Headlines

ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ: ಕಿಚ್ಚನ ಅಭಿಮಾನಿಗಳು ಫುಲ್ ಖುಷ್ – Kannada News | Kichcha Sudeep fans waiting for KD Part 2 movie after enjoying his cameo in KD ft Dhruva Sarja

ಧ್ರುವ ಸರ್ಜಾ ನಟನೆಯ ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇಂದು (ಏಪ್ರಿಲ್ 30) ಸಿನಿಮಾ ಬಿಡುಗಡೆ ಆಗಿದ್ದು, ಸುದೀಪ್ ಅಭಿಮಾನಿಗಳು ಚಿತ್ರ ನೋಡಿ ಖುಷಿಪಟ್ಟಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್ ಕೂಡ ಬರಲಿದೆ. ‘ಕೆಡಿ 2’ ಸಿನಿಮಾದಲ್ಲಿ ಸುದೀಪ್ ಪಾತ್ರದ ಬಗ್ಗೆ ಹೆಚ್ಚಿನ ವಿಷಯ ಬಹಿರಂಗ ಆಗಲಿದೆ. ಸದ್ಯಕ್ಕೆ ‘ಕೆಡಿ’ (KD The Devil) ಚಿತ್ರದಲ್ಲಿ ಸುದೀಪ್ ಅವರ ಎಂಟ್ರಿ ಬಗ್ಗೆ ಫ್ಯಾನ್ಸ್ ಮಾತನಾಡುತ್ತಿದ್ದಾರೆ. ಕಾಲ ಭೈರವ…

Read More

ಅಪ್ಪನ 45 ಲಕ್ಷ ರೂ. ಹಣಕ್ಕಾಗಿ ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ ದತ್ತು ಮಗಳು! – Kannada News | Teenage daughter her lover killed mother to grab dead fathers Rs 45 lakh and job

ರಾಂಚಿ, ಏಪ್ರಿಲ್ 30: ಆ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ, ಹೆಣ್ಣುಮಗುವೊಂದನ್ನು ದತ್ತು ಪಡೆದು, ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದರು. ಆದರೆ, ಆ ಮಗಳೇ ತಮ್ಮ ಪಾಲಿಗೆ ಮೃತ್ಯುವಾಗುತ್ತಾಳೆ ಎಂದು ಅವರು ಊಹೆ ಕೂಡ ಮಾಡಿರಲಿಲ್ಲ. ಇದು ಜಾರ್ಖಂಡ್​​ನಲ್ಲಿ ನಡೆದ ಕತೆ. ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರಿಯಕರ ಮತ್ತು ಅವನ ಮೂವರು ಸ್ನೇಹಿತರೊಂದಿಗೆ ಸೇರಿ ಜಾರ್ಖಂಡ್‌ನ (Jharkhand) ರಾಂಚಿಯಲ್ಲಿ ತನ್ನ ತಾಯಿಯನ್ನು ಕೊಂದಿದ್ದಾಳೆ. ಆ ಹುಡುಗಿಯನ್ನು ಬಂಧಿಸಲಾಗಿದೆ. ಆಕೆಯ ಗೆಳೆಯ ಮತ್ತು ಇನ್ನೊಬ್ಬ ಆರೋಪಿಯನ್ನು ಕೂಡ ಬಂಧಿಸಲಾಗಿದೆ. ಜಾರ್ಖಂಡ್​​ನ ಮನಿಟೋಲಾದ…

Read More

ಒಳಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ: ಪರಿಷ್ಕೃತ ರೋಸ್ಟರ್ ಜಾರಿಗೆ ಸಂಪುಟ ಅಸ್ತು – Kannada News | Karnataka Cabinet: Reservation Order Withdrawn, Bidadi Project and High Speed Rail Approved

ಕಾನೂನು ಸಚಿವ ಹೆಚ್​.ಕೆ.ಪಾಟೀಲ್Image Credit source: tv9 kannada ಬೆಂಗಳೂರು, ಏಪ್ರಿಲ್​ 30: ಇತ್ತೀಚೆಗೆ ರಾಜ್ಯ ಸರ್ಕಾರ ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಆದೇಶ ಹೊಡಿಸಿತ್ತು. ಆದರೆ ಏಪ್ರಿಲ್​ 27ರಂದು ಮಾಡಲಾಗಿದ್ದ ಆದೇಶವನ್ನು ಹಿಂಪಡೆಯಲು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪರಿಷ್ಕೃತ ಮಾದರಿಯಲ್ಲಿ ರೋಸ್ಟರ್ ಜಾರಿ ಮಾಡಲು ನಿರ್ಧರಿಸಲಾಗಿದ್ದು, ಸಮಾಜಕಲ್ಯಾಣ ಇಲಾಖೆ ಪರಿಷ್ಕೃತ ಆದೇಶವನ್ನು ಹೊರಡಿಸಲಿದೆ. ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಯೋಜನೆ ಬಗ್ಗೆ ಚರ್ಚೆ ಸಚಿವ ಸಂಪುಟ ಸಭೆ…

