ಬರ್ತಿದೆ ‘ತುಂಬಾಡ್ 2’ ಸಿನಿಮಾ; ಖಳನಾಗಿ ಅಕ್ಷಯ್ ಖನ್ನಾ ಎಂಟ್ರಿ? – Kannada News | Tumbbad 2: Akshaye Khanna or Nawazuddin Siddiqui to Play Vinayak Rao’s Nemesis?

2018 ರಲ್ಲಿ ಬಿಡುಗಡೆಯಾದ ‘ತುಂಬಾಡ್’ ಚಿತ್ರ ಅನೇಕರಿಗೆ ಇಷ್ಟ ಆಗಿದೆ. ನಿಗೂಢ ಪ್ರಪಂಚ ಪ್ರೇಕ್ಷಕರಿಗೆ ರೋಮಾಂಚನ ಮೂಡಿಸುತ್ತಿತ್ತು. ಈ ಚಿತ್ರವು ಹಲವು ದಾಖಲೆಯನ್ನು ಸೃಷ್ಟಿಸಿತು. ಈ ಚಿತ್ರವು 2024ರಲ್ಲಿ ಮತ್ತೆ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಯಿತು. ಈಗ ‘ತುಂಬಾಡ್ 2′ ಶೀಘ್ರದಲ್ಲೇ ಬರಲಿದೆಯಂತೆ. ಚಿತ್ರದ ನಟ ಮತ್ತು ನಿರ್ಮಾಪಕ ಸೋಹಮ್ ಶಾ, ಚಿತ್ರವನ್ನು ಇನ್ನಷ್ಟು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ, ಪೆನ್ ಸ್ಟುಡಿಯೋಸ್‌ನ ಜಯಂತಿಲಾಲ್ ಗಡಾ ಅವರೊಂದಿಗೆ ಕೈಜೋಡಿಸಿದ್ದಾರೆ.

‘ಗಂಗೂಬಾಯಿ ಕಥಿಯಾವಾಡಿ’ ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಬಾಲಿವುಡ್‌ಗೆ ನೀಡಿದ್ದು ಪೆನ್ ಸ್ಟುಡಿಯೋಸ್. ಇದು ‘ತುಂಬಾಡ್ 2’ನಲ್ಲಿಯೂ ಕೆಲಸ ಮಾಡುತ್ತಿದೆ. ಈ ಬಾರಿ ನಿರ್ಮಾಪಕರು ಸೋಹಮ್ ಶಾ ಪಾತ್ರದ ವಿನಾಯಕ್ ರಾವ್‌ಗೆ ಪರದೆಯ ಮೇಲೆ ಕಠಿಣ ಸ್ಪರ್ಧೆಯನ್ನು ನೀಡುವ ಪ್ರಬಲ ಖಳನಾಯಕನನ್ನು ಹುಡುಕುತ್ತಿದ್ದಾರೆ. ಈ ಪಾತ್ರಕ್ಕೆ ಇಬ್ಬರು ಜನಪ್ರಿಯ ಬಾಲಿವುಡ್ ನಟರನ್ನು ಪರಿಗಣಿಸಲಾಗುತ್ತಿದೆ. ಮೊದಲ ಹೆಸರು ನಟ ಅಕ್ಷಯ್ ಖನ್ನಾ, ಎರಡನೇ ಹೆಸರು ನವಾಜುದ್ದೀನ್ ಸಿದ್ದಿಕಿ.ಹಾಗಾಗಿ ಈಗ ಅಕ್ಷಯ್ ಖನ್ನಾ ‘ತುಂಬಾಡ 2’ ನಲ್ಲಿಯೂ ಕಾಣಿಸಿಕೊಳ್ಳುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಒಂದೇ ಗುರಿ ಇದೆ – ಅದು ಭಯಾನಕ ಖಳನಾಯಕನನ್ನು ಹೊರತರುವುದು. ಸದ್ಯದ ಮಾಹಿತಿಯ ಪ್ರಕಾರ, ಚಿತ್ರತಂಡವು ಭಯಾನಕ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುವ ವ್ಯಕ್ತಿಯನ್ನು ಹುಡುಕುತ್ತಿದೆ. ನಟರ ಆಯ್ಕೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲವಾದರೂ, ಈ ಎರಡು ಹೆಸರುಗಳು ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮರು ಬಿಡುಗಡೆಯಲ್ಲಿ ಖುಲಾಯಿಸಿದ ಅದೃಷ್ಟ, ‘ತುಂಬಾಡ್’ ಭರ್ಜರಿ ಕಲೆಕ್ಷನ್

ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ದುರಾಸೆ, ಪುರಾಣ ಮತ್ತು ಮಾನಸಿಕ ಭಯಾನಕತೆಯನ್ನು ಸಿನಿಮಾ ಹೊಂದಿದೆ. ಕೊರೊನಾ ನಂತರ ಚಿತ್ರವು OTT ಪ್ಲಾಟ್‌ಫಾರ್ಮ್‌ನಲ್ಲಿ ಹಿಟ್ ಆಯಿತು. ಅದರ ನಂತರ, ಚಿತ್ರವು ಮತ್ತೆ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಯಿತು. ನಂತರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಲಾಭವನ್ನು ಗಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ತಿಗಾಗಿ ತಂದೆಯನ್ನೇ ಹತ್ಯೆಗೈದ ಇಬ್ಬರು ಗಂಡು ಮಕ್ಕಳು: ದಾರುಣ ಘಟನೆಗೆ ಸಾಕ್ಷಿಯಾದ ಬೆಂಗಳೂರಿನ ದೂಪನಹಳ್ಳಿ – Kannada News | Property Dispute Turns Fatal in Bengaluru: Sons Kill Father in Indiranagar’s Doopanahalli

