Horoscope Today: ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಆತುರಪಡಬೇಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 26, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ನವಮಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ಇಂದು ರಾಹುಕಾಲ ಮಧ್ಯಾಹ್ನ 4:58 ರಿಂದ ಸಂಜೆ 6:32 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 1:51 ರಿಂದ 3:25 ರವರೆಗೆ ಇರುತ್ತದೆ. ರವಿ ಮೇಷ ರಾಶಿಯಲ್ಲಿ ಹಾಗೂ ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸಲಿದ್ದಾನೆ. ವಾಸವಿ ಕನ್ಯಕಾ ಪರಮೇಶ್ವರಿ ಮತ್ತು ನಿಮಿಷಾಂಬ ಜಯಂತೋತ್ಸವಗಳು ನಡೆಯಲಿವೆ. ಜೊತೆಗೆ, ಬೆಂಗಳೂರು ಕೋಟೆ ವೆಂಕಟರಮಣ ಸ್ವಾಮಿ ಹಾಗೂ ಲಕ್ಷ್ಮೇಶ್ವರ ಸೋಮೇಶ್ವರ ರಥೋತ್ಸವಗಳು ಸಹ ಇವೆ. ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಎಲ್ಲರಿಗೂ ಶುಭವಾಗಲಿ ಎಂದು ಗುರೂಜಿ ಹಾರೈಸಿದ್ದಾರೆ.

 

 

 

Source link

ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್​​ – Kannada News | D.K. Shivakumar Justifies Kharge Meeting in Delhi Amidst CM Speculation

ದೆಹಲಿ, ಏಪ್ರಿಲ್​​ 26: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಖರ್ಗೆಯವರು ಎಐಸಿಸಿ ಅಧ್ಯಕ್ಷರು, ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ. ನಾವು ಭೇಟಿ ಮಾಡುವುದು ಸಹಜ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ಬೇರೆ ರಾಜ್ಯಗಳ ಚುನಾವಣೆಗೆ ತಮ್ಮನ್ನು ವೀಕ್ಷಕರಾಗಿ ಕಳಿಸಲಾಗಿತ್ತು. ಅಸ್ಸಾಂ, ತಮಿಳುನಾಡು, ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರಗಳು ಮತ್ತು ಅಲ್ಲಿನ ಪರಿಸ್ಥಿತಿಗಳ ಕುರಿತು ಪಕ್ಷದ ಹಿರಿಯರಿಗೆ ವರದಿ ಸಲ್ಲಿಸುವುದು ನನ್ನ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

RR vs SRH: ವೈಭವ್ ಅಬ್ಬರದ ಶತಕಕ್ಕೂ ಒಲಿಯದ ಜಯ; ಸನ್‌ರೈಸರ್ಸ್​ಗೆ ಸುಲಭ ಜಯ

ಐಪಿಎಲ್ 2026 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರಸ್ಪರ ಮುಖಾಮುಖಿಯಾಗಿದ್ದವು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ್ ತಂಡವನ್ನು ಮಣಿಸಿದ ಸನ್‌ರೈಸರ್ಸ್ ತಂಡ ಈ ಲೀಗ್​ನ 5ನೇ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಅಲಂಕರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ತಂಡ ವೈಭವ್ ಸೂರ್ಯವಂಶಿ ಅವರ ದಾಖಲೆಯ ಶತಕದಿಂದ 229 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ನಾಯಕ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 19ನೇ ಓವರ್​ನಲ್ಲಿ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ಪರ ಆರಂಭಿಕ ಜೋಡಿಯಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್​ಗೆ 40 ರನ್​ಗಳ ಜೊತೆಯಾಟ ನೀಡಿದರು. ಯಶಸ್ವಿ 10 ರನ್‌ಗಳಿಗೆ ಔಟಾದರೆ, ನಂತರ ಬಂದ ಧ್ರುವ್ ಜುರೇಲ್ ಹಾಗೂ ವೈಭವ್ ಎರಡನೇ ವಿಕೆಟ್‌ಗೆ ಕೇವಲ 62 ಎಸೆತಗಳಲ್ಲಿ 112 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಧ್ರುವ್ 35 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ಇತ್ತ ತನ್ನ ಸಿಡಿಲಬ್ಬರದ ಬ್ಯಾಟಿಂಗ್‌ ಮುಂದುವರೆಸಿದ ವೈಭವ್ ಐಪಿಎಲ್ ವೃತ್ತಿಜೀವನದಲ್ಲಿ ತಮ್ಮ ಎರಡನೇ ಶತಕ ಮತ್ತು ಈ ಆವೃತ್ತಿಯ ಮೊದಲ ಶತಕ ಬಾರಿಸಿದರು.

