ಪರ್ಫ್ಯೂಮ್, ಸ್ಮಶಾನ ಮೌನ, ಅಸ್ಥಿಪಂಜರ, ಮಗಳ ಶವದೊಂದಿಗೆ ತಂದೆಯ ವಾಸ, ಸಾವು ಮರೆಮಾಚಿದ್ದು ಹೇಗೆ?
ಮೀರತ್, ಏಪ್ರಿಲ್ 13: ಮೀರತ್‌ನ ಬೀದಿಗಳಲ್ಲಿ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ತಿಂಗಳುಗಳಿಂದ ಬಾಗಿಲು ಹಾಕಿದ್ದ ಮನೆಯೊಳಗೆ ಮಗಳ ಹೆಣದೊಂದಿಗೆ ತಂದೆ(Father)ಯೊಬ್ಬರು ವಾಸವಿದ್ದರು ಎಂಬ ಸತ್ಯ ಬಯಲಾದಾಗ ಪೊಲೀಸರೇ ಬೆಚ್ಚಿಬಿದ್ದರು. 34 ವರ್ಷದ ಪ್ರಿಯಾಂಕಾ ಎಂಬಾಕೆಯ ದೇಹವು ಈಗ ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ. ನಾಲ್ಕು ತಿಂಗಳ ಮೌನ ಮತ್ತು ಸುಳ್ಳಿನ ಕತೆ ಪ್ರಿಯಾಂಕಾ ಮತ್ತು ಆಕೆಯ ತಂದೆ ಉದಯ್ ಭಾನ್ ಬಿಸ್ವಾಸ್ ಕಳೆದ ನಾಲ್ಕು ತಿಂಗಳಿನಿಂದ ಅಕ್ಕಪಕ್ಕದ ಮನೆಯವರಿಗೆ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು. ಆತಂಕಗೊಂಡ ಸಂಬಂಧಿಕರು…