ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು, 21 ಜನರಿಗೆ ಗಾಯ – Kannada News | Russian drone attack on Ukraine Dnipro 4 dead over 21 injured

ಕೈವ್, ಏಪ್ರಿಲ್ 25: ಉಕ್ರೇನಿಯನ್ ನಗರವಾದ ಡ್ನಿಪ್ರೊ ಮೇಲೆ ರಷ್ಯಾದ (Russian Drone Attack) ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿದ್ದಾರೆ. ರಾತ್ರಿಯಿಡೀ ನಡೆದ ದಾಳಿಯಲ್ಲಿ ನಾಶವಾದ ಮನೆಯ ಅವಶೇಷಗಳಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ” ರಷ್ಯಾದ ದಾಳಿಯ ನಂತರ ಡ್ನಿಪ್ರೊದಲ್ಲಿನ ಆಸ್ಪತ್ರೆಗಳಲ್ಲಿ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯನ್ನರು ರಾತ್ರಿಯಿಡೀ ಡ್ನಿಪ್ರೊ, ಇತರೆ ನಗರಗಳು ಮತ್ತು ಸಮುದಾಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದಾಗಿ ಡ್ನಿಪ್ರೊದಾದ್ಯಂತ ಬೆಂಕಿ ಹೊತ್ತಿಕೊಂಡಿತು. ಬೆಂಕಿಯಲ್ಲಿ ಹಲವಾರು ಅಪಾರ್ಟ್​ಮೆಂಟ್ ಕಟ್ಟಡಗಳು, ಕಾಂಪ್ಲೆಕ್ಸ್​ಗಳು ನಾಶವಾದವು. ಒಡೆಸಾ ಪ್ರದೇಶದ ಮೇಲೆ ರಾತ್ರಿಯಿಡೀ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಗಾಯಗೊಂಡರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಶಾಲೆಗೆ ಹೋಗುತ್ತಿದ್ದಾಗ ರಾಜಸ್ಥಾನದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – Kannada News | 15 year Old Girl kidnapped and Physically Harassed in Rajasthan’s Alwar while going school

ಅಲ್ವಾರ್, ಏಪ್ರಿಲ್ 25: ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ 11ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಹುಲ್ ಸೈನಿ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಿ ಈ ಕೃತ್ಯ ಎಸಗಲಾಗಿದೆ.

ಶುಕ್ರವಾರ ರಾತ್ರಿ ಪೊಲೀಸರು ಆರೋಪಿಗಳಲ್ಲಿ ಒಬ್ಬನಾದ 23 ವರ್ಷದ ರಾಹುಲ್ ಸೈನಿಯನ್ನು ಬಂಧಿಸಿದ್ದಾರೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಈ ಘಟನೆಯು ಬಿಜೆಪಿ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ಯಂತ್ರದ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಹೇಳಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ. ಅತ್ಯಾಚಾರ ನಡೆಸಿದ ಆರೋಪಿಯ ಮೊಬೈಲ್ ಫೋನ್‌ನಿಂದ ಹಲವಾರು ಹುಡುಗಿಯರ ಅಶ್ಲೀಲ ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ

ಈ ಪ್ರಕರಣದ ಇತರ ಇಬ್ಬರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಲು ಪೊಲೀಸ್ ತಂಡಗಳು ಪ್ರಯತ್ನಿಸುತ್ತಿವೆ. ಮೂವರೂ ದೌಸಾ ಜಿಲ್ಲೆಯ ಬಸ್ವಾ ಪ್ರದೇಶದ ನಿವಾಸಿಗಳು ಎಂದು ಹೇಳಲಾಗುತ್ತದೆ. ಗುರುವಾರ ಬೆಳಿಗ್ಗೆ ಬಾಲಕಿ ಎಂದಿನಂತೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ನಡೆದುಕೊಂಡು ಶಾಲೆಗೆ ಹೊರಟಳು. ಆಗ ಬೊಲೆರೊ ವಾಹನದಲ್ಲಿ ಬಂದ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ವಾಹನದೊಳಗೆ ಎಳೆದೊಯ್ದರು. ಆರೋಪಿಗಳು ಆಕೆಯ ಕೈಗಳನ್ನು ಕಟ್ಟಿ ಕಣ್ಣುಗಳಿಗೆ ಬಟ್ಟೆ ಕಟ್ಟಿದರು. ದಾರಿಯಲ್ಲಿ ಅವರು ಮತ್ತೊಬ್ಬ ಯುವಕನನ್ನು ಬೊಲೆರೊದಲ್ಲಿ ಕೂರಿಸಿಕೊಂಡರು. ನಂತರ ಮೂವರು ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.

ಅಲ್ಲಿ ಮೂವರು ಆರೋಪಿಗಳು ಆಕೆಯನ್ನು ರೂಂಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ತೆಗೆದಿದ್ದಾರೆ. ಈ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಆಕೆಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ. ಅತ್ಯಾಚಾರ ನಡೆಸಿದ ನಂತರ, ಆರೋಪಿಗಳು ಆಕೆಯನ್ನು ಮತ್ತೆ ಕಾರಿನಲ್ಲಿ ಕೂರಿಸಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿ, ಅಪಹರಿಸಿದ ಸ್ಥಳದ ಬಳಿಯೇ ಬಿಟ್ಟು ಹೋಗಿದ್ದಾರೆ.

ಇದನ್ನೂ ಓದಿ: 41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್​ಎಸ್​ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ?

