜಿ ವಿವರಿಸಿದ್ದಾರೆ. ಗುರೂಜಿ ಅವರು ಪ್ರತಿ ರಾಶಿಯವರಿಗೂ ವೃತ್ತಿ, ಆರ್ಥಿಕತೆ, ಆರೋಗ್ಯ, ಕುಟುಂಬ, ವೈವಾಹಿಕ ಜೀವನ, ಪ್ರಯಾಣ, ಶುಭ ಬಣ್ಣ, ಅದೃಷ್ಟ ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆ ವಿವರವಾದ ಭವಿಷ್ಯವನ್ನು ನೀಡಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸ್ವಾರ್ಥದ ಪರವಾಗಿ ಯೋಚಿಸಿ, ದುಃಖ – Kannada News | Horoscope April 19 Sunday 2026; Dina Rashi Bhavishya Today, Checkout the details here

ಮೇಷ ರಾಶಿ:

ಬಾಂಧವ್ಯದಲ್ಲಿ ಅಭಿಪ್ರಾಯ ಭೇದದಿಂದ ಕಲಹವಾಗಬಹುದು. ಹಣದ ನಷ್ಟದ ಸಂಭವವಿದೆ. ದೂರದ ಬಂಧುಗಳಿಂದ‌ ಕಾರ್ಯ ಮಾಡಬಹುದು. ವಿದ್ಯಾರ್ಥಿಗಳ ಸಾಧನೆಯ ಹಾದಿಯು ಸುಗಮವಾಗುವುದು. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವ ವಿಚಾರವೊರುವುದು. ದೂರಪ್ರಯಾಣದಿಂದ ಆತಂಕ ಸೃಷ್ಟಯಾಗಬಹುದು. ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು.

ವೃಷಭ ರಾಶಿ:

ಹೊಸ ಪರಿಚಯಗಳಿಂದ ದೂರವಿರಲು ಪ್ರಯತ್ನಿಸಿ. ತಮ್ಮಂದಿರು ಮತ್ತು ಅಣ್ಣಂದಿರೊಡನೆ ಜಗಳ ಆಗದಂತೆ ನೋಡಿಕೊಳ್ಳಿ. ಕೆಲ ಕೆಲಸಗಳು ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ದೊರೆತು ವಿದೇಶಕ್ಕೆ ತೆರಳಬಹುದು. ಆಸ್ತಿಯ ವಿಚಾರದಲ್ಲಿ ನೀವು ಆಸಕ್ತಿಯನ್ನು ಕಳೆದುಕೊಳ್ಳುವಿರಿ. ಯಾರಾದರೂ ನಿಮ್ಮ ಕಿವಿಚುಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಲಾರಿರಿ. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಅಹಂಕಾರವಾದೀತು.

ಮಿಥುನ ರಾಶಿ:

ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಯೋಜನೆಗಳು ನೆರವೇರಲಿವೆ. ಮನೆಯಲ್ಲಿನ ಬದಲಾವಣೆಗಳು ಸಂತೋಷ ತಂದಿಡುತ್ತವೆ. ಸ್ನೇಹಿತರೊಂದಿಗೆ ಭೆಟ್ಟಿಯಾಗುವ ಅವಕಾಶ ಸಿಗುತ್ತದೆ. ನಿಮ್ಮ ಶ್ರಮ ಯಶಸ್ಸಿನ ಮಾರ್ಗವನ್ನೇ ತೋರಿಸುತ್ತದೆ. ಲ ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.

ಕರ್ಕಾಟಕ ರಾಶಿ:

ಇಂದು ಅನೇಕ ಸ್ನೇಹಿತರೊಂದಿಗೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ. ಹಣದ ಲಾಭವೂ ಲಭ್ಯವಾಗಬಹುದು. ಇಂದು ಖರ್ಚು ಮಾಡುತ್ತಿದ್ದರೂ ಸಂತೋಷದಲ್ಲಿ ಅದರ ಅರಿವೇ ಆಗದು. ಸಂತಾನದ ಲಾಭವು ನಿಮ್ಮ ಸಂತೋಷವನ್ನು ಅಧಿಕ ಮಾಡುವುದು. ಕುಟುಂಬ ಹಿರಿಯರಿಗೆ ಸೇರಿದ ಆಸ್ತಿಯಲ್ಲಿನ ಪಾಲು ಪಡೆಯುವಿರಿ. ಯಾರದೋ ತಪ್ಪಿನ ಕಾರಣ ವಾಹನದಿಂದ ಬೀಳುವ ಸಾಧ್ಯತೆ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ.

