AI Impact Summit: ಎಐ ಪ್ರಯೋಜನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯ ಕಂಡುಕೊಳ್ಳಬೇಕು: ಅಶ್ವಿನಿ ವೈಷ್ಣವ್ – Kannada News | Ashwini Vaishnaw Calls for Collective Action to Tackle AI Risks at India AI Impact Summit 2026

ನದೆಹಲಿ, ಫೆಬ್ರವರಿ 19:ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ ಆರಂಭಗೊಂಡಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಗೆ ಸಾಕ್ಷಿಯಾಗಿದ್ದಾರೆ. ಈ ಸದರ್ಭದಲ್ಲಿ ಕೇಂದ್ರಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಎಐನಿಂದ ಪ್ರಯೋನ ಪಡೆಯುವುದರ ಜತೆ ಅದರಿಂದಾಗುವ ಅಪಾಯಗಳ ತಗ್ಗಿಸುವ ಉಪಾಯವನ್ನು ಕೂಡ ಕಂಡುಕೊಳ್ಳಬೇಕೆಂದರು. ತಂತ್ರಜ್ಞಾನದ ಿಜಾದ ಮೌಲ್ಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪುವುದರಲ್ಲಿದೆ.

ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವುದು, ಅದನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸುವುದು ಮತ್ತು ಅದನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಸರ್ಕಾರದ ದೃಷ್ಟಿಕೋನವಾಗಿದೆ ಎಂದು ಅವರು ಹೇಳಿದರು.ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ನಾವು ಸಾಮಾನ್ಯ ಕಂಪ್ಯೂಟ್ ಪ್ಲಾಟ್‌ಫಾರ್ಮ್ ಅನ್ನು ರಚಿಸಿದ್ದೇವೆ, ಅಲ್ಲಿ ನಾವು ನಮ್ಮ ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ 38,000 GPU ಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುತ್ತಿದ್ದೇವೆ.

ಈ ಸಾಮಾನ್ಯ ಕಂಪ್ಯೂಟ್ ಪ್ಲಾಟ್‌ಫಾರ್ಮ್‌ಗೆ ನಾವು ಇನ್ನೂ 20,000 GPU ಗಳನ್ನು ಸೇರಿಸುತ್ತೇವೆ ಎಂದರು. 2026 ರ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ 110 ಕ್ಕೂ ಹೆಚ್ಚು ದೇಶಗಳು, 20 ರಾಷ್ಟ್ರಗಳು, 30 ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು 500ಕ್ಕೂ ಅಧಿಕ ಜಾಗತಿಕ ನಾಯಕರು ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಎಐ ಇಂಪ್ಯಾಕ್ಟ್​ ಶೃಂಗಸಭೆ: ವಿಶ್ವನಾಯಕರೊಂದಿಗೆ ಪ್ರಧಾನಿ ಮೋದಿ ಮಾತುಕತೆ – Kannada News | Narendra Modi Engages With Global Leaders at India AI Impact Summit 2026

ನವದೆಹಲಿ, ಫೆಬ್ರವರಿ 19: ಇಂದು ದೆಹಲಿಯಲ್ಲಿ ಎಐ ಇಂಪ್ಯಾಕ್ಟ್​ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರ ಜತೆ ಕುಳಿತು ಚರ್ಚಿಸುತ್ತಿರುವ ವಿಡಿಯೋ ಇಲ್ಲಿದೆ.  ಸಿಇಒಗಳು, ಸಿಎಕ್ಸ್‌ಒಗಳು ಸೇರಿದಂತೆ 500 ಕ್ಕೂ ಹೆಚ್ಚು ಜಾಗತಿಕ ಎಐ ನಾಯಕರು, ಸುಮಾರು 100 ಸಿಇಒಗಳು ಮತ್ತು ಸಂಸ್ಥಾಪಕರು, 150 ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಮತ್ತು 400 ಸಿಟಿಒಗಳು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದು 20 ಕ್ಕೂ ಹೆಚ್ಚು ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಮತ್ತು ಸುಮಾರು 60 ಮಂತ್ರಿಗಳು, ಉಪಮಂತ್ರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ.