ಆ ಬಾಲಕಿಯನ್ನು ಬಲವಂತವಾಗಿ ವಾಹನದೊಳಗೆ ಹತ್ತಿಸಿಕೊಂಡಿದ್ದನ್ನು ನೋಡಿದ್ದ ಇತರೆ ವಿದ್ಯಾರ್ಥಿಗಳು ಊರಿನವರಿಗೆ ಈ ವಿಷಯ ತಿಳಿಸಿದ್ದರು. ಹೀಗಾಗಿ, ಆ ಜಾಗದಲ್ಲಿ ಸಾಕಷ್ಟು ಜನ ಸೇರಿ ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅಷ್ಟರಲ್ಲಿ ಆರೋಪಿಗಳು ಆ ಬಾಲಕಿಯನ್ನು ವಾಪಾಸ್ ಅದೇ ಸ್ಥಳಕ್ಕೆ ಬಿಡಲು ಹಿಂತಿರುಗಿದಾಗ ಅಲ್ಲಿ ಸಾಕಷ್ಟು ಜನ ಸೇರಿದ್ದನ್ನು ಕಂಡು ತಮ್ಮ ವಾಹನವನ್ನು ಅಲ್ಲೇ ಬಿಟ್ಟು ಅಲ್ಲಿಂದ ಪರಾರಿಯಾದರು. ಕೋಪಗೊಂಡ ಗ್ರಾಮಸ್ಥರು ಅವರ ವಾಹನಕ್ಕೆ ಬೆಂಕಿ ಹಚ್ಚಿದರು. ಮಾಹಿತಿ ಪಡೆದ ರೈನಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಟ್ಟುಹೋದ ವಾಹನವನ್ನು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ತಂದರು. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರೆದಿದೆ. ಬಂಧಿತ ರಾಹುಲ್​ನ ಮೊಬೈಲ್ ಫೋನ್‌ನಿಂದ ಇತರ ಹುಡುಗಿಯರ ಹಲವಾರು ಅಶ್ಲೀಲ ವೀಡಿಯೊಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಿವಾರ ವಿವಾದ: ಕೆಇಎ ಅಧಿಕಾರಿ ಬಾಯಲ್ಲಿ ಹೇಳಿದ್ದು ಸುತ್ತೋಲೆಯಲ್ಲಿ ಯಾಕಿಲ್ಲ? – Kannada News | Janivara Row: Why KEA Not mentioned about Sacred Thread In guidelines circular

ಬೆಂಗಳೂರು, (ಏಪ್ರಿಲ್ 25): ಸಿಇಟಿ ಪರೀಕ್ಷೆ ವೇಳೆ ಜನಿವಾರ ( Sacred Thread) ಕಟ್ ಮಾಡಿರುವ ವಿವಾದ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾರ್ಥಿಗಳ ಜನಿವಾರ ಕಟ್ ಮಾಡಿದ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್ 299, 302ರಡಿ ಮೊಕದ್ದಮೆ ದಾಖಲಾಗಿದ್ದು, ಈ ದೂರಿನ ಮೇರೆಗೆ ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಾ ಹಾಗೂ ಸುಧಾಕರ್‌ ಅವರನ್ನು ಬಂಧಿಸಲಾಗಿದೆ. ಅಲ್ಲದೇ ಈ ಮೂವರನ್ನು ಸಹ ಕೆಲಸದಿಂದ ಅಮಾನತು ಮಾಡಲಾಗಿದೆ. ಆದ್ರೆ, ಮೇಲ್ನೋಟಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಲಕ್ಷ್ಯಕ್ಕೆ ಕೆಳ ಹಂತದ ಅಧಿಕಾರಿಗಳು ಶಿಕ್ಷೆಗೆ ಗುರಿಯಾದಂತೆ ಕಾಣುತ್ತಿದೆ. ಕಳೆದ ವರ್ಷ ಇದೇ ವಿವಾದ ಬೆಳಕಿಗೆ ಬಂದಿದ್ದರಿಂದ ಈ ಬಾರಿ ಯಾವುದೇ ಕಾರಣಕ್ಕೂ ಜನಿವಾರ ಹಾಗೂ ಕೊರಳಲ್ಲಿ ಹಾಕುವ ಲಿಂಗುವನ್ನು ತೆಗೆಸುವಂತಿಲ್ಲ ಎಂದು ಕೆಇಎ ಅಧಿಕಾರಿಗಳು ಹೇಳಿದ್ದರು. ಆದ್ರೆ, ಅದು ಬಾಯಿ ಮಾತಿಗೆ ಹೇಳಲಾಗಿದೆ ಹೊರತು ಅಧಿಕೃತವಾಗಿ ಸುತ್ತೋಲೆಯಲ್ಲಿ ಇಲ್ಲ. ಕೆಇಎ ಎಡವಟ್ಟನಿಂದಾಗಿಯೇ ಈ ವರ್ಷವೂ ಸಹ ಜನಿವಾರ ವಿವಾದ ಮರುಕಳಿಸಿದ್ದು, ಇಷ್ಟೆಲ್ಲ ರಾದ್ಧಾಂತ ಕಾರವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದ್ದೇನು?

ಇನ್ನು ಈ ವರ್ಷದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ನಗರ ಡಿಸಿಗೆ ಪತ್ರ ಬರೆದಿದೆ.  ವಿದ್ಯಾರ್ಥಿಗಳ ಜನಿವಾರ ತೆಗೆಸದಂತೆ ಸೂಚನೆ ನೀಡಲಾಗಿತ್ತು. ಆದ್ರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನಯಂತೆ ಕಂಡಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಹೇಳಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ: CET ಪರೀಕ್ಷೆಗೆ ವಸ್ತ್ರ ಸಂಹಿತೆ ಏನು ಹೇಳುತ್ತೆ?

