Headlines

Budh Gochar 2026: ಮೇಷ ರಾಶಿಗೆ ಬುಧನ ಪ್ರವೇಶ; ಇಂದಿನಿಂದ ಮೇ 14 ರವರೆಗೆ ಈ ರಾಶಿಗೆ ‘ಸುವರ್ಣ ಕಾಲ’! – Kannada News | Budh gochar 2026 mercury in mesha rashi impact on 12 signs and remedies

ಮೇಷ ರಾಶಿಗೆ ಬುಧನ ಪ್ರವೇಶImage Credit source: Pinterest ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಮಾನವನ ಜೀವನದ ಮೇಲೆ ನಿರಂತರ ಪ್ರಭಾವ ಬೀರುತ್ತದೆ. ಇಂದು ಅಂದರೆ ಏಪ್ರಿಲ್ 30, ಮಂಗಳವಾರ ಬೆಳಿಗ್ಗೆ 6:52 ಕ್ಕೆ, ಬುದ್ಧಿಶಕ್ತಿ, ವ್ಯಾಪಾರ ಮತ್ತು ಸಂವಹನದ ಕಾರಕನಾದ ‘ಬುಧ’ ಗ್ರಹವು ಮೇಷ ರಾಶಿಗೆ ಪದಾರ್ಪಣೆ ಮಾಡಿದೆ. ಈ ಸಂಚಾರವು ಮೇ 14 ರವರೆಗೆ ಮುಂದುವರಿಯಲಿದ್ದು, ದ್ವಾದಶ ರಾಶಿಗಳ ಮೇಲೆ ಮಿಶ್ರ ಪರಿಣಾಮ ಬೀರಲಿದೆ. ವಿಶೇಷವಾಗಿ ಐದು ರಾಶಿಯವರಿಗೆ ಇದು ಅತ್ಯಂತ ಲಾಭದಾಯಕ…

Read More

ಮರದಡಿ ಸಿಲುಕಿದ್ದ ಹಸುವನ್ನು ರಕ್ಷಿಸಿ ಮಾನವೀಯತೆ ಮೆರೆದ ಮಹಿಳೆಯರು; ವಿಡಿಯೋ ವೈರಲ್! – Kannada News | Heartwarming Bengaluru: Women Save Cow from Fallen Tree After Heavy Rains, Inspiring Act

ಬೆಂಗಳೂರು, ಏ.30: ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸುರಿದ ರಣಮಳೆಗೆ ಈಗಾಗಲೇ 9 ಮಂದಿ ಬಲಿಯಾಗಿದ್ದು, ನಗರದಾದ್ಯಂತ ಮರಗಳು ಧರೆಗುರುಳಿವೆ. ಈ ದುರಂತಗಳ ನಡುವೆ, ಪ್ರಾಣಿಪ್ರೇಮ ಮೆರೆಯುವ ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಧಾರಾಕಾರವಾಗಿ ಸುರಿದ ಮಳೆಗೆ ದೊಡ್ಡ ಗಾತ್ರದ ಮರವೊಂದು ರಸ್ತೆಯಲ್ಲಿದ್ದ ಹಸುವಿನ ಮೇಲೆ ಬಿದ್ದಿದೆ. ಮರದ ಭಾರಕ್ಕೆ ಸಿಲುಕಿದ ಹಸುವು ಹೊರಬರಲಾಗದೆ ತೀವ್ರವಾಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಇಬ್ಬರು ಧೈರ್ಯಶಾಲಿ ಮಹಿಳೆಯರು, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಭಾರೀ ಗಾತ್ರದ ಮರದ ಕೊಂಬೆಗಳನ್ನು ತಮ್ಮ ಶಕ್ತಿ ಮೀರಿ…

Read More

ಕರ್ನಾಟಕ ಸಿಎಂ ರೇಸ್​​ನಲ್ಲಿದ್ದಾರಾ ಮಲ್ಲಿಕಾರ್ಜುನ ಖರ್ಗೆ?: ಸ್ವತಃ ಎಐಸಿಸಿ ಅಧ್ಯಕ್ಷರಿಂದಲೇ ಸಿಕ್ಕು ಸ್ಪಷ್ಟನೆ – Kannada News | Mallikarjuna Kharge Addresses Karnataka CM Change Speculation Amidst Political Buzz