ಬೆಂಗಳೂರು, ಫೆಬ್ರವರಿ 17: ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪನಹಳ್ಳಿಯಲ್ಲಿ ಆಸ್ತಿ ವಿವಾದವೊಂದು ವೃದ್ಧರೊಬ್ಬರs ಸಾವಿಗೆ ಕಾರಣವಾಗಿದೆ. ಬಿಎಂಟಿಸಿಯ ನಿವೃತ್ತ ಕಂಡಕ್ಟರ್ 70 ವರ್ಷದ ಮುನಿಕೃಷ್ಣಪ್ಪ ಅವರನ್ನು ಅವರ ಇಬ್ಬರು ಮಕ್ಕಳೇ ಆಸ್ತಿ ಆಸೆಗಾಗಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಶನಿವಾರ ರಾತ್ರಿ ದೂಪನಹಳ್ಳಿಯ ಮುತ್ತಿಯಾಲಮ್ಮ ದೇವಾಲಯದ ಬಳಿ ತಂದೆ ಮುನಿಕೃಷ್ಣಪ್ಪ ಮತ್ತು ಅವರ ಪುತ್ರರಾದ ಮೋಹನ್ ಕುಮಾರ್ ಹಾಗೂ ಗಜೇಂದ್ರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಗ ಮೋಹನ್ ಕುಮಾರ್ ಹಾಕಿ ಸ್ಟಿಕ್ ಮತ್ತು ರಾಡ್‌ನಿಂದ ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ತೀವ್ರವಾಗಿ ರಕ್ತಸ್ರಾವಗೊಂಡು ಕುಸಿದುಬಿದ್ದ ಮುನಿಕೃಷ್ಣಪ್ಪ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಮುನಿಕೃಷ್ಣಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದು ಮುನಿಕೃಷ್ಣಪ್ಪ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಮಕ್ಕಳಿಗೆ ಪಾಲು ನೀಡದ ಕಾರಣ ಹಲವು ಬಾರಿ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಘಟನೆ ಸಂಬಂಧ ಹಲ್ಲೆ ನಡೆಸಿದ ಮೋಹನ್ ಕುಮಾರ್‌ನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: ಮೂರುವರೆ ವರ್ಷಕ್ಕೆ ಎಸ್ಪಿ ಆದ ಈ ಬಾಲಕ! – Kannada News | Davangere SP fulfills cancer stricken Hitharth’s police dream

ಮೂರುವರೆ ವರ್ಷಕ್ಕೆ ಎಸ್ಪಿ ಆದ ಈ ಬಾಲಕ!

ದಾವಣಗೆರೆ, ಫೆಬ್ರವರಿ 17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮೂರುವರೆ ವರ್ಷದ ಬಾಲಕ ಹಿತಾರ್ಥ್‌ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಘಟನೆ ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಮಾಡಬೇಕೆಂಬ ಬಾಲಕನ ತಂದೆಯ ಆಸೆಗೆ ಸ್ಪಂದಿಸಿದ ಎಸ್ಪಿ ಶೇಖರ್ ಹೆಚ್ ಟಿ, ಖಾಕಿ ತೊಟ್ಟು ಬಂದ ಪುಟ್ಟ ಮಗುವನ್ನು ತಮ್ಮ ಚೇರ್ ಮೇಲೆ ಕೂರಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದೂವರೆ ವರ್ಷಕ್ಕೆ ಕಾನ್ಸರ್!

ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದ ಪ್ರಭು ಹಾಗೂ ಅನುಷಾ ದಂಪತಿಯ ಎರಡನೇ ಪುತ್ರನಾದ ಹಿತಾರ್ಥ್‌ಗೆ ಒಂದುವರೆ ವರ್ಷ ವಯಸ್ಸಿನಲ್ಲಿಯೇ ರಕ್ತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆತ ಚಿಕಿತ್ಸೆ ಪಡೆಯುತ್ತಿದ್ದನಲ್ಲದೆ, ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಎಂಟು ತಿಂಗಳು ನಿರಂತರ ಚಿಕಿತ್ಸೆ ಪಡೆದಿದ್ದಾನೆ. ಚಿಕಿತ್ಸೆ ಫಲವಾಗಿ ಈಗಾಗಲೇ ಶೇಕಡಾ 80ರಷ್ಟು ಚೇತರಿಕೆ ಕಂಡಿದ್ದರೂ ಪಾಲಕರ ಮನಸ್ಸು ಜರ್ಜರಿತವಾಗಿಯೇ ಉಳಿದಿದೆ.

ಮಗನನ್ನು ಪೊಲೀಸ್ ಮಾಡಬೇಕೆಂಬ ತಂದೆಯ ಆಸೆಗೆ ಸ್ಪಂದನೆ

ಓರ್ವ ಪೊಲೀಸ್ ಅಧಿಕಾರಿಯಾಗಬೇಕೆಂದು ಆಸೆ ಹೊತ್ತಿದ್ದ ಬಾಲಕನ ತಂದೆ ಪ್ರಭುವಿಗೆ ಆ ಆಸೆ ಈಡೇರಿಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಹಿತಾರ್ಥ್ ಹುಟ್ಟಿದ ದಿನವೇ ತಮ್ಮ ಮಗ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಆಸೆಯೂ ಹುಟ್ಟಿಕೊಂಡಿತ್ತು. ಆದರೆ ಮಗುವಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ತಂದೆ ತಾಯಿ ಇಬ್ಬರ ಹೃದಯವೂ ನುಚ್ಚು ನೂರಾಗಿತ್ತು. ಆದರೆ ಮಗನನ್ನು ಪೊಲೀಸ್ ಯೂನಿಫಾರ್ಮ್​ನಲ್ಲಿ ನೋಡಬೇಕೆನ್ನುವ ಪ್ರಭುವಿನ ಆಸೆ ಹಾಗೆಯೇ ಇತ್ತು. ಆದ ಕಾರಣ ಮಗನಿಗೆ ಖಾಕಿ ಯೂನಿಫಾರ್ಮ್ ಧರಿಸಿ ಎಸ್‌ಪಿ ಕಚೇರಿಗೆ ಕರೆದುಕೊಂಡು ಬಂದಿದ್ದರು. ಪರಿಸ್ಥಿತಿ ತಿಳಿದ ಎಸ್‌ಪಿ ಶೇಖರ್ ಹೆಚ್.ಟಿ. ಅವರು ಹಿತಾರ್ಥ್‌ಗೆ ಹೂಗುಚ್ಛ ನೀಡಿ ಸ್ವಾಗತಿಸಿ, ತಮ್ಮ ಕುರ್ಚಿಯಲ್ಲಿ ಕೂರಿಸಿ ಕೆಲಕಾಲ “ಎಸ್‌ಪಿ” ಆಗುವ ಅವಕಾಶ ನೀಡಿದರು.

