ಹಸುಗಳಿಗೂ AI ಅನ್ವಯಿಸುವ ಬಗ್ಗೆ ಮೋದಿ ತುರ್ತು ನಿರ್ಧಾರ; ನಂದನ್ ನಿಲೇಕಣಿ ಬಣ್ಣನೆ – Kannada News | Nandan Nilekani explained how he was impressed with PM Modis idea of using AI to help cattle

ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಸಿಇಒಗಳ ಸಭೆ ವೇಳೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ಭಾರತದಲ್ಲಿ AI ಬಳಕೆಯ ಬಗ್ಗೆ ನಾನು ಒಂದು ಉದಾಹರಣೆಯೊಂದಿಗೆ ಮಾತನಾಡಲು ಬಯಸುತ್ತೇನೆ. ಜನವರಿ 8ರಂದು ನಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ರೈತರಿಗೂ AI ಅನ್ವಯಿಸುವ ಬಗ್ಗೆ ಮಾತನಾಡಿದ್ದೆ. ಆಗ ಅವರು, ನಾವು ಎಐ ಅನ್ನು ಹಸುಗಳು ಮತ್ತು ಎಮ್ಮೆಗಳಿಗೆ ಏಕೆ ಅನ್ವಯಿಸಬಾರದು? ಹಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಅದಕ್ಕೆ ಅದನ್ನು ನಮಗೆ ಹೇಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಐ ಮೂಲಕ ಸಮಸ್ಯೆಯನ್ನು ಕಂಡುಹಿಡಿಯಬಹುದಲ್ಲವೇ? ಎಂದು ಕೃಷಿ ಮತ್ತು ಡೈರಿಗೆ AI ಅನ್ವಯಿಸುವ ಬಗ್ಗೆ ಅವರು ನಮಗೆ ತಮ್ಮ ದೃಷ್ಟಿಕೋನವನ್ನು ನೀಡಿದರು. ಅದೇ ದಿನ, ಪಿಎಂಒ ಅಮುಲ್‌ನೊಂದಿಗೆ ನಮ್ಮ ಸಭೆ ನಡೆಸಿತು. ಅದಾದ 3 ವಾರಗಳಲ್ಲಿ, ಅರ್ಜಿಯನ್ನು ನೇರ ಪ್ರಸಾರ ಮಾಡಲಾಯಿತು. ಅಮುಲ್ 3.6 ಮಿಲಿಯನ್ ರೈತರು, ವರ್ಷಕ್ಕೆ 2 ಬಿಲಿಯನ್ ಹಾಲು ವಹಿವಾಟುಗಳು ಮತ್ತು 40 ಮಿಲಿಯನ್ ಜಾನುವಾರುಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಹಕಾರಿ ಸಂಸ್ಥೆಯಾಗಿದೆ. ಇದು ಭಾರತದಲ್ಲಿ AI ಪ್ರಸರಣದ ವೇಗದ ಕಾರ್ಯಗತಗೊಳಿಸುವಿಕೆಗೆ ಒಂದು ಉದಾಹರಣೆಯಾಗಿದೆ” ಎಂದಿದ್ದಾರೆ.

“2016ರ ಡಿಸೆಂಬರ್ 30ರಂದು ಪ್ರಧಾನಿಯವರು UPIನಲ್ಲಿ BHIM ಪಾವತಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು. ಅವರು ಆ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದಾಗ ಅದು ಇಷ್ಟರ ಮಟ್ಟಿಗೆ ಜನಪ್ರಿಯವಾಗಲಿದೆ, ದಿನನಿತ್ಯದ ವಹಿವಾಟಿನ ಭಾಗವಾಗಲಿದೆ ಎಂದು ಊಹೆ ಇರಲಿಲ್ಲ. ಇಂದು ನಾವು 500 ಮಿಲಿಯನ್ ಬಳಕೆದಾರರೊಂದಿಗೆ ತಿಂಗಳಿಗೆ 21 ಬಿಲಿಯನ್ ವಹಿವಾಟುಗಳನ್ನು ಹೊಂದಿದ್ದೇವೆ. ನಾವು ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯನ್ನು ಹೊಂದಿದ್ದೇವೆ. ಅದೇ ರೀತಿ AI ಕೂಡ ಮುಂದಿನ ದಿನಗಳಲ್ಲಿ ದಿನನಿತ್ಯದ ಭಾಗವಾಗಲಿದೆ ಎಂಬ ವಿಶ್ವಾಸ ನನಗಿದೆ. ಭಾರತೀಯರು, ಸಾಮಾನ್ಯ ಜನರು, ರೈತರು, ಕಾರ್ಮಿಕರ ಪ್ರಯೋಜನಕ್ಕಾಗಿ AI ಅನ್ನು ಹೇಗೆ ಬಳಸಬಹುದು ಎಂಬ ಮೋದಿಯವರ ನಾಯಕತ್ವ ಮತ್ತು ದೃಷ್ಟಿಕೋನದಿಂದ ಎಐ ದೇಶಾದ್ಯಂತ ಅಳವಡಿಕೆಯಾಗಲಿದೆ ಎಂದು ನನಗೆ ಅನಿಸುತ್ತಿದೆ” ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್ – Kannada News | Kaatera director Tharun Sudhir wants to do another movie with Darshan

