ಕೈದಿ-ಸಾಂದರ್ಭಿಕ ಚಿತ್ರImage Credit source: Telegraph India
ಶ್ರೀನಗರ, ಫೆಬ್ರವರಿ 17: ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಿಂದ ಪಾಕಿಸ್ತಾನಿ ಕೈದಿ(Prisoner)ಗಳು ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಇಬ್ಬರು ಪಾಕಿಸ್ತಾನಿಗಳು ಸೇರಿ ಮೂವರು ಕೈದಿಗಳು ಜೈಲಿಂದ ಓಡಿ ಹೋಗಿದ್ದಾರೆ. ಮೂಲಗಳ ಪ್ರಕಾರ ಸಂಜೆ 5.05ರ ಸುಮಾರಿಗೆ ಜಮ್ಮುವಿನ ಆರ್ಎಸ್ ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ಮೂವರು ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಎಸ್‌ಪಿಒ ವಿನಯ್ ಕುಮಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಪರ್ವೀನ್ ಕುಮಾರ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆಂದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ತಪ್ಪಿಸಿಕೊಂಡ ಕೈದಿಗಳನ್ನು ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ (ಇಬ್ಬರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಗಳು) ಮತ್ತು ಜಮ್ಮುವಿನ ನಿವಾಸಿ ಕರಣ್‌ಜಿತ್ ಸಿಂಗ್ ಅಲಿಯಾಸ್ ಗುಗ್ಗಾ ಎಂದು ಗುರುತಿಸಲಾಗಿದೆ.
ಗುಪ್ತಚರ ಮೂಲಗಳ ಪ್ರಕಾರ, ಇಬ್ಬರು ಪಾಕಿಸ್ತಾನಿ ಹುಡುಗರು ಭಾರತದ ಗಡಿಯೊಳಗೆ ಗೊತ್ತಿಲ್ಲದೆ ಬಂದಿದ್ದಾರೆ ಮತ್ತು ಅವರಿಗೆ ಹಾಗೂ ಉಗ್ರರ ಜತೆ ಯಾವುದೇ ನಂಟಿಲ್ಲ. ಬಾಲಕರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಭಾರತದಾದ್ಯಂತ 300 ಕ್ಕೂ ಹೆಚ್ಚು ಜೈಲುಗಳು ಅವುಗಳ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಕಾರ್ಯನಿರ್ವಹಿಸುತ್ತಿವೆ, ಮಲಗುವ ಸ್ಥಳ, ಆರೋಗ್ಯ ರಕ್ಷಣೆ ಮತ್ತು ಮೇಲ್ವಿಚಾರಣೆಯಂತಹ ಮೂಲಭೂತ ವಿಷಯಗಳು ಸಹ ಕಷ್ಟಕರವಾಗುತ್ತಿವೆ. ದೆಹಲಿಯ ಕೇಂದ್ರ ಜೈಲು ಸಂಖ್ಯೆ 4 ರಲ್ಲಿ, 2020 ರಿಂದ ಜನದಟ್ಟಣೆ ಸ್ಥಿರವಾಗಿ ಏರಿದೆ, 2023 ರಲ್ಲಿ 550% ತಲುಪಿದೆ.
ಬಿಹಾರದ ದಾನಾಪುರ್ ಉಪ-ಜೈಲು ಮತ್ತು ಜಾರ್ಖಂಡ್‌ನ ಗುಮ್ಲಾ ಜಿಲ್ಲಾ ಜೈಲು 300% ಕ್ಕಿಂತ ಹೆಚ್ಚುಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಪಶ್ಚಿಮ ಬಂಗಾಳದ ಕಂಡಿ ಉಪ-ಜೈಲು 2022 ರಲ್ಲಿ 450% ಕ್ಕೆ ತಲುಪಿದೆ.ಜೈಲುಗಳು ಇಷ್ಟೊಂದು ಜನದಟ್ಟಣೆಯಿಂದ ಇರುವುದಕ್ಕೆ ದೊಡ್ಡ ಕಾರಣ ಶಿಕ್ಷೆಯ ಹೆಚ್ಚಳವಲ್ಲ, ಬದಲಾಗಿ ವಿಳಂಬ. ಭಾರತದ ಜೈಲು ಜನಸಂಖ್ಯೆಯ ಸುಮಾರು 76% ರಷ್ಟು ವಿಚಾರಣಾಧೀನ ಕೈದಿಗಳಾಗಿದ್ದು, ಅವರಲ್ಲಿ ಹಲವರು ಯಾವುದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿಲ್ಲ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 17, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಮಾಗ ಮಾಸದ ಕೃಷ್ಣಪಕ್ಷ ಅಮಾವಾಸ್ಯೆ, ಧನಿಷ್ಠ ನಕ್ಷತ್ರದಿಂದ ಕೂಡಿದ ಈ ದಿನ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಫಾಲ್ಗುಣ ಅಮಾವಾಸ್ಯೆ ಇಂದು ಸಂಜೆ 5 ಗಂಟೆ 30 ನಿಮಿಷದ ತನಕ ಇರಲಿದೆ.
