ರಣಜಿ ಟ್ರೋಫಿ ಸೆಮಿಫೈನಲ್​; ನಾಯಕನಾಗಿ 2ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ – Kannada News | Devdutt Padikkal’s 9th First Class Century and 3500 Runs Powers Karnataka in Ranji Trophy Semifinal

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ ದಿನದಂದು ಅಮೋಘ ಪ್ರದರ್ಶನ ನೀಡಿದೆ. ಅನುಭವಿ ಆರಂಭಿಕ ಕೆಎಲ್ ರಾಹುಲ್ 141 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ತಂಡದ ನಾಯಕ ದೇವದತ್ ಪಡಿಕ್ಕಲ್ ಅದ್ಭುತ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರು. ಇದು ಈ ಅವೃತ್ತಿಯ ರಣಜಿ ಟ್ರೋಫಿಯಲ್ಲಿ ಪಡಿಕ್ಕಲ್ ಅವರ ಎರಡನೇ ಶತಕವಾಗಿದ್ದು, ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅವರ ಒಂಬತ್ತನೇ ಶತಕವಾಗಿವಾಗಿದೆ. ಈ ಶತಕದಿಂದಾಗಿ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ಕೂಡ ದಾಟಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಮಯಾಂಕ್ ಅಗರ್ವಾಲ್ 5 ರನ್‌ಗಳಿಸಿ ಔಟಾದರು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ಶತಕ ವೀರ ಕೆಎಲ್ ರಾಹುಲ್ (141) ಅವರೊಂದಿಗೆ 278 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ರೂಪಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಮೊದಲ ದಿನದಾಟದ ಎರಡನೇ ಸೆಷನ್​ನಲ್ಲಿ ಈ ಇಬ್ಬರು ಆಟಗಾರರು ತಮ್ಮ ತಮ್ಮ ಶತಕ ಪೂರೈಸಿದರು.

ಈ ಪಂದ್ಯದಲ್ಲಿ 116 ನೇ ರನ್‌ ಕಲೆಹಾಕಿದ ಕೂಡಲೇ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ದಾಟಿದ್ದಾರೆ. 53 ಪಂದ್ಯಗಳಲ್ಲಿ 41 ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿರುವ ಪಡಿಕ್ಕಲ್, ಈ ಮಾದರಿಯಲ್ಲಿ 19 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪ್ರಸ್ತುತ ರಣಜಿ ಆವೃತ್ತಿಯಲ್ಲಿ ಪಡಿಕ್ಕಲ್, ತಮ್ಮ ಮೊದಲ ಶತಕವನ್ನು ಪಂಜಾಬ್ ವಿರುದ್ಧ ಬಾರಿಸಿದ್ದರು. ಈ ಪಂದ್ಯದಲ್ಲಿ ಪಡಿಕ್ಕಲ್ ಕೇವಲ 85 ಎಸೆತಗಳಲ್ಲಿ ಅಜೇಯ 120 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಆವೃತ್ತಿಯಲ್ಲಿ ಒಂಬತ್ತು ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್ 420 ಕ್ಕೂ ಹೆಚ್ಚು ರನ್‌ ಕೆಲಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕದ ಜೊತೆಗೆ ಎರಡು ಶತಕಗಳು ಸೇರಿವೆ.

Source link

ಬಿಗ್ ಶಾಕ್ ಕೊಟ್ಟ KSRTC: ನಾಳೆಯಿಂದಲೇ ನೂತನ ಪರಿಷ್ಕ್ರತ ದರ ಜಾರಿಗೆ – Kannada News | KSRTC Hikes Luggage Transport Price, effect From February 16th

ಬೆಂಗಳೂರು, (ಫೆಬ್ರವರಿ 15): ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರ ಏರಿಕೆ ಮಾಡಲಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾರಿಂದ ಮಾಹಿತಿ ನೀಡಿದ್ದು, ನಾಳೆಯಿಂದ (ಫೆಬ್ರವರಿ 16) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ಗೆ ನೂತನ ಪರಿಷ್ಕ್ರತ ದರ ಜಾರಿಗೆಯಾಗಲಿದೆ ಎಂದು ಆದೇಶ ಹೊರಡಿಸಿದ್ದಾರೆ.

ಡಿಸೇಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳ ಹಿನ್ನೆಲೆ ಲಗೇಜ್ ದರ ಏರಿಕೆ ಮಾಡಲಾಗಿದೆ. ಈ ಮೊದಲು 2021ರಲ್ಲಿ ಲಗೇಜ್ ದರ ಏರಿಕೆಯಾಗಿತ್ತು. ಅದಾದ ಬಳಿಕ ಟಿಕೆಟ್ ದರ ಪರಿಷ್ಕ್ರರಣೆ ಆದಾಗ ಲಗೇಜ್ ದರ ಏರಿಕೆಯಾಗಿರಲಿಲ್ಲ. ಹೀಗಾಗಿ ಲಗೇಜ್ ಸಾಗಿರುವ ದರ ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ

ಎಷ್ಟು ದರ ಏರಿಕೆ?

  • 1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ ( ಈ ಹಿಂದೆ 5 ರುಪಾಯಿ ದರವಿತ್ತು ).
  • 6 ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ ( ಈ ಹಿಂದೆ 10 ರುಪಾಯಿ ದರವಿತ್ತು ).
  • 156 ರಿಂದ 160 ಸ್ಟೇಜ್ ವರೆಗೆ 145 ರೂಪಾಯಿ ( ಈ ಹಿಂದೆ 123 ರುಪಾಯಿ ದರವಿತ್ತು )

ಇನ್ನು ಕೆಲ ದಿನಗಳ ಹಿಂದೆ ಕೆಎಸ್​​ಆರ್​​ಟಿಸಿ ಬಸ್ ಟಿಕೆಟ್ ದರ ಹೆಚ್ಚಳದ ಸುದ್ದಿ ಹಬ್ಬಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಎಚ್ಚೆತ್ತುಕೊಂಡ ಕೆಎಸ್​​ಆರ್​​ಟಿಸಿ, ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vastu Tips: ಈ ಚಿತ್ರ ನಿಮ್ಮ ಮನೆಯಲ್ಲಿದ್ದರೆ ಸಂಪತ್ತು ಮತ್ತು ಸಕಾರಾತ್ಮಕ ಶಕ್ತಿಗೆಂದೂ ಕೊರತೆಯಾಗದು! – Kannada News | Vastu paintings for home prosperity attract wealth and positivity

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದು ಶಕ್ತಿ ಇರುತ್ತದೆ ಎಂದು ನಂಬಲಾಗುತ್ತದೆ. ವಿಶೇಷವಾಗಿ ವರ್ಣಚಿತ್ರಗಳು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಸರಿಯಾದ ದಿಕ್ಕಿನಲ್ಲಿ ಶುಭ ಸಂಕೇತಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಇಟ್ಟರೆ ಲಕ್ಷ್ಮಿ ದೇವಿ ಅವರ ಆಶೀರ್ವಾದ ದೊರೆಯುತ್ತದೆ, ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಮನೆಗೆ ಸಮೃದ್ಧಿ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ.

