Headlines

Bangaluru Rain: ಬೆಂಗಳೂರಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ, ಸಂಚಾರ ವ್ಯತ್ಯಯ

ಬೆಂಗಳೂರು, ಮೇ 29: ಸಿಲಿಕಾನ್​ ಸಿಟಿ ಜನರಿಗೆ ವೀಕೆಂಡ್ ಆರಂಭದಲ್ಲೇ ಮಳೆ ಶಾಕ್ ನೀಡಿದೆ. ಮೋಡ ಕವಿದ ವಾತಾವರಣವಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದ್ದು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಅಂಡರ್‌ಪಾಸ್‌ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ. Source link

Read More

ಕದನ ವಿರಾಮ ಅಂತ್ಯವೆಂದು ಘೋಷಿಸಿದ ಟ್ರಂಪ್; ಇರಾನ್ ಮೇಲೆ ಅಮೆರಿಕದಿಂದ ಭೀಕರ ವೈಮಾನಿಕ ದಾಳಿ – Kannada News | Donald Trump says ceasefire is over after launching fresh Airstrikes on Iran

ಅಂಕಾರಾ, ಜುಲೈ 8: ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಇದು ಜಗತ್ತಿನಾದ್ಯಂತ ಮತ್ತೊಮ್ಮೆ ಆತಂಕವನ್ನು ಸೃಷ್ಟಿಸಿದೆ. ಪರಸ್ಪರ ಭೀಕರ ರಾಕೆಟ್ ಮತ್ತು ಕ್ಷಿಪಣಿ ದಾಳಿಗಳ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು (ಜುಲೈ 8) ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮ (Ceasefire) ಅಧಿಕೃತವಾಗಿ ‘ಅಂತ್ಯಗೊಂಡಿದೆ’ ಎಂದು ಘೋಷಿಸಿದ್ದಾರೆ. ಇರಾನ್ ನಾಯಕರನ್ನು ವಿಕೃತರು ಎಂದು ಕರೆದಿರುವ ಟ್ರಂಪ್, ‘ಅವರೊಂದಿಗೆ ವ್ಯವಹರಿಸುವುದು ಬರೀ ಸಮಯ ವ್ಯರ್ಥ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೂ…

Read More

World Saree Day 2025: ನೀರೆಯರ ಮನಗೆದ್ದ ಸೀರೆಗೂ ಒಂದು ದಿನ; ಈ ಆಚರಣೆಯ ಮಹತ್ವವನ್ನು ತಿಳಿಯಿರಿ – Kannada News | World Saree Day 2025: What is the purpose of celebrating World Saree Day?

ಸೀರೆ (Saree) ಹೆಣ್ಣಿನ ಚೆಲುವು ಸೌಂದರ್ಯದ ಸಂಕೇತ ಅಂತಾನೇ ಹೇಳಬಹುದು. ಸೊಬಗು ಸೌಂದರ್ಯದ ಪ್ರತಿಬಿಂಬವಾಗಿರುವ ಸೀರೆ ಕೇವಲ ಉಡುಗೆಯಲ್ಲ ಇದು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯದ ಮೂರ್ತ ರೂಪವಾಗಿದೆ. ಶತಮಾನಗಳಿಂದಲೂ ಭಾರತದಲ್ಲಿ ಮಹಿಳೆಯರು ಸೀರೆಯನ್ನು ಧರಿಸುತ್ತಿದ್ದಾರೆ. ಎಷ್ಟೇ ಫ್ಯಾಶನ್‌, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್‌ ಮಾತ್ರ ಇಂದಿಗೂ ಕಮ್ಮಿಯಾಗಿಲ್ಲ. ಈ ಸೀರೆ ಫ್ಯಾಷನ್‌ಗೂ ಮೀರಿ ಸಾಂಸ್ಕೃತಿಕ ಹೆಮ್ಮೆಯನ್ನು ಪ್ರತಿನಿಧಿಸುವ ಒಂದು ಉಡುಪಾಗಿದ್ದು, ಇದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ…

Read More

Gold Rates: ಚಿನ್ನದ ಬೆಲೆ 135 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ – Kannada News | Gold prices 14th april 2026 gold rates rise as silver remains unmoved news in kannada

