ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?

ಬೆಂಗಳೂರು, ಫೆಬ್ರವರಿ 09: ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಾಳೆ ನಡೆಯಬೇಕಿರುವ ಬಜೆಟ್ ಪೂರ್ವಭಾವಿ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಗೈರುಹಾಜರಾಗುತ್ತಿರುವುದು ಸದ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಇಲಾಖೆಗಳಂತಹ ದೊಡ್ಡ ಖಾತೆಗಳನ್ನು ಹೊಂದಿರುವ ಡಿ.ಕೆ.ಶಿವಕುಮಾರ್​​ ನಾಳೆಯ ಸಭೆ ಬಿಟ್ಟು ದೆಹಲಿಗೆ ತೆರಳುತ್ತಿದ್ದಾರೆ. ಕೇಂದ್ರ ಸಚಿವರು ಮತ್ತು ಹೈಕಮಾಂಡ್ ಸದಸ್ಯರು ತಮ್ಮನ್ನು ಕರೆದಿದ್ದಾರೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದು, ಭೇಟಿ ಮಾಡುತ್ತಿರುವ ನಾಯಕರ ಹೆಸರು ಹೇಳಲು ಆಗಲ್ಲ ಎಂದು ಹೇಳಿದ್ದಾರೆ. ಜೊತೆಗೆ ದೆಹಲಿ ಭೇಟಿ ಬಗ್ಗೆ ಸಿಎಂ ಬಳಿ ಅನುಮತಿ ಪಡೆಯುವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹಲವು ಇಂಧನದ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪ್ರತಿಕ್ರಿಯೆ – Kannada News | Foreign secretary Vikram Misri clarification about Russian oil imports Amid India US Trade Deal

ನವದೆಹಲಿ, ಫೆಬ್ರವರಿ 9: ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ (Trade Deal) ಭಾಗವಾಗಿ ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸಿದೆ ಎಂಬ ಕುರಿತಾಗಿ ಹರಿದಾಡುತ್ತಿರುವ ವಿವಾದದ ನಡುವೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯಾವುದೇ ಒಂದು ಇಂಧನ ಪೂರೈಕೆದಾರರನ್ನು ಅವಲಂಬಿಸುವ ಬದಲು ಹಲವು ಇಂಧನ ಆಮದುಗಳ ಮೂಲಗಳನ್ನು ಅವಲಂಬಿಸುವುದು ಭಾರತದ ಕಾರ್ಯತಂತ್ರವಾಗಿದೆ. ಭಾರತವು ಕೇವಲ ರಷ್ಯಾದಿಂದ ಮಾತ್ರವಲ್ಲ, ಇತರೆ ಡಜನ್​ಗಟ್ಟಲೆ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದೊಂದಿಗೆ ಇತ್ತೀಚೆಗೆ ಘೋಷಿಸಲಾದ ವ್ಯಾಪಾರ ಒಪ್ಪಂದದ ನಂತರ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುತ್ತದೆಯೇ ಎಂಬ ಪ್ರಶ್ನೆಗಳು ಮುಂದುವರಿದಿದ್ದರೂ ಸಹ, ತನ್ನ ಇಂಧನ ಆಮದು ನೀತಿಯು ರಾಷ್ಟ್ರೀಯ ಹಿತಾಸಕ್ತಿ, ಗ್ರಾಹಕರ ಕೈಗೆಟುಕುವಿಕೆ ಮತ್ತು ಪೂರೈಕೆ ಸುರಕ್ಷತೆಯಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ವಿಕ್ರಮ್ ಮಿಶ್ರಿ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

“ಭಾರತವು ರಷ್ಯಾದ ಕಚ್ಚಾ ತೈಲವನ್ನು ಹೇಗೆ ಪಡೆಯುತ್ತಿದೆ ಎಂಬುದರ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಮತ್ತು ತೈಲ ಮತ್ತು ಅನಿಲದ ಪ್ರಮುಖ ನಿವ್ವಳ ಆಮದುದಾರ ರಾಷ್ಟ್ರವಾಗಿ ಭಾರತವು ಸ್ಥಿರ ಮತ್ತು ಕೈಗೆಟುಕುವ ಇಂಧನ ಪೂರೈಕೆಗೆ ಆದ್ಯತೆ ನೀಡಬೇಕು” ಎಂದು ಹೇಳಿದ್ದಾರೆ. ನಮ್ಮ ದೇಶ ಬೇರೆ ದೇಶದಿಂದ ಆಮದು ಮಾಡಿಕೊಂಡ ಇಂಧನದ ಮೇಲೆ ಶೇ. 80-85ರಷ್ಟು ಅವಲಂಬಿತರಾಗಿರುವಾಗ ಇಂಧನ ವೆಚ್ಚಗಳಿಂದ ಉಂಟಾಗುವ ಹಣದುಬ್ಬರದ ಬಗ್ಗೆ ಕಳವಳಗಳು ಸಹಜ. ಹೀಗಾಗಿ, ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ಭಾರತವು ರಷ್ಯಾದ ತೈಲ ಖರೀದಿಯನ್ನು ಮುಂದುವರಿಸುವುದಿಲ್ಲ ಎಂಬ ಷರತ್ತಿನ ಮೇಲೆ ಭಾರತೀಯ ರಫ್ತಿನ ಮೇಲಿನ ಶೇ. 25ರಷ್ಟು ದಂಡದ ಸುಂಕವನ್ನು ತೆಗೆದುಹಾಕುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೊರಡಿಸಿದ್ದರು. ಇದಾದ ನಂತರ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ ಭಾರತದ ಮೊದಲ ಅಧಿಕಾರಿ ವಿಕ್ರಮ್ ಮಿಶ್ರಿ.