ಇದನ್ನೂ ಓದಿ ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಮಗು ನಗುಮುಖದಿಂದ ಕುರ್ಚಿಯಲ್ಲಿ ಕುಳಿತ ದೃಶ್ಯ ಕಂಡು ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವುಕರಾದರು. ಎಸ್‌ಪಿ ಅವರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಬಾಲಕನ ಕನಸಿಗೆ ಚಿಗುರುಕೊಟ್ಟ ಈ ಘಟನೆ ಎಲ್ಲರ ಹೃದಯ ಸ್ಪರ್ಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್; ನಂತರ ಆಗಿದ್ದೇನು? – Kannada News | Kannada Actress Blackmailed Over Private Video from Cricket Event; Cybercrime Police Investigate

ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿ ಈ ಕೃತ್ಯ ನಡೆಸಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಕ್ರಿಕೆಟ್ ಟೂರ್ನಿ ನಡೆದಿತ್ತು. ಟೂರ್ನಿಯ ಎರಡನೇ ದಿನ ವಾಶ್ ರೂಂ ಹೋದಾಗ ಎದುರಾದ ಅಪರಿಚಿತ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದ ಮತ್ತು ಫೊಟೋ ತೆಗೆದಿದ್ದ. ಬ್ಲ್ಯಾಕ್​​ಮೇಲ್ ಮಾಡುವ ಉದ್ದೇಶದಿಂದಲೇ ಫೊಟೋ ವಿಡೀಯೋ ರೆಕಾರ್ಡ್ ಮಾಡಿದ್ದ ಎಂಬ ಆರೋಪವನ್ನು ಮಾಡಲಾಗಿದೆ.

ಸಾಮಾನ್ಯವಾಗಿ ವಿಡಿಯೋ ಮಾಡಿದವರು ಅವರಿಗೆ ಕಳುಹಿಸಿ ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ವಿಡಿಯೋ ರೆಕಾರ್ಡ್ ಮಾಡಿ ಯುವತಿಗೆ ಕಳುಹಿಸಿದೆ ಆಕೆಯ ಆಪ್ತ ಸ್ನೇಹಿತೆಗೆ ಕಳುಹಿಸಿದ್ದ. ‘Swan.3704722’ ಇನ್ಸ್ಟಾ ಅಕೌಂಟ್​ನಿಂದ ಸಂದೇಶ ಕಳುಹಿಸಲಾಗಿದೆ.

ಇದನ್ನೂ ಓದಿ: ‘ಯಾರ ಜೊತೆ ಬೇಕಾದರೂ ಹೋಗಿ ಮಲಗು’: ಕನ್ನಡದ ನಟಿಗೆ ಗಂಡನಿಂದ ಕಿರುಕುಳ

‘ವಿಡೀಯೋ ವೈರಲ್ ಮಾಡಬಾರದೆಂದರೆ ಹಣ ಕೊಡಬೇಕು’ ಎಂದು ಅಪರಿಚಿತ ಬೆದರಿಕೆ ಹಾಕಿದ್ದ. ವೀಡಿಯೋ ಕಾಲ್ ಮಾಡಿಯೂ ಬೆದರಿಕೆ ಹಾಕಿದ್ದ. ಸದ್ಯ ಆತ ಕಳಿಸಿರುವ ಪೊಟೋಸ್, ವಿಡಿಯೋಗಳನ್ನ ನೀಡಿ ನಟಿ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಸದ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನ್ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಕೋಚ್ ಮೈಕ್ ಹೆಸ್ಸನ್ – Kannada News | Coach Mike Hesson’s comments on Pakistan’s loss to India

T20 World Cup 2026: ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ ಹೀನಾಯ ಸೋಲನುಭವಿಸಿದೆ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 18 ಓವರ್​ಗಳಲ್ಲಿ 114 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ 61 ರನ್​ಗಳ ಅಂತರದಿಂದ ಪಾಕ್ ಪಡೆ ಸೋಲೊಪ್ಪಿಕೊಂಡಿದೆ.

ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಈ ಟೀಕೆಗಳ ನಡುವೆಯೂ ಪಾಕ್ ತಂಡದ ಕೋಚ್ ಮೈಕ್ ಹೆಸ್ಸೆನ್ ಸೋಲಿನ ಕಾರಣಗಳನ್ನು ಪರಾಮರ್ಶಿಸಿದ್ದಾರೆ. ಭಾರತದ ವಿರುದ್ಧದ ಸೋಲಿಗೆ ಮೈಕ್ ಹೆಸ್ಸೆನ್ ನೀಡಿರುವ ಕಾರಣಗಳಾವುವು ಎಂದು ನೋಡುವುದಾದರೆ…

ಇಶಾನ್ ಕಿಶನ್ ಬ್ಯಾಟಿಂಗ್: ಭಾರತ ತಂಡದ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರ ಅಪ್ರತಿಮ ಆಟವೇ (77 ರನ್) ಪಂದ್ಯವನ್ನು ನಮ್ಮಿಂದ ಕಿತ್ತುಕೊಂಡಿತು ಎಂದು ಮೈಕ್ ಹೆಸ್ಸನ್ ಒಪ್ಪಿಕೊಂಡಿದ್ದಾರೆ. ಕಿಶನ್ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದೇ  ಪಂದ್ಯದ ಟರ್ನಿಂಗ್ ಪಾಯಿಂಟ್. ಅವರು ಮೈದಾನದ ಎರಡೂ ಬದಿಗಳಲ್ಲಿ ರನ್ ಗಳಿಸುವ ಮೂಲಕ ನಮ್ಮ ಸ್ಪಿನ್ನರ್‌ಗಳನ್ನು ಒತ್ತಡಕ್ಕೆ ಸಿಲುಕಿಸಿದರು ಎಂದು ಅವರು ವಿಶ್ಲೇಷಿಸಿದ್ದಾರೆ.

ಹೆಚ್ಚುವರಿ ರನ್‌ಗಳು: ಭಾರತ ಈ ಪಿಚ್‌ನಲ್ಲಿ ನಿರೀಕ್ಷಿತ ಸ್ಕೋರ್‌ಗಿಂತ ಸುಮಾರು 25 ರನ್ ಹೆಚ್ಚುವರಿಯಾಗಿ ಗಳಿಸಿತು. ಇದು ಪಾಕಿಸ್ತಾನಕ್ಕೆ ದೊಡ್ಡ ಹೊರೆಯಾಯಿತು ಎಂದು ಮೈಕ್ ಹೆಸ್ಸನ್ ಅಭಿಪ್ರಾಯಪಟ್ಟಿದ್ದಾರೆ.