ಸಿಂಹ ರಾಶಿ:

ನಿಮ್ಮ ಮಕ್ಕಳ ಸಂತೋಷಕ್ಕಾಗಿ ಕೆಲಸಮಾಡುವಿರಿ. ಉದ್ಯೋಗ ಅಥವಾ ವ್ಯವಹಾರದಲ್ಲಿ ಉತ್ತೇಜನಕಾರಿ ಬೆಳವಣಿಗೆ ಕಂಡುಬರುತ್ತದೆ. ಹಣದ ಸುಲಭ ಲಾಭ ಸಿಗಲಿದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ಇಂದು ಅನಾಯಾಸವಾಗಿ ಆದಾಯ ದೊರೆಯುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ:

ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ಸಾಲದ ವಿಷಯದಲ್ಲಿ ಯಶಸ್ಸು ದೊರಕುತ್ತದೆ. ಮನೆಯವರ ಆರೋಗ್ಯದತ್ತ ಎಚ್ಚರಿಕೆಯಿಂದ ಗಮನ ಹರಿಸಿ. ಸ್ನೇಹಿತರೊಂದಿಗೆ ವಿರೋಧ ಉಂಟಾಗದಂತೆ ಮಾತನಾಡುವುದು ಅಗತ್ಯ. ಕೆಲಸಗಳಲ್ಲಿ ವಿಘ್ನಗಳ ಸಾಧ್ಯತೆ ಇದೆ. ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ.

ತುಲಾ ರಾಶಿ:

ಅನ್ಯರ ಮೂಲಕ ಲೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಶಿಷ್ಟ ನಡವಳಿಕೆ ಇತರರಿಗೆ ಪ್ರೇರಣೆ ಆಗುತ್ತದೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ದೊರಕುವ ಸಂಭವ. ಸ್ವತಂತ್ರವಾಗಿ ಇಂದಿನ ಕಾರ್ಯವನ್ನು ನೀವು ನಿರ್ವಹಿಸುವಿರಿ. ನೂತನ ವಾಹನವನ್ನು ಖರೀದಿಸುವಿರಿ. ಕುಟುಂಬದಲ್ಲಿ ಸಾಮರಸ್ಯವು ಕಾಣಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.

ವೃಶ್ಚಿಕ ರಾಶಿ:

ಶುಭಕಾರ್ಯಕ್ಕಾಗಿ ಮಾಡುವ ಯತ್ನಗಳು ಯಶಸ್ವಿಯಾಗುತ್ತವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಇಂದು ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ಬೆಳೆಯುತ್ತದೆ. ಅಗಲವು ದಿನಗಳ ಭೂವಿವಾದಕ್ಕೆ ಅಂತ್ಯ ಸಿಗಲಿದೆ. ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು.

ಧನು ರಾಶಿ:

ಅನಿರೀಕ್ಷಿತ ವಾಗ್ವಾದಗಳಿಗೆ ಸಾಧ್ಯತೆ ಇದೆ. ಹಣದ ಕೊರತೆ ನಿವಾರಣೆಗೆ ಸಾಲದ ಪ್ರಯತ್ನ ಮಾಡಬಹುದು. ಕುಟುಂಬದಲ್ಲಿ ಹೊಸ ಬದಲಾವಣೆಗಳು ಕಾಣಿಸಬಹುದು. ಯೋಜಿತ ಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ನಿಮ್ಮ ನಿಶ್ಯಬ್ದತೆ ಹಲವಾರು ಬಿಕ್ಕಟ್ಟಿಗೆ ಪರಿಹಾರವಾಗಬಹುದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ನಿಮ್ಮ ಶ್ರಮವು ನಿಷ್ಪ್ರಯೋಜಕ ಎನಿಸುವುದು.

ಮಕರ ರಾಶಿ:

ತಾತ್ಕಾಲಿಕ ಕೋಪದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಸಂಬಂಧಗಳ ಎಚ್ಚರಿಕೆಯಿಂದ ಮುನ್ನಡೆಯಿರಿ. ತಾಳ್ಮೆಯ ನಡವಳಿಕೆ ಇಂದಿನ ದಿನ ಸುಗಮವಾಗಿಸುತ್ತದೆ. ಯಾರಿಂದಲೂ ಕೂಡಲೇ ಬದಲಾವಣೆಯನ್ನು ಬಯಸುವುದು ಬೇಡ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು.

