ದುಬಾರಿ ಎಲೆಕ್ಟ್ರಿಕ್ ಕಾರು ಖರೀದಿಸಿದ ಕಿರುತೆರೆ ನಟಿ ಮೋಕ್ಷಿತಾ ಪೈ – Kannada News | Mokshitha Pai Buys Mahindra XUV400 EV Car Post Big Boss Jagaddhatri Actress Invests

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಕನಸಿನ ಹೊಸ ಕಾರನ್ನು ಮನೆಗೆ ತಂದಿದ್ದು, ಈ ಸಂಭ್ರಮದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ‘ಜಗದ್ಧಾತ್ರಿ’ ಹೆಸರಿನ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮೊದಲು ಈ ಕಾರು ಅವರ ಮನೆಗೆ ಬಂದಿದೆ.

ಇತ್ತೀಚೆಗೆ ಪೆಟ್ರೋಲ್​-ಡೀಸೆಲ್ ಕಾರುಗಳ ಬದಲು ಎಲೆಕ್ಟ್ರಿಕ್ ಕಾರುಗಳತ್ತ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಮೋಕ್ಷಿತಾ ಕೂಡ ಹಾಗೆಯೇ ಮಾಡಿದ್ದಾರೆ. ಅವರು ಮಹೀಂದ್ರಾ ಕಂಪನಿಯ XUV400 EV ಖರೀದಿಸಿದ್ದಾರೆ. ಆಕರ್ಷಕವಾದ ಕೆಂಪು ಬಣ್ಣದ ಈ ಕಾರು ಪರಿಸರ ಸ್ನೇಹಿಯಾಗಿದ್ದು, ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ. ಇದರ ಮೌಲ್ಯ ಅಂದಾಜು 17 ಲಕ್ಷದಿಂದ 20 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ತಮ್ಮ ಕುಟುಂಬದೊಂದಿಗೆ ಶೋರೂಮ್‌ಗೆ ತೆರಳಿ ಪೂಜೆ ಸಲ್ಲಿಸಿ ಹೊಸ ವಾಹನವನ್ನು ಬರಮಾಡಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭಾಶಯ ಕೋರುತ್ತಿದ್ದಾರೆ.

ಮಹೀಂದ್ರಾ ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿ ಇದಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 456 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ 8.3 ಸೆಕೆಂಡುಗಳಲ್ಲಿ 0 ಇಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಆಟೋಮ್ಯಾಟಿಕ್ ಕಾರು ಮಾತ್ರ ಇದರಲ್ಲಿ ಲಭ್ಯವಿದೆ.

ಮೋಕ್ಷಿತಾ ಹಿನ್ನೆಲೆ

‘ಪಾರು’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಮೋಕ್ಷಿತಾ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ದೊಡ್ಡ ಮಟ್ಟದ ಬ್ರೇಕ್ ನೀಡಿತು. ಅವರ ನೇರ ನಡೆ-ನುಡಿ ಮತ್ತು ಆಟದ ವೈಖರಿ ಜನರಿಗೆ ಇಷ್ಟವಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅವರಿಗೆ ಅವಕಾಶಗಳು ಮತ್ತು ಜನಪ್ರಿಯತೆ ದುಪ್ಪಟ್ಟಾಗಿದೆ.

ಇದನ್ನೂ ಓದಿ: ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿಯಾದ ಮೋಕ್ಷಿತಾ ಪೈ

ಜಗದ್ಧಾತ್ರಿ ಧಾರಾವಾಹಿ ಮೇಲೆ ನಿರೀಕ್ಷೆ

ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ‘ಜಗದ್ಧಾತ್ರಿ’ ಧಾರಾವಾಹಿಯಲ್ಲಿ ಮೋಕ್ಷಿತಾ ನಟಿಸುತ್ತಿದ್ದಾರೆ. ಈ ಧಾರಾವಾಹಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ಮೋಕ್ಷಿತಾ ಮುಖ ಎಲ್ಲಿಯೂ ರಿವೀಲ್ ಆಗಿಲ್ಲ. ಧಾರಾವಾಹಿ ಪ್ರಸಾರ ಆಗುವುದಕ್ಕೂ ಮೊದಲೇ ಮೋಕ್ಷಿತಾ ಅವರು ಹೊಸ ಕಾರು ಖರೀದಿಸಿರುವುದು ಅವರ ವೃತ್ತಿಜೀವನದ ಪಾಸಿಟಿವ್ ಬೆಳವಣಿಗೆಯನ್ನು ಸೂಚಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:02 pm, Sat, 9 May 26

Source link

ವಿಜಯ್​ಗೆ ಸಿಗಲಿದೆಯಾ ವಿಸಿಕೆ ಬೆಂಬಲ; ಸುಳಿವು ನೀಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ – Kannada News | VCK chief Thirumavalavan will officially announce stance on support to TVK by evening