“ನಾವು ಯಾವುದೇ ಒಂದು ಮೂಲದ ಮೇಲೆ ಅವಲಂಬಿತವಾಗಿಲ್ಲ ಅಥವಾ ಅವಲಂಬಿತರಾಗಲು ಉದ್ದೇಶಿಸಿಲ್ಲ. ಮಾರುಕಟ್ಟೆಯ ಪರಿಸ್ಥಿತಿಗಳನ್ನು ಅವಲಂಬಿಸಿ ಮೂಲಗಳ ಮಿಶ್ರಣವು ಕಾಲಕಾಲಕ್ಕೆ ಬದಲಾಗಬಹುದು. ಹೆಚ್ಚಿನ ವೈವಿಧ್ಯೀಕರಣವು ಇಂಧನ ಸುರಕ್ಷತೆಯನ್ನು ಹೆಚ್ಚಿಸುತ್ತದೆ” ಎಂದು ಮಿಶ್ರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:22 pm, Mon, 9 February 26

Source link

ಮುಡಾ ಹಗರಣ: ಲೋಕಾಯುಕ್ತ ತನಿಖಾಧಿಕಾರಿಗಳ ಮೇಲೆಯೇ ಸ್ಪೋಟಕ ಆರೋಪ – Kannada News | Muda Scam Case: snehamayi krishna Complaints In Court Against Lokayukta over Bribery

ಮೈಸೂರು, (ಫೆಬ್ರವರಿ 09): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತವೇ (Lokayukta) ಆರೋಪಕ್ಕೆ ಗುರಿಯಾಗಿದ್ದು, ಮುಡಾದ ಹಿಂದಿನ ಆಯುಕ್ತರಿಂದ ಕೋಟಿ ಕೋಟಿ ರೂಪಾಯಿ ಲಂಚ (Bribe) ಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಗೆ ಕೋಟಿ ಕೋಟಿ ಹಣ ಲಂಚ ಕೊಡಲಾಗಿದೆ ಎಂದು ದೂರುದಾರ ಸ್ನೇಹಮಯಿ‌ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಾದ
ಜಿ.ಟಿ. ದಿನೇಶ್ ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೋಷಾರೋಪಣ ಪತ್ರ ಸಲ್ಲಿಸಿರುವ ತನಿಖಾಧಿಕಾರಿ. ಮತ್ತೊಬ್ಬ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಯಾವುದೇ ಅಂತಿಮ ವರದಿಯೂ ಸಲ್ಲಿಸಿಲ್ಲ. ಇದಕ್ಕಾಗಿ ಡಿ.ಬಿ. ನಟೇಶ್ 4 ಕೋಟಿ 35 ಲಕ್ಷ ರೂ, ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್: ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಡಿ.ಬಿ. ನಟೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟು ನಾಲ್ಕು ಕೋಟಿ ಮುವತ್ತೈದು ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎನ್ನುವ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅದೇ ಹಣದ ಕಾರಣಕ್ಕೆ ತನಿಖಾಧಿಕಾರಿ ನಟೇಶ್ ಅವರನ್ನು ರಕ್ಷಿಸುವಂತೆ ನಡೆದುಕೊಂಡಿದ್ದಾರೆ ಅನ್ನೋದು ಅವರ ವಾದ

ಸ್ನೇಹಮಯಿ ಕೃಷ್ಣ ಅವರ ಕೈಗೆ ಸಿಕ್ಕಿರುವ ದಾಖಲೆಗಳಲ್ಲಿ “DCM” ಎಂಬ ಪದದ ಮುಂದೆ ಹನ್ನೆರಡು ಕೋಟಿ ಐವತ್ತು ಲಕ್ಷ ರೂಪಾಯಿ ಹಣ ನೀಡಿರುವ ಉಲ್ಲೇಖವೂ ಇದೆ. ಇದನ್ನು ಕಂಪನಿಯ ಹೆಸರು ಎಂದು ಹೇಳಲಾಗಿದೆಯಾದರೂ, DCM” ಅಂದರೆ ಏನು? ಯಾರ ಸೂಚನೆ? ಯಾರಿಗೆ ಹಣ? ಎಂಬ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ.

ಇದನ್ನೂ ಓದಿ; ಮುಡಾ ಹಗರಣ: ಲೋಕಾಯುಕ್ತ ತನಿಖಾ ವರದಿಯಲ್ಲಿ ಮಹತ್ವದ ಅಂಶ ಉಲ್ಲೇಖ

ಈ ಎಲ್ಲಾ ಅಂಶಗಳನ್ನು ಆಧರಿಸಿ ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ಇದನ್ನು ನ್ಯಾಯಾಲಯವೂ ಸಹ ಸ್ವೀಕರಿಸಿದೆ. ಈ ಸಂಬಂಧ ಫೆಬ್ರವರಿ 20ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಮುಡಾ ಹಗರಣ ಈಗ ಭೂ ಹಂಚಿಕೆಯಿಂದ ಒಂದು ಹೆಜ್ಜೆ ಮುಂದೆ ಹೋಗಿ ಲೋಕಾಯುಕ್ತ ತನಿಖೆಯ ನೈಜತೆಯನ್ನೇ ಪ್ರಶ್ನಿಸುವ ಹಂತಕ್ಕೆ ಬಂದಿದೆ. ನ್ಯಾಯಾಲಯದ ವಿಚಾರಣೆ ಈ ಗಂಭೀರ ಆರೋಪಗಳಿಗೆ ಉತ್ತರ ನೀಡುತ್ತಾ? ಅಥವಾ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತವೋ? ಇಡೀ ರಾಜ್ಯದ ಗಮನ ಈಗ ಫೆಬ್ರವರಿ 20ರ ಮೇಲೆ‌ ನೆಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತಕ್ಕೆ ದಿಢೀರ್ ಪೆಟ್ರೋಲಿಯಂ ಪೂರೈಕೆ ನಿಂತು ಹೋದರೆ, ಎಷ್ಟು ದಿನಕ್ಕೆ ಆಗುವಷ್ಟು ಪೆಟ್ರೋಲ್ ರಿಸರ್ವ್ ಇದೆ ಗೊತ್ತಾ? – Kannada News | How much petroleum reserves India have, and how many days they last in case of emergency