ವೈಭವ್ ಕೇವಲ 37 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 103 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಡೊವೊವನ್ ಫೆರೇರಾ 33 ರನ್ ಗಳಿಸಿದರೆ, ಶಿಮ್ರಾನ್ ಹೆಟ್ಮೆಯರ್ 11 ರನ್ ಗಳಿಸಿದರು. ನಾಯಕ ರಿಯಾನ್ ಪರಾಗ್ 7 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ 4 ರನ್ ಗಳಿಸಿ ಅಜೇಯರಾಗಿ ಮರಳಿದರು. ಹೈದರಾಬಾದ್ ಪರ ಇಶಾನ್ ಮಾಲಿಂಗ 2, ಪ್ರುಫಲ್ ಹಿಂಗೆ, ಪ್ಯಾಟ್ ಕಮ್ಮಿನ್ಸ್, ಶಕೀಬ್ ಹುಸೇನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.

Source link

ಕಾಶ್ಮೀರದ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತ; ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಬಂದ್ – Kannada News | Avalanche hits At ZojiLa Pass Srinagar Leh national highway watch video

ಶ್ರೀನಗರ, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ (Avalanche in Kashmir) ಭಾರೀ ಹಿಮಪಾತವಾಗುತ್ತಿದೆ. ಝೋಜಿ ಲಾ ಪಾಸ್‌ನ ಶೈತಾನ್ ನಲ್ಲದಲ್ಲಿ ಹಿಮಪಾತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಹಿಮಪಾತದಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಝೋಜಿಲಾ ಪಾಸ್‌ ಬಳಿ ಹಿಮಪಾತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಹಲವಾರು ವಾಹನಗಳು ಹಿಮಪಾತದಲ್ಲಿ ಸಿಲುಕಿದ್ದು, ಇಲ್ಲಿಯವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ. ಹಿಮವನ್ನು ತೆರವುಗೊಳಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು – Kannada News | Sa Ra Govindu lashes out on Chetan Ahimsa watch video

ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ಅವರು ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿಯ ಕುರಿತು ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಟೀಕೆಗೆ ಗುರಿಯಾಗಿತ್ತು. ರಾಜ್​ಕುಮಾರ್ ಅವರಿಗೆ 2.50 ಎಕರೆ ಭೂಮಿಯನ್ನು ಸ್ಮಾರಕಕ್ಕಾಗಿ ಸರ್ಕಾರ ನೀಡಿತ್ತು ತಪ್ಪು ಎಂಬರ್ಥದ ಫೇಸ್​ಬುಕ್ ಪೋಸ್ಟ್ ಅನ್ನು ಚೇತನ್ ಹಂಚಿಕೊಂಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿ. ಇಂದು ಅಭಿಮಾನಿಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದರು. ಬಳಿಕ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಚೇತನ್ ಅಹಿಂಸ ಕ್ಷಮೆ ಕೇಳಿದರು. ಅದಾದ ಬಳಿಕವೂ ಸಹ ಸಾರಾ ಗೋವಿಂದು ಸಿಟ್ಟು ತಣಿದಿರಲಿಲ್ಲ. ಚೇತನ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜನಗಣತಿ ಕಾರ್ಯಕ್ಕೆ ಅಡ್ಡಿ: ಮಹಿಳಾ ಸಿಬ್ಬಂದಿಗೆ ಅವಮಾನ; ನಿವಾಸಿ ವಿರುದ್ಧ ಎಫ್​ಐಆರ್​ ದಾಖಲು – Kannada News | Female Census Staff Insulted During Duty, FIR Filed Against Resident

