Headlines

ಬೆಂಗಳೂರಿಗರೇ ಗಮನಿಸಿ: TCS ಮ್ಯಾರಥಾನ್​​ ಹಿನ್ನೆಲೆ ಈ ಪ್ರಮುಖ ರಸ್ತೆಗಳ ಸಂಚಾರದಲ್ಲಿಂದು ಭಾರಿ ಬದಲಾವಣೆ – Kannada News | Bengaluru Traffic Alert: Road Closures and Diversions for TCS 10K Marathon Today

ಬೆಂಗಳೂರು, ಏಪ್ರಿಲ್​​ 26: ನಗರದಲ್ಲಿ ಇಂದು ನಡೆಯುತ್ತಿರುವ TCS ವರ್ಲ್ಡ್ 10K ಮ್ಯಾರಥಾನ್​​ನಲ್ಲಿ 30,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇರುವ ಹಿನ್ನೆಲೆ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ವಿವಿಧ ರಸ್ತೆಗಳಲ್ಲಿ ಸಂಚಾರವನ್ನು ನಿರ್ಭಂಧಿಸಲಾಗಿದೆ. ಮಾರ್ಗ ಬದಲಾವಣೆ ಜೊತೆಎಗೆ ನೋ-ಪಾರ್ಕಿಂಗ್ ನಿಯಮಗಳನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಜಾರಿಗೊಳಿಸಿದ್ದಾರೆ. ಮ್ಯಾರಥಾನ್ RSAOI ಮೈದಾನದಿಂದ ಆರಂಭವಾಗಿ ಅಲ್ಲಿಯೇ ಮುಕ್ತಾಯವಾಗಲಿದೆ. ಕಬ್ಬನ್ ರಸ್ತೆ, ಕಾಮರಾಜ್ ರಸ್ತೆ, ರಾಜಭವನ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆ ಮಾರ್ಗಗಳಲ್ಲಿ ಮ್ಯಾರಥಾನ್​​ ನಡೆಯಲಿದ್ದು, ಹಲಸೂರು, ಫ್ರೇಸರ್…

Read More

ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ – Kannada News | White House Shooting: Trump Rushed to Bunker During Dinner Amid Gunfire Fear

ವಾಷಿಂಗ್ಟನ್, ಏಪ್ರಿಲ್ 26: ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಶನಿವಾರ ರಾತ್ರಿ ನಡೆದ ಶ್ವೇತಭವನದ ವಾರ್ಷಿಕ ಭೋಜನಕೂಟ ಆತಂಕಕ್ಕೆ ಸಾಕ್ಷಿಯಾಗಿತ್ತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಭಾಷಣಕ್ಕೂ ಮುನ್ನವೇ ಕೇಳಿಬಂದ ಗುಂಡಿನ ಸದ್ದಿನಿಂದಾಗಿ ಇಡೀ ಸಭಾಂಗಣದಲ್ಲಿ ಅವ್ಯವಸ್ಥೆ ಉಂಟಾಯಿತು. ನೂರಾರು ಪತ್ರಕರ್ತರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ರಾಜತಾಂತ್ರಿಕರಿಂದ ತುಂಬಿದ್ದ ಸಭಾಂಗಣದಲ್ಲಿ ಐದರಿಂದ ಎಂಟು ಬಾರಿ ಗುಂಡು ಹಾರಿದ ಶಬ್ದ ಕೇಳಿಬಂದಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ, ದಾರಿ ಬಿಡಿ, ಕೆಳಗೆ ಬಾಗಿ ಎಂದು ಕೂಗುತ್ತಾ…

Read More

ಕರ್ನಾಟಕ ಹವಾಮಾನ ವರದಿ: ಮೈ ಸುಡುವ ಬಿಸಿಲಿನ ಜೊತೆಗೆ ಇಂದು ಹಲವೆಡೆ ಆಲಿಕಲ್ಲು ಮಳೆ! 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka Weather Forecast: Heatwave in Coastal and Hailstorm in North interior Karnataka, Orange alert