ನವದೆಹಲಿ, ಫೆಬ್ರುವರಿ 9: ಯೂರೋಪ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು 90 ದಿನಗಳಿಗಾಗುವಷ್ಟು ಪೆಟ್ರೋಲಿಯಂ ಸಂಗ್ರಹದ ಗುರಿ ಹೊಂದಿವೆ. ಅಕಸ್ಮಾತ್ ಜಾಗತಿಕ ಪ್ರಕ್ಷುಬ್ದತೆಯ ಪರಿಸ್ಥಿತಿ ಬಂದು ತೈಲ ಪೂರೈಕೆ ಸ್ಥಗಿತಗೊಂಡರೆ ಕನಿಷ್ಠ 90 ದಿನಗಳಿಗಾಗುವಷ್ಟಾದರೂ ಪೆಟ್ರೋಲ್ ಲಭ್ಯ ಇರಬೇಕು ಎನ್ನುವುದು ಈ ಗುರಿಯ ಉದ್ದೇಶ. ಹಾಗಾದರೆ, ಭಾರತದಲ್ಲಿ ಪೆಟ್ರೋಲಿಯಂ ಸಂಗ್ರಹ (Strategic Petroleum Reserves) ಎಷ್ಟಿದೆ? ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ (Hardeep Singh Puri) ಸೋಮವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹರ್ದೀಪ್ ಸಿಂಗ್ ಪುರಿ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 5.33 ಮಿಲಿಯನ್ ಮೆಟ್ರಿಕ್ ಟನ್​ಗಳಷ್ಟು (ಎಂಎಂಟಿ) ಕಚ್ಚಾ ತೈಲ ಸಂಗ್ರಹ ಇದೆ. ಕರ್ನಾಟಕ ಮತ್ತು ಆಂಧ್ರದಲ್ಲಿ ಮೂರು ಸ್ಥಳಗಳಲ್ಲಿ ಪೆಟ್ರೋಲಿಯಂ ಸಂಗ್ರಹ ಇದೆ. ಕರ್ನಾಟಕದಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ತೈಲ ಸಂಗ್ರಹ ಇರಿಸಲಾಗಿದೆ. ಈ ಮೂರು ಕಡೆಯಲ್ಲಿ ಕಚ್ಚಾ ತೈಲ ಸಂಸ್ಕರಣೆ ಮಾಡಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ತೈಲ ಸಂಗ್ರಹವು 74 ದಿನಗಳ ಬಳಕೆಗೆ ಆಗುವಷ್ಟು ಇದೆ. ಮುಂಬರುವ ವರ್ಷಗಳಲ್ಲಿ ಪೆಟ್ರೋಲ್ ಸಂಗ್ರಹವನ್ನು 90 ದಿನಗಳ ಬಳಕೆಗೆ ಆಗುವಷ್ಟು ಹೆಚ್ಚಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಐಟಿ ಸೆಕ್ಟರ್​ಗೆ ಆಂಥ್ರೋಪಿಕ್ ಶಾಕ್; ಇದರ ಹಿಂದಿರುವ ಬ್ರೇನ್ ಬೆಂಗಳೂರು ಮೂಲದ ವ್ಯಕ್ತಿಯದ್ದು

ವಿಶ್ವದಲ್ಲಿ ಅತಿಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನ ಪಡೆಯುತ್ತದೆ. ಅತಿಹೆಚ್ಚು ಕಚ್ಚಾ ತೈಲ ಸಂಸ್ಕರಿಸುವ ನಾಲ್ಕನೇ ದೇಶ ಭಾರತವಾಗಿದೆ. ಪ್ರತೀ ವರ್ಷ 260 ಎಂಎಂಟಿಯಷ್ಟು ತೈಲ ಸಂಸ್ಕರಣೆ ಮಾಡಲಾಗುತ್ತಿದೆ. ಹೀಗೆ ಸಂಸ್ಕರಣೆ ಮಾಡಿ ತಯಾರಿಸಲಾದ ಪೆಟ್ರೋಲಿಯಂ ಉತ್ಪನ್ನಗಳನ್ನು ದೇಶೀಯ ಬಳಕೆಗೂ ಹಾಗೂ ರಫ್ತಿಗೂ ಉಪಯೋಗಿಸಲಾಗುತ್ತದೆ. ಈ ರೀತಿಯಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಅತಿಹೆಚ್ಚು ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ.

ಬೇರೆ ಬೇರೆ ದೇಶಗಳಲ್ಲಿ ಪೆಟ್ರೋಲಿಯಂ ರಿಸರ್ವ್ಸ್ ಎಷ್ಟಿದೆ?

ತುರ್ತು ಸಂದರ್ಭ ಬಂದರೆ ಪೆಟ್ರೋಲ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರತೀ ದೇಶವೂ ಯೋಜನೆಗಳನ್ನು ಹಾಕಿದೆ. ಹೆಚ್ಚಿನ ದೇಶಗಳು 90 ದಿನಗಳಿಗಾಗುವಷ್ಟು ಪೆಟ್ರೋಲ್ ಸಂಗ್ರಹ ಹೊಂದುವ ಗುರಿ ಇಟ್ಟಿವೆ. ಯೂರೋಪಿಯನ್ ಯೂನಿಯನ್​ನ ನಿಯಮದಲ್ಲೇ ಈ ಗುರಿ ಇದೆ.

