ಗಂಭೀರ ಆರೋಪ: ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ‘AI ಚಿಪ್’ ಇದೆ!  – Kannada News | Vaibhav Sooryavanshi Reacts to Pakistani Expert’s Bat Chip Allegation

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಕ್ಸ್​-ಫೋರ್​ಗಳ ಸುರಿಮಳೆಗೈಯುತ್ತಿರುವ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ಕೇವಲ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಸಂಚಲನ ಮೂಡಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ಅರಗಿಸಿಕೊಳ್ಳಲಾಗದ ಪಾಕಿಸ್ತಾನದ ವಿಶ್ಲೇಷಕರೊಬ್ಬರು “ಇವರ ಬ್ಯಾಟ್‌ನಲ್ಲಿ AI ಚಿಪ್ ಇದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಾಸ್ಯಾಸ್ಪದ ಆರೋಪಕ್ಕೆ ವೈಭವ್ ಸೂರ್ಯವಂಶಿ ನೀಡಿರುವ ‘ಕ್ಲಾಸ್’ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ.

ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಈ 15 ವರ್ಷದ ಹುಡುಗ ಹೊಡೆಯುವ ಹೊಡೆತಗಳು ಮನುಷ್ಯನಿಂದ ಸಾಧ್ಯವಿಲ್ಲದಂತಿದೆ. ವೈಭವ್ ಅವರ ಬ್ಯಾಟ್ ಅನ್ನು ವಾಡಾ (WADA) ಪರೀಕ್ಷೆಗೆ ಒಳಪಡಿಸಿದಂತೆ ಲ್ಯಾಬ್‌ನಲ್ಲಿ ಪರೀಕ್ಷಿಸಬೇಕು. ಅವರ ಬ್ಯಾಟ್‌ನಲ್ಲಿ ಯಾವುದೋ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಚಿಪ್ ಇದೆ ಎಂದೆನಿಸುತ್ತಿದೆ” ಎಂದು ಹೇಳಿದ್ದರು.

ಬ್ಯಾಟ್​ನಲ್ಲಿ ಎಐ ಚಿಪ್ ಇರುವ ಕಾರಣ ವೈಭವ್ ಆ ರೀತಿಯಾಗಿ ಬ್ಯಾಟ್ ಮಾಡುತ್ತಿದ್ದಾನೆ. ಇಲ್ಲದಿದ್ದರೆ ಈ ವಯಸ್ಸಿಗೆ ಅಂತಹ ಆಟ ಆಡಲು ಸಾಧ್ಯವಿಲ್ಲ. ಹೀಗಾಗಿ ಅವರ ಬ್ಯಾಟ್​ ಅನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ನೌಮಾನ್ ನಿಯಾಝ್ ಆಗ್ರಹಿಸಿದ್ದರು.

ವೈಭವ್ ಸ್ಮಾರ್ಟ್ ಉತ್ತರ!

ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಭವ್ ಸೂರ್ಯವಂಶಿ, ಅತ್ಯಂತ ವಿನಮ್ರವಾಗಿ ಮತ್ತು ತಮಾಷೆಯಾಗಿ ಉತ್ತರಿಸಿದ್ದಾರೆ.

“ನನ್ನ ಬ್ಯಾಟ್‌ನಲ್ಲಿ ಚಿಪ್ ಏನಾದರೂ ಇದ್ದರೆ ಅದನ್ನು ದೇವರೆ ಅಳವಡಿಸಿ ಕಳುಹಿಸಿದ್ದಾರೆ. ದೇವರು ಮೇಲಿಂದಲೇ ಹೇಳಿದ್ದ, ನಿನ್ನ ಬ್ಯಾಟ್‌ನಲ್ಲಿ ಒಂದು ವಿಶೇಷ ಶಕ್ತಿ ನೀಡುತ್ತಿದ್ದೇನೆ ಎಂದು. ನಾನು ಕೇವಲ ಅದನ್ನು ಬಳಸುತ್ತಿದ್ದೇನೆ ಅಷ್ಟೇ,” ಎಂದು ವೈಭವ್ ನಗುತ್ತಾ ಹೇಳಿದ್ದಾರೆ. ಅವರ ಈ ಸಮಯಪ್ರಜ್ಞೆಯ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ವೈಭವ್ ಬ್ಯಾಟ್ ಮೇಲೆ ಸಂದೇಹ ವ್ಯಕ್ತಪಡಿಸಲು ಮುಖ್ಯ ಕಾರಣ ಯುವ ದಾಂಡಿಗನ ಆರ್ಭಟ. ಅಂದರೆ ಪ್ರಸ್ತುತ ಐಪಿಎಲ್​ನಲ್ಲಿ ವೈಭವ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

  • ವೇಗದ 400 ರನ್: ಐಪಿಎಲ್ ಇತಿಹಾಸದಲ್ಲಿ ಕೇವಲ 167 ಎಸೆತಗಳಲ್ಲಿ 400 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
  • ಅಬ್ಬರದ ಶತಕ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು.
  • ಕೊನೆಯ ಪ್ರದರ್ಶನ: ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಇದನ್ನೂ ಓದಿ: IPL 2026: ಬ್ಯಾಟಿಂಗ್, ಬೌಲಿಂಗ್ ಮಾಡದೇ ದಾಖಲೆ ಬರೆದ ಶಾರ್ದೂಲ್ ಠಾಕೂರ್..!