ನಟ ದರ್ಶನ್ ಜೊತೆ ನಿರ್ದೇಶಕ ತರುಣ್ ಸುಧೀರ್ ಅವರು ‘ಕಾಟೇರ’ ಸಿನಿಮಾ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮತ್ತೆ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಸದ್ಯಕ್ಕೆ ದರ್ಶನ್ (Darshan) ಅವರು ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಮುಖ್ಯ ಆರೋಪಿ ಆಗಿದ್ದಾರೆ. ಆ ಕುರಿತು ತರುಣ್ ಸುದೀಪ್ ಮಾತನಾಡಿದ್ದಾರೆ. ‘ಆದಷ್ಟು ಬೇಗ ದರ್ಶನ್ ಅವರು ಹೊರಗೆ ಬರಲಿ. ಅವರ ಕಷ್ಟದ ದಿನಗಳೆಲ್ಲ ಕಳೆಯಲಿ ಅಂತ ನಾನು ಕಾಯುತ್ತಿದ್ದೇನೆ. ಮುಂದೆ ಖಂಡಿತವಾಗಿಯೂ ಅವರು ಸಿನಿಮಾ ಮಾಡುತ್ತಾರೆ. ಯಾವತ್ತು ಅವರು ನನ್ನನ್ನು ಕರೆದು, ಅವಕಾಶ ಕೊಟ್ಟು, ಸಿನಿಮಾ ಮಾಡೋಣ ಎನ್ನುತ್ತಾರೋ ಮರುದಿನವೇ ನಾನು ರೆಡಿ. ನಾವು ಸ್ಕ್ರಿಪ್ಟ್ ಕೂಡ ರೆಡಿ ಇಟ್ಟುಕೊಂಡಿರುತ್ತೇವೆ. ಆ ಕಾಲ ಬರಲಿ ಅಂತ ಕಾಯುತ್ತಿದ್ದೇವೆ’ ಎಂದು ತರುಣ್ ಸುಧೀರ್ (Tharun Sudhir) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ – Kannada News | Vijayapura babaladi sadashiva mutya prediction 2026 about rain monsoon And Politics

ವಿಜಯಪುರ (ಫೆಬ್ರವರಿ 19): ಪ್ರತಿ ವರ್ಷದಂತೆ ಈ ಬಾರಿಯೂ ವಿಜಯಪುರದ (Vijayapura) ಬಬಲಾದಿ ಸ್ವಾಮೀಜಿಯು ಭವಿಷ್ಯ (Babaladi Mutya Kalajnana Bhavishya) ನುದಿಡಿದ್ದಾರೆ. ಪ್ರತಿ ವರ್ಷ ಈ ಬಾರಿಯೂ ಶಿವರಾತ್ರಿ ಅಮವಾಸ್ಯೆ ಹಿಂದೆ ಮುಂದೆ ಬಬಲಾದಿ ಜಾತ್ರೆ ನಡೆಯುತ್ತಿದೆ. ಈ ವೇಳೆ ಹೊಳೆಬಬಲಾದಿ ಪೀಠಾಧಿಪತಿ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದು, 2026ರ ಕಾಲಜ್ಞಾನ ಭವಿಷ್ಯ ಹೇಳಿದ್ದಾರೆ. 2026ನೇ ವರ್ಷವು ಏರಿಳಿತಗಳಿಂದ ಕೂಡಿದ ವರ್ಷವಾಗಲಿದೆ ಎಂದು ಬಬಲಾದಿ ಸದಾಶಿವ ಮುತ್ತಜ್ಜ ಕಾಲಜ್ಞಾನ ಹೇಳಿದ್ದಾರೆ. ರಾಜಕಾರಣದಲ್ಲಿ ಹೊಸ ತಿರುವು. ರೋಗ, ಯುದ್ಧ ಮತ್ತು ಪ್ರಕೃತಿ ವಿಕೋಪಗಳ ಎಚ್ಚರಿಕೆಯ ಜೊತೆಗೆ, ರೈತರಿಗೆ ಹಾಗೂ ದೇಶದ ಆರ್ಥಿಕತೆಗೆ ಲಾಭವಾಗುವ ಮಾತುಗಳು ಕೂಡ ಹೇಳಿದ್ದಾರೆ.

ರಾಜಕೀಯ ಮತ್ತು ರಕ್ಷಣಾ ವಲಯದ ಬಗ್ಗೆಯೂ ಸದಾಶಿವ ಮುತ್ತಜ್ಜ ಮಹತ್ವದ ಸೂಚನೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೊಸ ತಿರುವುಗಳು ಉಂಟಾಗಲಿವೆ ಎಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ನಡೆಯುತ್ತಿರುವ ಕುರ್ಚಿ ಫೈಟ್‌ ತಾರ್ಕಿಕ ಅಂತ್ಯ ಕಾಣಲಿದ್ಯಾ ಎನ್ನುವ ಚರ್ಚೆ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇವನಹಳ್ಳಿ: 15 ದಿನದಿಂದ ವಿದ್ಯುತ್ ಇಲ್ಲದೆ ಜನ ಹೈರಾಣು; ಬೆಸ್ಕಾಂ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು – Kannada News | Devanahalli: 15 Days Power Outage Ignites Villager Protest Against BESCOM Negligence

ಹಾಳಾದ ಟ್ರಾನ್ಸ್ಫಾರ್ಮರ್, ಕತ್ತಲಲ್ಲಿ ಅಡುಗೆ ಮಾಡುತ್ತಿರುವ ಮಹಿಳೆ

ದೇವನಹಳ್ಳಿ, ಫೆಬ್ರವರಿ 19: ಅದು ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರ ಸ್ವಕ್ಷೇತ್ರದ ಕುಗ್ರಾಮ. ದಲಿತರೇ ವಾಸಿಸುವ ಆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ಸುಟ್ಟು‌ ಹೋಗಿದೆ. ಹೀಗಾಗಿ 15 ದಿನಗಳಿಂದ ವಿದ್ಯುತ್ (power outage)​​ ಇಲ್ಲಿದೆ ಕತ್ತಲಲ್ಲಿ ಜೀವನ ಕಳೆಯುವಂತಾಗಿದೆ. ಬೆಸ್ಕಾಂ (BESCOM)  ಕಚೇರಿಗೆ ಅಲೆದು ಅಲೆದು ಸುಸ್ತಾದ ಗ್ರಾಮಸ್ಥರು ಇದೀಗ ಕರೆಂಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಬೆಸ್ಕಾಂ ವಿರುದ್ಧ ಆಕ್ರೋಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದು, 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ದಲಿತರೇ ವಾಸಿಸುವ ಈ ಕುಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್​ ಸುಟ್ಟುಹೋಗಿದೆ. ಅಂದಿನಿಂದ ಇಂದಿನವರೆಗೆ ರಾತ್ರಿ ಹೊತ್ತಲ್ಲಿ ಗ್ರಾಮದಲ್ಲಿ ಕರೆಂಟ್ ಇಲ್ಲದೆ ಜನ ಕಗ್ಗತ್ತಲಿನಲ್ಲಿ ಇದ್ದು ಹೈರಾಣಾಗಿದ್ದಾರೆ. ಜೊತೆಗೆ ಹಾವು, ಚೇಳುಗಳ ಭಯ ಸೇರಿದಂತೆ ಮತ್ತೊಂದೆಡೆ ಕಳ್ಳರ ಕಾಟ. ಕುರಿಗಳ ಕಳ್ಳತನ ಮಾಡುತ್ತಿದ್ದಾರೆ ಅಂತ ಜನ ಜಾಗರಣೆ ಮಾಡುವಂತಾಗಿದೆ. ವಿದ್ಯುತ್ ಸಮಸ್ಯೆ ಸರಿಪಡಿಸದ ಬೆಸ್ಕಾಂ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ