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಏಪ್ರಿಲ್​ 25: ರಾಷ್ಟ್ರೀಯ ಜನಗಣತಿ–2027ರ (Caste Sensus) ಕಾರ್ಯಾಚರಣೆಯ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಗಣತಿದಾರರಿಗೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಬಂಧಪಟ್ಟ ನಿವಾಸಿಯ ವಿರುದ್ಧ ಇದೀಗ ಆರ್​ಟಿ ನಗರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ.

ನಡೆದಿದ್ದೇನು?

ವಾರ್ಡ್ ಸಂಖ್ಯೆ 43ರಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಗಣತಿದಾರರಾದ ಶ್ರೀಮತಿ ವೀಣಾ ಅವರು ಏಪ್ರಿಲ್ 20ರಂದು ಆರ್.ಟಿ. ನಗರದ ಸುಲ್ತಾನಪಾಳ್ಯದ ಪೇರಿ ಮೊನಾರ್ಕ್ ಅಪಾರ್ಟ್‌ಮೆಂಟ್‌ಗೆ ಮಾಹಿತಿ ಸಂಗ್ರಹಿಸಲು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ನಿವಾಸಿಯೊಬ್ಬರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ಏಪ್ರಿಲ್ 25ರಂದು ಮೇಲ್ವಿಚಾರಕರಾದ ಶ್ರೀಮತಿ ರಶ್ಮಿ ಆರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದಾಗ, ಆ ನಿವಾಸಿಯು ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಮಹಿಳಾ ಸಿಬ್ಬಂದಿಯೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿ ನಿಂದಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜನಗಣತಿಗೆ 6 ಸಾವಿರ ಸರ್ಕಾರಿ ನೌಕಕರು ಗೈರು: ಕೋಲಾರದಲ್ಲೂ 6 ತಹಶೀಲ್ದಾರ್​​​ಗೆ ನೋಟಿಸ್​​

ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಜನಗಣತಿ ಅಧಿಕಾರಿ ಡಾ. ಲೋಕೇಶ್ ಅವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಜನಗಣತಿ ಕಾಯ್ದೆ 1948ರ ಸೆಕ್ಷನ್ 11(1) ಹಾಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNS) ಕಲಂ 223 ಮತ್ತು 79ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗಿದೆ.

ಆಯುಕ್ತರಿಂದ ಖಡಕ್ ಎಚ್ಚರಿಕೆ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಜನಗಣತಿ ರಾಷ್ಟ್ರದ ಪ್ರಮುಖ ಕಾರ್ಯವಾಗಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಅಡ್ಡಿಪಡಿಸುವುದು ಕಾನೂನುಬದ್ಧ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು, ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಮನವಿ

ಇನ್ನು ಸಾರ್ವಜನಿಕರಿಗೂ ಆಯುಕ್ತರು ಮನವಿ ಮಾಡಿದ್ದು, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ ಸಹಕರಿಸುವುದು ಅವರ ಕಾನೂನುಬದ್ಧ ಕರ್ತವ್ಯವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ರಾಷ್ಟ್ರದ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ! – Kannada News | Woman dies after her Husband refused to Buy AC Air Conditioner in Thiruvallur