ಬೆಂಗಳೂರು, ಏಪ್ರಿಲ್ 14: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತಗಳನ್ನು ಕಾಣುತ್ತಲೇ ಇದೆ. ಒಂದು ದಿನ ಕಡಿಮೆಗೊಂಡರೆ, ಮತ್ತೊಂದು ದಿನ ಏರಿಕೆ ಆಗುತ್ತಿದೆ. ಇವತ್ತು ಮಂಗಳವಾರ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​​ಗೆ 135 ರೂಗಳಷ್ಟು ಹೆಚ್ಚಳ ಆಗಿದೆ. ಇದರ ಬೆಲೆ ಮತ್ತೊಮ್ಮೆ 14,000 ರೂ ಗಡಿ ದಾಟಿ ಹೋಗಿದೆ. ಇದೇ ವೇಳೆ, ಬೆಳ್ಳಿ ಬೆಲೆ ಇವತ್ತು ಬದಲಾವಣೆ ಕಂಡಿಲ್ಲ. ನಿನ್ನೆಯ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,100…

Read More

ಬೆಂಗಳೂರು ಅಭಿವೃದ್ಧಿ ಪ್ಯಾಕೇಜ್​ನಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೇ ಸಿಂಹಪಾಲು: ತಾರತಮ್ಯದ ಆರೋಪ ಮಾಡಿದ ಪ್ರತಿಪಕ್ಷ ಬಿಜೆಪಿ – Kannada News | Bengaluru Grant Allocation: Congress MLA Constituencies Secure Big Share, BJP Alleges Fund Diversion

ಬೆಂಗಳೂರು, ಜೂನ್ 29: ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗಿರುವ ಒಟ್ಟು 2,000 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಹಂಚಿಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ (Congress) ಶಾಸಕರ ಕ್ಷೇತ್ರಗಳಿಗೇ ಭರಪೂರ ಅನುದಾನ ಹರಿದುಬಂದಿದೆ. ಸರ್ಕಾರದ ಈ ನಡೆಗೆ ಪ್ರತಿಪಕ್ಷ ಬಿಜೆಪಿ (BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಲಾಗಿದೆ ಎಂದು ಆರೋಪಿಸಿದೆ. ಬಿಡುಗಡೆಯಾಗಿರುವ ಅನುದಾನದ ಪೈಕಿ ಅತ್ಯಧಿಕ ಮೊತ್ತವನ್ನು ಬಾಚಿಕೊಂಡ ಮೊದಲ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಶಾಸಕರ ಪ್ರಾತಿನಿಧ್ಯ ಹೊಂದಿರುವ ಕ್ಷೇತ್ರಗಳೇ…

Read More

ಪರಮೇಶ್ವರ್, ರಾಜಣ್ಣಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ನಿರ್ಧಾರ

ತುಮಕೂರು, ಜೂನ್​ 01: ತುಮಕೂರು ವಿಶ್ವವಿದ್ಯಾಲಯದ (Tumkur University) 19ನೇ ಘಟಿಕೋತ್ಸವವು ಜೂನ್ 3ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ (Honorary Doctorate) ನೀಡದಿರಲು ವಿವಿಯ ಪರಿಶೀಲನಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆ ಮಾಜಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣಗೆ ಗೌರವ ಡಾಕ್ಟರೇಟ್​ ನೀಡದಿರಲು ನಿರ್ಧರಿಸಲಾಗಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದ್ದಾರೆ. ಮುಖ್ಯಾಂಶಗಳು ತುಮಕೂರು ವಿವಿ…

Read More

‘ಧುರಂಧರ್ 2’ ವಿರುದ್ಧ ‘ಉಸ್ತಾದ್ ಭಗತ್ ಸಿಂಗ್’ ಬಾಕ್ಸ್ ಆಫೀಸ್ ಹರಸಾಹಸ

‘ಧುರಂಧರ್ 2’ (Dhurandhar 2 ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇದನ್ನು ಮೊದಲೇ ಊಹಿಸಿದ್ದ ಕೆಲ ಸಿನಿಮಾಗಳು ‘ಧುರಂಧರ್ 2’ ಸಿನಿಮಾ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಂಡವು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರತಂಡ ‘ಧುರಂಧರ್ 2’ ಸಿನಿಮಾವನ್ನು ಸರಿಯಾಗಿ ಅಂದಾಜಿಸದೆ ಅದರ ಎದುರು ಬಿಡುಗಡೆ ಮಾಡಿತು. ಆದರೆ ಈಗ ಬಾಕ್ಸ್ ಆಫೀಸ್​​ನಲ್ಲಿ ಏದುಸಿರು ಬಿಡುತ್ತಿದೆ. ಆದರೆ…