ಓಡುತ್ತಿರುವ ಏಳು ಕುದುರೆಗಳ ಚಿತ್ರವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದು ಪ್ರಗತಿ ಮತ್ತು ಯಶಸ್ಸಿನ ಸಂಕೇತವಾಗಿದೆ. ಈ ಚಿತ್ರ ಜೀವನದಲ್ಲಿ ವೇಗ ಮತ್ತು ಉತ್ಸಾಹವನ್ನು ತರುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಚಿನ್ನದ ನಾಣ್ಯಗಳು ಅಥವಾ ಹಣದ ಮರದ ಚಿತ್ರವನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಧನಲಾಭ ಮತ್ತು ನಗದು ಹರಿವು ಹೆಚ್ಚುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಹರಿಯುವ ನೀರು ಅಥವಾ ಜಲಪಾತದ ಚಿತ್ರವು ಸಮೃದ್ಧಿ ಮತ್ತು ನಿರಂತರ ಹಣದ ಪ್ರವಾಹದ ಸಂಕೇತವಾಗಿದೆ. ಇದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ನವಿಲಿನ ಚಿತ್ರವು ಸೌಂದರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತದೆ; ಪೂರ್ವ-ಈಶಾನ್ಯ ಭಾಗದಲ್ಲಿ ಇದನ್ನು ಇಟ್ಟರೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಪೂರ್ವ ದಿಕ್ಕಿನಲ್ಲಿ ಇಡುವುದರಿಂದ ಹೊಸ ಅವಕಾಶಗಳು ಮತ್ತು ವೃತ್ತಿ ಬೆಳವಣಿಗೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಹೀಗಾಗಿ, ಮನೆಯಲ್ಲಿ ಇಡುವ ಪ್ರತಿಯೊಂದು ಚಿತ್ರವೂ ಕೇವಲ ಅಲಂಕಾರವಲ್ಲ; ಅದು ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಶಕ್ತಿಯ ಪ್ರತೀಕವಾಗಿದೆ ಎಂಬ ನಂಬಿಕೆ ಇದೆ. ಸರಿಯಾದ ಆಯ್ಕೆ ಮತ್ತು ಸರಿಯಾದ ದಿಕ್ಕು ಮನೆಯ ಸಮೃದ್ಧಿಗೆ ಮಾರ್ಗ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಈ ಟಿಪ್ಸ್‌ ಪಾಲಿಸಿ – Kannada News | Adding these items to mop water can easily remove stains from floors

ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಹೌದು ಅದರಲ್ಲೂ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿನಿತ್ಯ ನೆಲವನ್ನು (Floor Cleaning) ಗುಡಿಸಿ ಒರೆಸಲೇಬೇಕು. ಇಲ್ಲದಿದ್ದರೆ ಕೀಟಾಣು, ಸೂಕ್ಷ್ಮಜೀವಿಗಳು ನೆಲದಲ್ಲಿಯೇ ನೆಲೆಗೊಳ್ಳುವುದು ಮಾತ್ರವಲ್ಲದೆ, ಕಲೆ, ಕೊಳೆಗಳಿಂದಾಗಿ ಟೈಲ್ಸ್‌, ಗ್ರಾನೈಟ್‌ನ ಸೌಂದರ್ಯವೇ ಹಾಳಾಗಿ ಹೋಗುತ್ತದೆ. ಅದಕ್ಕಾಗಿ ಪ್ರನಿತ್ಯ ಎಲ್ಲರೂ ನೆಲ ಒರೆಸುತ್ತಾರೆ. ಆದ್ರೆ ನಿತ್ಯ ನೆಲ ಒರೆಸಿದರೂ ಟೈಲ್ಸ್‌ ಮೇಲೆ ಅಂಟಿರುವ ಕಲೆಗಳು ಹೋಗುತ್ತಿಲ್ಲ ಎಂದು ಹಲವರು ದೂರುತ್ತಿರುತ್ತಾರೆ. ಹೀಗಿರುವಾಗ ದುಬಾರಿ ಕ್ಲೀನರ್‌ಗಳನ್ನು ಬಲಸುವ ಬದಲು ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ನೆಲ ಕ್ಲೀನ್‌ ಮಾಡುವುದರಿಂದ ಹಠಮಾರಿ ಕಲೆಗಳನ್ನೂ ನಿಮಿಷದಲ್ಲಿ ಹೋಗಲಾಡಿಸಬಹುದು.  ಜೊತೆಗೆ ನೆಲ ಪಳಪಳನೆ ಹೊಳೆಯುತ್ತದೆ.

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸುವುದು ಹೇಗೆ?

ಉಪ್ಪು ಮತ್ತು ಶಾಂಪೂ: ನೆಲ ಒರೆಸುವ ನೀರಿಗೆ ಒಂದು ಟೀಚಮಚ ಕಲ್ಲು ಉಪ್ಪನ್ನು ಹಾಗೂ ಶಾಂಪೂ ಸೇರಿಸಿ ಶಾಂಪೂ ಬದಲಿಗೆ ಲಿಕ್ವಿಡ್ ಹ್ಯಾಂಡ್ ವಾಶ್ ಅನ್ನು ಸಹ ಬಳಸಬಹುದು. ಇವು ನೆಲದ ಮೇಲೆ ಅಂಟಿರುವ ಕಲೆಯನ್ನು ಹಾಗೂ ವಾಸನೆಯನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಮತ್ತು ನೆಲದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಟೈಲ್ಸ್‌ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು.

ಅಡಿಗೆ ಸೋಡಾ ಪೇಸ್ಟ್:  ನೆಲದ ಮೇಲೆ ಹಳೆಯ ಮೊಂಡುತನದ ಕಲೆಗಳಿದ್ದರೆ ಅವುಗಳನ್ನು ಹೋಗಲಾಡಿಸಲು, ಒಂದು ಕಪ್‌ನಲ್ಲಿ ಸ್ವಲ್ಪ ನೀರು ಮತ್ತು ಅಡಿಗೆ ಸೋಡಾವನ್ನು ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕಲೆ ಇರುವ ಪ್ರದೇಶಕ್ಕೆ ಹಚ್ಚಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಒದ್ದೆಯಾದ ಬಟ್ಟೆ ಸ್ಕ್ರಬ್ ಮಾಡಿ. ಇದು ಪರಿಣಾಮಕಾರಿಯಾಗಿ ಕಲೆಗಳನ್ನು ತೊಡೆದುಹಾಕುತ್ತದೆ.

ಉಗುರು ಬೆಚ್ಚಗಿನ ನೀರು:  ಉಗುರು ಬೆಚ್ಚಗಿನ ನೀರಿನಿಂದ ನೆಲ ಒರೆಸುವುದರಿಂದ  ನೆಲದ ಸಂಗ್ರಹವಾದ ಧೂಳು ಬೇಗನೆ ನಿವಾರಣೆಯಾಗುತ್ತದೆ ಮತ್ತು ನೆಲವು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ. ಈ ವಿಧಾನವು ದೈನಂದಿನ ಶುಚಿಗೊಳಿಸುವಿಕೆಗೆ ಒಳ್ಳೆಯದು. ಬಯಸಿದಲ್ಲಿ, ನೀವು ಈ ನೀರಿಗೆ  ಕೆಲವು ಹನಿ ನಿಂಬೆ ರಸವನ್ನು ಕೂಡ ಸೇರಿಸಬಹುದು, ಇದು ಸೌಮ್ಯವಾದ, ತಾಜಾ ಪರಿಮಳವನ್ನು ನೀಡುತ್ತದೆ.

ಇದನ್ನೂ ಓದಿ: ನೀರಿನ ಬಾಟಲಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸರಳ ಸಲಹೆ ಪಾಲಿಸಿ

ವಿನೆಗರ್: ವಿನೆಗರ್ ಒಂದು ನೈಸರ್ಗಿಕ ಕ್ಲೀನರ್ ಆಗಿದೆ. ಇದನ್ನು ನೆಲ ಒರೆಸುವ ನೀರಿಗೆ ಬೆರೆಸಿ ನೆಲ ಕ್ಲೀನ್‌ ಮಾಡುವುದರಿಂದ  ಕಲೆ, ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದು ಟೈಲ್ಸ್ ಮತ್ತು ಮಾರ್ಬಲ್‌ ಮೇಲೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಸಾರಭೂತ ತೈಲಗಳು: ನಿಮ್ಮ ಮನೆಯಲ್ಲಿ ನಿರಂತರ ಸುಗಂಧ ಬೇಕಾದರೆ, ಒರೆಸುವ ನೀರಿಗೆ ಕೆಲವು ಹನಿ ಲ್ಯಾವೆಂಡರ್ ಅಥವಾ ಇತರ ಸಾರಭೂತ ತೈಲಗಳನ್ನು ಸೇರಿಸಿ. ಇದು  ಮನೆಗೆ ಸುಗಂಧ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಪಿ, ಹೃದ್ರೋಗ ಇರುವವರು ಹವಾಮಾನ ಬದಲಾಗುತ್ತಿರುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂಬುದಕ್ಕೆ ಕಾರಣವೇನು? – Kannada News | How Weather Affects BP and Heart Health