ಸದ್ಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ವೈಭವ್ ಸೂರ್ಯವಂಶಿ ತಮ್ಮ ಮೇಲೆ ಕೇಳಿ ಬರುತ್ತಿರುವ ಟೀಕೆ ಮತ್ತು ವಿಲಕ್ಷಣ ವಾದಗಳಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸುತ್ತಿದ್ದಾರೆ. ಈ ಉತ್ತರದಿಂದಾಗಿ ಬೌಲರ್​ಗಳು ಕಂಗೆಟ್ಟಿರುವುದಂತು ಸುಳ್ಳಲ್ಲ!

Source link

ಬೆಂಗಳೂರಲ್ಲಿ ದಾಖಲೆ ಬರೆದ ವರುಣ: ನಿನ್ನೆ ಸುರಿದ ಮಳೆಯ ಪ್ರಮಾಣ ಎಷ್ಟು ಗೊತ್ತಾ?; ಇಲ್ಲಿದೆ ಮಾಹಿತಿ – Kannada News | Bengaluru Records Historic Rainfall in April: Yellow Alert Issued for Karnataka

ಬೆಂಗಳೂರು, ಏಪ್ರಿಲ್​​ 30: ನಗರದಲ್ಲಿ ಆಲಿಕಲ್ಲು, ಗುಡುಗು ಮತ್ತು ಮಿಂಚಿನ ಸಹಿತ ನಿನ್ನೆ (ಏಪ್ರಿಲ್​​ 29) ಧಾರಾಕಾರವಾಗಿ ಸುರಿದ ಮಳೆ ರಾಜಧಾನಿಯ ಏಪ್ರಿಲ್ ತಿಂಗಳ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದೆ. ನಿನ್ನೆ ಸಂಜೆ 111 ಮೀಲಿ‌ ಮೀಟರ್ ಮಳೆಯಾಗಿದ್ದು, 2001ರಲ್ಲಿಯೂ ಇದೇ ರೀತಿಯ ಮಳೆ ಆಗಿತ್ತು. ಇನ್ನು ಈ ನಡುವೆ ಬೆಂಗಳೂರಿನಲ್ಲಿ‌ ಇನ್ನೂ ಮೂರು ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗ ದಲ್ಲಿ ಗಾಳಿ ಬಿಸಲಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ನೀಡಿದೆ.

ಬೆಂಗಳೂರಿನ ವಿವಿಧೆಡೆ ಮಳೆಯ ಪ್ರಮಾಣ

  • ಸಂಪಂಗಿರಾಮನಗರ- 39 ಮಿಲಿ ಮೀಟರ್
  • ಪುಲಕೇಶಿನಗರ- 36.50 ಮಿಲಿ ಮೀಟರ್
  • ಬೊಮ್ಮನಹಳ್ಳಿ- 31 ಮಿಲಿ ಮೀಟರ್
  • ಕಾಟನ್​ಪೇಟೆ- 29 ಮಿಲಿ ಮೀಟರ್
  • HAL ವಿಮಾನ ನಿಲ್ದಾಣ- 25 ಮಿಲಿ ಮೀಟರ್
  • ಬಿಟಿಎಂ ಲೇಔಟ್​- 22.50 ಮಿಲಿ ಮೀಟರ್
  • ಮಾರತ್ತಹಳ್ಳಿ- 18.50 ಮಿಲಿ ಮೀಟರ್

ಇದನ್ನೂ ಓದಿ: ದಾಖಲೆ ಮಟ್ಟದಲ್ಲಿ ಬತ್ತಿದ ಕೆಆರ್​​ಎಸ್​​ ಡ್ಯಾಂ; ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಸಂಕಷ್ಟ!

ಮುಕ್ಕಾಲು ಭಾಗ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್

ಹವಾಮಾನ ಇಲಾಖೆ ಮೂರು ದಿನ ಬೆಂಗಳೂರಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ. ಅದರಂತೆ ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಬಿಎಗೆ ಸಿಎಂ ಸೂಚನೆ

ನಿನ್ನೆ ಸುರಿದ ಮಳೆಗೆ ಅವಾಂತರಗಳಾದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ನಗರದ ಮ್ಯಾನ್​ಹೋಲ್​ಗಳು ಬ್ಲಾಕ್ ಆಗಿದ್ರೆ ಕೂಡಲೇ ಸರಿಪಡಿಸಿ, ಬೀಳುವ ಹಂತದಲ್ಲಿರುವ ಮರದ ಕೊಂಬೆಗಳ ತೆರವು ಮಾಡಿ ಎಂದು ಜಿಬಿಎ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜೊತೆಗೆ ನಗರದಲ್ಲಿ ಈಗ ಬಿದ್ದಿರುವ ಮರದ ಕೊಂಬೆಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಿ. ಅಂಡರ್​ಪಾಸ್​ಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಿ. ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವ ಜೊತೆಗೆ ಬೌರಿಂಗ್ ಆಸ್ಪತ್ರೆ ರೀತಿ ದುರ್ಘಟನೆ ನಡೆಯದಂತೆ ಗಮನಹರಿಸಿ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:59 am, Thu, 30 April 26

Source link

ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಸಮಗ್ರ ಪರಿಶೀಲನೆಗೆ ಆದೇಶ: ಬೌರಿಂಗ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ – Kannada News | After Bowring Hospital Tragedy, Karnataka Government Orders Safety Audit of All Government Hospitals in Bengaluru