ಮತ್ತೊಂದೆಡೆ, ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಎಐ ಶೃಂಗದಲ್ಲಿ ಇದೀಗ ಗಿನ್ನೆಸ್‌ ವಿಶ್ವದಾಖಲೆ ಬರೆಯಲು ಸಿದ್ಧವಾಗಿದೆ. ಈ ಶೃಂಗದಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಪ್ರತಿಜ್ಞೆ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

‘ದಿ ರೈಸ್ ಆಫ್​ ಅಶೋಕ’ ಮೂಲಕ ಮತ್ತೆ ಮಿಂಚಲು ರೆಡಿ ಆದ ಸತೀಶ್; ಗಮನ ಸೆಳೆದ ಟ್ರೇಲರ್ – Kannada News | Ninasam Satish’s ‘The Rise of Ashoka’: Action Packed Social Drama Trailer Creates Buzz

ನೀನಾಸಂ ಸತೀಶ್ (Sathish Ninasam) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗ ‘ದಿ ರೈಸ್ ಆಫ್ ಅಶೋಕ’ ಹೆಸರಿನ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಫೆಬ್ರವರಿ 27ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಜಾತಿ ತಾರತಮ್ಯದ ವಿರುದ್ಧ ಸಿಡಿದೇಳುವ ಅಶೋಕನಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ.

ಅಶೋಕ ಓರ್ವ ಬಡ ಕುಟುಂಬದ ಹಿನ್ನೆಲೆಯಿಂದ ಬಂದವನು. ಆತ ನಗರಕ್ಕೆ ಹೋಗಿ ಓದಿ ಮರಳಿ ಊರಿಗೆ ಬರುತ್ತಾನೆ. ಆತ ರೆವೆನ್ಯೂ ಡಿಪಾರ್ಟ್​​ಮೆಂಟ್ ಸೇರುವ ಪ್ರಯತ್ನ ಮಾಡುತ್ತಾನೆ. ಆಗ ಶುರುವಾಗುತ್ತೆ ಊರ ಪಾಳೇಗಾರನ ದಬ್ಬಾಳಿಕೆ. ಈ ವ್ಯವಸ್ಥೆಯ ವಿರುದ್ಧ ಅಶೋಕ ಸಿಡಿದೇಳುತ್ತಾನೆ. ಇದಿಷ್ಟು ವಿಷಯ ಟ್ರೇಲರ್​​ನಲ್ಲಿ ತೋರಿಸಲಾಗಿದೆ.

ಸತೀಶ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಒಂದಷ್ಟು ಗೆಳೆಯರನ್ನು ಸಂಪಾದಿಸಿದ್ದಾರೆ. ಅವರೆಲ್ಲರೂ ಆಗಮಿಸಿ, ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ಲಾಂಚ್ ಈವೆಂಟ್​​ಗೆ ಸಾತ್ ಕೊಟ್ಟರು. ರವಿಚಂದ್ರನ್​, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್ ಮೊದಲಾದವರು ಟ್ರೇಲರ್ ಲಾಂಚ್ ಈವೆಂಟ್​​ನಲ್ಲಿ ಇದ್ದರು.

ಇದನ್ನೂ ಓದಿ: ನನಗಿಂತ ಸಪ್ತಮಿ ಪಾತ್ರಕ್ಕೆ ಒಳ್ಳೆಯ ಡೈಲಾಗ್ ಇದೆ ಎಂದ ನೀನಾಸಂ ಸತೀಶ್

ಟ್ರೇಲರ್ ನೋಡಿದವರಿಗೆ ನಿರೀಕ್ಷೆ ಮೂಡಿದೆ. ‘ಇದು ರೈಸ್ ಆಫ್ ಅಶೋಕ ಅಲ್ಲ, ರೈಸ್ ಆಫ್ ಸತೀಶ ಆಗಲಿ, ಆಗುತ್ತೆ’ ಎಂದು ಬಂದ ಸೆಲೆಬ್ರಿಟಿಗಳು ಹಾರೈಸಿದರು. ಸಪ್ತಮಿ ಗೌಡ, ಸಂಪತ್, ರವಿಶಂಕರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿನೋದ್ ದೊಂಡಾಲೆ ನಿರ್ದೇಶನ ಮಾಡಿದ್ದಾರೆ. ಅವರು ನಿಧನ ಹೊಂದಿದ ಬಳಿಕ ಸತೀಶ್ ಅವರು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಸತೀಶ್ ಕೂಡ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಹಂತ ತಲುಪಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಯಮಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಬಿಗ್​​​​ ಟ್ವಿಸ್ಟ್​: ಜೈಲಿನಲ್ಲಿರುವ ಖೈದಿಯಿಂದಲ್ಲೇ ಕನ್ನ! – Kannada News | Parole Convict’s Masterplan: Byadarahalli Robbery Unravels, Family Link Suspected

