Electricity Shocks Prevention: ಈ ಮಳೆಗಾಲದಲ್ಲಿ ಕರೆಂಟ್ ಶಾಕ್ ಅಪಾಯಗಳನ್ನು ತಪ್ಪಿಸಲು ಈ ಸಲಹೆಗಳನ್ನು ಅನುಸರಿಸಿ – Kannada News | To prevent electric shocks in rainy season follow these tips
ಮಳೆಗಾಲದಲ್ಲಿ ಸಿಡಿಲು ಬಡಿಯುವುದು, ಪ್ರವಾಹ ಇತ್ಯಾದಿ ಸಮಸ್ಯೆಗಳು ಒಂದೆಡೆಯಾದರೆ, ಇನ್ನೊಂದು ಕಡೆ ಮನೆಯೊಳಗೆ ವಿದ್ಯುತಾಘಾತಗಳು (Electricity Shocks) ತೀರಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೌದು ಸ್ವಿಚ್‌ಬೋರ್ಡ್, ಫ್ರಿಡ್ಜ್, ವಾಷಿಂಗ್ ಮಷನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮುಟ್ಟಿದಾಗ ಕರೆಂಟ್ ಶಾಕ್ ಹೊಡೆಯುವುದು, ಶಾರ್ಟ್ ಸರ್ಕ್ಯೂಟ್ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳನ್ನು ನಿರ್ಲಕ್ಷ್ಯವಹಿಸಬಾರದು ಏಕೆಂದರೆ ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲೂ ವಿದ್ಯುತ್‌ಗೆ ಸಂಬಂಧಿಸಿದ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ಸುರಕ್ಷತೆಯ ದೃಷ್ಟಿಯಿಂದ ತಕ್ಷಣ…