ಟಾಕ್ಸಿಕ್ ಟೀಸರ್: ಹಸಿಬಿಸಿ ದೃಶ್ಯ ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಆತಂಕ – Kannada News | Will Rukmini Vasanth be seen in Toxic movie bold scene with Yash

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ. ಈಗ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಕೂಡ ರುಕ್ಮಿಣಿ ವಸಂತ್ ಅವರು ಅಭಿನಯಿಸಿದ್ದು, ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ, ‘ಟಾಕ್ಸಿಕ್’ ಟೀಸರ್ (Toxic Teaser) ನೋಡಿದ ಮೇಲೆ ಕೆಲವರಿಗೆ ಆತಂಕ ಕಾಡಲು ಶುರುವಾಗಿದೆ! ಅದಕ್ಕೆ ಕಾರಣ ಆಗಿರುವುದು ಒಂದು ಬೋಲ್ಡ್ ಸೀನ್!

ಯಶ್ ಅವರು ಈವರೆಗೆ ಮಾಡಿದ ಸಿನಿಮಾಗಳೇ ಬೇರೆ, ಈಗ ಮಾಡಿರುವ ‘ಟಾಕ್ಸಿಕ್’ ಚಿತ್ರವೇ ಬೇರೆ. ಇದೇ ಮೊದಲ ಬಾರಿಗೆ ಅವರು ಸಖತ್ ಬೋಲ್ಡ್ ಆದಂತಹ ಕಥೆಯಿರುವ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಸಿಕ್ಕಾಪಟ್ಟೆ ಅಗ್​ರೆಸಿವ್ ಆಗಿದೆ. ‘ಟಾಕ್ಸಿಕ್’ ಟೀಸರ್​​ನಲ್ಲಿ ಒಂದು ಹಸಿಬಿಸಿ ದೃಶ್ಯ ಕಾಣಿಸಿದೆ. ಆದರೆ ಆ ದೃಶ್ಯದಲ್ಲಿ ಇರುವ ನಟಿ ಯಾರು ಎಂಬುದು ಸ್ಪಷ್ಟವಾಗಿಲ್ಲ.

ಟಾಕ್ಸಿಕ್ ಟೀಸರ್:

‘ಟಾಕ್ಸಿಕ್’ ಸಿನಿಮಾದಲ್ಲಿ ರಕ್ಮಿಣಿ ವಸಂತ್ ಮಾತ್ರವಲ್ಲದೇ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ನಟಿಯರು ಅಭಿನಯಿಸಿದ್ದಾರೆ. ಈ ಚಿತ್ರದ ಟೀಸರ್​​ನಲ್ಲಿ ಯಾವುದೇ ನಟಿಯ ಮುಖ ಸ್ಪಷ್ಟವಾಗಿ ಕಾಣಿಸಿಲ್ಲ. ಆದರೆ ಕೆಲವು ಪ್ರೇಕ್ಷಕರು ಬಹಳ ಸೂಕ್ಷ್ಮವಾಗಿ ಗಮನಿಸಿ, ಯಾವ ದೃಶ್ಯದಲ್ಲಿ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಫೆಬ್ರವರಿ 20ರಂದು ರಿಲೀಸ್ ಆಗಿರುವ ‘ಟಾಕ್ಸಿಕ್’ ಟೀಸರ್​ನಲ್ಲಿ ಒಂದು ಹಸಿಬಿಸಿ ದೃಶ್ಯ ಇದೆ. ಆ ದೃಶ್ಯದಲ್ಲಿ ನಟಿಯ ಮುಖ ಕಾಣಿಸಿಲ್ಲ. ಅದು ರುಕ್ಮಿಣಿ ವಸಂತ್ ಎಂದು ಕೆಲವರು ಊಹಿಸಿದ್ದಾರೆ. ‘ಅದು ನಮ್ಮ ರುಕ್ಮಿಣಿ ವಸಂತ್ ಆಗಿರದೇ ಇರಲಿ’ ಎಂದು ಅಪ್ಪಟ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಡೈರೆಕ್ಟರ್ ಮಹಿಳೆ ಆದ್ರೂ ಟೀಸರ್​​ನಲ್ಲಿ ನಟಿಯರಿಗೆ ಜಾಗ ಇಲ್ಲ; ನೆಟ್ಟಿಗರ ಟೀಕೆ

ಇಂಥ ಹಲವು ಕಾರಣಗಳಿಂದಾಗಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಧೂಳೆಬ್ಬಿಸುತ್ತಿದೆ. ಯಶ್ ಅವರನ್ನು ಬೇರೆ ಬೇರೆ ಗೆಟಪ್​​ಗಳಲ್ಲಿ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿ: ಕೆಲಸಕ್ಕಾಗಿ ಅಲೆದಾಡುವವರೇ ಇವರ ಟಾರ್ಗೆಟ್​; ಚೈನ್ ಲಿಂಕ್ ಬಿಜಿನೆಸ್​​ ಹೆಸ್ರಲ್ಲಿ ವಂಚನೆ – Kannada News | Hubballi Locals Protest Against Alleged Chain Link Employment Fraud

