Puja Tips: ಗಂಟೆಗಟ್ಟಲೆ ಪೂಜೆ ಮಾಡಿದ್ರೂ ಫಲ ಸಿಗುತ್ತಿಲ್ಲವೇ? ನೀವು ಮಾಡ್ತಿರೋ ಈ ತಪ್ಪುಗಳೇ ಅದಕ್ಕೆ ಕಾರಣ! – Kannada News | Unanswered Prayers? 9 Reasons Your Worship May Not Be Effective and How to Change It

ಅನೇಕ ಜನರು ಪ್ರತಿದಿನ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ, ಗಂಟೆಗಟ್ಟಲೆ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ, “ನನ್ನ ಜೀವನದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ, ದೇವರು ನನ್ನ ಪ್ರಾರ್ಥನೆ ಕೇಳುತ್ತಿಲ್ಲ” ಎಂಬ ಬೇಸರ ಅವರಲ್ಲಿ ಇರುತ್ತದೆ. ದೇವರಿಗೆ ಪೂಜೆ ಮಾಡುವುದು ಕೇವಲ ಒಂದು ಕ್ರಿಯೆಯಲ್ಲ, ಅದೊಂದು ಶಕ್ತಿ. ಆ ಶಕ್ತಿ ಲಭಿಸಬೇಕಾದರೆ ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗುತ್ತದೆ.

ಪೂಜೆ ಫಲಪ್ರದವಾಗುವುದನ್ನು ತಡೆಯುತ್ತಿರುವ ಆ 9 ಪ್ರಮುಖ ಕಾರಣಗಳು ಇಲ್ಲಿವೆ:

ಮನಸ್ಸಿನ ಏಕಾಗ್ರತೆಯ ಕೊರತೆ:

ದೀಪ ಹಚ್ಚುವಾಗ ಮನಸ್ಸು ಹಣದ ಸಮಸ್ಯೆ ಅಥವಾ ಆಫೀಸ್ ಕೆಲಸದ ಮೇಲೆ ಇರುತ್ತದೆ. ಮಂತ್ರ ಪಠಿಸುವಾಗ ಗಮನ ಫೋನ್ ನೋಟಿಫಿಕೇಶನ್ ಮೇಲಿರುತ್ತದೆ. ದೇಹ ದೇವಾಲಯದಲ್ಲಿದ್ದು, ಮನಸ್ಸು ಮನೆಯಲ್ಲಿದ್ದರೆ ಆ ಪೂಜೆ ದೇವರಿಗೆ ತಲುಪದು. ದೇವರಿಗೆ ಬೇಕಿರುವುದು ನಿಮ್ಮ ಸಮಯವಲ್ಲ, ನಿಮ್ಮ ನಿಷ್ಕಲ್ಮಶ ಮನಸ್ಸು.

ತ್ವರಿತ ಫಲಿತಾಂಶದ ನಿರೀಕ್ಷೆ:

ಇಂದು ಪೂಜೆ ಮಾಡಿ ನಾಳೆಯೇ ಪವಾಡ ಸಂಭವಿಸಲಿ ಎಂದು ಬಯಸುವುದು ಸರಿಯಲ್ಲ. ಬೀಜ ಬಿತ್ತಿದ ತಕ್ಷಣ ಮರವಾಗಿ ಹಣ್ಣು ಕೊಡುವುದಿಲ್ಲ, ಅದಕ್ಕೆ ತನ್ನದೇ ಆದ ಸಮಯ ಬೇಕು. ಭಕ್ತಿಯಲ್ಲಿ ತಾಳ್ಮೆ ಅತಿ ಮುಖ್ಯ. ನಂಬಿಕೆಯಿಂದ ಕಾಯುವುದೇ ನಿಜವಾದ ಪೂಜೆ.

ಅರ್ಧ ಜ್ಞಾನದಿಂದ ಪೂಜೆ ಮಾಡುವುದು:

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ನೋಡಿಯೋ ಅಥವಾ ಯಾರೋ ಹೇಳಿದ್ದನ್ನು ಸರಿಯಾಗಿ ತಿಳಿಯದೆಯೋ ಪೂಜೆ ಮಾಡುವುದು ಹೆಚ್ಚಾಗಿದೆ. ಯಾವ ಮಂತ್ರವನ್ನು ಯಾವಾಗ ಹೇಳಬೇಕು, ಪೂಜಾ ವಿಧಿವಿಧಾನಗಳೇನು ಎಂಬ ಕನಿಷ್ಠ ಜ್ಞಾನವಿಲ್ಲದ ಪೂಜೆಯು ಗಮ್ಯಸ್ಥಾನವಿಲ್ಲದ ಪ್ರಯಾಣದಂತಾಗುತ್ತದೆ. ಪೂಜೆಯ ಹಿಂದಿನ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ತಿಳಿದು ಮಾಡುವುದು ಉತ್ತಮ.

ನಂಬಿಕೆಯ ಕೊರತೆ:

“ಈ ಪೂಜೆ ಮಾಡಿದರೆ ಕೆಲಸ ಆಗುತ್ತದೋ ಇಲ್ಲವೋ?” ಎಂಬ ಅನುಮಾನ ಮನಸ್ಸಿನಲ್ಲಿದ್ದರೆ, ಅಲ್ಲಿ ದೇವರ ಶಕ್ತಿ ಕೆಲಸ ಮಾಡುವುದಿಲ್ಲ. “ನಂಬಿದರೆ ಕಲ್ಲು ದೇವರು, ನಂಬದಿದ್ದರೆ ದೇವರು ಕಲ್ಲು”. ಪೂರ್ಣ ನಂಬಿಕೆಯಿಲ್ಲದ ಪೂಜೆ ಕೇವಲ ವ್ಯಾಯಾಮವಷ್ಟೇ.