ಬೆಂಗಳೂರು, ಫೆ.19: ಪೊಲೀಸ್ ಸಮವಸ್ತ್ರ ಧರಿಸಿ ಬಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯವರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು (Byadarahalli robbery) ಯಶಸ್ವಿಯಾಗಿದ್ದಾರೆ. ಈ ದರೋಡೆಯ ಹಿಂದೆ ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಕೈದಿಯ ಕೈವಾಡ ಇರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬಾಳೆಗೌಡ ಎಂಬುವವರ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಗ್ಯಾಂಗ್, ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಮನೆಯಲ್ಲಿದ್ದ 20 ಲಕ್ಷ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ.

ಈ ಕಳ್ಳತನ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸೋಕೋ (SOCO) ತಂಡ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿರುವ ಒಬ್ಬ ಖೈದಿಯ ಬೆರಳಚ್ಚಿಗೆ ತಾಳೆಯಾಗಿದೆ. ಇದು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಜೈಲಿನಲ್ಲಿರುವ ವ್ಯಕ್ತಿ ದರೋಡೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿತ್ತು. ನಂತರದಲ್ಲಿ ಈ ಬಗ್ಗೆ ತನಿಖೆ ಮಾಡಿದಾಗ ಅಚ್ಚರಿಯ ವಿಚಾರವೊಂದು ಸಿಕ್ಕಿದೆ.

ಇದನ್ನೂ ಓದಿ: ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ

ಹೆಚ್ಚಿನ ತನಿಖೆ ನಡೆಸಿದಾಗ ಖೈದಿಯು ಪೆರೋಲ್ (Parole) ಮೇಲೆ ಜೈಲಿನಿಂದ ಹೊರಬಂದಿರುವುದು ಗೊತ್ತಾಗಿದೆ. ದರೋಡೆ ನಡೆದ ಮರುದಿನವೇ ಆತ ಪುನಃ ಜೈಲಿಗೆ ವಾಪಸ್ ಹೋಗಿರುವುದು ತಿಳಿದುಬಂದಿದೆ. ಅಂದರೆ, ಜೈಲಿನಿಂದ ಹೊರಬಂದು ದರೋಡೆ ಸ್ಕೆಚ್ ಹಾಕಿ, ಕಳ್ಳತನ ಮಾಡಿ ಯಾರಿಗೂ ಅನುಮಾನ ಬಾರದಂತೆ ಮತ್ತೆ ಜೈಲು ಸೇರಿಕೊಂಡಿದ್ದ.ಹೊಂಬಾಳೆಗೌಡ ಅವರು ಇತ್ತೀಚೆಗಷ್ಟೇ ಜಮೀನು ಮಾರಾಟ ಮಾಡಿದ್ದು, ಮನೆಯಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ನಗದು ಇತ್ತು ಎನ್ನಲಾಗಿದೆ. ಈ ವಿಚಾರ ದರೋಡೆಕೋರರಿಗೆ ಗೊತ್ತಾಗಿದ್ದು ಹೇಗೆ ಎಂಬುದು ಈಗ ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆ. ಮನೆಯಲ್ಲಿ ದೊಡ್ಡ ಮೊತ್ತದ ಹಣ ಇರುವ ಬಗ್ಗೆ ಕುಟುಂಬದವರಿಗೇ ತಿಳಿದಿದ್ದರಿಂದ, ಕುಟುಂಬದ ಸದಸ್ಯರ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಜೈಲಿನಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:06 am, Thu, 19 February 26

Source link

T20 World Cup 2026: ಸೂಪರ್-8 ಸುತ್ತಿನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ – Kannada News | T20 World Cup 2026 Super 8 Full schedule

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 8 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದರೆ, 12 ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಝಿಂಬಾಬ್ವೆ, ಪಾಕಿಸ್ತಾನ್, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕಣಕ್ಕಿಳಿಯಲಿವೆ.