ತಿರುವಳ್ಳೂರು, ಏಪ್ರಿಲ್ 25: ತಮಿಳುನಾಡಿನ ತಿರುವಳ್ಳೂರಿನ 26 ವರ್ಷದ ಆಕಾಶ್ ಮತ್ತು 25 ವರ್ಷದ ಮೋನಿಕಾ ಕೇವಲ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶಾಲೆಯಿಂದ ಕಾಲೇಜಿನವರೆಗೆ ಒಟ್ಟಿಗೇ ಓದಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರೂ ಒಪ್ಪಿ ಮದುವೆ ಮಾಡಿಸಿದ್ದರು. ಆದರೆ, ಅವರ ಪ್ರೀತಿಯ ದಾಂಪತ್ಯ ಎರಡೇ ವರ್ಷದಲ್ಲಿ ಅಂತ್ಯವಾಗಿದೆ. ತಮಿಳುನಾಡಿನ ಸೆಖೆ ತಡೆಯಲಾರದೆ ಮೋನಿಕಾ ಆಕಾಶ್ ಬಳಿ ಮನೆಗೆ ಎಸಿ ಹಾಕಿಸು ಎಂದು ಹೇಳಿದ್ದಳು. ಆದರೆ, ಆಕಾಶ್ ಈಗ ಬೇಡವೆಂದು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಮೋನಿಕಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!

ಆಕಾಶ್ ತಿರುವಳ್ಳೂರಿನ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಮೋನಿಕಾ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು. ಸೆಖೆಯಿಂದ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮೋನಿಕಾ ತನ್ನ ಪತಿ ಆಕಾಶ್‌ಗೆ ಮನೆಗೆ ಎಸಿ ಖರೀದಿಸಲು ಕೇಳಿಕೊಂಡಿದ್ದಳು. ಆದರೆ, ಹೆಚ್ಚಿನ ಸಂಬಳವಿಲ್ಲದ ಆಕಾಶ್ ಅದಕ್ಕೆ ನಿರಾಕರಿಸಿದ್ದ . ಇದರಿಂದಾಗಿ, ಇಬ್ಬರ ನಡುವೆ ಜಗಳ ಉಂಟಾಗಿತ್ತು. ಆಕಾಶ್​ನ ಮನೆಯವರೂ ಸೊಸೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ

ಸೆಖೆ ತಡೆಯಲಾಗದೆ ನಿನ್ನೆ ರಾತ್ರಿ ಆಕಾಶ್​ ತನ್ನ ತಮ್ಮಂದಿರು ಮತ್ತು ಅಪ್ಪ-ಅಮ್ಮನ ಜೊತೆ ಟೆರೇಸಿನಲ್ಲಿ ಮಲಗಲು ಹೋಗಿದ್ದ. ಆಗ ಮೋನಿಕಾ ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದಳು. ಬೆಳಿಗ್ಗೆ ಮುಂಜಾನೆ ಆಕಾಶ್ ರೂಂಗೆ ಬಂದಾಗ ತನ್ನ ಪತ್ನಿ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾದನು.

ಮನೆಯಲ್ಲಿ ತನ್ನ ಪತ್ನಿ ಮೋನಿಕಾ ತನ್ನ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಕಾಶ್ ಕಿರುಚಿದನು. ಆ ಸಮಯದಲ್ಲಿ, ಮಹಡಿಯ ಮೇಲೆ ಮಲಗಿದ್ದ ಅವರ ತಂದೆ, ತಾಯಿ ಮತ್ತು ಸಹೋದರ ಅವರ ಕಿರುಚಾಟ ಕೇಳಿ ಕೆಳಗೆ ಬಂದರು. ನಂತರ, ಅವರು ಈ ಘಟನೆಯ ಬಗ್ಗೆ ಪುಲ್ಲರಂಬಕ್ಕಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಈ ವಿಷಯ ತಿಳಿದ ಪುಲ್ಲರಂಬಕ್ಕಂ ಪೊಲೀಸರು ಮೋನಿಕಾಳ ಶವವನ್ನು ವಶಪಡಿಸಿಕೊಂಡು ತಿರುವಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸಪ್ಪನ ಪ್ರೇಮ ಪುರಾಣ; ಕಾನ್​ಸ್ಟೆಬಲ್​ನ​ ಹೆಂಡತಿ, ಮಗುವಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಯಸಿ

ಅವರು ಮದುವೆಯಾಗಿ ಕೇವಲ ಎರಡು ವರ್ಷಗಳಾಗಿವೆ. ಹೀಗಾಗಿ, ಈ ಆತ್ಮಹತ್ಯೆಗೆ ಬೇರೆ ಯಾವುದೇ ಕಾರಣಗಳಿವೆಯೇ ಎಂದು ಅವರು ತನಿಖೆ ನಡೆಸುತ್ತಿದ್ದಾರೆ. ಮೋನಿಕಾಳ ಶವವನ್ನು ಹೊರತೆಗೆದು ಶವಪರೀಕ್ಷೆಗಾಗಿ ತಿರುವಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:41 pm, Sat, 25 April 26

Source link

ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ – Kannada News | Manipur Violence Many Injured In Clashes At Imphal Rally Protesters Stopped Near CM Residence

ಇಂಪಾಲ, ಏಪ್ರಿಲ್ 25: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಶಾಶ್ವತ ಶಾಂತಿಯನ್ನು ಬಯಸುವ ಸಾವಿರಾರು ಪ್ರತಿಭಟನಾಕಾರರು ಇಂಪಾಲದಲ್ಲಿರುವ ಮುಖ್ಯಮಂತ್ರಿ ನಿವಾಸದ ಕಡೆಗೆ ಮೆರವಣಿಗೆ ನಡೆಸುವುದನ್ನು ತಡೆದ ನಂತರ ಇಂದು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಇಂಪಾಲದ ವಿವಿಧ ಭಾಗಗಳಿಂದ 4 ಪ್ರತ್ಯೇಕ ರ‍್ಯಾಲಿಗಳನ್ನು ಮುನ್ನಡೆಸಿದ ಮೈತೈ ಗುಂಪಿನ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (COCOMI) ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಆದರೆ, ಬಾಬುಪರಾ ಪ್ರದೇಶದಲ್ಲಿರುವ ಮುಖ್ಯಮಂತ್ರಿಯವರ ಬಂಗಲೆಯನ್ನು ತಲುಪುವ ಮೊದಲು ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಹಲವು ಸ್ಥಳಗಳಲ್ಲಿ ತಡೆದವು. ಈ ವೇಳೆ ಹಿಂಸಾಚಾರ ನಡೆದಿದ್ದು, ಹಲವರಿಗೆ ಗಾಯಗಳಾಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ ಎಂದ ಚಾಲಕರು – Kannada News | Bengaluru Bus Drivers Protest, Refuse to Drive Until Justice is Served for Driver Ramesh

ಆನೇಕಲ್​​, ಏಪ್ರಿಲ್​ 25: ಕರ್ತವ್ಯದಲಿದ್ದಾಗಲೇ ಬಿಎಂಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಬಿಎಂಟಿಸಿ ಡಿಪೋದಲ್ಲಿ ಸಹೋದ್ಯೋಗಿಗಳು ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಮೃತಪಟ್ಟ ಚಾಲಕರ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿರುವ ನೌಕರರು, ಬಸ್‌ಗಳನ್ನು ಹೊರತೆಗೆಯದೆ ಪ್ರತಿಭಟಿಸಿದರು. ರಮೇಶ್ ಕುಟುಂಬಕ್ಕೆ ತಕ್ಷಣವೇ ಪರಿಹಾರ ಘೋಷಿಸಬೇಕು, ಇಲ್ಲವಾದರೆ ಡಿಪೋ ಮುಂದೆ ಶವವನ್ನಿಟ್ಟು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

RR vs SRH: 15ನೇ ವಯಸ್ಸಿನಲ್ಲೇ ಎರಡೆರಡು ವಿಶ್ವದಾಖಲೆ ನಿರ್ಮಿಸಿದ ವೈಭವ್

Source link

Exit mobile version