ಬೆಂಗಳೂರು, ಏಪ್ರಿಲ್ 30: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ದುರಂತದಲ್ಲಿ ಏಳು ಅಮಾಯಕರು ಮೃತಪಟ್ಟ ಘಟನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಬೆಂಗಳೂರಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಸಮಗ್ರ ಪರಿಶೀಲನೆಗೆ ಆದೇಶ ನೀಡಿದ್ದಾರೆ. ಬೌರಿಂಗ್, ವಿಕ್ಟೋರಿಯಾ, ಕೆಸಿ ಜನರಲ್ ಮತ್ತು ಸಿವಿ ರಾಮನಗರ ಆಸ್ಪತ್ರೆ ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಒಂದು ವಾರದೊಳಗೆ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

ಸಮಸ್ಯೆಗಳ ಕುರಿತು ಪೂರ್ವಭಾವಿ ಎಚ್ಚರಿಕೆ ವಹಿಸುವುದನ್ನು ಬಿಟ್ಟು, ದೊಡ್ಡ ದುರಂತಗಳು ಸಂಭವಿಸಿದ ನಂತರವೇ ಸರ್ಕಾರ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ: ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿ ಸಾವು – Kannada News | Bengaluru Rain Havoc: Death Toll Hits 10 After Fresh Fatality; Past Tragedies Detailed

ಹಾರಿಬಿದ್ದಿರುವ ಮನೆಯ ಶೀಟ್​​ಗಳುImage Credit source: Tv9 Kannada

ಬೆಂಗಳೂರು, ಏಪ್ರಿಲ್​​ 30: ಮಳೆಯ ಅವಾಂತರಕ್ಕೆ ಬೆಂಗಳೂರಿನಲ್ಲಿ (Bengaluru) ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮನೆಯ ಮೇಲ್ಚಾವಣಿ, ಸಿಮೆಂಟ್​ ಇಟ್ಟಿಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್​ ಎಂದು ಗುರುತಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಮಂಜುನಾಥ್​ ಮೃತದೇಹ ಶಿಫ್ಟ್ ಮಾಡಲಾಗಿದೆ. ಮನೆಯ ಮೇಲಿನ ಶೀಟ್​​ ಹಾರದಂತೆ ಕಲ್ಲು ಇಡಲಾಗಿತ್ತು. ಗಾಳಿ ಮಳೆಗೆ ಶೀಟ್​​ ಬಿದ್ದಿದ್ದು ಈ ವೇಳೆ ಶೀಟ್​​ ಮೇಲಿಟ್ಟಿದ್ದ ಕಲ್ಲು ಮನೆಯಲ್ಲಿ ಮಲಗಿದ್ದ ಮಂಜುನಾಥ್​​ ಮೇಲೆ ಬಿದ್ದ ಪರಿಣಾಮ ಸಾವು ಸಂಭವಿಸಿದೆ.

ಸಾಲು ಸಾಲು ಬಲಿ

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಮಗು ಸೇರಿ ಒಟ್ಟು 7 ಜನ ದಾರುಣವಾಗಿ ಮೃತಪಟ್ಟಿದ್ದರು. ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52), ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39), ಕೆ.ಜೆ.ಹಳ್ಳಿಯ ಮುಸಾವಿರ್ ಬೇಗಂ (6), ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57), ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19) ಮತ್ತು ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36) ಅವಘಡದಲ್ಲಿ ಪ್ರಾಣಬಿಟ್ಟಿದ್ದರು. ಗಾಳಿ ಮಳೆಯ ಕಾರಣಕ್ಕೆ ಪಾದಚಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಕೆಳಗೆ ಆಶ್ರಯ ಪಡೆದಿದ್ದರು. ಮಳೆಯ ತೀವ್ರತೆಗೆ ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ಅವಶೇಷಗಳಡಿ ಸಿಲುಕಿದವರ ಪೈಕಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ದಾಖಲೆ ಬರೆದ ವರುಣ; ನಿನ್ನೆ ಸುರಿದ ಮಳೆಯ ಪ್ರಮಾಣ ಎಷ್ಟು ಗೊತ್ತಾ?; ಇಲ್ಲಿದೆ ಮಾಹಿತಿ

ಯಾರಬ್ ನಗರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದ. ನಿನ್ನೆ ಸಂಜೆ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ತನ್ನ ಬೈಕ್ ಪಾರ್ಕ್ ಮಾಡಲು ಸೈಯದ್ ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ಅಥವಾ ಕಂಬದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ಆತ ಪ್ರಾಣಕಳೆದುಕೊಂಡಿದ್ದ. ಮತ್ತೊಂದೆಡೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂತಹುದ್ದೇ ಘಟನೆ ನಡೆದಿತ್ತು. ಮಳೆಯ ನಡುವೆ ಸಂಚರಿಸುತ್ತಿದ್ದಾಗ, ರಸ್ತೆಯಲ್ಲಿದ್ದ ವಿದ್ಯುತ್ ಕಂಬದ ಬಳಿ ಹರಿದುಬಿದ್ದಿದ್ದ ವಿದ್ಯುತ್ ತಂತಿ (ವೈರ್) ಟಚ್ ಆದ ಪರಿಣಾಮ ಸುಮಾರು 30-35 ವರ್ಷ ವಯಸ್ಸಿನ ರಘು ಎಂಬುವವರು ಜೀವ ಬಿಟ್ಟಿದ್ದರು.ಜೆ.ಪಿ. ನಗರದ ಮಿನಿ ಫಾರೆಸ್ಟ್​​ನ 15ನೇ ಕ್ರಾಸ್ ಬಳಿ ಈ ದುರ್ಘಟನೆ ನಡೆದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕಿತ್ಸೆ ಫಲಕಾರಿಯಾಗದೆ ಮಗಳು ಸಾವು, ಅಳಿಯನನ್ನೇ ಅಪಹರಿಸಿ ಕೊಂದ ಕುಟುಂಬ – Kannada News | Udaipur Revenge Killing: Daughter’s Family Abducts, Murders Son in Law After Her Death