ತಪ್ಪು ನಿರ್ಧಾರಗಳು: ಪಾಕಿಸ್ತಾನ್ ತಂಡವು ಬ್ಯಾಟಿಂಗ್ ಮಾಡುವಾಗ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲಿಲ್ಲ. ಅಲ್ಲದೆ ಕೆಲವು ಕಳಪೆ ಶಾಟ್‌ಗಳನ್ನು ಆಯ್ಕೆ ಮಾಡಿಕೊಂಡು ವಿಕೆಟ್ ಒಪ್ಪಿಸಿದ್ದರು. ಇದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೆಸ್ಸನ್ ತಿಳಿಸಿದ್ದಾರೆ.

ನಿರಾಸೆಯಲ್ಲಿ ತಂಡ: ಸೋಲಿನ ನಂತರ ಪಾಕಿಸ್ತಾನದ ಡ್ರೆಸ್ಸಿಂಗ್ ರೂಮ್‌ನಲ್ಲಿ “ತೀವ್ರ ನಿರಾಸೆ” ಮನೆಮಾಡಿತ್ತು. ಭಾರತದ ವಿರುದ್ಧದ ಪಂದ್ಯ ಪಾಕಿಸ್ತಾನದ ಜನತೆಗೆ ಎಷ್ಟು ಮುಖ್ಯ ಎಂಬುದು ಆಟಗಾರರಿಗೆ ತಿಳಿದಿದೆ. ಹಾಗಾಗಿ ಈ ಸೋಲು ಎಲ್ಲರಿಗೂ ನೋವು ತಂದಿದೆ ಎಂದು ಪಾಕ್ ಕೋಚ್ ತಿಳಿಸಿದ್ದಾರೆ.

ಮುಂದಿನ ಸವಾಲು: ಈ ಸೋಲನ್ನು ಮರೆತು ಮುಂದಿನ ಎರಡು-ಮೂರು ದಿನಗಳಲ್ಲಿ ತಂಡವು ಪುಟಿದೇಳಬೇಕಿದೆ. ನಮೀಬಿಯ ವಿರುದ್ಧದ ಪಂದ್ಯವು ಪಾಕಿಸ್ತಾನ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ಗೆದ್ದು ನಾವು ಸೂಪರ್-8 ಹಂತಕ್ಕೇರುವ ವಿಶ್ವಾಸವಿದೆ ಎಂದು ಮೈಕ್ ಹೆಸ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ಅವರು ಗೆದ್ದು, ಇವರು ಸೋತರೂ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ನಿಂದ ಔಟ್!

ಒಟ್ಟಾರೆಯಾಗಿ ಹೇಳಬೇಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಅತೀ ಹೆಚ್ಚು ವ್ಯತ್ಯಾಸವನ್ನುಂಟು ಮಾಡಿದ್ದು ಇಶಾನ್ ಕಿಶನ್. ಕೇವಲ 40 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 77 ರನ್ ಬಾರಿಸುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಹೀಗಾಗಿ ಪಾಕ್ ಸೋಲಿಗೆ ಮುಖ್ಯ ಕಾರಣ ಇಶಾನ್ ಕಿಶನ್ ಅವರ ಸ್ಫೋಟಕ ಇನಿಂಗ್ಸ್ ಎಂದು ಮೈಕ್ ಹೆಸ್ಸೆನ್ ಅಭಿಪ್ರಾಯಪಟ್ಟಿದ್ದಾರೆ.

Source link

ಗರ್ಲ್​ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂದು, ಧೂಪ ಬೆಳಗಿ ಆಕೆಯ ಆತ್ಮ ಕರೆದ ವ್ಯಕ್ತಿ – Kannada News | Horrific Indore Crime: Man Kills Girlfriend, Attempts Spirit Communication After Murder

ಮುಂಬೈ, ಫೆಬ್ರವರಿ 17: ವ್ಯಕ್ತಿಯೊಬ್ಬ ಪ್ರೇಯಸಿಯ ಎದೆಯ ಮೇಲೆ ಹತ್ತಿ ಕುಳಿತು, ಚಾಕು ಮುರಿಯುವವರೆಗೂ ಇರಿದು, ಕೊಲೆ ಮಾಡಿ ಬಳಿಕ ಧೂಪ ಬೆಳಗಿ ಆಕೆಯ ಆತ್ಮವನ್ನು ಕರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯನ್ನು ಕೊಲೆ(Murder)ಮಾಡಿ ಬಳಿಕ ಯೂಟ್ಯೂಬ್ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್​ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆಯಾಚಿಸಿ ಆಕೆಯ ಆತ್ಮದೊಂದಿಗೆ ಮಾತನಾಡಲು ಬಯಸುವುದಾಗಿ ಕೇಳಿಕೊಂಡಿದ್ದ.

ಇದು ಕಾಲ್ಪನಿಕವಲ್ಲ, ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಎಂಬಿಎ ವಿದ್ಯಾರ್ಥಿಯ ಕ್ರೂರ ಹತ್ಯೆಯ ಆರೋಪಿ ಪಿಯೂಷ್ ಧಮ್ನೋಟಿಯಾ ಅವರ ನಡವಳಿಕೆ ಇದು. ಈಗ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ವಿಚಾರಣೆಯಿಂದ ಹೊರಹೊಮ್ಮುತ್ತಿರುವ ವಿವರಗಳು ನಗರದಾದ್ಯಂತ ಆತಂಕ ಸೃಷ್ಟಿ ಮಾಡಿದೆ. ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಫೆಬ್ರವರಿ 10 ರಂದು ಧಮ್ನೋಟಿಯಾ ವಿದ್ಯಾರ್ಥಿಯೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾದಲ್ಲಿ ಆತ ಒಂಟಿಯಾಗಿ ಬ್ಯಾಗ್ ಹೊತ್ತುಕೊಂಡು ಹೊರಗೆ ಹೋಗುವುದು ಕಂಡುಬಂದಿತ್ತು. ಆ ಕೋಣೆಯೊಳಗೆ ಏನಾಯಿತು ಎಂಬುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಧಮ್ನೋಟಿಯಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿ ನಿರಾಕರಿಸಿದ್ದಳು. ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದ ಆತ, ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಉಡುಗೊರೆ ನೀಡುವುದಾಗಿ ಹೇಳಿದ್ದ.

ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ

ಅವಳು ಮತ್ತೆ ವಿರೋಧಿಸಿದಾಗ, ಅವನು ಅವಳ ಬಾಯಿಗೆ ಬಟ್ಟೆಯನ್ನು ತುರುಕಿ ಅವಳ ಎದೆಯ ಮೇಲೆ ಕುಳಿತು, ಅವಳು ಪ್ರಜ್ಞೆ ಕಳೆದುಕೊಳ್ಳುವವರೆಗೂ ಅವಳನ್ನು ಉಸಿರುಗಟ್ಟಿಸಿದ್ದ. ಅವಳು ಉಸಿರಾಟವನ್ನು ನಿಲ್ಲಿಸಿದ್ದಾಳೆಂದು ಅರಿತುಕೊಂಡ ಅವನು, ಅವಳ ಎದೆಯ ಬಳಿ ಎಷ್ಟು ಬಲದಿಂದ ಇರಿದಿದ್ದನೆಂದರೆ ಚಾಕುವೇ ಮುರಿದು ಹೋಗಿತ್ತು.
ಆದರೆ ಆ ಕ್ರೌರ್ಯ ಸಾವಿನೊಂದಿಗೆ ಕೊನೆಗೊಂಡಿಲ್ಲ. ಆಕೆಯನ್ನು ಕೊಂದ ನಂತರವೂ ಅವನು ಕೋಣೆಯೊಳಗೆ ಇದ್ದ. ಅವನು ಹೊರಗೆ ಬಂದು, ಮದ್ಯದ ಅಂಗಡಿಯಿಂದ ಬಿಯರ್ ಖರೀದಿಸಿ, ಹಿಂತಿರುಗಿ, ಆಕೆಯ ನಿರ್ಜೀವ ದೇಹದ ಪಕ್ಕದಲ್ಲಿ ಕುಳಿತು ಕುಡಿದಿದ್ದ.

ವಿಚಾರಣೆಯ ಸಮಯದಲ್ಲಿ, ಅವನು ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ, ಯುವತಿಯನ್ನು ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿ ತನ್ನ ಆಧಾರ್ ಕಾರ್ಡ್ ಸರಿಪಡಿಸಬೇಕೆಂದು ಮನೆಯಿಂದ ಹೊರಟಿದ್ದಳು. ಆಕೆಯ ತಂದೆ ಆಕೆಯನ್ನು ಕಲೆಕ್ಟರೇಟ್ ಬಳಿ ಡ್ರಾಪ್ ಮಾಡಿದ್ದರು. ನಂತರ ಆಕೆ ತನ್ನ ತಂಗಿಗೆ ಕರೆ ಮಾಡಿ, ತನ್ನ ಸಹಪಾಠಿ ಪಿಯೂಷ್ ಧಮ್ನೋಟಿಯಾ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿರುವುದಾಗಿ ಮತ್ತು ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿ ಹೇಳಿದಳು.

ರಾತ್ರಿ 11ಗಂಟೆಗೆ ಆಕೆಯ ಫೋನ್ ಇಂದ ಅಪ್ಪಾ ನಾನು ಮನೆಗೆ ಬರುವುದಿಲ್ಲ ಎನ್ನುವ ಸಂದೇಶ ಬಂದಿತ್ತು, ಬಳಿಕ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು. ಪೊಲೀಸರು ಮೊಬೈಲ್ ವಶಪಡಿಸಿಕೊಂಡಾಗ ಅವರಿಬ್ಬರು 11 ವಿಡಿಯೋಗಳನ್ನು ಕಾಲೇಜಿನ ವಾಟ್ಸ್​ಆ್ಯಪ್ ಗ್ರೂಪ್​​ನಲ್ಲಿ ಹಾಕಿರುವುದು ಕಂಡುಬಂದಿತ್ತು. ವಿಚಾರಣೆಯ ಸಮಯದಲ್ಲಿ, ಧಮ್ನೋಟಿಯಾ ಘಟನೆಗಳ ಬಗ್ಗೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದ.

ಕೊಲೆಯ ನಂತರ, ಪಿಯೂಷ್ ಮುಂಬೈಗೆ ಓಡಿಹೋಗಿ, ಪನ್ವೇಲ್ ಮೂಲಕ ಪ್ರಯಾಣಿಸಿ ಹೋಟೆಲ್‌ಗಳಲ್ಲಿ ತಂಗಿದ್ದ. ನಂತರ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಪ್ರೇಯಸಿಯ ಆತ್ಮದೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆಕೆಯನ್ನು ನಾನು ಮದುವೆಯಾಗಲು ಬಯಸಿದ್ದೆ, ಆಕೆ 15 ದಿನಗಳಿಂದ ನನ್ನ ಬಳಿ ಮಾತನಾಡಿರಲಿಲ್ಲ, ಆದರೆ ಬೇರೊಬ್ಬನ ಜತೆ ಚಾಟ್ ಮಾಡುತ್ತಿದ್ದಳು, ಅದಕ್ಕೆ ಕೋಪದಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ? – Kannada News | Rahu grastha Solar Eclipse: Understanding Its Impact and Remedies