ಚೆನ್ನೈ, ಮೇ 9: ತಮಿಳುನಾಡಿನಲ್ಲಿ ವಿಜಯ್ (Vijay) ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್, ಸಿಪಿಐ, ಸಿಪಿಎಂ ಪಕ್ಷ ಬೆಂಬಲ ಘೋಷಿಸಿರುವುದರಿಂದ 116 ಶಾಸಕರು ವಿಜಯ್ ಕಡೆಗಿದ್ದಾರೆ. ಆದರೆ, ಬಹುಮತಕ್ಕೆ ಇನ್ನೂ 2 ಸ್ಥಾನಗಳ ಅಗತ್ಯವಿದೆ. ಇದೀಗ ವಿಸಿಕೆ ತನ್ನ ಬೆಂಬಲ ನೀಡುತ್ತದೆಯೇ? ಇಲ್ಲವೇ? ಎಂಬುದು ಇಂದು ಸಂಜೆಯೊಳಗೆ ಗೊತ್ತಾಗಲಿದೆ. ಇಂದು ಸಂಜೆ 4 ಗಂಟೆಯ ಬಳಿಕ ತಮ್ಮ ಬೆಂಬಲ ಯಾವ ಪಕ್ಷಕ್ಕೆ ಎಂಬುದನ್ನು ಘೋಷಿಸುವುದಾಗಿ ವಿಸಿಕೆ ತಿಳಿಸಿದೆ. ಹೀಗಾಗಿ, ಇಂದು ಸಂಜೆಯೊಳಗೆ ತಮಿಳುನಾಡಿನ ಸರ್ಕಾರ ರಚನೆಯ ಬಿಕ್ಕಟ್ಟು ಬಗೆಹರಿಯುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ವಿಸಿಕೆ ಇಂದು ಸಂಜೆ ಟಿವಿಕೆಗೆ ಬೆಂಬಲ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಎಐಎಡಿಎಂಕೆ ನಾಯಕ ಪಳನಿಸ್ವಾಮಿ ಈ ಬಗ್ಗೆ ಸುಳಿವು ನೀಡಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಪಕ್ಷಕ್ಕೆ ನನ್ನ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ವಿಜಯ್ ಅವರಿಗೆ ಬಹುಮತ ಸಿಕ್ಕಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ತಮಿಳುನಾಡಿನ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಕೂಟವನ್ನು ತೊರೆದು ತಮಿಳುನಾಡು ವಿಕ್ಟರಿ ಪಾರ್ಟಿಯನ್ನು ಸೇರಿಕೊಂಡಿತು. ಈ ವಿಧಾನಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ ಸಂಸತ್ತಿನ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಅದು ಮೈತ್ರಿಕೂಟದಲ್ಲಿ ಮುಂದುವರಿಯುತ್ತದೆ ಎಂದು ವರದಿಯಾಗಿದೆ. ಇದರ ನಂತರ, ತಮಿಳುನಾಡು ವಿಕ್ಟರಿ ಪಾರ್ಟಿಗೆ ಬೆಂಬಲ 112ಕ್ಕೆ ಏರಿತು.

ಇದನ್ನೂ ಓದಿ: ಶಾಸಕರ ನಕಲಿ ಬೆಂಬಲದ ಪತ್ರ ನೀಡಿದ್ದಕ್ಕೆ ಟಿವಿಕೆ ನಾಯಕ ವಿಜಯ್ ವಿರುದ್ಧ ದೂರು ದಾಖಲು

ಅದರ ನಂತರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ (ಸಿಪಿಐಎಂ) ಪಕ್ಷಗಳು ಹೊರಗಿನಿಂದ ತಮ್ಮ ಬೆಂಬಲವನ್ನು ಘೋಷಿಸಿದ್ದವು. ಆದ್ದರಿಂದ, ತಮಿಳುನಾಡು ವಿಕ್ಟರಿ ಪಾರ್ಟಿಗೆ 116 ಶಾಸಕರ ಬೆಂಬಲವಿದೆ. ಇದನ್ನು ನಿರ್ಧರಿಸುವ ಪ್ರಮುಖ ಪಕ್ಷವೆಂದರೆ ವಿಸಿಕೆಯಾಗಿದೆ.

ವಿಸಿಕೆ ನಾಯಕ ತಿರುಮಾವಲವನ್ ನಿನ್ನೆ ಈ ಕುರಿತು ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು, “ಆಡಳಿತದಲ್ಲಿ ಪಾಲು, ಅಧಿಕಾರದಲ್ಲಿ ಪಾಲು; ಈಗ ನಮ್ಮ ಸಮಯ” ಎಂದು ಹೇಳಿದ್ದರು. ಇದಾದ ನಂತರ ತಿರುಮಾವಲವನ್ ಇದ್ದಕ್ಕಿದ್ದಂತೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರನ್ನು ವೈಯಕ್ತಿಕವಾಗಿ ಭೇಟಿಯಾದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ ನಾಯಕ ದಿನಕರನ್