ಉದಯಪುರ, ಏಪ್ರಿಲ್ 30:ಚಿಕಿತ್ಸೆ ಫಲಕಾರಿಯಾಗದೆ ಮಗಳು ಸತ್ತಿದ್ದಕ್ಕೆ, ಆಕೆಯ ಕುಟುಂಬದವರು ಅಳಿಯನನ್ನು ಅಪಹರಿಸಿ ಹತ್ಯೆ(Murder) ಮಾಡಿರುವ ಘಟನೆ ಉದಯಪುರದಲ್ಲಿ ನಡೆದಿದೆ. ಚೋಖಲಬಾರ ಗ್ರಾಮದ ಪಿಂಟೂಲಾಲ್ ವಡೇರಾ ಅವರ ಪತ್ನಿ ಪರು (25) ಏಪ್ರಿಲ್ 28 ರಂದು ಉದಯಪುರದ ಆಸ್ಪತ್ರೆಯಲ್ಲಿ ನಿಧನರಾದರು.

ಏಪ್ರಿಲ್ 24 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಾಗ, ಆಕೆಯ ತವರು ಮನೆಯಾದ ಅಂಬಾವಿ ಗ್ರಾಮದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ.

ಮಗಳ ಸಾವಿನ ಸುದ್ದಿ ತಿಳಿದು ಪಿಂಟೂಲಾಲ್ ಕುಟುಂಬಕ್ಕೆ ಮಾಹಿತಿ ನೀಡಿದ ಬೆನ್ನಲ್ಲೇ, ಮಂಗಳವಾರ ಸಂಜೆ ಆಕೆಯ ಸಂಬಂಧಿಕರು ಶಸ್ತ್ರಾಸ್ತ್ರಗಳೊಂದಿಗೆ ಚೋಖಲಬಾರ ಗ್ರಾಮಕ್ಕೆ ನುಗ್ಗಿದ್ದಾರೆ. ಅಳಿಯನ ಕುಟುಂಬವೇ ಮಗಳ ಕೊಲೆ ಮಾಡಿದೆ ಎಂದು ಆರೋಪಿಸಿದ ಆ ಗುಂಪು, ಪಿಂಟೂಲಾಲ್ ಮನೆಯನ್ನು ಧ್ವಂಸ ಮಾಡಿ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತು.

ಮತ್ತಷ್ಟು ಓದಿ: ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಗ್ರಾಮಸ್ಥರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗಲಿಲ್ಲ. ಪ್ರಾಣಭಯದಿಂದ ಪಿಂಟೂಲಾಲ್ ಮತ್ತು ಅವರ ಕುಟುಂಬಸ್ಥರು ಸ್ಥಳದಿಂದ ಪಲಾಯನ ಮಾಡಿದರು. ಆದರೆ, ಮರುದಿನ ಬೆಳಿಗ್ಗೆ ಪತ್ನಿಯ ಸಹೋದರ ಕರಣ್ ತನ್ನ ಸಹಚರರೊಂದಿಗೆ ಮರಳಿ ಬಂದು, ಪತಿಯನ್ನು ಬಂದೂಕು ತೋರಿಸಿ ಎಲ್ಲರ ಸಮ್ಮುಖದಲ್ಲೇ ಅಪಹರಿಸಿ ಅಂಬಾವಿಗೆ ಕರೆದೊಯ್ದರು.

ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ರಕ್ಷಿಸುವ ಮೊದಲೇ, 26 ವರ್ಷದ ಪಿಂಟೂಲಾಲ್ ಅವರನ್ನು ಮಹಿಳೆಯ ಕುಟುಂಬಸ್ಥರು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಮಗಳ ಸಾವಿಗೆ ಅಳಿಯನೇ ಕಾರಣ ಎಂಬ ಅನುಮಾನದ ಮೇಲೆ ನಡೆದ ಈ ಸೇಡಿನ ಹತ್ಯೆಯು ಈಗ ದೊಡ್ಡ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯಲ್ಲಿ ಭಾಗಿಯಾದವರಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ICSE 10th, ISC 12th Results 2026: ಐಸಿಎಸ್ಇ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್​​ ವೀಕ್ಷಿಸಲು ಈ ನೇರ ಲಿಂಕ್ ಬಳಸಿ – Kannada News | ICSE 10th, ISC 12th Results 2026 CISCE Board Result Declared Toppers Ranks and Latest News

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂದು 10ನೇ ತರಗತಿ (ICSE) ಮತ್ತು 12ನೇ ತರಗತಿ (ISC) ಪರೀಕ್ಷೆಗಳ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆಯಾಗಲಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಫಲಿತಾಂಶವು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ವಿದ್ಯಾರ್ಥಿಗಳು ತಮ್ಮ ಯುನಿಕ್ ಐಡಿ (Unique ID) ಮತ್ತು ಇಂಡೆಕ್ಸ್ ಸಂಖ್ಯೆಯನ್ನು (Index Number) ಬಳಸಿಕೊಂಡು ತಮ್ಮ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು.

