Headlines

Varalakshmi Vrat 2026: ವರಲಕ್ಷ್ಮಿ ವ್ರತ ಆಗಸ್ಟ್​​ 21 ಅಥವಾ 28? ನಿಖರ ದಿನಾಂಕವನ್ನು ಇಲ್ಲಿ ತಿಳಿದುಕೊಳ್ಳಿ – Kannada News | Varalakshmi Vrat 2026: August 21 or 28? Know the Right Date as per Tradition

ಶ್ರಾವಣ ಮಾಸವು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ಅವಧಿ. ಈ ತಿಂಗಳಿನ ಪ್ರತಿ ಶುಕ್ರವಾರವೂ ಮಹಾಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವ ಹೊಂದಿದೆ. ಅದರಲ್ಲೂ ವರಲಕ್ಷ್ಮಿ ವ್ರತವನ್ನು ಮಹಿಳೆಯರು, ವಿಶೇಷವಾಗಿ ಸುಮಂಗಲಿ ಮಹಿಳೆಯರು, ಕುಟುಂಬದ ಸಂತೋಷ, ಆರೋಗ್ಯ, ಸಮೃದ್ಧಿ ಮತ್ತು ಮಕ್ಕಳ ಒಳಿತಿಗಾಗಿ ಭಕ್ತಿಯಿಂದ ಆಚರಿಸುತ್ತಾರೆ. ಆದರೆ 2026ರಲ್ಲಿ ಶ್ರಾವಣ ಮಾಸದಲ್ಲಿ ಐದು ಶುಕ್ರವಾರಗಳು ಬರುವುದರಿಂದ ವರಲಕ್ಷ್ಮಿ ವ್ರತವನ್ನು ಯಾವ ದಿನ ಆಚರಿಸಬೇಕು ಎಂಬ ಗೊಂದಲ ಭಕ್ತರಲ್ಲಿ ಮೂಡಿದೆ. ಆಗಸ್ಟ್ 21ರಂದು ಆಚರಿಸಬೇಕೇ ಅಥವಾ ಆಗಸ್ಟ್…

Read More

Karnataka Dam Water Level: ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು – Kannada News | Karnataka Reservoir Water Level on August 08; Almatti Dam Water Stolen by Influential Locals, KRS and Basavasagara Levels Update

ಬೆಂಗಳೂರು, ಆಗಸ್ಟ್ 08: ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಆಲಮಟ್ಟಿ ಅಣೆಕಟ್ಟು (dam water level) ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಬರ ಪರಿಹಾರವಾಗಿ ಜಿಲ್ಲೆಯ 165 ಕೆರೆಗಳನ್ನು ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಅಧಿಕಾರಿಗಳು ಕಾಲುವೆಗಳ ಮೂಲಕ ನೀರು ಬಿಡುಗಡೆ ಮಾಡಿದ್ದಾರೆ. ಆದರೆ, ಇಂಗಳಗಿ, ಅಂಕಲಗಿ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕ ಕೆರೆಗಳಿಗೆ ತಲುಪಬೇಕಿದ್ದ ನೀರು ಪ್ರಭಾವಿಗಳ ಪಾಲಾಗುತ್ತಿರುವುದು ಭಾರಿ…

Read More

ಬೆಂಗಳೂರು ಸ್ಟಾರ್ ಹೋಟೆಲ್‌ಗಳ ಬಂಡವಾಳ ಬಯಲು: 26 ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ – Kannada News | Bengaluru Food Safety Raid: Violations Found in 26 Star Hotels, Expired Food and Meat Seized