ಹುಬ್ಬಳ್ಳಿ, ಫೆಬ್ರವರಿ 20: ಎಲ್ಲರೂ ಚೆನ್ನಾಗಿರುವ ಉದ್ಯೋಗ ಮಾಡಬೇಕು, ಕೈ ತುಂಬಾ ಹಣ ಪಡೆಯಬೇಕು ಅನ್ನೋ ಕನಸು ಕಂಡಿರುತ್ತಾರೆ. ಆದರೆ ಡಿಗ್ರಿ ಮುಗಿದ್ರು ಕೆಲಸ ಸಿಗದೇ ಇದ್ದಾಗ ಜೀವನ ನಿರ್ವಹಣೆಗಾಗಿ ಪರದಾಡುತ್ತಾರೆ. ಇಂತವರನ್ನು ಟಾರ್ಗೆಟ್ ಮಾಡಿರುವ ಕೆಲ ಚೈನ್ ಲಿಂಕ್ ಬಿಜಿನೆಸ್ (Chain Link Scam) ಕಂಪನಿಗಳು, ನೀವು ಚೆನ್ನಾಗಿ ಹಣ ಮಾಡಬಹುದು, ಸ್ವಲ್ಪ ಹಣ ಹೂಡಿಕೆ ಮಾಡಿದರೆ ಸಾಕು ಅಂತ ಹೇಳುವ ಬಣ್ಣದ ಮಾತುಗಳಿಗೆ ಯುವ ಜನತೆ ಮರಳಾಗುತ್ತಾರೆ. ಇಂತಹ ಬಣ್ಣದ ಮಾತುಗಳನ್ನು ಹೇಳಿ ಸಾವಿರಾರ ಕೋಟಿ ರೂ ವಂಚಿಸಿರುವ ನೂರಾರು ಚೈನ್ ಲಿಂಕ್ ಫ್ರಾಡ್​ಗಳು ದೇಶದಲ್ಲಿ ನಡೆದಿವೆ. ಇದೀಗ ಹುಬ್ಬಳ್ಳಿಯಲ್ಲಿ ಚೈನ್ ಲಿಂಕ್ ಕಂಪನಿಯೊಂದರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿರುವ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿಯ ಕಚೇರಿಗೆ ನುಗ್ಗಿದ್ದ ಅನೇಕ ಕನ್ನಡಪರ ಹೋರಾಟಗಾರರು ಮತ್ತು ಸ್ಥಳೀಯರು ಇಂದು ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇವರ ಆಕ್ರೋಶಕ್ಕೆ ಕಾರಣ, ಈ ಕಂಪನಿ ಜನರಿಗೆ ವಂಚನೆ ಮಾಡ್ತಿರೋದಂತೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು

ಮಹರಾಷ್ಟ್ರದ ಪುಣೆ ಮೂಲದ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ, ಮಾರ್ಕೆಟಿಂಗ್ ಕಂಪನಿಯಾಗಿದೆ. ಆದರೆ ಇದು ಚೈನ್ ಲಿಂಕ್ ಬಿಜಿನೆಸ್ ಹೆಸರಲ್ಲಿ ಜನರಿಗೆ ವಂಚನೆ ಮಾಡ್ತಿದೆ ಅನ್ನೋದು ಅನೇಕ ಕನ್ನಡಪರ ಮತ್ತು ಸ್ಥಳೀಯರ ಆರೋಪ. ಉದ್ಯೋಗವನ್ನು ಹುಡುಕುತ್ತಿರುವವರನ್ನೇ ಟಾರ್ಗೆಟ್​ ಮಾಡಿ, ಅವರಿಗೆ ನೀವು ಸ್ವಲ್ಪ ಹಣ ನೀಡಿ ಕೆಲ ವಸ್ತುಗಳನ್ನು ಖರೀದಿಸಿದರೆ ಸಾಕು, ನೀವು ಕಂಪನಿ ಮೆಂಬರ್ ಆಗ್ತಿರಿ. ನೀವು ಅನೇಕರಿಗೆ ವಸ್ತುಗಳನ್ನು ಮಾರಾಟ ಮಾಡಿಸಿ, ಅವರನ್ನು ನಿಮ್ಮ ಕೆಳಗೆ ಸಬ್ ಮೆಂಬರ್ ಮಾಡಿದರೆ ಅವರು ಮಾಡುವ ಬಿಜಿನಿಸ್​ನಿಂದ ನೀವು ಹಣ ಗಳಿಸಬಹುದು ಅಂತ ಹೇಳಿ ಯಾಮಾರಿಸುವ ಕೆಲಸ ಮಾಡ್ತಾರಂತೆ. ಉದ್ಯೋಗ ತರಬೇತಿ ಹೆಸರಲ್ಲಿ ಯುವತಿಯರನ್ನು ಕರೆದು ಅವರಿಗೆ ಹೆಚ್ಚಿನ ಹಣದ ಆಸೆ ತೋರಿಸಿ ಯಾಮಾರಿಸೋ ಕೆಲಸ ನಡೆಯುತ್ತಿದೆ ಅಂತ ಆರೋಪಿಸಿದ್ದಾರೆ.