Read More

Chanakya Niti: ಪದೇ ಪದೇ ಹಣವನ್ನು ಸಾಲ ಪಡೆಯುವುದರಿಂದ ಏನಾಗುತ್ತದೆ ಗೊತ್ತಾ? – Kannada News | Chanakya Niti: If you borrowing money, you will have to face all these problems

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿದ್ದಾರೆ.  ಜೊತೆಗೆ ಈ ನೀತಿಗಳಲ್ಲಿ, ಅವರು ನಿರಂತರವಾಗಿ ಇತರರಿಂದ ಸಾಲ ಪಡೆಯುವವರ ಬಗ್ಗೆಯೂ ಮಾತನಾಡುತ್ತಾರೆ. ಸಹಾಯ ಪಡೆಯಲು, ಪರಿಸ್ಥಿತಿಯನ್ನು ನಿಭಾಯಿಸಲು ಸಾಲ ಪಡೆಯುವುದು  ಸುಲಭದ ಮಾರ್ಗವೆಂದು ಹಲವರು ಭಾವಿಸುತ್ತಾರೆ. ಈ ಅಭ್ಯಾಸವು ಆರಂಭದಲ್ಲಿ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಹುದಾದರೂ, ಅದು ದೀರ್ಘಾವಧಿಯಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಚಾರ್ಯ ಚಾಣಕ್ಯ ಎಚ್ಚರಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಈ ಅಭ್ಯಾಸವು ವ್ಯಕ್ತಿಯ…

Read More

GT vs RCB: ಏಷ್ಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ – Kannada News | Virat Kohli Creates History: First Player with 12,000 T20 Runs in Asia

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವೆ ನಡೆದ ಐಪಿಎಲ್ 2026 ರ 42ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಕೇವಲ 13 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಆದಾಗ್ಯೂ, ಈ ಪಂದ್ಯದಲ್ಲಿ ಕೊಹ್ಲಿ ಯಾವುದೇ ಬ್ಯಾಟ್ಸ್‌ಮನ್ ಮುರಿಯಲು ಅತ್ಯಂತ ಕಷ್ಟಕರವಾದ ಮಹತ್ವದ ದಾಖಲೆಯೊಂದನ್ನು ನಿರ್ಮಿಸಿದರು. Source link

Read More

ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ, ಕಳಪೆ ಕಾಮಗಾರಿ ಬಯಲು – Kannada News | Police vehicle fell down into footpath at Bengaluru Over Heavy rain

ಬೆಂಗಳೂರು, (ಏಪ್ರಿಲ್​ 30): ಬುಧವಾರ (ಏಪ್ರಿಲ್ 29) ಸುರಿದ ಮಳೆಯು 25 ವರ್ಷದ ಬಳಿಕ ಹೊಸ ದಾಖಲೆ ಬರೆದಿದೆ. ಈ ವರ್ಷಧಾರೆಗೆ ರಾಜಧಾನಿ ತತ್ತರಿಸಿದ್ದಾರೆ. ಒಂದೇ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಇನ್ನು ಎಲ್ಲೊಂದರಲ್ಲಿ ಗಿಡ ಮರಗಳು ಮುರಿದು ಬಿದ್ದಿವೆ. ಇನ್ನು  ವಿಧಾನಸೌದ ಬಳಿಯ ರಸ್ತೆ ಫುಟ್​​ಪಾತ್ ಕುಸಿದು ಬಿದ್ದಿದ್ದು, ಈ ಗುಂಡಿಗೆ ಪೊಲೀಸ್ ವಾಹನ ಸಹ ಬಿದ್ದಿದೆ. Source link

Read More

GT vs RCB: ಅಂಪೈರ್​ಯಿಂದ ಆರ್​​ಸಿಬಿಗೆ ಮಹಾಮೋಸ; ಸಿಡಿದೆದ್ದ ಕೊಹ್ಲಿ – Kannada News | IPL 2026: Rajat Patidar’s Controversial Out vs GT Shakes RCB; Kohli Furious with Umpire

ಪ್ರತಿ ಐಪಿಎಲ್​ನಂತೆ 2026 ರ ಐಪಿಎಲ್ (IPL 2026) ಕೂಡ ವಿವಾದಗಳಿಂದ ಹೊರತಾಗಿಲ್ಲ. ಆದರೆ ಈ ಆವೃತ್ತಿಯಲ್ಲಿ ಅಂಪೈರ್​ಗಳು ನೀಡಿರುವ ತೀರ್ಪುಗಳೇ ಸಾಕಷ್ಟು ವಿವಾದ ಹುಟ್ಟಿಸಿವೆ. ಇದೀಗ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (GT vs RCB) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 42ನೇ ಪಂದ್ಯದಲ್ಲೂ ಕೂಡ ಮತ್ತೊಂದು ವಿವಾದ ಭುಗಿಲೆದ್ದಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ಅವರ ವಿಕೆಟ್ ದೊಡ್ಡ ವಿವಾದಕ್ಕೆ ಕಾರಣವಾಗಿಸಡ. ಈ…

