‘3 ಈಡೀಯಟ್ಸ್’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್; ಘೋಷಿಸಿದ ಆಮಿರ್ ಖಾನ್ – Kannada News | 3 Idiots Sequel Confirmed: Aamir Khan Announces Rajkumar Hirani to Direct

2009ರಲ್ಲಿ ಬಂದ ‘3 ಈಡಿಯಟ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಲಿವುಡ್​​ನಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಈಗಿನ ಕಾಲದಲ್ಲಿ ಈ ಚಿತ್ರ ತೆರೆಗೆ ಬಂದಿದ್ದರೆ ಸಿನಿಮಾ ಸುಮಾರು ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುತ್ತಿತ್ತೇನೋ. ಈಗ ಆಮಿರ್ ಖಾನ್ ಅವರು ‘3 ಈಡಿಯಟ್ಸ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದೆ ಎಂದಿದ್ದಾರೆ. ರಾಜ್​​ಕುಮಾರ್ ಹಿರಾನಿ ಅವರು ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ.

ರಾಜ್​​ಕುಮಾರ್ ಹಿರಾನಿಗೆ ಸಾಕಷ್ಟು ಮೈಲೇಜ್ ತಂದುಕೊಟ್ಟ ಚಿತ್ರ ಎಂದರೆ ಅದು ‘3 ಈಡಿಯಟ್ಸ್’ ಸಿನಿಮಾ. ಈ ಚಿತ್ರದಲ್ಲಿ ಆಮಿರ್ ಖಾನ್, ಆರ್​ ಮಾಧವನ್, ಶರ್ಮಣ್ ಜೋಶಿ, ಕರೀನಾ ಕಪೂರ್ ಮೊದಲಾದವರು ನಟಿಸಿದ್ದರು.ಈ ಸಿನಿಮಾ ರಿಲೀಸ್ ಆಗಿ 2 ದಶಕ ಪೂರೈಸುತ್ತಾ ಬಂದರೂ ಇದು ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂಬ ಚರ್ಚೆ ಸಾಕಷ್ಟು ಮೊದಲಿನಿಂದಲೂ ಇತ್ತು. ಈಗ ಅದು ನಿಜವಾಗಿದೆ.

ನಿರ್ದೇಶಕ ರಾಜ್​​ಕುಮಾರ್ ಹಿರಾನಿ ಹಾಗೂ ಬರಹಗಾರ ಅಭಿಜಾತ್ ಜೋಶಿ ಅವರು ‘3 ಈಡಿಯಟ್ಸ್’ ಸೀಕ್ವೆಲ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಬಾರಿಯೂ ಚಿತ್ರದ ಕಥೆ ಕಾಲೇಜ್​​ನಲ್ಲಿ ಸಾಗುತ್ತದೆಯೇ ಅಥವಾ ಬೇರೆ ವಿಷಯವನ್ನು ಹೇಳಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ದಾದಾ ಸಾಹೇಬ್ ಫಾಲ್ಕೆ’ ಮೇಲೂ ಆಮಿರ್ ಖಾನ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರೋ ಅವರು, ‘ದಾದಾ ಸಾಹೇಬ್ ಫಾಲ್ಕೆ ಚಿತ್ರ ಸಾಕಷ್ಟು ಸ್ಫೂರ್ತಿದಾಯಕ. ರಾಜು (ರಾಜ್​​ಕುಮಾರ್ ಹಿರಾನಿ) ಅವರು ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. 3 ಡ್ರಾಫ್ಟ್​​ಗಳನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಸ್ಕ್ರಿಪ್ಟ್ ಬಗ್ಗೆ ಖುಷಿ ಇಲ್ಲ. ಮುಂದಿನ ದಿನಗಳಲ್ಲಿ ಪುನಃ ಬರೆಯಬಹುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?