ಕರ್ನಾಟಕ ಹವಾಮಾನ ವರದಿImage Credit source: MediaForge AI ಬೆಂಗಳೂರು, ಏಪ್ರಿಲ್ 26: ಬೆಂಗಳೂರಿನ ಜನರು ಬಿಸಿಲ ಬೇಗೆಯಲ್ಲಿ (Karnataka Weather) ಬೇಯುತ್ತಿದ್ದು, ತಂಪು ವಾತಾವರಣದ ನಿರೀಕ್ಷೆಯಲ್ಲಿದ್ದಾರೆ. ಇಂದು ಕರಾವಳಿಯಲ್ಲಿ ಉಷ್ಣ ಅಲೆಯ ಆರ್ಭಟವಿರಲಿದ್ದು ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ…

Read More

ಅಂತೂ ಇಂತೂ ಭಾರತದಲ್ಲಿ 100 ಕೋಟಿ ರೂ. ಗಳಿಸಿದ ‘ಭೂತ್ ಬಂಗ್ಲ’ ಸಿನಿಮಾ – Kannada News | Bhooth Bangla Box Office Collection Akshay Kumar Priyadarshan movie crosses 100 crore mark in India

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್ ಎಂದರೆ ಅಲ್ಲಿ ನಗುವಿಗೆ ಗ್ಯಾರಂಟಿ. ಸುಮಾರು 14 ವರ್ಷಗಳ ನಂತರ ಈ ಸೂಪರ್ ಹಿಟ್ ಜೋಡಿ ಒಂದಾಗಿ ಮಾಡಿರುವ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ 9 ದಿನಗಳಲ್ಲಿ ಈ ಹಾರರ್ ಕಾಮಿಡಿ ಸಿನಿಮಾ ಭಾರತದಲ್ಲಿ 100 ಕೋಟಿ ರೂಪಾಯಿಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟನ…

Read More

ಅಳಿಯನ ಮದುವೆಗೆ ಬಂದಿದ್ದ NRI ವೈದ್ಯೆಗೆ ಆಘಾತ: ಮದುವೆ ಮಂಟಪದಿಂದ 1 ಕೋಟಿ ರೂ. ಮೌಲ್ಯದ ಬಂಗಾರದ ಆಭರಣ ಕಳವು – Kannada News | Bangalore Wedding Theft: Rs 1 Crore Gold Vanishes from NRI Doctor’s Locked Room

ಬೆಂಗಳೂರು, ಏಪ್ರಿಲ್​​ 26: ಮದುವೆ ಮನೆಯಲ್ಲಿ ಕೈಚಳಕ ತೋರಿರುವ ಖದೀಮರು ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಅಮೆರಿಕದಲ್ಲಿ ವಾಸವಿರುವ 52 ವರ್ಷದ ಮಹಿಳಾ ವೈದ್ಯೆ ಸಿರುವೆಲ್ಲ ಶ್ರೀದೇವಿ ಎಂಬವರಿಗೆ ಸೇರಿದ ಚಿನ್ನಾಭರಣವನ್ನು ಮದುವೆ ಮಂಟಪದಲ್ಲಿ ದೋಚಿರುವ ಪ್ರಸಂಗ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಇನ್ನು ಘಟನೆ ಸಂಬಂಧ ಸಿರುವೆಲ್ಲ…

Read More

Daily Devotional: ಸಹವಾಸ ದೋಷ ಅಂದ್ರೆ ಏನು? ಅದು ನಿಜಕ್ಕೂ ತಟ್ಟುತ್ತಾ? – Kannada News | Sahavasa Dosha: How Company Shapes Your Life and Destiny Explained