ಹೋಟೆಲ್​ಗಳ ಮೇಲೆ ದಾಳಿ ಸಂದರ್ಭದ ಚಿತ್ರImage Credit source: tv9 ಬೆಂಗಳೂರು, ಆಗಸ್ಟ್ 8: ಬೆಂಗಳೂರಿನ (Bengaluru) ಪಂಚತಾರಾ ಹಾಗೂ ಪ್ರಮುಖ ಸ್ಟಾರ್ ಹೋಟೆಲ್‌ಗಳ (Five Star Hotels) ಮೇಲೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯ ಮುಂದುವರಿದ ಭಾಗವಾಗಿ, 26 ಪ್ರಮುಖ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಗಿರುವುದು ಪತ್ತೆಯಾಗಿದೆ. ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಮಾಂಸ, ತರಕಾರಿ, ಮೀನು ಹಾಗೂ ಅಸ್ವಚ್ಛ ಅಡುಗೆಮನೆಗಳು ತಪಾಸಣೆ ವೇಳೆ ಪತ್ತೆಯಾಗಿವೆ. ಹೋಟೆಲ್‌ಗಳ ಅಡುಗೆಮನೆ…

Read More

ಟೀಮ್ ಇಂಡಿಯಾಗೆ ಹೊಸ ಚಿಂತೆ: NCA ಸೇರಿದ 13 ಆಟಗಾರರು! – Kannada News | 13 Team India Stars Sidelined at NCA

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಬೆಂಗಳೂರಿನ ಅತ್ಯಾಧುನಿಕ ‘ಸೆಂಟರ್ ಆಫ್ ಎಕ್ಸಲೆನ್ಸ್’ (COE/ NCA) ಸದ್ಯ ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪುನರ್ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ತಂಡದ ಹಾಲಿ ಆಟಗಾರರು ಹಾಗೂ ಭವಿಷ್ಯದ ಯೋಜನೆಗಳಲ್ಲಿ ಗುರುತಿಸಿಕೊಂಡಿರುವ ಬರೋಬ್ಬರಿ 13 ಭಾರತೀಯ ಕ್ರಿಕೆಟಿಗರು ಗಾಯದ ಸಮಸ್ಯೆಯಿಂದಾಗಿ ಏಕಕಾಲದಲ್ಲಿ ಎನ್‌ಸಿಎನಲ್ಲಿ ಚಿಕಿತ್ಸೆ ಮತ್ತು ಫಿಟ್​ನೆಸ್ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಿದ್ದಾರೆ. ಟೀಮ್ ಇಂಡಿಯಾದ ಈ ಸರಣಿ ಗಾಯದ ಸಮಸ್ಯೆಗಳು ಇದೀಗ ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ತರಬೇತುದಾರ…

Read More

ಕುಚಿಪುಡಿ ನರ್ತಕಿ ಸಾಧನಾ ವಿರುದ್ಧ ಎಕ್ಸ್‌ನಲ್ಲಿ ಸುಳ್ಳು ಆರೋಪ: ‘ಅವರು ಅಮೆರಿಕನ್ ಪ್ರಜೆ’ ಎಂದು ಸ್ಪಷ್ಟನೆ ನೀಡಿದ ಹೂಸ್ಟನ್ ಅಟಾರ್ನಿ – Kannada News | Kuchipudi Dancer Sadhana Gollapudi Cleared: US Citizenship vs. Viral Visa Fraud Hoax

ಕುಚಿಪುಡಿ ನರ್ತಕಿ ಸಾಧನಾ ಗೊಲ್ಲಪೂಡಿ ವಾಷಿಂಗ್ಟನ್ ಆ.8: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಯೋಮೆಡಿಕಲ್ ಎಂಜಿನಿಯರ್ ಹಾಗೂ ಕುಚಿಪುಡಿ ನರ್ತಕಿ ಸಾಧನಾ ಗೊಲ್ಲಪೂಡಿ ಎಂಬುವರ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ವೀಸಾ ವಂಚನೆ ನಡೆಸಿದ್ದಾರೆ ಎಂದು ಮಾಡಲಾಗಿದ್ದ ಆರೋಪ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಅಮೆರಿಕದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಏರಾನ್ ರೈಟ್ಜ್ ಸ್ವತಃ ಸ್ಪಷ್ಟನೆ ನೀಡಿದ್ದು, “ಸಾಧನಾ ಅವರು ಅಮೆರಿಕದ ಅಧಿಕೃತ ಪೌರತ್ವ ಹೊಂದಿರುವ ಪ್ರಜೆ (Naturalized US Citizen)” ಎಂದು…