ರಾಜ್‌ಕುಮಾರ್ ಹಿರಾನಿ ಪ್ರಸ್ತುತ ‘3 ಈಡಿಯಟ್ಸ್’ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಆಮಿರ್ ಹೇಳಿದ್ದಾರೆ. ‘ನಾನು ಕಥೆಯನ್ನು ಕೇಳಿದ್ದೇನೆ ಮತ್ತು ಅದು ತುಂಬಾ ಚೆನ್ನಾಗಿ ಬಂದಿದೆ’ ಎಂದಿದ್ದಾರೆ ಆಮಿರ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಖಾಸಗಿ ಕಾಲೇಜು ಹಾಸ್ಟೆಲ್‌ನಲ್ಲಿ ಜಗಳ; ಸಹಾಯಕ ಪ್ರಾಧ್ಯಾಪಕಿಯಿಂದ ಜಾತಿ ಕಿರುಕುಳ ಆರೋಪ! – Kannada News | Bengaluru College Hostel Fight: Assistant Professor Alleges Caste Based Harassment

ಬೆಂಗಳೂರು, ಏಪ್ರಿಲ್ 28: ಕೆ.ಎಸ್. ಲೇಔಟ್‌ನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಕುಮಾರಿ ಮತ್ತು ಅವರ ರೂಮೇಟ್ ಪ್ರೀತಿ ಜೈನ್ ನಡುವೆ ಗಲಾಟೆ ನಡೆದಿದೆ. ಮಾರ್ಚ್‌ನಲ್ಲಿ ಹಾಸ್ಟೆಲ್ ಸೇರಿದ್ದ ಜ್ಯೋತಿ ಕುಮಾರಿಯವರಿಗೆ, ಪ್ರೀತಿ ಜೈನ್ ಜಾತಿ ಮತ್ತು ಆಹಾರ ಪದ್ಧತಿ ಆಧಾರದ ಮೇಲೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕಿರುಕುಳವು ಕೊನೆಗೆ ಹಲ್ಲೆಯಾಗಿ ಪರಿಣಮಿಸಿದೆ ಎಂದು ಜ್ಯೋತಿ ಕುಮಾರಿ ದೂರಿದ್ದಾರೆ. ಈ ಘಟನೆ ಬಗ್ಗೆ ಜ್ಯೋತಿ ಕುಮಾರಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜ್ಯೋತಿ ಕುಮಾರಿ ಅವರು ತಮ್ಮ ದೂರಿನಲ್ಲಿ, ಪ್ರೀತಿ ಜೈನ್ ತಮ್ಮ ಜಾತಿಯ ಬಗ್ಗೆ ಪ್ರಶ್ನಿಸಿ, ನಂತರ ಈರುಳ್ಳಿ-ಬೆಳ್ಳುಳ್ಳಿ ಸೇವನೆಯ ಬಗ್ಗೆ ವಿಚಾರಿಸಿದ್ದರು ಎಂದು ತಿಳಿಸಿದ್ದಾರೆ. ಪ್ರೀತಿ ಜೈನ್ ಪದೇ ಪದೇ ಪ್ರಚೋದಿಸುತ್ತಿದ್ದರು ಎಂದು ಜ್ಯೋತಿ ಕುಮಾರಿ ಹೇಳಿದ್ದಾರೆ. ಮಾರ್ಚ್ 27ರಂದು ಪ್ರೀತಿ ಜೈನ್ ತಮ್ಮ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ಅತಿಯಾದ ಶಬ್ದದಲ್ಲಿ ಇಟ್ಟಿದ್ದಾಗಲೂ ಜಗಳ ಪ್ರಾರಂಭವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

೬ ಎಸೆತಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ RCB – Kannada News | IPL 2026: RCB Just Miss IPL’s Fastest Run Chase

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಕೂಡ ಕೇವಲ 6.3 ಓವರ್​ಗಳಲ್ಲಿ ಪಂದ್ಯ ಮುಗಿಸುವ ಮೂಲಕ. ಇದಾಗ್ಯೂ ಆರ್​ಸಿಬಿ ತಂಡಕ್ಕೆ ಐಪಿಎಲ್​ನ ಫಾಸ್ಟೆಸ್ಟ್ ಚೇಸಿಂಗ್ ದಾಖಲೆಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

Source link

ಟಿಬೆಟನ್ ನಿರಾಶ್ರಿತರ ‘ಹಸಿರು’ ಸಾಧನೆಗೆ ಮೋದಿ ಮೆಚ್ಚುಗೆ! ಎಕೊ‌ ನಳಂದ‌ ಅರಣ್ಯ ಸಂಸ್ಥಾಪಕರ ಹರ್ಷ – Kannada News | PM Modi Praises ‘Eco Nalanda’ Tibetan Private Forest in Mann Ki Baat: A 30 Year Journey of Greenery