ಕಲಬುರಗಿ, ಏಪ್ರಿಲ್​​ 30: ಮಾಧ್ಯಮಗಳೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ನಾಯಕತ್ವ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಹರಿದಾಡುತ್ತಿರುವ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿನ ಗೊಂದಲಗಳನ್ನು ಆದಷ್ಟು ಬೇಗನೆ ಬಗೆಹರಿಸುವುದಾಗಿ ಅವರು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚೆಗೆ ಕಾಂಗ್ರೆಸ್‌ನ 40-50 ಶಾಸಕರು ದೆಹಲಿಗೆ ಟಿಕೆಟ್ ಕಾಯ್ದಿರಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಖರ್ಗೆ ಅವರೇ ಸಿಎಂ ಆದರೆ ಉತ್ತಮ ಎಂಬ ಗೃಹ…

Read More

‘ಕಾಂಪೌಂಡ್ ಬಳಿ ಕೂತು ವ್ಯಾಪಾರ ಮಾಡಬೇಡಿ’: ಬೌರಿಂಗ್ ಆಸ್ಪತ್ರೆ ದುರಂತದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು ನೋಡಿ – Kannada News | Bowring Hospital Tragedy: AICC President Mallikarjun Kharge Urges Vendors to Avoid Sitting Near Walls

ಕಲಬುರಗಿ, ಏಪ್ರಿಲ್ 30: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದುಬಿದ್ದು ಏಳು ಮಂದಿ ಮೃತಪಟ್ಟ ಘಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಪೌಂಡ್ ಹಳೆಯದಾಗಿತ್ತು ಅಥವಾ ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತಿದೆ ಎಂದರು. ಕುಸಿದ ಕಾಂಪೌಂಡ್ ಸರಿಪಡಿಸಲು ಮತ್ತು ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು. ಕಾಂಪೌಂಡ್‌ಗಳ ಬಳಿ ಬೀದಿ…

Read More

‘ಕೆಡಿ ಬ್ಲಾಕ್​​ಬಸ್ಟರ್​’; ಪ್ರೇಮ್ ನಿರ್ದೇಶನಕ್ಕೆ ಮೆಚ್ಚುಗೆ, ಕಿಚ್ಚನ ಎಂಟ್ರಿಗೆ ಸಿಳ್ಳೆ, ಚಪ್ಪಾಳೆ – Kannada News | KD Blockbuster Review: Prem’s Direction and Kichcha Sudeep’s Entry Impress

‘ಕೆಡಿ’ ಸಿನಿಮಾ ಇಂದು (ಏಪ್ರಿಲ್ 30) ರಿಲೀಸ್ ಆಗಿದೆ. ಕೆವಿಎನ್ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಚಿತ್ರವನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ. ಪ್ರೇಮ್ ಅವರ ಹಳೆಯ ಖದರ್ ಮರಳಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಇದು ಆರಂಭದ ವಿಮರ್ಶೆ ಮಾತ್ರ. ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ‘ಮಾರ್ಟಿನ್’ ಸೋಲಿನ ಬಳಿಕ ಧ್ರುವ ಸರ್ಜ ಅವರ ‘ಕೆಡಿ’ ಸಿನಿಮಾ ರಿಲೀಸ್ ಆಗಿದೆ. ಈ ಕಾರಣಕ್ಕೆ ಅವರ ವೃತ್ತಿಜೀವನದ…

Read More

ಮಂಡ್ಯ ವಿವಿಯ ಯುವಸಂಭ್ರಮಕ್ಕೆ ವರುಣನ ಅಡ್ಡಿ: ಮಳೆ ಅಬ್ಬರಕ್ಕೆ ವೇದಿಕೆಯೇ ನೆಲಸಮ – Kannada News | Mandya University Yuvasambrama Postponed After Storm Damages Event Stage

ಮಂಡ್ಯ, ಏಪ್ರಿಲ್​​ 30: ನಿನ್ನೆ (ಏಪ್ರಿಲ್​ 29) ರಾತ್ರಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ನವ ವಸಂತ ಯುವಸಂಭ್ರಮ ಕಾರ್ಯಕ್ರಮಕ್ಕೂ ಮಳೆ ಅಡ್ಡಿಯಾಗಿದೆ. ಕಳೆದ ರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಕಾರ್ಯಕ್ರಮಕ್ಕಾಗಿ ನಿರ್ಮಿಸಿದ್ದ ಬೃಹತ್ ಪೆಂಡಾಲ್ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಪಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಸಕ ರವಿ ಗಣಿಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಗಳ ನಿರೀಕ್ಷೆಗೆ ತಕ್ಕಂತೆ ಕಾರ್ಯಕ್ರಮವನ್ನು ಮುಂದೊಂದು…

Read More

Video: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ, ಐವರು ಸಜೀವದಹನ – Kannada News | Five Killed After Car Catches Fire on Delhi–Mumbai Expressway in Rajasthan