ಇನ್ನು ಕೆಲ ದೇಶಗಳು ಪರಸ್ಪರ ಇಂಧನ ಪೂರೈಕೆಗೆ ಒಪ್ಪಂದಗಳನ್ನು ಮಾಡಿಕೊಂಡಿವೆ. ಉದಾಹರಣೆಗೆ, ಜಪಾನ್ ಮತ್ತು ಸೌತ್ ಕೊರಿಯಾ ಜೊತೆ ನ್ಯೂಜಿಲ್ಯಾಂಡ್ ಒಪ್ಪಂದ ಮಾಡಿಕೊಂಡಿದೆ. ತುರ್ತು ಸಂದರ್ಭ ಬಂದರೆ ಮಾರುಕಟ್ಟೆ ಬೆಲೆಗೆ ಜಪಾನ್, ಕೊರಿಯಾ ದೇಶಗಳು ತಮ್ಮಲ್ಲಿರುವ ಪೆಟ್ರೋಲಿಯಂ ಅನ್ನು ನ್ಯೂಜಿಲ್ಯಾಂಡ್​ಗೆ ಮಾರಬೇಕು. ಜಪಾನ್​ನಲ್ಲಿ ತೈಲ ಸಂಗ್ರಹ ಸಮೃದ್ಧವಾಗಿದೆ. 224 ದಿನಗಳು ಬಳಕೆಗೆ ಸಾಕಾಗುವಷ್ಟು ಪೆಟ್ರೋಲಿಯಂ ಸಂಗ್ರಹ ಆ ದೇಶದಲ್ಲಿ ಇದೆ. ಹೀಗಾಗಿ, ತುರ್ತು ಸಂದರ್ಭ ಬಂದರೆ ಬೇರೆ ಕೆಲ ದೇಶಗಳಿಗೆ ಅದನ್ನು ಮಾರಲು ಶಕ್ಯವಾಗಿರುತ್ತದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಹಾಗೆಯೇ, ಅಮೆರಿಕ ಜೊತೆ ಇಸ್ರೇಲ್ ಒಪ್ಪಂದ ಮಾಡಿಕೊಂಡಿದೆ. ತುರ್ತು ಸಂದರ್ಭದಲ್ಲಿ ಇಸ್ರೇಲ್​ಗೆ ಐದು ವರ್ಷದವರೆಗೂ ಅಮೆರಿಕ ತೈಲ ಪೂರೈಕೆ ಮಾಡಬೇಕೆನ್ನುವ ಒಪ್ಪಂದ ಇದು.

ಕೆಲ ದೇಶಗಳು ಒಂದು ವಾರದ ಬಳಕೆಗೆ ಆಗುವಷ್ಟು ಪೆಟ್ರೋಲಿಯಂ ರಿಸರ್ವ್ ಹೊಂದಿವೆ. ಪಾಕಿಸ್ತಾನದಲ್ಲಿ 20 ದಿನಗಳಿಗೆ ಆಗುವಷ್ಟು ಸಂಗ್ರಹ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

19 ವರ್ಷದ ಯುವತಿಗೂ ಎರಡು ಮಕ್ಕಳ ತಂದೆಗೂ ಲವ್​: ಬಲಿಯಾಗಿದ್ದು 2 ಜೀವ – Kannada News | Mandya Tragedy: Mother, Daughter Die by Suicide Over Teen’s Love Affair with Married Man

ಮೃತ ಮಗಳು ಮತ್ತು ತಾಯಿImage Credit source: Tv9 Kannada

ಮಂಡ್ಯ, ಫೆಬ್ರವರಿ 09: 19 ವರ್ಷದ ಯುವತಿ ಮತ್ತು ಎರಡು ಮಕ್ಕಳ ತಂದೆಯ ಪ್ರೇಮ ಪ್ರಕರಣದ ಹಿನ್ನೆಲೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಕುಂತಲಾದೇವಿ(46) ಮತ್ತು ಪ್ರಿಯಾಂಕಾ(19) ಮೃತರು. ಪ್ರಿಯಾಂಕಾಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ವಿವಾಹಿತ ಪುರುಷನ ಜೊತೆಗಿನ ಆಕೆಯ ಪ್ರೇಮವೇ ಘಟನೆಗೆ ಕಾರಣ ಎನ್ನಲಾಗಿದೆ.

ಹೌದು, ಕೋಡಿಹಳ್ಳಿ ಗ್ರಾಮದನೇ ಆದ 34 ವರ್ಷದ ಮುತ್ತುರಾಜ್​​ ಎಂಬವನ ಜೊತೆ ಪ್ರಿಯಾಂಕಾಗೆ ಲವ್​​ ಆಗಿತ್ತು. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಈತ ಕೂಡ ಪ್ರಿಯಾಂಕಾಳ ಹಿಂದೆ ಬಿದ್ದಿದ್ದ. ಮುತ್ತುರಾಜ್​​ ಪ್ರತಿದಿನವೂ ಪ್ರಿಯಾಂಕಾ ಮನೆಗೆ ಬರುತ್ತಿದ್ದ. ಇವರ ಪ್ರೀತಿಯ ವಿಷಯ ತಿಳಿಯದ ಮನೆಯವರು ಇದು ಸಾಮಾನ್ಯ ಎಂದುಕೊಂಡಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಪ್ರೀತಿ ಮಾಡ್ತಿರುವ ವಿಚಾರ ಪ್ರಿಯಾಂಕಾ ಪೋಷಕರಿಗೆ ಗೊತ್ತಾಗಿತ್ತು. ಬಳಿಕ ಇಬ್ಬರಿಗೂ ಬೈದು ಬುದ್ಧಿ ಹೇಳಿದ್ದರು. ಹೀಗಿದ್ದರೂ ಸಹ ವಿವಾಹಿತ ಮುತ್ತುರಾಜ್ ಪ್ರಿಯಾಂಕಾಳನ್ನು ಪೀಡಿಸುತ್ತಿದ್ದ. ಹಾಗಾಗಿ ಮರ್ಯಾದೆಗೆ ಹೆದರಿ ತಾಯಿ, ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಸಂಬಂಧದಲ್ಲೇ ಮದುವೆಗೆ ನಡೆದಿತ್ತು ತಯಾರಿ

ಇನ್ನು ಪ್ರಿಯಾಂಕಾ ಮತ್ತು ಮುತ್ತುರಾಜ್​​ ಪ್ರೇಮದ ವಿಷಯ ಮೊದಲು ಶಕುಂತಲಾದೇವಿ ಅವರಿಗೆ ಗೊತ್ತಾಗಿತ್ತು. ಬಳಿಕ ಅವರು ಈ ಬಗ್ಗೆ ತಮ್ಮ ಪತಿಗೆ ತಿಳಿಸಿದ್ದರು ಎನ್ನಲಾಗಿದೆ. ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಸಂಬಂಧದಲ್ಲೇ ಹುಡುಗನನ್ನು ಹುಡುಕಿ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಈ ವಿಷಯ ತಿಳಿದು ಆಘಾತವಾಗಿದೆ. ಮಗಳು ತನ್ನ ಪ್ರೀತಿಯ ವಿಚಾರದ ಬಗ್ಗೆ ಮೊದಲು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ಇಷ್ಟೆಲ್ಲ ನಡೆದು ಹೋಗಿದೆ ಎಂದು ಯುವತಿಯ ತಂದೆ ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆ ಬಗ್ಗೆ ಹಲಗೂರು ಠಾಣೆಗೆ ಶಕುಂತಲಾದೇವಿ ಪತಿ ಮಹೇಶ್​​ ನೀಡಿರುವ ದೂರಿನ ಅನ್ವಯ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಮುತ್ತುರಾಜ್​​