ಕುಂಭ ರಾಶಿ:

ಕೆಲವು ಪ್ರಮುಖ ಯೋಜನೆಗಳನ್ನು ಮುಂದೂಡಬೇಕಾಗಬಹುದು. ಸಣ್ಣ ಮಟ್ಟದ ಆರೋಗ್ಯ ಸಮಸ್ಯೆ ತೊಂದರೆ ನೀಡಬಹುದು. ಪ್ರಯಾಣಗಳಲ್ಲಿ ಅಸಹಜ ತೊಂದರೆಗಳು ಎದುರಾಗಬಹುದು. ಸ್ವಭಾವದ ಕಾರಣ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ.

ಮೀನ ರಾಶಿ:

ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಇಂದು ಮನಸ್ಸು ಅಸ್ಥಿರವಾಗಿರುವ ಸಾಧ್ಯತೆ ಇದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂಘರ್ಷ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಮಾತಿನಿಂದಲೂ ಕಲಹಗಳು ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಈ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುಬೇಕು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವಿಷ್ಕಂಭ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 18:37, ಯಮಗಂಡ ಕಾಲ 12:24 – 13:57, ಗುಳಿಕ ಕಾಲ 15:31- 17:04

-ಲೋಹಿತ ಹೆಬ್ಬಾರ್ – 8762924271 (what’s app only)

Source link

SRH vs CSK: ಸನ್‌ರೈಸರ್ಸ್ ವಿರುದ್ಧ 10 ರನ್​ಗಳಿಂದ ಸೋತ ಸಿಎಸ್​ಕೆ

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಲೀಗ್​ನಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇತ್ತ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಗೆಲುವಿನ ಹಾದಿಗೆ ಮರಳಿದ್ದ ಸಿಎಸ್​ಕೆ ಮತ್ತೆ ಸೋಲಿನ ಸುಳಿಗೆ ಸಿಲುಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ತಂಡ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 184 ರನ್ ಕಲೆಹಾಕಲಷ್ಟೇ ಶಕ್ತವಾಗಿ 10 ರನ್​​ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಸಿಎಸ್​ಕೆ ಪಾಯಿಂಟ್​ ಪಟ್ಟಿಯಲ್ಲಿ 7ನೇ ಸ್ಥಾನದಲ್ಲೇ ಉಳಿದಿದೆ.

Source link

ದಳಪತಿ ವಿಜಯ್​​ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ – Kannada News | Arul Selvam cycle tour to Tamil Nadu supporting Thalapathy Vijay

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರು ರಾಜಕೀಯಕ್ಕೆ ಧುಮುಕಿದ್ದು ಟಿವಿಕೆ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿ, ತಮಿಳುನಾಡು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಭರ್ಜರಿಯಾಗಿ ರಾಜ್ಯದಾದ್ಯಂತ ಪ್ರಚಾರ ಮಾಡುತ್ತಿರುವ ದಳಪತಿ ವಿಜಯ್ ಅವರು ಖುದ್ದಾಗಿ ಎರಡು ಕ್ಷೇತ್ರಗಳಿಂದ ಚುನಾವಣೆಗೂ ಸಹ ಸ್ಪರ್ಧೆ ಮಾಡಿದ್ದಾರೆ. ದಳಪತಿ ವಿಜಯ್ ಅವರಿಗೆ ಉತ್ತಮ ಬೆಂಬಲ ತಮಿಳುನಾಡಿನಲ್ಲಿ ವ್ಯಕ್ತವಾಗುತ್ತಿದೆ. ಇದೀಗ ಮೈಸೂರಿನಿಂದ ಅರುಳ್ ಸೆಲ್ವಂ ಹೆಸರಿನ ಯುವಕ ಸೈಕಲ್ ಯಾತ್ರೆ ಮಾಡಿಕೊಂಡು ತಮಿಳುನಾಡಿಗೆ ಹೋಗಿ ವಿಜಯ್​ಗೆ ಬೆಂಬಲ ಸೂಚಿಸಲಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಗೆ ಶುಕ್ರನ ಪ್ರವೇಶ: ಒಂದಲ್ಲ 10 ರಾಜ ಯೋಗ, ಆದರೆ ಈ ನಿರ್ಧಾರದಿಂದ ಜೀವನವೇ ನಾಶವಾಗಬಹುದು – Kannada News | Taurus Monthly Astrology: Planetary Transits, Shubha

