Headlines

ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು – Kannada News | Tumakuru: Miscreants Brutally Kill Father in Front of His Daughter

ತುಮಕೂರು, ಜನವರಿ 12: ಅದು ಊರಿನ ಹೊರಗಿರುವ ತೋಟದ ಮನೆ. ಅಪ್ಪ ಅಮ್ಮ ಇಬ್ಬರು ಮಕ್ಕಳು ವಾಸವಾಗಿದ್ದರು. ತಾವಾಯ್ತು ನಮ್ಮ ಬದುಕಾಯ್ತು ಎಂದು ಕುಟುಂಬ ಜೀವನ ನಡೆಸುತ್ತಿತ್ತು. ಹೀಗೆ ನೆಮ್ಮದಿ ಜೀವನ ಮಾಡುತಿದ್ದವರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ದುಷ್ಕರ್ಮಿಗಳ ಗುಂಪೊಂದು ಮನೆ ಯಜಮಾನನ ಮೇಲೆ ದಾಳಿ ಮಾಡಿದೆ. ಮಗಳ ಕಣ್ಣೆದುರೇ ಮಾರಕಾಸ್ತ್ರದ ದಾಳಿಗೆ ತಂದೆ (father) ಬಲಿಯಾಗಿದ್ದಾರೆ (Murder). ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯಲ್ಲಿ ನಡೆದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿ ಬಿದ್ದಿದೆ….

Read More

ಚಿತ್ರರಂಗದಲ್ಲಿ ರಂಗಾಯಣ ರಘು ‘ಹೊಸ ಜೀವನ’; 400ನೇ ಸಿನಿಮಾ ಒಪ್ಪಿಕೊಂಡ ನಟ – Kannada News | Rangayana Raghu 400th Movie Hosa Jeevana title launched by Daali Dhananjay

ಕನ್ನಡ ಚಿತ್ರರಂಗದಲ್ಲಿ ನಟ ರಂಗಾಯಣ ರಘು (Rangayana Raghu) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ, ಡೈಲಾಗ್ ಡೆಲಿವರಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡುತ್ತಾರೆ. ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ ಅವರು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸಲೀಸಾಗಿ ನಿಭಾಯಿಸುವಂತಹ ಪ್ರತಿಭಾವಂತ ಕಲಾವಿದ ರಂಗಾಯಣ ರಘು. ಈಗ ಅವರು ತಮ್ಮ ವೃತ್ತಿಬದುಕಿನಲ್ಲಿ ‘ಹೊಸ ಜೀವನ’ (Hosa Jeevana) ಆರಂಭಿಸುತ್ತಿದ್ದಾರೆ. ಏನಿದು ಹೊಸ ಜೀವನ? ಮುಂದೆ ಓದಿ.. ಈವರೆಗೂ ರಂಗಾಯಣ ರಘು ಅವರು ನೂರಾರು ಪಾತ್ರಗಳನ್ನು ಮಾಡಿ ಸೈ…

Read More

IPL 2026 Orange Cap: ಆರೆಂಜ್ ಕ್ಯಾಪ್ ಗೆದ್ದ 15 ವರ್ಷದ ವೈಭವ್ ಸೂರ್ಯವಂಶಿ

ಐಪಿಎಲ್ 2026 ರ ಫೈನಲ್ ಪಂದ್ಯ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಈ ಫೈನಲ್ ಪಂದ್ಯ ಮುಗಿಯುವುದಕ್ಕೆ ಮುನ್ನವೇ ಈ ಬಾರಿಯ ಆರೆಂಜ್ ಕ್ಯಾಚ್ ಯಾರ ಪಾಲಾಗಿದೆ ಎಂಬುದು ಖಚಿತವಾಗಿದೆ. ವಾಸ್ತವವಾಗಿ ಎಲ್ಲರಿಗೂ ತಿಳಿದಿರುವಂತೆ ಇಡೀ ಆವೃತ್ತಿಯಲ್ಲಿ ಯಾರು ಅತ್ಯಧಿಕ ರನ್ ಕಲೆಹಾಕುತ್ತಾರೋ ಅವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಈ ಆರೆಂಜ್ ಕ್ಯಾಪ್ ರೇಸ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದರು. ಆದಾಗ್ಯೂ ಅದರ ನಂತರದ ಎರಡು ಸ್ಥಾನಗಳಲ್ಲಿ ಗುಜರಾತ್ ತಂಡದ ಶುಭ್​ಮನ್…

Read More

ರಾಯಚೂರಿನಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ; ದಿಗಿಲು ಹುಟ್ಟಿಸುವ ದೃಶ್ಯ!