2026ರ ಮೊದಲ ಸೂರ್ಯಗ್ರಹಣImage Credit source: Pinterest

ಇಂದು(ಫೆಬ್ರವರಿ 17)ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಇದು 2026ನೇ ವರ್ಷದ ಪ್ರಥಮ ಗ್ರಹಣವಾಗಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಂತಹ ಪ್ರದೇಶಗಳಲ್ಲಿ ಇದು ಗೋಚರಿಸಲಿದೆ. ಭಾರತದಲ್ಲಿ ಗೋಚರಿಸದಿದ್ದರೂ, ಗ್ರಹಣದ ಪರಿಣಾಮಗಳು ಕೆಲವು ರಾಶಿಗಳ ಮತ್ತು ನಕ್ಷತ್ರಗಳ ಮೇಲೆ ಇರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಈ ಗ್ರಹಣವು ಮಾಘ ಮಾಸದ ಕೃಷ್ಣಪಕ್ಷದಲ್ಲಿ ಸಂಭವಿಸುತ್ತಿದೆ. ಇದು ಕುಂಭ ರಾಶಿಯ ಧನಿಷ್ಠಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ನಡೆಯುತ್ತಿದೆ. ಇದನ್ನು “ರಿಂಗ್ ಆಫ್ ಫೈರ್” ಎಂದು ಕರೆಯಲಾಗುತ್ತದೆ. ಅಂದರೆ, ಸೂರ್ಯನು ಬೆಂಕಿಯ ಆಕಾರದಲ್ಲಿ ಕಾಣಿಸುತ್ತಾನೆ. ಗ್ರಹಣದ ಸಮಯದಲ್ಲಿ ಐದು ಗ್ರಹಗಳಾದ ರವಿ, ಬುಧ, ಶುಕ್ರ, ರಾಹು, ಮತ್ತು ಚಂದ್ರ ಒಂದೇ ಮನೆಯಲ್ಲಿ ಇರುವುದು ವಿಶೇಷ. ಇದನ್ನು ಪಂಚಗ್ರಹ ಕೂಟ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ, ಗುರು ಗ್ರಹವು ಈ ಗ್ರಹಣವನ್ನು ನೋಡುತ್ತಿದೆ, ಇದು ಇದರ ಮಹತ್ವವನ್ನು ಹೆಚ್ಚಿಸುತ್ತದೆ.

ಗ್ರಹಣದ ಸ್ಪರ್ಶಕಾಲ ಮಧ್ಯಾಹ್ನ 3:26 ಕ್ಕೆ, ಮಧ್ಯಮ ಕಾಲ ಸಂಜೆ 5:43 ಕ್ಕೆ ಮತ್ತು ಮೋಕ್ಷಕಾಲ ರಾತ್ರಿ 7:57 ಕ್ಕೆ ಇರುತ್ತದೆ. ಇದು ಭಾರತದಲ್ಲಿ ಗೋಚಾರವಿಲ್ಲದಿದ್ದರೂ, ಕರ್ಕಾಟಕ ರಾಶಿ, ಸಿಂಹ ರಾಶಿ, ಮಕರ ರಾಶಿ, ಮತ್ತು ಕುಂಭ ರಾಶಿಯವರ ಮೇಲೆ ತೀವ್ರ ಪರಿಣಾಮಗಳನ್ನು ಮತ್ತು ಬದಲಾವಣೆಗಳನ್ನು ತರಬಹುದು. ರವಿ ಗ್ರಹವನ್ನು ರಾಜಗ್ರಹವೆಂದು ಪರಿಗಣಿಸಲಾಗುತ್ತದೆ, ಇದು ಆತ್ಮಕಾರಕ ಮತ್ತು ಆರೋಗ್ಯಕಾರಕ ಗ್ರಹವಾಗಿದೆ. ಈ ಗ್ರಹಣವು ರಾಜಕೀಯ, ಆಡಳಿತ, ನಾಯಕರು ಮತ್ತು ಅಧಿಕಾರಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಧನಿಷ್ಠಾ ನಕ್ಷತ್ರದ ಜೊತೆಗೆ ಮೃಗಶಿರಾ ಮತ್ತು ಚಿತ್ತಾ ನಕ್ಷತ್ರಗಳಿಗೂ ಇದು ಅಷ್ಟೊಂದು ಶುಭಕರವಲ್ಲ.

ಇದನ್ನೂ ಓದಿ: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ

ಗ್ರಹಣದ ಸಮಯದಲ್ಲಿ ಬುದ್ಧಿಮಾಂದ್ಯರು, ವೃದ್ಧರು, ಅನಾರೋಗ್ಯ ಪೀಡಿತರು, ಮಕ್ಕಳು ಮತ್ತು ಗರ್ಭಿಣಿಯರು ಪ್ರಯಾಣಿಸುವುದು ಅಷ್ಟು ಶುಭಕರವಲ್ಲ. ಗ್ರಹಣದ ಪ್ರಭಾವವು ಸುಮಾರು 90 ದಿನಗಳವರೆಗೆ ಇರಬಹುದು. ಪರಿಹಾರ ಕ್ರಮಗಳಾಗಿ, ಈ ಸಮಯದಲ್ಲಿ ಧ್ಯಾನ ಮಾಡುವುದು, ಸೂರ್ಯ ನಮಸ್ಕಾರ ಮಾಡುವುದು, ಮಂತ್ರ ಜಪ ಮಾಡುವುದು, ಹಾಗೂ ದಾನಗಳನ್ನು ನೀಡುವುದು ಹೆಚ್ಚು ಫಲಪ್ರದ. ವಿಶೇಷವಾಗಿ, ಕರ್ಕಾಟಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರು ಗೋಧಿ, ಉದ್ದಿನಬೇಳೆ, ತಾಮ್ರವನ್ನು ದಾನ ಮಾಡುವುದರಿಂದ ಮತ್ತು ಸೂರ್ಯನ ಜಪ ಮಾಡುವುದರಿಂದ ಹಾಗೂ ಆದಿತ್ಯ ಹೃದಯವನ್ನು ಕೇಳಿಸಿಕೊಳ್ಳುವುದರಿಂದ ಶುಭ ಫಲ ದೊರೆಯುತ್ತದೆ. ಗ್ರಹಣದ ಸಮಯದಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಜಾಗರೂಕರಾಗಿರುವುದು ಮುಖ್ಯ. ಪ್ರಪಂಚದ ಯಾವುದೇ ಮೂಲೆಯಲ್ಲಿ ಗ್ರಹಣ ಸಂಭವಿಸಿದರೂ, ಕೆಲವು ರಾಶಿಗಳು ಮತ್ತು ನಕ್ಷತ್ರಗಳ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ! – Kannada News | US Ambassador Sergio Gor Praises Bengaluru: Strengthening India US Tech and Economic Ties

ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!