ಕೊಡಗು, ಏಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಕೊಡಗಿನ ಗಡಿಯಂಚಿನ ಬೈಲುಕುಪ್ಪೆಯ ಟಿಬೆಟನ್ ಖಾಸಗಿ ಅರಣ್ಯವನ್ನು ಶ್ಲಾಘಿಸಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟನ್ ಕ್ಯಾಂಪ್‌ನಲ್ಲಿರುವ ‘ಎಕೋ ನಳಂದ’ ಅರಣ್ಯದ ಸಂಸ್ಥಾಪಕ ಕರ್ಮ ಸಮ್ತೆನ್ಲಿಂಗ್ಪ ರಿನ್ಪೊಚೆ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ 30 ವರ್ಷಗಳಿಂದ ಶ್ರಮವಹಿಸಿ 100 ಎಕರೆ ಬರಡು ಭೂಮಿಯನ್ನು ದಟ್ಟ ಅರಣ್ಯವನ್ನಾಗಿ ಪರಿವರ್ತಿಸಿರುವ ಇವರು, ವಿಶ್ವದ ವಿವಿಧ ಭಾಗಗಳ ಔಷಧೀಯ ಗಿಡಗಳನ್ನು ಇಲ್ಲಿ ಬೆಳೆಸಿದ್ದಾರೆ. ನಮಗೆ ಆಶ್ರಯ ನೀಡಿದ ಭಾರತಕ್ಕೆ ನಾವು ನೀಡುತ್ತಿರುವ ಕಾಣಿಕೆ ಇದು ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ. ನೂರಾರು ಪಕ್ಷಿ-ಸಂಕುಲಗಳಿಗೆ ಆಶ್ರಯತಾಣವಾಗಿರುವ ಈ ಅರಣ್ಯದಿಂದಾಗಿ ಸ್ಥಳೀಯ ವಾತಾವರಣವೂ ತಂಪಾಗಿದೆ. ಪ್ರಧಾನಿಯವರ ಮಾತು ನಮಗೆ ಇನ್ನಷ್ಟು ಸ್ಫೂರ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಮ್ ಬದಲಾಯಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ – Kannada News | Telangana: Fuel Shortage Sparks Unique Offer, Free Petrol for SIM Switch Draws Crowds

ಆದಿಲಾಬಾದ್, ಏಪ್ರಿಲ್ 28: ಆದಿಲಾಬಾದ್​​ನಿಂದ ಚಿತ್ತೂರಿನವರೆಗೆ ಯಾವ ಪೆಟ್ರೋಲ್ ಬಂಕ್​ನಲ್ಲಿ ನೋಡಿದ್ರೂ ನೋ ಸ್ಟಾಕ್ ನೋರ್ಡ್​ಗಳದ್ದೇ ಕಾರುಬಾರು. ಬಂಕ್‌ಗಳ ಮುಂದೆ ಕಿಲೋಮೀಟರ್ ಉದ್ದದ ಸರತಿ ಸಾಲು, ಒಂದು ಲೀಟರ್ ಪೆಟ್ರೋಲ್ ಸಿಕ್ಕರೆ ಸಾಕು ಅನ್ನೋ ಮನಸ್ಥಿತಿ. ಈ ಹೊತ್ತಿನಲ್ಲಿ, ಉದ್ಯಮಿಯೊಬ್ಬರ ಬುದ್ಧಿವಂತ ಕಲ್ಪನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಖಮ್ಮಂ ಮತ್ತು ಭದ್ರದ್ರಿ ಕೊಥಗುಡೆಮ್ ಜಿಲ್ಲೆಗಳಲ್ಲಿ ಇಂಧನ ಕೊರತೆ ತೀವ್ರವಾಗಿರುವ ಬೆನ್ನಲ್ಲೇ, ಏರ್‌ಟೆಲ್ ವಿತರಕ ರೆಲ್ಲಾ ಸತೀಶ್ ಎಂಬುವವರು ಘೋಷಿಸಿದ ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ದಮ್ಮಪೇಟ ಮಂಡಲ ಕೇಂದ್ರದಲ್ಲಿ ತಮ್ಮ ಹೊಸ ಅಂಗಡಿಯ ಉದ್ಘಾಟನೆಯ ಸಮಯದಲ್ಲಿ ಬಂಪರ್ ಆಫರ್ ಘೋಷಿಸಿದ್ದಾರೆ. ಯಾರ್ಯಾರು ಏರ್​ಟೆಲ್​ ಸಿಮ್​ಗೆ ತಮ್ಮ ಸಿಮ್ ಬದಲಾಯಿಸಿ, ಯಾರು ತಮ್ಮ ಸಿಮ್ ಅನ್ನು ಯಾವುದೇ ನೆಟ್‌ವರ್ಕ್‌ನಿಂದ ಏರ್‌ಟೆಲ್‌ಗೆ ಬದಲಾಯಿಸಿಕೊಳ್ಳುತ್ತಾರೋ (MNP), ಅವರಿಗೆ ಒಂದು ಲೀಟರ್ ಪೆಟ್ರೋಲ್ ಉಚಿತ ಎಂದು ಹೇಳಿದ್ದು, ಜನರು ಪೆಟ್ರೋಲ್ ಬಂಕ್​ ಎದುರಲ್ಲ, ಏರ್​ಟೆಲ್ ಅಂಗಡಿ ಎದುರು ಕ್ಯೂ ನಿಂತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು! – Kannada News | Afzalpur Family Dispute: Husband Kills Wife, Dies by Suicide; Child Saved from Well