ಈ ದಿನದ ಪ್ರಮುಖ ಘಟನೆಗಳಲ್ಲಿ 2026ರ ಮೊದಲ ಗ್ರಹಣವಾದ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವೂ ಸೇರಿದೆ. ಗ್ರಹಣವು ಮಧ್ಯಾಹ್ನ 3 ಗಂಟೆ 26 ನಿಮಿಷಕ್ಕೆ ಸ್ಪರ್ಶ ಕಾಲ, 5 ಗಂಟೆ 43 ನಿಮಿಷಕ್ಕೆ ಮಧ್ಯಕಾಲ ಮತ್ತು 7 ಗಂಟೆ 57 ನಿಮಿಷಕ್ಕೆ ಮೋಕ್ಷ ಕಾಲವನ್ನು ಹೊಂದಿದ್ದರೂ, ಇದು ಭಾರತದಲ್ಲಿ ಗೋಚಾರವಿಲ್ಲ ಎಂದು ಗುರೂಜಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಪಂಚಗ್ರಹ ಕೂಟದಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಪರಿಸರ ಮತ್ತು ಪಂಚಭೂತಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಜಾಗ್ರತೆಯಿಂದ ಇರಲು ಸಲಹೆ ನೀಡಿದ್ದಾರೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಆರ್ಥಿಕ, ಆರೋಗ್ಯ, ಕೌಟುಂಬಿಕ ಮತ್ತು ವೃತ್ತಿಜೀವನದ ಫಲಾಫಲಗಳನ್ನು ವಿಸ್ತಾರವಾಗಿ ವಿವರಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 17: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದು ರಾಹುಗ್ರಸ್ತ ಸೂರ್ಯಗ್ರಹಣ, ಏನೇನು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಇದು 2026ರ ಮೊದಲ ಗ್ರಹಣವಾಗಿದ್ದು, ಕುಂಭ ರಾಶಿಯ ಧನಿಷ್ಠಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ನಡೆಯಲಿದೆ. ಇದನ್ನು “ರಿಂಗ್ ಆಫ್ ಫೈರ್” ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಗೋಚರಿಸದಿದ್ದರೂ, ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಲ್ಲಿ ಗೋಚರಿಸಲಿದೆ.
ಈ ಗ್ರಹಣದ ಸಮಯದಲ್ಲಿ ಐದು ಗ್ರಹಗಳು (ರವಿ, ಬುಧ, ಶುಕ್ರ, ರಾಹು, ಚಂದ್ರ) ಒಂದೇ ಮನೆಯಲ್ಲಿ ಇರುವುದು ವಿಶೇಷ. ಕರ್ಕಾಟಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರ ಮೇಲೆ ಇದು ಪ್ರಭಾವ ಬೀರಬಹುದು. ಗ್ರಹಣದ ಸ್ಪರ್ಶಕಾಲ ಮಧ್ಯಾಹ್ನ 3:26, ಮಧ್ಯಮ ಕಾಲ 5:43 ಮತ್ತು ಮೋಕ್ಷಕಾಲ ರಾತ್ರಿ 7:57. ಈ ಸಮಯದಲ್ಲಿ ಮಂತ್ರ ಜಪ, ದಾನ ಮತ್ತು ಧ್ಯಾನ ಮಾಡುವುದು ಶುಭಕರ. ಗೋಧಿ, ಉದ್ದಿನಬೇಳೆ, ತಾಮ್ರ ದಾನ, ಸೂರ್ಯನ ಜಪ ಹಾಗೂ ಆದಿತ್ಯ ಹೃದಯ ಪಠಣವು ಉತ್ತಮ ಫಲ ನೀಡುತ್ತದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಜಾಗರೂಕರಾಗಿರುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಕನ್ನಡದಲ್ಲಿ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆದ ‘ಮಾರ್ಕ್’ ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆಯಿತು. ಈ ಚಿತ್ರವವನ್ನು ಜನರು ಸಾಕಷ್ಟು ಕೊಂಡಾಡಿದರು. ಈ ಚಿತ್ರದ ‘ಮಸ್ತ್ ಮಲೈಕಾ’ (Mast Malaika) ಹಾಡನ್ನು ಅನೇಕರು ಬಹುವಾಗಿ ಇಷ್ಟಪಟ್ಟಿದ್ದಾರೆ. ಈ ಹಾಡಿನ ವಿಡಿಯೋ ಸಾಂಗ್ ಈವರೆಗೆ 33 ಮಿಲಿಯನ್ ಅಂದರೆ 3.3 ಕೋಟಿ ವೀಕ್ಷಣೆ ಕಂಡಿದೆ. ಸಾನ್ವಿ ಸುದೀಪ್ ಕಂಠದಲ್ಲಿ ಮೂಡಿಬಂದ ಈ ಹಾಡು ಬಾಲಿವುಡ್ ನಟ ಸಲ್ಮಾನ್ ಖಾನ್ಗೂ ಸಾಕಷ್ಟು ಇಷ್ಟ ಆಗಿದೆ. ಈ ಹಾಡಿನ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಸಲ್ಮಾನ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಾಲಿವುಡ್ ಜೊತೆ ದಕ್ಷಿಣದ ಸಿನಿಮಾಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಇಲ್ಲಿನ ಆಗು ಹೋಗುಗಳನ್ನು ಅವರು ಗಮನಿಸುತ್ತಾ ಇರುತ್ತಾರೆ. ಸಲ್ಮಾನ್ ಖಾನ್ ಅವರಿಗೆ ಸುದೀಪ್ ಮೇಲೆ ವಿಶೇಷ ಪ್ರೀತಿ ಕೂಡ ಇದೆ. ‘ದಬಾಂಗ್ 3’ ಚಿತ್ರದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಸುದೀಪ್ ಹಾಡನ್ನು ಸಲ್ಲು ಬಹುವಾಗಿ ಇಷ್ಟಪಟ್ಟಿದ್ದಾರೆ.