ರಾಯಚೂರು, ಮಾ.18: ಜಿಲ್ಲೆಯ ಅರಕೇರಾ ತಾಲ್ಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ…

Read More

ಅತಿಯಾಗಿ ತಿಂದ್ರೆ ಮಾತ್ರ ಬೊಜ್ಜು ಬರುತ್ತೆ ಅಂತಾ ಅಂದ್ಕೊಂಡ್ ಇದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಒಬೆಸಿಟಿ (ಬೊಜ್ಜು) ಅಥವಾ ಸ್ಥೂಲಕಾಯತೆ (Obesity) ಹೆಚ್ಚಾಗುತ್ತಿದ್ದು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಕೆಲವರು ಅತಿಯಾಗಿ ತಿನ್ನುವುದೇ ಈ ಸಮಸ್ಯೆ ಕಾರಣ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಈ ಸಮಸ್ಯೆ ಪ್ರತಿಯೊಬ್ಬರಿಗೂ ಒಂದೇ ರೀತಿಯಾಗಿ ಪರಿಣಾಮ ಬೀರುವುದಿಲ್ಲ. ವಿಶೇಷವಾಗಿ ಮೆಟಾಬಾಲಿಸಂ ಸರಿಯಾಗಿರದವರಲ್ಲಿ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಇದರ ಹೊರತಾಗಿಯೂ ಇನ್ನೂ ಹಲವು ಕಾರಣಗಳಿವೆ. ಅವುಗಳನ್ನು ತಿಳಿದುಕೊಂಡರೆ ಸ್ಥೂಲಕಾಯವನ್ನು ಅಂದರೆ ಬೊಜ್ಜನ್ನು ಸರಿಯಾಗಿ ನಿಯಂತ್ರಿಸಬಹುದಾಗಿದೆ. ಡಾ. ದೀಪಕ್ ಕುಮಾರ್ ಸುಮನ್…

Read More

ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ – Kannada News | Karnataka Cabinet Expansion: AICC Names GS Patil as Assembly Speaker, Salim Ahmed as Council Chairman

ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರು ಪ್ರಕಟ ಬೆಂಗಳೂರು, ಆಗಸ್ಟ್​​ 03: ಬಹುನಿರೀಕ್ಷಿತ ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ನೂತನ ಸಚಿವರು ಇಂದು (ಆಗಸ್ಟ್​​ 03) ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ವಿಧಾನ ಸಭೆಯ ನೂತನ ಸ್ಪೀಕರ್​​, ಡೆಪ್ಯೂಟಿ ಸ್ಪೀಕರ್​​ ಹಾಗೂ ವಿಧಾನ ಪರಿಷತ್​​ ಸಭಾಪತಿ ಮತ್ತು ಉಪ ಸಭಾಪತಿಗಳ ಹೆಸರನ್ನೂ ಎಐಸಿಸಿ ಅಂತಿಮಗೊಳಿಸಿದೆ. ವಿಧಾನಸಭೆ ಸ್ಪೀಕರ್​ ಆಗಿ ಗದಗ ಜಿಲ್ಲೆ ರೋಣ ಕ್ಷೇತ್ರದ…

Read More

ವರ್ಷಗಳ ಕಾಲ ನೆನಪುಳಿವ ಸಿನಿಮಾ: ‘ಫಾದರ್’ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತು – Kannada News | Darling Krishna talks about his upcoming movie Father

ಡಾರ್ಲಿಂಗ್ ಕೃಷ್ಣ (Darling Krishna) ಕಳೆದ ಕೆಲ ವರ್ಷಗಳಿಂದ ಗಮನ ಸೆಳೆಯುವ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ‘ಕೌಸಲ್ಯ ಸುಪ್ರಬಾ ರಾಮ’, ‘ಬ್ರಾಟ್’ ಇನ್ನೂ ಕೆಲ ಒಳ್ಳೆಯ ಸಿನಿಮಾಗಳನ್ನು ಡಾರ್ಲಿಂಗ್ ಕೃಷ್ಣ ಮಾಡುತ್ತಾ ಬರುತ್ತಿದ್ದಾರೆ. ಇದೀಗ ‘ಫಾದರ್’ ಹೆಸರಿನ ಭಿನ್ನ ರೀತಿಯ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ ಅವರು ಸಿನಿಮಾನಲ್ಲಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಡಾರ್ಲಿಂಗ್ ಕೃಷ್ಣ, ‘ಫಾದರ್’ ಸಿನಿಮಾ ಬಹಳ ಭಿನ್ನವಾದ ಆದರೆ ಮನಸ್ಸಿಗೆ ತಾಗುವ ಸಿನಿಮಾ, ಬಹಳ ವರ್ಷಗಳ ಕಾಲ ಈ…

Read More

ಪತಿ ಬಿಟ್ಟರೆ ಗತಿ ಇಲ್ಲದಂತಾಯ್ತೆ ಸಮಂತಾಗೆ? ಮುಂದೇನು?