ಆದ್ರೆ, ಸಿಇಟಿ ಪರೀಕ್ಷೆ ವೇಳೆ ಯಾವುದನ್ನು ತರಬೇಕು? ಯಾವುದನ್ನು ನಿಷೇಧಿಸಲಾಗಿದೆ ಎನ್ನುವ ಬಗ್ಗೆ ಸುತ್ತೋಲೆ ಹೊರಡಿಸುವ ಕೆಇಎ, ಜನಿವಾರ ಹಾಗೂ ಕೊರಳಲ್ಲಿ ಹಾಕುವ ಲಿಂಗುವನ್ನು ತೆಗೆಸುವಂತಿಲ್ಲ ಎನ್ನುವ ಅಂಶವನ್ನು ಏಕೆ ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ? ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯವಲ್ಲದೇ ಮತ್ತೇನು ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಬಾಯಲ್ಲಿ ಹೇಳಿದ್ದು ಸುತ್ತೋಲೆಯಲ್ಲಿ ಯಾಕಿಲ್ಲ?

ಹೌದು…ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಿವ್ಯ ನಿರ್ಲಕ್ಕ್ಷ್ಯದಿಂದಲೇ ಜನಿವಾರ ವಿವಾದ ಮತ್ತೆ ಮರುಕಳಿಸಿದೆ. ಕೇವಲ ಬಾಯಿಗೆ ಮಾತಲ್ಲಿ ಹೇಳೋದು, ಸೂಚನೆ ಕೊಡುವುದಲ್ಲ. ಅಧಿಕೃತವಾಗಿ ಪ್ರಕಟಿಸುವ ಸುತ್ತೋಲೆಯಲ್ಲಿ ಪರೀಕ್ಷಾರ್ಥಿಗಳ ಜನಿವಾರ, ಕೊರಳಲ್ಲಿ ಹಾಕುವ ಲಿಂಗುವನ್ನು ತೆಗೆಯುವಂತಿಲ್ಲ ಎಂಬ ಅಂಶವನ್ನು ಕೆಇಎ ಉಲ್ಲೇಖಿಸಬಹುದಿತ್ತು. ಆ ವಸ್ತು ನಿಷೇಧ, ಇದು ನಿಷೇಧ ಅಂತೆಲ್ಲಾ ನೂರೆಂಟು ಕಟ್ಟಪ್ಪಣೆಗಳನ್ನು ಹಾಕಿ ಸುತ್ತೋಲೆಯಲ್ಲಿನ್ನು ಹೊರಡಿಸುವ ಕೆಇಎ, ಜನಿವಾರ-ಕೊರಳಿನ ಲಿಂಗು ಬಗ್ಗೆ ಏಕೆ ಉಲ್ಲೇಖಿಸಿಲ್ಲ ಎನ್ನುವುದೇ ಪ್ರಶ್ನೆ.

ಇದನ್ನೂ ಓದಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಜನಿವಾರ ದಂಗಲ್: ವಿವಾದ ಬೆನ್ನಲ್ಲೇ ಮೂವರು ವಶಕ್ಕೆ

ಕಳೆದ ವರ್ಷ ಇದೇ ವಿಚಾರಕ್ಕೆ ದೊಡ್ಡ ರದ್ದಾಂತವಾಗಿತ್ತು.ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಿತ್ತು. ಆದರೂ ಕೆಇಎ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಜನಿವಾರ ಪ್ರಕರಣ ಈ ವರ್ಷವೂ ಸಹ ಮುನ್ನೆಲೆಗೆ ಬಂದಿದ್ದು, ಇದು ಕೆಇಎ ಕಾರ್ಯವೈಖರಿಯ ಹಿಡಿದ ಕನ್ನಡಿಯಾಗಿದೆ. ಅಲ್ಲದೇ ಪ್ರತಿ ವರ್ಷವೂ ಹುಟ್ಟಿಕೊಳ್ಳುವ ಈ ರೀತಿಯ ವಿವಾದಗಳಿಗೆ ಕೆಇಎ ಕಾರಣ. ಹೀಗಾಗಿ ಸರ್ಕಾರ, ಕೇವಲ ಕೆಳ ಹಂತದ ಅಧಿಕಾರಿಗಳು ಅಥವಾ ಪರೀಕ್ಷಾ ಕೇಂದ್ರ ಆಫೀರ್ಸ್​ ಮೇಲೆ ಕ್ರಮಕೈಗೊಂಡು ಕೈತೊಳೆದುಕೊಂಡರೆ ಸಾಲದು, ಯಾವುದೇ ಕಟ್ಟು ನಿಟ್ಟಿನ ಅಧಿಕೃತ ಸುತ್ತೋಲೆಯಲ್ಲಿ ತಿಳಿಸದೇ ನಿರ್ಲಕ್ಷ್ಯ ತೋರಿದ ಸಂಬಂಧಿಸಿದ ಕೆಇಎ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಮನೆ ಯಜಮಾನನಿಗೆ ಬಿಸಿ ಮುಟ್ಟಿದಾಗ ಮಾತ್ರ ಈ ರೀತಿಯ ಪ್ರಕರಣ, ವಿವಾದಗಳು ಮತ್ತೆ ಮತ್ತೆ ಮರುಕಳುಹಿಸುವುದಿಲ್ಲ. ಹಾಗೇ ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ನಾರೋ ಶಿಕ್ಷೆಗೆ ಗುರಿಯಾಗುವುದು ತಪ್ಪಿದಂತಾಗುತ್ತೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್; ವಿಡಿಯೋ ನೋಡಿ – Kannada News | Virat Kohli Shines with 81 as RCB Beats GT in IPL 2026; Bags MoM, Smart TV and Phone!

ಐಪಿಎಲ್ 2026 ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಈ ಆವೃತ್ತಿಯ ಐದನೇ ಗೆಲುವು ದಾಖಲಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಹೀಗಾಗಿ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇದರ ಜೊತೆಗೆ ಅವರಿಗೆ ವಿಶೇಷ ಬಹುಮಾನ ನೀಡಲಾಗಿದೆ.