ರಾಜ್ಯದಲ್ಲಿ ಗೃಹಜ್ಯೋತಿ ಜಾರಿಯಲ್ಲಿದ್ದು, ಈ ಗ್ರಾಮದಲ್ಲೂ ನಿರಂತರ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿತ್ತು. ಆದರೆ 25 ಕೆವಿ ಟ್ರಾನ್ಸ್ಫಾರ್ಮರ್ ಗ್ರಾಮದ 30 ಮನೆಗಳಿಗೆ ವಿದ್ಯುತ್​ ಒದಗಿಸಿದಲ್ಲದೆ ಕೆಲವರು ಬೋರ್ವೆಲ್​ಗೂ ಇದೇ ಟ್ರಾನ್ಸ್ಫಾರ್ಮರ್ ಬಳಸುತ್ತಿದ್ದಾರಂತೆ. ಹೀಗಾಗಿ ಟ್ರಾನ್ಸ್ಫಾರ್ಮರ್ ಸುಟ್ಟು‌ಹೋಗಿ 15 ದಿನಗಳಿಂದ ಕತ್ತಲಲ್ಲೇ ಜನ ವಾಸ ಮಾಡುವಂತಾಗಿದೆ. ಕೆಲ ಮನೆಯ ವಿದ್ಯಾರ್ಥಿಗಳು ಕರೆಂಟ್ ಇಲ್ಲದೆ ಊರನ್ನ ತೊರದಿದ್ದಾರಂತೆ.

ಇನ್ನು ಟ್ರಾನ್ಸ್ಫಾರ್ಮರ್ ಸರಿಪಡಿಸಿ ಗ್ರಾಮಕ್ಕೆ ಕರೆಂಟ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾದ ಜನ ಇಂದು‌ ಬೀದಿಗಿಳಿದು‌ ಪ್ರತಿಭಟನೆ ಮಾಡಿದ್ದಾರೆ. ಇನ್ನು ನಾಳೆ ಒಳಗೆ ಗ್ರಾಮಕ್ಕೆ ಕರೆಂಟ್ ಬಾರದೇ ಹೋದರೆ ವಿಜಯಪುರ ಬೆಸ್ಕಾಂ ಬಳಿ ಗ್ರಾಮಸ್ಥರಿಂದ ಅಡುಗೆ ಮಾಡಿ ಅಲ್ಲಿಯೇ ವಾಸ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಒಟ್ಟಾರೆ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮದ ಜನ ಹೈರಾಣಾಗಿದ್ದು, ಬೆಸ್ಕಾಂ ಇಲಾಖೆ‌ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ. ಈ ನಿಟ್ಟಿನಲ್ಲಿ ಆದಷ್ಟು‌ ಬೇಗ ಬೆಸ್ಕಾಂ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ ಅಳವಡಿಸಿ ಕಗ್ಗತ್ತಲಲ್ಲಿಂದ ಕೂಡಿರುವ ಗ್ರಾಮಕ್ಕೆ ಬೆಳಕು ನೀಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಹಾಯ ಮಾಡಿದವರ ಹೆಸರು ಹೇಳಲ್ಲ: ಖಡಕ್ ಆಗಿ ತಿಳಿಸಿದ ರಾಜ್​ಪಾಲ್ ಯಾದವ್ – Kannada News | Rajpal Yadav does not want to reveal who helped in during jail

ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್ (Rajpal Yadav) ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಸದ್ಯಕ್ಕೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅವರ ಮೇಲೆ ಬರೋಬ್ಬರಿ 9 ಕೋಟಿ ರೂಪಾಯಿ ಸಾಲ ಇದೆ. ರಾಜ್​ಪಾಲ್ ಯಾದವ್ ಅವರು ಜೈಲಿಗೆ ಹೋಗಿದ್ದಾಗ ಅನೇಕ ಸೆಲೆಬ್ರಿಟಿಗಳು ಹಣದ ನೆರವು ನೀಡಿದರು. ಅದರಿಂದಾಗಿ ಅವರು 1.5 ಕೋಟಿ ರೂಪಾಯಿ ಮರುಪಾವತಿ ಮಾಡಿ, ಜಾಮೀನು (Bail) ಪಡೆಯಲು ಸಾಧ್ಯವಾಯಿತು. ಆದರೆ ತಮಗೆ ಸಹಾಯ ಮಾಡಿದ ಸೆಲೆಬ್ರಿಟಿಗಳ ಹೆಸರನ್ನು ಬಹಿರಂಗಪಡಿಸಲು ರಾಜ್​ಪಾಲ್ ಯಾದವ್ ಅವರು ಹಿಂದೇಟು ಹಾಕಿದ್ದಾರೆ.