ವಿಸಿಕೆ ಇದೀಗ ಟಿವಿಕೆ ಜೊತೆ ಮೈತ್ರಿಕೂಟ ರಚಿಸುವ ಅಥವಾ ಬೆಂಬಲ ನೀಡುವ ಬಗ್ಗೆ ಇಂದು ಸಂಜೆ ಘೋಷಣೆ ಮಾಡಲಾಗುವುದು ಎಂದು ಹೇಳಿದೆ. ವಿಸಿಕೆ ಮುಖ್ಯಸ್ಥ ತಿರುಮಾವಲವನ್ ಶನಿವಾರ ಸಂಜೆ ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ನಿಲುವು ಪ್ರಕಟಿಸಲಿದ್ದಾರೆ. ತಿರುಮಾವಲವನ್ ಸಂಜೆ 4 ಗಂಟೆಗೆ ಘೋಷಣೆ ಮಾಡಲಿದ್ದಾರೆ ಎಂದು ವಿಸಿಕೆ ವಕ್ತಾರ ಕೆ.ಕೆ ಪವಲನ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ ಬಗ್ಗೆ ಸಚಿವ ಮುನಿಯಪ್ಪ ಹೇಳಿದ್ದಿಷ್ಟು – Kannada News | KH Muniyappa Speaks on Roster Point Issue in Internal Reservation Posts

ಬೆಂಗಳೂರು, ಮೇ 09: ಕರ್ನಾಟಕ ಸರ್ಕಾರವು ನಾಗಮೋಹನ್‌ದಾಸ್ ವರದಿಯನ್ನು ಆಧರಿಸಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಚಾರಿತ್ರಿಕ ನಿರ್ಧಾರವನ್ನು ಕೈಗೊಂಡಿದೆ. ದಶಕಗಳಿಂದ ಬಾಕಿ ಉಳಿದಿದ್ದ ರೋಸ್ಟರ್ ಬಿಂದುವಿನ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಈ ನಿರ್ಧಾರವು ಸ್ಪಷ್ಟ ಪರಿಹಾರವನ್ನು ನೀಡುವ ಗುರಿ ಹೊಂದಿದೆ ಎಂದು ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 4೦ ವರ್ಷದ ಸಂಘಸಂಸ್ಥೆಗಳ ದಲಿತ ಸಂಘ ಸಮಿತಿಗಳ ಹೋರಾಟಕ್ಕೆ ಫಲ ಸಿಕ್ಕಿದೆ. ರೋಸ್ಟರ್ ಬಿಂದುವಿನ ಸಮಸ್ಯೆಗಳನ್ನು ಪರಿಹರಿಸಲು ಹೊಸ ಸೂತ್ರವನ್ನು ಅಳವಡಿಸಲಾಗಿದೆ. 15 ಬಿಂದುಗಳವರೆಗೆ ಸಮಸ್ಯೆ ಇಲ್ಲ. ಆದರೆ, 14, 8, 9, ಅಥವಾ 3 ಬಿಂದುಗಳು ಬಂದಾಗ, ಉದಾಹರಣೆಗೆ, 15ರಲ್ಲಿ 12 ಬಿಂದುಗಳು ಸಾಮಾನ್ಯ ವರ್ಗಕ್ಕೆ ಹೋಗಿ, 3 ಬಿಂದುಗಳು ಎಸ್ಸಿ-ಎ, ಬಿ, ಸಿ ಗೆ ಬರುತ್ತವೆ. 14 ಬಿಂದುಗಳಿದ್ದಾಗ ಎ ಮತ್ತು ಬಿ ಗುಂಪುಗಳಿಗೆ ಸಿಕ್ಕಿ, ಸಿ ಗುಂಪಿಗೆ ಸಿಗದಿರುವಂತಹ ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ಪರಿಹರಿಸಲು, ಷೆಡ್ಯೂಲ್ಡ್ ಕಾಸ್ಟ್ ಅಡಿಯಲ್ಲಿ ಬರುವ 101 ಜಾತಿಗಳೆಲ್ಲವೂ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ: ಆರೋಪಿಯೂ ಸೇರಿ ಇಬ್ಬರ ಸ್ಥಿತಿ ಗಂಭೀರ – Kannada News | Hubballi Acid Attack: 6 Month Old Baby and 4 Others Injured in Domestic Dispute

ಹುಬ್ಬಳ್ಳಿ, ಮೇ 09: ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಆಘಾತಕಾರಿ ಘಟನೆ ಹುಬ್ಬಳ್ಳಿಯ ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದಿದೆ. ನಾದಿನಿಯರ ಫೋಟೋ ತೆಗೆದ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋದ ಪರಿಣಾಮ ಸುರೇಶ್​ ಎಂಬಾತ ಕುಟುಂಬದ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ 6 ತಿಂಗಳ ಮಗುವಿನ ಮುಖ, ಬಾಯಿಗೂ ಆ್ಯಸಿಡ್​​ ತಗುಲಿದ್ದು, ರಾಜೇಶ್ವರಿ (24) ಎಂಬವರ ಸ್ಥಿತಿ ಚಿಂತಾಜನಕವಾಗಿದೆ.

  • ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ
  • ಹುಬ್ಬಳ್ಳಿಯ ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದ ಘಟನೆ
  • ನಾದಿನಿಯರ ಫೋಟೋ ತೆಗೆದ ವಿಚಾರಕ್ಕೆ ಶುರುವಾಗಿದ್ದ ಜಗಳ

ಇದನ್ನೂ ಓದಿ: ಜಗದ್ಗುರುಗಳ ಸಮ್ಮುಖದಲ್ಲಿ ಸ್ವಾಮೀಜಿ-ಭಕ್ತರ ಸಂಧಾನ; ಏನಿದು ಕುಂದಗೋಳ ಮಠದ ವಿವಾದ?

ನಾದಿನಿಯರ ವಿಚಾರವಾಗಿ ಸುರೇಶ್ ಮತ್ತು ಆತನ ಪತ್ನಿ ರಾಜೇಶ್ವರಿ ನಡುವೆ ಜಗಳ ನಡೆದಿತ್ತು. ನಾದಿನಿಯರ ಫೋಟೋ ತೆಗೆಯದಂತೆ ಗಂಡನಿಗೆ ರಾಜೇಶ್ವರಿ ತಾಕೀತು ಮಾಡಿದ್ದರೂ ಮತ್ತೆ  ಫೋಟೋ ತೆಗೆದು ಸುರೇಶ್ ಕಿರಿಕ್ ಮಾಡುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವಿನ ಜಗಳ ಆ್ಯಸಿಡ್​​ ದಾಳಿಯ ಹಂತಕ್ಕೆ ಹೋಗಿದೆ. ಘಟನೆಯಲ್ಲಿ ಶ್ರುತಿ ಹಾಗೂ ರೇಷ್ಮಾ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ವತಃ ಆರೋಪಿ ಸುರೇಶ್​ ಬೈಲ್​ ಪತ್ತಾರ(33) ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಇನ್ನು ಆರೋಪಿ ಸುರೇಶ್​ ಬೈಲ್​ ಪತ್ತಾರ ತಾಮ್ರ, ಹಿತ್ತಾಳೆ ಕೆಲಸಗಳನ್ನು ಮಾಡಿಕೊಂಡಿದ್ದ. ನಾದಿನಿಯರ ವಿಚಾರ ಸಂಬಂಧದ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ತಾಮ್ರ, ಹಿತ್ತಾಳೆ ತೊಳೆಯಲು ಬಳಸುತ್ತಿದ್ದ ಕೆಮಿಕಲ್​​ನಿಂದಲೇ ಈತ ಕುಟುಂಬದ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸುರೇಶ್​​ ಮೈಮೇಲೆಯೂ ಆ್ಯಸಿಡ್​​ ಚೆಲ್ಲಿದ ಪರಿಣಾಮ ಆತನೂ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಒಟ್ಟಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವೀಗ ಇಬ್ಬರ ಜೀವವನ್ನು ಅಪಾಯಕ್ಕೆ ನೂಕಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ – Kannada News | Mysore Pak, Grand Meal Prepared for Fans at BS Yediyurappa Abhimanotsava

ಚಿತ್ರದುರ್ಗ, ಮೇ 09: ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಭಿಮಾನೋತ್ಸವ ಹಿನ್ನೆಲೆ ಮಾದಾರ ಚೆನ್ನಯ್ಯ ಮಠದ ಸಮೀಪ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಪ್ರವೇಶ ದ್ವಾರಗಳನ್ನು ಏಳು ಸುತ್ತಿನ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ಕಟೌಟ್‌ಗಳು ರಾರಾಜಿಸುತ್ತಿವೆ. ಕಾರ್ಯಕ್ರಮಕ್ಕೆ ಬಿ.ಎಸ್.ವೈ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಉಪಹಾರ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿದೆ. 1,250ಕ್ಕೂ ಹೆಚ್ಚು ಬಾಣಸಿಗರು ಕಾರ್ಯನಿರ್ವಹಿಸುತ್ತಿದ್ದು, ಮೈಸೂರ್ ಪಾಕ್, ಮೊಸರನ್ನ, ಟೊಮೆಟೊ ಬಾತ್, ಪಲಾವ್, ಮೆಂತ್ಯ ಪಲಾವ್ ಸೇರಿದಂತೆ ವಿವಿಧ ಖಾದ್ಯಗಳ ವ್ಯವಸ್ಥೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ – Kannada News | BSY Abhimanotsava Live: Grand Celebration in Chitradurga