ಕಲಬುರಗಿ, ಏ.28: ಜಿಲ್ಲೆಯಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ಬಳಿ ಸಂಭವಿಸಿದ ಘೋರ ಕೃತ್ಯವೊಂದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹದ ಕಾರಣ ಪತಿ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ, ನಂತರ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಲಕ್ಷ್ಮೀಪುತ್ರ ಎಂಬಾತ ತನ್ನ 23 ವರ್ಷದ ಪತ್ನಿ ಅಂಜಲಿಯನ್ನು ಮನೆಯಲ್ಲೇ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹೆಂಡತಿಯನ್ನು ಕೊಂದ ನಂತರ, ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಲಕ್ಷ್ಮೀಪುತ್ರ ಮದರಾ (ಕೆ) ಗ್ರಾಮದ ಸಮೀಪದ ಬಾವಿಗೆ ಜಿಗಿದಿದ್ದಾನೆ.

ಲಕ್ಷ್ಮೀಪುತ್ರ ಮಗುವಿನೊಂದಿಗೆ ಬಾವಿಗೆ ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರು ಕೂಡಲೇ ಬಾವಿಗೆ ಜಿಗಿದು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಲಕ್ಷ್ಮೀಪುತ್ರ ಬಾವಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಮೇಲೆ ಕಾಂಗ್ರೆಸ್‌ ಮುಖಂಡನ ಪೈಶಾಚಿಕ ಕೃತ್ಯ: ಕಬ್ಬಿಣದ ರಾಡ್‌ನಿಂದ ಏಟು; ಪೊಕ್ಸೋ ಅಡಿಯಲ್ಲಿ ಕೇಸ್!

ಈ ಘಟನೆ ನಡೆದ ತಕ್ಷಣ ರೇವೂರು ಪೊಲೀಸರು ಮತ್ತು ಸೋಕೋ (SOCO) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಬಾವಿಯಿಂದ ಲಕ್ಷ್ಮೀಪುತ್ರನ ಶವವನ್ನು ಹೊರತೆಗೆಯಲಾಗಿದೆ. ಈ ಕುರಿತು ರೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮತ್ತು ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಮ್​​ ಇದ್ರೆ ಚುನಾವಣೆಗೆ ನಿಲ್ಲಲು ಹೇಳಿ: ಚೇತನ್​​ಗೆ ನಿಖಿಲ್ ಕುಮಾರಸ್ವಾಮಿ​​ ಓಪನ್​​ ಚಾಲೆಂಜ್​

ಮೈಸೂರು, ಏಪ್ರಿಲ್​​ 28: ತಮ್ಮ ಬಗ್ಗೆ ಮಾತನಾಡಿದ್ದ ನಟ ಚೇತನ್​​ ಅಹಿಂಸ ಬಗ್ಗೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್​​ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಧಮ್​​ ಇದ್ದರೆ ಬಂದು ಅವರಿಗೆ ಚುನಾವಣೆಗೆ ನಿಲ್ಲಲು ಹೇಳಿ. ಅವರಂತೆ ಮನೆಯಲ್ಲಿ ಕುಳಿತು ಟ್ವಿಟ್ಟರ್​​ನಲ್ಲಿ ನಾನೂ ಸಾವಿರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರನಟ ಡಾ. ರಾಜ್​​ಕುಮಾರ್​​ ಅವರ ಬಗ್ಗೆ ಚೇತನ್​​ ಮಾತನಾಡಿದ್ದನ್ನು ನಿಖಿಲ್​​ ಇತ್ತೀಚೆಗೆ ಖಂಡಿಸಿದ್ದರು. ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ ಎಂದು ದೂರಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಚೇತನ್ ಅಹಿಂಸ, ನಿಖಿಲ್ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Puja Tips: ಗಂಟೆಗಟ್ಟಲೆ ಪೂಜೆ ಮಾಡಿದ್ರೂ ಫಲ ಸಿಗುತ್ತಿಲ್ಲವೇ? ನೀವು ಮಾಡ್ತಿರೋ ಈ ತಪ್ಪುಗಳೇ ಅದಕ್ಕೆ ಕಾರಣ! – Kannada News | Unanswered Prayers? 9 Reasons Your Worship May Not Be Effective and How to Change It