ವರದಿಗಳ ಪ್ರಕಾರ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್, ಮಿಕಾ ಸಿಂಗ್ ಮುಂತಾದವರು ರಾಜ್​ಪಾಲ್ ಯಾದವ್​ಗೆ ಸಹಾಯ ಮಾಡಿದ್ದಾರೆ. ಆದರೆ ಅವರ ಹೆಸರನ್ನು ರಾಜ್​ಪಾಲ್ ಯಾದವ್ ಬಹಿರಂಗಪಡಿಸಿಲ್ಲ. ಚಿತ್ರರಂಗದ ಸಹಾಯವನ್ನು ಸಾರ್ವಜನಿಕವಾಗಿ ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ರಾಜ್​ಪಾಲ್ ಯಾದವ್ ಹೇಳಿದ್ದಾರೆ.

‘2012ರಲ್ಲಿ ಈ ವಿಷಯ ಮೊದಲು ಮಾಧ್ಯಮಗಳಲ್ಲಿ ಬಂತು. ರಾಜ್​ಪಾಲ್ ಯಾದವ್ ಮೋಸಗಾರ ಅಂತ ಸುದ್ದಿ ಬರೆದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ತಲಾ ಹತ್ತು ಸಿನಿಮಾಗಳಲ್ಲಿ ನಾನು ನಟಿಸಿದ್ದೇವೆ. ಒಂದು ವೇಳೆ ನಾನು ಮೋಸಗಾರ ಆಗಿದ್ದರೆ ಯಾಕೆ ಎಲ್ಲರೂ ನನ್ನ ಜೊತೆ ಕೆಲಸ ಮಾಡುತ್ತಿದ್ದರು? ಅವರೆಲ್ಲ ನನ್ನ ಜೊತೆ ಇದ್ದಾರೆ ಎಂಬುದನ್ನು ಸಾಬೀತು ಮಾಡಬೇಕಿಲ್ಲ. ಎಲ್ಲರೂ ನನ್ನ ಜೊತೆ ಇದ್ದಾರೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ ರಾಜ್​ಪಾಲ್ ಯಾದವ್.

ಯಾರೆಲ್ಲ ಸಹಾಯ ಮಾಡಿದ್ದಾರೆ? ಎಷ್ಟು ಹಣವನ್ನು ನೀಡಲಾಗಿದೆ? ಈ ಯಾವುದೇ ಪ್ರಶ್ನೆಗಳಿಗೆ ರಾಜ್​ಪಾಲ್ ಯಾದವ್ ಅವರು ಉತ್ತರ ನೀಡಿಲ್ಲ. ‘ನನಗೆ ಎಲ್ಲರೂ ಮಾಡಿದ ಸಹಾಯವನ್ನು ನಾನು ಗೌರವಿಸುತ್ತೇನೆ. ಆದರೆ ನನಗೆ ಸಿಂಪಥಿ ಬೇಡ’ ಎಂದು ರಾಜ್​ಪಾಲ್ ಯಾದವ್ ಅವರು ಖಡಕ್ ಆಗಿ ಹೇಳಿದ್ದಾರೆ. ಮಾರ್ಚ್ 18ರ ತನಕ ಅವರಿಗೆ ಜಾಮೀನು ನೀಡಲಾಗಿದೆ.

ಇದನ್ನೂ ಓದಿ: ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?

ಇತ್ತೀಚೆಗೆ ಜೈಲಿನ ಅನುಭವ ಹಂಚಿಕೊಂಡಿದ್ದ ರಾಜ್​ಪಾಲ್ ಯಾದವ್ ಅವರು, ‘ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಇರುವಂತೆ ಜೈಲಿನ ಒಳಗೆ ಧೂಮಪಾನ ಮಾಡಲು ಪ್ರತ್ಯೇಕವಾದ ಜಾಗ ಇರಬೇಕು. ಜೈಲುಗಳನ್ನು ಬದಲಾವಣೆಯ ಕೇಂದ್ರದ ರೀತಿ ಪರಿಗಣಿಸಬೇಕು. ತಮ್ಮನ್ನು ಬದಲಾಯಿಸಿಕೊಳ್ಳಲು ಖೈದಿಗಳಿಗೆ ಅವಕಾಶ ನೀಡಬೇಕು’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಯ ಎಐ ಶೃಂಗಸಭೆಯಲ್ಲಿ 8 ವರ್ಷದ ಬಾಲಕನಿಂದ ಮುಖ್ಯ ಭಾಷಣ; ಏನಿವನ ಸಾಧನೆ? – Kannada News | 8 Year Old boy Ranvir Sachdeva becomes Youngest Keynote Speaker At AI Impact Summit 2026

ನವದೆಹಲಿ, ಫೆಬ್ರವರಿ 19: ಭಾರತ ದೆಹಲಿಯಲ್ಲಿ ಆಯೋಜಿಸಿರುವ AI ಇಂಪ್ಯಾಕ್ಟ್ ಶೃಂಗಸಭೆ (AI Impact Summit) ಪ್ರತಿದಿನ ವಿಭಿನ್ನ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಜಾಗತಿಕ ನಾಯಕರು ಈ ಶೃಂಗಸಭೆಯಲ್ಲಿ ಭಾರತದ ಆವಿಷ್ಕಾರಗಳನ್ನು ಮತ್ತು ಎಐ ಅಳವಡಿಕೆಯಲ್ಲಿ ಭಾರತದ ಪ್ರಯೋಗಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶೃಂಗಸಭೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ AI ಶೃಂಗಸಭೆಯಲ್ಲಿ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ 8 ವರ್ಷದ ಬಾಲಕ ರಣವೀರ್ ಸಚ್‌ದೇವ ಭಾವಹಿಸಿದ್ದಾನೆ. ಆತನನ್ನು ಬಾಲ ಪ್ರತಿಭೆ ಎಂದು ಪ್ರಶಂಸಿಸಲಾಗುತ್ತಿದೆ. ಈ ವರ್ಷದ AI ಶೃಂಗಸಭೆಯಲ್ಲಿ ರಣವೀರ್ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿದ್ದು, ಭಾರತೀಯ AI ಮಾದರಿಯ ಬಗ್ಗೆ ಮಾತನಾಡಿರುವುದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿರುವ ರಣವೀರ್ ಸಚದೇವ್, “ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಾನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ ಭಾಗವಹಿಸಲು ಬಂದಿದ್ದೇನೆ. ಪ್ರಾಚೀನ ಭಾರತೀಯ ತತ್ವಶಾಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ಹೇಗೆ ಲಿಂಕ್ ಮಾಡಬಹುದು ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ಉಳಿದ ರಾಷ್ಟ್ರಗಳು AI ಅನ್ನು ಹೇಗೆ ನಿರ್ಮಿಸುತ್ತಿವೆ ಎಂಬುದರ ಕುರಿತು ಕೂಡ ನಾನು ಮಾತನಾಡಿದ್ದೇನೆ. ನಾನು ಇದೀಗ ಬಿಡುಗಡೆಯಾದ ಭಾರತೀಯ AI ಮಾದರಿಯ ನನ್ನ ಸ್ವಂತ ಬಳಕೆಯ ಕೇಸನ್ನು ಕೂಡ ಹಂಚಿಕೊಂಡಿದ್ದೇನೆ. ನಾನು ಭಾರತದ GDPಗೆ ಹೇಗೆ ಕೊಡುಗೆ ನೀಡುತ್ತಿದ್ದೇನೆ ಮತ್ತು ಅದರೊಂದಿಗೆ AI ಸಾಕ್ಷರತೆಯನ್ನು ಹೇಗೆ ಹೆಚ್ಚಿಸುತ್ತಿದ್ದೇನೆ ಎಂಬುದರ ಮಾಹಿತಿಯನ್ನು ಹಂಚಿಕೊಂಡಿದ್ದೇನೆ” ಎಂದು ವಿವರಿಸಿದ್ದಾನೆ.