ಪೂಜಾ ಕೋಣೆಯಲ್ಲಿ ಭಕ್ತಿ – ಹೊರಗೆ ಪಾಪ:

ಪೂಜಾ ಕೋಣೆಯಲ್ಲಿ ಕಣ್ಣು ಮುಚ್ಚಿ ಪ್ರಾರ್ಥಿಸಿ, ಹೊರಗೆ ಬಂದ ತಕ್ಷಣ ಇತರರಿಗೆ ಕೆಟ್ಟದ್ದನ್ನು ಬಯಸುವುದು, ಸುಳ್ಳು ಹೇಳುವುದು ಅಥವಾ ಕೋಪಗೊಳ್ಳುವುದು ಪೂಜೆಯ ಫಲವನ್ನು ಶೂನ್ಯವಾಗಿಸುತ್ತದೆ. ನಿಮ್ಮ ನಡವಳಿಕೆ ಬದಲಾಗದ ಹೊರತು ದೇವರ ಕೃಪೆ ಸಿಗುವುದು ಅಸಾಧ್ಯ.

ಪೂಜೆಯನ್ನು ಕೇವಲ ಅಭ್ಯಾಸ ಮಾಡಿಕೊಳ್ಳುವುದು:

ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಎರಡು ಅಗರಬತ್ತಿ ಹಚ್ಚುವುದು ಕೇವಲ ದೈನಂದಿನ ಕೆಲಸ (Routine) ಆಗಬಾರದು. ಅದು ಭಾವನೆಯಿಂದ ಕೂಡಿದ ಕ್ರಿಯೆಯಾಗಿರಬೇಕು. ಯಾವುದೇ ಭಾವನೆ ಅಥವಾ ಜೀವವಿಲ್ಲದ ಪೂಜೆ ಫಲ ನೀಡುವುದಿಲ್ಲ.

ಅಶುಚಿತ್ವ ಮತ್ತು ಅಸ್ತವ್ಯಸ್ತತೆ:

ಪೂಜಾ ಕೋಣೆಯು ಮನೆಯ ಅತ್ಯಂತ ಪವಿತ್ರ ಸ್ಥಳ. ಅಲ್ಲಿ ಧೂಳು, ಅಸ್ತವ್ಯಸ್ತತೆ ಅಥವಾ ಅಶುಚಿತ್ವವಿದ್ದರೆ ಸಕಾರಾತ್ಮಕ ಶಕ್ತಿಯು ಹರಿಯುವುದಿಲ್ಲ. ಸ್ವಚ್ಛತೆ ಇದ್ದಲ್ಲಿ ಮಾತ್ರ ದೈವಿಕ ಕಳೆ ನೆಲೆಸುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸ್ಥಿರತೆಯ ಕೊರತೆ:

ಹಬ್ಬ ಹರಿದಿನಗಳಲ್ಲಿ ಮಾತ್ರ ಅಬ್ಬರದ ಪೂಜೆ ಮಾಡಿ, ಉಳಿದ ದಿನಗಳಲ್ಲಿ ದೇವರನ್ನು ಮರೆಯುವುದು ಸರಿಯಲ್ಲ. ದೇವರ ಕೃಪೆ ಬೇಕೆಂದರೆ ಪೂಜೆಯಲ್ಲಿ ಸ್ಥಿರತೆ ಇರಬೇಕು. ಪ್ರತಿದಿನ ಸ್ವಲ್ಪ ಸಮಯವಾದರೂ ನಿಯಮಿತವಾಗಿ ದೇವರೆಡೆಗೆ ಮನಸ್ಸು ಮಾಡುವುದು ಅಗತ್ಯ.

ಭಯ ಅಥವಾ ಪ್ರದರ್ಶನಕ್ಕಾಗಿ ಪೂಜೆ:

“ಪೂಜೆ ಮಾಡದಿದ್ದರೆ ದೇವರು ಶಿಕ್ಷಿಸುತ್ತಾನೆ” ಎಂಬ ಭಯದಿಂದ ಅಥವಾ “ನಾನು ದೊಡ್ಡ ಭಕ್ತ” ಎಂದು ಇತರರಿಗೆ ತೋರಿಸಿಕೊಳ್ಳಲು ಪೂಜೆ ಮಾಡಬೇಡಿ. ದೇವರು ಬಯಸುವುದು ಭಯವಲ್ಲ, ಪ್ರೀತಿ. ಶುದ್ಧ ಪ್ರೀತಿಯಿಂದ ಮಾಡುವ ಚಿಕ್ಕ ನಮಸ್ಕಾರವೂ ಸಾವಿರ ಗಂಟೆಗಳ ಪೂಜೆಗಿಂತ ಮಿಗಿಲು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತ ಮಕ್ಕಳ ಮೇಲೆ ಕಾಂಗ್ರೆಸ್‌ ಮುಖಂಡನ ಪೈಶಾಚಿಕ ಕೃತ್ಯ: ಕಬ್ಬಿಣದ ರಾಡ್‌ನಿಂದ ಏಟು; ಪೊಕ್ಸೋ ಅಡಿಯಲ್ಲಿ ಕೇಸ್! – Kannada News | Bengaluru Congress Leader Anand Naidu Booked Under POCSO for Assaulting Minors

