ಸಕ್ಕರೆ ಡಬ್ಬಕ್ಕೆ ಇರುವೆಗಳು ಮುತ್ತಿಕೊಳ್ಳದಂತೆ ನೋಡಿಕೊಳ್ಳಲು ಈ ಒಂದು ಸಲಹೆಯನ್ನು ಪಾಲಿಸಿ – Kannada News | Follow this tip to keep ants out of your sugar container
ಸಿಹಿ ಪದಾರ್ಥಗಳು ಇರುವಲ್ಲಿ, ಇರುವೆಗಳು (ants) ಸುಳಿದಾಡುವುದು ಸರ್ವೆ ಸಾಮಾನ್ಯ. ಅದರಲ್ಲೂ ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಸಕ್ಕರೆ ಡಬ್ಬಿಗಳು ಇರುವೆಗಳು ಬಹು ಬೇಗನೇ ಆಕರ್ಷಿಸುತ್ತವೆ. ಹೌದು ಸಕ್ಕರೆ ಡಬ್ಬಿಯನ್ನು ಎಷ್ಟೇ ಬಿಗಿಯಾಗಿ ಮುಚ್ಚಿದರೂ ಸಹ ಇರುವೆಗಳು ಸಕ್ಕರೆ ಡಬ್ಬಿಯನ್ನು ಮುತ್ತಿಕೊಳ್ಳುತ್ತವೆ. ಇದರಿಂದ ಸಕ್ಕರೆಯೂ ಹಾಳಾದಂತಾಗುತ್ತದೆ, ಪದೇ ಪದೇ ಡಬ್ಬವನ್ನು ಕೂಡ ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಹೀಗಿರುವಾಗ ಈ ಒಂದು ವಸ್ತುವನ್ನು ಸಣ್ಣ ಚೀಲದಲ್ಲಿಟ್ಟು ಸಕ್ಕರೆ ಡಬ್ಬದೊಳಗೆ ಇಡುವುದರಿಂದ, ಇರುವೆಗಳು ಆ ಕಡೆ ಬಾರದಂತೆ ನೋಡಿಕೊಳ್ಳಬಹುದು. ಹಾಗಿದ್ರೆ ಯಾವ ವಸ್ತುವನ್ನು ಸಕ್ಕರೆ…