ಮೆಂಬರ್ ಆಗಬೇಕಾದ್ರೆ ಅವರು 41 ಸಾವಿರ ರೂ ಬೆಲೆಯ ಕಿಟ್​ನ್ನು ಖರೀದಿಸಬೇಕು. ಅದರಲ್ಲಿ ಬಟ್ಟೆ ಸೇರಿದಂತೆ ಕೆಲ ವಸ್ತುಗಳಿದ್ದು, ಅವುಗಳನ್ನು ಖರೀದಿಸಿ ಮೆಂಬರ್ ಆಗಬೇಕು. ನಂತರ ಅವರು ಬೇರೆಯವರನ್ನು ತನ್ನ ಚೈನ್​ನಲ್ಲಿ ಸೇರಿಸುತ್ತಾ ಹೋದಂತೆ ಅವರಿಗೆ ದುಡ್ಡು ಬರುತ್ತದೆಯಂತೆ. ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಜನರನ್ನು ಆಕರ್ಷಿಸಿ ಇಂತಹದೊಂದು ಚೈನ್ ಲಿಂಕ್ ಬಿಜಿನೆಸ್​ನ್ನು ಮಾಡಲಾಗುತ್ತಿದೆಯಂತೆ.

ನಾವು ಯಾರಿಗೂ ವಂಚನೆ ಮಾಡುತ್ತಿಲ್ಲ ಎಂದ ಮ್ಯಾನೇಜರ್

ಇನ್ನು ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ ಬಗ್ಗೆ ಸಬ್ ಅರ್ಬನ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಕಚೇರಿಗೆ ಬೀಗ ಹಾಕಿಸಿದ್ದು, ಕಂಪನಿಯ ಪೂರ್ವಾಪರ ದಾಖಲಾತಿಗಳನ್ನು ಪರಿಶೀಲನೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಹುಬ್ಬಳ್ಳಿ ಮ್ಯಾನೇಜರ್, ನಾವು ಯಾರಿಗೂ ವಂಚನೆ ಮಾಡುತ್ತಿಲ್ಲ. ಇದೊಂದು ಮಾರ್ಕೆಟಿಂಗ್ ಬಿಜಿನೆಸ್ ಅಷ್ಟೇ. ಇಲ್ಲಿ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡುತ್ತೇವೆ. ಅವರು ವ್ಯವಹಾರ ಮಾಡಿದಂತೆ ಅವರು ಹಣ ಗಳಿಸುವ ಅವಕಾಶವಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ನಮ್ಮ ದೇಶದಲ್ಲಿ ಈಗಾಗಲೇ ಸಾವಿರಾರು ಚೈನ್ ಲಿಂಕ್ ಕಂಪನಿಗಳು ಹುಟ್ಟಿ ಜನರಿಗೆ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ಸಾವಿರಾರ ಕೋಟಿ ರೂ ವಂಚಿಸಿವೆ. ಇಂತಹದೊಂದು ಜಾಲವೇ ದೇಶದಲ್ಲಿ ದೊಡಮಟ್ಟದಲ್ಲಿದೆ. ಹೀಗಾಗಿ ವೆಕ್ಸಾನ್ ಬಿಗ್ ವೆಲ್ ಪ್ರೈವೆಟ್ ಲಿಮಿಟಿಡ್ ಕಂಪನಿ ಬಗ್ಗೆ ಪೊಲೀಸರು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ! – Kannada News | Man sets his own bike afire with cigarette lighter at petrol pump in Raipur

ರಾಯ್​ಪುರ, ಫೆಬ್ರವರಿ 20: ಛತ್ತೀಸ್‌ಗಢದ ರಾಯ್‌ಪುರದ ಪೆಟ್ರೋಲ್ ಬಂಕ್ ಒಂದಕ್ಕೆ ಪೆಟ್ರೋಲ್ ಹಾಕಿಸಲು ಬಂದ ಬೈಕ್​ನಲ್ಲಿದ್ದ ಯುವಕರಲ್ಲಿ ಒಬ್ಬ ಸಿಗರೇಟ್ ಸೇದುತ್ತಿದ್ದ. ಇಲ್ಲಿ ಸಿಗರೇಟ್ ಹಚ್ಚಬೇಡಿ ಎಂದು ಪೆಟ್ರೋಲ್ ಬಂಕ್​ ಸಿಬ್ಬಂದಿ ಹೇಳುತ್ತಿದ್ದಂತೆ ಆತ ತನ್ನ ಬೈಕ್​ನ ಪೆಟ್ರೋಲ್ ಟ್ಯಾಂಕ್​ಗೆ ಲೈಟರ್​​ನಿಂದ ಬೆಂಕಿ ಹಚ್ಚಿದ್ದಾನೆ. ತಕ್ಷಣ ಆ ಬೈಕ್ ಹೊತ್ತಿ ಉರಿದು, ಪೆಟ್ರೋಲ್ ಬಂಕ್​ಗೂ ಬೆಂಕಿ (Fire Accident) ಆವರಿಸಿಕೊಂಡಿದೆ. ಕೂಡಲೆ ಅಲ್ಲಿದ್ದ ಸಿಬ್ಬಂದಿ ಬೆಂಕಿ ಆರಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇಲ್ಲದಿದ್ದರೆ ಇಡೀ ಪೆಟ್ರೋಲ್ ಬಂಕ್ ಸ್ಫೋಟಗೊಂಡು ದುರಂತ ಸಂಭವಿಸುತ್ತಿತ್ತು. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಕಿ ನಿಯಂತ್ರಣಕ್ಕೆ ಬಂದ ನಂತರ, ಇಬ್ಬರು ವ್ಯಕ್ತಿಗಳು ಓಡಿಹೋಗಲು ಪ್ರಯತ್ನಿಸಿದರು. ಆದರೆ ಪಂಪ್ ಸಿಬ್ಬಂದಿ ಅವರನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದರು. ನಂತರ ಪೊಲೀಸರು ದೂರು ದಾಖಲಿಸಿದರು. ಉರ್ಲಾ ಪೊಲೀಸರು ಅವರನ್ನು ಬಂಧಿಸಿ ಅವರ ಬೈಕ್ ಮತ್ತು ಘಟನೆಯಲ್ಲಿ ಬಳಸಿದ ಲೈಟರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು – Kannada News | A Woman Commits Suicide In Bhadravathi for Police Constable torcher