ಚಿತ್ರದುರ್ಗ, ಮೇ 09: ಕೋಟೆ ನಾಡು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ಕ್ಕೆ ಸಾಕ್ಷಿಯಾಗುತ್ತಿದೆ. ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯು ಏಳುಸುತ್ತಿನ ಕೋಟೆಯ ಮಾದರಿಯಲ್ಲಿದ್ದು, ಬಿಎಸ್ ವೈ ಮತ್ತು ಅಮಿತ್ ಶಾ ಅವರ ಬೃಹತ್ ಭಾವಚಿತ್ರಗಳಿಂದ ಕಂಗೊಳಿಸುತ್ತಿದೆ. ಬಿ.ವೈ.ವಿಜಯೇಂದ್ರ ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಇಬ್ಬರು ಔಟ್, ಮತ್ತಿಬ್ಬರು ಇನ್: ಹೀಗಿರಲಿದೆ RCB ಪ್ಲೇಯಿಂಗ್ ಇಲೆವೆನ್ – Kannada News | RCB are likely to make major changes in their playing XI

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಯ್​ಪುರ್​ನಲ್ಲಿ ನಾಳೆ (ಮೆ.9) ನಡೆಯಲಿರುವ ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಏಕೆಂದರೆ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆರ್​ಸಿಬಿ ಕಳೆದ ಎರಡು ಮ್ಯಾಚ್​ಗಳಲ್ಲೂ ಸೋಲನುಭವಿಸಿದೆ. ಈ ಸೋಲಿಗೆ ಮುಖ್ಯ ಕಾರಣ ಆರ್​ಸಿಬಿ ತಂಡದ ಕಳಪೆ ಬ್ಯಾಟಿಂಗ್. ಅದರಲ್ಲೂ ರೊಮಾರಿಯೊ ಶೆಫರ್ಡ್ ಹಾಗೂ ಜಿತೇಶ್ ಶರ್ಮಾ ಅವರ ಕಳಪೆ ಫಾರ್ಮ್ ಆರ್​ಸಿಬಿ ಪಾಲಿಗೆ ಮುಳುವಾಗುತ್ತಿದೆ. ಹೀಗಾಗಿ ಈ ಇಬ್ಬರನ್ನು ಆಡುವ ಬಳಗದಿಂದ ಕೈ ಬಿಡುವ ಸಾಧ್ಯತೆಯಿದೆ.

ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧ ಆರ್​ಸಿಬಿ ಪರ ಆರಂಭಿಕರಾಗಿ ಜೇಕಬ್ ಬೆಥೆಲ್ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿದರೆ, ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಲಿದ್ದಾರೆ.

ಇನ್ನು ಐದನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಕಾಣಿಸಿಕೊಂಡರೆ, ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಜೋಡರ್ನ್ ಕಾಕ್ಸ್​ ಕಣಕ್ಕಿಳಿಯಲಿದ್ದಾರೆ.

ಆಲ್​ರೌಂಡರ್ ಆಗಿ ಕೃನಾಲ್ ಪಾಂಡ್ಯ ಕಣಕ್ಕಿಳಿದರೆ, ರೊಮಾರಿಯೋ ಶೆಫರ್ಡ್ ಬದಲಿಗೆ ಫಿನಿಶರ್ ಪಾತ್ರದಲ್ಲಿ ವೆಂಕಟೇಶ್ ಅಯ್ಯರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಐಪಿಎಲ್ ವೀಕ್ಷಕರನ್ನು ಹೆಚ್ಚಿಸಲು ಖ್ಯಾತ ಉದ್ಯಮಿ ನೀಡಿದ ಸಲಹೆಗಳು ಹೀಗಿವೆ

ಇನ್ನು ಬೌಲರ್​ಗಳಾಗಿ​ ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ದಾರ್ ಕಣಕ್ಕಿಳಿಯಲಿದ್ದಾರೆ. ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸುಯಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

    • ವಿರಾಟ್ ಕೊಹ್ಲಿ
    • ಜೇಕಬ್ ಬೆಥೆಲ್
    • ದೇವದತ್ ಪಡಿಕ್ಕಲ್
    • ರಜತ್ ಪಾಟಿದಾರ್ (ನಾಯಕ)
    • ಟಿಮ್ ಡೇವಿಡ್
    • ಜೋರ್ಡನ್ ಕಾಕ್ಸ್​ (ವಿಕೆಟ್ ಕೀಪರ್)
    • ಕೃನಾಲ್ ಪಾಂಡ್ಯ
    • ವೆಂಕಟೇಶ್ ಅಯ್ಯರ್
    • ಜೋಶ್ ಹೇಝಲ್​ವುಡ್
    • ಭುವನೇಶ್ವರ್ ಕುಮಾರ್
    • ರಾಸಿಖ್ ದಾರ್
    • ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

Source link

ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾಗೆ ‘ನಾಡಾ’ ನೋಟಿಸ್ – Kannada News | NADA Issues Notices to Yashasvi Jaiswal and Shafali Verma

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ದೀಪನ ಮದ್ದು ಸೇವನೆ ತಡೆ ಘಟಕದ (NADA) ಅಧಿಕಾರಿಗಳು ನಡೆಸುವ ಡೋಪಿಂಗ್ ಪರೀಕ್ಷೆಗೆ ಗೈರಾಗಿರುವ ಕಾರಣ, ಈ ಇಬ್ಬರಿಗೆ ನಾಡಾ ನೋಟಿಸ್ ಜಾರಿ ಮಾಡಿದೆ.