ಸೂಪರ್-8 ಸ್ವರೂಪ:

  • ಗುಂಪುಗಳ ವಿಂಗಡಣೆ: ಸೂಪರ್-8ಕ್ಕೆ ಅರ್ಹತೆ ಪಡೆದ 8 ತಂಡಗಳನ್ನು ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ (Group 1 ಮತ್ತು Group 2) ವಿಂಗಡಿಸಲಾಗುತ್ತದೆ.
  • ಪಂದ್ಯಗಳ ಸಂಖ್ಯೆ: ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಉಳಿದ ಮೂರು ತಂಡಗಳೊಂದಿಗೆ ತಲಾ ಒಂದು ಪಂದ್ಯವನ್ನು ಆಡುತ್ತದೆ. ಅಂದರೆ ಪ್ರತಿ ತಂಡಕ್ಕೆ ಒಟ್ಟು 3 ಪಂದ್ಯಗಳು ಇರುತ್ತವೆ.
  • ಪಾಯಿಂಟ್ಸ್ ಸಿಸ್ಟಮ್: ಪ್ರತಿ ಗೆಲುವಿಗೆ 2 ಪಾಯಿಂಟ್ಸ್, ಯಾವುದೇ ಫಲಿತಾಂಶ ಬಾರದಿದ್ದರೆ (No Result) 1 ಪಾಯಿಂಟ್ ಮತ್ತು ಸೋಲಿಗೆ 0 ಪಾಯಿಂಟ್ ನೀಡಲಾಗುತ್ತದೆ.
  • ಸೆಮಿಫೈನಲ್ ಅರ್ಹತೆ: ಸೂಪರ್-8ರ ಪ್ರತಿ ಗುಂಪಿನಿಂದ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು (ಒಟ್ಟು 4 ತಂಡಗಳು) ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ.

ಸೂಪರ್-8 ಗುಂಪುಗಳು:

  • ಗ್ರೂಪ್ 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
  • ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಆರಂಭಿಕರ ವಿಶ್ವ ದಾಖಲೆಯ ಚೇಸಿಂಗ್

ಸೂಪರ್ 8 ಸುತ್ತಿನ ಸಂಪೂರ್ಣ ವೇಳಾಪಟ್ಟಿ:

ಫೆಬ್ರವರಿ 21 ನ್ಯೂಝಿಲೆಂಡ್ vs ಪಾಕಿಸ್ತಾನ್ ಆರ್‌ಪಿಎಸ್, ಕೊಲಂಬೊ ಸಂಜೆ 7:00 ಕ್ಕೆ
ಫೆಬ್ರವರಿ 22 ಇಂಗ್ಲೆಂಡ್ vs ಶ್ರೀಲಂಕಾ  ಕ್ಯಾಂಡಿ ಮಧ್ಯಾಹ್ನ 3:00
ಫೆಬ್ರವರಿ 22 ಭಾರತ vs ಸೌತ್ ಆಫ್ರಿಕಾ ಅಹಮದಾಬಾದ್ ಸಂಜೆ 7:00 ಕ್ಕೆ
ಫೆಬ್ರವರಿ 23 ವೆಸ್ಟ್ ಇಂಡೀಸ್ vs ಝಿಂಬಾಬ್ವೆ  ಮುಂಬೈ ಸಂಜೆ 7:00 ಕ್ಕೆ
ಫೆಬ್ರವರಿ 24 ಇಂಗ್ಲೆಂಡ್ vs ಪಾಕಿಸ್ತಾನ್ ಕ್ಯಾಂಡಿ ಸಂಜೆ 7:00 ಕ್ಕೆ
ಫೆಬ್ರವರಿ 25 ನ್ಯೂಝಿಲೆಂಡ್ vs ಶ್ರೀಲಂಕಾ ಆರ್‌ಪಿಎಸ್, ಕೊಲಂಬೊ ಸಂಜೆ 7:00 ಕ್ಕೆ
ಫೆಬ್ರವರಿ 26 ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ ಅಹಮದಾಬಾದ್ ಮಧ್ಯಾಹ್ನ 3:00
ಫೆಬ್ರವರಿ 26 ಭಾರತ vs ಝಿಂಬಾಬ್ವೆ ಚೆನ್ನೈ ಸಂಜೆ 7:00 ಕ್ಕೆ
ಫೆಬ್ರವರಿ 27 ಇಂಗ್ಲೆಂಡ್ vs ನ್ಯೂಝೀಲೆಂಡ್ ಆರ್‌ಪಿಎಸ್, ಕೊಲಂಬೊ ಸಂಜೆ 7:00 ಕ್ಕೆ
ಫೆಬ್ರವರಿ 28 ಶ್ರೀಲಂಕಾ vs ಪಾಕಿಸ್ತಾನ್ ಕ್ಯಾಂಡಿ ಸಂಜೆ 7:00 ಕ್ಕೆ
ಮಾರ್ಚ್ 1 ಸೌತ್ ಆಫ್ರಿಕಾ vs ಝಿಂಬಾಬ್ವೆ ದೆಹಲಿ ಮಧ್ಯಾಹ್ನ 3:00
ಮಾರ್ಚ್ 1 ಭಾರತ vs ವೆಸ್ಟ್ ಇಂಡೀಸ್ ಕೋಲ್ಕತ್ತಾ ಸಂಜೆ 7:00 ಕ್ಕೆ