ಬೆಂಗಳೂರು, ಏಪ್ರಿಲ್ 28: ರಾಜಧಾನಿಯಲ್ಲಿ ಕಾಂಗ್ರೆಸ್‌ (Congress) ಮುಖಂಡನೊಬ್ಬ ಅಕ್ರಮ ಸಂಬಂಧದ ವಿಚಾರವಾಗಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ಜಿಲ್ಲಾ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ದೂರುದಾರ ರಾಘವೇಂದ್ರ ಎಂಬುವವರ ಪತ್ನಿಯ ಜೊತೆ ಕಾಂಗ್ರೆಸ್ ಮುಖಂಡ ಆನಂದ್ ನಾಯ್ಡು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವನ್ನು ರಾಘವೇಂದ್ರ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆನಂದ್ ನಾಯ್ಡು, ರಾಘವೇಂದ್ರ ಅವರ ಅಪ್ರಾಪ್ತ ಮಕ್ಕಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಕಬ್ಬಿಣದ ರಾಡ್‌ನಿಂದ ಮಕ್ಕಳ ಕಾಲು ಹಾಗೂ ಮೈಮೇಲೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಲ್ಲದೆ, ಮಕ್ಕಳಿಗೆ ಕಚ್ಚಿ ವಿಕೃತಿ ಮೆರೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್

ಆಸ್ತಿ ಲೂಟಿ ಆರೋಪ

ಮಕ್ಕಳ ಮೇಲಿನ ಹಲ್ಲೆ ಮಾತ್ರವಲ್ಲದೆ, ಪತಿ ರಾಘವೇಂದ್ರ ಅವರ ಒಪ್ಪಿಗೆ ಇಲ್ಲದೆಯೇ ಅವರ ಪತ್ನಿ ಮತ್ತು ಆನಂದ್ ನಾಯ್ಡು ಸೇರಿಕೊಂಡು ಆಸ್ತಿಯನ್ನು ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಕ್ರಮ ಸಂಬಂಧ ಮತ್ತು ಆಸ್ತಿ ಹಗರಣದ ಈ ಕರಾಳ ಮುಖ ಈಗ ಬೀದಿಗೆ ಬಂದಿದೆ. ಸದ್ಯ ಮಕ್ಕಳ ಹೇಳಿಕೆ ಹಾಗೂ ತಂದೆಯ ದೂರಿನ ಅನ್ವಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆನಂದ್ ನಾಯ್ಡು ವಿರುದ್ಧ ಪೊಕ್ಸೋ (POCSO) ಕಾಯ್ದೆ ಹಾಗೂ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಮುಖಂಡನ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:08 pm, Tue, 28 April 26

Source link

ಅಣ್ಣಾವ್ರ ಅಭಿಮಾನಿಗಳ ಬಳಿಕ ಜೆಡಿಎಸ್ ಕಾರ್ಯಕರ್ತರ ಎದುರು ಹಾಕಿಕೊಂಡ ಚೇತನ್ – Kannada News | Chetan Ahimsa criticized HD Kumaraswamy and Nikhil Kumaraswamy

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ (Chetan Ahimsa), ಇತ್ತೀಚೆಗೆ ಡಾ ರಾಜ್​ಕುಮಾರ್ ಅವರ ಸ್ಮಾರಕದ ಕುರಿತಾಗಿ ನೀಡಿರುವ ಹೇಳಿಕೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ. ಕನ್ನಡಪರ ಸಂಘಟನೆಗಳ ಎದುರು ಕ್ಷಮೆ ಕೇಳಿದರೂ ಆ ಬಳಿಕ ಮತ್ತೆ ತಮ್ಮದೇ ಮಾತಿಗೆ ಉಲ್ಟಾ ಹೊಡೆದು, ತಮ್ಮ ಹಿಂದಿನ ಹೇಳಿಕೆಗೆ ತಾವು ಬದ್ಧ ಎಂದಿದ್ದಾರೆ ಚೇತನ್. ಇದರಿಂದಾಗಿ ಅಣ್ಣಾವ್ರ ಅಭಿಮಾನಿಗಳು ಚೇತನ್ ವಿರುದ್ಧ ತೀವ್ರ ಆಕ್ರೋಶದಲ್ಲಿದ್ದಾರೆ. ಇದರ ನಡುವೆ ಚೇತನ್ ಅಹಿಂಸ ಎಚ್​​ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿಯವರನ್ನು ಟೀಕೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನೂ ಸಹ ಎದುರು ಹಾಕಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮಾಧ್ಯಮಗಳು ಚೇತನ್ ಅಹಿಂಸ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ‘ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡಲು ನಟ ಚೇತನ್ ಅವರಿಗೆ ಯೋಗ್ಯತೆ ಇಲ್ಲ. ಅವರೊಬ್ಬ ಪ್ರಚಾರಪ್ರಿಯ’ ಎಂದು ನಿಖಿಲ್ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚೇತನ್ ಅಹಿಂಸ, ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ‘ಯೋಗ್ಯ’? ಮಾಜಿ ಪ್ರಧಾನಿಯ ಮಗ, 2006ರಲ್ಲಿ ಅವಕಾಶವಾದಿ ‘ಸ್ಮಾರಕ ಪಾಲಿಟಿಕ್ಸ್’ ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆಸಂಬಂಧಪಟ್ಟ ‘ಫ್ಯಾನ್ ವಾರ್ಸ್’ ಪ್ರೇರೇಪಿಸಿದವರಾ? ಅಥವಾ ಅವರ ಮಗ, ಮೂರು ಬಾರಿ ಸೋತವರು ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ

ಈ ಪೋಸ್ಟ್ ಮೂಲಕ ಎಚ್​​ಡಿ ಕುಮಾರಸ್ವಾಮಿ ಅವರು ಸ್ಮಾರಕಕ್ಕೆ ಸ್ಥಳ ನೀಡಿದ್ದು ಅವರ ರಾಜಕೀಯದ ಭಾಗ ಎಂದು ಟೀಕೆ ಮಾಡಿರುವ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರು ಮೂರು ಚುನಾವಣೆಗಳಲ್ಲಿ ಸೋತಿರುವುದನ್ನು ಸಹ ಟೀಕೆ ಮಾಡಿದ್ದಾರೆ. ಚೇತನ್ ಅಹಿಂಸ ಅವರ ಪೋಸ್ಟ್​​ಗೆ ಜೆಡಿಎಸ್ ಕಾರ್ಯಕರ್ತರು, ನಿಖಿಲ್ ಕುಮಾರಸ್ವಾಮಿ ಅವರ ಅಭಿಮಾನಿಗಳು ತೀವ್ರ ಟೀಕೆ ಮಾಡಿದ್ದಾರೆ.

ಅಣ್ಣಾವ್ರ ಜಯಂತಿಯಂದು ಫೇಸ್​​ಬುಕ್ ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್ ಅಹಿಂಸ, ಅಣ್ಣಾವ್ರ ಸ್ಮಾರಕಕ್ಕೆ ಜಾಗ ಕೊಟ್ಟಿದ್ದನ್ನು ಖಂಡಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇಂದು ಸಹ ಚೇತನ್ ವಿರುದ್ಧ ಫಿಲಂ ಚೇಂಬರ್ ಎದುರು ಪ್ರತಿಭಟನೆಗಳು ನಡೆದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉರಿಯುವ ಚಿತೆಗಳ ನಡುವೆ ನವ ಜೋಡಿಗಳ ಸಪ್ತಪದಿ, ಸ್ಮಶಾನದಲ್ಲೊಂದು ಮದುವೆ – Kannada News | Almora Cremation Ground Wedding: Couple Marries Amidst Pyres, Sparks Outrage

ಅಲ್ಮೋರಾ, ಏಪ್ರಿಲ್ 28: ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ನವ ಜೋಡಿಗಳು ತಮ್ಮ ಜೀವನ ಆರಂಭಿಸಿದ್ದು, ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇಬ್ಬರೂ ಸ್ಮಶಾನದಲ್ಲಿ ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದಿರುವ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ. ರಾಮಗಂಗಾ ಮತ್ತು ಬದನ್‌ಗಢ ನದಿಗಳ ಪವಿತ್ರ ಸಂಗಮ ಸ್ಥಳವದು. ದಶಕಗಳಿಂದಲೂ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಪ್ರೀತಿಪಾತ್ರರ ಅಂತ್ಯಕ್ರಿಯೆ ನೆರವೇರಿಸಿ ವಿದಾಯ ಹೇಳುವ ಸುಡುಗಾಡು. ಆದರೆ, ಕಳೆದ ಭಾನುವಾರ ಈ ಸ್ಮಶಾನವು ಯಾರಿಗೂ ಊಹಿಸಲೂ ಅಸಾಧ್ಯವಾದ ರೂಪದಲ್ಲಿ ಬದಲಾಗಿತ್ತು. ಎಲ್ಲಿ ಅಂತ್ಯಕ್ರಿಯೆಯ ಚಿತೆಗಳು ಉರಿಯಬೇಕಿತ್ತೋ, ಅಲ್ಲಿ ಅದ್ದೂರಿ ಮಂಟಪ, ಹೂವಿನ ಅಲಂಕಾರ, ಮದುವೆ(Marriage) ನಡೆದೇ ಹೋಗಿದೆ.

ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಈ ಸಂಗಮ ಸ್ಥಳವು ಅತ್ಯಂತ ರಮಣೀಯವಾಗಿದೆ. ಹತ್ತಿರದ ರೆಸಾರ್ಟ್‌ನಲ್ಲಿ ತಂಗಿದ್ದ ಪ್ರವಾಸಿಗರಿಗೆ ಈ ಸ್ಥಳದ ನೈಸರ್ಗಿಕ ಸೌಂದರ್ಯ ಅದೆಷ್ಟು ಇಷ್ಟವಾಯಿತೆಂದರೆ, ಅವರು ಲೌಕಿಕ ನಂಬಿಕೆಗಳನ್ನು ಗಾಳಿಗೆ ತೂರಿದರು. ರೆಸಾರ್ಟ್ ಮ್ಯಾನೇಜರ್ ರಾಕೇಶ್ ಶರ್ಮಾ ಅವರು, ಇದು ಸ್ಮಶಾನ, ಇಲ್ಲಿ ಶುಭ ಕಾರ್ಯ ಮಾಡುವುದು ಬೇಡ ಎಂದು ಎಚ್ಚರಿಸಿದ್ದರೂ ಸಹ, ಪ್ರವಾಸಿಗರು ಮಾತ್ರ ಮೊಂಡುತನದಿಂದ ಆ ಸ್ಥಳವನ್ನೇ ತಮ್ಮ ವಿವಾಹಕ್ಕೆ ಆರಿಸಿಕೊಂಡರು.

