‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ ನೋಡಿ.. – Kannada News | Kichcha Sudeep in KD Movie Jogi Prem Dhruva Sarja press meet

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾ (KD Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ, ಸಂಜಯ್ ದತ್, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಕಿಚ್ಚ ಸುದೀಪ್ (Kichcha Sudeep) ಅವರು ಅತಿಥಿ ಪಾತ್ರ ಮಾಡಿದ್ದಾರೆ. ಆದ್ದರಿಂದ ಸುದೀಪ್ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕಿಚ್ಚ ಸುದೀಪ್ ಅವರ ಜೊತೆ ‘ಕೆಡಿ’ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಸಿನಿಮಾ ಕುರಿತ ಇಂಟರೆಸ್ಟಿಂಗ್ ವಿಷಯಗಳನ್ನು ಜೋಗಿ ಪ್ರೇಮ್, ಕಿಚ್ಚ ಸುದೀಪ್ ಹಂಚಿಕೊಳ್ಳುತ್ತಿದ್ದಾರೆ. ಸುದ್ದಿಗೋಷ್ಠಿಯ (KD Film Press Meet) ಲೈವ್ ವಿಡಿಯೋ ಇಲ್ಲಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಐಪಿಎಲ್‌ನಲ್ಲಿ 11ನೇ ಬಾರಿಗೆ ಈ ಸಾಧನೆ ಮಾಡಲು ವಿರಾಟ್ ಕೊಹ್ಲಿ ರೆಡಿ – Kannada News | IPL 2026: Virat Kohli set for historic 11th 400+ run season vs DC

ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಶಿಖರ್ ಧವನ್, ಸುರೇಶ್ ರೈನಾ ಮತ್ತು ಡೇವಿಡ್ ವಾರ್ನರ್ ತಲಾ ಒಂಬತ್ತು ಆವೃತ್ತಿಗಳಲ್ಲಿ 400 ರನ್‌ಗಳ ಗಡಿ ದಾಟಿದ್ದಾರೆ. ಈ ಮೈಲಿಗಲ್ಲಿನ ಜೊತೆಗೆ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿಯೂ ಇದ್ದಾರೆ.

Source link

‘ಎಂಥ ಮನುಷ್ಯರು ನೀವು?’: ಮೆಟ್ರೋದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದ ಆರೋಪಿಗೆ ಹೈಕೋರ್ಟ್ ಚೀಮಾರಿ, ಅರ್ಜಿ ವಜಾ – Kannada News | High Court Dismisses Instagram User Diganth BK’s Petition in Bengaluru Metro Obscene Video Case

ಬೆಂಗಳೂರು, ಏಪ್ರಿಲ್​ 27: ನಮ್ಮ ಮೆಟ್ರೋ (Namma Metro) ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದ ದಿಗಂತ್.ಬಿ.ಕೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಷ್ಟೇ ಅಲ್ಲದೆ ‘ನೀವು ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ಬಿಡುವುದಿಲ್ಲ, ಯಾವ ರೀತಿಯ ಮನುಷ್ಯರು ನೀವು’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್​ ಖಾತೆ ಹೊಂದಿದ್ದ ದಿಗಂತ್.ಬಿ.ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ತಿರಸ್ಕರಿಸಿದೆ.

ಯಾವ ರೀತಿಯ ಮನುಷ್ಯರು ನೀವು?

ಇನ್ನು ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ನೀವು ಮಹಿಳೆಯರ ಮುಂಭಾಗ ಮತ್ತು ಹಿಂಭಾಗದಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕುತ್ತೀರಾ, ಯಾವ ರೀತಿಯ ಮನುಷ್ಯರು ನೀವು? ಮೆಟ್ರೋದಲ್ಲಿ ಮಾತ್ರವಲ್ಲ, ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ, ನಾಚಿಕೆಯಾಗಲ್ವಾ’ ಎಂದು ಕಿಡಿಕಾರಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಹುಡುಗಿಯರ ಆಕ್ಷೇಪಾರ್ಹ ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್: ವ್ಯಾಪಕ ಆಕ್ರೋಶ

ಇನ್ನು ಅರ್ಜಿದಾರರ ಪರ ವಕೀಲ ಎಸ್​​ಆರ್‌ ಶ್ರೀಪ್ರಸಾದ್‌ ವಾದ ಮಂಡಿಸಿದ್ದು, ‘ಮೆಟ್ರೋದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಇಲ್ಲಿ ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ ಹೊರತು ಯಾವುದೇ ಸಂತ್ರಸ್ತ ಮಹಿಳೆಯರು ದೂರು ನೀಡಿಲ್ಲ. ಹಾಗಾಗಿ ಇಲ್ಲಿ ಯಾವುದೇ ಅಪರಾಧ ನಡೆದಿಲ್ಲ’, ಎಂದು ವಾದಿಸಿದರು.

ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತಪ್ಪಿಸಿಕೊಳ್ಳಲು ಆಗುವುದಿಲ್ಲ

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಪೀಠವು, ‘ಇನ್‌ಸ್ಟಾಗ್ರಾಂನಲ್ಲಿ ‘ಮೆಟ್ರೊ ಚಿಕ್ಸ್‌ ರೀಲ್ಸ್‌’ ಎಂಬ ಪ್ರತ್ಯೇಕ ಪೇಜ್‌ ಸೃಷ್ಟಿಸಲಾಗಿದೆ. ಇಂತಹ ಗಂಭೀರ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕೆಲವು ವಿಚಾರಗಳಲ್ಲಿ ತಾಂತ್ರಿಕತೆಗಿಂತ ನೈತಿಕತೆ ಮತ್ತು ಸುರಕ್ಷತೆ ಮುಖ್ಯ, ಆ ತಾಂತ್ರಿಕ ವಾದಗಳಿಗೆ ಬ್ರೇಕ್ ಹಾಕುವ ಸಮಯ ಬಂದಿದೆ’ ಎಂದು ಹೇಳಿದೆ.

ಅಲ್ಲದೆ, ಮಹಿಳೆಯರನ್ನು ಅವರ ಅನುಮತಿಯಿಲ್ಲದೆ ಅಶ್ಲೀಲವಾಗಿ ಚಿತ್ರೀಕರಿಸಿ ಸೋಶಿಯಲ್​ ಮೀಡಿಯಾಗೆ ಅಪ್‌ಲೋಡ್ ಮಾಡುವುದು ಅಪರಾಧವಲ್ಲದೆ ಮತ್ತೇನು? ಎಂದು ಖಾರವಾಗಿ ಪ್ರಶ್ನಿಸಿದ ಪೀಠ, ಆರೋಪಿಯ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣ ಹಿನ್ನೆಲೆ

ದಿಗಂತ್ ಬಿ.ಕೆ ಎಂಬಾತ ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಿದ್ದ. ಈ ಬಗ್ಗೆ ಬನಶಂಕರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. 14 ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ FIR ದಾಖಲಿಸಿದ್ದರು. 2025ರ ಮೇ ತಿಂಗಳಲ್ಲಿ ಬಿ.ಕೆ. ದಿಗಂತ್​​ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ಈತನ ಇನ್‌ಸ್ಟಾಗ್ರಾಮ್ ಖಾತೆ 6,000ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹಾಗೂ ಟೆಲಿಗ್ರಾಮ್‌ನಲ್ಲಿ 1,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಪ್ರಸ್ತುತ ಬೆಂಗಳೂರಿನ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78(2), 238(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:38 pm, Mon, 27 April 26

Source link

ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್ – Kannada News | Aamir Khan emotional at son Junaid Khan Ek Din event praises Sai Pallavi as best actor

ಬಾಲಿವುಡ್ ನಟ ಆಮಿರ್ ಖಾನ್ ಅವರು ತಮ್ಮ ಮಗ ಜುನೈದ್ ಖಾನ್ (Junaid Khan) ವೃತ್ತಿಜೀವನದ ಬಗ್ಗೆ ಬಹಳ ಕಾಳಜಿ ಮತ್ತು ಹೆಮ್ಮೆ ಹೊಂದಿದ್ದಾರೆ. ಇತ್ತೀಚೆಗೆ ಜುನೈದ್ ನಟನೆಯ ‘ಏಕ್ ದಿನ್’ ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಲಾಗಿದ್ದ ‘ಏಕ್ ದಿನ್ ಕಿ ಮೆಹ್ಫಿಲ್’ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಎಲ್ಲರ ಎದುರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಆಮಿರ್ ಖಾನ್ (Aamir Khan) ಅವರು ಸಿನಿಮಾದ ತುಣುಕೊಂದನ್ನು ನೋಡುತ್ತಾ ಭಾವುಕರಾಗಿರುವುದು ಕಂಡುಬಂದಿದೆ. ಅಳು ತಡೆಯಲಾಗದೆ ತಮ್ಮ ಶರ್ಟ್‌ನಿಂದಲೇ ಕಣ್ಣೀರನ್ನು ಒರೆಸಿಕೊಂಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಕುಳಿತಿದ್ದ ನಟಿ ಸಾಯಿ ಪಲ್ಲವಿ (Sai Pallavi) ಮತ್ತು ಮಗ ಜುನೈದ್ ಅವರು ಆಮಿರ್ ಅವರನ್ನು ಸಮಾಧಾನಪಡಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಆಮಿರ್, ‘ಸಾಯಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಅವರ ನಟನೆ ನೋಡಿ ನೀವು ಬೆರಗಾಗುತ್ತೀರಿ. ನನ್ನ ಪ್ರಕಾರ, ಇಂದು ನಮ್ಮ ದೇಶದಲ್ಲಿರುವ ಅತ್ಯುತ್ತಮ ನಟಿಯರಲ್ಲಿ ಸಾಯಿ ಪಲ್ಲವಿ ಅಗ್ರಸ್ಥಾನದಲ್ಲಿದ್ದಾರೆ’ ಎಂದು ಹೊಗಳಿದರು. ಆಮಿರ್ ಹೇಳಿದ ಈ ಮಾತು ಕೇಳಿ ಸಾಯಿ ಪಲ್ಲವಿ ಮುಗುಳ್ನಗುತ್ತಾ ಧನ್ಯವಾದ ಅರ್ಪಿಸಿದರು.