Source link

AI Summit: ನವದೆಹಲಿ: ಎಐ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್​ ಭಾಷಣ ರದ್ದು, ಕಾರಣವೇನು? – Kannada News | Bill Gates Pulls Out of India AI Summit Keynote Amid Epstein Controversy

ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಬಿಲ್​ಗೇಟ್ಸ್(​Bill Gates) ಇಂದು ಮಾಡಬೇಕಿದ್ದ ನಿಗದಿತ ಭಾಷಣ ರದ್ದುಗೊಂಡಿದೆ. ಗೇಟ್ಸ್ ಫೌಂಡೇಶನ್‌ನ ಆಫ್ರಿಕಾ ಮತ್ತು ಭಾರತ ಕಚೇರಿಯ ಅಧ್ಯಕ್ಷ ಅಂಕುರ್ ವೋರಾ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಐ ಶೃಂಗಸಭೆಯಲ್ಲಿ ಬಿಲ್​ ಗೇಟ್ಸ್​ ಪಾಲ್ಗೊಳ್ಳುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆರಂಭದಲ್ಲಿ ಅವರು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿದ್ದವು.

ಫೆಬ್ರವರಿ 16 ರಂದು ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾದ ಎಐ ಇಂಪ್ಯಾಕ್ಟ್​ ಶೃಂಗಸಭೆಯ ಅಧಿಕೃತ ವೆಬ್​ಸೈಟ್​​ನಲ್ಲಿ ಅವರ ಹೆಸರನ್ನು ಹೆಸರಿಸಲಾಗಿತ್ತು. ಆದರೆ ಬುಧವಾರ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು ಇದು ಗೊಂದಲಕ್ಕೆ ಕಾರಣವಾಯಿತು. ಇಂದು ನಡೆದ AI ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ಭಾಷಣ ಮಾಡಬೇಕಿತ್ತು.

ಅವರ 12 ನಿಮಿಷಗಳ ಭಾಷಣ ಬೆಳಗ್ಗೆ 11.50 ಕ್ಕೆ ಭಾರತ್ ಮಂಟಪದಲ್ಲಿ ನಿಗದಿಯಾಗಿತ್ತು. ಅಲ್ಲಿ ಅನೇಕ ಜಾಗತಿಕ ನಾಯಕರು ಮತ್ತು ಉದ್ಯಮದ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ. AI ಶೃಂಗಸಭೆಯನ್ನು ಮುನ್ನಡೆಸುತ್ತಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರಿಕಾಗೋಷ್ಠಿಯಲ್ಲಿ ಗೇಟ್ಸ್ ಭಾಗವಹಿಸುವ ಬಗ್ಗೆ ಕೇಳಿದಾಗ ಉತ್ತರ ನೀಡಿರಲಿಲ್ಲ.
ಅಮೆರಿಕದ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ವಿವಾದಾತ್ಮಕ ದಾಖಲೆಗಳಲ್ಲಿ ಅವರ ಹೆಸರು ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮತ್ತಷ್ಟಿ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ಫೆಬ್ರವರಿ 16 ರಂದು ದೆಹಲಿಯ ಭಾರತ್ ಮಂಟಪದಲ್ಲಿ AI ಶೃಂಗಸಭೆ ಪ್ರಾರಂಭವಾಯಿತು ಮತ್ತು ಫೆಬ್ರವರಿ 20 ರವರೆಗೆ ನಡೆಯಲಿದೆ. ಇದರ ಜೊತೆಗೆ ಇಂಡಿಯಾ AI ಇಂಪ್ಯಾಕ್ಟ್ ಎಕ್ಸ್‌ಪೋ 2026 ಕೂಡ ನಡೆಯುತ್ತಿದ್ದು, ಪ್ರಪಂಚದಾದ್ಯಂತದ ಕಂಪನಿಗಳು ನಮ್ಮ ನಾವೀನ್ಯತೆಯನ್ನು ಪ್ರದರ್ಶಿಸಲಿವೆ.

ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಓಪನ್‌ಎಐನ ಸ್ಯಾಮ್ ಆಲ್ಟ್‌ಮನ್‌ರಂತಹ ಗಣ್ಯರು ಭಾಗವಹಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಅಪಘಾತ: ಬೈಕ್​​ ಸವಾರ ಸಾವು, ಪತ್ನಿ ಗಂಭೀರ – Kannada News | Kodagu Tragedy: Biker Killed, Wife Critical While Fleeing Police

ಮಡಿಕೇರಿ/ ಉತ್ತರ ಕನ್ನಡ, ಫೆಬ್ರವರಿ 19: ವಾಹನದ ಕಾಗದಪತ್ರಗಳು ಇಲ್ಲದ ಹಿನ್ನೆಲೆ ಪೊಲೀಸರನ್ನು ನೋಡಿ ಗಾಬರಿಯಾದ ಬೈಕ್​​ ಸವಾರ ಏಕಾಏಕಿ ವಾಹನ ತಿರುಗಿಸುವ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. ಮರೂರು ಗ್ರಾಮದ‌ ನಟೇಶ್ (31) ಮೃತ ವ್ಯಕ್ತಿಯಾಗಿದ್ದು, ಅವರ ಪತ್ನಿ ದಿವ್ಯಾ (30) ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ದಿವ್ಯಾರ ಎರಡೂ ಕಾಲುಗಳು ಮುರಿದಿವೆ ಎನ್ನಲಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ವಾಹನಗಳು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಸುಂಕಸಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಐದಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡು ಖಾಸಗಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನ ಅಂಕೋಲಾ ಹಾಗೂ ಕಾರವಾರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಹಂಪಿಯಿಂದ ಗೋವಾ ಕಡೆ ತೆರಳುತಿದ್ದ ಸೀಬರ್ಡ ಬಸ್ ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುತಿದ್ದ ಗಣೇಶ ಬಸ್​​ ಮತ್ತು ಯಲ್ಲಾಪುರ ಕಡೆಗೆ ಸಾಗುತಿದ್ದ ಲಾರಿಗೆ ಡಿಕ್ಕಿಯಾಗಿದೆ. ಸರಣಿ ಅಪಘಾತದಿಂದ ಅಂಕೋಲಾ-ಹುಬ್ಬಳ್ಳಿ ಹೆದ್ದಾರಿ ಸಂಚಾರ ಕೆಲ ಕಾಲ ಬಂದ್ ಆಗಿದ್ದು, ಸ್ಥಳಕ್ಕೆ ಅಂಕೋಲಾ ಹಾಗೂ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಅಪಘಾತವಾದ ವಾಹನಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ; ಇಡೀ ಕುಟುಂಬವೇ ದುರಂತ ಅಂತ್ಯ

ಶಾರ್ಟ್ ಸರ್ಕ್ಯೂಟ್​​ನಿಂದ ನಿಂತಿದ್ದ ಕಾರಿಗೆ ಬೆಂಕಿ

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಪಾರ್ಕಿಂಗ್​​ ಪ್ರದೇಶದಲ್ಲಿ ನಿಂತಿದ್ದ ಕಾರೊಣದು ಬೆಂಕಿಗೆ ಆಗುತಿಯಾಗಿರುವ ಘಟನೆ ತಡರಾತ್ರಿ ನಡೆದಿದೆ.  ಬೆಂಕಿಯ ತೀವ್ರತೆಗೆ ಕಾರಿನ ಪಕ್ಕದಲ್ಲೇ ನಿಂತಿದ್ದ ಆಟೋಗೆ ಕೂಡ ಬೆಂಕಿ ತಗುಲಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ. ಕಾರು ಬಹಳ ದಿನಗಳಿಂದ ಪಾರ್ಕಿಂಗ್​​ ಪ್ರದೇಶದಲ್ಲಿಯೇ ನಿಂತಿತ್ತು ಎನ್ನಲಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:46 am, Thu, 19 February 26