‘ಮಸ್ತ್ ಮಲೈಕಾ’ ಹಾಡಿನ ಲಿಂಕ್ ಅನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ ಸಲ್ಮಾನ್ ಖಾನ್. ‘ಸುಂದರವಾದ ಹಾಡು, ಒಳ್ಳೆಯದಾಗಲಿ’ ಎಂದು ಸಲ್ಮಾನ್ ಖಾನ್ ಅವರು ಬರೆದುಕೊಂಡಿದ್ದಾರೆ. ಈ ಸ್ಟೋರಿಯಲ್ಲಿ ಕಿಚ್ಚ ಸುದೀಪ್ ಹಾಗೂ ಸಾನ್ವಿಯನ್ನು ಟ್ಯಾಗ್ ಮಾಡಿದ್ದಾರೆ.
‘ಮಸ್ತ್ ಮಲೈಕಾ’ ಹಾಡನ್ನು ಹಾಡಿದ್ದು ಸುದೀಪ್ ಮಗಳು ಸಾನ್ವಿ. ಸಲ್ಮಾನ್ ಖಾನ್ ಕೊಟ್ಟ ಈ ಮೆಚ್ಚುಗೆಗೆ ಸಾನ್ವಿ ಫುಲ್ ಖುಷ್ ಆಗಿದ್ದಾರೆ. ‘ಎಂತಹ ಅದ್ಭುತ ಗೌರವ. ಧನ್ಯವಾದಗಳು ಸಲ್ಮಾನ್ ಸರ್’ ಎಂದು ಸಾನ್ವಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸುದೀಪ್ ಅವರು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಲ್ಮಾನ್ ಖಾನ್ ಅವರು ಸದ್ಯ ‘ಗಾಲ್ವಾನ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ.
ಚಿಕ್ಕಮಗಳೂರು, ಫೆಬ್ರವರಿ 17: ಚಿಕ್ಕಮಗಳೂರು (Chikkamagaluru) ನಗರದ ವಿಜಯನಗರ ಬಡಾವಣೆಯ ತಿಲಕ್ ಪಾರ್ಕ್ ಸಮೀಪ ಮನೆಯೊಂದರ ಮೇಲೆ ಕಳೆದ ಒಂದು ವಾರದಿಂದ ಕಿಡಿಗೇಡಿಗಳು ರಾತ್ರಿ ವೇಳೆ ನಿರಂತರ ಕಲ್ಲುತೂರಾಟ ನಡೆಸಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೂ ನಾಲ್ವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಸ್ಥಳದಲ್ಲಿ ಸೋಮವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಸದ್ಯ ಪ್ರಕರಣದ ತನಿಖೆಯನ್ನು ಬಸವನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಕೈಗೊಂಡಿದ್ದಾರೆ.
ಸಂತ್ರಸ್ತ ಮಹಿಳೆ ಸುಧಾ ದೂರಿನ ಪ್ರಕಾರ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಮನೆ ಮೇಲೆ ಕಲ್ಲು ಎಸೆಯಲಾಗುತ್ತಿದೆ. ನಾವು ಭಯದಲ್ಲಿ ಜೀವನ ನಡೆಸುವಂತಾಗಿದೆ ಎಂದು ಸುಧಾ ದೂರಿದ್ದಾರೆ.