ಬೆಂಗಳೂರು, ಫೆಬ್ರವರಿ 17: ಇತ್ತೀಚೆಗೆ ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ (Sergio Gor) ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿಗೂ ಭೇಟಿ ನೀಡಿ ನಗರವು ಚೈತನ್ಯಮಯವಾಗಿದೆ ಎಂದು ಶ್ಲಾಘಿಸಿದ್ದಾರೆ. ಈ ವೇಳೆ ಅವರ ಜೊತೆ ಒಡನಾಡಿದ ಸಂಸದ ತೇಜಸ್ವಿ ಸೂರ್ಯ (Tejaswi Surya), ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಯುಎಸ್​ ರಾಯಭಾರಿಯ ಎಕ್ಸ್ ಪೋಸ್ಟ್

ಬೆಂಗಳೂರಿನ ಭೇಟಿ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅಮೇರಿಕದ ರಾಯಭಾರಿ ಸರ್ಜಿಯೋ, ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಬೀದಿಬದಿಯ ತಿಂಡಿ ತಿನಿಸುಗಳವರೆಗೆ ಬೆಂಗಳೂರಿಗೆ ಸರಿಸಾಟಿಯೇ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ತೇಜಸ್ವಿ ಸೂರ್ಯರೊಂದಿಗೆ ಸ್ಥಳೀಯ ಆಹಾರವನ್ನು ಸವಿಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಆತಿಥ್ಯಕ್ಕಾಗಿ ಸೂರ್ಯಗೆ ಕೃತಜ್ಞತೆಯನ್ನೂ ತಿಳಿಸಿದ್ದಾರೆ.

ಎರಡು ರಾಷ್ಷ್ಟ್ರಗಳ ಬಾಂಧವ್ಯಕ್ಕೆ ಬೆಂಗಳೂರು ಸಾಕ್ಷಿ

ಈ ಬಗ್ಗೆ ತೇಜಸ್ವಿ ಸೂರ್ಯ ಸಹ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಂಡಿರಾನಗರದ ಫಿಲ್ಟರ್ ಕಾಫಿ, ಮಸಾಲ ದೋಸೆ ಜೊತೆಗೆ ಅಮೆರಿಕ ರಾಯಭಾರಿಯೊಂದಿಗೆ ಭಾರತ–ಅಮೆರಿಕ ಸಂಬಂಧಗಳ ಕುರಿತು ಸಾರ್ಥಕ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದದ ಬಳಿಕ ವಾಣಿಜ್ಯ, ತಂತ್ರಜ್ಞಾನ ಹಾಗೂ ನವೀನತಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ವೃದ್ಧಿಯಾಗುತ್ತಿರುವ ಸಹಭಾಗಿತ್ವದ ಬಗ್ಗೆ ಮಾತುಕತೆ ನಡೆಸಿದೆವು ಎಂದು ಅವರು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ರಾಯಭಾರಿಗೆ “ನಮ್ಮ ಆಟೋ” ಪರಿಚಯಿಸಿ ಆಟೋದಲ್ಲಿ ಸಂಚರಿಸಿದ ಅನುಭವವೂ ಸ್ಮರಣೀಯವಾಗಿತ್ತು ಎಂದು ಸಂಸದರು ಉಲ್ಲೇಖಿಸಿದ್ದಾರೆ. ಮಸಾಲ ದೋಸೆಯಿಂದ ಮೆಷಿನ್ ಲರ್ನಿಂಗ್‌ವರೆಗೆ ಸಾಗಿದ ಬೆಂಗಳೂರಿನ ಪಯಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಸುಂದರ ಸಂಯೋಜನೆಯನ್ನು ತೋರಿಸುತ್ತದೆ. ನಮ್ಮ ನಗರವು ಎರಡು ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಡುವೆ ಬಾಂಧವ್ಯ ಹಾಗೂ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಸಾಫ್ಟ್‌ವೇರ್ ರಫ್ತುಗಳಲ್ಲಿ ಶೇ43ರಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ ದೇಶದ ಜಿಸಿಸಿಗಳ (Global Capability Centres) ಶೇ40ರಷ್ಟು ಕೇಂದ್ರಗಳು ಬೆಂಗಳೂರಿನಲ್ಲಿದ್ದು, ಭಾರತ–ಅಮೆರಿಕಾ ನೂತನ ಸಹಭಾಗಿತ್ವದ ಮುಂದಾಳತ್ವವನ್ನು ನಮ್ಮ ಬೆಂಗಳೂರು ವಹಿಸಿಕೊಂಡಿದೆ ಎಂದು ಅವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಿಂದೂಗಳ ಮನೆಯನ್ನೇ ಗುರಿಯಾಗಿಸಿ ಕಲ್ಲು ತೂರಾಟ ಮಾಡ್ತಾರೆ: ಬಿಜೆಪಿ ಯುವ ಮೋರ್ಚಾ ನಾಯಕ ಗಂಭೀರ ಆರೋಪ – Kannada News | Stone Pelting Targeted at Hindu House in Chikkamagaluru, BJP Yuva Morcha Leader Alleges Police Negligence

ಚಿಕ್ಕಮಗಳೂರು, ಫೆಬ್ರವರಿ 17: ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಕ್ ಪಾರ್ಕ್ ರಸ್ತೆಯಲ್ಲಿರುವ ಸರ್ಕಾರಿ ಕ್ವಾಟರ್ಸ್‌ನಲ್ಲಿ ವಾಸವಿರುವ ಸುಧಾ ಎಂಬುವವರ ಮನೆ ಮೇಲೆ ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲುತೂರಾಟ ನಡೆಯುತ್ತಿತ್ತು ಎಂದು ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸಂತೋಷ್ ಗಂಭೀರ ಆರೋಪ ಮಾಡಿದ್ದಾರೆ. ಮುಸ್ಲಿಂ ಯುವಕರಿಂದ ಈ ಕೃತ್ಯ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಕಲ್ಲುತೂರಾಟವನ್ನು ಪ್ರಶ್ನಿಸಲು ಮುಂದಾದ ಮಹಿಳೆಯರ ಮೇಲೆ ಹಲ್ಲೆಗೆ ಯತ್ನಿಸಿದಾಗ ಓರ್ವ ಯುವಕ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಈ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಹಿಂದೂಗಳ ಮನೆಗಳನ್ನೇ ಗುರಿಯಾಗಿಸಿ ಕಲ್ಲು ತೂರಾಟ ನಡೆಸುತ್ತಿರುವುದು ಯಾಕೆ, ಹಾಗೂ ಇಂತಹ ಕೃತ್ಯಗಳಿಗೆ ಯಾರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಂತೋಷ್ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳ ನಡುವೆಯೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಂತೋಷ್ ಆರೋಪಿಸಿದ್ದು, ಈ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿವರಗಳಿಗೆ ಓದಿ: ಚಿಕ್ಕಮಗಳೂರು: ಕಲ್ಲು ತೂರಾಟ ಮಾಡಿದವರ ಮೇಲೆ, ಕಿಡಿಗೇಡಿಗಳ ಹಿಡಿದವರ ಮೇಲೂ ಎಫ್​ಐಆರ್!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗನೇ ನಮ್ಮ ಪ್ರಪಂಚ, ಅವನೇ ಇಲ್ಲದ ಮೇಲೆ ನಾವ್ಯಾಕೆ, ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆ – Kannada News | Devastated Parents Suicide in Chhattisgarh After Son’s Accident Death