ಏನಿದು ಘಟನೆ?

ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯ (NADA) ನಿಯಮದಂತೆ, ‘ನೋಂದಾಯಿತ ಪರೀಕ್ಷಾ ಪೂಲ್’ನಲ್ಲಿರುವ ಕ್ರೀಡಾಪಟುಗಳು ತಾವು ಇರುವ ಸ್ಥಳದ ಮಾಹಿತಿಯನ್ನು ಮೊದಲೇ ನೀಡಬೇಕಾಗುತ್ತದೆ. ಆದರೆ, ನಿಗದಿಪಡಿಸಿದ ಸಮಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶಫಾಲಿ ವರ್ಮಾ ತಮ್ಮ ಸ್ಥಳಗಳಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

  • ಶಫಾಲಿ ವರ್ಮಾ: ನವೆಂಬರ್ 7, 2025 ರಂದು ಪರೀಕ್ಷೆಗೆ ಲಭ್ಯರಿರಲಿಲ್ಲ.
  • ಯಶಸ್ವಿ ಜೈಸ್ವಾಲ್: ಡಿಸೆಂಬರ್ 17, 2025 ರಂದು ಅಧಿಕಾರಿಗಳು ಭೇಟಿ ನೀಡಿದಾಗ ಸ್ಥಳದಲ್ಲಿ ಇರಲಿಲ್ಲ.

ಬಿಸಿಸಿಐ ಪ್ರತಿಕ್ರಿಯೆ:

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಆಟಗಾರರಿಂದ ವಿವರಣೆ ಕೇಳಲು ಮುಂದಾಗಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಮಾಹಿತಿ ನೀಡುವಲ್ಲಿನ ವಿಳಂಬದಿಂದ ಹೀಗಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಮಂಡಳಿ ತಿಳಿಸಿದೆ.

ನಿಯಮಗಳೇನು ಹೇಳುತ್ತವೆ?

ವಾಡಾ (WADA) ಮತ್ತು ನಾಡಾ (NADA) ನಿಯಮಗಳ ಪ್ರಕಾರ, ಯಾವುದೇ ಕ್ರೀಡಾಪಟು 12 ತಿಂಗಳ ಅವಧಿಯಲ್ಲಿ ಸತತ ಮೂರು ಬಾರಿ ಪರೀಕ್ಷೆಗೆ ಲಭ್ಯವಾಗದಿದ್ದರೆ, ಅದನ್ನು ಉದ್ದೀಪನ ಮದ್ದು ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಆಟಗಾರರಿಗೆ 2 ವರ್ಷಗಳವರೆಗೆ ನಿಷೇಧ ಹೇರುವ ಸಾಧ್ಯತೆ ಇರುತ್ತದೆ.

ಸದ್ಯಕ್ಕೆ ಇದು ಯಶಸ್ವಿ ಜೈಸ್ವಾಲ್ ಹಾಗೂ ಶಫಾಲಿ ವರ್ಮಾಗೆ ಮೊದಲ ನೋಟಿಸ್ ಆಗಿರುವುದರಿಂದ, ತಕ್ಷಣದ ನಿಷೇಧದ ಭೀತಿ ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಅವರು ಎಚ್ಚರಿಕೆ ವಹಿಸಬೇಕಿದೆ.

ಮುಂದಿನ ನಡೆಯೇನು?

ನಡಾ ಸಂಸ್ಥೆಯು ಈ ಆಟಗಾರರಿಗೆ ತಮ್ಮ ವಿವರಣೆ ನೀಡಲು ಏಳು ದಿನಗಳ ಕಾಲಾವಕಾಶ ನೀಡಿದೆ. ಈ ಅವಧಿಯೊಳಗೆ ಅವರು ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ವಿವರಣೆ ತೃಪ್ತಿಕರವಾಗಿಲ್ಲದಿದ್ದರೆ, ಇದನ್ನು ಅಧಿಕೃತವಾಗಿ ‘ಮಿಸ್ಡ್ ಟೆಸ್ಟ್’ ಎಂದು ದಾಖಲಿಸಲಾಗುತ್ತದೆ.

ಏನಿದು ನಾಡಾ?

ನಾಡಾ (NADA) ಎಂದರೆ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (National Anti-Doping Agency). ಇದು ಭಾರತ ಸರ್ಕಾರ ಸ್ಥಾಪಿಸಿದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಯಾವುದೇ ನಿಷೇಧಿತ ಮದ್ದುಗಳನ್ನು (Doping) ಬಳಸದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.  ನಾಡಾದ ಬಗ್ಗೆಗಿನ ಮುಖ್ಯ ಅಂಶಗಳು ಈ ಕೆಳಗಿನಂತಿವೆ…