ಇದನ್ನೂ ಓದಿ: Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು?

ಅಂದಹಾಗೆ, ರಣವೀರ್ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. 2025ರಲ್ಲಿ ಸ್ವಿಜರ್ಲೆಂಡ್‌ನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ AI ಫಾರ್ ಗುಡ್ ಗ್ಲೋಬಲ್ ಶೃಂಗಸಭೆಯಲ್ಲಿ ಆತನನ್ನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಆಗ ಆತನಿಗೆ ಕೇವಲ 7 ವರ್ಷವಾಗಿತ್ತು.

ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಸಹ, ರಣವೀರ್ ಸಚ್​ದೇವ್ 180ಕ್ಕೂ ಹೆಚ್ಚು ದೇಶಗಳು, 53 ವಿಶ್ವಸಂಸ್ಥೆಯ ಪಾಲುದಾರ ಸಂಸ್ಥೆಗಳು ಮತ್ತು ಜಾಗತಿಕ AI ನಾಯಕರನ್ನು ವಿಶ್ವಾಸದಿಂದ ಉದ್ದೇಶಿಸಿ ಮಾತನಾಡಿದ್ದು ವಿಶೇಷವಾಗಿತ್ತು. “ಬದಲಾವಣೆಯ ಏಜೆಂಟ್‌ಗಳು: ಜನರೇಷನ್ AI ಫಾರ್ ಗುಡ್” ಎಂಬ ವಿಷಯ ಕುರಿತು ರಣವೀರ್ 20 ನಿಮಿಷಗಳ ಕಾಲ ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದ್ದು, ಮೆಚ್ಚುಗೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: AI Professional Courses: AI ಕೌಶಲ್ಯ ಹೆಚ್ಚಿಸಲು ಗೂಗಲ್​​ನಿಂದ ಹೊಸ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ

ರಣವೀರ್ ಆಪಲ್ ಸಿಇಒ ಟಿಮ್ ಕುಕ್ ನಡೆಸಿದ ಅಧಿವೇಶನದಲ್ಲಿ ಅವರನ್ನು ಭೇಟಿಯಾಗಿದ್ದ. ಅಲ್ಲಿ ಆತನನ್ನು ನೋಡಿ ಕುಕ್ ಬಹಳ ಪ್ರಭಾವಿತರಾಗಿದ್ದರು. ಆಪಲ್ ಸಿಇಒ ಕ್ಯುಪರ್ಟಿನೊದಲ್ಲಿರುವ ಆಪಲ್ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ವರ್ಲ್ಡ್‌ವೈಡ್ ಡೆವಲಪರ್ ಕಾನ್ಫರೆನ್ಸ್ 2023ರಲ್ಲಿ ಭಾಗವಹಿಸಲು ರಣವೀರ್​​ಗೆ ವೈಯಕ್ತಿಕ ಆಹ್ವಾನವನ್ನು ನೀಡಿದ್ದರು ಎಂಬುದು ವಿಶೇಷ.

ರಣವೀರ್​​ನ ಹೆಸರನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆತ ಏಷ್ಯಾದ ಅತ್ಯಂತ ಕಿರಿಯ TEDx ಭಾಷಣಕಾರ. AI ಫಾರ್ ಗುಡ್ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ರಣವೀರ್ ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಯಂತ್ರ ಕಲಿಕೆ ಕೋರ್ಸ್ ಮಾಡುತ್ತಿದ್ದಾನೆ. ಆತ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ITU160 ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ರಣವೀರ್ “ಆರ್​ ಯು ಬಾರ್ನ್ ವಿಥ್ AI?” ಎಂಬ ಪುಸ್ತಕ ಕೂಡ ಬರೆದಿದ್ದಾನೆ. ಇದು ವಿಶ್ವಾದ್ಯಂತ Amazonನಲ್ಲಿ ಲಭ್ಯವಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಪುಸ್ತಕಕ್ಕಾಗಿ ರಣವೀರ್​ನನ್ನು ವೈಯಕ್ತಿಕವಾಗಿ ಅಭಿನಂದಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ: ಬೈಕ್ ಅಡ್ಡಗಟ್ಟಿ ದಲಿತ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ – Kannada News | Moral policing In Chikkamagaluru: Muslim Youths Assaults On Christian Boy, case Book