ಈ ತಿಂಗಳು ವೃಷಭ ರಾಶಿಯವರಿಗೆ ಹೆಚ್ಚು ಮಿಶ್ರ ಫಲಗಳಿಂದ ಕೂಡಿದೆ. ರಾಶ್ಯಾಧಿಪತಿ ಶುಕ್ರನ ಸಂಚಾರ ಮತ್ತು ಪ್ರಭಾವವು ಜೀವನದ ವಿವಿಧ ಆಯಾಮಗಳ ಮೇಲೆ ನೇರ ಪರಿಣಾಮ ಬೀರಲಿದೆ. ಶುಕ್ರನು ನಿಮ್ಮ ರಾಶಿಯಲ್ಲಿ ಸಂಚಾರವಾಗಲಿದೆ ಮತ್ತು ಶನಿಯು ಈ ರಾಶಿಯ ಮೇಲೆ ದೃಷ್ಟಿ ಇಡುವನು. ಆಗಾಗ ಉಂಟಾಗುವ ಚಂದ್ರನ ಸಂಯೋಗ ಮತ್ತು ದೃಷ್ಟಿಯಿಂದ ಮಾನಸಿಕ ಸ್ಥಿತಿಯೂ ವಿಚಿತ್ರವಾಗಬಹುದು.

ಶುಭ ದಶೆ

​ಶುಕ್ರ ದಶೆ :

ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಬಲವಾಗಿದ್ದರೆ, ಈ ತಿಂಗಳು ಸುಖ-ಸಂತೋಷದ ವೃದ್ಧಿಯಾಗಲಿದೆ. ಹೊಸ ವಸ್ತುಗಳ ಖರೀದಿ, ಸೌಂದರ್ಯವರ್ಧಕ ವಸ್ತುಗಳ ಮೇಲೆ ಆಸಕ್ತಿ ಮತ್ತು ಕೌಟುಂಬಿಕವಾಗಿ ನೆಮ್ಮದಿ ಕಾಣುವಿರಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.

​ಗುರು ದಶೆ :

ಜಾತಕದಲ್ಲಿ ಗುರುವಿನ ಅನುಗ್ರಹವಿದ್ದರೆ, ಆರ್ಥಿಕವಾಗಿ ಲಾಭದಾಯಕ ಸಮಯವಿದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಹಿರಿಯರ ಮಾರ್ಗದರ್ಶನದಿಂದ ದೊಡ್ಡ ಸಂಕಷ್ಟವೊಂದು ದೂರವಾಗಬಹುದು.

ಬುಧನ ದಶೆ :

ವ್ಯಾಪಾರ ಮತ್ತು ಸಂವಹನ ಕ್ಷೇತ್ರದಲ್ಲಿರುವವರಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಬುದ್ಧಿವಂತಿಕೆಯಿಂದ ಕೈಗೊಂಡ ನಿರ್ಧಾರಗಳು ಹಣಕಾಸಿನ ಲಾಭ ತಂದುಕೊಡಲಿವೆ.

​ಕಷ್ಟದ ದಶೆಗಳು

​ಕುಜ ದಶೆ :

ಮಂಗಳನ ಪ್ರಭಾವವು ಅಧಮವಾಗಿದ್ದರೆ, ಅನಗತ್ಯ ಕೋಪ ಮತ್ತು ಆತುರದಿಂದ ಕೆಲಸಗಳು ಕೆಡುವ ಸಾಧ್ಯತೆ ಇರುತ್ತದೆ. ಸಣ್ಣ ವಿಷಯಗಳಿಗೂ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ತರ್ಕಗಳು ಉಂಟಾಗಬಹುದು. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ.

​ಶನಿ ದಶೆ :

ಶನಿಯು ಅಶುಭ ಸ್ಥಾನದಲ್ಲಿದ್ದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಕ್ಷಣವೇ ಸಿಗದೆ ನಿರಾಸೆ ಮೂಡಬಹುದು. ಕಾಲು ನೋವು ಅಥವಾ ಆಲಸ್ಯದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

​ರಾಹು-ಕೇತುಗಳ ದಶೆ :

ಮನಸ್ಸಿನಲ್ಲಿ ಗೊಂದಲ, ಅನಿಶ್ಚಿತ ಭಯ ಮತ್ತು ಇಲ್ಲದ ಚಿಂತೆಗಳು ಕಾಡುವ ಸಾಧ್ಯತೆ ಇದೆ. ಯಾರಿಗೂ ಸಾಲ ನೀಡುವ ಮುನ್ನ ಎಚ್ಚರವಿರಲಿ.

​ಅಧಮ ದೆಸೆಗಳನ್ನು ನೀಗಿಸಲು ಶನಿವಾರದಂದು ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಅಥವಾ ಹನುಮಾನ್ ಚಾಲೀಸಾ ಪಠಿಸುವುದು ಉತ್ತಮ.