ಶಿವಮೊಗ್ಗ, (ಫೆಬ್ರವರಿ 20): ಪತಿ ಆತ್ಮಹತ್ಯೆ (Suicide) ಮಾಡಿಕೊಂಡ ವಾರದಲ್ಲೇ ಪತ್ನಿಯೂ (Wife) ನೇಣಿಗೆ ಶರಣಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯ (Bhadravati) ಹೊಸ ಸಿದ್ದಾಪುರದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ (KSISF) ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ. ಆದ್ರೆ, ಆತ್ಮಹತ್ಯೆಗೂ ಮುನ್ನ ಗೃಹಿಣಿಯು ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಡೆತ್​ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ವಾತಿ ಅವರು ಸಾಯುವ ಮುನ್ನ ತನ್ನ ತಾಯಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಮೋಹನ್ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಮೋಹನ್‌ ಎಂಬ ಪೊಲೀಸ್‌ ತನಗೆ ಮೆಸೇಜ್ ಮಾಡಿದ್ದರು. ಬ್ಲಾಕ್ ಮಾಡಿದ್ದಕ್ಕೆ, ಆತ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ಸ್ವಾತಿ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಮೃತ ಸ್ವಾತಿ ತಾಯಿ ಸಹ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಪೊಲೀಸಪ್ಪನ ಕಾಟಕ್ಕೆ ವಿಧವೆ ಮಹಿಳೆ ಆತ್ಮಹತ್ಯೆ: ವಾಟ್ಸಾಪ್​​ನಲ್ಲಿದ್ದ ಡೆತ್​ನೋಟ್​​​ನಲ್ಲಿ ಏನಿದೆ?

Source link

ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ – Kannada News | Patanjali Foods sees big revenue and profit increase, as per its december quarterly report

FMCG ದೈತ್ಯನಾಗಿ ಬೆಳೆದಿರುವ ಪತಂಜಲಿ ಫುಡ್ಸ್ ಡಿಸೆಂಬರ್ ತ್ರೈಮಾಸಿಕದಲ್ಲಿ ಐತಿಹಾಸಿಕ ಮತ್ತು ಪ್ರಭಾವಶಾಲಿ ಪ್ರದರ್ಶನ ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ತ್ರೈಮಾಸಿಕ ಹಣಕಾಸು ವರದಿ ಪ್ರಕಾರ, ಕಂಪನಿಯ ಒಟ್ಟು ಆದಾಯವು ₹10,000 ಕೋಟಿ ಮೀರಿದೆ. ಇದು ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಶೇಕಡಾ 16.53 ರಷ್ಟು ಆದಾಯ ಹೆಚ್ಚಳವಾಗಿದೆ. ಇದು ಯಾವುದೇ ತ್ರೈಮಾಸಿಕದಲ್ಲಿ ಕಂಡ ಅತ್ಯುತ್ತಮ ಫಲಿತಾಂಶ ಎನಿಸಿದೆ. ಪತಂಜಲಿ ಫುಡ್ಸ್​ನ ಲಾಭದಲ್ಲೂ ಕೂಡ ಶೇಕಡಾ 60 ರಷ್ಟು ಏರಿಕೆ ಆಗಿದೆ.

ಎಫ್​ಎಂಸಿಜಿ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಪತಂಜಲಿ ಸಂಸ್ಥೆಯ ಹಲವು ಉತ್ಪನ್ನಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಕಂಪನಿಯ ಒಟ್ಟು ಆದಾಯಕ್ಕೆ FMCG ಬ್ಯುಸಿನೆಸ್ ಶೇಕಡಾ 30 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ. ಪತಂಜಲಿಯ ಬ್ಯುಸಿನೆಸ್ ಮಾಡಲ್ ಸಮರ್ಪಕವಾಗಿರುವುದರ ದ್ಯೋತಕ ಇದು. ಹೋಮ್ ಮತ್ತು ಪರ್ಸನಲ್ ಕೇರ್ ಬ್ಯುಸಿನೆಸ್​ನಲ್ಲಿ ಪತಂಜಲಿಗೆ 626 ಕೋಟಿ ರೂ ಆದಾಯ ಮತ್ತು ಶೇ. 25 ಲಾಭ ಹೆಚ್ಚಳ ದಾಖಲಾಗಿದೆ.

ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳದ ಗುರಿ

ಬಾಬಾ ರಾಮದೇವ್ ಅವರು ಪತಂಜಲಿಯ ಭವಿಷ್ಯದ ಸ್ಟ್ರಾಟಿಜಿ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ. ಪತಂಜಲಿ ಫುಡ್ಸ್​ನ ಮಾರ್ಕೆಟ್ ಕ್ಯಾಪಿಟಲ್ ಸದ್ಯ 57,000 ಕೋಟಿ ರೂ ಇದೆ. ಮುಂದಿನ ಮೂರು ವರ್ಷದಲ್ಲಿ ಇದನ್ನು ಒಂದು ಲಕ್ಷ ಕೋಟಿ ರೂಗೆ ಏರಿಸುವ ಗುರಿ ಇರುವುದಾಗಿ ರಾಮದೇವ್ ಹೇಳಿದ್ದಾರೆ. ಇದೇ ವೇಳೆ, ಕಂಪನಿಯು ತನ್ನ ಒಟ್ಟು ವಹಿವಾಟನ್ನು ₹1 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನೂ ಹೊಂದಿದೆ.

ಇದನ್ನೂ ಓದಿ: ಪ್ರತೀ ದಿನ ಬೆಳಗ್ಗೆ ಪ್ರಾಣಾಯಾಮ ಮಾಡುವುದರಿಂದ ಏನು ಪ್ರಯೋಜನ? ಬಾಬಾ ರಾಮದೇವ್ ಅವರ ಟಿಪ್ಸ್ ಇಲ್ಲಿದೆ

ದೇಶೀಯ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಬಲಪಡಿಸುವುದು ಮತ್ತು ಪತಂಜಲಿಯನ್ನು ವಿಶ್ವದ ಅತಿದೊಡ್ಡ ಸ್ಥಳೀಯ FMCG ಕಂಪನಿಯನ್ನಾಗಿ ಮಾಡುವುದು ಕಂಪನಿಯ ಪ್ರಾಥಮಿಕ ಉದ್ದೇಶವಾಗಿದೆ. ಲಾಭದಾಯಕತೆಗೆ ಸಂಬಂಧಿಸಿದಂತೆ, ಮುಂದಿನ ಮೂರು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂಪಾಯಿಗಳ EBITDA ತಲುಪುವ ದೃಢವಾದ ಯೋಜನೆ ಇದೆ. ಖಾದ್ಯ ತೈಲದ ಪೂರೈಕೆಯನ್ನು ಸುಧಾರಿಸಲು, ತಾಳೆ ತೋಟಗಳನ್ನು ಅರವತ್ತು ಸಾವಿರ ಹೆಕ್ಟೇರ್‌ಗಳಿಂದ 1.10 ಲಕ್ಷ ಹೆಕ್ಟೇರ್‌ಗಳಿಗೆ ವಿಸ್ತರಿಸಲಾಗಿದೆ.

ವಿದೇಶಿ ಕಂಪನಿಗಳಿಗೆ ತೀವ್ರ ಸ್ಪರ್ಧೆ

ದಿನನಿತ್ಯ ಬಳಸುವ ಉತ್ಪನ್ನಗಳಲ್ಲಿ ವಿದೇಶಿ ಬ್ರ್ಯಾಂಡ್‌ಗಳು ಈಗ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ. ಭಾರತದ ದಂತ ಆರೈಕೆ ವಿಭಾಗದಲ್ಲಿ ಪತಂಜಲಿ ಕೋಲ್ಗೇಟ್ ಅನ್ನು ಮೀರಿಸಿದೆ ಎಂದು ಬಾಬಾ ರಾಮದೇವ್ ಸ್ಪಷ್ಟಪಡಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಪತಂಜಲಿ ದೇಶದಲ್ಲಿ ನಂಬರ್ ಒನ್ ಬ್ರ್ಯಾಂಡ್ ಆಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಸರ್ಕಾರ ಡೆಂಟಲ್ ಹಾಗೂ ಹೇರ್​ಕೇರ್​ನಂತಹ ಎಸೆನ್ಷಿಯಲ್ ಪ್ರಾಡಕ್ಟ್​ಗಳ ಮೇಲೆ ಜಿಎಸ್​ಟಿಯನ್ನು ಶೇ. 18ರಿಂದ 5ಕ್ಕೆ ಇಳಿಸಿದೆ. ಈ ತೆರಿಗೆ ರಿಯಾಯಿತಿಯ ಲಾಭವು ಪತಂಜಲಿಗೆ ದಕ್ಕುತ್ತಿದೆ. ಪರ್ಸನಲ್ ಕೇರ್ ಸೆಕ್ಟರ್​ನಲ್ಲಿ ಕಂಪನಿ ಸಾಧನೆ ಉತ್ತಮವಾಗಿದೆ.

ಇದನ್ನೂ ಓದಿ: ಜೇನುತುಪ್ಪದ ಪ್ರಯೋಜನಗಳೇನು, ಪತಂಜಲಿ ಜೇನುತುಪ್ಪದ ಶುದ್ಧತೆ ಎಷ್ಟು? ಇಲ್ಲಿದೆ ಮಾಹಿತಿ

ಹೂಡಿಕೆದಾರರಿಗೆ ಅದ್ಭುತ ಲಾಭ

ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಫುಡ್ಸ್ ಹೂಡಿಕೆದಾರರ ವಿಶ್ವಾಸ ಉಳಿಸಿಕೊಂಡಿದೆ. ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಟ್ಟಿದೆ. ಇಂದು ಶುಕ್ರವಾರದ ಟ್ರೇಡಿಂಗ್ ಕೊನೆಯಲ್ಲಿ ಇದರ ಷೇರು ಬೆಲೆ ₹531 ಕ್ಕೆ ಮುಕ್ತಾಯವಾಗಿದೆ. ಕಳೆದ ಒಂದು ತಿಂಗಳಲ್ಲಿ, ಷೇರುಬೆಲೆ 5.93% ಹೆಚ್ಚಳ ಆಗಿದೆ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ, ಹೂಡಿಕೆದಾರರಿಗೆ 6750% ಲಾಭವನ್ನು ಗಳಿಸಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅರಣ್ಯದಲ್ಲಿ ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆ, ಬೆಚ್ಚಿಬಿದ್ದ ಸ್ಥಳೀಯರು – Kannada News | Woman Dead Body Found In Kolagi Forest at Uttara Kannada

