NTPC Recruitment 2026: ಎನ್‌ಟಿಪಿಸಿ ನೇಮಕಾತಿ; ಎಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ,55,000ರೂ. ವೇತನ! – Kannada News | NTPC Recruitment 2026: 250 Asst Executive Jobs, Apply by May 7!
ದೇಶದ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎನ್‌ಟಿಪಿಸಿ (NTPC) ಲಿಮಿಟೆಡ್, ಒಟ್ಟು 250 ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಏಪ್ರಿಲ್ 23 ರಿಂದ ಆರಂಭವಾಗಿದ್ದು, ಆಸಕ್ತರು ಮೇ 7 ರೊಳಗೆ ಅಧಿಕೃತ ವೆಬ್‌ಸೈಟ್ careers.ntpc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ದೇಶದ ಪ್ರತಿಷ್ಠಿತ ಸರ್ಕಾರಿ ಕಂಪನಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಎಂಜಿನಿಯರಿಂಗ್ ಪದವೀಧರರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅರ್ಹತಾ ಮಾನದಂಡಗಳ ಕುರಿತು ನೋಡುವುದಾದರೆ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್…