ಮಗ ಜುನೈದ್ ಖಾನ್ ಅಭಿನಯದ ಬಗ್ಗೆ ಮಾತನಾಡಿದ ಆಮಿರ್, ‘ಜುನೈದ್ ಕೂಡ ಪರವಾಗಿಲ್ಲ ಎಂಬಂತೆ ನಟಿಸಿದ್ದಾನೆ. ಅವನು ನನ್ನ ಮಗನಾದ್ದರಿಂದ ನಾನು ಹೆಚ್ಚು ಹೊಗಳಲು ಸಾಧ್ಯವಿಲ್ಲ. ಆದರೆ ಚಿತ್ರದ ಎಲ್ಲಾ ಕಲಾವಿದರು ಅದ್ಭುತವಾಗಿ ಕೆಲಸ ಮಾಡಿದ್ದಾರೆ’ ಎಂದು ತಮಾಷೆಯಾಗಿ ಹೇಳಿದರು. ಅಲ್ಲದೆ, ಚಿತ್ರದ ಶೀರ್ಷಿಕೆ ಗೀತೆಯನ್ನು ಆಮಿರ್ ವೇದಿಕೆಯ ಮೇಲೆ ಹಾಡಿ ರಂಜಿಸಿದರು.

‘ಏಕ್ ದಿನ್’ ಸಿನಿಮಾದಲ್ಲಿ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಅವರು ಜೋಡಿಯಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿಗೆ ಇದು ಚೊಚ್ಚಲ ಬಾಲಿವುಡ್ ಸಿನಿಮಾ. ಸುನಿಲ್ ಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. ಇದು 2016ರ ಜನಪ್ರಿಯ ಥಾಯ್ ಸಿನಿಮಾದ (ಒನ್ ಡೇ) ಅಧಿಕೃತ ರಿಮೇಕ್. ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಯುವಕನೊಬ್ಬ, ಕೇವಲ ಒಂದು ದಿನ ಅವಳೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಾಗ ಏನಾಗುತ್ತದೆ ಎಂಬುದು ಚಿತ್ರದ ಕಥಾಹಂದರ.

ಇದನ್ನೂ ಓದಿ: ಮಗಳು ಖಂಡಿತಾ 10ನೇ ತರಗತಿ ಫೇಲ್ ಆಗುತ್ತಾಳೆ ಎಂದುಕೊಂಡಿದ್ದ ಆಮಿರ್ ಖಾನ್; ಆದರೆ ಆಗಿದ್ದೇನು?

ಚಿತ್ರವು ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಚಿತ್ರದ ಮುಂಗಡ ಬುಕ್ಕಿಂಗ್ ಬಿಡುಗಡೆಗೆ 39 ದಿನಗಳ ಮೊದಲೇ ಆರಂಭವಾಗಿದೆ. ಜುನೈದ್ ಖಾನ್ ಅವರ ಮೊದಲ ಸಿನಿಮಾ ‘ಲವ್ಯಾಪ’ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದ್ದರಿಂದ, ಈ ಎರಡನೇ ಸಿನಿಮಾದ ಮೂಲಕ ಅವರು ಗೆಲುವು ಕಾಣುವುದು ಅನಿವಾರ್ಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಳಗ್ಗೆ ಅಥವಾ ಸಂಜೆ; ಬೇಸಿಗೆಯಲ್ಲಿ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕಬೇಕು? – Kannada News | When is the best time to water plants in summer?

ಈ ಬೇಸಿಗೆಯ (summer) ತಾಪಕ್ಕೆ ಮನುಷ್ಯರಾದ ನಾವು, ಪ್ರಾಣಿ ಪಕ್ಷಿಗಳು ಮಾತ್ರವಲ್ಲ ಮರಗಿಡಗಳು ಸಹ ಬಸವಳಿದು ಹೋಗುತ್ತವೆ. ಆದ್ದರಿಂದ ಈ ಸುಡು ಬೇಸಿಗೆಯಲ್ಲಿ ಮನೆಯಲ್ಲಿರುವ ಗಿಡಗಳ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಶಾಖಕ್ಕೆ ಗಿಡಗಳು ಒಣಗುವ, ಸತ್ತು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಗಿಡಗಳನ್ನು ರಕ್ಷಿಸಲು ಹೆಚ್ಚಿನವರು ಬೆಳಗ್ಗೆ ಮತ್ತು ಸಂಜೆ  ಗಿಡಗಳಿಗೆ ಅತಿಯಾಗಿ ನೀರು ಹಾಕಿ ಪೋಷಿಸುತ್ತಲೇ ಇರುತ್ತಾರೆ. ಆದ್ರೆ  ಅತಿಯಾಗಿ ನೀರು ಹಾಕುತ್ತಲೇ ಇರುತ್ತಾರೆ. ಹೀಗೆ ಅತಿಯಾಗಿ ನೀರು ಹಾಕುವುದರಿಂದ ಸಸ್ಯದ ಬೇರುಗಳು ಕೊಳೆಯಬಹುದು. ಬೇಸಿಗೆಯಲ್ಲಿ ಸಸ್ಯಗಳು ಒಣಗುವುದನ್ನು ತಡೆಯಲು, ಅತಿಯಾಗಿ ನೀರು ಹಾಕುವ ಬದಲು ಸರಿಯಾದ ಸಮಯದಲ್ಲಿ ನೀರು ಹಾಕುವುದು ಮುಖ್ಯ. ಹಾಗಾಗದರೆ ಬೆಳಗ್ಗೆ ಅಥವಾ ಸಂಜೆ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಸಸ್ಯಗಳಿಗೆ ಬೆಳಗ್ಗೆ ನೀರು ಹಾಕಿದರೆ ಏನಾಗುತ್ತದೆ?

