ಬೆಂಗಳೂರು: ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Rowdyism in Bengaluru: Armed Gang Creates Ruckus in Nandini Layout, CCTV Captures Threat with Machete
ಬೆಂಗಳೂರು, ಮೇ 1: ಕುಡಿದ ನಶೆಯಲ್ಲಿ ಪುಂಡರ ಗ್ಯಾಂಗ್‌ವೊಂದು ಮಚ್ಚು ಲಾಂಗು ಹಿಡಿದು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 25ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುಂಡರ ಅಟ್ಟಹಾಸಕ್ಕೆ ಸ್ಥಳೀಯರು ಬೆಚ್ಚಿಬೀಳುವಂತಾಗಿದೆ. ಏಪ್ರಿಲ್ 25ರಂದು ಸಂಜೆ ಸುಮಾರು 4:50ರ ಸಮಯದಲ್ಲಿ ಯುವಕನೊಬ್ಬ ಏರಿಯಾದಲ್ಲಿ ಮಚ್ಚು ಹಿಡಿದು ಓಡಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಪ್ರಶ್ನಿಸಿದ ಅಕ್ಕಪಕ್ಕದ ಮನೆಯವರಿಗೂ ಮಚ್ಚು ತೋರಿಸಿ ಹೆದರಿಸಿದ್ದಾನೆ. ಇದಾದ ಬಳಿಕ ಸಂಜೆ…