ಪೊಲೀಸರಿಗೆ ದೂರು ನೀಡಿದ್ದೆವೆಂದ ಎಂದ ಯುವಕ
ನಮ್ಮ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲು ತೂರಾಟ ಮಾಡುತ್ತಿದ್ದಾರೆ. ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಾನು ಕೆಲಸಕ್ಕೆ ಹೋಗುತ್ತೇನೆ. ತಾಯಿ ,ತಂಗಿ ಇಬ್ಬರೇ ಮನೆಯಲ್ಲಿ ಇರುತ್ತಾರೆ. ಮಧ್ಯಾಹ್ನ ರಾತ್ರಿ ವೇಳೆಯಲ್ಲಿ ಕಲ್ಲು ಎಸೆಯುತ್ತಾರೆ. ನಾವು ಪೊಲೀಸರಿಗೆ ದೂರು ನೀಡಿದ್ದೆವು. ಸೋಮವಾರ ರಾತ್ರಿ ಕೂಡ ಮನೆಗೆ ಕಲ್ಲು ಎಸೆದಿದ್ದಾರೆ. ಅದನ್ನು ಹೊರಗೆ ಇದ್ದ ತಾಯಿ ಹಾಗೂ ತಂಗಿ ಪ್ರಶ್ನೆ ಮಾಡಿದ್ದಾರೆ. ಆಗ ಅವರ ಜೊತೆ ಯುವಕರು ಜಗಳ ಮಾಡಿದ್ದಾರೆ ಎಂದು ಮನೆ ಮಾಲೀಕ ಗಗನ್ ಎಂಬವರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕೆಲ ಮುಸ್ಲಿಂ ಯುವಕರನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ, ಘರ್ಷಣೆ ವೇಳೆ ಇಬ್ಬರು ಮುಸ್ಲಿಂ ಯುವಕರು ಗಾಯಗೊಂಡಿದ್ದು, ಅವರನ್ನು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂಬ ಆರೋಪವನ್ನು ಗಾಯಾಳುಗಳು ಮತ್ತು ಸಮುದಾಯದ ಮುಖಂಡರು ಮಾಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಡಿಪಿಐ ಮುಖಂಡ ಮುನೀರ್, ಮುಸ್ಲಿಂ ಯುವಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಸಂಬಂಧಪಟ್ಟವರ ವಿರುದ್ಧ ಕೇಸ್ ದಾಖಲಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಹಿಂದೂ ಸಂಘಟನೆಗಳು, ಮನೆ ಮೇಲೆ ಕಲ್ಲು ಎಸೆದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ. ಮನೆಯ ಮೇಲೆ ಕಲ್ಲು ತೂರಿದ ಆರು ಜನ ಯುವಕರ ಬಂಧನಕ್ಕೆ ಭಜರಂಗದಳ ,ಬಿಜೆಪಿ ಪಟ್ಟು ಹಿಡಿದಿವೆ. ಪರಿಣಾಮವಾಗಿ ಪೊಲೀಸ್ ಠಾಣೆ ಎದುರು ಕೆಲಕಾಲ ಹೈಡ್ರಾಮಾವೇ ನಡೆದಿದೆ. ಎರಡೂ ಸಮುದಾಯದ ಯುವಕರು ಜಮಾವಣೆಗೊಂಡು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ ಮಂಗಳವಾರ ಅಪರಿಚಿತರಿಂದ ಎಚ್ಚರಿಕೆ, ಕ್ರೀಡಾ ಮನೋಭಾವ, ಅನಾರೋಗ್ಯ ಉಲ್ಬಣ, ವರ್ಗಾವಣೆಯ ಆತಂಕ, ಅನಪೇಕ್ಷಿತ ಕಾರ್ಯ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಪರಿಘ, ಕರಣ : ನಾಗವಾನ್, ಸೂರ್ಯೋದಯ – 06 – 48 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 15:34 – 17:01, ಯಮಗಂಡ ಕಾಲ 09:43 – 11:11, ಗುಳಿಕ ಕಾಲ 12:38 – 14:06
ಮೇಷ ರಾಶಿ :
ಮನೆಯ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣವನ್ನು ನೀವು ನಿರ್ಮಿಸಿಕೊಳ್ಳುವಿರಿ. ಪೂರಕವಾದ ವಾತಾವರಣವು ಹೆಚ್ಚು ಖುಷಿಕೊಡುವುದು. ಇನ್ನೊಬ್ಬರನ್ನು ಅಪಹಾಸ್ಯ ಮಾಡುತ್ತ ಸಮಯವನ್ನು ಕಳೆಯುವಿರಿ.
ವೃಷಭ ರಾಶಿ :
ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ದೂರ ಪ್ರಯಾಣದಿಂದ ಆರೋಗ್ಯವು ಹದಗೆಟ್ಟು ವಿಶ್ರಾಂತಿಯನ್ನು ಪಡಯಬೇಕಾದೀತು. ರಕ್ತಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸಿಕೊಳ್ಳುವುದು. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಯಾವುದೇ ಕಾರ್ಯಕ್ಕೂ ನೀವು ಮುನ್ನುಗ್ಗುವುದು ಇಷ್ಟವಾಗದು. ವ್ಯವಹಾರದಲ್ಲಿ ನೀವು ಸರಿಯಾಗಿ ಇರದೇ ಇರುವುದು ನಿಮಗೆ ಕಷ್ಟವಾಗಬಹುದು.
ಮಿಥುನ ರಾಶಿ :
ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಆಯಾಸದಿಂದ ಕೆಲಸ ಸಾಗದು. ಅನಿವಾರ್ಯವಾಗಿ ಸಣ್ಣ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ಮಂಗಲ ಕಾರ್ಯಕ್ಕೆ ಬಹಳ ಸಿದ್ಧತೆಯನ್ನು ಮಾಡುವಿರಿ. ಇಂದು ನಿಮಗೆ ಕುಟುಂಬದ ಜೊತೆ ಇರುವುದು ಖುಷಿ ಕೊಡದು. ಆರ್ಥಿಕತೆಯ ವಿಚಾರದಲ್ಲಿ ನೀವು ನಿಷ್ಠುರವಾದಿಗಳಾಗುವಿರಿ. ನಿಮ್ಮ ಬೇಸರವನ್ನು ಸಂಗಾತಿಯು ಕಳೆಯಬಹುದು.
ಕರ್ಕಾಟಕ ರಾಶಿ :
ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಉದ್ಯೋಗ ಬದಲಿಸಲು ಸಂಗಾತಿಯಿಂದ ಒತ್ತಡ ಬರಬಹುದು. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧನಾ ಮಾಡಬೇಕಾದೀತು. ಮನೆಯನ್ನು ಮಾರಾಟ ಮಾಡಿ ದೂರ ಹೋಗುವ ಆಲೋಚನೆಗಳು ಬರಬಹುದು. ನೀವು ನಿಮ್ಮನ್ನೇ ಪ್ರಶಂಸಿಸಿಕೊಳ್ಳುವುದು ಸರಿ ಕಾಣಿಸದು.