ನದಿ ದಂಡೆಯ ಸ್ಮಶಾನದಲ್ಲಿ ಚಪ್ಪರ ಹಾಕಿ, ವಿದ್ಯುತ್ ದೀಪಗಳಿಂದ ಅಲಂಕರಿಸಿ ಅದ್ದೂರಿಯಾಗಿ ಮದುವೆ ನೆರವೇರಿಸಲಾಯಿತು. ಈ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯರ ತಾಳ್ಮೆಯ ಕಟ್ಟೆ ಒಡೆಯಿತು. ಜೀವನದ ಅಂತ್ಯವನ್ನು ಕಾಣುವ ಪವಿತ್ರ ಘಾಟ್‌ನಲ್ಲಿ ಇಂತಹ ಅಟ್ಟಹಾಸ ನಡೆಯುವುದು ಬೆಟ್ಟದ ಸಂಸ್ಕೃತಿಗೆ (Pahari Culture) ಎಸಗಿದ ದ್ರೋಹ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿಗೆ ಮದುವೆ ಆಹ್ವಾನ ನೀಡಿದ ರಾಯಚೂರಿನ ಯುವಕನಿಗೆ ಸಿಕ್ತು ಗುಡ್ ನ್ಯೂಸ್!

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ್ ಸಿಂಗ್ ರಾವತ್ ಸೇರಿದಂತೆ ಅನೇಕ ಗಣ್ಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ನದಿ ತೀರದ ಚಿತಾಗಾರಗಳಲ್ಲಿ ಯಾವುದೇ ಶುಭ ಕಾರ್ಯ ಮಾಡುವುದು ಅಶುಭ ಮತ್ತು ನಿಷಿದ್ಧ. ಇದು ಕೇವಲ ಒಂದು ಮದುವೆಯಲ್ಲ, ನಮ್ಮ ನಂಬಿಕೆಗೆ ಮಾಡಿದ ಅವಮಾನ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ನದಿ ತೀರದಲ್ಲಿ ಇಷ್ಟೊಂದು ಗದ್ದಲದ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ್ದರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಆಡಳಿತ ಎಚ್ಚೆತ್ತುಕೊಂಡಿದೆ.  ತಹಶೀಲ್ದಾರ್ ಅಬಿದ್ ಅಲಿ ಅವರು ಪ್ರತಿಕ್ರಿಯಿಸಿ, ಯಾವುದೇ ಸಾರ್ವಜನಿಕ ಸ್ಥಳ ಅಥವಾ ಸ್ಮಶಾನದಲ್ಲಿ ಅನುಮತಿಯಿಲ್ಲದೆ ಖಾಸಗಿ ಕಾರ್ಯಕ್ರಮ ನಡೆಸುವುದು ಕಾನೂನುಬಾಹಿರ. ವೈರಲ್ ವೀಡಿಯೊ ಆಧರಿಸಿ ತನಿಖೆ ನಡೆಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸುಶಾಂತ್ ಸಿಂಗ್ ಪ್ರಕರಣ: ಆರು ವರ್ಷದ ಬಳಿಕ ರಿಯಾಗೆ ಸಿಕ್ತು ಹಣದ ಮೇಲೆ ಹಕ್ಕು – Kannada News | Sushant Singh case Court ordered defrizzing of Rhea Chakraborty’s bank account

ಬಾಲಿವುಡ್ ನಟ ಸುಶಾಂತ್ ಸಿಂಗ್ (Sushant Singh) ನಿಧನವಾಗಿ ಆರು ವರ್ಷಗಳಾಗುತ್ತಾ ಬಂದಿದೆ. 2020ರ ಜೂನ್ ತಿಂಗಳಲ್ಲಿ ಸುಶಾಂತ್ ಅವರು ನಿಧನ ಹೊಂದಿದ್ದರು. ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಮುಂಬೈನ ಅವರ ಮನೆಯಲ್ಲಿ ಪತ್ತೆ ಆಗಿತ್ತು. ಸುಶಾಂತ್ ಸಿಂಗ್ ಸಾವು ಹಲವು ರೀತಿಯಲ್ಲಿ ಬಾಲಿವುಡ್ ಅನ್ನು ಕಾಡಿತ್ತು. ಅದರಲ್ಲೂ ಸುಶಾಂತ್ ಅವರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಅಂತೂ ನಾನಾ ರೀತಿಯ ಸಂಕಟಗಳನ್ನು ಎದುರಿಸಬೇಕಾಯ್ತು. ಪ್ರಕರಣದಲ್ಲಿ ಅವರನ್ನು ವಿಲನ್ ಮಾಡಲಾಗಿತ್ತು. ಜೈಲಿಗೆ ಸಹ ಹೋಗಿ ಬಂದರು. ಆದರೆ ವಿಚಾರಣೆ ನಡೆದು ಸತ್ಯಗಳು ಒಂದೊಂದಾಗಿ ಹೊರಗೆ ಬರತೊಡಗಿದಾಗ ಅವರ ಮೇಲಿದ್ದ ಅನುಮಾನಗಳು ಕರಗತೊಡಗಿದವು. ಇದೀಗ ಸುಮಾರು ಆರು ವರ್ಷಗಳ ಬಳಿಕ ರಿಯಾಗೆ ತಮ್ಮ ಹಣದ ಮೇಲಿನ ಹಕ್ಕು ಮರಳಿ ದೊರೆತಿದೆ.

ಮುಂಬೈನ ವಿಶೇಷ ನ್ಯಾಯಾಲಯವು ನಟಿ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಮತ್ತು ತಾಯಿ ಸಂಧ್ಯಾ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ‘ಡಿ-ಫ್ರೀಜ್’ ಮಾಡಲು ಅನುಮತಿ ನೀಡಿದೆ. 2020ರಲ್ಲಿ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ಸುಶಾಂತ್ ಮತ್ತು ಅವರ ಸಹೋದರನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಡ್ರಗ್ಸ್ ಜಾಲದೊಂದಿಗೆ ಲಿಂಕ್ ಇದೆ ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿತ್ತು.