ಫಲಿತಾಂಶ ವೀಕ್ಷಿಸುವುದು ಹೇಗೆ? ಹಂತ-ಹಂತದ ಮಾಹಿತಿ ಇಲ್ಲಿದೆ:

ನಿಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

  • ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: ಮೊದಲು cisce.org ಅಥವಾ results.cisce.org ಗೆ ಲಾಗಿನ್ ಆಗಿ.
  • ಲಿಂಕ್ ಆಯ್ಕೆಮಾಡಿ: ಮುಖಪುಟದಲ್ಲಿ ಕಾಣಿಸುವ ‘Results 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮಾಹಿತಿ ನಮೂದಿಸಿ: ನಿಮ್ಮ ಕೋರ್ಸ್ (ICSE ಅಥವಾ ISC) ಆಯ್ಕೆಮಾಡಿ, ನಿಮ್ಮ 7 ಅಂಕಿಯ Unique ID ಮತ್ತು Index Number ಅನ್ನು ನಮೂದಿಸಿ.
  • ಕ್ಯಾಪ್ಚಾ ಕೋಡ್: ಸ್ಕ್ರೀನ್​ ಮೇಲೆ ಕಾಣುವ ಸುರಕ್ಷತಾ ಕೋಡ್ (Captcha) ಅನ್ನು ಭರ್ತಿ ಮಾಡಿ.
  • ಸಬ್ಮಿಟ್ ಮಾಡಿ: ‘Show Result’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅಂಕಪಟ್ಟಿ ಪ್ರದರ್ಶನವಾಗುತ್ತದೆ. ಭವಿಷ್ಯದ ಬಳಕೆಗಾಗಿ ಇದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇಂಟರ್ನೆಟ್ ಇಲ್ಲವೇ? SMS ಮೂಲಕ ಫಲಿತಾಂಶ ಪಡೆಯಿರಿ!

ವೆಬ್‌ಸೈಟ್ ಸರ್ವರ್ ಸಮಸ್ಯೆಯಿದ್ದಲ್ಲಿ ವಿದ್ಯಾರ್ಥಿಗಳು ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆಯಬಹುದು.

  • ICSE ಅಭ್ಯರ್ಥಿಗಳು: ICSE <ಸ್ಪೇಸ್> ನಿಮ್ಮ ಯುನಿಕ್ ಐಡಿ ಟೈಪ್ ಮಾಡಿ 09248082883 ಗೆ ಸಂದೇಶ ಕಳುಹಿಸಿ.
  • ISC ಅಭ್ಯರ್ಥಿಗಳು: ISC <ಸ್ಪೇಸ್> ನಿಮ್ಮ ಯುನಿಕ್ ಐಡಿ ಟೈಪ್ ಮಾಡಿ 09248082883 ಗೆ ಸಂದೇಶ ಕಳುಹಿಸಿ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ನಂತರ AI ಲೋಕಕ್ಕೆ ಎಂಟ್ರಿ ಕೊಡಬೇಕೇ? ಟಾಪ್ ಕೋರ್ಸ್‌ಗಳ ವಿವರ ಇಲ್ಲಿವೆ

ಮರುಪರಿಶೀಲನೆ ಮತ್ತು ಪೂರಕ ಪರೀಕ್ಷೆ:

ಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಮರುಪರಿಶೀಲನೆಗೆ (Re-checking) ಅರ್ಜಿ ಸಲ್ಲಿಸಲು ಮಂಡಳಿಯು ಅವಕಾಶ ನೀಡಿದೆ. ಮೇ 1 ರಿಂದ ಮೇ 4 ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾದಲ್ಲಿ ಅಥವಾ ಅಂಕ ಸುಧಾರಣೆ ಬಯಸುವವರು ಜೂನ್ ತಿಂಗಳಿನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗಳಿಗೆ ಹಾಜರಾಗಬಹುದು.

ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರಗಳನ್ನು ಫಲಿತಾಂಶ ಪ್ರಕಟವಾದ ಕೆಲ ದಿನಗಳ ನಂತರ ತಮ್ಮ ಶಾಲೆಗಳಿಂದ ಅಥವಾ ಡಿಜಿಲಾಕರ್ (DigiLocker) ಮೂಲಕ ಪಡೆದುಕೊಳ್ಳಬಹುದು.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:15 am, Thu, 30 April 26

Source link

ಮುಂಬೈನಲ್ಲಿ ಪ್ರಭಾಸ್ ಕ್ರೇಜ್ ಹೇಗಿದೆ? ಸ್ವಂತ ಅನುಭವ ವಿವರಿಸಿದ ಕರಣ್ ಜೋಹರ್ – Kannada News | Karan Johar once mesmerized seeing craze of Prabhas in Mumbai