ಪ್ರಿಯಾಂಕಾಗೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದ ವಿಚಾರ ತಿಳಿದು ಆಕೆಯನ್ನು ಹೆದರಿಸಲು ಮುತ್ತುರಾಜ್​ ಮೂರು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆ ಬಳಿಕ ತಾಯಿ ಶಂಕುತಲಾ ಮತ್ತು ಮಗಳು ಪ್ರಿಯಾಂಕಾ ಇನ್ನಷ್ಟು ಗಾಬರಿಗೊಂಡಿದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:35 pm, Mon, 9 February 26

Source link

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ – Kannada News | Chitradurga: Bhadra Project Delay Sparks Farmers Bandh Call on February 10

ಭದ್ರಾ ಮೇಲ್ದಂಡೆ ಯೋಜನೆ, ರೈತರಿಂದ ಪ್ರತಿಭಟನೆ

ಚಿತ್ರದುರ್ಗ, ಫೆಬ್ರವರಿ 09: ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಬಯಲು ಸೀಮೆಯ ಜನರ ಬಹುಕಾಲದ ಕನಸು. ಆದರೆ ಯೋಜನೆ ಆರಂಭವಾಗಿ ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಕಾದು ಕಾದು ಸಿಡಿದೆದ್ದ ಚಿತ್ರದುರ್ಗದ ರೈತರು ನಾಳೆ ಅಂದರೆ ಫೆಬ್ರವರಿ 10ರಂದು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳ ಬಂದ್​ಗೆ (Bandh) ಕರೆ ನೀಡಿದ್ದಾರೆ.

ಪೂರ್ಣಗೊವಾದ ಯೋಜನೆ 

ಚಿತ್ರದುರ್ಗದ ಜನರ ದಶಕಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಆಗಿದೆ. ಆದರೆ ಯೋಜನೆಗೆ ಚಾಲನೆ ಸಿಕ್ಕು ಎರಡು ದಶಕಗಳೇ ಕಳೆಯುತ್ತ ಬಂದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಮುತ್ತಿನಕೊಪ್ಪದಿಂದ ಭದ್ರಾ ಡ್ಯಾಂವರೆಗೆ ಶೇ 25ರಷ್ಟು ಕಾಮಗಾರಿ ಬಾಕಿಯಿದೆ. ಅರಣ್ಯ ವ್ಯಾಪ್ತಿಯಲ್ಲಿ ಎರಡು ಕಡೆ ಟವರ್ ಹಾಕುವ ಕೆಲಸ ಬಾಕಿಯಿದೆ.

ಇದನ್ನೂ ಓದಿ: ಪಾವಗಡ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ: ಸಿದ್ದರಾಮಯ್ಯ, ಸಿಎಂ

ಅಲ್ಲದೆ ಸೂಕ್ಷ್ಮ ಹನಿ ನೀರಾವರಿ ಯೋಜನೆಗೆ ಹೊಳಲ್ಕೆರೆ ಕೈಬಿಡಲಾಗಿದೆ. ಹೀಗಾಗಿ ತಾರತಮ್ಯ ಬಿಟ್ಟು ಜಿಲ್ಲೆಯ ಎಲ್ಲೆಡೆ ನೀರು ಹರಿಸುವವರೆಗೆ ಟ್ರಯಲ್ ಟೆಸ್ಟ್​ಗೆ ಅವಕಾಶ ಕೊಡುವುದಿಲ್ಲ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಎಚ್ಚರಿಕೆ ನೀಡಿದ್ದಾರೆ.

ಇನ್ನು ಈಗಾಗಲೇ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿ ಫೆಬ್ರವರಿ 4ರಿಂದ ಧರಣಿ ನಡೆಸಲಾಗುತ್ತಿದೆ. ಫೆಬ್ರವರಿ 10ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮೂರು ಮತ್ತು ಹೊಸದುರ್ಗ ತಾಲೂಕು ಕೇಂದ್ರಗಳ ಬಂದ್​​ಗೆ ಕರೆ ನೀಡಿದ್ದೇವೆ. ಫೆಬ್ರವರಿ 12ಕ್ಕೆ ಚಳ್ಳಕೆರೆ ಪಟ್ಟಣ ಬಂದ್ ಮಾಡಲಾಗುವುದು. ಫೆಬ್ರವರಿ 13ಕ್ಕೆ ಚಿತ್ರದುರ್ಗ ನಗರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಬಗ್ಗೆ ಮತ್ತಷ್ಟು ವಿವರ ಕೇಳಿದ ಕೇಂದ್ರ; ಕಿಡಿಕಾರಿದ ಟಿ.ಬಿ.ಜಯಚಂದ್ರ

ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡಿಸಿದೆದ್ದಾರೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5300 ಕೋಟಿ ರೂ ಅನುದಾನ ಘೋಷಿಸಿದ್ದು ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೂ ಭದ್ರಾ ಯೋಜನೆಗೆ ಆದ್ಯತೆ ನೀಡಿ ಹೆಚ್ಚಿನ ಹಣ ಬಿಡುಗಡೆ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ಪರಿಣಾಮ ಬಯಲು ಸೀಮೆಯ ಜನರ ಕನಸಾದ ಭದ್ರಾ ಯೋಜನೆ ಆಮೆಗತಿಯಲ್ಲಿ ಸಾಗಿದ್ದು, ರೈತಾಪಿ ವರ್ಗ ಹೈರಾಣಾಗಿದ್ದಾರೆ. ಹೀಗಾಗಿ, ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ – Kannada News | This is why Gilli Nata did not meet Darshan after Bigg Boss Kannada 12