ವಾಸ್ತವವಾಗಿ ಪಂದ್ಯ ಶ್ರೇಷ್ಠ ವಿರಾಟ್ ಕೊಹ್ಲಿಗೆ ಆರ್‌ಸಿಬಿ ಡ್ರೆಸ್ಸಿಂಗ್ ಕೋಣೆಯಲ್ಲಿ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್‌ಫೋನ್ ಸೇರಿದಂತೆ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪ್ರಶಸ್ತಿಗಳನ್ನು ಆರ್‌ಸಿಬಿ ಪ್ರಾಯೋಜಕರು ಪ್ರದಾನ ಮಾಡಿದ್ದು, ಇದರಲ್ಲಿ ಸುಮಾರು 40,000 ರೂ. ಬೆಲೆಯ 43 ಇಂಚಿನ LED ಸ್ಮಾರ್ಟ್ ಟಿವಿ. ಹಾಗೂ 45,000 ರೂ ಮೌಲ್ಯದ ಸ್ಮಾರ್ಟ್‌ಫೋನ್ ಕೊಹ್ಲಿಗೆ ಬಹುಮಾನವಾಗಿ ಸಿಕ್ಕಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಡಿದ ಕೊನೆಯ ಲೀಗ್ ಪಂದ್ಯ ಇದಾಗಿದ್ದರಿಂದ ಕೊಹ್ಲಿಯ ಇನ್ನಿಂಗ್ಸ್ ವಿಶೇಷವಾಗಿತ್ತು. ಈ ಅರ್ಧಶತಕದೊಂದಿಗೆ, ಕೊಹ್ಲಿ 328 ರನ್‌ಗಳೊಂದಿಗೆ ಐಪಿಎಲ್ 2026 ರಲ್ಲಿ ತಾತ್ಕಾಲಿಕವಾಗಿ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

Source link

ನಿಂಬೆ ರಸ ಹಚ್ಚುವುದರಿಂದ ನಿಜಕ್ಕೂ ಕೂದಲು ಬಿಳಿಯಾಗುತ್ತದೆಯೇ? ಸತ್ಯಾಸತ್ಯತೆ ತಿಳಿಯಿರಿ – Kannada News | Is it true that applying lemon juice turns hair white? know the truth behind it

ನಿಂಬೆ ಹಣ್ಣಿನಲ್ಲಿ (lemon) ವಿಟಮಿನ್‌ ಸಿ, ಆಂಟಿ ಆಕ್ಸಿಡೆಂಟ್‌, ಎಲೆಕ್ಟ್ರೋಲೈಟ್‌ ಅಂಶಗಳಿದ್ದು, ಇದು ದೇಹ ಮತ್ತು ಚರ್ಮವನ್ನು ಆರೋಗ್ಯಯುತವಾಗಿಡಲು ಸಹಕಾರಿ. ಇದೇ ಕಾರಣಕ್ಕೆ ನಿಂಬೆ ರಸವನ್ನು ಸೇವನೆ ಮಾಡಬೇಕು ಅನ್ನೋದು. ನಿಂಬೆ ರಸ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನಿಜ, ಆದ್ರೆ ನಿಂಬೆ ರಸವನ್ನು ಅಪ್ಪಿತಪ್ಪಿಯೂ ಕೂದಲಿಗೆ ಹಚ್ಚಬಾರದು. ಏಕೆಂದರೆ ನಿಂಬೆಯಲ್ಲಿರುವ ಆಮ್ಲೀಯ ಅಂಶವು ಕೂದಲನ್ನು ಬೇಗನೇ ಬಿಳಿಯಾಗಿಸುತ್ತದೆ ಎಂದು ಹಲವರು ಹೇಳುವುದುಂಟು. ಹಾಗಿದ್ದರೆ ನಿಜಕ್ಕೂ ನಿಂಬೆ ರಸ ಕೂದಲನ್ನು ಬಿಳಿಯಾಗಿಸುತ್ತಾ, ತಜ್ಞರು ಈ ಬಗ್ಗೆ ಏನೆನ್ನುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಿಂಬೆ ರಸ ಹಚ್ಚಿದ್ರೆ ಕೂದಲು ಬಿಳಿಯಾಗುತ್ತಾ?

ತಜ್ಞರ ಪ್ರಕಾರ, ಕೂದಲಿಗೆ ನಿಂಬೆ ಹಚ್ಚುವುದರಿಂದ ಕೂದಲು ಬೇಗನೆ ಬಿಳಿಯಾಗುತ್ತದೆ ಎಂಬುದು ಮಿಥ್ಯ.  ನಿಂಬೆಯಲ್ಲಿರುವ ಆಮ್ಲೀಯ ಅಂಶ ಕೂದಲನ್ನು ಬಿಳಿಯಾಗಿಸಲು ಸಾಧ್ಯವಿಲ್ಲ. ನೆತ್ತಿಯ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ನಿಂಬೆ ರಸವನ್ನು ಬಳಸಬಹುದು. ಹೌದು ನಿಂಬೆ ರಸದಲ್ಲಿರುವ ಅಂಶಗಳು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ತಲೆಹೊಟ್ಟು ಮತ್ತು ಸೋಂಕುಗಳನ್ನು ನಿವಾರಿಸುತ್ತದೆ. ನಿಂಬೆ ರಸವು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ನಿಂಬೆ ರಸವನ್ನು ಸರಿಯಾದ ರೀತಿಯಲ್ಲಿ ಹಚ್ಚುವುದು ತುಂಬಾನೇ ಮುಖ್ಯ.

ಕೂದಲಿಗೆ ನಿಂಬೆ ರಸ ಹಚ್ಚುವ ಸರಿಯಾದ ವಿಧಾನ ಯಾವುದು?