ಸಿಂಹ ರಾಶಿ :
ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಆಭರಣದ ಮಾರಾಟವು ನಿಮಗೆ ಲಾಭವನ್ನು ಕೊಡಬಹುದು. ಚರಾಸ್ತಿಯು ನಿಮಗೆ ಗೊತ್ತಾಗದಂತೆ ನಿಮ್ಮ ಕೈತಪ್ಪಿ ಹೋಗಲಿದೆ.
ಕನ್ಯಾ ರಾಶಿ :
ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ಹಣವನ್ನು ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥತೆ ಇರಲಿದೆ. ಅನಪೇಕ್ಷಿಯ ಮಾತನ್ನು ಆಡುವುದು ಬೇಡ. ಸುಮ್ಮನಿರಲು ಕಷ್ಟವಾದರೆ ಏನಾದರೂ ಕೆಲಸವನ್ನು ಮಾಡಿ. ಧಾರ್ಮಿಕ ಕಾರ್ಯವನ್ನು ಕರ್ತವ್ಯದಿಂದ ಮಾಡುವಿರಿ, ಶ್ರದ್ಧೆ ಮತ್ತು ಭಕ್ತಿಯಿಂದಲ್ಲ. ಸ್ತ್ರೀಯರು ನೂತನ ವಸ್ತುಗಳನ್ನು ಖರೀದಿಸಿ ಸಂತೋಷಪಡುವರು.
ತುಲಾ ರಾಶಿ :
ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಅಪರಿಚಿತರ ಅಪಮಾನದಿಂದ ನಿಮ್ಮ ಬದುಕಿನ ದಿಕ್ಕು ಬದಲು. ಸಕಾರಾತ್ಮಕ ಚಿಂತನೆಯಿಂದ ಏಳ್ಗೆ. ಪಾಲುದಾರಿಕೆಯಲ್ಲಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗಬೇಕಾಗುವುದು. ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಮಯವು ಬೇಕಾಗಬಹುದು.
ವೃಶ್ಚಿಕ ರಾಶಿ :
ನೌಕರರು ನಿಮ್ಮಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ಆಸ್ತಿ ವಿವಾದದಲ್ಲಿ ಹಿನ್ನಡೆ ಸಾಧ್ಯತೆ. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಮಕ್ಕಳ ತಪ್ಪನ್ನು ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗುವುದು. ನೀವು ಜೊತೆಗಿದ್ದರೆ ಮಿತ್ರರು ಎಂತಹ ಕೆಲಸವನ್ನು ಮಾಡಲೂ ಹಿಂಜರಿಯರು. ಸಂಗಾತಿಯ ಮೇಲೆ ದ್ವೇಷದ ಬುದ್ಧಿಯು ಬರಬಹುದು.
ಧನು ರಾಶಿ :
ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ಧಾರ್ಮಿಕತೆಯನ್ನು ಬೆಳೆಸಿಕೊಳ್ಳುವಿರಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ. ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಮನೆಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ವಸ್ತುಗಳು ಇಲ್ಕವಾಗಿದ್ದು ನಿಮಗೆ ಗೊತ್ತಾಗದೇಹೋಗುವುದು. ಇಷ್ಟು ದಿನ ಗುಪ್ತವಾಗಿದ್ದ ಪ್ರೇಮವು ಇಂದು ಪ್ರಕಟವಾಗುವುದು.
ಮಕರ ರಾಶಿ :
ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಹೂಡಿಕೆಗೆ ಒತ್ತಡವು ಇರುವುದು. ನಿಮ್ಮ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ವ್ಯಾಪಾರದ ವಿಸ್ತರಣೆ ಸಾಧ್ಯವಾಗದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಸರಳವಾದುದನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ನೀವು ಕುಟುಂಬದ ಬಗ್ಗೆ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿಯಾಗುವುದು.
ಕುಂಭ ರಾಶಿ :
ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಪ್ರಭಾವೀ ವ್ಯಕ್ತಿಗಳ ಸಹಕಾರವನ್ನು ಪಡೆಯುವಿರಿ. ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಬೇಕಾಗುವುದು. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ನೋವಿಗೆ ಯಾರೂ ಸ್ಪಂದಿಸದಿರುವುದು ನಿಮಗೆ ಬೇಸರವಾಗುವುದು. ನಿಮ್ಮ ಇಂದಿನ ನಡೆಯನ್ನು ಗುರುತಿಸಲಾಗದು. ಇಂದು ನಿಮ್ಮ ಸಾಮರ್ಥ್ಯದ ಮೇಲೆ ಪೂರ್ಣವಿಶ್ವಾಸವು ಇರದು.
ಮೀನ ರಾಶಿ :
ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರುವ ಕಾರಣ ಮನಸ್ಸು ಸಮಾಧಾನದಿಂದ ಇರುವುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ನಿಮ್ಮ ಮಾತಿನಂತೆ ನಡೆಯಬೇಕು ಎನ್ನುವ ಹಠವಿರುವುದು. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ನೂತನ ಗೃಹನಿರ್ಮಾಣವನ್ನು ಮಾಡಲು ಚಿಂತಿಸುವಿರಿ.