ಕಳೆದ ವರ್ಷ ಬಿಡುಗಡೆ ಆದ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾದಲ್ಲಿ ಗಿಲ್ಲಿ ನಟ (Gilli Nata) ಅವರು ಒಂದು ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ರಿಲೀಸ್ ಆದಾಗ ಗಿಲ್ಲಿ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಬಿಗ್ ಬಾಸ್ ಮುಗಿದ ಬಳಿಕ ದರ್ಶನ್ (Darshan) ಅವರನ್ನು ಗಿಲ್ಲಿ ನಟ ಭೇಟಿ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆ ಬಗ್ಗೆ ಸ್ವತಃ ಗಿಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಇನ್ನೂ ನಾನು ಡೆವಿಲ್ ಸಿನಿಮಾ ನೋಡಿಲ್ಲ. ಶೀಘ್ರದಲ್ಲೇ ನಾನು ಅದನ್ನು ನೋಡುತ್ತೇನೆ. ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾ ಎಂಬುದನ್ನು ನಾನು ಕೇಳಿ ನೋಡಿದೆ. ಪ್ರಯತ್ನ ಮಾಡಿದೆ. ಆದರೆ ಸದ್ಯಕ್ಕೆ ಅವಕಾಶ ಇಲ್ಲ ಅಂತ ಗೊತ್ತಾಯಿತು. ಅವರನ್ನು ನಾನು ಅಲ್ಲಿ ನೋಡುವುದಕ್ಕಿಂತ ಮನೆಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಳ್ಳಬೇಕು’ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುರುಷ ಹಾಗೂ ಮಹಿಳಾ ತಂಡಗಳ ಹೊಸ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟಿಸಿದ ಬಿಸಿಸಿಐ – Kannada News | Indian Cricket Player Contracts: BCCI Abolishes A+ Grade, New Men’s and Women’s List

ಟಿ20 ವಿಶ್ವಕಪ್ ನಡುವೆ ಬಿಸಿಸಿಐ (BCCI), ಪುರುಷ ಹಾಗೂ ಮಹಿಳಾ ತಂಡಗಳ ಕೇಂದ್ರ ಒಪ್ಪಂದವನ್ನು ಪ್ರಕಟಿಸಿದೆ. ಅದರಂತೆ ಪುರುಷರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಒಟ್ಟು 30 ಆಟಗಾರರು ಸೇರಿದ್ದರೆ, ಮಹಿಳೆಯರ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ 21 ಆಟಗಾರ್ತಿಯರು ಸೇರಿದ್ದಾರೆ. ಆದರೆ ಈ ಬಾರಿ ಗ್ರೇಡ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಬಿಸಿಸಿಐ, A+ ಗ್ರೇಡ್ ಅನ್ನು ರದ್ದುಗೊಳಿಸಿದೆ. ಉಳಿದಂತೆ A,B,C ಗ್ರೇಡ್​ನಲ್ಲಿ 30 ಆಟಗಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಎ ಗ್ರೇಡ್​ನಲ್ಲಿ ಮೂವರು ಆಟಗಾರರು ಸೇರಿದ್ದರೆ, ಬಿ ಗ್ರೇಡ್‌ನಲ್ಲಿ 11 ಆಟಗಾರರು ಮತ್ತು ಸಿ ಗ್ರೇಡ್‌ನಲ್ಲಿ 16 ಆಟಗಾರರು ಸೇರಿದ್ದಾರೆ.

ಈ 3 ಆಟಗಾರರಿಗೆ ಎ ಗ್ರೇಡ್

ಎ ಗ್ರೇಡ್‌ನಲ್ಲಿ ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭ್​ಮನ್ ಗಿಲ್, ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಮತ್ತು ಆಲ್​ರೌಂಡರ್ ರವೀಂದ್ರ ಜಡೇಜಾ ಸೇರಿದ್ದಾರೆ. ಅದರಂತೆ ಈ ಮೂವರು ಆಟಗಾರರು ಅತ್ಯಧಿಕ ಸಂಭಾವನೆ ಪಡೆಯಲಿದ್ದಾರೆ. ಬಿ ಗ್ರೇಡ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್ ಸೇರಿದ್ದಾರೆ.

ರೋಹಿತ್, ಕೊಹ್ಲಿಗೆ ಹಿಂಬಡ್ತಿ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಹಿಂದೆ ಎ+ ಗ್ರೇಡ್‌ನಲ್ಲಿದ್ದರು. ಆದಾಗ್ಯೂ, ಇಬ್ಬರೂ ಆಟಗಾರರು ಟಿ20 ಮತ್ತು ಟೆಸ್ಟ್ ಸ್ವರೂಪಗಳಿಂದ ನಿವೃತ್ತರಾಗಿದ್ದು, ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಇದರ ಪರಿಣಾಮವಾಗಿ ಈ ಇಬ್ಬರಿಗೆ ಹಿಂಬಡ್ತಿ ನೀಡಲಾಗಿದೆ.

ಪುರುಷರ ಕೇಂದ್ರ ಒಪ್ಪಂದ ಪಟ್ಟಿ

ಗ್ರೇಡ್ ಎ: ಶುಭ್​ಮನ್ ಗಿಲ್, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ

ಗ್ರೇಡ್ ಬಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕುಲ್ದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶ್ರೇಯಸ್ ಅಯ್ಯರ್.

ಗ್ರೇಡ್ ಸಿ: ತಿಲಕ್ ವರ್ಮಾ, ಅಕ್ಸರ್ ಪಟೇಲ್, ಶಿವಂ ದುಬೆ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಆಕಾಶ್ ದೀಪ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಧ್ರುವ್ ಜುರೈಲ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ಮತ್ತು ಸಾಯಿ ಸುದರ್ಶನ್

ಮಹಿಳಾ ತಂಡದ ಹೊಸ ಕೇಂದ್ರ ಗುತ್ತಿಗೆ ಪಟ್ಟಿ

ಗ್ರೇಡ್-ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ.

ಗ್ರೇಡ್-ಬಿ: ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ.