ಪ್ರಭಾಸ್ (Prabhas), ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್​ ನಟರಲ್ಲಿ ಒಬ್ಬರು. ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಬಳಿಕ ಅವರ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಾಗಿದೆ. ‘ಬಾಹುಬಲಿ’ಗೆ ಮುಂಚೆ ಪ್ರಭಾಸ್ ಇಷ್ಟು ದೊಡ್ಡ ಸ್ಟಾರ್ ಆಗಿರಲಿಲ್ಲ ಎಂಬುವವರೂ ಇದ್ದಾರೆ. ಆದರೆ ಹಿಂದೊಮ್ಮೆ ಕರಣ್ ಜೋಹರ್, ಪ್ರಭಾಸ್ ಅವರ ಕ್ರೇಜ್ ಬಗ್ಗೆ ವಿವರಿಸಿದ್ದರು. ಅದೂ ‘ಬಾಹುಬಲಿ’ ಬಿಡುಗಡೆಗೆ ಮುಂಚೆಯೇ ಪ್ರಭಾಸ್ ಹವಾ, ಮುಂಬೈನಲ್ಲಿ ಹೇಗಿತ್ತು ಎಂಬುದನ್ನು ಕರಣ್ ಸಂದರ್ಶನದಲ್ಲಿ ವಿವರಿಸಿದ್ದರು.

‘ಬಾಹುಬಲಿ’ ಸಿನಿಮಾವನ್ನು ಕರಣ್ ಜೋಹರ್ ವಿತರಣೆ ಮಾಡಿದ್ದರು. ಪ್ರಭಾಸ್ ಹಾಗೂ ಕರಣ್ ಜೋಹರ್ ಅವರ ಮೊದಲ ಕೊಲ್ಯಾಬರೇಷನ್ ಅದಾಗಿತ್ತು. ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್ ಮುಂಬೈನಲ್ಲಿ ಕರಣ್ ಜೋಹರ್ ಕಚೇರಿಗೆ ಹೋಗಿದ್ದರು. ಆಗ ಕರಣ್ ಹೇಳಿರುವಂತೆ, ‘ನನ್ನ ಕಚೇರಿಗೆ ಸ್ಟಾರ್ ನಟ, ನಟಿಯರು ಹೊಸಬರೇನೂ ಅಲ್ಲ. ಪ್ರತಿ ದಿನವೂ ಒಬ್ಬರಲ್ಲ ಒಬ್ಬರು ಸ್ಟಾರ್ ನಟ, ನಟಿಯರು ಬರುತ್ತಲೇ ಇರುತ್ತಾರೆ. ಆದರೆ ಪ್ರಭಾಸ್ ಮೊದಲ ಬಾರಿ ನನ್ನ ಕಚೇರಿಗೆ ಬಂದಾಗ ಅಲ್ಲೋಲ-ಕಲ್ಲೋಲವೇ ಆಗಿತ್ತು’ ಎಂದಿದ್ದಾರೆ ಕರಣ್.

ಕಚೇರಿಯ ಒಳಗೆ ಹೊರಗೆ ಜನ ತುಂಬಿ ಹೋಗಿದ್ದರು. ಹೊರಗಿನ ಜನರೆಲ್ಲ ಕಚೇರಿಗೆ ನುಗ್ಗಿ ಬಿಟ್ಟರು, ನಮ್ಮ ಕಚೇರಿಯ ಲಾಬಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ನಿಂತಿದ್ದರು. ಹೊರಗಡೆ ಅದಕ್ಕಿಂತಲೂ ಹೆಚ್ಚು ಜನ ತುಂಬಿದ್ದರು. ಪ್ರಭಾಸ್, ಪ್ರಭಾಸ್ ಎಂದು ಕಿರುಚಾಡುತ್ತಿದ್ದರು. ಅದನ್ನೆಲ್ಲ ನೋಡಿ ನನಗೆ ಗಾಬರಿ ಆಗಿಬಿಟ್ಟಿತ್ತು. ಆಗ ನನಗೆ ಅರ್ಥವಾಯ್ತು, ಪ್ರಭಾಸ್ ಕ್ರೇಜ್ ಎಂಥಹದ್ದು ಮತ್ತು ಟಿವಿಗಳಲ್ಲಿ ಪ್ರಸಾರ ಆಗುವ ಡಬ್ಬಿಂಗ್ ಸಿನಿಮಾಗಳಿಗೆ ಎಷ್ಟು ದೊಡ್ಡ ಮಾರುಕಟ್ಟೆ ಇದೆ ಎಂಬುದು ಎಂದು ಕರಣ್ ಹೇಳಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸೆಟ್​​ನಲ್ಲಿ ಬೆಂಕಿ: ಹಲವರಿಗೆ ಗಾಯ

‘ಬಾಹುಬಲಿ’ ಸಿನಿಮಾ ಬಿಡುಗಡೆ ಆಗುವ ಮುಂಚೆ ಪ್ರಭಾಸ್ ಅವರ ತೆಲುಗು ಸಿನಿಮಾಗಳು ಹಿಂದಿಗೆ ಡಬ್ ಆಗಿ ಸೋನಿ, ಸೆಟ್ ಮ್ಯಾಕ್ಸ್ ಇನ್ನಿತರೆ ಚಾನೆಲ್​​ಗಳಲ್ಲಿ ಪ್ರಸಾರ ಆಗುತ್ತಿರುತ್ತಿತ್ತು. ಆ ಸಿನಿಮಾಗಳನ್ನು ನೋಡಿಯೇ ಉತ್ತರದ ಜನ ಪ್ರಭಾಸ್ ಅವರ ಫ್ಯಾನ್ಸ್ ಆಗಿಬಿಟ್ಟಿದ್ದರು. ‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾದ ಬಳಿಕವಂತೂ ಪ್ರಭಾಸ್ ಜನಪ್ರಿಯತೆ ಹತ್ತು ಪಟ್ಟು ಹೆಚ್ಚಾಯ್ತು.