    • ಕ್ರೀಡಾಪಟುಗಳ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಡೋಪಿಂಗ್ ಪರೀಕ್ಷೆ ಮಾಡುವುದು.
    • ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (WADA) ಹಾಕಿಕೊಟ್ಟ ನಿಯಮಗಳನ್ನು ಭಾರತದಲ್ಲಿ ಜಾರಿಗೆ ತರುವುದು.
    • ಉದ್ದೀಪನ ಮದ್ದುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಕ್ರೀಡಾಪಟುಗಳಿಗೆ ಶಿಕ್ಷಣ ಮತ್ತು ಜಾಗೃತಿ ನೀಡುವುದು.
    • ವೇರ್‌ಎಬೌಟ್ಸ್ (Whereabouts) ನಿಯಮವನ್ನು ಜಾರಿಗೊಳಿಸುವುದು. ಅಂದರೆ ಪ್ರಮುಖ ಕ್ರೀಡಾಪಟುಗಳು ತಾವು ಎಲ್ಲಿದ್ದೇವೆ ಎಂಬ ಮಾಹಿತಿಯನ್ನು ಪ್ರತಿದಿನ ನಡಾ ಸಂಸ್ಥೆಗೆ ನೀಡಬೇಕಾಗುತ್ತದೆ. ಪರೀಕ್ಷೆಗಾಗಿ ಅಧಿಕಾರಿಗಳು ಬಂದಾಗ ಅವರು ಆ ಸ್ಥಳದಲ್ಲಿ ಇಲ್ಲದಿದ್ದರೆ ಅದನ್ನು ‘ಮಿಸ್ಡ್ ಟೆಸ್ಟ್’ (Missed Test) ಎಂದು ಪರಿಗಣಿಸಲಾಗುತ್ತದೆ.
    •  ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಅಥವಾ ನಿಯಮ ಉಲ್ಲಂಘಿಸಿದ ಆಟಗಾರರಿಗೆ ಆಟದಿಂದ ನಿಷೇಧ ಹೇರುವ ಅಧಿಕಾರ ನಡಾ ಸಂಸ್ಥೆಗಿದೆ.

ಸರಳವಾಗಿ ಹೇಳುವುದಾದರೆ, ಕ್ರೀಡೆಯಲ್ಲಿ ‘ನ್ಯಾಯಯುತ ಆಟ’ (Fair Play) ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ.

Source link

ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ಮೂವರು ಗಂಭೀರ, ಹಲವರಿಗೆ ಗಾಯ – Kannada News | Wedding Party Bus Overturns on Lake Bund Near Soraba; Major Tragedy Averted, 3 Seriously Injured

ಶಿವಮೊಗ್ಗ, ಮೇ 09: ಕೆರೆಯ ಏರಿ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿಯಾಗಿರುವ ಘಟನೆ ಸೊರಬ ತಾಲೂಕಿನ ಕೊರಕೋಡು ಕ್ರಾಸ್ ಬಳಿ ನಡೆದಿದೆ. ಸಿದ್ದಾಪುರದಿಂದ ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಆನವಟ್ಟಿ – ಸೊರಬ ಮಾರ್ಗವಾಗಿ ಸಂಚರಿಸುವ ವೇಳೆ ಅಪಘಾತಕ್ಕೀಡಾಗಿದೆ. ಕೆರೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಮಗುಚಿ ಬಿದ್ದಿದೆ. ಅದೇಷ್ಟವಶಾತ್​​ ದೊಡ್ಡ ಅನಾಹುತ ತಪ್ಪಿದ್ದು, ಘಟನೆಯಲ್ಲಿ ಮೂವರು ಗಂಬೀರ ಗಾಯಗೊಂಡಿದ್ದಾರೆ. ಬಸ್​​ನಲ್ಲಿ ಸುಮಾರು 50 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ‘ಕೂಲ್’ ಅನುಭವ: ಉರಿಬಿಸಿಲಿನ ನಡುವೆ ನೆರಳಿನ ಆಸರೆ ನೀಡಿದ ಪರ್ಯಾಯ ಶೀರೂರು ಮಠ – Kannada News | Udupi Sri Krishna Math: Paryaya Shiroor Math Installs Permanent Roofing and Cool Drinks Facility for Devotees

ಭಕ್ತರ ಸರದಿ ಸಾಲು ಇರುವ ಭಾಗದಲ್ಲಿ ಶಾಶ್ವತ ಮೇಲ್ಚಾವಣಿ Image Credit source: tv9

ಉಡುಪಿ, ಮೇ 9: ಉಡುಪಿಯ (Udupi) ಶ್ರೀ ಕೃಷ್ಣ ಮಠಕ್ಕೆ (Sri Krishna Math) ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ದಿನದಿಂದ ದಿನಕ್ಕೆ ಏರುತ್ತಿರುವ ಉರಿಬಿಸಿಲಿನ ನಡುವೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವುದು ಭಕ್ತರಿಗೆ ದೊಡ್ಡ ಸವಾಲಾಗಿದೆ. ಇದನ್ನು ಮನಗಂಡ ಪ್ರಸಕ್ತ ಪರ್ಯಾಯ ಶೀರೂರು ಮಠದ ಶ್ರೀಗಳು, ಭಕ್ತರ ಅನುಕೂಲಕ್ಕಾಗಿ ಸರದಿ ಸಾಲು ಇರುವ ಭಾಗದಲ್ಲಿ ಶಾಶ್ವತ ಮೇಲ್ಚಾವಣಿ ಅಳವಡಿಸುವ ಮೂಲಕ ಬಿಸಿಲಿನ ತಾಪದಿಂದ ಭಕ್ತರಿಗೆ ದೊಡ್ಡ ಮಟ್ಟದ ರಿಲ್ಯಾಕ್ಸ್ ನೀಡಿದ್ದಾರೆ.