ಮೂರು ಬೊಗಸೆ ಕರಿಎಳ್ಳು ಹಾಗೂ ಅದರ ಮೇಲೆ ಬೆಲ್ಲದ ಅಚ್ಚು ಹಾಗೂ ಇದನ್ನು ಒಂದು ನೀಲಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅಂತ ಕೊಡಿ. ಶತ್ರುಕಾಟದಿಂದ ಮುಕ್ತಿ ಸಿಗುತ್ತದೆ ಹಾಗೂ ಪ್ರಭಾವಿಗಳ ಬೆಂಬಲ ನಿಮಗೆ ಸಿಗುತ್ತದೆ.
ಕುಟುಂಬದವರ ವಿಚಾರದಲ್ಲಿ ಹೆಚ್ಚು ಅರ್ಥ ಮಾಡಿಕೊಳ್ಳುವ ಸಮಯವನ್ನು ನೀಡಿ. ಅದರಲ್ಲೂ ವಿಶೇಷವಾಗಿ ಹಿರಿಯರ ಮಾತು ಕೇಳುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಪ್ರೀತಿಯಲ್ಲಿ ಅನುಮಾನ- ಸಂದೇಹಗಳೇ ವಿಜೃಂಭಿಸದಂತೆ ನೋಡಿಕೊಳ್ಳಿ. ಹಣ್ಣು, ನೀರು ಸೇವನೆಗೆ ಆದ್ಯತೆ ನೀಡಿ ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ಸ್ನೇಹದಲ್ಲಿ ಪ್ರಾಮಾಣಿಕವಾಗಿ ಇರುವುದು ಮುಖ್ಯ. ಊಟ- ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ನಿಮ್ಮ ಪ್ರಾಮುಖ್ಯ ಇರಲಿ.
ನೀವು ಈ ದಿನ ಕೆಲವು ಆತುರದ ನಿರ್ಧಾರ ಮಾಡುವ ಸಾಧ್ಯತೆ ಇದೆ, ಆದರೆ ಇಂತಹ ಸಮಯದಲ್ಲಿ ಮನಸ್ಸು ಶಾಂತವಾಗಿರಲಿದೆ. ಕೆಲಸದ ವಾತಾವರಣದಲ್ಲಿ ಮಿತವಾಗಿ ಮಾತನಾಡುವುದು ನಿಮಗೆ ಗೌರವ ತಂದುಕೊಡುತ್ತದೆ. ಹಣಕಾಸಿನ ವಿಷಯದಲ್ಲಿ ಜನಪ್ರಿಯ ಆಗಿರುವ ನಿಯಮಗಳನ್ನು ಪಾಲನೆ ಮಾಡಿ. ಹೀಗೆ ಮಾಡಿದಲ್ಲಿ ಅನಗತ್ಯ ವೆಚ್ಚಗಳಿಂದ ದೂರವಾಗಲು ಸಾಧ್ಯ. ನಿಮ್ಮ ಮಾತಿನ ಶಕ್ತಿಯು ಈ ದಿನ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲುದು.
ಮೃದುವಾಗಿ ಮಾತನಾಡಿದರೆ- ಎದುರಿಗೆ ಇರುವವರ ಭಾವನೆಗೂ ಬೆಲೆ ನೀಡಿದಲ್ಲಿ ಕಠಿಣ ಪರಿಸ್ಥಿತಿಯೂ ಸುಲಭವಾಗಿ ಕರಗಿ ಹೋಗುತ್ತದೆ. ಕುಟುಂಬದಲ್ಲಿ ಸಂಬಂಧಗಳ ಮಧ್ಯೆ ಇರುವ ಒಡಕುಗಳು ಬಗೆಹರಿದಲ್ಲಿ ಮಾನಸಿಕ ನೆಮ್ಮದಿಯ ಬಾಗಿಲು ತೆರೆಯುತ್ತದೆ. ಹಣಕಾಸಿನಲ್ಲಿ ಹೊಸ ಆದಾಯದ ಸೂಚನೆ ಇದ್ದರೂ ಈಗಲೇ ದೊಡ್ಡ ತಾಳ್ಮೆ ಬೇಡುವ ಹೂಡಿಕೆ ಆರಂಭಿಸಬೇಡಿ. ನಿಮ್ಮ ಸಂಬಂಧಿಕರಿಂದ ವಿವಿಧ ವಿಷಯಗಳಲ್ಲಿ ಸಹಾಯ ಅಥವಾ ಸಲಹೆ ದೊರೆಯಬಹುದು.
ಓದುವ ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್ ಅಥವಾ ಪೆನ್ಸಿಲ್ ಇಂಥವುಗಳನ್ನು ಕೊಡಿಸಿ. ಇದರಿಂದ ನಿರ್ಧಾರದ ವಿಚಾರದಲ್ಲಿ ನಿಮ್ಮನ್ನು ಕಾಡುತ್ತಿರುವ ಗೊಂದಲಗಳು ದೂರವಾಗಲಿವೆ. ಇನ್ನು ಮನಸ್ತಾಪ ಆಗಿ ದೂರವಾಗಿರುವ ಸ್ನೇಹಿತರು ಮತ್ತೆ ಒಂದಾಗುವ ವೇದಿಕೆ ದೊರೆಯುತ್ತದೆ.