– ಲೋಹಿತ ಹೆಬ್ಬಾರ್

Source link

ಸದ್ದಿಲ್ಲದೆ ಮದುವೆಯಾದರೆ ನಟಿ ಮಲೈಕಾ ವಸುಪಾಲ್? ಸತ್ಯಾಂಶವೇನು? – Kannada News | Did Malaika Vasupal got married, new video creates doubt

ಕನ್ನಡ ಕಿರುತೆರೆ (Serial) ಮತ್ತು ಹಿರಿತೆರೆ ಎರಡರಲ್ಲೂ ಮಿಂಚುತ್ತಿರುವ ನಟಿ ಮಲೈಕಾ ವಸುಪಾಲ್ (Malaika Vasupal). ಧಾರಾವಾಹಿ ಮೂಲಕ ನಟನೆ ಪ್ರವೇಶಿಸಿದ ಇದೀಗ ನಾಯಕಿಯಾಗಿಯೂ ಸಖತ್ ಆಗಿ ಮಿಂಚುತ್ತಿದ್ದಾರೆ. ಆದರೆ ಇದೀಗ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಮಲೈಕಾ ವಸುಪಾಲ್ ಅವರು ವಧುವಿನ ವೇಷ-ಭೂಷಣದಲ್ಲಿ ಕಂಗೊಳಿಸುತ್ತಿದ್ದಾರೆ. ಯೂಟ್ಯೂಬ್ ಚಾನಲ್‌ ಒಂದರಲ್ಲಿ ಮಲೈಕಾ ಅವರ ವಿಡಿಯೋ ಹಂಚಿಕೆ ಆಗಿದ್ದು, ವಿಡಿಯೋ ನೋಡಿದವರು ಇದೇನು ಮಲೈಕಾ ಮದುವೆ ಆಗಿಬಿಟ್ಟರೆ ಎಂದು ಹುಬ್ಬೇರಿಸಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಲೈಕಾ ವಸುಪಾಲ್ ಅವರು ಗುಲಾಬಿ ಬಣ್ಣದ ರೇಷ್ಮೆ ಸೀರೆ ಉಟ್ಟು, ಸಾಂಪ್ರದಾಯಿಕ ಒಡವೆಗಳನ್ನು ಧರಿಸಿ ಅಪ್ಪಟ ವಧುವಿನಂತೆ ಕಂಗೊಳಿಸುತ್ತಿದ್ದಾರೆ. ಅವರ ಮುಖದಲ್ಲಿನ ಆ ಸುಂದರ ನಗು ಮತ್ತು ವಧುವಿನ ಕಳೆ ಕಂಡ ನೆಟ್ಟಿಗರು, “ನಟಿಗೆ ನಿಜವಾಗಿಯೂ ಮದುವೆಯಾಗಿಬಿಟ್ಟಿತೇ?” ಎಂದು ಆಶ್ಚರ್ಯಚಕಿತರಾಗಿದ್ದಾರೆ. ವಿಡಿಯೋದ ಕಮೆಂಟ್ ಬಾಕ್ಸ್‌ನಲ್ಲಿ ಹಲವಾರು ಮಂದಿ ‘ಹ್ಯಾಪಿ ಮ್ಯಾರೀಡ್ ಲೈಫ್’ ಎಂದು ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀವ್ಸ್ ಅನ್ನು ಸಹ ಪಡೆದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ನೋಡಲೇಬೇಕಾದ ಸಿನಿಮಾಗಳು: ಪಟ್ಟಿ ಇಲ್ಲಿದೆ

ಮದುವೆಯ ವದಂತಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆಯೇ ಮಲೈಕಾ ಅವರ ಕನ್ನಡದ ಅಭಿಮಾನಿಗಳು ಅಖಾಡಕ್ಕಿಳಿದಿದ್ದಾರೆ. ಕಮೆಂಟ್ ಮೂಲಕ ಅಸಲಿ ಸತ್ಯವನ್ನು ಬಿಚ್ಚಿಟ್ಟಿರುವ ಅಭಿಮಾನಿಗಳು ಇದು ನಟಿಯ ನಿಜವಾದ ಮದುವೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಯಾವುದೇ ನೈಜ ಮದುವೆಯಲ್ಲ, ಬದಲಾಗಿ ಯಾವುದೋ ಸಿನಿಮಾ ಶೂಟಿಂಗ್ ಅಥವಾ ಹೊಸ ಜಾಹೀರಾತು ಚಿತ್ರೀಕರಣದ ಸಂದರ್ಭದ ವಿಡಿಯೋ ಎನ್ನಲಾಗಿದೆ. ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿರುವ ಮಲೈಕಾ, ಸದ್ಯ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ರೈಡಲ್ ಲುಕ್ ಕೂಡ ಅವರ ವೃತ್ತಿಜೀವನದ ಒಂದು ಭಾಗವಷ್ಟೇ. ಏನೇ ಆಗಲಿ ಮಲೈಕಾ ಅವರು ವಧುವಿನ ಲುಕ್​​ನಲ್ಲಿ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ.

‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಮಲೈಕಾ ವಸುಪಾಲ್ ಧಾರಾವಾಹಿಯ ‘ಲೀಲಾ’ ಪಾತ್ರದಿಂದ ದೊಡ್ಡ ಮಟ್ಟದ ಹೆಸರು ಗಳಿಸಿದರು. ಬಳಿಕ ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟರು. ‘ವಿದ್ಯಾಪತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಮಲೈಕಾ ವಸುಪಾಲ್ ನಟಿಸಿದ್ದಾರೆ. ಇತ್ತೀಚೆಗೆ ಜಮೀರ್ ಪುತ್ರನ ಹೊಸ ಸಿನಿಮಾನಲ್ಲಿಯೂ ನಟಿಸಿ ಗಮನ ಸೆಳೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ಬೆನ್ನಲ್ಲೇ ಕೆಇಎ ಫುಲ್​​ ಅಲರ್ಟ್: ವಿವಾದ ತಡೆಯಲು ಮಾಸ್ಟರ್ ಪ್ಲಾನ್ – Kannada News | Karnataka CET Exam Dress Code: KEA’s New Plan to Prevent Controversies and Ensure Smooth Exams

ಬೆಂಗಳೂರು, ಏಪ್ರಿಲ್​ 18: ಕಳೆದ ವರ್ಷ ಸಿಇಟಿ ಪರೀಕ್ಷೆ (CET Exam) ವೇಳೆ ಜನಿವಾರ ಮತ್ತು ಹಿಜಾಬ್ ವಿಚಾರವಾಗಿ ಉಂಟಾಗಿದ್ದ ವಿವಾದಗಳಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಈ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ತಡೆಯಲು ಹೊಸ ತಂತ್ರ ರೂಪಿಸಿದೆ. ಏಪ್ರಿಲ್ 23 ಮತ್ತು 24ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಕೆಇಎ ಈಗಿನಿಂದಲೇ ಫುಲ್ ಅಲರ್ಟ್ ಆಗಿದೆ.

ಕಳೆದ ವರ್ಷ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಪರೀಕ್ಷಾರ್ಥಿಗಳ ತಪಾಸಣೆ ವೇಳೆ ಜನಿವಾರ ತೆಗೆಸಿದ್ದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷ ಅಂತಹ ಯಾವುದೇ ಘಟನೆಗಳು ಮರುಕಳಿಸದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪುಲ್ ಅಲರ್ಟ್ ಆಗಿದ್ದು, ಈ ಬಾರಿ ವಸ್ತ್ರಸಂಹಿತೆಗೆ ಹೊಸ ತಂತ್ರರೂಪಿಸಿದೆ.

ಕೆಇಎ ಹೊಸ ಮಾಸ್ಟರ್ ಪ್ಲಾನ್ ಏನು?

ವಸ್ತ್ರಸಂಹಿತೆ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆಯದಂತೆ ತಡೆಯಲು ಈ ಬಾರಿ ಕೆಇಎ ವಿಶೇಷ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಏಪ್ರಿಲ್​ 23 ಮತ್ತು 24 ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 750 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ

750 ಪರೀಕ್ಷೆ ಕೇಂದ್ರಗಳಲ್ಲಿ ವಸ್ತ್ರ ಸಂಹಿತೆ ಅಧಿಕಾರಿಗಳನ್ನ ನೇಮಕ ಮಾಡಲು ಕೆಇಎ ಮಂದಾಗಿದೆ. ಈ 750 ವಸ್ತ್ರಸಂಹಿತೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಪರೀಕ್ಷೆಗೆ ಏನೆಲ್ಲಾ ಮಾರ್ಗಸೂಚಿ ಇದೆ, ಯಾವೆಲ್ಲಾ ವಸ್ತ್ರಸಂಹಿತೆ ಇದೆ ಎಂಬ ಸಂಪೂರ್ಣ ಮಾಹಿತಿ ಈ ಅಧಿಕಾರಿಗಳಿಗೆ ಇರಲಿದ್ದು, ಇವರು ಅನುಮತಿ ನೀಡಲಿದ್ದಾರೆ. ಹೀಗಾಗಿ ಈ ವರ್ಷ ಗಲಾಟೆ, ಗದ್ದಲ ಇಲ್ಲದೆ ಸಿಇಟಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ.