ಇದೀಗ ಪ್ರಭಾಸ್ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಭಾಸ್ ಪ್ರಸ್ತುತ ಸಂದೀಪ್ ರೆಡ್ಡಿ ವಂಗಾ ಜೊತೆಗೆ ‘ಸ್ಪಿರಿಟ್’ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ರಘು ಹನುಪುಡಿ ನಿರ್ದೇಶನದ ‘ಫೌಜಿ’ ಸಿನಿಮಾ ಬಹುತೇಕ ಮುಗಿಸಿದ್ದಾರೆ. ಕಲ್ಕಿ 2898 ಎಡಿ ಸಿನಿಮಾದ ಎರಡನೇ ಭಾಗದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ‘ಸಲಾರ್ 2’ಗೆ ಕೈಹಾಕಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಸಿನಿಮಾ ರಿಲೀಸ್​​ಗೂ ಮೊದಲು ತಲೆ ಎತ್ತಿತು ಬೃಹತ್​ ಕಟೌಟ್

ಧ್ರುವ ಸರ್ಜ ನಟನೆಯ ‘ಕೆಡಿ’ ಸಿನಿಮಾ ಇಂದು ರಿಲೀಸ್ ಆಗಿದೆ. ಮುಂಜಾನೆಯೇ ಅನೇಕ ಕಡೆಗಳಲ್ಲಿ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ, ಕೆಲವು ಕಡೆಗಳಲ್ಲಿ ತಾಂತ್ರಿಕ ಕಾರಣದಿಂದ ಸಿನಿಮಾ ಪ್ರಸಾರ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಧ್ರುವ ಸರ್ಜಾ ಅವರ ಬೃಹತ್ ಕಟೌಟ್ ತಲೆ ಎತ್ತಿದ್ದು, ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಗಪುರ ಆರ್ ಎಸ್​ ಎಸ್​ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ – Kannada News | Nagpur RSS, BJP Offices Face Cesium 137 Threat: Police Beef Up Security Amid Probe

ನಾಗಪುರ, ಏಪ್ರಿಲ್ 30: ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಚೇರಿ ಮತ್ತು ಭಾರತೀಯ ಜನತಾ ಪಕ್ಷದ (BJP) ಕಚೇರಿಯನ್ನು ಗುರಿಯಾಗಿಸಿಕೊಂಡು ವಿಕಿರಣಶೀಲ ವಸ್ತುಗಳ ಮೂಲಕ ದಾಳಿ ನಡೆಸುವ ಬೆದರಿಕೆ ಪತ್ರವೊಂದು ಪೊಲೀಸ್ ಇಲಾಖೆಗೆ ಲಭ್ಯವಾಗಿದೆ. ಪತ್ರದ ಗಂಭೀರತೆಯನ್ನು ಅರಿತ ಪೊಲೀಸ್ ಆಯುಕ್ತರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಮುಂಬೈನಿಂದ ಆಗಮಿಸಿದ ಪರಮಾಣು ಶಕ್ತಿ ತಜ್ಞರ ವಿಶೇಷ ತಂಡವು ನಗರದ ಪ್ರಮುಖ ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿತು. ಸಂಘದ ಪ್ರಧಾನ ಕಚೇರಿ (ಮಹಲ್), ರೇಶಿಂಬಾಗ್ ಸ್ಮಾರಕ, ಗಣೇಶಪೇಟೆಯಲ್ಲಿರುವ ಬಿಜೆಪಿ ಕಚೇರಿ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಸುಮಾರು ಒಂದು ಗಂಟೆ ಕಾಲ ವ್ಯಾಪಕ ತಪಾಸಣೆ ನಡೆಸಲಾಯಿತು.

ಪತ್ರದಲ್ಲಿ ಉಲ್ಲೇಖಿಸಲಾಗಿದ್ದ ಅಪಾಯಕಾರಿ ‘ಸೀಸಿಯಮ್-137’ (Cesium-137) ಅಥವಾ ಯಾವುದೇ ಇತರ ವಿಕಿರಣಶೀಲ ಕಣಗಳು ತಪಾಸಣೆಯ ಸಮಯದಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಇದು ಇಡೀ ನಗರವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಮತ್ತಷ್ಟು ಓದಿ: RSSನ ಯಾರೂ ಬ್ಯಾನ್ ಮಾಡೋಕೆ ಆಗಲ್ಲ: ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸತೀಶ್​​ ಜಾರಕಿಹೊಳಿ