ಚಿಕ್ಕಮಗಳೂರು, (ಫೆಬ್ರವರಿ 19): ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ನೈತಿಕ ಪೊಲೀಸ್ ಗಿರಿ (Moral Policing) ನಡೆದಿರುವುದು ಬೆಳಕಿಗೆ ಬಂದಿದೆ. ದಲಿತ ಕ್ರಿಶ್ಚಿಯನ್ ಬಾಲಕನೋರ್ವ, ಮುಸ್ಲಿಂ ಯುವತಿಯೊಂದಿಗೆ ಬೈಕ್​​ನಲ್ಲಿ ತೆರಳುತ್ತಿದ್ದಾಗ ಗುಂಪೋಂದು ಅಡ್ಡಗಟ್ಟಿದೆ. ತಮ್ಮ ಸಮುದಾಯದ ಯುವತಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಕ್ಕೆ ಮುಸ್ಲಿಂ ಯುವಕರ ತಂಡ ಬೈಕ್ ಅಡ್ಡಗಟ್ಟಿ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ ಮಾಡಿದೆ. ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ 8 ಯುವಕರ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಅಪ್ರಾಪ್ತ ಕ್ರಿಶ್ಚಿಯನ್ ಬಾಲಕ, ಮುಸ್ಲಿಂ ಯುವತಿಯನ್ನು ಬೈಕ್​​ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ. ಬಳಿಕ ಕ್ರಿಶ್ಚಿಯನ್ ಬಾಲಕ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ  ಅಪ್ರಾಪ್ತ ಬಾಲಕನ ಸಹೋದರ ನೀಡಿದ ದೂರಿನನ್ವಯ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಹೇಳಿದ್ದಿಷ್ಟು

ಇನ್ನು ಈ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಪ್ರತಿಕ್ರಿಯಿಸಿದ್ದು, ಬಾಲಕ‌,ಬಾಲಕಿ ಅಪ್ರಾಪ್ತರು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಅಡ್ಡ ಹಾಕಿ ಬೆದರಿಕೆ ಹಾಕಿದ್ದಾರೆ. ಇದು ಮೇಲ್ನೋಟಕ್ಕೆ ನೈತಿಕ ಪೊಲೀಸ್ ಗಿರಿ ಎನ್ನುವುದು ಕಂಡು ಬರುತ್ತಿದೆ. ಇಬ್ಬರು ಯುವಕರು ಬಂದು ಬೈಕ್ ಅಡ್ಡ ಹಾಕಿದ್ದಾರೆ. ಇನ್ನೂ ಕೆಲವರು ಬೆದರಿಕೆ ಹಾಕಿದ್ದಾರೆ. ಅಪ್ರಾಪ್ತ ಬಾಲಕನ‌ ಮನೆಗೆ ತೆರಳಿ ಕೆಲವರು ಹಲ್ಲೆ ಮಾಡಲು ‌ಯತ್ನಿಸಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಇಬ್ಬರನ್ನ ಬಂಧನ ಮಾಡಲಾಗಿದ್ದು, ರಾತ್ರಿ, ಹಗಲು ಎರಡು ಪಾಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಂಜಾನ್ ಇರುವುದರಿಂದ ಸಂಪೂರ್ಣ ಭದ್ರತೆ ಮಾಡಲಾಗಿದೆ. ಯಾವುದೇ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂದರು.

ಇದನ್ನೂ ಓದಿ: ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ

60ಕ್ಕೂ ಹೆಚ್ಚು ಜನ ಬಂದಿದ್ರು ಎಂದ ಯುವಕನ ತಾಯಿ

ಈ ಬಗ್ಗೆ ಯುವಕನ ತಾಯಿ ಪಲ್ಲವಿ ಮಾತನಾಡಿದ್ದು, ಹುಡುಗಿ ಯಾವಾಗಲೂ ನನ್ನ ಮನೆಗೆ ಬರುತ್ತಾಳೆ. ನನಗೆ ಹುಷಾರಿಲ್ಲ ಮನೆಗೆ ಬಿಡು ಎಂದಿದ್ದಾಳೆ.ಆ ಹುಡುಗಿ ನನ್ನ ಅಮ್ಮ ಎಂದು ಕರೆಯುತ್ತಾಳೆ. ಮನೆಗೆ ಬಿಡಲು ಹೋಗುತ್ತಿದ್ದಾಗ ಜ್ಯೋತಿ ಟಾಕೀಸ್ ಬಳಿ 39ಕ್ಕೂ ಹೆಚ್ಚು ಜನರು ಅಡ್ಡ ಹಾಕಿದ್ದಾರೆ. ಮನೆಯ ಬಳಿ ಬನ್ನಿ ಮಾತನಾಡೋಣ ಎಂದು ಕರೆದುಕೊಂಡು ಹೋದೆ. ಆದ್ರೆ, ಮನೆಯ ಬಳಿ 60ಕ್ಕೂ ಹೆಚ್ಚು ಜನ ಬಂದಿದ್ದರು. ಕೆಲವರು ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಅನಂತರ ನಾವು ಪೊಲೀಸ್ ಠಾಣೆಗೆ ಬಂದ್ವಿ. ಎಲ್ಲರೂ ಹಲ್ಲೆ ಮಾಡಿಲ್ಲ‌ ಇಬ್ಬರು ಮಾತ್ರ ಹಲ್ಲೆ ಮಾಡಿದ್ದಾರೆ. ನಮ್ಮ‌ ಹುಡುಗ ಮತ್ತು ಹುಡುಗಿಯದ್ದು ಯಾವುದೇ ತಪ್ಪಿಲ್ಲ. ಇವನು ಹಿಂದೂ ಅವಳು ಮುಸ್ಲಿಂ ‌ಎಂದು ಈ‌ ರೀತಿಯಲ್ಲಿ ಮಾಡಿದ್ದಾರೆ. ಹೇಗೆ ಕರೆದುಕೊಂಡು ಬಂದ್ರಿ ಎಂದು ನನ್ನ ಮುಂದೆ ಪ್ರಶ್ನೆ ಮಾಡಿದ್ರು. ನಮ್ಮ ಮತ್ತು ಹುಡುಗಿಯ ನಡುವೆ ಏನು ಇಲ್ಲ. ಮಧ್ಯದಲ್ಲಿ ಇದ್ದವರು ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.