Read More

ಬೆಳಿಗ್ಗೆ ಮಾತ್ರವಲ್ಲ ರಾತ್ರಿ ಸಮಯದಲ್ಲೂ ಹೀಟ್ ಸ್ಟ್ರೋಕ್ ಅಪಾಯ ತಪ್ಪಿದ್ದಲ್ಲ: ತಜ್ಞರಿಂದ ಎಚ್ಚರಿಕೆ – Kannada News | Can Heat Stroke Happen at Night? Warning Signs to Know

ಬೇಸಿಗೆಯ ತೀವ್ರತೆ ದಿನದ ಬಿಸಿಲಿಗಷ್ಟೇ ಸೀಮಿತವಲ್ಲ. ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲೂ ಉಷ್ಣತೆ ಮತ್ತು ಉಷ್ಣಾಂಶ ಹೆಚ್ಚಾಗುತ್ತಿರುವುದರಿಂದ ಆರೋಗ್ಯದ ಮೇಲೆ ಅದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ರಾತ್ರಿ ಸುರಕ್ಷಿತ ಎಂದು ಭಾವಿಸುವವರು, ಈ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಸೂಚಿಸುತ್ತಿದ್ದಾರೆ. ಹೌದು, ತಜ್ಞರ ಪ್ರಕಾರ, ದಿನದ ಬಿಸಿಲಿನ ನಂತರವೂ ರಾತ್ರಿ ತಾಪಮಾನ ಕಡಿಮೆಯಾಗದಿದ್ದರೆ ದೇಹಕ್ಕೆ ತಣ್ಣಗಾಗಲು ಅವಕಾಶ ಸಿಗುವುದಿಲ್ಲ. ಇದರಿಂದ ದೇಹದ ಉಷ್ಣಾಂಶ ನಿಯಂತ್ರಣ ಕಷ್ಟವಾಗುತ್ತದೆ. ಹೆಚ್ಚಿದ ಶಾಖದ ವಾತಾವರಣದಿಂದ ಬೆವರು ಸರಿಯಾಗಿ ಒಣಗದೆ ದೇಹ…

Read More

ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು – Kannada News | 4 people dead after cruise boat with 30 onboard capsizes in Madhya Pradesh Bargi dam

ಜಬಲ್ಪುರ, ಏಪ್ರಿಲ್ 30: ಮಧ್ಯಪ್ರದೇಶದ (Madhya Pradesh) ಜಬಲ್ಪುರದ ಖಮರಿಯಾ ದ್ವೀಪದ ಬಳಿಯ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಇಂದು ಸಂಜೆ ಕ್ರೂಸ್ ಹಡಗು ಮುಳುಗಿದ್ದು, 4 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಇದುವರೆಗೆ 18 ಜನರನ್ನು ರಕ್ಷಿಸಿದೆ. ತೀವ್ರ ಬಿರುಗಾಳಿಯ ನಡುವೆ ಹಡಗು ಸಮತೋಲನ ಕಳೆದುಕೊಂಡು ಮಗುಚಿ ಬಿದ್ದು ಮುಳುಗಿತು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ ಕಾರಣದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು…

Read More

ಕಾನ್ ಚಿತ್ರೋತ್ಸವದಲ್ಲಿ ಭಾಷಣ ಮಾಡಲಿರುವ ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ – Kannada News | September 21 movie director Karen Kshiti Suvarna to talk in world woman Cannes agenda

2026ನೇ ಸಾಲಿನ ಕಾನ್ ಚಿತ್ರೋತ್ಸವಕ್ಕೆ (Cannes Film Festival) ಸಿದ್ಧತೆ ನಡೆಯುತ್ತಿದೆ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಭಾಗವಹಿಸುವುದು ಎಂದರೆ ಹೆಮ್ಮೆಯೇ ಸರಿ. ಈ ಬಾರಿ ನಡೆಯಲಿರುವುದು 79ನೇ ಕಾನ್ ಚಿತ್ರೋತ್ಸವ. ಅದರ ಅಂಗವಾಗಿ ಆಯೋಜನೆಗೊಳ್ಳಲಿರುವ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಕನ್ನಡದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ (Karen Kshiti Suvarna) ಅವರು ಭಾಷಣ ಮಾಡಲಿದ್ದಾರೆ. 22ರ ಪ್ರಾಯದ ಈ ಯುವ ನಿರ್ದೇಶಕಿಗೆ ಪ್ರತಿಷ್ಠಿತ ಚಿತ್ರೋತ್ಸವದಿಂದ ಆಹ್ವಾನ ಬಂದಿದೆ. ‘ಸೆಪ್ಟೆಂಬರ್ 21’ (September 21)…

Read More