Headlines

‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’: ವಿಜಯಪುರ ದುರಂತ, ತಾಯಿಯ ಕಣ್ಣೀರ ಮಾತು – Kannada News | Vijayapura Tragedy: Minister MB Patil Announces 5 Lakh Compensation for Family Killed in House Collapse

ವಿಜಯಪುರ, ಮೇ 15: ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಸಂಭವಿಸಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟಿದ್ದು, ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಮೃತ ಗುರುನಾಥ ಬಡಿಗೇರ ತಾಯಿ ‘ಟಿವಿ9’ ಜತೆ ಮಾತನಾಡಿದ್ದು, ‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’ ಎಂದು ಕಣ್ಣೀರು…

Read More

Gadag: ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!

ಗದಗ, ಜನವರಿ 23: ಮನೆ ಅಡಿಪಾಯ ನಿರ್ಮಾಣದ ವೇಳೆ ನಿಧಿ ಸಿಕ್ಕ ಬೆನ್ನಲ್ಲೇ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಆರಂಭವಾಗಿದ್ದು, ದೇಶ ಮತ್ತು ವಿದೇಶಗಳಲ್ಲಿಯೂ ಈ ವಿಚಾರ ಸುದ್ದಿಯಾಗಿದೆ. ಈ ನಡುವೆ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ನೋಡಲು ವಿದೇಶಿ ಪ್ರವಾಸಿಗರು ಸಹ ಬಂದಿದ್ದಾರೆ. ಫ್ರಾನ್ಸ್​ ದೇಶದ 9 ಪ್ರವಾಸಿಗರು ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದು, ಐತಿಹಾಸಿಕ ದೇವಸ್ಥಾನಗಳ ವೀಕ್ಷಣೆ ಬಳಿಕ ಉತ್ಖನನ ಸ್ಥಳದಲ್ಲೂ ಓಡಾಟ ನಡೆಸಿ ಮಾಹಿತಿ ಪಡೆದಿದ್ದಾರೆ. ಮತ್ತೊಂದೆಡೆ ನಿರ್ಬಂಧಿತ ಪ್ರದೇಶದಲ್ಲಿ ಜನರ…

Read More

ಮಗಳ ಸರ್ಕಾರಿ ನೌಕರಿಗಾಗಿ ಸಾಹುಕಾರ್ ಅಕ್ರಮ ಎಸಗಿರೋದು ಅಕ್ಷಮ್ಯ ಅಪರಾಧ; ಕೆಪಿಎಸ್‌ಸಿ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಲು ಯತ್ನಾಳ್ ಆಗ್ರಹ – Kannada News | Karnataka KPSC Fraud: Chairman Sahukar Faces Nepotism Charges, HC Denies Stay

ಬೆಂಗಳೂರು, ಜು.16: ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರು ತಮ್ಮ ಮಗಳಿಗೆ ಸರ್ಕಾರಿ ಹುದ್ದೆ ಕೊಡಿಸಲು ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಅಕ್ರಮ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಕಾರಣಕ್ಕೆ ಕೆಪಿಎಸ್​​​ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶದ ವಿರುದ್ಧ ಇದೀಗ ಕಾನೂನು ಹೋರಾಟ ನಡೆಯುತ್ತಿದೆ. ಇದರ ಹೊತ್ತಿನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್​​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಈ…

Read More

ಸಹಪಾಠಿ ಯುವತಿಗೆ ಇನ್​ಸ್ಟಾದಲ್ಲಿ ‘Pretty’ ಎಂದು ಮೆಸೇಜ್​​ ಮಾಡಿದ ಹುಡುಗನ ಮೇಲೆ ಬಿತ್ತು ಕೇಸ್! ಹೈಕೋರ್ಟ್ ಹೇಳಿದ್ದೇನು ಗೊತ್ತಾ? – Kannada News | Gen Z Lingo is Not a Crime: Karnataka HC Quashes Stalking and Voyeurism Case Against Student Who Called Classmate ‘Pretty’ in Instagram DM