ಬೆಳಗಿನ ಜಾವ ಸಸ್ಯಗಳಿಗೆ ನೀರು ಹಾಕಲು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ತಾಪಮಾನವು ತುಲನಾತ್ಮಕವಾಗಿ ಕಡಿಮೆಯಿರುತ್ತದೆ, ಇದರಿಂದಾಗಿ ನೀರು ನಿಧಾನವಾಗಿ ಮಣ್ಣಿನೊಳಗೆ ಇಂಗಿ ಬೇರುಗಳನ್ನು ತಲುಪುತ್ತದೆ. ತೀವ್ರವಾದ ಸೂರ್ಯನ ಬೆಳಕು ಬೀಳುವ ಮೊದಲು ಸಸ್ಯಗಳು ಸಂಪೂರ್ಣವಾಗಿ ಜಲಸಂಚಯನಗೊಳ್ಳುತ್ತವೆ, ಇದು ಶಾಖವನ್ನು ಉತ್ತಮವಾಗಿ ತಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಬೆಳಿಗ್ಗೆ ಹಾಕುವ ನೀರು ಬೇಗನೆ ಒಣಗುತ್ತದೆ, ಶಿಲೀಂಧ್ರಗಳ ಸೋಂಕು ಅಥವಾ ಕೊಳೆಯುವಿಕೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಸಂಜೆ ಹೊತ್ತಿನಲ್ಲಿ ಸಸ್ಯಗಳಿಗೆ ನೀರು ಹಾಕಿದರೆ ಏನಾಗುತ್ತದೆ?

ಸಂಜೆ ನೀರು ಹಾಕುವುದರಿಂದ ಸಸ್ಯಕ್ಕೆ ವಿಶ್ರಾಂತಿ ಸಿಗುತ್ತದೆ. ಆದರೆ, ಸಂಜೆ ನೀರು ಹಾಕುವುದರ ಪ್ರಮುಖ ಅನಾನುಕೂಲವೆಂದರೆ ತೇವಾಂಶವು ರಾತ್ರಿಯಿಡೀ ಉಳಿಯುತ್ತದೆ, ಇದು ಶಿಲೀಂಧ್ರ ಮತ್ತು ಕೀಟಗಳ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಸುಡು ಬಿಸಿಲಿಗೆ ಬಸವಳಿದ ಮೂಕ ಜೀವಿಗಳಿಗೆ ರೀತಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ

ಸಸ್ಯಗಳಿಗೆ ಯಾವ ಸಮಯದಲ್ಲಿ ನೀರು ಹಾಕಿದರೆ ಉತ್ತಮ?

ಬೇಸಿಗೆಯಲ್ಲಿ ಸಸ್ಯಗಳಿಗೆ ನೀರು ಹಾಕಲು ಬೆಳಗ್ಗಿನ  ಸಮಯ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸಸ್ಯಗಳಿಗೆ ನೀರು ಹಾಕುವುದರಿಂದ ಸಸ್ಯಗಳಿಗೆ ದಿನವಿಡೀ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ ಮತ್ತು ಸಸ್ಯಗಳ ಆರೋಗ್ಯವೂ ಸುಧಾರಿಸುತ್ತದೆ. ಒಂದು ವೇಳೆ ತೀವ್ರವಾದ ಶಾಖವಿದ ಕಾರಣ ಮಣ್ಣು ಒಣಗಿ ಹೋದರೆ ಮಾತ್ರ ಸಂಜೆ ಹೊತ್ತಲ್ಲಿ ಸ್ವಲ್ಪ ನೀರನ್ನು ಚಿಮುಕಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರೋಗ್ಯ ಸಚಿವರ ಕ್ಷೇತ್ರದಲ್ಲೇ ರೋಗಿಗಳ ಪರದಾಟ : ಆಸ್ಪತ್ರೆ ಸಿಬ್ಬಂದಿಯನ್ನು ಜನಗಣತಿಗೆ ಬಳಸಿದ್ರೆ ಬಡ ರೋಗಿಗಳ ಗತಿಯೇನು? – Kannada News | Bengaluru Healthcare Crisis: KC General Hospital Patients Denied Care Due to Census Staffing

ಬೆಂಗಳೂರು, ಏ.27: ರಾಜ್ಯದ ರಾಜಧಾನಿಯಲ್ಲೇ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳ ಪರದಾಟ ಮುಂದುವರಿದಿದೆ. ಅದರಲ್ಲೂ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ಷೇತ್ರಕ್ಕೆ ಒಳಪಡುವ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಜನ ಹೈರಾಣಾಗಿದ್ದಾರೆ. ಈ ಹಿಂದೆಯೇ ಇಂತಹ ಸಮಸ್ಯೆಗಳು ಬರಬಹುದು ಎಂಬ ಮಾಹಿತಿ ವರದಿಯಾಗಿತ್ತು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಆಸ್ಪತ್ರೆಯ ವೈದ್ಯಕೀಯ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಕೆ.ಸಿ. ಜನರಲ್ ಆಸ್ಪತ್ರೆಯ ಸುಮಾರು 20ಕ್ಕೂ ಹೆಚ್ಚು ಪ್ರಮುಖ ನೌಕರರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದಾಗಿ ಆಸ್ಪತ್ರೆಯ ಪ್ರಮುಖ ವಿಭಾಗಗಳೇ ಸ್ಥಗಿತಗೊಂಡಿವೆ.