ಜೈಪುರ, ಏಪ್ರಿಲ್ 30: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಅಲ್ವಾರ್ ಜಿಲ್ಲೆಯ ಲಕ್ಷ್ಮಣ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮೌಜ್‌ಪುರ ಬಳಿ, ಚಲಿಸುತ್ತಿದ್ದ ಕಾರೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ. ಮೃತರನ್ನು ಮಧ್ಯಪ್ರದೇಶದ ಶಿಯೋಪುರದವರು ಎಂದು ಗುರುತಿಸಲಾಗಿದ್ದು, ಇವರಲ್ಲಿ ಮೂವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದ್ದಾರೆ.ಕೋಟಾ ಕಡೆಗೆ ಪ್ರಯಾಣಿಸುತ್ತಿದ್ದ ವಾಹನದಲ್ಲಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬೆಂಕಿ…

Read More

ಗಂಭೀರ ಆರೋಪ: ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ‘AI ಚಿಪ್’ ಇದೆ!  – Kannada News | Vaibhav Sooryavanshi Reacts to Pakistani Expert’s Bat Chip Allegation

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆಗೈಯುತ್ತಿರುವ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ಕೇವಲ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಸಂಚಲನ ಮೂಡಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ಅರಗಿಸಿಕೊಳ್ಳಲಾಗದ ಪಾಕಿಸ್ತಾನದ ವಿಶ್ಲೇಷಕರೊಬ್ಬರು “ಇವರ ಬ್ಯಾಟ್‌ನಲ್ಲಿ AI ಚಿಪ್ ಇದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಾಸ್ಯಾಸ್ಪದ ಆರೋಪಕ್ಕೆ ವೈಭವ್ ಸೂರ್ಯವಂಶಿ ನೀಡಿರುವ ‘ಕ್ಲಾಸ್’ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ. ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್…

Read More

ಬೆಂಗಳೂರಲ್ಲಿ ದಾಖಲೆ ಬರೆದ ವರುಣ: ನಿನ್ನೆ ಸುರಿದ ಮಳೆಯ ಪ್ರಮಾಣ ಎಷ್ಟು ಗೊತ್ತಾ?; ಇಲ್ಲಿದೆ ಮಾಹಿತಿ – Kannada News | Bengaluru Records Historic Rainfall in April: Yellow Alert Issued for Karnataka

ಬೆಂಗಳೂರು, ಏಪ್ರಿಲ್​​ 30: ನಗರದಲ್ಲಿ ಆಲಿಕಲ್ಲು, ಗುಡುಗು ಮತ್ತು ಮಿಂಚಿನ ಸಹಿತ ನಿನ್ನೆ (ಏಪ್ರಿಲ್​​ 29) ಧಾರಾಕಾರವಾಗಿ ಸುರಿದ ಮಳೆ ರಾಜಧಾನಿಯ ಏಪ್ರಿಲ್ ತಿಂಗಳ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದೆ. ನಿನ್ನೆ ಸಂಜೆ 111 ಮೀಲಿ‌ ಮೀಟರ್ ಮಳೆಯಾಗಿದ್ದು, 2001ರಲ್ಲಿಯೂ ಇದೇ ರೀತಿಯ ಮಳೆ ಆಗಿತ್ತು. ಇನ್ನು ಈ ನಡುವೆ ಬೆಂಗಳೂರಿನಲ್ಲಿ‌ ಇನ್ನೂ ಮೂರು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗ ದಲ್ಲಿ ಗಾಳಿ ಬಿಸಲಿದೆ ಎಂದು ಹವಾಮಾನ ಇಲಾಖೆಯ…

Read More

ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಸಮಗ್ರ ಪರಿಶೀಲನೆಗೆ ಆದೇಶ: ಬೌರಿಂಗ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ – Kannada News | After Bowring Hospital Tragedy, Karnataka Government Orders Safety Audit of All Government Hospitals in Bengaluru

ಬೆಂಗಳೂರು, ಏಪ್ರಿಲ್ 30: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ದುರಂತದಲ್ಲಿ ಏಳು ಅಮಾಯಕರು ಮೃತಪಟ್ಟ ಘಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸಮಗ್ರ ಪರಿಶೀಲನೆಗೆ ಆದೇಶ ನೀಡಿದ್ದಾರೆ. ಬೌರಿಂಗ್, ವಿಕ್ಟೋರಿಯಾ, ಕೆಸಿ ಜನರಲ್ ಮತ್ತು ಸಿವಿ ರಾಮನಗರ ಆಸ್ಪತ್ರೆ ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ…

Read More