ಗ್ರೇಡ್-ಸಿ: ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Mon, 9 February 26

Source link

ಪ್ರಧಾನಿ ಮೋದಿ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ – Kannada News | BJP Files Police Complaint Over Congress Flex Targeting PM Modi in Bengaluru, Row Over ‘Trump Fear’ Remark

ಬೆಂಗಳೂರು, ಫೆಬ್ರವರಿ 9: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಾಕಿದ್ದ ಕೆಲವು ಫ್ಲೆಕ್ಸ್‌ಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಫ್ಲೆಕ್ಸ್‌ಗಳಲ್ಲಿ, ‘ಟ್ರಂಪ್‌ಗೆ ಹೆದರಿದ ಮೋದಿ’ ಮತ್ತು ‘ಚೀನಾಗೆ ಹೆದರಿದ ಮೋದಿ’ ಎಂದು ಫ್ಲೆಕ್ಸ್​​ಗಳಲ್ಲಿ ನಮೂದಿಸಲಾಗಿತ್ತು. ಮೋದಿ ಅವರ ನಡೆಯಿಂದ ದೇಶದ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಫ್ಲೆಕ್ಸ್‌ಗಳ ವಿರುದ್ಧ ಬಿಜೆಪಿ ಆಕ್ರೋಶಗೊಂಡಿದ್ದು, ಪೊಲೀಸ್ ದೂರು ದಾಖಲಿಸಿದೆ. ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಮಾಜಿ ಎಂಎಲ್ಸಿ ತುಳಸಿ ಮುನಿರಾಜು ಗೌಡ ಸೇರಿದಂತೆ ಕೆಲವು ಬಿಜೆಪಿ ನಾಯಕರು ಬೆಂಗಳೂರು ನಗರ ಕೇಂದ್ರ ವಿಭಾಗದ ಡಿಸಿಪಿಗೆ ಈ ಕುರಿತು ಔಪಚಾರಿಕ ದೂರು ಸಲ್ಲಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು? – Kannada News | Lakkundi Nagavi Link: Gadag Hidden Gold, Siddhi Purusha Caves and Ancient Mysteries

ಗದಗ, ಫೆಬ್ರವರಿ 09: ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ ಪುರುಷರಿಗೆ ಹಾಲು ಕೊಟ್ಟು ಬರ್ತಿತ್ತಂತೆ. ಈ ರೋಚಕ, ವಿಸ್ಮಯ ಚಿನ್ನದ ನಿಧಿಯ ಗುಹೆಯೊಳಗೆ ನಿಜಕ್ಕೂ ರಹಸ್ಯ ಅಡಗಿದೆ.

ಬಗೆದಷ್ಟು ಬಯಲಾಗುತ್ತಿವೆ ಐತಿಹಾಸಿಕ ಲಕ್ಕುಂಡಿ ರಹಸ್ಯ

ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಗದಗ ಜಿಲ್ಲೆಯಲ್ಲಿನ ಹತ್ತಾರು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿಯನ್ನ ರಾಜಧಾನಿ ಮಾಡಿಕೊಂಡು ಅರಸರು ಆಳ್ವಿಕೆ ಮಾಡಿದ್ದರು. ಅಪಾರ ಪ್ರಮಾಣದಲ್ಲಿ ಚಿನ್ನವನ್ನ ಸಂಗ್ರಹ ಮಾಡಿದ್ದರು. ಟಂಕಸಾಲೆಯಲ್ಲಿ ನಾಣ್ಯಗಳ ಮುದ್ರಣ ಮಾಡುತ್ತಿದ್ದರು. ಅರಸ ಮನೆತನಗಳು ಕಪ್ಪತ್ತಗುಡ್ಡದಿಂದ ಚಿನ್ನ ತಗೆದಯುತ್ತಿದ್ದರು. ರಾಜ, ಮಹರಾಜ ಆಳ್ವಿಕೆಯ ಸಮಯದಲ್ಲಿ ಇಂದ್ರನ ಅಮರಾವತಿಗಿಂತಲು ಸಂಪತ್ತು ಇತ್ತು ಎಂದು ಇತಿಹಾಸಗಾರು ಹೇಳುತ್ತಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ

ಈ ಇತಿಹಾಸಿ ಸತ್ಯ ಅನ್ನೋದು ಒಂದೊಂದಾಗಿ ಸಾಬೀತಾಗುತ್ತ ಹೊರಟಿದೆಯಾ ಅನ್ನೋ ಅನುಮಾನ ಬರುತ್ತಿದೆ. ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಂಪತ್ತು ಆಯ್ತು, ಕಪ್ಪತ್ತುಡ್ಡದ ನಿಗೂಢ ಗುಹೆಗಳ ಸಂಪತ್ತು ಆಯ್ತು. ಐತಿಸಹಾಸಿ ದೇವಸ್ಥಾನಗಳ ಸಂಪತ್ತು ರಹಸ್ಯ ಬಯಲಾಯ್ತು. ಆದರೂ ಜಿಲ್ಲೆಯ ಸಿರಿಸಂಪತ್ತಿನ ರಹಸ್ಯ ಮಾತ್ರ ಇನ್ನೂ ಅಂತ್ಯವಾಗಿಲ್ಲ.

ಇದೀಗ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೂ ನಾಗಾವಿ ಗುಡ್ಡದ ಗುಹೆಗೆ ಸಂಬಂಧ ಇದೆಯಂತೆ. ಗದಗ ತಾಲೂಕಿನ ನಾಗಾವಿ ಗ್ರಾಮದ ಯಲ್ಲಮ್ಮ ದೇವಿಯ ದೇವಸ್ಥಾನದ ಬಳಿಯ ಗುಡ್ಡದಲ್ಲಿ ನಿಗೂಢ, ವಿಸ್ಮಯ ಗುಹೆ ಇದೆ. ಈ ಗುಹೆಯಲ್ಲಿ ರಹಸ್ಯ ಬಾವಿ ಇದೆ. ಆ ಬಾವಿಯಲ್ಲಿ ಅರಿಶಿನ ಹಾರ, ನಿಂಬೆಹಣ್ಣು ಬಿಟ್ಟರೆ ಅದು ಲಕ್ಕುಂಡಿಯ ಸಿದ್ದರ ಬಾವಿಯಲ್ಲಿ ಗೋಚರ ಆಗುತ್ತೆ. ಲಕ್ಕುಂಡಿಯ ಮುಸ್ಕಿನಬಾವಿಗೂ ನಾಗಾವಿ ಗುಹೆಗೆ ಲಿಂಕ್ ಇದೆ. ಗುಹೆಯಲ್ಲಿ ಅಪಾರ ಪ್ರಮಾಣ ಚಿನ್ನದ ನಿಧಿ ಇದೆ. ನಿಧಿಗೆ ಸರ್ಪಕಾವಲು ಕಾಯುತ್ತಿದೆ ಎಂದು ಈ ಹಿಂದೊಮ್ಮೆ ಗುಹೆಯಲ್ಲಿ ಹೋಗಿ ಬಂದಿರುವ ಗ್ರಾಮದ ಹಿರಿಯರು ಗೋವಿಂದರಡ್ಡಿ ಮರಡ್ಡಿ ಅವರ ಮಾತು.