ಅನೇಕ ಜನರು ಪ್ರತಿದಿನ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ, ಗಂಟೆಗಟ್ಟಲೆ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ, “ನನ್ನ ಜೀವನದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ, ದೇವರು ನನ್ನ ಪ್ರಾರ್ಥನೆ ಕೇಳುತ್ತಿಲ್ಲ” ಎಂಬ ಬೇಸರ ಅವರಲ್ಲಿ ಇರುತ್ತದೆ. ದೇವರಿಗೆ ಪೂಜೆ ಮಾಡುವುದು ಕೇವಲ ಒಂದು ಕ್ರಿಯೆಯಲ್ಲ, ಅದೊಂದು ಶಕ್ತಿ. ಆ ಶಕ್ತಿ ಲಭಿಸಬೇಕಾದರೆ ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ.

ಪೂಜೆ ಫಲಪ್ರದವಾಗುವುದನ್ನು ತಡೆಯುತ್ತಿರುವ ಆ 9 ಪ್ರಮುಖ ಕಾರಣಗಳು ಇಲ್ಲಿವೆ:

ಮನಸ್ಸಿನ ಏಕಾಗ್ರತೆಯ ಕೊರತೆ:

ದೀಪ ಹಚ್ಚುವಾಗ ಮನಸ್ಸು ಹಣದ ಸಮಸ್ಯೆ ಅಥವಾ ಆಫೀಸ್ ಕೆಲಸದ ಮೇಲೆ ಇರುತ್ತದೆ. ಮಂತ್ರ ಪಠಿಸುವಾಗ ಗಮನ ಫೋನ್ ನೋಟಿಫಿಕೇಶನ್ ಮೇಲಿರುತ್ತದೆ. ದೇಹ ದೇವಾಲಯದಲ್ಲಿದ್ದು, ಮನಸ್ಸು ಮನೆಯಲ್ಲಿದ್ದರೆ ಆ ಪೂಜೆ ದೇವರಿಗೆ ತಲುಪದು. ದೇವರಿಗೆ ಬೇಕಿರುವುದು ನಿಮ್ಮ ಸಮಯವಲ್ಲ, ನಿಮ್ಮ ನಿಷ್ಕಲ್ಮಶ ಮನಸ್ಸು.

ತ್ವರಿತ ಫಲಿತಾಂಶದ ನಿರೀಕ್ಷೆ:

ಇಂದು ಪೂಜೆ ಮಾಡಿ ನಾಳೆಯೇ ಪವಾಡ ಸಂಭವಿಸಲಿ ಎಂದು ಬಯಸುವುದು ಸರಿಯಲ್ಲ. ಬೀಜ ಬಿತ್ತಿದ ತಕ್ಷಣ ಮರವಾಗಿ ಹಣ್ಣು ಕೊಡುವುದಿಲ್ಲ, ಅದಕ್ಕೆ ತನ್ನದೇ ಆದ ಸಮಯ ಬೇಕು. ಭಕ್ತಿಯಲ್ಲಿ ತಾಳ್ಮೆ ಅತಿ ಮುಖ್ಯ. ನಂಬಿಕೆಯಿಂದ ಕಾಯುವುದೇ ನಿಜವಾದ ಪೂಜೆ.

ಅರ್ಧ ಜ್ಞಾನದಿಂದ ಪೂಜೆ ಮಾಡುವುದು:

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನೋಡಿಯೋ ಅಥವಾ ಯಾರೋ ಹೇಳಿದ್ದನ್ನು ಸರಿಯಾಗಿ ತಿಳಿಯದೆಯೋ ಪೂಜೆ ಮಾಡುವುದು ಹೆಚ್ಚಾಗಿದೆ. ಯಾವ ಮಂತ್ರವನ್ನು ಯಾವಾಗ ಹೇಳಬೇಕು, ಪೂಜಾ ವಿಧಿವಿಧಾನಗಳೇನು ಎಂಬ ಕನಿಷ್ಠ ಜ್ಞಾನವಿಲ್ಲದ ಪೂಜೆಯು ಗಮ್ಯಸ್ಥಾನವಿಲ್ಲದ ಪ್ರಯಾಣದಂತಾಗುತ್ತದೆ. ಪೂಜೆಯ ಹಿಂದಿನ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ತಿಳಿದು ಮಾಡುವುದು ಉತ್ತಮ.

