ಝಿಂಬಾಬ್ವೆ ಸರಣಿಯಿಂದ ಹೊರಗುಳಿಯಲಿರುವ ಗೌತಮ್ ಗಂಭೀರ್! – Kannada News | Gautam Gambhir out of Zimbabwe tour

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜುಲೈ 23 ರಿಂದ ಶುರುವಾಗಲಿರುವ ಈ ಸರಣಿಯಿಂದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೊರಗುಳಿಯಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಭಾರತ ತಂಡವು ಬ್ಯಾಕ್ ಟು ಬ್ಯಾಕ್ ಸರಣಿ ಹಾಗೂ ಟೂರ್ನಿಗಳನ್ನು ಆಡಲಿದೆ. ಹೀಗಾಗಿ ಕೋಚಿಂಗ್ ಸಿಬ್ಬಂದಿ ವಿಭಾಗವನ್ನು ವಿಭಜಿಸಿ ವಿಶ್ರಾಂತಿ ನೀಡಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ….

Read More

ಗರ್ಲ್​​​ಫ್ರೆಂಡ್​​ನ ಅಭಿಮಾನಿಗಳಿಗೆ ಪರಿಚಯಿಸಿದ ಸ್ಟಾರ್ ನಟ

ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಅವರು ತಮ್ಮ ಗರ್ಲ್​​​ಫ್ರೆಂಡ್​​ನ ಅಭಿಮಾನಿಗಳ ಎದುರು ಪರಿಚಯಿಸಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅವರಿಂದ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸಿದ್ದರು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಅವರು ಗರ್ಲ್​​ಫ್ರೆಂಡ್ ಫೋಟೋ ಪೋಸ್ಟ್ ಮಾಡಿದ್ದಾರೆ. ಶ್ರೀನಿವಾಸ್ ಅವರ ಗೆಳತಿ ಹೆಸರು ಕಾವ್ಯಾ ರೆಡ್ಡಿ. ನಿಶ್ಚಿತಾರ್ಥ ಹಾಗೂ ಮದುವೆ…

Read More

IPL 2026: ಲೀಗ್ ಹಂತದ ಅರ್ಧದಷ್ಟು ಪಂದ್ಯಗಳಿಗೆ ಧೋನಿ ಅಲಭ್ಯ

2026 ರ ಐಪಿಎಲ್​ಗೆ ಅದ್ಧೂರಿ ಆರಂಭ ಸಿಕ್ಕಿದೆ. ಮೊದಲ ಪಂದ್ಯವೇ ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿದೆ. ಇದೆಲ್ಲದರ ನಡುವೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಐಕಾನ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದಾಗಿ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಫ್ರಾಂಚೈಸಿಯ ಅಧಿಕೃತ ಹೇಳಿಕೆಯ ಪ್ರಕಾರ, ಧೋನಿ ಪುನರ್ವಸತಿಗೆ ಒಳಗಾಗುತ್ತಿದ್ದ್ದು, ಮೊದಲ ಎರಡು ವಾರಗಳವರೆಗೆ ಐಪಿಎಲ್​ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರರ್ಥ ಧೋನಿ ಕನಿಷ್ಠ ಮೂರು ಪಂದ್ಯಗಳನ್ನು…

Read More

ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ; ಕ್ಲೋರೈಡ್ ಸೋರಿಕೆಯಿಂದ ಆತಂಕ, ಭಾರೀ ಟ್ರಾಫಿಕ್ ಜಾಮ್ – Kannada News | Chemical Laden Lorry Overturns Near Nelamangala, Chloride Leak Triggers Traffic Jam on Tumakuru Bengaluru Highway

ಬೆಂಗಳೂರು ಗ್ರಾಮಾಂತರ, ಜುಲೈ 22: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗ್ರಾಮದ ಬಳಿ ಕ್ಲೋರೈಡ್ ಕೆಮಿಕಲ್ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಕೆಮಿಕಲ್ ಸೋರಿಕೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅಪಘಾತದಿಂದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ವರೆಗೆ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ವರದಿ:…

Read More

Gold Rates: ಚಿನ್ನದ ಬೆಲೆ ಗುರುವಾರ ಮತ್ತೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 5th March 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮಾರ್ಚ್ 5: ಯುದ್ಧದ ನಡುವೆಯೂ ಚಿನ್ನದ ಬೆಲೆ (Gold Rates) ಮತ್ತೆ ಇಳಿದಿದೆ. ನಿನ್ನೆ ಬುಧವಾರ ಗ್ರಾಮ್​ಗೆ 500 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು ಗುರುವಾರ 90 ರೂ ತಗ್ಗಿದೆ. 15,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಇದರ ಬೆಲೆ ಕಡಿಮೆಗೊಂಡಿದೆ. ಇದೇ ವೇಳೆ, ಬೆಳ್ಳಿ ಬೆಲೆ ಕುಸಿತ ಇವತ್ತು ಆಗಿಲ್ಲ. ನಿನ್ನೆಯ ಬೆಲೆಯೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,49,900 ರುಪಾಯಿ…

Read More

ರಜನೀಕಾಂತ್ ಸಿನಿಮಾ: ಮೂರನೇ ಬಾರಿ ನಿರ್ದೇಶಕ ಬದಲು – Kannada News | Rajinikanth 173 movie director changed again