ಇದನ್ನೂ ಓದಿ: ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದೇ ಆದರೆ ಅತಿರೇಕ, ಕಠಿಣ ಕ್ರಮ ಕೈಗೊಳ್ಳುತ್ತೇವೆ: ಸಚಿವ ಎಂಸಿ ಸುಧಾಕರ್

ವಸ್ತ್ರಸಂಹಿತೆಯ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಅದನ್ನು ಜಾರಿಗೆ ತರುವ ಕ್ರಮದಲ್ಲಿ ಪಾರದರ್ಶಕತೆ ಮತ್ತು ಜಾಗರೂಕತೆ ವಹಿಸಲಾಗುತ್ತಿದೆ. ಈ ಮೂಲಕ ಪರೀಕ್ಷಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ವೇದಿಕೆ ಸಿದ್ಧಪಡಿಸಲಾಗಿದೆ. ಒಟ್ಟಾರೆ ಕಳೆದ ವರ್ಷದ ಕಹಿ ಘಟನೆಗಳಿಂದ ಪಾಠ ಕಲಿತಿರುವ ಕೆಇಎ, ಈ ಬಾರಿ ಯಾವುದೇ ವಿವಾದ ಇಲ್ಲದೆ ಪರೀಕ್ಷೆ ನಡೆಸಲು ಸರ್ವಸನ್ನದ್ಧವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

“ನಾವು ತೆರಿಗೆ​​​ ಕಟ್ಟುತ್ತೇವೆ ಶೇ.80ರಷ್ಟು ನಮಗೇ ಕೊಡಿ”: ಸಿಎಂ ಸಮ್ಮುಖದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ಜಡ್ಜ್ – Kannada News | Judicial Backlog: Karnataka Govt Hinders Justice, Reduces Posts Justice Arvind Kumar

ಬೆಂಗಳೂರು, ಏ.18: ಕರ್ನಾಟಕ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಮಂದಗತಿಯಲ್ಲಿ ವಿಲೇವಾರಿ ಮಾಡುತ್ತಿರುವುದು ಹಾಗೂ ಹುದ್ದೆಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರವಿಂದ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ತನ್ನ 40 ವರ್ಷಗಳ ಅರ್ಥಪೂರ್ಣ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಾರ್ಥಕ ಪಯಣದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗದ ಮುಂದಿರುವ ಸವಾಲುಗಳನ್ನು ಅಂಕಿಅಂಶಗಳ ಸಮೇತ ವಿವರಿಸಿದರು.

2023 ರಲ್ಲಿ ರಾಜ್ಯದಲ್ಲಿ 17 ಲಕ್ಷ ಇದ್ದ ವ್ಯಾಜ್ಯಗಳ ಸಂಖ್ಯೆ, 2025 ರ ವೇಳೆಗೆ 22 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಕಾನೂನುಗಳು ಜಾರಿಗೆ ಬರುತ್ತಿದ್ದು, ಅವುಗಳ ಅಡಿಯಲ್ಲಿ ನ್ಯಾಯ ವಿತರಣೆ ಮಾಡಲು ಆಧುನಿಕ ಮೂಲಸೌಕರ್ಯ ಮತ್ತು ಹೆಚ್ಚಿನ ನ್ಯಾಯಾಧೀಶರ ಅಗತ್ಯವಿದೆ. ನ್ಯಾಯಾಂಗ ಇಲಾಖೆಯಿಂದ ಕಳುಹಿಸಲಾದ ಪ್ರಸ್ತಾವನೆಗಳನ್ನು ಸರ್ಕಾರಿ ಅಧಿಕಾರಿಗಳು ಸರಿಯಾಗಿ ಗಮನ ಹರಿಸುತ್ತಿಲ್ಲ ಅಥವಾ ಮಂದಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹೈಕೋರ್ಟ್‌ನ ಮೂರು ಪೀಠಗಳಿಗೆ 660 ಹುದ್ದೆಗಳನ್ನು ಕೇಳಿದರೆ ಅನುಮೋದನೆ ಸಿಕ್ಕಿದ್ದು ಕೇವಲ 238 ಕ್ಕೆ ಮಾತ್ರ. ಅಂತೆಯೇ ಜಿಲ್ಲಾ ನ್ಯಾಯಾಲಯಗಳಿಗೆ 680 ಹುದ್ದೆಗಳ ಬದಲಿಗೆ ಕೇವಲ 400 ಹುದ್ದೆಗಳಿಗೆ ಒಪ್ಪಿಗೆ ನೀಡಲಾಗಿದೆ. ನ್ಯಾಯಾಧೀಶರ ನಿವಾಸಗಳು ಮತ್ತು ನ್ಯಾಯಾಲಯದ ಕಟ್ಟಡಗಳ ನಿರ್ಮಾಣಕ್ಕೆ ಕಳುಹಿಸಿದ ಪ್ರಸ್ತಾವನೆಗಳು ಇನ್ನೂ ಧೂಳು ಹಿಡಿಯುತ್ತಿವೆ.