Source link

ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಹೃದಯಾಘಾತ – Kannada News | Swamiji heart attack prasannananda puri shifted to hyderabad for treatment update

ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ

ರಾಯಚೂರು, ಫೆ.19: ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತ ಆಗಿದೆ. ಸದ್ಯ ಸ್ವಾಮೀಜಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ವಾಲ್ಮೀಕಿ ಸಮುದಾಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಗೆ ಆಗಮಿಸಿದ್ದ ಶ್ರೀಗಳು, ನಿನ್ನೆ ರಾತ್ರಿ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅವರಿಗೆ ಏಕಾಏಕಿ ಎದೆನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಂಡಿದೆ.ಅಸ್ವಸ್ಥಗೊಂಡ ಶ್ರೀಗಳನ್ನು ಕೂಡಲೇ ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ವೈದ್ಯರ ಸಲಹೆಯಂತೆ, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಳನ್ನು ರಾಯಚೂರಿನಿಂದ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಸದ್ಯ ಶ್ರೀಗಳು ಹೈದರಾಬಾದ್‌ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಠದ ಮೂಲಗಳು ಮತ್ತು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: KSRTC ಬಸ್​​ನ ಟಿಕೆಟ್ ಮೆಷಿನ್​​ನನ್ನೇ ಕದ್ದೊಯ್ದ ಕಳ್ಳ!

ಶ್ರೀಗಳ ಆರೋಗ್ಯ ಹದಗೆಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಭಕ್ತರು ಮತ್ತು ಅನುಯಾಯಿಗಳಲ್ಲಿ ಆತಂಕ ಮೂಡಿದೆ. ಶ್ರೀಗಳು ಶೀಘ್ರವಾಗಿ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕಸದ ಸಮಸ್ಯೆ: ಕೆ.ಆರ್​​. ಮಾರ್ಕೆಟ್​​ನಲ್ಲಿ ನಿಂತಲ್ಲೇ ನಿಂತ ತ್ಯಾಜ್ಯ ಸಂಗ್ರಹಣೆ ವಾಹನಗಳು – Kannada News | Garbage Piles Up in Bengaluru as Development Fee Row Blocks Waste Disposal

ಬೆಂಗಳೂರು, ಫೆಬ್ರವರಿ 19: ಅಭಿವೃದ್ಧಿ ಶುಲ್ಕದ ವಿಚಾರವಾಗಿ ಜಿಬಿಎ ಮತ್ತು ಗ್ರಾಮಸ್ಥರ ನಡುವೆ ಉಂಟಾಗಿರುವ ಭಿನ್ನಮತದಿಂದ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ತಲೆದೂರಿದೆ. ಕೆ.ಆರ್. ಮಾರುಕಟ್ಟೆ ಬಳಿ 25-30ಕ್ಕೂ ಹೆಚ್ಚು ಆಟೋಗಳು ಮತ್ತು ಲಾರಿಗಳು ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ನಿನ್ನೆಯಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಬೆಂಗಳೂರಿನಿಂದ ಹೊರಟಿರುವ ಕಸ ತುಂಬಿದ ಲಾರಿಗಳನ್ನು ಬೆಳ್ಳಹಳ್ಳಿ ಮತ್ತು ದೊಡ್ಡಬಳ್ಳಾಪುರದಲ್ಲಿ ಡಂಪ್ ಮಾಡಲು ಗ್ರಾಮಸ್ಥರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಅಡ್ಡಿಪಡಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಶುಲ್ಕ ಬಿಡುಗಡೆ ಮಾಡಿಲ್ಲ ಎಂಬುದು ಅವರ ಆರೋಪ. ದೊಡ್ಡಬಳ್ಳಾಪುರದಲ್ಲಿ ಕಸವೂ ಬೇಡ, ಹಣವೂ ಬೇಡ ಎಂಬ ವಾದವಿದ್ದರೆ, ಇತರೆ ಡಂಪಿಂಗ್ ಯಾರ್ಡ್‌ಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಬೇಡಿಕೆಯಿದೆ. ಹೀಗಾಗಿ ಕಸದ ಲಾರಿಗಳು ಡಂಪಿಂಗ್ ಯಾರ್ಡ್‌ಗಳ ಹೊರಗೆ ನಿಂತಿವೆ. ಇದರಿಂದಾಗಿ ಹೊಸ ಕಸ ಸಂಗ್ರಹಿಸಲು ಲಾರಿಗಳ ಕೊರತೆಯಾಗಿದ್ದು, ಪರಿಸರ ಕಲುಷಿತವಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಲ್ಮಾನ್ ಖಾನ್ ತಂದೆ ಸಲೀಂ ಆರೋಗ್ಯ ಹೇಗಿದೆ? ವೈದ್ಯರಿಂದ ಗುಡ್​ನ್ಯೂಸ್ – Kannada News | Salim Khan Hospitalized on Ventilator: Doctors Confirm Stable Condition, Fans Relieved