ಸದ್ಯ ಎಟಿಎಸ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಕೇವಲ ಯಾರೋ ಕಿಡಿಗೇಡಿಗಳು ಮಾಡಿದ ಕುಚೇಷ್ಟೆಯೋ ಅಥವಾ ಇದರ ಹಿಂದೆ ಯಾವುದಾದರೂ ದೊಡ್ಡ ಪಿತೂರಿ ಅಡಗಿದೆಯೇ ಎಂಬ ನಿಟ್ಟಿನಲ್ಲಿ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ನಾಗಪುರದ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: RCB ತಂಡದ ಸ್ಟಾರ್ ಆಟಗಾರ ಅಲಭ್ಯ! – Kannada News | IPL 2026: Phil Salt Ruled Out of RCB vs GT Clash Due to Injury

IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಓಪನರ್ ಫಿಲ್ ಸಾಲ್ಟ್ ಅವರು ಗಾಯದ ಸಮಸ್ಯೆಯಿಂದಾಗಿ ಇಂದು(ಏ.30) ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಕಳೆದ ವಾರ ನಡೆದ ಅಭ್ಯಾಸದ ಅವಧಿಯಲ್ಲಿ ಫಿಲ್ ಸಾಲ್ಟ್ ಅವರಿಗೆ ಗಾಯವಾಗಿತ್ತು. ಈ ಕಾರಣದಿಂದ ಅವರು ಏಪ್ರಿಲ್ 24 ರಂದು ನಡೆದ ಗುಜರಾತ್ ಟೈಟಾನ್ಸ್ ಪಂದ್ಯದಿಂದ ಮತ್ತು ಏಪ್ರಿಲ್ 27 ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗೆ ಉಳಿದಿದ್ದರು.

ಇದಾಗ್ಯೂ ಇಂದಿನ ಪಂದ್ಯಕ್ಕೆ ಅವರು ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ವೈದ್ಯಕೀಯ ತಂಡವು ಅವರಿಗೆ ಇನ್ನೂ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದೆ. ಇದೇ ಕಾರಣದಿಂದಾಗಿ ಫಿಲ್ ಸಾಲ್ಟ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ಅಹಮದಾಬಾದ್ ಗೆ ಪ್ರಯಾಣಿಸಿಲ್ಲ ಎಂದು ಸ್ಪೋರ್ಟ್ಸ್ ತಕ್ ವರದಿ ಮಾಡಿದೆ. ಇದರೊಂದಿಗೆ ಇಂದಿನ ಮ್ಯಾಚ್ ನಲ್ಲೂ ಫಿಲ್ ಸಾಲ್ಟ್ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.

ಬದಲಿ ಆಟಗಾರ ಯಾರು?

ಫಿಲ್ ಸಾಲ್ಟ್ ಅವರ ಅನುಪಸ್ಥಿತಿಯಲ್ಲಿ, ಆರ್‌ಸಿಬಿ ತಂಡವು ಯುವ ಆಟಗಾರ ಜೇಕಬ್ ಬೆಥೆಲ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುತ್ತಿದೆ. ಹೀಗಾಗಿ ಇಂದಿನ ಮ್ಯಾಚ್ ನಲ್ಲೂ ವಿರಾಟ್ ಕೊಹ್ಲಿ ಜೊತೆ ಬೆಥೆಲ್ ಆರಂಭಿಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ತಂಡದ ಮೇಲೆ ಪ್ರಭಾವ:

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಅದ್ಭುತ ಫಾರ್ಮ್‌ನಲ್ಲಿದ್ದರು. ಆಡಿದ ಮೊದಲ 6 ಪಂದ್ಯಗಳಲ್ಲಿ ಅವರು 202 ರನ್ ಗಳಿಸುವ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದರು. ಅವರು ಇಲ್ಲದಿರುವುದು ತಂಡದ ಬ್ಯಾಟಿಂಗ್ ಲೈನಪ್ ಮೇಲೆ ನೇರ ಪರಿಣಾಮ ಬೀರಿದೆ.

ಇದನ್ನೂ ಓದಿ: David Miller: ಕಿಲ್ಲರ್ ಮಿಲ್ಲರ್ ವಿಶ್ವ ದಾಖಲೆ

RCB ಮ್ಯಾನೇಜ್‌ಮೆಂಟ್ ಹೇಳುವುದೇನು?

RCBತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಸಾಲ್ಟ್ ಅವರ ಗಾಯವು ಗಂಭೀರವಾಗಿಲ್ಲದಿದ್ದರೂ, ಮುಂದಿನ ಪಂದ್ಯಗಳ ದೃಷ್ಟಿಯಿಂದ ತಂಡವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಫಿಲ್ ಸಾಲ್ಟ್ ಮುಂದಿನ ಪಂದ್ಯದಲ್ಲಿ ಅಥವಾ ಅದಾದ ಬಳಿಕ ಸಂಪೂರ್ಣ ಫಿಟ್ನೆಸ್ ನೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ RCB ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ವಿರಾಟ್ ಕೊಹ್ಲಿ
  • ಜೇಕಬ್ ಬೆಥೆಲ್
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಜಿತೇಶ್ ಶರ್ಮಾ
  • ರೊಮಾರಿಯೊ ಶೆಫರ್ಡ್​
  • ಕೃನಾಲ್ ಪಾಂಡ್ಯ
  • ಜೋಶ್ ಹೇಝಲ್​ವುಡ್​
  • ಭುವನೇಶ್ವರ್ ಕುಮಾರ್
  • ರಾಸಿಖ್ ದಾರ್
  • ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

Source link

Exit mobile version