ಸಿದ್ದಿ ‌ಪುರಷರಿಗೆ ಹಾಲು ನೀಡುತ್ತಿದ್ದ ಕಾಮಧೇನು

ನಾಗಾವಿಯ ನಿಗೂಢ ಗುಹೆ. ಇಲ್ಲಿ ಸಿದ್ಧಿಪುರುಷರು ವಾಸವಾಗಿದ್ರಂತೆ. ನಿತ್ಯ ನಸುಕಿನ ಜಾವ ಭಜನೆ, ಜಾಗಟೆ, ಶಂಕ ನಾದದ ಶಬ್ದ ಗ್ರಾಮಕ್ಕೆ ಕೇಳಿಸುತ್ತಿತ್ತಂತೆ. ಆಗ ಸಿದ್ಧರು ಭಜನೆ ಮಾಡ್ತಾಯಿದ್ದಾರೆ. ನಸುಕಾಯಿತು ಎಲ್ಲರೂ ಏಳಿ ಅಂತ ಹೇಳ್ತಾಯಿದ್ರಂತೆ. ಆ ಗುಹೆಯಲ್ಲಿ ಬಾವಿ ಇದೆ ಬಾವಿಯ ನೀರಿನಿಂದ ದೀಪ ಹಚ್ಚಿ ತಪಸ್ಸು ಮಾಡುತ್ತಿದ್ರು. ಗುಹೆಯಲ್ಲಿದ್ದ ಸಿದ್ದರಿಗೆ ನಿತ್ಯ ಒಂದು ಹಸು ಹೋಗಿ ಹಾಲು ನೀಡಿ ಬರುತ್ತಿತ್ತು.

ಆ ಹಸು ಮನೆಗೆ ಹೋದಾಗ ಹಾಲು ಕೊಡುತ್ತಿರಲಿಲ್ಲ. ಹೀಗಾಗಿ ಹಸುಗಳನ್ನು ಮೇಯಿಸಲು ಹೋಗುತ್ತಿದ್ದ ಕೋರಿಯವರ ಮನೆತನದ ವ್ಯಕ್ತಿ ಒಂದು ದಿನ ಹಸುವಿನೊಂದಿಗೆ ಗುಹೆಗೆ ಹೋಗಿದ್ದಾನೆ. ಅಲ್ಲಿಯ ಸಿದ್ದರನ್ನ ನೋಡಿ ನಾನು ಇಲ್ಲೇ ಇರ್ತಿನಿ ಅಂದಿದ್ದಾನೆ. ಹಸು ಮರಳಿ ಮನೆ ಬಂದಿದೆ ಆದರೆ ದನ ಕಾಯಲು ಹೋದ ಮನುಷ್ಯ ಮಾತ್ರ ಮರಳಿ ಬಂದಿಲ್ಲ. ಆ 20 ವರ್ಷದ ಬಳಿಕ ತಾಯಿನ್ನ ನೋಡಬೇಕೆಂದು ಸಿದ್ದರ ಕೇಳಿ ಹೋಗ್ತಾನೆ. ಸಿದ್ದರು ಇಲ್ಲಿಯ ಸಂಪತ್ತು ತೆಗೆದುಕೊಂಡು ಹೋಗಬೇಡ. ಸಂಪತ್ತು ಇರುವ ಬಗ್ಗೆ ಯಾರಿಗೂ ಹೇಳ ಬೇಡ ಅಂದಿದ್ರಂತೆ. ಆತ ಮನೆಗೆ ಹೋದಾಗ ತಾಯಿ ಗುರುತು ಹಿಡಿದಿಲ್ಲ. ಹೀಗಾಗಿ ಗ್ರಾಮದ ಕೆಲವರಿಗೆ ತಾನು ಗುಹೆಯಲ್ಲಿ ಇದೆ ಅಂತಾ ಹೇಳಿದ್ದಾನೆ. ಗುಹೆಯ ರಹಸ್ಯದ ಬಗ್ಗೆಯೂ ಗ್ರಾಮದಲ್ಲಿ ಮಾಹಿತಿ ನೀಡಿದ್ದಾನೆ. ನಂತರ ಗುಹೆಗೆ ಬಂದಿದ್ದಾನೆ ಆದರೆ ಸಿದ್ದರು ಗುಹೆಗೆ ಬಂದ್ರೆ ಮರಳಿ ನಿಂಗೆ ಹೋಗಲು ಆಗೋದಿಲ್ಲವೆಂದಿದ್ದಾರೆ.‌ ಆ ಗುಹೆಯಲ್ಲಿ ಹೋದ ವ್ಯಕ್ತಿ ಮರಳಿ ಬಂದಿಲ್ವಂತೆ. ಹೀಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ಲಕ್ಕುಂಡಿ ಗ್ರಾಮಕ್ಕೆ ಹಾಗೂ ನಾಗಾವಿ ಗ್ರಾಮಕ್ಕೆ ಲಿಂಕ್ ಇದೆ. ಒಟ್ಟಿನಲ್ಲಿ ಸಿದ್ದಿ ಪುರುಷರು ವಾಸ ಮಾಡಿರುವ ಗುಹೆಯಲ್ಲಿ ಅಪಾರ ಪ್ರಮಾಣದ ನಿಧಿ ಇರುವ ಅನುಮಾನ ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version