ನಂಬಿಕೆಯ ಕೊರತೆ:

“ಈ ಪೂಜೆ ಮಾಡಿದರೆ ಕೆಲಸ ಆಗುತ್ತದೋ ಇಲ್ಲವೋ?” ಎಂಬ ಅನುಮಾನ ಮನಸ್ಸಿನಲ್ಲಿದ್ದರೆ, ಅಲ್ಲಿ ದೇವರ ಶಕ್ತಿ ಕೆಲಸ ಮಾಡುವುದಿಲ್ಲ. “ನಂಬಿದರೆ ಕಲ್ಲು ದೇವರು, ನಂಬದಿದ್ದರೆ ದೇವರು ಕಲ್ಲು”. ಪೂರ್ಣ ನಂಬಿಕೆಯಿಲ್ಲದ ಪೂಜೆ ಕೇವಲ ವ್ಯಾಯಾಮವಷ್ಟೇ.

ಪೂಜಾ ಕೋಣೆಯಲ್ಲಿ ಭಕ್ತಿ – ಹೊರಗೆ ಪಾಪ:

ಪೂಜಾ ಕೋಣೆಯಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಿ, ಹೊರಗೆ ಬಂದ ತಕ್ಷಣ ಇತರರಿಗೆ ಕೆಟ್ಟದ್ದನ್ನು ಬಯಸುವುದು, ಸುಳ್ಳು ಹೇಳುವುದು ಅಥವಾ ಕೋಪಗೊಳ್ಳುವುದು ಪೂಜೆಯ ಫಲವನ್ನು ಶೂನ್ಯವಾಗಿಸುತ್ತದೆ. ನಿಮ್ಮ ನಡವಳಿಕೆ ಬದಲಾಗದ ಹೊರತು ದೇವರ ಕೃಪೆ ಸಿಗುವುದು ಅಸಾಧ್ಯ.

ಪೂಜೆಯನ್ನು ಕೇವಲ ಅಭ್ಯಾಸ ಮಾಡಿಕೊಳ್ಳುವುದು:

ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಎರಡು ಅಗರಬತ್ತಿ ಹಚ್ಚುವುದು ಕೇವಲ ದೈನಂದಿನ ಕೆಲಸ (Routine) ಆಗಬಾರದು. ಅದು ಭಾವನೆಯಿಂದ ಕೂಡಿದ ಕ್ರಿಯೆಯಾಗಿರಬೇಕು. ಯಾವುದೇ ಭಾವನೆ ಅಥವಾ ಜೀವವಿಲ್ಲದ ಪೂಜೆ ಫಲ ನೀಡುವುದಿಲ್ಲ.

ಅಶುಚಿತ್ವ ಮತ್ತು ಅಸ್ತವ್ಯಸ್ತತೆ:

ಪೂಜಾ ಕೋಣೆಯು ಮನೆಯ ಅತ್ಯಂತ ಪವಿತ್ರ ಸ್ಥಳ. ಅಲ್ಲಿ ಧೂಳು, ಅಸ್ತವ್ಯಸ್ತತೆ ಅಥವಾ ಅಶುಚಿತ್ವವಿದ್ದರೆ ಸಕಾರಾತ್ಮಕ ಶಕ್ತಿಯು ಹರಿಯುವುದಿಲ್ಲ. ಸ್ವಚ್ಛತೆ ಇದ್ದಲ್ಲಿ ಮಾತ್ರ ದೈವಿಕ ಕಳೆ ನೆಲೆಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸ್ಥಿರತೆಯ ಕೊರತೆ:

ಹಬ್ಬ ಹರಿದಿನಗಳಲ್ಲಿ ಮಾತ್ರ ಅಬ್ಬರದ ಪೂಜೆ ಮಾಡಿ, ಉಳಿದ ದಿನಗಳಲ್ಲಿ ದೇವರನ್ನು ಮರೆಯುವುದು ಸರಿಯಲ್ಲ. ದೇವರ ಕೃಪೆ ಬೇಕೆಂದರೆ ಪೂಜೆಯಲ್ಲಿ ಸ್ಥಿರತೆ ಇರಬೇಕು. ಪ್ರತಿದಿನ ಸ್ವಲ್ಪ ಸಮಯವಾದರೂ ನಿಯಮಿತವಾಗಿ ದೇವರೆಡೆಗೆ ಮನಸ್ಸು ಮಾಡುವುದು ಅಗತ್ಯ.