ಬೆಂಗಳೂರು, ಜುಲೈ 22: ಸಯಪಾಠಿ ವಿದ್ಯಾರ್ಥಿನಿಗೆ ​​”Pretty” (ನೀವು ತುಂಬಾ ಸುಂದರ) ಎಂದು ಇನ್‌ಸ್ಟಾಗ್ರಾಂನಲ್ಲಿ ಡೈರೆಕ್ಟ್ ಮೆಸೇಜ್ (DM) ಕಳುಹಿಸಿದ್ದ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಸುಮಾರು 2 ವರ್ಷಗಳ ಹಿಂದೆ ಘನತೆಗೆ ಚ್ಯುತಿ ಸೇರಿ ಕೆಲ ಆರೋಪಗಳಡಿ 20 ವರ್ಷದ ವಿದ್ಯಾರ್ಥಿಯ ವಿರುದ್ಧ ಐಪಿಎಸ್​ ಅಧಿಕಾರಿಯೋರ್ವರ ಪುತ್ರಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಯುವಕನ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇದು ಇಬ್ಬರು…

Read More

ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಮಂತ್ರಾಲಯ ಶ್ರೀಗಳು – Kannada News | Heavy Rain in Mantralaya: Swamiji Arranges Shelter and Aid for Devotees

ರಾಯಚೂರು, ಮೇ 24: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಇತ್ತ ರಾಯರ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಅಬ್ಬರಕ್ಕೆ ಕಂಗಾಲಾಗಿದ್ದರು. ಈ ವೇಳೆ ಮಾಹಿತಿ ತಿಳಿದು ತಡ ರಾತ್ರಿ ಪ್ರಾಂಗಣಕ್ಕೆ ದೌಡಾಯಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರನ್ನು ಭೇಟಿ ಮಾಡಿ ಮಳೆಯಿಂದಾದ ಅಡಚಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಳಿಕ ಭಕ್ತರಿಗೆ ಶ್ರೀಮಠದ ಕಲ್ಯಾಣ‌ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಖುದ್ದು ತಾವೇ ನಿಂತು ಭಕ್ತರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟರು. ವಿಡಿಯೋ ನೋಡಿ. ಮತ್ತಷ್ಟು…

Read More

ಬೆಂಗಳೂರಿನ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸಿ: ಸುಪ್ರೀಂಕೋರ್ಟ್ ನಿರ್ದೇಶನ – Kannada News | GBA Elections to Be Held in June 2026: Supreme Court Orders

ಬೆಂಗಳೂರಿನ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು, ಜನವರಿ 12: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಅಡಿ ರಚನೆಯಾಗಿರುವ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸುದೀರ್ಘ ಸಮಯದಿಂದ ಚಿಂತನೆ ನಡೆಯುತ್ತಲೇ ಇದೆ. ಸುಮಾರು ವರ್ಷಗಳಿಂದ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಯೇ ನಡೆಯದೆ ಪದೇ ಪದೇ ಮುಂದೂಡಿಕೊಂಡು ಬರಲಾಗುತ್ತಿತ್ತು. ಆದರೀಗ ನಗರದ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರ ಹಾಗೂ…

Read More

ನಾಯಕತ್ವ ಬದಲಾದರೂ ಕೋಲಾರ ಕಾಂಗ್ರೆಸ್​ನಲ್ಲಿ ಮುಗಿಯದ ಬಣ ಬಡಿದಾಟ – Kannada News | Clash Erupts Between MLA Kottur Manjunath and Minister K.H. Muniyappa Factions at Kolar Congress Office