ರಜನೀಕಾಂತ್ (Rajinikanth) ಸಿನಿಮಾ ನಿರ್ಮಿಸಲು, ನಿರ್ದೇಶಿಸಲು ಜನ ಸಾಲು ಗಟ್ಟಿ ನಿಂತಿದ್ದಾರೆ. ಆದರೆ ಯಾಕೋ ರಜನೀಕಾಂತ್ ಅವರ ಹೊಸ ಸಿನಿಮಾಕ್ಕೆ ನಿರ್ದೇಶಕರುಗಳೇ ಸೆಟ್ ಆಗುತ್ತಿಲ್ಲ. ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಕಮಲ್ ಹಾಸನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಅವರ 173ನೇ ಸಿನಿಮಾ ಸೆಟ್ಟೇರಲಿಕ್ಕಿದೆ. ಈಗ ಸಮಸ್ಯೆ ಆಗಿರುವುದು ಇದೇ ಸಿನಿಮಾಕ್ಕೆ. ಈಗಾಗಲೇ ಎರಡು ನಿರ್ದೇಶಕರನ್ನು ಬದಲಾಯಿಸಲಾಗಿತ್ತು. ಈಗ ಮೂರನೇ ನಿರ್ದೇಶಕರೂ ಸಹ ಸಿನಿಮಾದಿಂದ ಹೊರನಡೆದಿದ್ದಾರೆ. ರಜನೀಕಾಂತ್ ಅವರ…

Read More

ಮಲಯಾಳಂಗೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶೆಟ್ಟಿ

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗು ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಅನುಷ್ಕಾ ಹೊಂದಿದ್ದಾರೆ. ‘ಅರುಂಧತಿ’ ಸೇರಿದಂತೆ ಕೆಲವು ಮಹಿಳಾ ಪ್ರಧಾನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿರುವ ಅನುಷ್ಕಾ ಶೆಟ್ಟಿ, ಒಂದು ಭರ್ಜರಿ ಕಮ್​​ಬ್ಯಾಕ್​​ಗಾಗಿ ಪ್ರಯತ್ನಿಸುತ್ತಿದ್ದಾರೆ. ಅನುಷ್ಕಾರ ಈ ಹಿಂದಿನ ಸಿನಿಮಾ ‘ಘಾಟಿ’ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ ಬಾಕ್ಸ್ ಆಫೀಸ್​​ನಲ್ಲಿ ಧಾರುಣ ಸೋಲು…

Read More

ಮಹಾಶಿವರಾತ್ರಿಗೆ ಊರಿಗೆ ಹೋಗುವವರಿಗೆ ಸಿಹಿಸುದ್ದಿ ನೀಡಿದ ಸಾರಿಗೆ, ರೈಲ್ವೆ ಇಲಾಖೆ – Kannada News | Shivaratri Special Buses: KSRTC Adds 2,155 Services from Bengaluru; Book Tickets

ಬೆಂಗಳೂರು, ಫೆ.13: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಲಕ್ಷಾಂತರ ಜನರು ತಮ್ಮ ಸ್ವಗ್ರಾಮಗಳತ್ತ ಮುಖ ಮಾಡಿದ್ದಾರೆ. ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯು ಬರೋಬ್ಬರಿ 2,155 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಘೋಷಿಸಿದೆ. ಹಬ್ಬದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ರಾತ್ರಿಯಿಂದಲೇ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಇದನ್ನು ಮನಗಂಡು ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ…

Read More

ಬಾಂಡ್ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆದಾರರಿಗೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಹೊರೆ ಇಲ್ಲ – Kannada News

ನವದೆಹಲಿ, ಜೂನ್ 5: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತ ಸರ್ಕಾರದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ ಗಳಿಸುವ ಲಾಭದ ಮೇಲಿನ ‘ಬಂಡವಾಳ ಗಳಿಕೆ ತೆರಿಗೆ’ಯನ್ನು (Capital Gains Tax) ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಿದೆ. ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ (Global Bond Indices – ಉದಾಹರಣೆಗೆ ಜೆ.ಪಿ. ಮಾರ್ಗನ್ ಎಮರ್ಜಿಂಗ್ ಮಾರ್ಕೆಟ್ ಬಾಂಡ್ ಇಂಡೆಕ್ಸ್) ಭಾರತೀಯ ಸರ್ಕಾರಿ ಬಾಂಡ್‌ಗಳನ್ನು ಸೇರ್ಪಡೆಗೊಳಿಸಿದ ನಂತರ ವಿದೇಶಿ ಹೂಡಿಕೆಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಕರ್ಷಿಸುವುದು ಈ ನಿರ್ಧಾರದ ಪ್ರಮುಖ ಗುರಿಯಾಗಿದೆ. ಈ…

Read More

ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ

ಕನ್ನಡ ಚಿತ್ರರಂಗದ ತಾರಾ ಜೋಡಿ ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯ. ಇತ್ತೀಚೆಗಷ್ಟೆ ಈ ದಂಪತಿಗೆ ಗಂಡು ಮಗು ಜನಿಸಿದೆ. ಇದೀಗ ಈ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಮಗು ಜನಿಸಿದ ಮೇಲೆ ಹರಕೆ ತೀರಿಸಲೆಂದು ದೇವಾಲಯಕ್ಕೆ ಈ ದಂಪತಿ ಭೇಟಿ ನೀಡಿದ್ದರು. ಕೃಷ್ಣ, ಮುಖ್ಯಪ್ರಾಣ ದರ್ಶನ ಪಡೆದ ವಸಿಷ್ಠ, ಹರಿಪ್ರಿಯ. ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದ ಪಡೆದ ದಂಪತಿ. ಮಗನಿಗೆ ಕೃಷ್ಣ, ಮುಖ್ಯ ಪ್ರಾಣ ದರ್ಶನ ಮಾಡಿದರು. ಬಳಿಕ ಹರಕೆ…

Read More