ಇದೀಗ ನಡೆದ ವಿಚಾರಣೆಯಲ್ಲಿ ತನಿಖಾ ಸಂಸ್ಥೆಯು ಎನ್‌ಡಿಪಿಎಸ್ (NDPS) ಕಾಯ್ದೆಯ ಸೆಕ್ಷನ್ 68F ಅಡಿಯಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ನ್ಯಾಯಾಲಯ ಗಮನಿಸಿದ್ದು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ 30 ದಿನಗಳ ಒಳಗಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಿತ್ತು, ಆದರೆ ಈ ಪ್ರಕರಣದಲ್ಲಿ ಹಾಗೆ ಮಾಡಿಲ್ಲ ಎಂದು ಕೋರ್ಟ್ ಹೇಳಿದೆ. ಕಾನೂನುಬದ್ಧವಾಗಿ ಪ್ರಕ್ರಿಯೆ ನಡೆಯದ ಕಾರಣ, ಇನ್ನು ಮುಂದೆ ಈ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಇಡುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ರಿಯಾ ಕುಟುಂಬಕ್ಕೆ ತಮ್ಮ ಹಣವನ್ನು ಬಳಸಲು ಈಗ ಅವಕಾಶ ಸಿಕ್ಕಿದೆ.

ಇದನ್ನೂ ಓದಿ:‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾದಲ್ಲಿ ಕ್ರೂರ ವಿಲನ್ ಆದ ಸುಶಾಂತ್‌ ಪೂಜಾರಿ

ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಈಗಾಗಲೇ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರನಿಗೆ ಕ್ಲೀನ್ ಚಿಟ್ ನೀಡಿದೆ. ಸಿಬಿಐ ತನ್ನ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದು, ತನಿಖಾ ವರದಿಯಲ್ಲಿ ಸುಶಾಂತ್ ಸಾವಿನ ಹಿಂದಿ ರಿಯಾರ ಕೈವಾಡವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಆದರೆ ಸುಶಾಂತ್ ಸಿಂಗ್ ಕುಟುಂಬದವರು ವಿಶೇಷವಾಗಿ ಅವರ ಸಹೋದರಿ, ಈಗಲೂ ಸಹ ರಿಯಾ ಚಕ್ರವರ್ತಿ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.

ಸುಶಾಂತ್ ಸಿಂಗ್ ಪ್ರಕರಣದ ಬಳಿಕ ರಿಯಾ ಚಕ್ರವರ್ತಿಗೆ ಚಿತ್ರರಂಗದಲ್ಲಿ ಅವಕಾಶಗಳೇ ಇಲ್ಲದಂತಾಯ್ತು. ಇದೀಗ ರಿಯಾ ಮತ್ತು ಅವರ ಸಹೋದರ ಸೇರಿ ಬಟ್ಟೆ ಬ್ರ್ಯಾಂಡ್ ಒಂದನ್ನು ನಡೆಸುತ್ತಿದ್ದು, ಇತ್ತೀಚೆಗಷ್ಟೆ ಅವರ ಹೊಸ ಶಾಪ್ ಆರಂಭವಾಗಿದೆ. ರಿಯಾ ಚಕ್ರವರ್ತಿ, ಯೂಟ್ಯೂಬ್​​ನಲ್ಲಿ ಪಾಡ್​ಕಾಸ್ಟ್ ಸಹ ನಡೆಸುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ವಿಳಂಬ ಆಗಿದ್ದೇಕೆ? ಪ್ರೇಮ್ ಪರವಾಗಿ ನಿಂತ ಸುದೀಪ್ – Kannada News | Kichcha Sudeep Supports Prem Over KD Movie Delay

ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿತ್ತು. ಇಷ್ಟು ವಿಳಂಬ ಏಕೆ ಎಂಬ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. ಸೆಟ್ ನಿರ್ಮಾಣ, ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಕೆಲಸ ಹೀಗೆ ವಿವಿಧ ಕಾರಣಕ್ಕೆ ‘ಕೆಡಿ’ ಸಿನಿಮಾ ವಿಳಂಬ ಆಗಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೇಸಿಗೆ ಬೇಗೆ ಬೆನ್ನಲ್ಲೇ ಎಳನೀರಿಗೆ ಭಾರಿ ಬೇಡಿಕೆ, ದರವೂ ಏರಿಕೆ: ಪೂರೈಕೆಯಾಗದೆ ವ್ಯಾಪಾರಿಗಳು ಕಂಗಾಲು – Kannada News | Mandya Tender Coconut Crisis: Maddur Market Hits Record High Prices Amid Supply Shortage and Summer Heat

ಮಂಡ್ಯ, ಏಪ್ರಿಲ್ 28: ಸುಡು ಬೇಸಿಗೆಯಲ್ಲಿ ತಂಪಾದ ಪಾನೀಯಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಎಳನೀರಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆ ಎಂದು ಹೆಸರಾದ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿಯೂ ಎಳನೀರಿನ ಕೊರತೆ ಎದುರಾಗಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಎಳನೀರು ಸಿಗದೆ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ. ಸಾಮಾನ್ಯವಾಗಿ ದಿನಕ್ಕೆ ಐದರಿಂದ ಆರು ಲಕ್ಷ ಎಳನೀರು ಬರುತ್ತಿದ್ದ ಮಾರುಕಟ್ಟೆಗೆ ಈಗ ಒಂದೂವರೆಯಿಂದ ಎರಡು ಲಕ್ಷ ಎಳನೀರು ಸಹ ಬರುತ್ತಿಲ್ಲ.