ಛತ್ತೀಸ್​ಗಢ, ಫೆಬ್ರವರಿ 17: ಮಗನ ಸಾವಿನ ನೋವಿನಿಂದ ಹೊರಬರಲಾರದೆ ಪೋಷಕರು ಆತ್ಮಹತ್ಯೆ(Suicide)ಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಅಪಘಾತವೊಂದರಲ್ಲಿ ಈ ದಂಪತಿ ಮಗನನ್ನು ಕಳೆದುಕೊಂಡಿದ್ದರು. ಆತನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನೇ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವೇನು ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣಾಗಿದ್ದಾರೆ.

ಮನೆಯ ಅಂಗಳದ ಬೇವಿನ ಮರದಲ್ಲಿ ಕೃಷ್ಣ ಪಟೇಲ್ ಮತ್ತು ಅವರ ಪತ್ನಿ ರಮಾ ಬಾಯಿ ಅವರ ಶವಗಳು ನೇತಾಡುತ್ತಿದ್ದವು. ಕೇವಲ ಅವರ ಕುತ್ತಿಗೆ ಸೀರೆಯ ಕುಣಿಕೆಯಿಂದ ಬಂಧಿಸಲ್ಪಟ್ಟಿರಲಿಲ್ಲ, ಬದಲಾಗಿ ಅವರು ಇನ್ನು ಮುಂದೆ ಹೊರಲು ಸಾಧ್ಯವಾಗದ ದುಃಖದಿಂದ ಬಂಧಿಸಲ್ಪಟ್ಟಿದ್ದವು.

ಜಂಜ್‌ಗೀರ್-ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್ ಠಾಣೆ ಪ್ರದೇಶದಲ್ಲಿ, ಈ ಘಟನೆ ನಡೆದಿದೆ. ಮನೆಯಲ್ಲಿ ನಿಶ್ಯಬ್ಧತೆ ಇತ್ತು. ಜನರು ಒಟ್ಟುಗೂಡಿದರು ಮನೆಯ ಹೊರಗೆ ಇಬ್ಬರ ಶವ ಕಂಡು ಬೆಚ್ಚಿಬಿದ್ದಿದ್ದರು. ದಂಪತಿ ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದರು. ಜತೆಗೆ ವಿಡಿಯೋ ಸಂದೇಶವನ್ನು ಕೂಡ ಮಾಡಿಟ್ಟಿದ್ದರು. ಅವರ ಮಾತುಗಳು ಇಡೀ ಕುಟುಂಬದವರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಅವರಿಗೆ ಇದ್ದಿದ್ದು ಒಬ್ಬನೇ ಮಗ ಆತನಿಗೆ 21 ವರ್ಷ ವಯಸ್ಸಾಗಿತ್ತು, 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದ ಕೃಷ್ಣ (48) ಮತ್ತು ರಮಾ ಬಾಯಿ (47)ಗೆ ಆದಿತ್ಯನೇ ಪ್ರಪಂಚವಾಗಿದ್ದ. ಅಪಘಾತದ ಬಳಿಕ ಮನೆಗೆ ಬರ ಸಿಡಿಲು ಬಡಿದಂತಾಗಿತ್ತು. ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋದ ದಿನದ ಬಗ್ಗೆ ಕೃಷ್ಣ ಬರೆದಿದ್ದಾರೆ.

ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ

ಆದಿತ್ಯ ಅಂದು ಹೋಗುವುದಿಲ್ಲ ಎಂದರೂ ತಾನೇ ಬಲವಂತವಾಗಿ ಅವನನ್ನು ಕಳುಹಿಸಿಕೊಟ್ಟು ತಪ್ಪು ಮಾಡಿದೆ. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆದರೆ ನಾವು ಮಾತ್ರ ಜೀವಂತವಾಗಿದ್ದೇವೆ ಎಂದು ಬರೆದಿದ್ದಾರೆ. ದಂಪತಿ ಭಾನುವಾರ ತಡರಾತ್ರಿ ತಮ್ಮ ಅಂಗಳದಲ್ಲಿರುವ ಬೇವಿನ ಮರಕ್ಕೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೊರಠಾಣೆ ಉಸ್ತುವಾರಿ ಸತ್ಯಂ ಚೌಹಾಣ್ ತಿಳಿಸಿದ್ದಾರೆ. ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಅಸಹನೀಯ ದುಃಖವು ಈ ತಪ್ಪು ಹೆಜ್ಜೆ ಇಡಲು ಕಾರಣವಾಯಿತು.
ಮಗನನ್ನು ಕಳೆದುಕೊಂಡಾಗಿನಿಂದ ಆ ದಂಪತಿ ಮುಖದಲ್ಲಿ ನಗುವೇ ಇರಲಿಲ್ಲ, ದೀರ್ಘಕಾಲದ ನೋವಿನ ನಂತರ, ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಕೂಡ ಆತನೊಂದಿಗೆ ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ.

ವಿಡಿಯೋವನ್ನು ಕೂಡಾ ರೆಕಾರ್ಡ್​ ಮಾಡಿದ್ದಾರೆ. ಆದಿತ್ಯನ ಅಪಘಾತದ ನಂತರ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಮತ್ತು ಜಲಭರ ಪಟೇಲ್‌ಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದ್ದಾರೆ. ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ, ಸಂತೋಷದಿಂದ ನಮ್ಮನ್ನು ಕಳುಹಿಸಿಕೊಡಿ ಎಂದು ಬರೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version