ತಜ್ಞರ ಪ್ರಕಾರ, ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹೇಗೆ ಹಚ್ಚಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ, ಅದು ಹಾನಿಯನ್ನುಂಟುಮಾಡಬಹುದು. ಯಾವಾಗಲೂ ನಿಮ್ಮ ಕೂದಲಿಗೆ ನೇರವಾಗಿ ನಿಂಬೆ ರಸವನ್ನು ಹಚ್ಚುವುದನ್ನು ತಪ್ಪಿಸಿ. ನೀವು ನಿಂಬೆ ರಸವನ್ನು ಎಣ್ಣೆ ಅಥವಾ ಅಲೋವೆರಾದಂತಹ ಯಾವುದನ್ನಾದರೂ ಬೆರೆಸಿ ಹಚ್ಚಬಹುದು.

  • ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಕೂದಲಿನ ಸೋಂಕು ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಇದಕ್ಕಾಗಿ, ನಿಂಬೆ ರಸವನ್ನು ತೆಂಗಿನಕಾಯಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಬಹುದು.
  • ನಿಂಬೆ ರಸವನ್ನು ಹರಳೆಣ್ಣೆ ಜೊತೆ ಬೆರೆಸಿ ಕೂದಲಿಗೆ ಹಚ್ಚಬಹುದು. 3-4 ಹನಿ ನಿಂಬೆ ರಸವನ್ನು ಒಂದು ಟೀ ಚಮಚ ಕ್ಯಾಸ್ಟರ್ ಆಯಿಲ್ ಜೊತೆ ಬೆರೆಸಿ ಕೂದಲಿಗೆ ಹಚ್ಚಿ.
  • ನಿಂಬೆ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಅದನ್ನು ನಿಮ್ಮ ನೆತ್ತಿಗೆ ಹಚ್ಚಿ ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
  • ಮೆಂತ್ಯ ಪೇಸ್ಟ್ ಅನ್ನು ನಿಂಬೆ ರಸದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದು ತಲೆಹೊಟ್ಟು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.
  • ತಲೆಹೊಟ್ಟು, ಕಿರಿಕಿರಿ ಮತ್ತು ಶುಷ್ಕತೆಯನ್ನು ತೊಡೆದುಹಾಕಲು ನಿಮ್ಮ ಶಾಂಪೂಗೆ ನಿಂಬೆ ರಸವನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: ಊಟವಾದ ತಕ್ಷಣ ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು

ಕೂದಲಿಗೆ ನಿಂಬೆ ರಸ ಹಚ್ಚುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ನೇರವಾಗಿ ಹಚ್ಚುವುದನ್ನು ನೀವು ತಪ್ಪಿಸಬೇಕು, ಏಕೆಂದರೆ ಇದು ಕೂದಲಿಗೆ ಹಾನಿಯನ್ನುಂಟುಮಾಡಬಹುದು.
  • ಪ್ರತಿದಿನ ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಇದು ತುರಿಕೆಗೆ ಕಾರಣವಾಗಬಹುದು.
  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚುವ ಮೊದಲು ಯಾವಾಗಲೂ ಪ್ಯಾಚ್ ಟೆಸ್ಟ್ ಮಾಡಿ, ಏಕೆಂದರೆ ಅದು ನಿಮ್ಮ ನೆತ್ತಿಯನ್ನು ಕೆರಳಿಸಬಹುದು.
  • ನಿಮ್ಮ ಕೂದಲು ಮತ್ತು ನೆತ್ತಿಗೆ ನಿಂಬೆ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಹಚ್ಚುವುದನ್ನು ತಪ್ಪಿಸಿ, ಏಕೆಂದರೆ ಇದು ನೆತ್ತಿ ಒಣಗಲು ಕಾರಣವಾಗಬಹುದು.
  • ನಿಮ್ಮ ಕೂದಲಿಗೆ ನಿಂಬೆ ರಸವನ್ನು ಹಚ್ಚಲು ಬಯಸಿದರೆ, ನೀವು ಪ್ರತಿ 15-20 ದಿನಗಳಿಗೊಮ್ಮೆ ಹಚ್ಚಿದರೆ ಸಾಕು. ನೆತ್ತಿಯ ಸಮಸ್ಯೆ ಇದ್ದರೆ, ತಜ್ಞರ ಸಲಹೆಯ ಮೇರೆಗೆ ಮಾತ್ರ ನಿಂಬೆ ರಸವನ್ನು ಬಳಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: 3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ – Kannada News | Muzaffarnagar Monkey’s Viral ‘Mother’s Love’: Monkey Hugs Baby for Two Hours

ಉತ್ತರ ಪ್ರದೇಶದ ಮುಜಫರ್ ನಗರದ ಚರಥವಾಲ್ ಪಟ್ಟಣದಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವಿನ ವಿಶಿಷ್ಟ ಬಂಧವನ್ನು ಸಾರುವ ಅಪರೂಪದ ಘಟನೆಯೊಂದು ನಡೆದಿದೆ. ಸ್ಥಳೀಯ ನಿವಾಸಿ ತಹ್ಸೀನ್ ಎಂಬುವವರ ಮನೆಗೆ ನುಗ್ಗಿದ ಮಂಗವೊಂದು, ಅಲ್ಲಿನ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ತನ್ನದೇ ಮಗು ಎಂಬಂತೆ ಸುಮಾರು ಎರಡು ಗಂಟೆಗಳ ಕಾಲ ಗಾಢವಾಗಿ ಅಪ್ಪಿಕೊಂಡಿದೆ. ಮಗುವನ್ನು ಯಾರಿಗೂ ಕೊಡದಂತೆ ಬಿಗಿಯಾಗಿ ಹಿಡಿದುಕೊಂಡ ಮಂಗನ ನಡವಳಿಕೆಯಿಂದ ಮನೆಯವರು ಮತ್ತು ನೆರೆಹೊರೆಯವರಲ್ಲಿ ಮಗುವಿನ ಸುರಕ್ಷತೆಯ ಬಗ್ಗೆ ತೀವ್ರ ಭಯ ವ್ಯಕ್ತವಾಗಿತ್ತು. ಆದರೆ, ಆ ಮಂಗ ಮಗುವಿಗೆ ಯಾವುದೇ ಅಪಾಯ ಮಾಡದೆ, ತಾಯಿಯಂತೆ ಮಮತೆಯಿಂದ ಮುದ್ದಾಡುತ್ತಿರುವ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಅಂತಿಮವಾಗಿ ಮಗು ಸುರಕ್ಷಿತವಾಗಿ ಪೋಷಕರ ಕೈಸೇರಿದ್ದು, ಮಗುವಿನ ಮೇಲಿನ ಮಂಗನ ಈ ‘ಅಮ್ಮನ ಪ್ರೀತಿ’ಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮತ್ತೊಂದು ತಿರುವು ಪಡೆದ ಪಂಚಮಸಾಲಿ ಗುರುಪೀಠ ಸಂಘರ್ಷ: ಶ್ರೀಗಳಿಗೆ ಭಕ್ತರ ಆನೆಬಲ – Kannada News | Panchamasali Gurupeeth conflict takes another turn: devotees support Vachananda Swamiji