ಭಯ ಅಥವಾ ಪ್ರದರ್ಶನಕ್ಕಾಗಿ ಪೂಜೆ:

“ಪೂಜೆ ಮಾಡದಿದ್ದರೆ ದೇವರು ಶಿಕ್ಷಿಸುತ್ತಾನೆ” ಎಂಬ ಭಯದಿಂದ ಅಥವಾ “ನಾನು ದೊಡ್ಡ ಭಕ್ತ” ಎಂದು ಇತರರಿಗೆ ತೋರಿಸಿಕೊಳ್ಳಲು ಪೂಜೆ ಮಾಡಬೇಡಿ. ದೇವರು ಬಯಸುವುದು ಭಯವಲ್ಲ, ಪ್ರೀತಿ. ಶುದ್ಧ ಪ್ರೀತಿಯಿಂದ ಮಾಡುವ ಚಿಕ್ಕ ನಮಸ್ಕಾರವೂ ಸಾವಿರ ಗಂಟೆಗಳ ಪೂಜೆಗಿಂತ ಮಿಗಿಲು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತ ಮಕ್ಕಳ ಮೇಲೆ ಕಾಂಗ್ರೆಸ್‌ ಮುಖಂಡನ ಪೈಶಾಚಿಕ ಕೃತ್ಯ: ಕಬ್ಬಿಣದ ರಾಡ್‌ನಿಂದ ಏಟು; ಪೊಕ್ಸೋ ಅಡಿಯಲ್ಲಿ ಕೇಸ್! – Kannada News | Bengaluru Congress Leader Anand Naidu Booked Under POCSO for Assaulting Minors

ಬೆಂಗಳೂರು, ಏಪ್ರಿಲ್ 28: ರಾಜಧಾನಿಯಲ್ಲಿ ಕಾಂಗ್ರೆಸ್‌ (Congress) ಮುಖಂಡನೊಬ್ಬ ಅಕ್ರಮ ಸಂಬಂಧದ ವಿಚಾರವಾಗಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ಜಿಲ್ಲಾ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ದೂರುದಾರ ರಾಘವೇಂದ್ರ ಎಂಬುವವರ ಪತ್ನಿಯ ಜೊತೆ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವನ್ನು ರಾಘವೇಂದ್ರ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆನಂದ್ ನಾಯ್ಡು, ರಾಘವೇಂದ್ರ ಅವರ ಅಪ್ರಾಪ್ತ ಮಕ್ಕಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕಬ್ಬಿಣದ ರಾಡ್‌ನಿಂದ ಮಕ್ಕಳ ಕಾಲು ಹಾಗೂ ಮೈಮೇಲೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಲ್ಲದೆ, ಮಕ್ಕಳಿಗೆ ಕಚ್ಚಿ ವಿಕೃತಿ ಮೆರೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್

ಆಸ್ತಿ ಲೂಟಿ ಆರೋಪ

ಮಕ್ಕಳ ಮೇಲಿನ ಹಲ್ಲೆ ಮಾತ್ರವಲ್ಲದೆ, ಪತಿ ರಾಘವೇಂದ್ರ ಅವರ ಒಪ್ಪಿಗೆ ಇಲ್ಲದೆಯೇ ಅವರ ಪತ್ನಿ ಮತ್ತು ಆನಂದ್ ನಾಯ್ಡು ಸೇರಿಕೊಂಡು ಆಸ್ತಿಯನ್ನು ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಕ್ರಮ ಸಂಬಂಧ ಮತ್ತು ಆಸ್ತಿ ಹಗರಣದ ಈ ಕರಾಳ ಮುಖ ಈಗ ಬೀದಿಗೆ ಬಂದಿದೆ. ಸದ್ಯ ಮಕ್ಕಳ ಹೇಳಿಕೆ ಹಾಗೂ ತಂದೆಯ ದೂರಿನ ಅನ್ವಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆನಂದ್ ನಾಯ್ಡು ವಿರುದ್ಧ ಪೊಕ್ಸೋ (POCSO) ಕಾಯ್ದೆ ಹಾಗೂ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಮುಖಂಡನ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:08 pm, Tue, 28 April 26

