ಶಿವಮೊಗ್ಗ: ಲವ್ ವಿಚಾರಕ್ಕೆ ಯುವಕನ ಮೇಲೆ ಡೆಡ್ಲಿ ಅಟ್ಯಾಕ್; ತಲೆಯಲ್ಲೇ ಮಚ್ಚು ಬಿಟ್ಟು ಪರಾರಿ – Kannada News | Machete Attack: Teen Critically Injured in Love Affair Violence
ಶಿವಮೊಗ್ಗ, ಏಪ್ರಿಲ್ 25: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (shivamogga) ಮತ್ತೆ ನೆತ್ತರು ಹರಿದಿದೆ. ಲವ್ (Love) ವಿಚಾರಕ್ಕೆ ಶುರುವಾದ ಜಗಳವೊಂದು ಕೊಲೆ ಯತ್ನದಲ್ಲಿ ಅಂತ್ಯವಾಗಿದ್ದು, 17 ವರ್ಷದ ಯುವಕನ ತಲೆಯನ್ನ ಮಚ್ಚಿನಿಂದ ಸೀಳಿ ವಿಕೃತಿ ಮೆರೆಯಲಾಗಿದೆ. ತಲೆಯಲ್ಲೇ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ನಡೆದಿದ್ದೇನು? ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಲವ್ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿ ಸೊಹೇಲ್ ಎಂಬಾತನಿಗೆ ಯುವತಿಯೊಬ್ಬಳ…