ಇತ್ತೀಚಿನ ದಿನಗಳಲ್ಲಿ, ಹವಾಮಾನ ಪದೇ ಪದೇ ಬದಲಾಗುತ್ತಿದೆ. ಕೆಲವೊಮ್ಮೆ ಶೀತ, ಆರ್ದ್ರತೆ ಮತ್ತೆ ಕೆಲವೊಮ್ಮೆ ಬೆಚ್ಚಗಿನ ವಾತಾವರಣ. ಈ ರೀತಿಯ ಏರಿಳಿತಗಳು ದೇಹದ ಸಾಮಾನ್ಯ ಸಮತೋಲನವನ್ನು ಅಡ್ಡಿಪಡಿಸಬಹುದು, ಅಷ್ಟು ಮಾತ್ರವಲ್ಲ ರಕ್ತದೊತ್ತಡ (BP) ಮತ್ತು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರಿಗೆ ಇದರಿಂದ ಆಗುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ, ರೋಗಿಗಳಿಗೆ ತಲೆನೋವು, ತಲೆತಿರುಗುವಿಕೆ, ಹಠಾತ್ ಆಯಾಸ, ಆತಂಕ, ಎದೆಯಲ್ಲಿ ಭಾರ, ಉಸಿರಾಟದ ತೊಂದರೆ, ಅತಿಯಾದ ಬೆವರುವುದು ಅಥವಾ ಅನಿಯಮಿತ ಹೃದಯ ಬಡಿತ ಕಂಡುಬರುವುದು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಅನುಭವಕ್ಕೆ ಬರಬಹುದು. ಕೆಲವರಲ್ಲಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಂಡುಬರುತ್ತದೆ. ಹಾಗಾಗಿ ಲಕ್ಷಣಗಳನ್ನು ಸರಿಯಾಗಿ ಗುರುತಿಸಿ ಅವುಗಳನ್ನು ತಡೆಗಟ್ಟಬೇಕು.

ಲಕ್ಷಣಗಳು ಹೇಗಿರುತ್ತವೆ?

ಸಾಮಾನ್ಯವಾಗಿ ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು. ಕೆಲವರಲ್ಲಿ ಹಸಿವು ಕಡಿಮೆಯಾಗುವುದು, ದೇಹ ದೌರ್ಬಲ್ಯ ಮತ್ತು ಕೆಲಸದಲ್ಲಿ ಆಸಕ್ತಿಯ ಕೊರತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ, ಎದ್ದ ತಕ್ಷಣ ಭಾರವಾದ ಭಾವನೆ ಅಥವಾ ದಿನವಿಡೀ ಆಲಸ್ಯ ಅನುಭವಕ್ಕೆ ಬರಬಹುದು. ಈ ಲಕ್ಷಣಗಳು ದೇಹ ಬದಲಾಗುತ್ತಿರುವ ಪರಿಸರ ಅಥವಾ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತವೆ. ಅಂತಹ ಸಂದರ್ಭಗಳಲ್ಲಿ, ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಹಾನಿಕಾರಕವಾಗಬಹುದು. ಹಾಗಾಗಿ ಸಮಯಕ್ಕೆ ಸರಿಯಾಗಿ ಜಾಗೃತೆ ವಹಿಸುವುದು ಬಹಳ ಮುಖ್ಯವಾಗುತ್ತದೆ.

ಹವಾಮಾನ ಬದಲಾವಣೆ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿರುವವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ್, ಹವಾಮಾನದಲ್ಲಿನ ಬದಲಾವಣೆಯಾದಾಗ, ದೇಹವು ತನ್ನನ್ನು ತಾನು ಹೊಂದಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಶೀತ, ಶಾಖ ಮತ್ತು ತೇವಾಂಶದಲ್ಲಿನ ಹಠಾತ್ ಬದಲಾವಣೆಗಳು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ತಾಪಮಾನದಲ್ಲಿನ ವ್ಯತ್ಯಾಸಗಳು ರಕ್ತದೊತ್ತಡ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಅಧಿಕ ಅಥವಾ ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇನ್ನು, ಆರ್ದ್ರತೆಯಲ್ಲಿ, ದೇಹದಾದ್ಯಂತ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದು ಆಯಾಸ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅದೇ ರೀತಿ, ಅತಿಯಾದ ಬೆವರುವಿಕೆಯು ದೇಹದಲ್ಲಿ ನೀರು ಮತ್ತು ಅಗತ್ಯ ಖನಿಜಗಳ ಕೊರತೆಯನ್ನು ಉಂಟುಮಾಡಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ಹವಾಮಾನದಲ್ಲಿನ ಬದಲಾವಣೆಗಳು ದೈನಂದಿನ ದಿನಚರಿ, ಆಹಾರ ಮತ್ತು ನಿದ್ರೆಯ ಮೇಲೂ ಪರಿಣಾಮ ಬೀರುತ್ತವೆ ಮತ್ತು ಕಾಲಾನಂತರದಲ್ಲಿ ಈ ಅಭ್ಯಾಸಗಳು ಹೃದಯ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ಹೇಗೆ ರಕ್ಷಿಸಿಕೊಳ್ಳಬಹುದು?

ಬದಲಾಗುತ್ತಿರುವ ಹವಾಮಾನದಲ್ಲಿ, ಜನರು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ನಿರ್ಜಲೀಕರಣವನ್ನು ತಪ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಊಟವನ್ನು ಸೇವನೆ ಮಾಡಿ. ಹವಾಮಾನಕ್ಕೆ ಅನುಗುಣವಾಗಿ ಉಡುಗೆ ತೊಡಿ. ಇದರಿಂದ ಶೀತ ಅಥವಾ ಶಾಖವನ್ನು ತಪ್ಪಿಸಬಹುದು. ಪ್ರತಿದಿನ ಲಘು ವ್ಯಾಯಾಮ ಮಾಡಿ, ಆದರೆ ದಣಿವು ಹೆಚ್ಚಿದ್ದಾಗ ವಿಶ್ರಾಂತಿ ಪಡೆಯಿರಿ. ಒತ್ತಡದಿಂದ ದೂರವಿರಲು ಮತ್ತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಸಿನಿಮಾ ಆಫರ್ ತಿರಸ್ಕರಿಸಿದರಾ ನಾಗಾರ್ಜುನ? – Kannada News | Did Dhurandhar’s Rehman Dakait character offered to Akkineni Nagarjuna first

ಬಾಲಿವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ (Dhurandhar) ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನೇ ಬರೆದಿದೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ಅವರಷ್ಟೆ ಪ್ರಾಮುಖ್ಯತೆಯನ್ನು ಇತರೆ ಪಾತ್ರಗಳು ಸಹ ಪಡೆದುಕೊಂಡಿವೆ. ಅದರಲ್ಲೂ ರಹಮಾನ್ ಡಕೈತ್ ಪಾತ್ರವಂತೂ ಸೂಪರ್ ಹಿಟ್ ಆಗಿದೆ. ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ತಾವೇಕೆ ಬಾಲಿವುಡ್​ನ ಪ್ರತಿಭಾವಂತ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಈ ಪಾತ್ರ ಮೊದಲಿಗೆ ದಕ್ಷಿಣದ ಸ್ಟಾರ್ ನಟನಿಗೆ ಆಫರ್ ಮಾಡಲಾಗಿತ್ತು ಎನ್ನಲಾಗುತ್ತಿದೆ. ತೆಲುಗಿನ ಸ್ಟಾರ್ ಹೀರೋ ಆಗಿರುವ ಅಕ್ಕಿನೇನಿ ನಾಗಾರ್ಜುನ ಅವರಿಗೆ ರಹಮಾನ್ ಡಕೈತ್ ಪಾತ್ರ ಆಫರ್ ಆಗಿತ್ತು, ಆದರೆ ಅವರು ಪಾತ್ರವನ್ನು ತಿರಸ್ಕರಿಸಿದರು ಎನ್ನಲಾಗುತ್ತಿದೆ. ಈಗ ಸ್ವತಃ ನಾಗಾರ್ಜುನ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಾಗಾರ್ಜುನ, ‘ಖಂಡಿತವಾಗಿಯೂ ಇಲ್ಲ, ನನಗೆ ಈ ಪಾತ್ರದ ಆಫರ್ ಬಂದಿರಲಿಲ್ಲ. ಆದರೆ ಅಂತಹ ಅದ್ಭುತ ಪಾತ್ರ ನನಗೆ ಸಿಗಬೇಕಿತ್ತು ಎಂದು ಈಗ ಅನಿಸುತ್ತಿದೆ. ‘ಧುರಂಧರ್’ ಒಂದು ಅದ್ಭುತ ಸಿನಿಮಾ. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಶೈಲಿ ನನಗೆ ತುಂಬಾ ಇಷ್ಟವಾಯಿತು. ಚಿತ್ರದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ, ವಿಶೇಷವಾಗಿ ಅಕ್ಷಯ್ ಖನ್ನಾ ಅವರ ಅಭಿನಯ ಅದ್ಭುತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮಗೆ ಆಫರ್ ಬಂದಿಲ್ಲ ಎಂಬ ವಿಷಯವನ್ನು ಸ್ಪಷ್ಟಪಡಿಸಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನಾಗಾರ್ಜುನ ಅವರು ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಕೂಲಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ದೊಡ್ಡ ಹಿಟ್ ಆಗದೇ ಇದ್ದರೂ ಸಹ ನಾಗಾರ್ಜುನ ಅವರು ಹೊಸ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದು ಪ್ರಶಂಸೆಗೆ ಕಾರಣವಾಯ್ತು. ಇದೇ ಕಾರಣಕ್ಕೆ ಈಗ ‘ಧುರಂಧರ್’ ಸಿನಿಮಾದ ನೆಗೆಟಿವ್ ರೋಲ್ ಆಫರ್ ಸಹ ಬಂದಿರಬಹುದು ಎಂದು ನೆಟ್ಟಿಗರು ಊಹೆ ಮಾಡಿ ಸುದ್ದಿ ಹಬ್ಬಿಸಿದ್ದರು. ಆದರೆ ಅದನ್ನು ನಾಗಾರ್ಜುನ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ತಾವು ಅಂಥಹಾ ಪಾತ್ರದಲ್ಲಿ ನಟಿಸಲು ಸಿದ್ದ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಾಗಾರ್ಜುನ ಅವರು ಇತ್ತೀಚೆಗೆ ವಿಲನ್ ಪಾತ್ರ, ಪ್ರಮುಖ ಪೋಷಕ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ ಧನುಶ್ ನಾಯಕನಾಗಿ ನಟಿಸಿದ್ದ ‘ಕುಬೇರ’ ಸಿನಿಮಾನಲ್ಲಿಯೂ ನಾಗಾರ್ಜುನ ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ:‘ಧುರಂಧರ್ 2’ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ‘ಟಾಕ್ಸಿಕ್’

ಇದೀಗ ನಾಗಾರ್ಜುನ ಅವರು ವೃತ್ತಿಜೀವನದ 100ನೇ ಸಿನಿಮಾನಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಇದನ್ನು ಆರ್‌ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ನಟಿ ಟಬು ಕೂಡ ನಟಿಸುವ ಸಾಧ್ಯತೆ ಇದೆ. ಸಿನಿಮಾಕ್ಕೆ ‘ಲಾಟರಿ ಕಿಂಗ್’ ಎಂದು ಹೆಸರಿಡಲಾಗಿದೆ. ಸಿನಿಮಾವನ್ನು ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋಸ್​​ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಮುಂದಿನ ವರ್ಷದ ಸಂಕ್ರಾಂತಿಗೆ ತಮ್ಮ ನಟನೆಯ ಸಿನಿಮಾ ಬಿಡುಗಡೆ ಮಾಡುವುದಾಗಿ ಈಗಾಗಲೇ ನಾಗಾರ್ಜುನ ಘೋಷಣೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ 141 ರನ್ ಚಚ್ಚಿದ ರಾಹುಲ್ – Kannada News | KL Rahul’s Century Powers Karnataka in Ranji Semifinal vs Uttarakhand

ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ 2025-26 ರ ಆವೃತ್ತಿಯ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಇಂದಿನಿಂದ ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ, ಕರ್ನಾಟಕವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡವು ಕಳಪೆ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 5 ರನ್‌ಗಳಿಸಿ ಔಟಾದರು. ಆದಾಗ್ಯೂ, ಆ ಬಳಿಕ ಜೊತೆಯಾದ ನಾಯಕ ದೇವದತ್ ಪಡಿಕ್ಕಲ್ ಹಾಗೂ ರಾಹುಲ್ 200 ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ರಾಹುಲ್ ತಮ್ಮ 25 ನೇ ಪ್ರಥಮ ದರ್ಜೆ ಶತಕವನ್ನು ಪೂರೈಸಿದರು.

ರಾಹುಲ್ 153 ಎಸೆತಗಳಲ್ಲಿ ರಣಜಿಯಲ್ಲಿ ಸತತ ಎರಡನೇ ಶತಕ ಬಾರಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಗೆಲುವಿನ ಶತಕ ಬಾರಿಸಿದ್ದ ರಾಹುಲ್ ಸೆಮಿಫೈನಲ್​ನಲ್ಲಿ ಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಹೊರತಂದರು. ಅಂತಿಮವಾಗಿ ತಮ್ಮ ಇನ್ನಿಂಗ್ಸ್​ನಲ್ಲಿ 211 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 141 ರನ್ ಬಾರಿಸಿದರು.

ರಣಜಿ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅವರ ಪ್ರದರ್ಶನ ಅದ್ಭುತವಾಗಿದೆ. ಮೇಲೆ ಹೇಳಿದಂತೆ ಕ್ವಾರ್ಟರ್ ಫೈನಲ್‌ನಲ್ಲಿ, ಮುಂಬೈ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅದ್ಭುತ ಶತಕದೊಂದಿಗೆ ಕರ್ನಾಟಕವನ್ನು ಗೆಲುವಿನತ್ತ ಕೊಂಡೊಯ್ದರು. ಮುಂಬೈ ನೀಡಿದ 325 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ಪರ ಕೆಎಲ್ ರಾಹುಲ್ 182 ಎಸೆತಗಳಲ್ಲಿ 130 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅದಕ್ಕೂ ಮೊದಲು ಕೆಎಲ್ ರಾಹುಲ್ ಪಂಜಾಬ್ ವಿರುದ್ಧವೂ ಅರ್ಧಶತಕ ಸಿಡಿಸಿದ್ದರು. ಇದರರ್ಥ ರಾಹುಲ್ ಆಡಿರುವ ಮೂರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಉಚಿತವಾಗಿ ಪಡೆಯುವ ವಸ್ತುಗಳು ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತೆ ಗೊತ್ತಾ? – Kannada News | Chanakya Niti: Do you know how free things weaken a person?