Source link

ಅಣ್ಣಾವ್ರ ಅಭಿಮಾನಿಗಳ ಬಳಿಕ ಜೆಡಿಎಸ್ ಕಾರ್ಯಕರ್ತರ ಎದುರು ಹಾಕಿಕೊಂಡ ಚೇತನ್ – Kannada News | Chetan Ahimsa criticized HD Kumaraswamy and Nikhil Kumaraswamy

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ (Chetan Ahimsa), ಇತ್ತೀಚೆಗೆ ಡಾ ರಾಜ್​ಕುಮಾರ್ ಅವರ ಸ್ಮಾರಕದ ಕುರಿತಾಗಿ ನೀಡಿರುವ ಹೇಳಿಕೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ. ಕನ್ನಡಪರ ಸಂಘಟನೆಗಳ ಎದುರು ಕ್ಷಮೆ ಕೇಳಿದರೂ ಆ ಬಳಿಕ ಮತ್ತೆ ತಮ್ಮದೇ ಮಾತಿಗೆ ಉಲ್ಟಾ ಹೊಡೆದು, ತಮ್ಮ ಹಿಂದಿನ ಹೇಳಿಕೆಗೆ ತಾವು ಬದ್ಧ ಎಂದಿದ್ದಾರೆ ಚೇತನ್. ಇದರಿಂದಾಗಿ ಅಣ್ಣಾವ್ರ ಅಭಿಮಾನಿಗಳು ಚೇತನ್ ವಿರುದ್ಧ ತೀವ್ರ ಆಕ್ರೋಶದಲ್ಲಿದ್ದಾರೆ. ಇದರ ನಡುವೆ ಚೇತನ್ ಅಹಿಂಸ ಎಚ್​​ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಟೀಕೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನೂ ಸಹ ಎದುರು ಹಾಕಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮಾಧ್ಯಮಗಳು ಚೇತನ್ ಅಹಿಂಸ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ‘ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ’ ಎಂದು ನಿಖಿಲ್ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚೇತನ್ ಅಹಿಂಸ, ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ‘ಯೋಗ್ಯ’? ಮಾಜಿ ಪ್ರಧಾನಿಯ ಮಗ, 2006ರಲ್ಲಿ ಅವಕಾಶವಾದಿ ‘ಸ್ಮಾರಕ ಪಾಲಿಟಿಕ್ಸ್’ ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆಸಂಬಂಧಪಟ್ಟ ‘ಫ್ಯಾನ್ ವಾರ್ಸ್’ ಪ್ರೇರೇಪಿಸಿದವರಾ? ಅಥವಾ ಅವರ ಮಗ, ಮೂರು ಬಾರಿ ಸೋತವರು ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ

ಈ ಪೋಸ್ಟ್ ಮೂಲಕ ಎಚ್​​ಡಿ ಕುಮಾರಸ್ವಾಮಿ ಅವರು ಸ್ಮಾರಕಕ್ಕೆ ಸ್ಥಳ ನೀಡಿದ್ದು ಅವರ ರಾಜಕೀಯದ ಭಾಗ ಎಂದು ಟೀಕೆ ಮಾಡಿರುವ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರು ಮೂರು ಚುನಾವಣೆಗಳಲ್ಲಿ ಸೋತಿರುವುದನ್ನು ಸಹ ಟೀಕೆ ಮಾಡಿದ್ದಾರೆ. ಚೇತನ್ ಅಹಿಂಸ ಅವರ ಪೋಸ್ಟ್​​ಗೆ ಜೆಡಿಎಸ್ ಕಾರ್ಯಕರ್ತರು, ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು ತೀವ್ರ ಟೀಕೆ ಮಾಡಿದ್ದಾರೆ.

ಅಣ್ಣಾವ್ರ ಜಯಂತಿಯಂದು ಫೇಸ್​​ಬುಕ್ ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್ ಅಹಿಂಸ, ಅಣ್ಣಾವ್ರ ಸ್ಮಾರಕಕ್ಕೆ ಜಾಗ ಕೊಟ್ಟಿದ್ದನ್ನು ಖಂಡಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇಂದು ಸಹ ಚೇತನ್ ವಿರುದ್ಧ ಫಿಲಂ ಚೇಂಬರ್ ಎದುರು ಪ್ರತಿಭಟನೆಗಳು ನಡೆದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version