ಸಮಂತಾ (Samantha) ದಕ್ಷಿಣದ ಸ್ಟಾರ್ ನಟಿ ಎನಿಸಿಕೊಂಡವರು, ನಯನತಾರಾ, ಅನುಷ್ಕಾ ಶೆಟ್ಟಿ ರೀತಿ ಸಮಂತಾ ಸಹ ತೆಲುಗು, ತಮಿಳಿನ ಸ್ಟಾರ್ ನಟಿಯಾಗಿ ಮೆರೆದವರು. ನಯನತಾರಾ, ಅನುಷ್ಕಾ ಶೆಟ್ಟಿ ಏರಿದ ಎತ್ತರಕ್ಕೆ ಅವರೂ ಏರಲಿದ್ದಾರೆ ಎಂದೇ ಸಿನಿಮಾ ಪ್ರೀಯರು ನಿರೀಕ್ಷಿಸಿದ್ದರು. ಸಮಂತಾಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇತ್ತು. ಆದರೆ ಇತ್ತೀಚೆಗೆ ಯಾಕೋ ಸಮಂತಾಗೆ ಅವಕಾಶಗಳೇ ಸಿಗುತ್ತಿಲ್ಲ. ಅವರ ಪತಿಯ ಹೊರತಾಗಿ ಇನ್ಯಾರೂ ಸಹ ಸಮಂತಾ ಜೊತೆಗೆ ಕೆಲಸ ಮಾಡಲು ತಯಾರೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಲು ಕಾರಣವೇನು? 2019ರ ವರೆಗೆ…

Read More

ಮಹಾರಾಷ್ಟ್ರದ ವರ್ಷದ 3 ದಿನ ಈ ಗ್ರಾಮದಲ್ಲಿ ಆತ್ಮಗಳ ದರ್ಬಾರ್, ಮನುಷ್ಯರಿಗೆ ಪ್ರವೇಶವಿಲ್ಲ!

ಮುಂಬೈ, ಮಾರ್ಚ್ 12: ಭಾರತವು ಅಗಾಧವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ದೇಶ. ಈ ದೇಶದಲ್ಲಿ ಕೆಲವು ಹಳ್ಳಿಗಳಿಗೆ ವಿಶಿಷ್ಟ ಇತಿಹಾಸವಿದೆ. ಕೆಲವು ಹಳ್ಳಿಗಳು ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿವೆ. ಈ ಸಂಪ್ರದಾಯಗಳು ಶತಮಾನಗಳಿಂದ ನಡೆದುಕೊಂಡು ಬರುತ್ತಿವೆ. ಈ ಶತಮಾನದಲ್ಲಿಯೂ ಜನರು ಈ ಸಂಪ್ರದಾಯಗಳನ್ನು ಅದೇ ಭಕ್ತಿಯಿಂದ ಅನುಸರಿಸುತ್ತಾರೆ. ಮಹಾರಾಷ್ಟ್ರದ (Maharashtra) ಹಳ್ಳಿಯೊಂದರಲ್ಲಿ ಮೂರು ದಿನ ಇಡೀ ಗ್ರಾಮಕ್ಕೆ ಗ್ರಾಮವೇ ಊರನ್ನು ಖಾಲಿ ಮಾಡುತ್ತದೆ. ಈ 3 ದಿನಗಳು ಇಲ್ಲಿ ದೆವ್ವಗಳು ವಾಸ ಮಾಡುತ್ತವೆ ಎಂಬ ನಂಬಿಕೆಯಿದೆ. ಮಹಾರಾಷ್ಟ್ರದಲ್ಲಿರುವ ಈ…

Read More

ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ; ಸರ್ಕಾರ ವಿರುದ್ಧ ಜನಾಕ್ರೋಶ! – Kannada News | Karnataka Government Hospitals Halt CT, MRI Services Amidst 140 Crore Bill Arrears

ಬೆಂಗಳೂರು, ಫೆಬ್ರವರಿ 20: ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದ್ದ ಉಚಿತ ಸಿಟಿ (CT) ಮತ್ತು ಎಂಆರ್‌ಐ (MRI) ಸ್ಕ್ಯಾನಿಂಗ್ ಸೇವೆಗಳು ಸ್ಥಗಿತಗೊಂಡಿವೆ. ಆರೋಗ್ಯ ಇಲಾಖೆಯಿಂದ ಖಾಸಗಿ ಸಹಭಾಗಿತ್ವದಲ್ಲಿ ಸೇವೆ ನೀಡುತ್ತಿದ್ದ ಸಂಸ್ಥೆಗಳಿಗೆ 140 ಕೋಟಿ ರೂಪಾಯಿಗಳ ಬಿಲ್ ಬಾಕಿ ಉಳಿದಿರುವುದೇ ಈ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ನಿರ್ಧಾರವು ರಾಜ್ಯದ 13 ಜಿಲ್ಲೆಗಳಲ್ಲಿ ಮತ್ತು 5 ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳಿಗೆ ನೇರವಾಗಿ ಪರಿಣಾಮ ಬೀರಿದೆ. ಸರ್ಕಾರಿ ಆಸ್ಪತ್ರೆಗಳು ಬಡವರಿಗೆ ಉಚಿತ ಸೇವೆ ಒದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತವೆ….

Read More