ಮುಸ್ಲಿಂ ಮುಖಂಡ ಅಲಿ ಹೇಳಿದ್ದೇನು?

ಮೂರು ಜನ ಯಾರೋ‌ ತಪ್ಪು ಮಾಡಿದ್ದಾರೆ. ಯಾರೂ ತಪ್ಪು ಮಾಡಿಲ್ಲ ಅಂತಾ ಏನಿಲ್ಲ. ಏರಿಯಾದಲ್ಲೊ ಯಾರೋ‌ ಮನೆಗೆ ನುಗ್ಗಿದ್ದಾರೆಂದು ಬಿಡಿಸಲು ಹೋಗಿದ್ದಾರೆ.ಆವಮ್ಮ ಬಾರಪ್ಪ ಮನೆಯಲ್ಲಿ ಸೆಟಲ್ಮೆಂಟ್ ಮಾಡೋಣ ಅಂತಾ ಕರೆದುಕೊಂಡು ಹೋಗಿದ್ದಾರೆ. ಕರೆದುಕೊಂಡು ಹೋಗಿ ನಮಗೆ ಹೊಡೆಯೋಕೆ ಬಂದಿದ್ರು ಎಂದು ಕೇಸ್ ಮಾಡಿದ್ದಾರೆ. ಯಾಕೆ ಇವನ ಜೊತೆಯಲ್ಲಿ ಹೋಗುತ್ತಿದ್ದೀಯಾ ಅಂತ ಹಿಡಿದಿದ್ದಾರೆ. ಮಾರ್ಕೆಟ್ ರೋಡ್ ನಲ್ಲಿ ಹೋಗುತ್ತಿದ್ದಾಗ ಹಿಡಿದು ಕೇಳಿದ್ದಾರೆ ಅಷ್ಟೇ. ಎಲ್ಲಾದರೂ ಓಡಾಡ್ಲಿ ಅವರಿನ್ನು 7th ಓದುತ್ತಿದ್ದಾರಂತೆ. ಇವರು ಹೊಡೆಯುವುದಕ್ಕೆ ಹೋಗಿಲ್ಲ. ಮನೆಯಲ್ಲಿ ಸೆಟ್ಲ್ಮೆಂಟ್ ಮಾಡೋಣ ಅಂತ ಕರೆದುಕೊಂಡು ಹೋಗಿ ಇಲ್ಲಿ ಬಂದು ಎಲ್ಲರ ಮೇಲೂ ಕೇಸ್ ಫಿಟ್ ಮಾಡಿದ್ದಾರೆ. ನಾಲ್ಕು ಜನರನ್ನು ಮನೆಗೆ ಕರೆದುಕೊಂಡು ಹೋಗಿ ಓಡಿಯೋಕೆ ಬಂದಿದ್ರು ಅಂತ ಕೇಸ್ ಕೊಟ್ಟಿದ್ದಾರೆ ಹೀಗೆ ಮಾಡಬಹುದಾ? ಮಾರ್ಕೆಟ್ ರೋಡ್ ನಲ್ಲಿ ಹೋಗುತ್ತಿದ್ದಾಗ ಹಿಡಿದು ಕೇಳಿದ್ದಾರೆ ಅಷ್ಟೇ. ಇವರನ್ನು ಮನೆಗೆ ಕರೆದುಕೊಂಡು ಹೋಗುವ ಬದಲು ಸ್ಟೇಷನ್ ಗೆ ಕರೆದುಕೊಂಡು ಬರಬಹುದು ಅಲ್ವಾ? ಮನೆಗೆ ಕರೆದುಕೊಂಡು ಹೋಗಿ ಮುಸ್ಲಿಂ ಹುಡುಗರು ಈ ರೀತಿ ಮಾಡಿದ್ದಾರೆ ಅಂದ್ರೆ ಅದು ತಪ್ಪಲ್ವಾ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ – Kannada News | Rashmika Mandanna did not invite Kirik Party actor Pramod Shetty to her wedding with Vijay Deverakonda

‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಆಗಿದ್ದರು. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕೂಡ ಕೆಲಸ ಮಾಡಿದ್ದಾರೆ. ಈಗ ಒಟ್ಟಾರೆ ಶೆಟ್ಟಿ ಗ್ಯಾಂಗ್​​ನಿಂದ ರಶ್ಮಿಕಾ ಮಂದಣ್ಣ ಅವರು ದೂರ ಉಳಿದುಕೊಂಡಿದ್ದಾರೆ. ಈಗ ಅವರು ವಿಜಯ್ ದೇವರಕೊಂಡ (Vijay Deverakonda) ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ. ಆದರೆ ಶೆಟ್ಟಿ ಗ್ಯಾಂಗ್ ಸದಸ್ಯರಿಗೆ ಮದುವೆಯ ಆಹ್ವಾನ ಬಂದಿಲ್ಲ. ತಮಗೆ ಆಹ್ವಾನ ಬಂದಿಲ್ಲ, ಬರೋದೂ ಇಲ್ಲ ಎಂದು ಪ್ರಮೋದ್ ಶೆಟ್ಟಿ (Pramod Shetty) ಅವರು ಹೇಳಿದ್ದಾರೆ. ಯಾಕೆ ಅಂತ ಕೇಳಿದ್ದರೆ, ‘ಅದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ. ಒಂದು ವೇಳೆ ಆಹ್ವಾನ ಬಂದರೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಆ ಬಗ್ಗೆ ಪೂರ್ತಿ ಮಾಹಿತಿ ಈ ವಿಡಿಯೋದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಎಂ ಪುತ್ರ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆಯೇ ಬ್ಲಾಕ್​​: ಕಾದುಕಾದು ಸುಸ್ತಾದ ಸವಾರರು – Kannada News | Mysuru: Road blocked to stop CM son yathindra siddaramaiah cutout; Triggers Public Anger