ಕೋಲಾರ, ಜೂನ್​​ 14: ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಮಹತ್ವದ ಸಭೆಯು ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ಬಿ.ಕೆ.ಹರಿಪ್ರಸಾದ್​​ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಸಚಿವ ಕೆ.ಹೆಚ್.ಮುನಿಯಪ್ಪ ಬಣಗಳ ನಡುವೆ ಗಲಾಟೆ ನಡೆದಿದೆ. ಶಾಸಕರು ಹಾಗೂ ಇತರ ಹಿರಿಯ ಮುಖಂಡರ ಸಮ್ಮುಖದಲ್ಲೇ ಬಣ ರಾಜಕೀಯದ ಜಗಳ ಬಹಿರಂಗಗೊಂಡಿದೆ. ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕೆ.ಹೆಚ್.ಮುನಿಯಪ್ಪ ಬಣದ ಮಂಜುನಾಥ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್…

Read More

ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಇವತ್ತಿನ ಷೇರು ಮಾರುಕಟ್ಟೆ ಅಲುಗಾಟದಲ್ಲಿ ನಿಶ್ಚಿತ ಠೇವಣಿಗಳು ಹೆಚ್ಚು ಸುರಕ್ಷಿತ, ಹೆಚ್ಚು ಉಪಯುಕ್ತ ಎನಿಸಿವೆ. ಎಫ್​ಡಿಗಳನ್ನು ಇಡಲು ಬ್ಯಾಂಕ್​ಗಳಲ್ಲಿ ವಿವಿಧ ಪ್ಲಾನ್​ಗಳಿವೆ. ಸಹಕಾರಿ ಬ್ಯಾಂಕುಗಳು, ಎನ್​ಬಿಎಫ್​ಸಿಗಳು ಕೂಡ ಫಿಕ್ಸೆಡ್ ಡೆಪಾಸಿಟ್ (Fixed Deposit) ಸ್ಕೀಮ್ಸ್ ಹೊಂದಿವೆ. ಪೋಸ್ಟ್ ಆಫೀಸ್​ಗಳಲ್ಲೂ (Post Office) ಫಿಕ್ಸೆಡ್ ಡೆಪಾಸಿಟ್ ರೀತಿಯ ಟೈಮ್ ಡೆಪಾಸಿಟ್ ಪ್ಲಾನ್​ಗಳಿವೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುವ ಮಂದಿಗೆ ಈ ನಾನಾ ಆಯ್ಕೆಗಳಿವೆ. ಆದರೆ, ಯಾವುದು ಉತ್ತಮ? ಬ್ಯಾಂಕ್ ಎಫ್​ಡಿಗಿಂತ ಪೋಸ್ಟ್ ಆಫೀಸ್​ನಲ್ಲಿ ಹೆಚ್ಚು ಬಡ್ಡಿ ಪ್ರಮುಖ…

Read More

ಮೊದಲ ಪಂದ್ಯದಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್! – Kannada News | Vaibhav Sooryavanshi 1st Indian to be stumped out on his T20I debut

ಟೀಮ್ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿ ಯುಗಾರಂಭವಾಗಿದೆ. ಮ್ಯಾಚೆಂಸ್ಟರ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ಮೂಲಕ ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಾದಾರ್ಪಣೆಯೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಶಕಗಳ ಹಳೆಯ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಈವರೆಗೆ ಯಾರೂ ಮಾಡದ ವಿಶಿಷ್ಟ ಹಾಗೂ ಅಪರೂಪದ ಔಟಿಂಗ್ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಹೀಗೊಂದು ದಾಖಲೆ: ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಈವರೆಗೆ 122 ಆಟಗಾರರು ಆಡಿದ್ದಾರೆ….

Read More

BOB Recruitment 2026: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶ; 86 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Bank of Baroda Recruitment 2026: 86 Manager Posts in C&IC Dept | Apply by July 6

ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗಾವಕಾಶImage Credit source: Pinterest ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಇಲ್ಲಿದೆ. ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ (BOB) ತನ್ನ ಕಾರ್ಪೊರೇಟ್ ಮತ್ತು ಸಾಂಸ್ಥಿಕ ಕ್ರೆಡಿಟ್ (C&IC) ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಒಟ್ಟು ಹುದ್ದೆಗಳ ವಿವರ:…

Read More