ಸಹವಾಸ ದೋಷ ಅಂದ್ರೆ ಏನು? ಅದು ನಿಜಕ್ಕೂ ತಟ್ಟುತ್ತಾ? ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಸಹವಾಸ ದೋಷವು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಗುರೂಜಿ ತಿಳಿಸಿದ್ದಾರೆ. ಒಬ್ಬ ವ್ಯಕ್ತಿಯ ಏಳಿಗೆ ಅಥವಾ ಅವನತಿಗೆ ಅವನ ಸಹವಾಸವೇ ಮುಖ್ಯ ಕಾರಣವಾಗಿರುತ್ತದೆ. ಉತ್ತಮ ಸಹವಾಸವು ಜೀವನದಲ್ಲಿ ಶ್ರೇಯಸ್ಸು ಮತ್ತು ವೃದ್ಧಿಯನ್ನು ತಂದರೆ, ಕೆಟ್ಟ ಸಹವಾಸವು ವಿನಾಶಕ್ಕೆ ಎಡೆಮಾಡಿಕೊಡುತ್ತದೆ. “ಸಹವಾಸ ದೋಷದಿಂದ ಸನ್ಯಾಸಿಯೂ ಕೆಟ್ಟ” ಎಂಬ ಗಾದೆಯೇ…

Read More

Horoscope Today: ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಆತುರಪಡಬೇಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 26, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ನವಮಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ. ಇಂದು ರಾಹುಕಾಲ ಮಧ್ಯಾಹ್ನ 4:58 ರಿಂದ ಸಂಜೆ 6:32 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 1:51 ರಿಂದ…

Read More

ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್​​ – Kannada News | D.K. Shivakumar Justifies Kharge Meeting in Delhi Amidst CM Speculation

ದೆಹಲಿ, ಏಪ್ರಿಲ್​​ 26: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಖರ್ಗೆಯವರು ಎಐಸಿಸಿ ಅಧ್ಯಕ್ಷರು, ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ. ನಾವು ಭೇಟಿ ಮಾಡುವುದು ಸಹಜ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ತಮ್ಮನ್ನು ವೀಕ್ಷಕರಾಗಿ ಕಳಿಸಲಾಗಿತ್ತು. ಅಸ್ಸಾಂ, ತಮಿಳುನಾಡು, ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರಗಳು ಮತ್ತು ಅಲ್ಲಿನ ಪರಿಸ್ಥಿತಿಗಳ ಕುರಿತು ಪಕ್ಷದ ಹಿರಿಯರಿಗೆ ವರದಿ…

Read More

RR vs SRH: ವೈಭವ್ ಅಬ್ಬರದ ಶತಕಕ್ಕೂ ಒಲಿಯದ ಜಯ; ಸನ್‌ರೈಸರ್ಸ್​ಗೆ ಸುಲಭ ಜಯ

ಐಪಿಎಲ್ 2026 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ತಂಡವನ್ನು ಮಣಿಸಿದ ಸನ್‌ರೈಸರ್ಸ್ ತಂಡ ಈ ಲೀಗ್​ನ 5ನೇ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ತಂಡ ವೈಭವ್ ಸೂರ್ಯವಂಶಿ ಅವರ ದಾಖಲೆಯ ಶತಕದಿಂದ 229 ರನ್ ಕಲೆಹಾಕಿತು. ಈ ಗುರಿ…

Read More

ಕಾಶ್ಮೀರದ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತ; ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಬಂದ್ – Kannada News | Avalanche hits At ZojiLa Pass Srinagar Leh national highway watch video

ಶ್ರೀನಗರ, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ (Avalanche in Kashmir) ಭಾರೀ ಹಿಮಪಾತವಾಗುತ್ತಿದೆ. ಝೋಜಿ ಲಾ ಪಾಸ್‌ನ ಶೈತಾನ್ ನಲ್ಲದಲ್ಲಿ ಹಿಮಪಾತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಹಿಮಪಾತದಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಝೋಜಿಲಾ ಪಾಸ್‌ ಬಳಿ ಹಿಮಪಾತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಹಲವಾರು ವಾಹನಗಳು ಹಿಮಪಾತದಲ್ಲಿ ಸಿಲುಕಿದ್ದು, ಇಲ್ಲಿಯವರೆಗೆ ಯಾವುದೇ…

Read More