ಮುಖ್ಯಾಂಶಗಳು

  • ಬೇಸಿಗೆಯ ಬಿಸಿಲಿನ ತಾಪದಿಂದ ರಕ್ಷಣೆ ನೀಡಲು ಭಕ್ತರ ಸರದಿ ಸಾಲಿನ ಜಾಗಕ್ಕೆ ಶಾಶ್ವತ ಮೇಲ್ಚಾವಣಿ ಅಳವಡಿಕೆ.
  • ದರ್ಶನಕ್ಕಾಗಿ ಕಾಯುವ ಭಕ್ತರಿಗೆ ಪ್ರತಿದಿನ ತಂಪು ಪಾನೀಯ ವಿತರಿಸುವ ವಿಶೇಷ ವ್ಯವಸ್ಥೆ.
  • ಸ್ಥಳೀಯ ಭಕ್ತರಿಗೆ ಕನಕನ ಕಿಂಡಿ ಮೂಲಕ ದರ್ಶನ ಪಡೆಯಲು ಪ್ರತ್ಯೇಕ ಸರದಿ ಸಾಲಿನ ಸೌಲಭ್ಯ.

ಬಿಸಿಲಿನ ತಾಪಕ್ಕೆ ಬ್ರೇಕ್

ಉಡುಪಿ ನಗರದಲ್ಲಿ ಈ ಬಾರಿ ಬಿಸಿಲಿನ ತಾಪ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇದರ ಮಧ್ಯೆಯೇ ಬೇಸಿಗೆ ರಜೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಮಠಕ್ಕೆ ಆಗಮಿಸುತ್ತಿದ್ದಾರೆ. ಕಾಂಕ್ರೀಟ್ ನೆಲದ ಮೇಲೆ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುವುದು ಭಕ್ತರಿಗೆ, ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಹರಸಾಹಸವಾಗಿತ್ತು. ರಥಬೀದಿಯ ಭಾಗದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದ ಕಾರಣ ಭಕ್ತರು ಸಂಕಷ್ಟ ಅನುಭವಿಸುತ್ತಿದ್ದರು.

ಶೀರೂರು ಮಠದ ಮಹತ್ವದ ಕ್ರಮ

ಭಕ್ತರ ಈ ಸಮಸ್ಯೆಯನ್ನು ಮನಗಂಡ ಪರ್ಯಾಯ ಶೀರೂರು ಮಠದ ದಿವಾನರಾದ ಉದಯ ಸರಳ್ತಾಯ ಮತ್ತು ತಂಡದವರು ಶ್ರೀಗಳ ಮಾರ್ಗದರ್ಶನದಲ್ಲಿ ಭಕ್ತರ ಹಿತದೃಷ್ಟಿಯಿಂದ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಗೀತಾ ಮಂದಿರದ ಮೂಲಕ ಸಾಗುವ ಸರದಿಯ ಸಾಲಿನಲ್ಲಿ ಶಾಶ್ವತ ಮೇಲ್ಚಾವಣಿ ನಿರ್ಮಿಸಲಾಗಿದೆ. ಇದರಿಂದಾಗಿ ಭಕ್ತರು ನೆರಳಿನಲ್ಲಿ ನಿಂತು ನಿರಾಳವಾಗಿ ದರ್ಶನ ಪಡೆಯಲು ಸಾಧ್ಯವಾಗುತ್ತಿದೆ. ಅಲ್ಲದೆ, ಸರದಿಯ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲಾಗಿದ್ದು, ಸಾಲಿನಲ್ಲಿ ನಿಂತವರಿಗೆ ತಂಪು ಪಾನೀಯ ನೀಡುವ ಮೂಲಕ ಮಠವು ಭಕ್ತರ ದಾಹ ತಣಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ರಾಜ್ಯದ ವಾಯು ಗುಣಮಟ್ಟದಲ್ಲಿ ಸುಧಾರಣೆ: ಬೆಂಗಳೂರಿನಲ್ಲಿ ಮಳೆ ತಂದ ತಂಪು, ಶಿವಮೊಗ್ಗದ ಗಾಳಿ ಅತ್ಯಂತ ಸ್ವಚ್ಛ!

ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮಠವು ಕೈಗೊಂಡಿರುವ ಈ ಮುನ್ನೆಚ್ಚರಿಕಾ ಕ್ರಮಗಳಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version