Read More

ತಂದೆಯ ಅಗಲಿಕೆಯ ನೋವಿನಲ್ಲೂ ನಕ್ಕ ಪ್ರದೀಪ್ ರಾವತ್; ಟ್ರೋಲ್ ಖಂಡಿಸಿದ ಫ್ಯಾನ್ಸ್ – Kannada News | Late Actor Pradeep Rawat Son Vikramaditya Trolled for Laughing in Front of Paparazzi

ಖ್ಯಾತ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅಗಲಿಕೆಯ ನಂತರ ಇಡೀ ಚಿತ್ರರಂಗ ಹಾಗೂ ಕುಟುಂಬ ನೋವಿನಲ್ಲಿ ಇದೆ. ಈ ಮಧ್ಯೆ ಅವರ ಮನೆಗೆ ಪಾಪರಾಜಿಗಳು ಆಗಮಿಸುತ್ತಿದ್ದಾರೆ. ಈ ವೇಳೆ ಅವರ ಪುತ್ರ ವಿಕ್ರಮಾದಿತ್ಯ ರಾವತ್ ಕಾಣಿಸಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕ್ಯಾಮೆರಾಗಳ ಮುಂದೆ ಸಣ್ಣದಾಗಿ ನಕ್ಕಂತೆ ಕಾಣಿಸಿಕೊಂಡ ವಿಕ್ರಮಾದಿತ್ಯ ಅವರ ನಡೆಗೆ ನೆಟ್ಟಿಗರು ಕಠೋರ ಕಾಮೆಂಟ್‌ಗಳ ಮೂಲಕ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ತಂದೆಯ ಅಂತಿಮ ಸಂಸ್ಕಾರ ನೆರವೇರಿಸುವಾಗ…

Read More

ಭದ್ರಾವತಿಯಲ್ಲಿ ಫುಡ್ ಪಾಯಿಸನಿಂಗ್ ಶಂಕೆ; ವಿಶೇಷ ಶಾಲೆಯ 15 ಮಕ್ಕಳು ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲು – Kannada News | Bhadravathi Food Poisoning: 15 Special School Students Hospitalized in Shivamogga

ಭದ್ರಾವತಿಯಲ್ಲಿ ಫುಡ್ ಪಾಯಿಸನಿಂಗ್ ಶಂಕೆ ಶಿವಮೊಗ್ಗ, ಆಗಸ್ಟ್ 08: ಜಿಲ್ಲೆಯ ಭದ್ರಾವತಿ (Shivamogga) ತಾಲೂಕಿನಲ್ಲಿ ಭೀಕರ ಆಹಾರ ವಿಷಬಾಧೆ (Food Poisoning) ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಿದ್ಧಪಡಿಸಲಾಗಿದ್ದ ಭೋಜನವನ್ನು ಸೇವಿಸಿದ ತರಂಗ ವಸತಿ ಶಾಲೆಯ 15ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಹಾಗೂ 8 ಮಂದಿ ಸಾರ್ವಜನಿಕರು ಹಠಾತ್ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಾದ ಎಲ್ಲರನ್ನೂ ತಕ್ಷಣವೇ ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ….

Read More

ಹೀರೋ ಆಗಿ ಗೆದ್ದ ನಿರ್ದೇಶಕ ಲೋಕೇಶ್ ಕನಗರಾಜ್; ಮೊದಲ ದಿನ ಭರ್ಜರಿ ಗಳಿಕೆ – Kannada News | DC Box Office Collection Day 1: Lokesh Kanagaraj Acting Debut Film Earns Rs 5 Crore Worldwide