ದಾವಣಗೆರೆ, ಏಪ್ರಿಲ್​ 25: ವಚನಾಂದ ಸ್ವಾಮೀಜಿಯ (Vachananda Swamiji) ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. ಮಠದಿಂದ ಉಚ್ಚಾಟನೆ ಆದರೂ ಹಠದಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸ್ವಾಮೀಜಿ ಶಕ್ತಿ ಪ್ರದರ್ಶನಕ್ಕೆ ನಿನ್ನೆ ಹರಿಹರ ಪಂಚಮಸಾಲಿ ಮಠ ವೇದಿಕೆ ಆಗಿತ್ತು. ಸ್ವಾಮೀಜಿಗೆ ಭಕ್ತರ ಬೆಂಬಲ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಟ್ರಸ್ಟಿನವರು, ಇದೀಗ ಲೆಕ್ಕ ನೀಡಲು ಮುಂದಾಗಿದ್ದಾರೆ. ಆದರೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವಿನ ಸಂಘರ್ಷ ಮುಂದುವರೆದಿದೆ.

ಈ ಸಂಘರ್ಷಕ್ಕೆ ಅಸಲಿ ಕಾರಣವೇನು?

ಈ ಸಂಘರ್ಷಕ್ಕೆ ಮೂಲ ಕಾರಣ ಏಪ್ರಿಲ್ 13ರಂದು ನಡೆದ ಆ ಘಟನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠ. ಒಂದು ಕಡೆ ಲೆಕ್ಕ ಕೊಡಿ ಎಂದು ಭಕ್ತರು ಸಂಘರ್ಷಕ್ಕಿಳಿದಿದ್ದರು. ಇನ್ನೊಂದು ಕಡೆ ಟ್ರಸ್ಟನವರು ಪೊಲೀಸ್ ಭದ್ರತೆಯಲ್ಲಿ ಬಂದು ಸಭೆ ನಡೆಸಿ ಮಠದ ವಚನಾನಂದ ಸ್ವಾಮೀಜಿಯನ್ನ ಪೀಠದಿಂದ ಉಚ್ಛಾಟನೆ ಮಾಡಿದ್ದರು. ಇದೇ ವೇಳೆ ಸ್ವಾಮೀಜಿ ಹಾಗೂ ಪೊಲೀಸರ ನಡುವೆ ಸಂಘರ್ಷ ಉಂಟಾಗಿತ್ತು. ಸುಮಾರು 15 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಲೆಕ್ಕ ಕೊಡಿ ಎಂದು ಸ್ವಾಮೀಜಿ ಕಡೆ ಭಕ್ತರು ಆರೋಪಿಸಿದ್ದರು. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಠ ಬಿಟ್ಟು ಸ್ವಾಮೀಜಿ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಭಕ್ತರು ಸ್ವಾಮೀಜಿಯನ್ನ ಬಿಟ್ಟು ಕೊಡಲಿಲ್ಲ. ಹೀಗಾಗಿ ಸ್ವಾಮೀಜಿ ಮಠದಲ್ಲಿಯೇ ಪೂಜೆ ಮಾಡುತ್ತಾ, ಬಂದ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಲೆಕ್ಕ ಕೊಡುತ್ತೇವೆ ಎಂದ ಟ್ರಸ್ಟಿಗಳು

ಇದೆಲ್ಲದರ ಮಧ್ಯೆ ನಿನ್ನೆ ಸುದ್ದಿಗೋಷ್ಠಿ ಮಾಡಿರುವ ಟ್ರಸ್ಟಿಗಳು, 2008ರಲ್ಲಿ ಮಠ ಆರಂಭವಾಗಿದೆ. ಅಲ್ಲಿಂದ 2026 ವರೆಗಿನ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ. ಟ್ರಸ್ಟಿಗಳ ಈ ಹೇಳಿಕೆ ಸದ್ಯ ಅಚ್ಚರಿಗೆ ಕಾರಣವಾಗಿದೆ. ಆದರೆ ತರಾತುರಿಯಲ್ಲಿ ಲೆಕ್ಕ ಪಡೆಯಲ್ಲ. ಬದಲಿಗೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಸ್ವಾಮೀಜಿ ಪರ ಭಕ್ತರಿಂದ ಕೇಳಿ ಬರುತ್ತಿವೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷ: ಡಿಸಿ, ಎಸ್ಪಿಗೆ ದೂರು