ಆರೋಗ್ಯ ವಿಚಾರದಲ್ಲಿ ನಿಮ್ಮ ನಂಬಿಕೆಗಳು ಬದಲಾಗುವಂಥ ದಿನ ಇದಾಗಿರುತ್ತದೆ. ವಿದ್ಯಾರ್ಥಿಗಳು ನಿಮ್ಮ ರಿವಿಷನ್ ಪೂರ್ಣಗೊಳಿಸುವುದಕ್ಕೆ ಆದ್ಯತೆಯನ್ನು ನೀಡಿದಲ್ಲಿ. ಇನ್ನು ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರ ಸಲಹೆ ನೀಡಲಿದ್ದಾರೆ, ಆದರೆ ತೀರ್ಮಾನ ನಿಮ್ಮದೇ ಇರಲಿ. ನಿಮ್ಮ ಚಾತುರ್ಯ ಮತ್ತು ಮಾತನಾಡುವ ಕಲೆ ಅನೇಕ ಅವಕಾಶಗಳನ್ನು ನಿಮಗೆ ತರಲಿದೆ. ಕೆಲಸದ ಸ್ಥಳದಲ್ಲಿ ನೀವು ನೀಡುವ ನಂಬಿಕೆ ಹಾಗೂ ತುಂಬುವ ವಿಶ್ವಾಸವು ಜೊತೆಯಲ್ಲಿ ಇರುವವರಿಗೆ ಸ್ಪಷ್ಟತೆ ನೀಡುತ್ತವೆ.
ನಿಮ್ಮ ಕೆಲಸದಲ್ಲಿ ಕೆಲವು ವಿಳಂಬಗಳು ಕಂಡರೂ ಅನುಸರಿಸುವಂಥ ಕಾರ್ಯಪದ್ಧತಿ- ವಿಧಾನದಲ್ಲಿ ನಂಬಿಕೆ ಇಟ್ಟು ಮುಂದುವರಿಯಿರಿ. ಒಂದು ವೇಳೆ ನೀವೇನಾದರೂ ಸಂಬಂಧಿಗಳು- ಸ್ನೇಹಿತರಿಂದ ಸಾಲ ಪಡೆದಿದ್ದಲ್ಲಿ ಆ ಬಾಕಿ ಪಾವತಿಯನ್ನು ಕೊಟ್ಟಿದ್ದ ಮಾತಿಗಿಂತ ಮೊದಲೇ ಮಾಡುವುದು ಉತ್ತಮ. ಕುಟುಂಬದವರ ಒತ್ತಡವು ಮನಸ್ಸಿಗೆ ತೊಂದರೆ ನೀಡಿದರೂ ಮಾತುಕತೆ ಮೂಲಕ ಎಲ್ಲವನ್ನು ಸರಿಪಡಿಸಬಹುದು. ಪ್ರೀತಿಯಲ್ಲಿ ಸಹನೆಯಿಂದ ನಡೆದುಕೊಂಡರೆ ಆತ್ಮೀಯತೆ ಹೆಚ್ಚಿಸುತ್ತದೆ.
ಪ್ರೀತಿಯಲ್ಲಿ ಇರುವವರು ಅಹಂಕಾರದಿಂದ ದೂರವಿರಿ, ಪರಸ್ಪರ ಗೌರವವೇ ಗಟ್ಟಿ ಸಂಬಂಧದ ಶಕ್ತಿ ಆಗಿರುತ್ತದೆ. ಪ್ರಾಣಾಯಾಮ- ವ್ಯಾಯಾಮ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ವಿಷಯವನ್ನು ಭಾಗವಾಗಿ ಮಾಡಿಕೊಂಡು ಕಲಿಯುವುದು ಉತ್ತಮ. ಸ್ನೇಹಿತರ ಮಾತುಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡಿ. ದೈವಸ್ಮರಣೆಗೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿಯಿದೆ. ಕೆಲವೊಮ್ಮೆ ನೀವು ಪಟ್ಟ ಪರಿಶ್ರಮಕ್ಕೆ ತಕ್ಷಣ ಫಲ ಸಿಗದಿದ್ದರೂ ಅದು ವ್ಯರ್ಥವಾಗುವುದಿಲ್ಲ.
ಹರಿಯುವ ನೀರಿನಲ್ಲಿ ಬಾದಾಮಿ, ಒಣಹಣ್ಣು ಹಾಗೂ ಆರು ನಾಣ್ಯಗಳನ್ನು ಬಿಡುವುದರಿಂದ ವಿಳಂಬವಾದ ಕಾರ್ಯಗಳಿಗೆ ವೇಗ ದೊರೆಯುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳು ಬಾಕಿ ಉಳಿದಿದ್ದಲ್ಲಿ ಅದು ಪೂರ್ಣವಾಗಲಿದೆ.