ಸಿಬ್ಬಂದಿ ಕೊರತೆಯಿಂದಾಗಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳು ಆಸ್ಪತ್ರೆ ಸೌಲಭ್ಯಗಳಿಂದ ಹಾಗೂ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಪ್ರತಿದಿನ ಇಲ್ಲಿ 100 ರಿಂದ 120 ಎಕ್ಸರೆಗಳನ್ನು ಮಾಡಲಾಗುತ್ತಿತ್ತು. ಆದರೆ ಇಂದು ಕೇವಲ 20 ಎಕ್ಸರೆ ಮಾತ್ರ ಮಾಡಲಾಗಿದ್ದು, ಉಳಿದ ರೋಗಿಗಳು ಪರದಾಡುತ್ತಿದ್ದಾರೆ. ಲ್ಯಾಬ್‌ಗೆ ದಿನಕ್ಕೆ 600ಕ್ಕೂ ಹೆಚ್ಚು ಕೇಸ್‌ಗಳು ಬರುತ್ತವೆಯಾದರೂ ಸಿಬ್ಬಂದಿ ಇಲ್ಲದೆ ಪರೀಕ್ಷೆಗಳು ವಿಳಂಬವಾಗುತ್ತಿವೆ. ಇನ್ನು ಫಿಸಿಯೋಥೆರಫಿಗೆ 40 ಜನ ಬಂದರೆ ಕೇವಲ 10 ಜನರಿಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ.

ಇದನ್ನೂ ಓದಿ: ಡಿ ಸುಧಾಕರ್ ಆರೋಗ್ಯ ಸಹಜಸ್ಥಿತಿಯಲ್ಲಿದೆ: ಸಚಿವರ ಹೆಲ್ತ್​​ ಅಪ್ಡೇಟ್ ಕೊಟ್ಟ ಗೃಹಸಚಿವ ಡಾ ಜಿ ಪರಮೇಶ್ವರ್

ಲ್ಯಾಬ್ ಟೆಕ್ನಿಶಿಯನ್, ಎಕ್ಸರೆ ಟೆಕ್ನಾಲಜಿಸ್ಟ್, ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ನೇತ್ರಾಧಿಕಾರಿ ಮತ್ತು ಲಸಿಕಾ ಸಿಬ್ಬಂದಿ ಸೇರಿದಂತೆ ಆಡಳಿತ ವಿಭಾಗದ ನೌಕರರನ್ನು ಜನಗಣತಿಗೆ ಕಳುಹಿಸಲಾಗಿದೆ. ದೂರದ ಊರುಗಳಿಂದ ಮತ್ತು ನಗರದ ವಿವಿಧ ಭಾಗಗಳಿಂದ ನಂಬಿ ಬರುವ ರೋಗಿಗಳು, ಟೆಸ್ಟ್ ಮಾಡಿಸಲು ಸಾಧ್ಯವಾಗದೆ ಖಾಸಗಿ ಲ್ಯಾಬ್‌ಗಳತ್ತ ಮುಖ ಮಾಡುವಂತಾಗಿದೆ. “ಆರೋಗ್ಯ ಸೇವೆ ನೀಡುವುದು ಮೊದಲ ಆದ್ಯತೆಯಾಗಬೇಕಿತ್ತು, ಅದನ್ನು ಬಿಟ್ಟು ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ಬಳಸಿಕೊಂಡರೆ ಬಡ ರೋಗಿಗಳ ಗತಿಯೇನು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಸ್ಥಾನದಲ್ಲಿ ಗಲಾಟೆ, ಬೆಂಗಳೂರಲ್ಲಿ ಬೆದರಿಕೆ: ಪಾರ್ಕ್​​ನಲ್ಲೇ ವ್ಯಕ್ತಿ ಆತ್ಮಹತ್ಯೆ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​ – Kannada News | Bengaluru Cubbon Park Case: Harassment by Rajasthan Gang Linked to Man’s Death

ಬೆಂಗಳೂರು, ಏಪ್ರಿಲ್​​ 27: ನಗರದ ಕಬ್ಬನ್ ಪಾರ್ಕ್​​ನಲ್ಲಿ ಕಳೆದ 20 ದಿನಗಳ ಹಿಂದೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದ ಕಬ್ಬನ್ ಪಾರ್ಕ್ ಪೊಲೀಸರು ಕೊನೆಗೂ ಸಾವಿನ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದಾರೆ. ಮೃತ ವ್ಯಕ್ತಿಯನ್ನು ರಾಜಸ್ಥಾನದ ಸುರೇಶ್ ಕುಮಾರ್ ಪುರೋಹಿತ್ ಎಂದು ಗುರುತಿಸಲಾಗಿದ್ದು, ಈತನದ್ದು ಮಾಮೂಲಿ ಆತ್ಮಹತ್ಯೆ ಅಲ್ಲ. ಬದಲಾಗಿ ಹೊಡೆದು, ಬಡಿದಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದ ಕಾರಣ ಮನನೊಂದು ಸುರೇಶ್ ಕುಮಾರ್ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿರೋದು ತನಿಖೆ ವೇಳೆ ಗೊತ್ತಾಗಿದೆ.