ಒಟ್ಟಾರೆ ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವೆ ಸಂಘರ್ಷ ಮುಂದುವರೆದಿದ್ದು, ಇಬ್ಬರು ಸಮಬಲದ ಹೋರಾಟ ನಡೆಸಿದ್ದಾರೆ. ಲೆಕ್ಕಾ ಕೊಡಿ ಅಂದರೆ ಸ್ವಾಮೀಜಿಯನ್ನೇ ಪೀಠದಿಂದ ಉಚ್ಛಾಟನೆ ಮಾಡಿದ್ದ ಧರ್ಮದರ್ಶಿ ಸಮಿತಿ ಇದೀಗ ರಾಗ ಬದಲಾಯಿಸಿದ್ದು, ಏಪ್ರಿಲ್​ 27ಕ್ಕೆ ಲೆಕ್ಕಾ ಕೊಡಲು ಮುಂದಾಗಿದೆ. ಆದರೆ ಇದನ್ನ ಒಪ್ಪಲು ಸ್ವಾಮೀಜಿ ಪರ ಭಕ್ತರು ಸಿದ್ಧಲಿಲ್ಲ. ರಾಜ್ಯಾದ್ಯಂತ ಎಷ್ಟು ಜನ ಭಕ್ತರು ಹಣ ಕೊಟ್ಟಿದ್ದು, ಅವರ ಪಟ್ಟಿ ಕೊಡಿ. ಮೇಲಾಗಿ ಲೆಕ್ಕ ಕೊಡುವ ಮೊದಲು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಪ್ರಕರಣ ನೀಡಿ ಎಂದು ಪಟ್ಟುಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್ – Kannada News | Diganth Manchale said he is not getting enough movie offers planning to quit acting

ನಟ ದಿಗಂತ್ (Diganth) ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟ. ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟಿ ಸಮಂತಾರ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿಯೂ ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಮಗೆ ಸಹ ಅವಕಾಶಗಳ ಕೊರತೆ ಕಾಡುತ್ತಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವಾರು ನಿರ್ಮಾಪಕರು ಸಿನಿಮಾ ಮಾಡಲು ಭಯ ಪಡುತ್ತಿದ್ದಾರೆ. ಸಿನಿಮಾಗಳು ಗೆಲ್ಲದಂತೆ ಆಗಿವೆ. ಒಟಿಟಿಗಳಂತೂ ಕನ್ನಡ ಸಿನಿಮಾಗಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಸ್ವತಃ ನನಗೆ ಅವಕಾಶಗಳ ಕೊರತೆ ಎದುರಾಗಿದ್ದು, ನಟನೆ ಬಿಟ್ಟು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳೋಣ ಎನಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ:ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

‘ಆರು ತಿಂಗಳ ಹಿಂದೆ ಎರಡು ನಿರ್ಮಾಪಕರು ಸಿನಿಮಾ ಮಾಡೋಣ ಎಂದು ಬಂದರು. ಆದರೆ ಅದಾದ ಮೇಲೆ ಇಲ್ಲ ಈಗ ಸಮಯ ಸರಿಯಾಗಿಲ್ಲ ಈಗ ಬೇಡ ಎಂದರು. ಯಾವ ಮಟ್ಟಿಗೆ ಪರಿಸ್ಥಿತಿ ಆಗಿದೆಯೆಂದರೆ. ನಂದಿ ಬೆಟ್ಟದ ಸಮೀಪ ಗೇಟೆಡ್ ಕಮ್ಯೂನಿಟಿಯಲ್ಲಿ ನನ್ನ ಒಂದು ಮನೆ ಇತ್ತು. ಅದನ್ನು ಬಾಡಿಗೆ ಕೊಟ್ಟೆ, ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವಂತಾಗಿತ್ತು. ತೀರ್ಥಹಳ್ಳಿಗೆ ವಾಪಸ್ಸಾಗಿ, ಅಲ್ಲಿ ಕೃಷಿ ಮಾಡೋಣ, ನಟನೆ ಸಾಕು ಎಂದು ನಿರ್ಧರಿಸಿದ್ದೆ’ ಎಂದು ದಿಗಂತ್ ಹೇಳಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಮಾಡಲು ಮುಂದೆ ಬರುವವರ ಸಂಖ್ಯೆಯೇ ಕಡಿಮೆ ಆಗಿಬಿಟ್ಟಿದೆ. ಎಲ್ಲರಿಗೂ ಆತಂಕ ಇದೆ. ಚಿತ್ರರಂಗದಲ್ಲಿ ಯಾಕೆ ಯಶಸ್ಸಿನ ಸಂಖ್ಯೆ ಕಡಿಮೆ ಆಯ್ತೋ ತಿಳಿಯುತ್ತಿಲ್ಲ’ ಎಂದಿದ್ದಾರೆ. ದಿಗಂತ್ ಪ್ರಸ್ತುತ ‘ರುದ್ರ ಕಾಲ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲಿ ಸಮಂತಾ ಋತ್ ಪ್ರಭು ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ತೆಲುಗಿನಲ್ಲಿ ತುಸು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ ನಟ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವ ಅಭ್ಯಾಸವಿದ್ಯಾ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ – Kannada News | Walking on Empty Stomach in Hot Weather: Do’s and Don’ts

ದೇಶದ ಹಲವು ಭಾಗಗಳಲ್ಲಿ ಬೇಸಿಗೆ ಶಾಖ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಬೇಸಿಗೆ ಎಲ್ಲಾ ಸಮಯದ ಹಾಗಲ್ಲ. ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ವಾಕ್ (Walking) ಮಾಡುವುದು ಸುರಕ್ಷಿತವೇ, ಆರೋಗ್ಯ ತಜ್ಞರ ಅಭಿಪ್ರಾಯವೇನು, ಯಾರು ಹೆಚ್ಚು ಅಪಾಯದಲ್ಲಿದ್ದಾರೆ, ಹೀಗೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ವಾಕ್ ಸುರಕ್ಷಿತವೇ?