ನಟ ಸಲ್ಮಾನ್ ಖಾನ್ ಅವರ ತಂದೆ ಮತ್ತು ಬಾಲಿವುಡ್‌ನ ಹಿರಿಯ ಬರಹಗಾರ ಸಲೀಂ ಖಾನ್ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಸಲೀಂ ಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರಬಹುದು ಎಂಬುದು ಅನೇಕರ ಊಹೆ. ಆದರೆ, ಈ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ, ‘ಸಲೀಂ ಖಾನ್ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅರ್ಥವಲ್ಲ. ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರ ಆರೋಗ್ಯ ಸುಧಾರಿಸುತ್ತಿದೆ’ ಎಂದು ಲೀಲಾವತಿ ಆಸ್ಪತ್ರೆಯ ಡಾ. ಜಲೀಲ್ ಪಾಟ್ಕರ್ ಹೇಳಿದ್ದಾರೆ.

ಡಾ. ಜಲೀಲ್ ಪಾಟ್ಕರ್ ನೀಡಿದ ಮಾಹಿತಿಯ ಪ್ರಕಾರ , ‘ಸಲೀಂ ಖಾನ್ ಅವರನ್ನು ಮಂಗಳವಾರ ರಾತ್ರಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ವೈದ್ಯ ಸಂದೀಪ್ ಚೋಪ್ರಾ ಅವರ ಸಲಹೆಯ ಮೇರೆಗೆ, ಸಲೀಂ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೊದಲ ಪರೀಕ್ಷೆಯ ನಂತರ, ಅವರಿಗೆ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ ಎಂದು ನಮಗೆ ಅರಿವಾಯಿತು. ಆದ್ದರಿಂದ ಅವರನ್ನು ಐಸಿಯುಗೆ ದಾಖಲಿಸಲಾಯಿತು. ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಆದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು’ ಎಂದಿದ್ದಾರೆ.

‘ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಹಾಗಂತ ಅವರ ಸ್ಥಿತಿ ಗಂಭೀರವಾಗಿಲ್ಲ. ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ. ನಾಳೆ ಅವರನ್ನು ವೆಂಟಿಲೇಟರ್‌ನಿಂದ ತೆಗೆದುಹಾಕಲಾಗುತ್ತದೆ. ಅವರ ವಯಸ್ಸಿನ ಕಾರಣದಿಂದಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ ಜಲೀಲ್. ಸಲೀಂ ಖಾನ್ ಅವರಿಗೆ 90 ವರ್ಷ ವಯಸ್ಸಾಗಿದೆ. ಹೀಗಾಗಿ, ಭಯದ ವಾತಾವರಣ ನಿರ್ಮಾಣ ಆಗಿದೆ. ಆದರೆ, ವೈದ್ಯರು ನೀಡಿದ ಮಾಹಿತಿಯ ನಂತರ, ಕುಟುಂಬ ಮತ್ತು ಅಭಿಮಾನಿಗಳು ನಿರಾಳರಾಗಿದ್ದಾರೆ.

ಇದನ್ನೂ ಓದಿ: 55 ರೂಪಾಯಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್

ಸಲೀಂ ಅನಾರೋಗ್ಯದ ಸುದ್ದಿ ತಿಳಿದ ನಂತರ ಇಡೀ ಖಾನ್ ಕುಟುಂಬ ಲೀಲಾವತಿ ಆಸ್ಪತ್ರೆಗೆ ಧಾವಿಸಿತು. ನಟ ಸಲ್ಮಾನ್ ಖಾನ್ ಕೂಡ ತಕ್ಷಣ ಆಸ್ಪತ್ರೆಗೆ ತಲುಪಿದರು. ಸಂಜಯ್ ದತ್ ಸೇರಿದಂತೆ ಅನೇಕರು ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version