ಮೃತ ಸುರೇಶ್ ಕುಮಾರ್ ಕುಟುಂಬ ಮೂಲತಃ ರಾಜಸ್ಥಾನದವರಾಗಿದ್ದು, ಅಲ್ಲಿ ಜಬರರಾಮ್ ಎಂಬಾತನ ಜೊತೆಗೆ ಈತ ಜಗಳ ಮಾಡಿಕೊಂಡಿದ್ದ. ಜಗಳ ವಿಕೋಪಕ್ಕೆ ಹೋಗಿ ಜಬರರಾಮ್ ಮತ್ತು ಸುರೇಶ್ ಪರಸ್ಪರ ಹಲ್ಲೆ ಕೂಡ ನಡೆಸಿದ್ದರು. ಬಳಿಕ ಬೆಂಗಳೂರಿನ ಸ್ನೇಹಿತರಿಂದ ಪಾಠ ಕಲಿಸೋದಾಗಿ ಜಬರರಾಮ್ ಸುರೇಶ್​​ಗೆ ಬೆದರಿಕೆ ಕೂಡ ಹಾಕಿದ್ದ. ಅದಾದ ಬಳಿಕ ತನ್ನ ಊರಿನಿಂದ ಸುರೇಶ್ ಕುಮಾರ್ ಬೆಂಗಳೂರಿಗೆ ಬಂದಿದ್ದರೆ, ಮಾರ್ಚ್ ಕೊನೆಯ ವಾರದಲ್ಲಿ ಜಬರರಾಮ್ ಕೂಡ ನಗರಕ್ಕೆ ಆಗಮಿಸಿದ್ದ. ಈತ ಸ್ನೇಹಿತರ ಬಳಿ ಸುರೇಶ್ ಕುಮಾರ್​​ ಮೇಲೆ ಹಲ್ಲೆ ನಡೆಸುವಂತೆ ತಿಳಿಸಿದ್ದ. ಪ್ರವೀಣ್, ಭಾವೇಶ್, ನಿತೇಶ್ ಮತ್ತು ಮುಖೇಶ್ ಎಂಬುವವರಿಗೆ ಈ ಬಗ್ಗೆ ಸೂಚಿಸಿದ್ದ. ಆ ಬಗ್ಗೆ ಮಾಹಿತಿ ತಿಳಿದ ಸುರೇಶ್​​ ಕುಮಾರ್​​ ವಿಚಾರವನ್ನ ಸಹೋದರನಿಗೆ ಕರೆಮಾಡಿ  ಹೇಳಿದ್ದ. ಹೋಟೆಲ್​​ನಲ್ಲಿ ಊಟ ಮುಗಿಸಿ  ಸುರೇಶ್ ಹೊರಟಿದ್ದ ವೇಳೆ ಆರೋಪಿಗಳು ಹಲ್ಲೆ ಮಾಡಿರೋದಾಗಿ ದೂರು ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಎಂಗೇಜ್ಮೆಂಟ್ ಆದ ರಾತ್ರಿಯೇ ಯುವತಿ ಪ್ರಿಯತಮನೊಂದಿಗೆ ಪರಾರಿ! ಲವ್ ಜಿಹಾದ್ ಶಂಕೆ

ಇನ್ನು ಇದೇ ವಿಚಾರವಾಗಿ ಮನನೊಂದು ಸುರೇಶ್ ಕುಮಾರ್ ಪುರೋಹಿತ್ ಆತ್ಮಹತ್ಯೆಗೆ ಶರಣಾಗಿರೋದಾಗಿ ಆತನ ಸಹೋದರ ವಾಸನರಾಮ್ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸುರೇಶ್ ಕುಮಾರ್ ಆತ್ಮಹತ್ಯೆ ಸಂಬಂಧ ಐದು ಜನರ ವಿರುದ್ಧ FIR ದಾಖಲಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿದ್ದು, ಕಬ್ಬನ್ ಪಾರ್ಕ್​​ನಲ್ಲಿ ಆತ್ಮಹತ್ಯೆಗೆ ವ್ಯಕ್ತಿ ಶರಣಾಗಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿ ಸುಧಾಕರ್ ಆರೋಗ್ಯ ಸಹಜಸ್ಥಿತಿಯಲ್ಲಿದೆ: ಸಚಿವರ ಹೆಲ್ತ್​​ ಅಪ್ಡೇಟ್ ಕೊಟ್ಟ ಗೃಹಸಚಿವ ಡಾ ಜಿ ಪರಮೇಶ್ವರ್ – Kannada News | D. Sudhakar Health Update: Minister Stable at KIMS, Parameshwara Clarifies Status

ಗೃಹಸಚಿವ ಡಾ.ಜಿ.ಪರಮೇಶ್ವರ್ Image Credit source: tv9 kannada

ಆನೇಕಲ್, ಏಪ್ರಿಲ್​ 27: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಸಚಿವ ಡಿ. ಸುಧಾಕರ್​​ಗೆ (D Sudhakar) ಚಿಕಿತ್ಸೆ ಮುಂದುವರೆದಿದೆ. ಶ್ವಾಸಕೋಶದ ಇನ್ಫೆಕ್ಷನ್ ಹಿನ್ನೆಲೆ ವೆಂಟಿಲೇಟರ್, ಎಕ್ಮೋ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಸಿಎಂ ಸಿದ್ದರಾಮಯ್ಯ ಮತ್ತು ಭಾನುವಾರ ಡಿಸಿಎಂ ಡಿಕೆ ಶಿವಕುಮಾರ್​ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಇಂದು ಗೃಹಸಚಿವ ಡಾ.ಜಿ.ಪರಮೇಶ್ವರ್​​ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಡಿ.ಸುಧಾಕರ್ ಆರೋಗ್ಯ ವಿಚಾರಿಸಿದರು. ಅವರ ಆರೋಗ್ಯ ಸಹಜಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಅವರು ಗುಣಮುಖರಾಗಿ ಬರಬೇಕು: ಡಾ.ಜಿ.ಪರಮೇಶ್ವರ್

ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಸಹಜಸ್ಥಿತಿಯಲ್ಲಿದೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರು ಪಾಸಿಟಿವ್ ಆಗಿ ಹೇಳಿದ್ದಾರೆ. ಎಲ್ಲವೂ ದೇವರ ಇಚ್ಛೆ, ಅವರು ಗುಣಮುಖರಾಗಿ ಬರಬೇಕು. ಡಿ.ಸುಧಾಕರ್ ಬ್ರೈನ್ ನಾರ್ಮಲ್ ಆಗೋಕೆ ಸಮಯ ಹಿಡಿಯುತ್ತೆ. ಇನ್ನೂ ಪ್ರಜ್ಞೆ ಬಂದಿಲ್ಲ, ಪ್ರಜ್ಞೆ ಬರಲಿ ಎಂದು ವೈದ್ಯರು ಕಾಯುತ್ತಿದ್ದಾರೆ. ಸಚಿವ ಡಿ.ಸುಧಾಕರ್ ಗುಣಮುಖರಾಗಿ ಬರುತ್ತಾರೆ ಎಂದು ಹೇಳಿದ್ದಾರೆ.

ಹೆಚ್​​ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದ ಹೆಚ್​ಡಿ ಕುಮಾರಸ್ವಾಮಿ

ಡಿ ಸುಧಾಕರ್​​​ ಆರೋಗ್ಯ ವಿಚಾರವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಡಿ.ಸುಧಾಕರ್ ಆರೋಗ್ಯದ ವಿಚಾರದಲ್ಲಿ ಮುಚ್ಚಿಡುವುದು ಏನೂ ಇಲ್ಲ. ಹೆಚ್​ಡಿ ಕುಮಾರಸ್ವಾಮಿಗೆ ಗೊತ್ತಿರುವುದನ್ನು ಹೇಳುತ್ತಾರೆ. ಆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.

ಸಚಿವ ಡಿ.ಸುಧಾಕರ್ ಕುಟುಂಬಸ್ಥರಿಗೆ ಧೈರ್ಯ ಹೇಳಿದ ಥಾವರ್ ಚಂದ್ ಗೆಹ್ಲೋಟ್​​

ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಕೂಡ ​​ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಡಿ.ಸುಧಾಕರ್ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸುಧಾಕರ್ ಕುಟುಂಬಸ್ಥರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧೈರ್ಯ ಹೇಳಿದ್ದಾರೆ. ಅದೇ ರೀತಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಟ್ರೋಲ್ ಆಗುತ್ತಿರುವ ಪತ್ನಿ ಪರಿಣೀತಿ ಚೋಪ್ರಾ – Kannada News | Raghav Chadha wife Parineeti Chopra trolled after he joins BJP

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ (BJP) ಸೇರಿರುವುದು ಭಾರಿ ಚರ್ಚೆಗೆ ಕಾರಣ ಆಗಿದೆ. ಅವರು ಬಿಜೆಪಿ ಸೇರಿದ 24 ಗಂಟೆಗಳ ಒಳಗೆ, ಇನ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈವರೆಗೂ 20 ಲಕ್ಷಕ್ಕೂ ಅಧಿಕ ಜನರು ರಾಘವ್ ಚಡ್ಡಾ (Raghav Chadha) ಅವರನ್ನು ಅನ್​ಫಾಲೋ ಮಾಡಿದ್ದಾರೆ. ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ (Parineeti Chopra) ಅವರನ್ನು ಕೂಡ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಪರಿಣೀತಿ ಚೋಪ್ರಾ ಅವರ ಪೋಸ್ಟ್ ತುಂಬ ನೆಗೆಟಿವ್ ಕಮೆಂಟ್​ಗಳೇ ತುಂಬಿ ಹೋಗಿವೆ.

ರಾಘವ್ ಚಡ್ಡಾ ಅವರು ಬಿಜೆಪಿ ಸೇರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸೇರುವ ಅವರ ನಿರ್ಧಾರವನ್ನು ಜನರು ಕಟುವಾಗಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಅವರು ಈ ಹಿಂದೆ ಬಿಜೆಪಿಯನ್ನು ಟೀಕಿಸಿದ್ದ ಹಳೆಯ ವಿಡಿಯೋಗಳು ಮತ್ತು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಈ ರಾಜಕೀಯ ಬದಲಾವಣೆಯ ಕುರಿತಾದ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.