ಪುಕ್ಕಟ್ಟೆ ಏನಾದ್ರೂ ಸಿಗುತ್ತೆ ಅಂದ್ರೆ ಅದನ್ನು ಪಡೆಯಲು ಜನ ನಾಮುಂದು ತಾ ಮುಂದು ಅಂತ ಧಾವಿಸ್ತಾರೆ. ಈ ರೀತಿ ಉಚಿತವಾಗಿ ಪಡೆಯುವುದು ಮನಸ್ಸಿಗೆ ಖುಷಿಯನ್ನು ನೀಡಬಹುದು, ಆದ್ರೆ ಇದು ವ್ಯಕ್ತಿಯನ್ನು ಕ್ರಮೇಣ ದುರ್ಬಲಗೊಳಿಸುತ್ತದೆ ಎಂದು ಆಚಾರ್ಯ ಚಾಣಕ್ಯರು (Acharya Chanakya) ಎಚ್ಚರಿಕೆ ನೀಡಿದ್ದಾರೆ. ಉಚಿತವಾಗಿ ಏನಾದ್ರೂ ಸಿಗುತ್ತಿದೆ ಅಂದ್ರೆ ಅದನ್ನು ಪಡೆಯುವುದರಲ್ಲಿ ತಪ್ಪೇನಿದೆ ಎಂದು ಹಲವರು ಭಾವಿಸಬಹುದು ಆದ್ರೆ ಉಚಿತವಾಗಿ ಪಡೆಯುವ ಏನಾದರೂ ಸರಿ ಅದು ಮನುಷ್ಯನ ಸ್ವಾಭಿಮಾನಕ್ಕೆ ಹಾನಿಯುಂಟು ಮಾಡುತ್ತದೆ ಎಂದಿದ್ದಾರೆ. ಹಾಗಿದ್ರೆ ಉಚಿತವಾಗಿ ಲಭಿಸುವ ಸಂಗತಿಗಳು ಮನಷ್ಯನಿಗೆ ಯಾವೆಲ್ಲಾ ರೀತಿಯಲ್ಲಿ ಹಾನಿ ಮಾಡುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಪ್ರತಿಯೊಂದು ಉಚಿತವಾಗಿ ಲಭಿಸಿದರೆ ಏನಾಗುತ್ತೆ ಗೊತ್ತಾ?

ಕಠಿಣ ಪರಿಶ್ರಮದ ಅಭ್ಯಾಸ ಕೊನೆಗೊಳ್ಳುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಶ್ರಮವಿಲ್ಲದೆ ಏನನ್ನಾದರೂ ಪಡೆದಾಗ, ಅವನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮರೆತುಬಿಡುತ್ತಾನೆ, ಪ್ರತಿಯೊಂದು ಸುಲಭವಾಗಿ ಖರ್ಚಿಲ್ಲದೆ ದಕ್ಕಬೇಕು ಎಂದು ಬಯಸುತ್ತಾನೆ.  ಕಠಿಣ ಪರಿಶ್ರಮದ ಮೂಲಕ ಏನನ್ನಾದರೂ ಗಳಿಸಿದಾಗ ಮಾತ್ರ ಮನುಷ್ಯ ಬಲಶಾಲಿಯಾಗಲು ಸಾಧ್ಯ, ಅದೇ ಉಚಿತವಾಗಿ ಸಿಗುವ ಭಾಗ್ಯಗಳು ಆತನನ್ನು ಸೋಮಾರಿ ಮತ್ತು ದುರ್ಬಲನನ್ನಾಗಿ ಮಾಡುತ್ತವೆ.

ಸ್ವಾಭಿಮಾನಕ್ಕೆ ಹಾನಿ: ಚಾಣಕ್ಯ ನೀತಿಯ ಪ್ರಕಾರ, ನೀವು ಪದೇ ಪದೇ ಯಾವುದೇ ವಸ್ತು, ಸಂಗತಿಯನ್ನಾದರೂ ಉಚಿತವಾಗಿ ಸ್ವೀಕರಿಸಿದರೆ, ನಿಮ್ಮ ಸ್ವಾಭಿಮಾನ ಕ್ರಮೇಣ ಕುಸಿಯುತ್ತದೆ. ಪ್ರತಿಯೊಂದನ್ನೂ ಉಚಿತವಾಗಿ ಸಿಗಬೇಕೆಂದು ಬಯಸುವ ಜನರು ಇತರರನ್ನು ಅವಲಂಬಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳು ಜೀವನದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ನಿರಂತರವಾಗಿ ಇತರರಿಂದ ಬೆಂಬಲವನ್ನು ಬಯಸುತ್ತಾರೆ. ಕೊನೆಗೆ ಇದು ಅವರ  ವ್ಯಕ್ತಿತ್ವವನ್ನೇ ದುರ್ಬಲಗೊಳಿಸುತ್ತದೆ, ಸ್ವಾಭಿಮಾನವನ್ನೇ ಕಸಿದುಕೊಳ್ಳುತ್ತದೆ.

ದುರಾಸೆಗೆ ಕಾರಣವಾಗುತ್ತದೆ: ಚಾಣಕ್ಯ ನೀತಿಯ ಪ್ರಕಾರ, ನೀವು ಪ್ರತಿಯೊಂದನ್ನೂ ಉಚಿತವಾಗಿ ಪಡೆಯಲು ಪ್ರಾರಂಭಿಸಿದಾಗ, ದುರಾಸೆ ನಿಮ್ಮೊಳಗೆ ಹುಟ್ಟುತ್ತದೆ. ನೀವು ಎಲ್ಲವನ್ನೂ ಉಚಿತವಾಗಿಯೇ ಸಿಗಬೇಕೆಂದು ಬಯಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೀರಿ. ಯಾವುದೇ ಪ್ರಯತ್ನ, ಪರಿಶ್ರಮವಿಲ್ಲದೆ ಎಲ್ಲವೂ ಸಲುಭವಾಗಿ ದಕ್ಕಬೇಕು ಎಂದು ಬಯಸುತ್ತೀರಿ. ಚಾಣಕ್ಯರ ಪ್ರಕಾರ, ದುರಾಸೆಯು ವ್ಯಕ್ತಿಯ ದೊಡ್ಡ ಶತ್ರು. ದುರಾಸೆಯು ನಿಮ್ಮೊಳಗೆ ಬೆಳೆದಾಗ, ಅದು ವಂಚನೆ ಮತ್ತು ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮನುಷ್ಯನ ನೆಮ್ಮದಿ ಹಾಳಾಗಲು ಕಾರಣವೇ ಸಂಗತಿಗಳು

ಮೌಲ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ: ನೀವು ಎಲ್ಲವನ್ನೂ ಉಚಿತವಾಗಿ ಪಡೆಯಲು ಪ್ರಾರಂಭಿಸಿದಾಗ, ನೀವು ಮೌಲ್ಯವನ್ನು ಕಳೆದುಕೊಳ್ಳುತ್ತೀರಿ. ಕಷ್ಟಪಟ್ಟು ಸಂಪಾದಿಸಿದ ವಸ್ತುಗಳು ಮೌಲ್ಯಯುತವಾಗುತ್ತವೆ, ಅದೇ  ಏನನ್ನಾದರೂ ಉಚಿತವಾಗಿ ಪಡೆದಾಗ ನೀವು ಅವುಗಳನ್ನು ಬೇಗನೆ ವ್ಯರ್ಥ ಮಾಡುತ್ತೀರಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅಲ್ಲದೆ ಇದರಿಂದ ನಿಮ್ಮ ಮೌಲ್ಯವೂ ಕುಂಠಿತಗೊಳ್ಳುತ್ತದೆ.

ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಎದುರಾಗಬಹುದು:  ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಂದು ಉಚಿತವಾಗಿ ಸಿಗಬೇಕೆಂದು ಬಯಸುವವರು ಜೀವನದಲ್ಲಿ ಎಂದಿಗೂ ಪ್ರಗತಿ ಹೊಂದುವುದಿಲ್ಲ. ಅಂತಹ ಜನರಿಗೆ ಹೋರಾಟ ಮತ್ತು ಕಠಿಣ ಪರಿಶ್ರಮದ ಒಂದು ಚೂರು ಕಲ್ಪನೆಯೇ ಇರುವುದಿಲ್ಲ, ಹೋರಾಟದ ಸಂದರ್ಭ ಬಂದಾಗ ಅವರು ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಹ ಸಾಧ್ಯವಾಗುವುದಿಲ್ಲ, ಕೊನೆಗೆ ಅವರು ಜೀವನದಲ್ಲಿ ಸೋತು ಬಿಡುತ್ತಾರೆ. ಅದೇ ಕಷ್ಟಪಟ್ಟು ದುಡಿಯುವ ವ್ಯಕ್ತಿಯು ಪ್ರತಿಯೊಂದು ಪರಿಸ್ಥಿತಿಯಲ್ಲೂ ತನ್ನನ್ನು ತಾನು ನಿಭಾಯಿಸಿಕೊಂಡು, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯಲ್ಲಿ 400 ಕೋಟಿ ರೂ ದರೋಡೆ ಕೇಸ್​​ಗೆ ಟ್ವಿಸ್ಟ್​​​​​: SIT ವಿರುದ್ಧವೇ ಸ್ಫೋಟಕ ಆರೋಪ – Kannada News | 400 Cr Karnataka Goa Border Robbery: Sandeep Patil Demands Belagavi FIR, Doubts SIT Probe

400 ಕೋಟಿ ದರೋಡೆ ಪ್ರಕರಣImage Credit source: tv9 kannada

ಬೆಳಗಾವಿ, ಫೆಬ್ರವರಿ 15: ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ನಡೆದಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣ (400 crore robbery case) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೇಶವನ್ನೇ ದಂಗಾಗಿಸಿದ ಈ ದರೋಡೆ ನಡೆದು ದಿನಗಳು ಉರುಳಿದರು ಈವರೆಗೆ ಕಂಟೇನರ್​ಗಳು ಹೋಗಿದ್ದೆಲ್ಲಿಗೆ? ಕಂಟೇನರ್​ನಲ್ಲಿದ್ದ ಹಣ ಎಲ್ಲಿದೆ ಅನ್ನೋದು ರಿವೀಲ್ ಆಗಿಲ್ಲ. ಹೀಗಿರುವಾಗ ದೂರುದಾರ ಸಂದೀಪ್ ಪಾಟೀಲ್​​ ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆಯುವ ಮೂಲಕ ಎಫ್ಐಆರ್ (FIR) ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆದಿರುವ 400 ಕೋಟಿ ದರೋಡೆ ಪ್ರಕರಣದ ದೂರುದಾರ ಸಂದೀಪ್ ಪಾಟೀಲ್​​, ಮಹಾರಾಷ್ಟ್ರ ಎಸ್ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ. ಘಟನೆ ಸಂಬಂಧ ಆಡಿಯೋ ದಾಖಲೆಗಳು ನನ್ನ ಬಳಿ ಇವೆ. ಅವುಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಎಸ್ಐಟಿ ತಂಡದ ವಿರುದ್ಧವೇ ದೂರು ನೀಡಿರುವ ಸಂದೀಪ್ ಪಾಟೀಲ್

ಇನ್ನು ಪ್ರಕರಣ ಸಂಬಂಧ 8 ಆರೋಪಿಗಳನ್ನು ಮಹಾರಾಷ್ಟ್ರ ಎಸ್​​ಐಟಿ ಬಂಧಿಸಿದೆ. ಆದರೆ ಮಹಾರಾಷ್ಟ್ರ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂದೀಪ್, ಈಗಾಗಲೇ ಎಸ್ಐಟಿ ಮತ್ತು ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಮಹಾರಾಷ್ಟ್ರ ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಹೈಕೋರ್ಟ್​​ಗೆ ದೂರು ನೀಡಿದ್ದಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಸಂದೀಪ್ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಮೂರು ರಾಜ್ಯಗಳ ಗಡಿಯಿರುವ ಚೋರ್ಲಾ ಘಾಟ್​ನಲ್ಲಿ 400 ಕೋಟಿ ರೂ ದರೋಡೆ ಇತ್ತೀಚೆಗೆ ನಡೆದಿತ್ತು. 2 ಸಾವಿರ ಮುಖಬೆಲೆಯ ನೋಟುಗಳು ರದ್ದಾದ ಹಿನ್ನೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎನ್ನಲಾಗಿತ್ತು. ದೂರುದಾರ ಸಂದೀಪ್ ಪಾಟೀಲ್​ನಿಂದ ಈ ರಾಬರಿ ಕೇಸ್​ನ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಅನ್ನೋದು ಗೊತ್ತಾಗಿತ್ತು.

ಇದನ್ನೂ ಓದಿ: 400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್? ಕರ್ನಾಟಕದಲ್ಲಿ ದೂರು ದಾಖಲಿಸಲು ಮುಂದಾದ ಸಂದೀಪ್ ಪಾಟೀಲ್

ಈ ಸಂದೀಪ್ ಪಾಟೀಲ್, ಇದೇ ಕಿಶೋರ್​ನ ಆಪ್ತ. 400 ಕೋಟಿ ರೂ ದರೋಡೆಯಾಗಿದ್ದು ತಿಳೀತಿದ್ದಂತೆಯೇ ಸಂದೀಪ್​ನನ್ನು ಅಪಹರಿಸಿ, 400 ಕೋಟಿ ರೂ ಹಣ ಎಲ್ಲಿಟ್ಟಿದ್ದೀಯಾ? ಕಂಟೇನರ್​ಗಳು ಎಲ್ಲಿವೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಸಂದೀಪ್​ಗೆ ಕಿಶೋರ್ ಗ್ಯಾಂಗ್ ಚಿತ್ರಹಿಂಸೆ ನೀಡಿತ್ತು. ಹೀಗೆ ಹಿಂಸೆಗೊಳಗಾಗಿದ್ದ ಸಂದೀಪ್, ಕಿಡ್ನ್ಯಾಪರ್ಸ್​ನಿಂದ ತಪ್ಪಿಸಿಕೊಂಡು ಬಂದು ನಾಸೀಕ್ ಠಾಣೆಗೆ ದೂರು ನೀಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಇತ್ತ ಪೊಲೀಸರ ಪರದಾಟ, ಅತ್ತ ಪರಪುರುಷನ ಜೊತೆ ಆಟ: ಆಂಟಿಯ ಮತ್ತಷ್ಟು ನೌಟಂಕಿ ಆಟ ಬಯಲು – Kannada News | Tumakuru lady Missing Lady Found With Boy friend: here Is Kunigal Priyanka case Timeline

ಹಾಸನ/ತುಮಕೂರು, (ಫೆಬ್ರವರಿ 15): ಕುಣಿಗಲ್​​ ಮೂಲದ ಪ್ರಿಯಾಂಕಾ ಮಿಸ್ಸಿಂಗ್ (Priyanka Missing Case) ಕಹಾನಿ ರೋಚಕ ತಿರುವು ಪಡೆದುಕೊಂಡಿದೆ. ಮದ್ವೆಗೆಂದು ಹಾಸನದ ಬೇಲೂರಿಗೆ ಬಂದಿದ್ದ ಪ್ರಿಯಾಂಕಾ, ಆತ್ಮಹತ್ಯೆ ಎಂದು ಬಿಂಬಿಸಿ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದಾಳೆ. ಕೆರೆ ಬಳಿ ಬಟ್ಟೆ, ಬ್ಯಾಗ್, ಚಪ್ಪಲಿ ಪತ್ತೆಯಾಗಿತ್ತು. ಇದರಿಂದ ಮುಳುಗುತಜ್ಞರನ್ನು ಕರೆಸಿ ಕೆರೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಕೆರೆಯ ಪರಶೀಲನೆ ನಡೆಸಿದ್ದರು. ಆದ್ರೆ, ಅತ್ಯಾಚಾರವೂ ಇಲ್ಲ, ಕೊಲೆಯೂ ಅಲ್ಲ, ಮಳ್ಳಿಯ ಬೃಹನ್ನಾಟಕ ಬಯಲಾಗಿದೆ. ಪೊಲೀಸರು ಪ್ರಿಯಾಂಕಾಳ ಪತ್ತೆಗೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಪ್ರಿಯಾಂಕಾ ಪರಪುರುಷನ ಜೊತೆ ಆಯಾಗಿದ್ದಳು. ಅಸಲಿಗೆ ಗಂಡನನ್ನು ಬಿಟ್ಟು ಪ್ರಿಯಕರ ಡೇವಿಡ್ ಜತೆ ಸಂಸಾರ ಮಾಡಲು ನಿರ್ಧರಿಸಿದ್ದಳು. ಹೀಗಾಗಿ ಈ ಎಲ್ಲಾ ಹೈಡ್ರಾಮಾ ಮಾಡಿದ್ದಾಳೆ ಎನ್ನುವ ಸ್ಫೋಟಕ ಅಂಶ ಬಯಲಿಗೆ ಬಂದಿದೆ.