ನುಸಿ ರೋಗ ಹಾಗೂ ಬೇಸಿಗೆಯ ತೀವ್ರತೆಗೆ ಮರಗಳಿಂದ ಎಳನೀರು ಅಕಾಲಿಕವಾಗಿ ಉದುರುತ್ತಿರುವುದು ಪೂರೈಕೆ ಕುಸಿಯಲು ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ, ಎಳನೀರಿನ ಬೆಲೆ ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿಯೇ ಗುಣಮಟ್ಟಕ್ಕೆ ಅನುಗುಣವಾಗಿ ಒಂದು ಎಳನೀರಿಗೆ 50 ರಿಂದ 53 ರೂಪಾಯಿ ತಲುಪಿದೆ. ಇದನ್ನು ಖರೀದಿಸಿ ನಗರಗಳಿಗೆ ಸಾಗಿಸುವ ವ್ಯಾಪಾರಸ್ಥರಿಗೆ ಸಾರಿಗೆ ಮತ್ತು ಇತರ ವೆಚ್ಚಗಳಿಂದಾಗಿ ಬೆಲೆ ಮತ್ತಷ್ಟು ಹೆಚ್ಚಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ ಗ್ರಾಹಕರು ಮತ್ತು ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಆಯ್ತು ಈಗ ಬಾಗಲಕೋಟೆಯಲ್ಲೂ ‘ಕೈ’ ಕೊಟ್ಟ ನಾಯಕರಿಗೆ ಅಮಾನತು ಶಿಕ್ಷೆ! – Kannada News | After Davanagere, Congress Suspends 3 Leaders in Bagalkote Byelection for Anti Party Activities

ಬಾಗಲಕೋಟೆ, ಏಪ್ರಿಲ್ 28: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿನ ಪಕ್ಷವಿರೋಧಿ ಚಟುವಟಿಕೆಗಾಗಿ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ಅಮಾನತು (Suspend) ಮಾಡಿದ್ದ ಕಾಂಗ್ರೆಸ್‌ ಹೈಕಮಾಂಡ್, ಈಗ ಬಾಗಲಕೋಟೆಯಲ್ಲೂ ಅಂತಹದ್ದೇ ಕಠಿಣ ಕ್ರಮದ ಮೂಲಕ ಶಿಸ್ತಿನ ಬಿಸಿ ಮುಟ್ಟಿಸಿದೆ. ಬಾಗಲಕೋಟೆ ಉಪಚುನಾವಣೆಯಲ್ಲೂ ಪಕ್ಷವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮೂವರು ಪ್ರಭಾವಿ ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೈ ಮುಖಂಡರಿಂದ ದೋಖಾ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಮತಗಿ ಪಟ್ಟಣದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಕೆಲಸ ಮಾಡುವ ಬದಲು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಬೆಂಬಲ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ ಹಾಗೂ ಕಮತಗಿ ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ಜಮಖಂಡಿ ಮತ್ತು ಗುರುಲಿಂಗ ‌ಪಾಟೀಲ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ನೋಟಿಸ್‌ಗೆ ಬೆಲೆ ಕೊಡದ ನಾಯಕರು

ಸ್ಥಳೀಯ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎನ್. ರಾಂಪುರ ಅವರು ಈ ಮುಖಂಡರ ವಿರುದ್ಧ ದೂರು ನೀಡಿ, ಉಚ್ಚಾಟನೆಗೆ ಪತ್ರ ಬರೆದಿದ್ದರು. ಈ ದೂರಿನ ಆಧಾರದ ಮೇಲೆ ಜಿಲ್ಲಾಧ್ಯಕ್ಷರು ಕಾರಣ ಕೇಳಿ ನೋಟಿಸ್ ನೀಡಿದ್ದರೂ, ಮುಖಂಡರಿಂದ ಯಾವುದೇ ಸಮರ್ಪಕ ಉತ್ತರ ಬಾರದ ಕಾರಣ ಅಂತಿಮವಾಗಿ ಅಮಾನತು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

ಬಾಗಲಕೋಟೆ ಚುನಾವಣೆಯಲ್ಲಿ ಕಮತಗಿ ಅತ್ಯಂತ ಪ್ರಮುಖ ಪಟ್ಟಣವಾಗಿದ್ದು, ಇಲ್ಲಿನ ಮತಗಳು ಅಭ್ಯರ್ಥಿಗಳ ಜಯಾಪಜಯ ನಿರ್ಧರಿಸುತ್ತವೆ. ಇಂತಹ ನಿರ್ಣಾಯಕ ಸಂದರ್ಭದಲ್ಲೇ ಪ್ರಭಾವಿ ನಾಯಕರು ಪಕ್ಷಕ್ಕೆ ದೋಖಾ ಮಾಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ. ಒಟ್ಟಾರೆ, ದಾವಣಗೆರೆಯಿಂದ ಬಾಗಲಕೋಟೆಯವರೆಗೆ ‘ಒಳಪೆಟ್ಟು’ ನೀಡುವ ನಾಯಕರಿಗೆ ಹೈಕಮಾಂಡ್ ಸರಣಿ ತಲೆದಂಡದ ರುಚಿ ತೋರಿಸುತ್ತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಟಮಂತ್ರದ ಶಂಕೆ ಒಡಹುಟ್ಟಿದವನನ್ನು ಕೊಂದು, ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ – Kannada News | Gujarat: Man Kills Brother Over Witchcraft Suspicion, Attacks Nieces, Repeat Offender