ಕಾರವಾರ, (ಫೆಬ್ರವರಿ 20): ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿ ಅರಣ್ಯದಲ್ಲಿ (Forest) ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇಂದು (ಫೆಬ್ರವರಿ 20) ಸಂಜೆ ವೇಳೆ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುಂಡಗೋಡು ಪೊಲೀಸರು ದೌಡಾಯಿಸಿದ್ದಾರೆ. ಎರಡು ದಿನದ ಹಿಂದೆ ಅತ್ಯಾಚಾರ ಮಾಡಿ ಬಳಿಕ ಹತ್ಯೆ ಮಾಡಿ ಮೃತದೇಹವನ್ನು ಅರಣ್ಯದಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ.

Source link

‘ಕೈದಿ 2’ ಚಿತ್ರಕ್ಕೆ ‘ದಿಲ್ಲಿ’ ಟೈಟಲ್? ಅನುಮಾನ ಮೂಡಿಸಿದ ಸೆನ್ಸಾರ್ ಪ್ರಮಾಣಪತ್ರ – Kannada News | Dilli movie Teaser gets Censor certificate Fans guess this is Kaithi 2

ಕಾಲಿವುಡ್‌ನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಮತ್ತು ನಟ ಕಾರ್ತಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್​ನಲ್ಲಿ ಬಂದಿದ್ದ ‘ಕೈದಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಆ ಚಿತ್ರಕ್ಕೆ ಸೀಕ್ವೆಲ್ (Kaithi 2) ಬರಲಿದೆ ಎಂದು ಹೇಳಲಾಗಿತ್ತಾದರೂ ಅಪ್​ಡೇಟ್ ಸಿಕ್ಕಿರಲಿಲ್ಲ. ಆದರೆ ಈಗ ಮತ್ತೆ ‘ಕೈದಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಅದರ ಜೊತೆಗೆ ಒಂದು ಟ್ವಿಸ್ಟ್ ಎದುರಾಗಿದೆ. ‘ಕೈದಿ 2’ ಬದಲು ‘ದಿಲ್ಲಿ’ (Dilli) ಎಂದು ಶೀರ್ಷಿಕೆ ಇಟ್ಟಿರುವ ಸಾಧ್ಯತೆ ಇದೆ.

ಸೆನ್ಸಾರ್ ಮಂಡಳಿಯಲ್ಲಿ ‘ದಿಲ್ಲಿ’ ಶೀರ್ಷಿಕೆ ಸದ್ದು ಮಾಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ತಮಿಳಿನ ‘ದಿಲ್ಲಿ’ ಎಂಬ ಶೀರ್ಷಿಕೆಯ ಚಿತ್ರದ ಟೀಸರ್ ಇಂದು (ಫೆಬ್ರವರಿ 20) ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದುಕೊಂಡಿದೆ. ‘ಕೈದಿ’ ಚಿತ್ರದಲ್ಲಿ ಕಾರ್ತಿ ನಿರ್ವಹಿಸಿದ್ದ ಪಾತ್ರದ ಹೆಸರು ಕೂಡ ‘ದಿಲ್ಲಿ’ ಎಂದೇ ಆಗಿರುವುದರಿಂದ, ಈ ಶೀರ್ಷಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಕುತೂಹಲ ಮೂಡಿಸಿದ ಪ್ರೊಡಕ್ಷನ್ ಹೌಸ್: ಈ ಹೊಸ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡುವಂತೆ, ‘ದಿಲ್ಲಿ’ ಚಿತ್ರದ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆ. ವಿಶೇಷವೆಂದರೆ, ‘ಕೈದಿ’ ಚಿತ್ರವನ್ನೂ ಇದೇ ಸಂಸ್ಥೆ ನಿರ್ಮಿಸಿತ್ತು. ಇದರಿಂದಾಗಿ ‘ಕೈದಿ 2’ ಚಿತ್ರವನ್ನೇ ‘ದಿಲ್ಲಿ’ ಎಂದು ಮರುನಾಮಕರಣ ಮಾಡಲಾಗಿದೆಯೇ ಅಥವಾ ಇದು ಅದೇ ಪಾತ್ರವನ್ನು ಆಧರಿಸಿದ ಮತ್ತೊಂದು ಹೊಸ ಕಥೆಯೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿವೆ.