ನಾಪತ್ತೆ ಸೀನ್‌ ಕ್ರಿಯೇಟ್ ಮಾಡಿದ್ದ ಪ್ರಿಯಾಂಕಾ

ಪ್ರಿಯಾಂಕಾ ಅನ್ನೋ ಈ ಮಹಿಳೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಯಲಿಯೂರು ಗ್ರಾಮದಿಂದ ಚಿಕ್ಕಮಗಳೂರಿಗೆ ಚಿಕ್ಕಮ್ಮನ ಮಗಳ ಮದುವೆಗೆಂದು ಬಂದಿದ್ದಳು. ಮೈಮೇಲೆ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿತ್ತು. ಮದ್ವೆ ಮುಗಿಸಿಕೊಂಡು ತವರು ಮನೆಯಿದ್ದ ಹಾಸನದ ಬೇಲೂರಿಗೆ ಹೋಗಿದ್ದಳು. ಅಲ್ಲಿ ತಾಯಿ ಜೊತೆ ಮಾತಾಡಿಕೊಂಡು ಸೀರೆ ಬದಲಿಸಿ ಟಾಪ್ ಹಾಕಿಕೊಂಡಿದ್ದಳು. ಆದ್ರೆ ವಾಪಸ್ ಊರಿನ ಬಸ್ ಹತ್ತಿದ್ದವಳು ದಿಢೀರ್ ನಾಪತ್ತೆಯಾಗಿದ್ದಳು. ನನ್ನ ಹೆಂಡ್ತಿ ಪ್ರಿಯಾಂಕಾ ಎಲ್ಲಿ ಹೋದ್ಲಪ್ಪ ಅಂತಾ ಗಂಡ ತಲೆಕೆಡಿಸಿಕೊಂಡಿದ್ದ. ಸಂಬಂಧಿಕರು ಪೊಲೀಸರಿಗೆ ದೂರು ಕೊಟ್ಟು ಸರಿಯಾಗಿ ತನಿಖೆ ಮಾಡ್ತಿಲ್ಲ ಅಂತಾ ಗಲಾಟೆ ಮಾಡಿದ್ರು. ನಂತರ ಹಾಸನದ ಹೆದ್ದಾರಿ ಬದಿಯಲ್ಲಿರೋ ಕಲ್ಕೆರೆ ಬಳಿ ಈಕೆಯ ಆಧಾರ್‌ ಕಾರ್ಡ್‌ ಸಿಕ್ಕಿತ್ತು. ಕೆರೆಯ ಸುತ್ತಮುತ್ತ ಹುಡುಕಾಡಿದಾಗ ಚಪ್ಪಲಿ, ವ್ಯಾನಿಟಿ ಬ್ಯಾಗ್, ಒಳಉಡುಪು ಸಿಕ್ಕಿತ್ತು. ಹೀಗಾಗಿ ಪ್ರಿಯಾಂಕಾ ಹಾಕಿದ್ದ 20 ರೂ. ಲಕ್ಷದ ಚಿನ್ನಾಭರಣಗಳಿಗಾಗಿ ಯಾರಾದ್ರೂ ಕೊಲೆಮಾಡಿದ್ರಾ? ಇಲ್ಲ ಅತ್ಯಾಚಾರ ಮಾಡಿ ಕೆರೆಯಲ್ಲಿ ಶವ ಬೀಸಾಡಿದ್ರಾ. ಹೀಗೆ ನಾನಾ ಅನುಮಾನಗಳು ಪೊಲೀಸರ ತಲೆಹೊಕ್ಕಿತ್ತು. ಈಕೆಯ ಪತಿರಾಯ ಮತ್ತು ಮನೆಯವರೆಲ್ಲ ಏನಾಯ್ತೋ ಎಂದು ಆತಂಕದಲ್ಲಿದ್ದರು.

ಇದನ್ನೂ ನೋಡಿ; ಮದ್ವೆಗೆಂದು ಹೋಗಿ ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP

ಶವಕ್ಕಾಗಿ ರಾತ್ರಿವರೆಗೂ ಹುಡುಕಿದ್ದ ಮುಳುಗು ತಜ್ಞರ ತಂಡ!

ನಿಗೂಢವಾಗಿದ್ದ ಮಹಿಳೆ ಪ್ರಿಯಾಂಕಾ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ಫುಲ್ ತಲೆಕೆಡಿಸಿಕೊಂಡಿದ್ದು, ಅಗ್ನಿಶಾಮಕ ದಳದವರು, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ನಿನ್ನೆ ರಾತ್ರಿವರೆಗೂ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆದ್ರೆ ಎಷ್ಟು ಹುಡುಕಿದ್ರೆ ಏನು ಪ್ರಯೋಜನ. ಯಾಕಂದ್ರೆ ಏನಾಗಿಹೋದ್ಲೋ ಅಂದುಕೊಂಡಿದ್ದ ಪ್ರಿಯಾಂಕಾ ದೊಡ್ಡ ಡ್ರಾಮಾವನ್ನೇ ಮಾಡಿಬಿಟ್ಟಿದ್ದಳು. ಪ್ರಿಯಾಂಕಾಳ ತಾಯಿ ಹುಷಾರಾಗಿ ಹೋಗಿ ಬಾ ಮಗಳೇ ಎಂದು ಹಾಸನದ ಬೇಲೂರಿನಿಂದ ಬಸ್‌ಹತ್ತಿಸಿ ಕಳಿಸಿದ್ದಳು. ಆದ್ರೆ ಮುಂದಿನ ಸ್ಟಾಪ್‌ನಲ್ಲಿ ಬಸ್‌ನಿಂದ ಇಳಿದಿದ್ದ ಪ್ರಿಯಾಂಕಾ ತನ್ನ ಸ್ನೇಹಿತ ಡೇವಿಡ್‌ನ ಬೈಕ್ ಹತ್ತಿದ್ದಳು. ಸ್ವಲ್ಪದೂರ ಹೋಗಿ ರಾತ್ರಿ ವೇಳೆ ಬಟ್ಟೆ ಬದಲಿಸಿಕೊಂಡಿದ್ದ ಪ್ರಿಯಾಂಕಾ, ನಾಪತ್ತೆ ಸೀನ್ ಕ್ರಿಯೇಟ್ ಮಾಡುವ ಸಲುವಾಗಿ ಹೆದ್ದಾರಿ ಬದಿ ಒಂದ್ಕಡೆ ಆಧಾರ್ ಕಾರ್ಡ್ ಬಿಸಾಕಿದ್ರೆ, ಮತ್ತೊಂದ್ಕಡೆ ಚಪ್ಪಲಿ, ಇನ್ನೊಂದಡೆ ವ್ಯಾನಿಟಿ ಬ್ಯಾಗ್ ಎಸೆದಿದ್ದಳು. ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿಯೇ ಕೆರೆ ಬಳಿಯೇ ತಾನು ಧರಿಸಿದ್ದ ಒಳಉಡುಪನ್ನು ಹರಿದು ಬಿಸಾಡಿದ್ದಳು.

ಪ್ರಿಯಾಂಕಾಳ ನೌಟಂಕಿ ಆಟ ಹೇಗಿತ್ತು ಗೊತ್ತಾ?