ಮೈಸೂರು, ಫೆಬ್ರವರಿ 19: ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆಯನ್ನೇ ಬ್ಲಾಕ್ ಮಾಡಿದ ಪ್ರಸಂಗವೊಂದು ಸಿಎಂ ಸ್ವಕ್ಷೇತ್ರ ವರುಣಾದಲ್ಲಿ ನಡೆದಿದೆ. ಮೈಸೂರು-ಟಿ ನರಸೀಪುರ ಮುಖ್ಯ ರಸ್ತೆಯ ಎಂಸಿ ಹುಂಡಿ ಬಳಿ ಸುಮಾರು 50 ಅಡಿ ಎತ್ತರದ ಕಟೌಟ್​ ಅನ್ನು ಕಾಂಗ್ರೆಸ್​ ಕಾರ್ಯಕರ್ತರು ನಿಲ್ಲಿಸುತ್ತಿದ್ದರು. ಈ ಹಿನ್ನೆಲೆ ರಸ್ತೆ ಬ್ಲಾಕ್​ ಮಾಡಲಾಗಿದೆ. ಸುಮಾರು 20 ನಿಮಿಷ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಈ ವೇಳೆ ಜನ ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಎಪ್ಸ್ಟೀನ್ ಪ್ರಕರಣದ ನಡುವೆ ಬ್ರಿಟನ್​​ನ ಮಾಜಿ ಪ್ರಿನ್ಸ್ ಆಂಡ್ರ್ಯೂ ಬಂಧನ – Kannada News | Epstein files row Former Prince Andrew Mountbatten Windsor arrested by UK Police on suspicion of misconduct

ಲಂಡನ್, ಫೆಬ್ರವರಿ 19: ಬ್ರಿಟಿಷ್ ರಾಜ ಚಾರ್ಲ್ಸ್ III ಅವರ ಸಹೋದರ ಮತ್ತು ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್ ಬ್ಯಾಟನ್-ವಿಂಡ್ಸರ್ ಅವರನ್ನು ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಅನುಮಾನದ ಮೇಲೆ ಬಂಧಿಸಲಾಗಿದೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ (Epstein files row) ಅವರೊಂದಿಗಿನ ಸಂಪರ್ಕಗಳ ತನಿಖೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ. ಮಾಜಿ ಯುಕೆ ರಾಜಕುಮಾರ 2010ರಲ್ಲಿ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರಿಗೆ ವ್ಯಾಪಾರ ವರದಿಗಳನ್ನು ಕಳುಹಿಸಿದ್ದಾರೆ ಎಂಬ ವರದಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಥೇಮ್ಸ್ ವ್ಯಾಲಿ ಪೊಲೀಸರು ತಿಳಿಸಿದ್ದಾರೆ.

“ತನಿಖೆಯ ಭಾಗವಾಗಿ ನಾವು ಇಂದು ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಅನುಮಾನದ ಮೇಲೆ ನಾರ್ಫೋಕ್‌ನಿಂದ 66 ವರ್ಷದ ಆ್ಯಂಡ್ರೂ ಮೌಂಟ್ ಬ್ಯಾಟನ್ ಅವರನ್ನು ಬಂಧಿಸಿದ್ದೇವೆ” ಎಂದು ಥೇಮ್ಸ್ ವ್ಯಾಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಔಪಚಾರಿಕವಾಗಿ ಮೂರ್ನಾಲ್ಕು ಬಾರಿ ಎಪ್ಸ್ಟೀನ್ ಭೇಟಿಯಾಗಿದ್ದೆ; ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಹರ್ದೀಪ್ ಪುರಿ ಸ್ಪಷ್ಟನೆ

ಕಳೆದ ವರ್ಷ ಪ್ರಿನ್ಸ್ ಎಂಬ ಬಿರುದನ್ನು ಕಳೆದುಕೊಂಡ ಮೌಂಟ್ ಬ್ಯಾಟನ್-ವಿಂಡ್ಸರ್, ಯುಕೆಯ ವಿಂಡ್ಸರ್‌ನಲ್ಲಿರುವ ತಮ್ಮ ಮನೆಯಿಂದ ನಾರ್ಫೋಕ್‌ನಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ಗೆ ಸ್ಥಳಾಂತರಗೊಂಡ ನಂತರ ಈ ಬಂಧನ ನಡೆದಿದೆ. ಕಿಂಗ್ ಚಾರ್ಲ್ಸ್ III ಅವರ ಕಿರಿಯ ಸಹೋದರ ವಿಂಡ್ಸರ್ ಎಸ್ಟೇಟ್‌ನಲ್ಲಿರುವ 30 ರೂಂಗಳ ರಾಯಲ್ ಲಾಡ್ಜ್‌ನಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದರು.

ಇದನ್ನೂ ಓದಿ: ಎಪ್ಸ್ಟೀನ್ ಫೈಲ್ಸ್ ಒಳಗೆ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು: ಏನಿದು ಕರ್ಮಕಾಂಡ?

2019ರಲ್ಲಿ ಅಪ್ರಾಪ್ತ ಬಾಲಕಿಯರ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ವಿಚಾರಣೆಗಾಗಿ ಕಾಯುತ್ತಿರುವಾಗ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಎಪ್ಸ್ಟೀನ್‌ಗೆ ಸಂಬಂಧಿಸಿದ ಮೂರು ಮಿಲಿಯನ್ ಪುಟಗಳ ದಾಖಲೆಗಳನ್ನು ಯುಎಸ್ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಸ್ವಲ್ಪ ಸಮಯದ ನಂತರ ಅವರು ರಾಯಲ್ ಲಾಡ್ಜ್‌ನಿಂದ ನಿರ್ಗಮಿಸಿದ್ದಾರೆ. ಈ ಹಿಂದೆ, ಮೌಂಟ್ ಬ್ಯಾಟನ್-ವಿಂಡ್ಸರ್ ವ್ಯಾಪಾರ ರಾಯಭಾರಿಯಾಗಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ತಮ್ಮ ಅಧಿಕೃತ ಕೆಲಸದಿಂದ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆಂದು ಬಿಬಿಸಿ ವರದಿ ಮಾಡಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version