ಲೋಕೇಶ್ ಕನಗರಾಜ್ ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ: ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಎಲ್​ಸಿಯು, ಅಂದರೆ ‘ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್’ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ದಿಲ್ಲಿ’ ಶೀರ್ಷಿಕೆ ಕೇಳಿ ಫ್ಯಾನ್ಸ್ ಫುಲ್ ಖುಷಿ ಆಗಿದ್ದಾರೆ. ‘ಕೂಲಿ’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಕೂಡ ಲೋಕೇಶ್ ಅವರು ‘ದಿಲ್ಲಿ’ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ: ‘ಕೂಲಿ’ ಚಿತ್ರದ ನಿರ್ಮಾಪಕರಿಗೆ 5 ಕೋಟಿ ರೂ. ಉಳಿಸಿದ ನಿರ್ದೇಶಕ ಲೋಕೇಶ್ ಕನಗರಾಜ್

ಲೋಕೇಶ್ ಕನಗರಾಜ್ ಅವರ ಸಿನಿಮಾಗಳಲ್ಲಿ ಯಾವಾಗಲೂ ನಿರೀಕ್ಷೆಗೂ ಮೀರಿದ ಟ್ವಿಸ್ಟ್‌ಗಳು ಇರುತ್ತವೆ. ಹಾಗಾಗಿ, ಅಧಿಕೃತ ಘೋಷಣೆ ಹೊರಬೀಳುವವರೆಗೂ ಈ ‘ದಿಲ್ಲಿ’ ರಹಸ್ಯ ಹೀಗೆಯೇ ಮುಂದುವರಿಯಲಿದೆ. ಒಂದು ವೇಳೆ ‘ಕೈದಿ 2’ ಚಿತ್ರವೇ ‘ದಿಲ್ಲಿ’ ಆಗಿದ್ದರೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇದು ಹೊಸ ದಾಖಲೆ ಬರೆಯುತ್ತದೆ ಎಂಬುದು ಅಭಿಮಾನಿಗಳ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸ್ಟಾಂಡ್​ಅಪ್’ ಕಾಮಿಡಿ; ಟ್ರಂಪ್ ಮುಂದೆ ಶಾಲಾ ಬಾಲಕನಾದ ಪಾಕಿಸ್ತಾನದ ಪ್ರಧಾನಿ – Kannada News | Donald Trump Asks Pakistan PM Shehbaz Sharif To Stand Up at Board of Peace meet

ವಾಷಿಂಗ್ಟನ್, ಫೆಬ್ರವರಿ 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡುವಾಗ ಭಾರತ-ಪಾಕಿಸ್ತಾನದ ಸಮಘರ್ಷವನ್ನು ಕೂಡ ಪ್ರಸ್ತಾಪಿಸಿದ್ದಾರೆ. ಈ ವೇಳೆ ಆ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಪ್ರಧಾನಿಗೆ ‘ಸ್ಟಾಂಡ್​ಅಪ್’ ಎಂದು ಹೇಳಿದ್ದಾರೆ. ಟ್ರಂಪ್ ಮಾತಿನಂತೆ ಎದ್ದುನಿಂತ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್​ ನಿಂತೇ ಇರಬೇಕೋ, ಕುಳಿತುಕೊಳ್ಳಬೇಕೋ ಎಂದು ಗೊತ್ತಾಗದೆ ಮುಜುಗರಕ್ಕೀಡಾಗಿದ್ದಾರೆ. ಈ ವೇಳೆ ಟ್ರಂಪ್ ಭಾರತದ ಪ್ರಧಾನಿ ಮೋದಿಯ ಹೆಸರನ್ನು ಪ್ರಸ್ತಾಪಿಸಿ ಮೋದಿ ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ. ಇದರಿಂದ ಶೆಹಬಾಜ್ ಷರೀಫ್​ಗೆ ತೀವ್ರ ಮುಖಭಂಗವಾಗಿದೆ. ಟ್ರಂಪ್​ ಹೇಳುತ್ತಿದ್ದಂತೆ ಕೀಲಿ ಕೊಟ್ಟ ಗೊಂಬೆಯಂತೆ ಎದ್ದುನಿಂತ ಪಾಕ್ ಪ್ರಧಾನಿಯ ಈ ‘ಸ್ಟಾಂಡ್​ಅಪ್’ ಕಾಮಿಡಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ – Kannada News | Arjun Sarja praised daughter Aishwarya’s acting in Seetha Payanam movie

ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ ಮತ್ತು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಟಿಸಿರುವ ‘ಸೀತಾಪಯಣ’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಪ್ರೀಮಿಯರ್ ಶೋ ಅನ್ನು ಅರ್ಜುನ್ ಸರ್ಜಾ ದಂಪತಿಗಳು ಒಟ್ಟಿಗೆ ನೋಡಿದರು. ಅವರು ಮಾತ್ರವೇ ಅಲ್ಲದೆ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡದ ಕೆಲವು ಪ್ರಮುಖ ಸೆಲೆಬ್ರಿಟಿಗಳು ಸಿನಿಮಾ ನೋಡಿದರು. ಸಿನಿಮಾ ಬಳಿಕ ಅರ್ಜುನ್ ಸರ್ಜಾ ದಂಪತಿ ಮಾಧ್ಯಮಗಳ ಮುಂದೆ ಮಾತನಾಡಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ. ಅಂದಹಾಗೆ ಸಿನಿಮಾ ನಿರ್ದೇಶನ ಮಾಡಿರುವುದು ಅರ್ಜುನ್ ಸರ್ಜಾ ಅವರೇ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ ರಶ್ಮಿಕಾ: ಪಾತ್ರ ಎಂತಹದ್ದು ಗೊತ್ತೆ? – Kannada News | Rashmika Mandanna acted in a bold role in Cocktail 2 movie

ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆ ಮತ್ತು ಗ್ಲಾಮರ್​​ನಿಂದ ದಕ್ಷಿಣ ಭಾರತ ಚಿತ್ರರಂಗ ಮಾತ್ರವೇ ಅಲ್ಲದೆ ಬಾಲಿವುಡ್​​ನಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮೊದಲೆಲ್ಲ ಸೀದಾ-ಸಾದಾ ‘ಪಕ್ಕದ ಮನೆ ಹುಡುಗಿ’ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಅನುಭವ ಹೆಚ್ಚಾದಂತೆ ತುಸು ಬೋಲ್ಡ್ ಆದ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದರು. ‘ಪುಷ್ಪ’ ಸಿನಿಮಾದ ಅವರ ಪಾತ್ರ ಅಲ್ಲಲ್ಲಿ ತುಸು ಬೋಲ್ಡ್ ಆಗಿತ್ತು. ಕೆಲ ತಿಂಗಳುಗಳ ಹಿಂದೆ ಬಿಡುಗಡೆ ಆದ ‘ಥಮ’ ಸಿನಿಮಾನಲ್ಲಿ ತುಸು ಹೆಚ್ಚೇ ಬೋಲ್ಡ್ ಆಗಿ ನಟಿಸಿದ್ದರು. ಒಂದು ಐಟಂ ಹಾಡಿನಲ್ಲೂ ಕಾಣಿಸಿಕೊಂಡಿದ್ದರು. ಆದರೆ ಇದೀಗ ರಶ್ಮಿಕಾ ಎಲ್ಲ ಗಡಿಗಳನ್ನು ಮುರಿದು ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ‘ಗರ್ಲ್​​ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಿದ್ದರು. ಪುರುಷ ಅಹಂ ಅನ್ನು ಎದುರಿಸುವ, ಪ್ರಶ್ನೆ ಮಾಡುವ ಗಟ್ಟಿಯಾದ ಪಾತ್ರದಲ್ಲಿ ನಟಿಸಿದ್ದರು ರಶ್ಮಿಕಾ. ಆದರೆ ಇದೀಗ ರಶ್ಮಿಕಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸಲಿಂಗಕಾಮಿಯ (ಲೆಸ್ಬಿಯನ್) ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ಬೋಲ್ಡ್ ಆದ ಪಾತ್ರ ಇದಾಗಿರುವ ಜೊತೆಗೆ ಸಖತ್ ಗ್ಲಾಮರಸ್ ಆಗಿಯೂ ಸಿನಿಮಾನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಹಿಂದಿಯ ‘ಕಾಕ್​​ಟೇಲ್ 2’ ಸಿನಿಮಾನಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾನಲ್ಲಿ ರಶ್ಮಿಕಾ ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೊನ್ ಮತ್ತು ಶಾಹಿದ್ ಕಪೂರ್ ಸಹ ಇದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾ ಆಗಿದೆ ಎನ್ನಲಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯಂತೆ ಈ ಸಿನಿಮಾನಲ್ಲಿ ರಶ್ಮಿಕಾ ಮತ್ತು ಕೃತಿ ಸನೊನ್ ಲೆಸ್ಬಿಯನ್ ಕಪಲ್ ಪಾತ್ರ ನಿರ್ವಹಿಸಿದ್ದಾರಂತೆ.

ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಪೈಕಿ ಯಾರು ಶ್ರೀಮಂತರು? ಇಲ್ಲಿದೆ ವಿವರ

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​​ಟೇಲ್’ ಸಿನಿಮಾನಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ದಿಯಾನಾ ಪೆಂಟಿ ನಟಿಸಿದ್ದರು. ಅದು ಪಕ್ಕಾ ತ್ರಿಕೋನ ಪ್ರೇಮಕಥೆಯನ್ನು ಹೊಂದಿತ್ತು. ಸಿನಿಮಾ ದೊಡ್ಡ ಹಿಟ್ ಸಹ ಆಗಿತ್ತು. ಅದೇ ಫಾರ್ಮುಲಾ ಇರಿಸಿಕೊಂಡು ಇದೀಗ ‘ಕಾಕ್​​ಟೇಲ್ 2’ ಮಾಡಲಾಗಿದೆ. ಆದರೆ ಇಲ್ಲಿ ಕತೆಯಲ್ಲಿ ಟ್ವಿಸ್ಟ್ ಕೊಡಲಾಗಿದ್ದು, ರಶ್ಮಿಕಾ ಮತ್ತು ಕೃತಿ ಸನೊನ್ ಅವರನ್ನು ಜೋಡಿ ಮಾಡಲಾಗಿದೆ.

‘ಕಾಕ್​​ಟೇಲ್ 2’ ನಿರ್ದೇಶಕ ಹೋಮಿ ಅದ್ಜಾಯಿನ್ ಹೇಳಿದ್ದಂತೆ ಜನವರಿ 31 ರಂದು ಸಿನಿಮಾದ ಶೂಟಿಂಗ್ ಮುಗಿಸಲಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ಬಹುತೇಕ ಮುಗಿದಿದೆ. ಆದರೆ ಶಾಹಿದ್ ಕಪೂರ್ ನಟನೆಯ ‘ಓ ರೋಮಿಯೊ’ ಸಿನಿಮಾ ಬಿಡುಗಡೆ ಆಗಬೇಕಿದ್ದ ಕಾರಣ ‘ಕಾಕ್​​ಟೇಲ್ 2’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version