Read More

ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ – Kannada News | LPG commercial gas cylinder prices rise on 2026 January

ನವದೆಹಲಿ, ಜನವರಿ 1: ಹೊಸ ವರ್ಷಕ್ಕೆ ಎಲ್​ಪಿಜಿ ಸಿಲಿಂಡರ್ ಬೆಲೆ (LPG) ಏರಿಕೆಯ ಶಾಕ್ ಸಿಕ್ಕಿದೆ. 2025ರಲ್ಲಿ 200 ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು ದುಬಾರಿಯಾಗಿವೆ. 19 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಳ ಆಗಿದೆ….

Read More

ಬಸ್ಸಿನಲ್ಲಿಯೇ ಮರೆತು ಹೋಗಿದ್ದ ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಡ್ರೈವರ್

ಹುಬ್ಬಳ್ಳಿ, ಮೇ 22: ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಲ್ಯಾಪ್‌ಟಾಪ್ ಮತ್ತು ಕಂಪನಿ ದಾಖಲೆಗಳಿದ್ದ ಬ್ಯಾಗ್‌ನ್ನು ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಬ್ಯಾಲೆಸ್ ಫಾರ್ಮಸ್ಯೂಟಿಕಲ್ಸ್ ಕಂಪನಿಯ ಏರಿಯಾ ಮ್ಯಾನೇಜರ್ ರಮೇಶ್ ಕುಲಕರ್ಣಿ ಅವರು ಮೇ 19ರಂದು ಶಿಗ್ಗಾಂವ್‌ದಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾಗ ಬಸ್ಸಿನಲ್ಲಿ ತಮ್ಮ ಲ್ಯಾಪ್‌ಟಾಪ್ ಬ್ಯಾಗ್‌ನ್ನು ಮರೆತಿದ್ದಾರೆ. ಮೇ 20ರಂದು ಬೆಳಿಗ್ಗೆ ಬ್ಯಾಗ್ ಕಳೆದಿರುವ ವಿಷಯ ಅರಿತ ರಮೇಶ್ ಕುಲಕರ್ಣಿ ಅವರು ಹುಬ್ಬಳ್ಳಿಯ ಗೋಕುಲ್ ರೋಡ್ ಡಿಪೋಗೆ ಭೇಟಿ ನೀಡಿದ್ದಾರೆ. ಡಿಪೋ ಮ್ಯಾನೇಜರ್…

Read More

ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಯಲು ತಕ್ಷಣ ಈ ರೀತಿ ಮಾಡಿ – Kannada News | How to Stop a Nosebleed Fast: Summer First Aid Tips

ಬೇಸಿಗೆ (Summer) ಶುರುವಾದಂತೆ ದೇಹದ ಮೇಲೆ ಬಿಸಿಯ ಪರಿಣಾಮಗಳು ಹೆಚ್ಚಾಗುತ್ತವೆ. ಉಷ್ಣತೆ ಹೆಚ್ಚಾದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತದೆ. ಈ ಸಮಯದಲ್ಲಿ ಕೆಲವರಿಗೆ ಅಚಾನಕ್ ಮೂಗಿನಿಂದ ರಕ್ತ ಬರುವ ಸಮಸ್ಯೆ ಕಂಡುಬರಬಹುದು. ಇದನ್ನು ಸಾಮಾನ್ಯವೆಂದು ಕಡೆಗಣಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದ ಕೆಲವು ಅಸಮತೋಲನಗಳ ಸೂಚನೆಯಾಗಿರಬಹುದು. ಹೌದು, ವೈದ್ಯರು ಇದನ್ನು ಬಹಳ ಗಂಭೀರ ಸ್ಥಿತಿ ಎಂದು ಪರಿಗಣಿಸಿಸುವುದರಿಂದ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾದಾಗ ತಕ್ಷಣ ಏನು ಮಾಡಬೇಕು…

Read More