ನರ್ಮದಾ,ಏಪ್ರಿಲ್ 28: ವ್ಯಕ್ತಿಯೊಬ್ಬ ಮಾಟಮಂತ್ರದ ಶಂಕೆಯಿಂದ ಸಹೋದರನನ್ನು ಕೊಲೆ(Murder) ಮಾಡಿ ಅವರ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಕೇವಲ ಮಾಟಮಂತ್ರದ ಅನುಮಾನದಿಂದ ಅಣ್ಣನೊಬ್ಬ ತನ್ನ ತಮ್ಮನ ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಆರೋಪಿ ರಮೇಶ್ ವಾಸವ ಮತ್ತು ಆತನ ಕಿರಿಯ ಸಹೋದರ ಗುರ್ಜಿ ವಾಸವ ನಡುವೆ ದೀರ್ಘಕಾಲದಿಂದ ಮನಸ್ತಾಪವಿತ್ತು. ಗುರ್ಜಿ ತನ್ನ ಮೇಲೆ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ರಮೇಶ್ ಬಲವಾಗಿ ನಂಬಿದ್ದ. ಸೋಮವಾರ ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕೋಪೋದ್ರಿಕ್ತನಾದ ರಮೇಶ್, ಗುರ್ಜಿ ಅಂಗಡಿಯಿಂದ ಹಿಂತಿರುಗುತ್ತಿದ್ದಾಗ ಹರಿತವಾದ ಆಯುಧದಿಂದ ಹೊಂಚು ಹಾಕಿ ದಾಳಿ ನಡೆಸಿದ್ದಾನೆ. ಅತಿ ಕ್ರೂರವಾಗಿ ಗುರ್ಜಿಯ ಗಂಟಲು ಸೀಳಿ ಕೊಲೆ ಮಾಡಿದ್ದಾನೆ.

ಗುರ್ಜಿ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಅವರ ಪುತ್ರಿಯರಾದ ಸಾವಿತ್ರಿ ಮತ್ತು ಶಿಲ್ಪಾ ತಂದೆಯನ್ನು ರಕ್ಷಿಸಲು ಓಡಿಬಂದರು. ಆದರೆ ಪೈಶಾಚಿಕ ಪ್ರವೃತ್ತಿಯ ರಮೇಶ್ ತನ್ನ ಸೊಸೆಯಂದಿರನ್ನು ಬಿಡಲಿಲ್ಲ. ಸಾವಿತ್ರಿಯ ತಲೆಗೆ ಮತ್ತು ಶಿಲ್ಪಾ ಅವರ ಕೈಗಳಿಗೆ ಗಂಭೀರ ಗಾಯಗಳನ್ನು ಉಂಟುಮಾಡಿದ್ದಾನೆ. ಸದ್ಯ ಇಬ್ಬರು ಯುವತಿಯರು ರಾಜ್‌ಪಿಪ್ಲಾ ಸಿವಿಲ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮತ್ತಷ್ಟು ಓದಿ: ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್​!

ಪೊಲೀಸ್ ತನಿಖೆಯ ವೇಳೆ ಬಯಲಾದ ಮಾಹಿತಿ ಅಧಿಕಾರಿಗಳನ್ನೇ ದಂಗಾಗಿಸಿದೆ. ರಮೇಶ್ ಮೊದಲ ಬಾರಿಗೆ ಈ ಕೃತ್ಯ ಎಸಗಿರಲಿಲ್ಲ. ಸರಿಯಾಗಿ ಎರಡು ದಶಕಗಳ ಹಿಂದೆ, ಅಂದರೆ 2005ರಲ್ಲಿ ಇದೇ ರಮೇಶ್ ಕುಡಿದ ಮತ್ತಿನಲ್ಲಿ ತನ್ನ ಮತ್ತೊಬ್ಬ ಸಹೋದರ ವಿಠ್ಠಲ್ ವಾಸವನನ್ನು ಕೊಂದಿದ್ದ, ಅಂದು ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ಈತ, ಈಗ ಮತ್ತೊಬ್ಬ ಸಹೋದರನನ್ನು ಬಲಿಪಡೆದಿದ್ದಾನೆ.

ಘಟನೆ ನಡೆದ ತಕ್ಷಣ ಸೊಸೆ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ರಮೇಶ್ ವಾಸವನನ್ನು ಬಂಧಿಸಿದ್ದಾರೆ. ಆರೋಪಿಯು ಮೊದಲಿನಿಂದಲೂ ಹಿಂಸಾತ್ಮಕ ಪ್ರವೃತ್ತಿ ಹೊಂದಿದ್ದಾನೆ. ಕುಟುಂಬದ ಆಂತರಿಕ ಕಲಹ ಮತ್ತು ಮಾಟಮಂತ್ರದ ಸಂಶಯವೇ ಈ ಭೀಕರ ಹತ್ಯೆಗೆ ಮೂಲ ಕಾರಣ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:54 am, Tue, 28 April 26

Source link

ಮದುವೆ ಬಳಿಕ ವಿಶೇಷ ದ್ವೀಪಕ್ಕೆ ಪ್ರವಾಸಕ್ಕೆ ತೆರಳಿದ ಸಂಜನಾ ಬುರ್ಲಿ

Source link

Exit mobile version