ಅಪ್ರಾಪ್ತ ಮಕ್ಕಳ ಮೇಲೆ ಕಾಂಗ್ರೆಸ್ ಮುಖಂಡನ ಪೈಶಾಚಿಕ ಕೃತ್ಯ: ಕಬ್ಬಿಣದ ರಾಡ್‌ನಿಂದ ಏಟು; ಪೊಕ್ಸೋ ಅಡಿಯಲ್ಲಿ ಕೇಸ್! – Kannada News | Bengaluru Congress Leader Anand Naidu Booked Under POCSO for Assaulting Minors
ಬೆಂಗಳೂರು, ಏಪ್ರಿಲ್ 28: ರಾಜಧಾನಿಯಲ್ಲಿ ಕಾಂಗ್ರೆಸ್ (Congress) ಮುಖಂಡನೊಬ್ಬ ಅಕ್ರಮ ಸಂಬಂಧದ ವಿಚಾರವಾಗಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ಜಿಲ್ಲಾ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ಏನಿದು ಘಟನೆ? ದೂರುದಾರ ರಾಘವೇಂದ್ರ ಎಂಬುವವರ ಪತ್ನಿಯ ಜೊತೆ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಅಕ್ರಮ…