ಅದೇ ರೀತಿ, ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ ಅವರ ಒಂದು ಹಳೇ ವಿಡಿಯೋ ಕೂಡ ವೈರಲ್ ಆಗುತ್ತಿದೆ. ‘ನಾನು ಎಂದಿಗೂ ರಾಜಕಾರಣಿಯನ್ನು ಮದುವೆ ಆಗಲ್ಲ’ ಎಂದು ಪರಿಣೀತಿ ಚೋಪ್ರಾ ಅವರು ಹೇಳಿದ್ದರು. ಆದರೆ ಆ ಮಾತನ್ನು ಮರೆತು ಅವರು ಮದುವೆ ಆಗಿದ್ದೇ ರಾಜಕಾರಣಿ ರಾಘವ್ ಚಡ್ಡಾ ಅವರನ್ನು. ಹಾಗಾಗಿ, ಮಾತು ಬದಲಿಸುವುದರಲ್ಲಿ ಗಂಡ-ಹೆಂಡತಿ ಇಬ್ಬರೂ ಒಂದೇ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಪರಿಣೀತಿ ಚೋಪ್ರಾ ಅವರು ಹಂಚಿಕೊಂಡ ಎಲ್ಲ ಪೋಸ್ಟ್​​ಗಳಿಗೂ ನೆಗೆಟಿವ್ ಕಮೆಂಟ್​ಗಳು ಬರುತ್ತಿವೆ. ‘ನಿಮಗಿಂತ ನಿಮ್ಮ ಗಂಡನೇ ಅತ್ಯುತ್ತಮ ನಟ. ಅವರಿಂದ ನೀವು ನಟನೆ ಕಲಿಯಿರಿ’ ಎಂದು ಟೀಕಿಸಲಾಗುತ್ತಿದೆ. ರಾಘವ್ ಚಡ್ಡಾ ಅವರು ಸೀರೆ ಧರಿಸಿ, ಬಿಜೆಪಿ ಕಚೇರಿಯಲ್ಲಿ ಟೀ, ಸಮೋಸಾ ನೀಡುತ್ತಿರುವ ರೀತಿಯಲ್ಲಿ ಎಡಿಟ್ ಮಾಡಿದ ಫೋಟೋವನ್ನು ಕೂಡ ಕೆಲವರು ಕಮೆಂಟ್ ಸೆಕ್ಷನ್​ನಲ್ಲಿ ಹಾಕಿದ್ದಾರೆ.

ಇದನ್ನೂ ಓದಿ: ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ ಬಿಕಿನಿ ಫೋಟೋ ವೈರಲ್; ಅಸಲಿಯತ್ತು ಏನು?

‘ರಾಘವ್ ಚಡ್ಡಾ ಅಲ್ಲ, ರಾಘವ್ ಚಡ್ಡಿ (ಆರ್​ಎಸ್​ಎಸ್​). ಅವರ ಮುಖವಾಡ ಈಗ ಬಯಲಾಗಿದೆ’ ಎಂದು ಕೂಡ ಹಲವರು ಟೀಕಿಸಿದ್ದಾರೆ. ‘ಅನಕ್ಷರಸ್ಥ ಗುಂಡಾಗಳ ಪಕ್ಷವೇ ಬಿಜೆಪಿ. ಅದು ವಾಷಿಂಗ್ ಮಷಿನ್ ಪಾರ್ಟಿ’ ಎಂದು ರಾಘವ್ ಚಡ್ಡಾ ಈ ಮೊದಲು ನೀಡಿದ ಹೇಳಿಕೆಗಳನ್ನು ಜನರು ಈಗ ಅವರಿಗೆ ನೆನಪಿಸುತ್ತಿದ್​ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಪರಿಣೀತಿ ಚೋಪ್ರಾ ಅವರ ಪೋಸ್ಟ್​ಗಳಲ್ಲಿ ಕಮೆಂಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚನ್ನಪಟ್ಟಣ ನಗರಕ್ಕೇ ನುಗ್ಗಿ ಒಂಟಿ ಸಲಗದ ದಾಂಧಲೆ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​! – Kannada News | Elephant Enters Channapatna Town, Damages Property; Forest Department Issues Alert

ಬೆಂಗಳೂರು, ಏಪ್ರಿಲ್​​ 27: ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಇದೀಗ ನಗರದ ಹೌಸಿಂಗ್ ಬೋರ್ಡ್ ಬಳಿಯೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ. ಕಾಡಾನೆ ಓಡಾಟ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಪೌಂಡ್​​ಗಳನ್ನು ಹಾರಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಕಾಡಾನೆ ಹಲವೆಡೆ ವಾಹನಗಳನ್ನ ಡ್ಯಾಮೇಜ್ ಮಾಡಿದೆ. ನಗರ ಪ್ರದೇಶಕ್ಕೆ ಆನೆ ಎಂಟ್ರಿ ಹಿನ್ನೆಲೆ ಅರಣ್ಯ ಇಲಾಖೆಯಿಂದ ಅಲರ್ಟ್ ಘೋಷಿಸಲಾಗಿದ್ದು, ಯಾರು ಕೂಡ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ. ಬಳ್ಳಾರಿ ಮೂಲದ ರಾಮಪ್ಪ ಎಂಬುವವರ ಗುಡಿಸಲನ್ನು ಒಂಟಿ ಸಲಗ ಧ್ವಂಸಗೊಳಿಸಿದ್ದು, ಗುಡಿಸಲಿನಲ್ಲಿದ್ದ ರಾಮಪ್ಪಗೆ ಗಾಯಗಳಾಗಿವೆಯಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಕಂಡು ಆಘಾತದಿಂದ ಮನೆ ಮುಂದೆ ಗೀತಾ ಎಂಬವರು ಕುಸಿದುಬಿದ್ದಿದ್ದು, ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version