ತಜ್ಞರು ಹೇಳುವಂತೆ, ಇದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದವರು ಮತ್ತು ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡಬಹುದು. ಆದರೆ, ಎಲ್ಲರಿಗೂ ಇದು ಸೂಕ್ತವಾಗಿರುವುದಿಲ್ಲ. ವಾಕ್ ಹೋದಾಗ ತುಂಬಾ ಆಯಾಸ, ದಣಿವು ಕಂಡುಬರುತ್ತಿದ್ದರೆ ವೈದ್ಯರ ಸಂಪರ್ಕ ಮಾಡಿ.

ಯಾರು ಎಚ್ಚರಿಕೆ ವಹಿಸಬೇಕು?

ಮಧುಮೇಹ (ಡಯಾಬಿಟೀಸ್) ಇರುವವರು ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಅಕಸ್ಮಾತ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಇದು ತಲೆಸುತ್ತು ಅಥವಾ ದುರ್ಬಲತೆಯನ್ನು ಉಂಟುಮಾಡಬಹುದು. ಇಂತಹವರು ಬೆಳಿಗ್ಗೆ ಸ್ವಲ್ಪ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು. ಉದಾಹರಣೆಗೆ ನೆನೆಸಿದ ಕಡಲೆ ತಿಂದು ವಾಕ್‌ಗೆ ಹೋಗುವುದು ಉತ್ತಮ.

ಇದನ್ನೂ ಓದಿ: ಬೆಳಗಿನ ನಡಿಗೆ ಅಥವಾ ಊಟದ ನಂತರದ ನಡಿಗೆ ಯಾವುದು ಉತ್ತಮ?

ಬೇಸಿಗೆಯಲ್ಲಿ ಏಕೆ ಹೆಚ್ಚಿನ ಜಾಗ್ರತೆ ಅಗತ್ಯ?

ಬೇಸಿಗೆಯಲ್ಲಿ ಹೆಚ್ಚು ಬೆವರು ಬರುತ್ತದೆ, ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿರುವಾಗ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ. ತಲೆನೋವು, ದಣಿವು ಮತ್ತು ಡಿಹೈಡ್ರೇಶನ್ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ವಾಕ್‌ಗೆ ಹೊರಡುವ ಮೊದಲು ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಜೊತೆಗೆ ಬೆಳಗ್ಗೆ 5ರಿಂದ 6 ಗಂಟೆಯೊಳಗೆ ವಾಕ್ ಮಾಡುವುದು ಉತ್ತಮ. ನಂತರ ಸೂರ್ಯನ ತಾಪಮಾನ ಹೆಚ್ಚುತ್ತಾ ಹೋಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ತಿಂಗಳಿಂದ ಮುಚ್ಚಿದ್ದ ಇರಾನ್​ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭ – Kannada News | Iran Reopens Tehran International Airport Resumes commercial Flights After 2 Month War

ಟೆಹ್ರಾನ್, ಏಪ್ರಿಲ್ 25: ಸುಮಾರು 2 ತಿಂಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷ ಆರಂಭವಾದ ನಂತರ ಇರಾನ್ (Iran) ಇಂದು ಮೊದಲ ಬಾರಿಗೆ ಟೆಹ್ರಾನ್‌ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನು ಪುನರಾರಂಭಿಸಿತು. ಟೆಹ್ರಾನ್​ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ತಾನ್‌ಬುಲ್, ಮಸ್ಕತ್ ಮತ್ತು ಮದೀನಾಗೆ ವಿಮಾನಗಳು ಹೊರಟಿವೆ. ಅಮೆರಿಕದೊಂದಿಗೆ ಕದನ ವಿರಾಮದ ನಂತರ ಇರಾನ್ ಈ ತಿಂಗಳ ಆರಂಭದಲ್ಲಿ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆದಿತ್ತು. ಇದು 2 ದೇಶಗಳ ನಡುವಿನ ಹಗೆತನವನ್ನು ಕೊನೆಗೊಳಿಸಿತು.

ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ಬಂದ ನಂತರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದೊಂದಿಗೆ 2 ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಇರಾನ್ ನಿಯೋಗವು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ಮುಂದುವರಿಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಮೆರಿಕದ ರಾಯಭಾರಿಗಳು ಇಂದು ಇಸ್ಲಾಮಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ. ಟೆಹ್ರಾನ್‌ನೊಂದಿಗೆ ಕದನ ವಿರಾಮ ಮಾತುಕತೆಗಳನ್ನು ಪುನರುಜ್ಜೀವನಗೊಳಿಸುವ ಹೊಸ ಪ್ರಯತ್ನದಲ್ಲಿ ಡೊನಾಲ್ಡ್ ಟ್ರಂಪ್ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಶ್ವೇತಭವನ ದೃಢಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ

ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಸಂಘರ್ಷಕ್ಕೆ ಕಾರಣವಾಗಿತ್ತು. ಅದಾಗಿ 2 ತಿಂಗಳವರೆಗೆ ಯುದ್ಧ ಮುಂದುವರೆದಿತ್ತು. ಇದರಿಂದ ಇರಾನ್‌ನ ವಾಯುಪ್ರದೇಶವು ಮುಚ್ಚಲ್ಪಟ್ಟಿತ್ತು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿತ್ತು.

ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮದ ವಿಸ್ತರಣೆಯನ್ನು ಘೋಷಿಸಿದ ನಂತರ ರಾಜತಾಂತ್ರಿಕತೆಗೆ ಹೆಚ್ಚಿನ ಸಮಯಕ್ಕಾಗಿ ಪಾಕಿಸ್ತಾನ ಮನವಿ ಮಾಡಿತ್ತು. ಇದಾದ ನಂತರ ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ಅನ್ನು ಮಾತುಕತೆಗೆ ಮತ್ತೆ ಒಟ್ಟು ಸೇರಿಸಲು ಪ್ರಯತ್ನ ಮಾಡುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:20 pm, Sat, 25 April 26

Source link

Exit mobile version