ಇದನ್ನೂ ಓದಿ: ಕರ್ನಾಟಕ ಲೋಕಾಯುಕ್ತದ 40 ವರ್ಷಗಳ ಸಾರ್ಥಕ ಪಯಣ: ಸಾಧನೆಯ ಹಾದಿ ಮೆಲುಕು ಹಾಕಿದ ನ್ಯಾಯಮೂರ್ತಿಗಳು

ನ್ಯಾಯಾಂಗದಿಂದ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ:

ಕೋರ್ಟ್ ಪೀ, ಸ್ಟ್ಯಾಂಪ್ ಡ್ಯೂಟಿ ಮತ್ತು ದಂಡದ ರೂಪದಲ್ಲಿ ನ್ಯಾಯಾಲಯಗಳು ಸರ್ಕಾರಕ್ಕೆ ನೀಡುತ್ತಿರುವ ಆದಾಯದ ಬಗ್ಗೆಯೂ ಅವರು ಮಾಹಿತಿ ನೀಡಿದರು:

2023-24: 374 ಕೋಟಿ ರೂ.

2024-25: 439 ಕೋಟಿ ರೂ.

2025-26: 470 ಕೋಟಿ ರೂ.

ಸರ್ಕಾರಕ್ಕೆ ನಾವು ನೀಡುತ್ತಿರುವ ಆದಾಯದ ಪೈಕಿ ಕನಿಷ್ಠ 75-80% ಹಣವನ್ನು ನ್ಯಾಯಾಂಗದ ಅಭಿವೃದ್ಧಿಗೆ ನೀಡಿ ಎಂದು ಅವರು ಮನವಿ ಮಾಡಿದರು. ಸಿಬ್ಬಂದಿ ಸಂಬಳ ಹೊರತುಪಡಿಸಿ ನ್ಯಾಯಾಲಯಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಹಣ ಅತ್ಯಂತ ಕಡಿಮೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಉಚ್ಚ ನ್ಯಾಯಾಲಯದಿಂದ ಬರುವ ಪ್ರಸ್ತಾವನೆಗಳನ್ನು ಕಡಿತಗೊಳಿಸದೆ ತ್ವರಿತವಾಗಿ ಅನುಮೋದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಜಸ್ಟಿಸ್ ಅರವಿಂದ್ ಕುಮಾರ್ ಅವರು ವೇದಿಕೆಯಲ್ಲಿದ್ದ ಸರ್ಕಾರಿ ಪ್ರತಿನಿಧಿಗಳಿಗೆ ಆಶಯ ವ್ಯಕ್ತಪಡಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೈವ್​​ನ ಸೂಪರ್ ಮಾರ್ಕೆಟ್​​ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್​ ಹತ್ಯೆ – Kannada News | Ukraine Police Killed Gunman After 5 Dead In Supermarket shootout

ಕೈವ್, ಏಪ್ರಿಲ್ 18: ಉಕ್ರೇನ್ ರಾಜಧಾನಿ ಕೈವ್‌ನಲ್ಲಿನ ಸೂಪರ್ ಮಾರ್ಕೆಟ್​​ನಲ್ಲಿ ಇಂದು ರಾತ್ರಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ 5 ಜನರನ್ನು ಕೊಂದಿದ್ದ. ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದರು. ಇದಾದ ನಂತರ ದಾಳಿಕೋರ ಹಲವರನ್ನು ಸೂಪರ್‌ಮಾರ್ಕೆಟ್‌ನೊಳಗೆ ಒತ್ತೆಯಾಳಾಗಿರಿಸಿಕೊಂಡಿದ್ದ. ಕೊನೆಗೂ ಉಕ್ರೇನ್ ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಆತನನ್ನು ಕೊಲ್ಲಲಾಗಿದೆ. ಆ ಶೂಟರ್ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಘರ್ಷಣೆಯ ಸಮಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version