ಮದುವೆಗೆಂದು ಬಂದಿದ್ದ ಮಹಿಳೆ ಪ್ರಿಯಾಂಕ ನಿಗೂಢ ನಾಪತ್ತೆ ಪ್ರಕರಣದ ಸಂಪೂರ್ಣ ಟೈಮ್​ ಲೈನ್​ ಟಿವಿ9 ಬಿಚ್ಚಿಡುತ್ತಿದೆ. ಗುರುವಾರ ಮುಂಜಾನೆ 5 ಗಂಟೆಗೆ ಕುಣಿಗಲ್ ನಿಂದ ಬಸ್ ಹತ್ತಿ ಬೇಲೂರಿಗೆ ಬಂದಿಳಿದಿದ್ದ ಪ್ರಿಯಾಂಕಾ, ಗಂಡ ಬೀಳ್ಕೊಡುವ ವೇಳೆಯೇ ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದಳು. ಆದ್ರೆ, ಅದು ಸಾಧ್ಯವಾಗಿಲ್ಲ. ಬೇಲೂರಿಗೆ ಬಂದು ಅಮ್ಮ ಚಿಕ್ಕಮ್ಮನ‌ ಜೊತೆ ಚಿಕ್ಕಮಗಳೂರಿಗೆ ಪ್ರಯಾಣ ಮಾಡಿ ಮದುವೆಯಲ್ಲಿ ಬಾಗಿಯಾಗಿದ್ದಳು. ಮದುವೆ ಮುಗಿಸಿ ಅಮ್ಮನ ಮನೆಗೆ ಬಂದು ಒಂದೆರಡು ಗಂಟೆ ಸಮಯ ಕಳೆದಿದ್ದ ಪ್ರಿಯಾಂಕಾ, ಬೇಲೂರು ತಾಲ್ಲೂಕಿನ ಮತ್ತಾವರದ ತಾಯಿ ಮನೆಯಲ್ಲಿದ್ದು ಸಂಜೆ ವಾಪಸ್ ಊರಿಗೆ ಹೊರಟಿದ್ದಳು. ಬಸ್ ಹತ್ತೋ ವೇಳೆ ತಾಯಿಯನ್ನ ತಬ್ಬಿ ಕಣ್ಣೀರಿಟ್ಟು ಹೊರಟಿದ್ದಳು. ಸಂಜೆ 6-30 ಕ್ಕೆ ಮತ್ತಾವರದಿಂದ ಹತ್ತಿ 7 ಗಂಟೆ 7 ನಿಮಿಷಕ್ಕೆ ಬೇಲೂರಿಗೆ ಬಂದಿದ್ದಳು. ಇತ್ತ ಪ್ರಿಯಕರ ಡೇವಿಡ್ ಸಹ ಪ್ರಿಯಾಂಕಾ ಬರೋ ವೇಳೆಗೆ ಬೈಕ್ ತಗೊಂಡು ಬೇಲೂರಿಗೆ ಬಂದಿದ್ದ.

ಒಳಉಡುಪಿ ಬಿಸಾಡಿ ಹೋಗಿದ್ಯಾಕೆ?

ಪ್ರಿಯಕರನ ಜೊತೆ ಮಾತನಾಡಲು ಬೇರೆ ಸಿಮ್ ಬಳಸುತ್ತಿದ್ದಳು. ಹಾಗಾಗಿಯೇ ಪ್ರಿಯಾಂಕ ಮಾಮೂಲಿ ಸಿಮ್ ಸಿಡಿಆರ್ ತೆಗೆದರೂ ಯಾವುದೇ ಸುಳಿವು ಸಿಗದೆ ಪೊಲೀಸರು ಕಂಗಾಲಾಗಿದ್ದರು. ಕಡೆಗೆ ಒಂದೇ ಮೊಬೈಲ್ ನಲ್ಲಿ ಎರಡು ಸಿಮ್ ಆಪರೇಟ್ ಆಗ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ಮಾಹಿತಿ ಆದರಿಸಿ ತನಿಖೆಗಿಳಿದಾಗ ಪ್ರಿಯಾಂಕಾಳ ಆಂಟಿಯ ನೌಟಂಕಿ ಆಟ ಬಯಲಾಗಿದೆ. ಬೇಲೂರಿನಿಂದ ಬೈಕ್ ಹತ್ತಿ ಹೊರಟು ದಾರಿ ಮದ್ಯೆ ಬಟ್ಟೆ ಬದಲಾಯಿಸಿದ್ದ ಪ್ರಿಯಾಂಕಾ, ತಾಯಿ ಮನೆಯಿಂದ ಹೊರಟಾಗ ದರಿಸಿದ್ದ ಟಾಪ್, ಪ್ಯಾಂಟ್ ಒಳ ಉಡುಪು ಕಳಚಿ ಕೆರೆ ಬಳಿ ಬಿಸಾಡಿ ಹಾಸನದ ಮೂಲಕ ಅದೇ ದಿನ ಪ್ರಿಯಾಂಕ ಹಾಗು ಡೇವಿಡ್, ಕುಣಿಗಲ್ ತಲುಪಿದ್ದರು. ಬಟ್ಟೆ ರಸ್ತೆಯಲ್ಲಿ ಸಿಕ್ಕರೆ ಎಲ್ಲೆಡೆ ಹುಡುಕಾಡುತ್ತಾರೆ. ತನ್ನ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಯಾರೋ ಕೊಲೆ ಮಾಡಿ ಎಲ್ಲೊ ಬಿಸಾಡಿದ್ದಾರೆ ಎಂದು ಸುಮ್ಮನಾಗ್ತಾರೆ ಎಂದು ಈ ರೀತಿ ಪ್ಲ್ಯಾನ್ ಮಾಡಿದ್ದಳು.

ಗಂಡನನ್ನ ಬಿಟ್ಟು ಪ್ರಿಯಕರನ ಜತೆ ಇರಲು ಪ್ಲ್ಯಾನ್

ಪ್ರಿಯಾಂಕ ಹಾಗೂ ಡೆವಿಡ್ ಕುಣಿಗಲ್ ನಲ್ಲಿ ಒಂದೇ ಕಂಪನಿಯ ಉದ್ಯೋಗಿಯಾಗಿದ್ದರು. ಪರಿಚಯವಾಗಿ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಪ್ರೇಮಿಗಳ ದಿನವೇ ಜೊತೆಯಾಗಿ ಇರಲು ನಿರ್ಧರಿಸಿದ್ದರು. ಹೀಗಾಗಿ ಎಲ್ಲರಿಗೂ ದಾರಿ ತಪ್ಫಿಸಿ ಎಸ್ಕೇಪ್ ಆಗುವ ಪ್ಲ್ಯಾನ್ ಮಾಡಿದ್ದರು. ತಾವು ಕೆಲಸ ಮಾಡುತ್ತಿದ್ದ ಕಂಪನಿ ಮಧ್ಯಪ್ರದೇಶಕ್ಕೆ ಶಿಫ್ಟ್ ಆಗುವ ಹಿನ್ನೆಲೆಯಲ್ಲಿ ಈ ಜೋಡಿ ಅಲ್ಲಿಗೆ ತೆರಳಿ ಒಟ್ಟಿಗೆ ಜೀವನ ನಡೆಸಲು ತೀರ್ಮಾನಿಸಿತ್ತು. ಇದರಿಂದ 20 ಲಕ್ಷ ರೂ. ಮೌಲ್ಯದ ಒಡವೆ ಸಮೇತ ಪ್ರಿಯಾಂಕಾ ಪ್ರಿಯಕರನ ಜೊತೆ ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದಳು. ಆದ್ರೆ, ನಿನ್ನೆ(ಫೆಬ್ರವರಿ 14ರ ರಾತ್ರಿ 9 ಗಂಟೆ ವೇಳೆಗೆ ಕುಣಿಗಲ್ ನಲ್ಲಿ ಈ ಜೋಡಿ ಲಾಕ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version