ಹಣಕಾಸಿನ ಹರಿವಿಗೆ ಯಾವುದೇ ಅಭಾವ ಇರುವುದಿಲ್ಲ. ಆದರೆ ಅದನ್ನು ಉಳಿಸಿಕೊಳ್ಳುವುದೇ ಮುಖ್ಯ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಲಹೆ ಕೇಳಬಹುದು— ತರ್ಕಬದ್ಧವಾಗಿ ಆಲೋಚಿಸಿದ ನಂತರ ಮಾತನಾಡಿರಿ. ಪ್ರೀತಿಯಲ್ಲಿ ಅನುಮಾನ ಅಥವಾ ಶಂಕೆ ಬೇಡ; ಸಂಬಂಧ ಗಟ್ಟಿಯಾಗಿ ಇರುವುದಕ್ಕೆ ನಂಬಿಕೆ ಬಹಳ ಮುಖ್ಯವಾಗುತ್ತದೆ. ಮನೆಯಲ್ಲಿನ ಕಿರಿಯರ ಆರೋಗ್ಯ ಸಮಸ್ಯೆ ಒತ್ತಡದಲ್ಲಿ ಸಿಲುಕಿಕೊಳ್ಳುವಂತೆ ಮಾಡಲಿದೆ. ಸ್ವತಃ ನಿಮಗೇ ಸ್ವಲ್ಪ ವಿಶ್ರಾಂತಿ ಅಗತ್ಯ ಇರುತ್ತದೆ. ವಿದ್ಯಾರ್ಥಿಗಳು ಗೊಂದಲ ತಪ್ಪಿಸಿ.
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರಶ್ನೆ ಮಾಡುವ ಅಭ್ಯಾಸವನ್ನು ಬಿಡಬೇಡಿ. ಇದರಿಂದ ನಿಮ್ಮ ಕಲಿಕೆ ವೇಗವಾಗಿ ಸಾಗುತ್ತದೆ. ಸ್ನೇಹಿತರೊಂದಿಗೆ ಚರ್ಚೆಯು ಹೊಸ ಜ್ಞಾನ- ಅವಕಾಶಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡುತ್ತದೆ. ಪರಿಣಾಮಕಾರಿ ಸಂವಹನ ಯಶಸ್ಸಿನ ಹಾದಿ ಆಗಲಿದೆ. ಇಂದು ನಿಮ್ಮ ಮನಸ್ಸಿನ ದೃಢತೆಗೆ ಪರೀಕ್ಷೆಯ ದಿನವಾಗಿ ಇರುತ್ತದೆ. ಕೆಲಸದಲ್ಲಿ ಒತ್ತಡ ಇದ್ದರೂ ನಿಮ್ಮ ಸಕಾರಾತ್ಮಕ ಚಿಂತನೆಯಿಂದಾಗಿ ಪರಿಹಾರಗಳನ್ನು ಹುಡುಕಿಕೊಳ್ಳುತ್ತೀರಿ.
ಹಣಕಾಸಿಗೆ ಸಂಬಂಧಿಸಿದಂತೆ ಹೊಸ ಒಪ್ಪಂದಗಳು ಆಗಬಹುದು ಅಥವಾ ಸಣ್ಣ ಲಾಭವೂ ಸಾಧ್ಯವಿದೆ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಹಾಯಕ್ಕಾಗಿ ಎದುರು ನೋಡಿ ಪ್ರಸ್ತಾವವನ್ನು ಮಾಡಲಿದ್ದಾರೆ— ನಿಮ್ಮಿಂದ ಸಾಧ್ಯವಿದ್ದಲ್ಲಿ ಖಂಡಿತಾ ಸಹಕಾರ ನೀಡಿರಿ. ಪ್ರೀತಿಯಲ್ಲಿ ನೇರವಂತಿಕೆಯು ಸಂಬಂಧವನ್ನು ಬಲಪಡಿಸುತ್ತದೆ. ಈ ದಿನ ಸಾಧ್ಯವಾದಷ್ಟೂ ಕಡಿಮೆ ಮಸಾಲೆ ಪದಾರ್ಥಗಳ ಸೇವನೆ ಮಾಡಿ ಮತ್ತು ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳಿ.
‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ತಾಯಿ ಹಾಸನದಲ್ಲಿ ಸೈಟ್ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲು ಏರಿದ್ದರು. ಅಲ್ಲಿ ಅವರ ಪರವಾಗಿ ಆದೇಶ ಬಂದಿದೆ. ಆ ಬಳಿಕ ಅವರು ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ‘ನ್ಯಾಯಾಲಯ ನಮ್ಮ ಪರವಾಗಿ ಆದೇಶ ನೀಡಿದೆ ಅಂತ ನಾನು ಸುಮ್ಮನೆ ಇರಲ್ಲ. ಇದನ್ನು ನಾನು ಇಲ್ಲಿಗೆ ಬಿಡಲ್ಲ. ನಾನು ಕಷ್ಟಪಟ್ಟು ಕಟ್ಟಿದ ಮನೆಯಲ್ಲಿ ಒಡೆದಿದ್ದಾರೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲೇ ಬೇಕು. ಇಂದಿನ ತನಕ ಜೆಸಿಬಿ ಸೀಜ್ ಆಗಿಲ್ಲ. ನನಗೆ ಅವಮಾನ ಆಗಿದೆ. ನಾನು ಇದನ್ನು ಒಂದು ಸವಾಲಾಗಿ ಸ್ವೀಕರಿಸುತ್ತೇನೆ. ಎಸ್ಪಿ ಆಫೀಸ್ಗೆ ಹೋಗಿ ನಾನು ದೂರು ನೀಡುತ್ತೇನೆ’ ಎಂದು ಪುಷ್ಪಾ ಅರುಣ್ ಕುಮಾರ್ (Pushpa) ಅವರು ಹೇಳಿದ್ದಾರೆ.