ಲೋಕೇಶ್ ಕನಗರಾಜ್ (Lokesh Kanagaraj) ತಾವು ಉತ್ತಮ ನಿರ್ದೇಶಕ ಮಾತ್ರ ಅಲ್ಲ, ಹೀರೋ ಎಂಬುದನ್ನು ಕೂಡ ಸಾಬೀತು ಮಾಡಿದ್ದಾರೆ. ಅವರ ನಟನೆಯ ‘ಡಿಸಿ’ ಸಿನಿಮಾ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಚಿತ್ರ ಮೊದಲ ದಿನವೇ 4.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಜಾಗತಿಕ ಮಟ್ಟದಲ್ಲಿ 5.70 ಕೋಟಿ ರೂಪಾಯಿ ಸಂಗ್ರಹಿಸಿ ಗಮನ ಸೆಳೆದಿದೆ. ವಿದೇಶದಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಗಳಿಕೆ ವಿವರ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್…

Read More

International Cat Day 2026: ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ – Kannada News | International Cat Day 2026: Why celebrate International Cat Day?

ಅಂತಾರಾಷ್ಟ್ರೀಯ ಬೆಕ್ಕು ದಿನImage Credit source: Getty Images ಮನುಷ್ಯನ ಅಚ್ಚುಮೆಚ್ಚಿನ ಸಾಕು ಪ್ರಾಣಿಗಳಲ್ಲಿ ಬೆಕ್ಕು (Cat) ಕೂಡ ಒಂದು.  ಬೆಕ್ಕು ಹಲವರ ಮುದ್ದಿನ ಪ್ರಾಣಿ, ಹೆಚ್ಚಿನವರು ತಮ್ಮ ಮನೆಗಳಲ್ಲಿ ಬೆಕ್ಕು ಸಾಕಲು ಇಷ್ಟಪಡುತ್ತಾರೆ. ಈ ಮುದ್ದು ಪ್ರಾಣಿಗಳಿಗಾಗಿಯೂ ಒಂದು ದಿನವಿದೆ. ಹೌದು ಆಗಸ್ಟ್‌ 8 ರಂದು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲಾಗುತ್ತದೆ. ಬೆಕ್ಕುಗಳ ಸುರಕ್ಷತೆ ಮತ್ತು ಅವುಗಳ ಹಕ್ಕುಗಳ ಬಗ್ಗೆ ಜನರ ತಿಳುವಳಿಕೆ ಮೂಡಿಸಲು, ಬೆಕ್ಕುಗಳ ಯೋಗಕ್ಷೇಮ ಹಾಗೂ ಅವುಗಳ ಆರೈಕೆಯ ಮಹತ್ವವನ್ನು ಎತ್ತಿ ತೋರಿಸಲು…

Read More

ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳ ಹರಾಜಿಗೆ ಸಿದ್ಧತೆ: GBA ಮತ್ತು ಪೊಲೀಸರಿಂದ ಭರ್ಜರಿ ಜಂಟಿ ಕಾರ್ಯಾಚರಣೆ! – Kannada News | GBA and Police Joint Drive: 6,544 Abandoned Vehicles Reported, Auctions Soon

ಬೆಂಗಳೂರು, ಆಗಸ್ಟ್ 08: ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಪರಿತ್ಯಕ್ತ ವಾಹನಗಳ ವಿರುದ್ಧ ಜಿಬಿಎ (GBA) ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಭರ್ಜರಿ ತೆರವು ಕಾರ್ಯಾಚರಣೆ ಆರಂಭಿಸಿವೆ. ಕಳೆದ ಜುಲೈ 10 ರಿಂದ ಶುರುವಾದ ಈ ವಿಶೇಷ ಆಪರೇಷನ್ ತೀವ್ರಗತಿಯಲ್ಲಿ ಸಾಗುತ್ತಿದ್ದು, ಇನ್ನು ಮುಂದೆ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರಿ ದಂಡದ ಬಿಸಿ ತಟ್ಟಲಿದೆ. 6,500ಕ್ಕೂ ಹೆಚ್ಚು ವಾಹನಗಳ ಪತ್ತೆ! ಕಾರ್ಯಾಚರಣೆ ಆರಂಭವಾದ ದಿನದಿಂದ ಇಂದಿನವರೆಗೆ ಒಟ್ಟು 6,544 ವಾಹನಗಳು…

Read More