ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್ – Kannada News | Diganth Manchale said he is not getting enough movie offers planning to quit acting

ನಟ ದಿಗಂತ್ (Diganth) ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟ. ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟಿ ಸಮಂತಾರ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿಯೂ ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಮಗೆ ಸಹ ಅವಕಾಶಗಳ ಕೊರತೆ ಕಾಡುತ್ತಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವಾರು ನಿರ್ಮಾಪಕರು ಸಿನಿಮಾ ಮಾಡಲು ಭಯ ಪಡುತ್ತಿದ್ದಾರೆ. ಸಿನಿಮಾಗಳು ಗೆಲ್ಲದಂತೆ ಆಗಿವೆ. ಒಟಿಟಿಗಳಂತೂ ಕನ್ನಡ ಸಿನಿಮಾಗಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಸ್ವತಃ ನನಗೆ ಅವಕಾಶಗಳ ಕೊರತೆ ಎದುರಾಗಿದ್ದು, ನಟನೆ ಬಿಟ್ಟು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳೋಣ ಎನಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ:ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

‘ಆರು ತಿಂಗಳ ಹಿಂದೆ ಎರಡು ನಿರ್ಮಾಪಕರು ಸಿನಿಮಾ ಮಾಡೋಣ ಎಂದು ಬಂದರು. ಆದರೆ ಅದಾದ ಮೇಲೆ ಇಲ್ಲ ಈಗ ಸಮಯ ಸರಿಯಾಗಿಲ್ಲ ಈಗ ಬೇಡ ಎಂದರು. ಯಾವ ಮಟ್ಟಿಗೆ ಪರಿಸ್ಥಿತಿ ಆಗಿದೆಯೆಂದರೆ. ನಂದಿ ಬೆಟ್ಟದ ಸಮೀಪ ಗೇಟೆಡ್ ಕಮ್ಯೂನಿಟಿಯಲ್ಲಿ ನನ್ನ ಒಂದು ಮನೆ ಇತ್ತು. ಅದನ್ನು ಬಾಡಿಗೆ ಕೊಟ್ಟೆ, ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವಂತಾಗಿತ್ತು. ತೀರ್ಥಹಳ್ಳಿಗೆ ವಾಪಸ್ಸಾಗಿ, ಅಲ್ಲಿ ಕೃಷಿ ಮಾಡೋಣ, ನಟನೆ ಸಾಕು ಎಂದು ನಿರ್ಧರಿಸಿದ್ದೆ’ ಎಂದು ದಿಗಂತ್ ಹೇಳಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಮಾಡಲು ಮುಂದೆ ಬರುವವರ ಸಂಖ್ಯೆಯೇ ಕಡಿಮೆ ಆಗಿಬಿಟ್ಟಿದೆ. ಎಲ್ಲರಿಗೂ ಆತಂಕ ಇದೆ. ಚಿತ್ರರಂಗದಲ್ಲಿ ಯಾಕೆ ಯಶಸ್ಸಿನ ಸಂಖ್ಯೆ ಕಡಿಮೆ ಆಯ್ತೋ ತಿಳಿಯುತ್ತಿಲ್ಲ’ ಎಂದಿದ್ದಾರೆ. ದಿಗಂತ್ ಪ್ರಸ್ತುತ ‘ರುದ್ರ ಕಾಲ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲಿ ಸಮಂತಾ ಋತ್ ಪ್ರಭು ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ತೆಲುಗಿನಲ್ಲಿ ತುಸು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ ನಟ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವ ಅಭ್ಯಾಸವಿದ್ಯಾ? ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ – Kannada News | Walking on Empty Stomach in Hot Weather: Do’s and Don’ts

ದೇಶದ ಹಲವು ಭಾಗಗಳಲ್ಲಿ ಬೇಸಿಗೆ ಶಾಖ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡುವವರು ಕೆಲವು ಸಲಹೆಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಏಕೆಂದರೆ ಬೇಸಿಗೆ ಎಲ್ಲಾ ಸಮಯದ ಹಾಗಲ್ಲ. ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ವಾಕ್ (Walking) ಮಾಡುವುದು ಸುರಕ್ಷಿತವೇ, ಆರೋಗ್ಯ ತಜ್ಞರ ಅಭಿಪ್ರಾಯವೇನು, ಯಾರು ಹೆಚ್ಚು ಅಪಾಯದಲ್ಲಿದ್ದಾರೆ, ಹೀಗೆ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ವಾಕ್ ಸುರಕ್ಷಿತವೇ?

ತಜ್ಞರು ಹೇಳುವಂತೆ, ಇದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದವರು ಮತ್ತು ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ವಾಕ್ ಮಾಡಬಹುದು. ಆದರೆ, ಎಲ್ಲರಿಗೂ ಇದು ಸೂಕ್ತವಾಗಿರುವುದಿಲ್ಲ. ವಾಕ್ ಹೋದಾಗ ತುಂಬಾ ಆಯಾಸ, ದಣಿವು ಕಂಡುಬರುತ್ತಿದ್ದರೆ ವೈದ್ಯರ ಸಂಪರ್ಕ ಮಾಡಿ.

ಯಾರು ಎಚ್ಚರಿಕೆ ವಹಿಸಬೇಕು?

ಮಧುಮೇಹ (ಡಯಾಬಿಟೀಸ್) ಇರುವವರು ಖಾಲಿ ಹೊಟ್ಟೆಯಲ್ಲಿ ವಾಕ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಅಕಸ್ಮಾತ್ ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಇದು ತಲೆಸುತ್ತು ಅಥವಾ ದುರ್ಬಲತೆಯನ್ನು ಉಂಟುಮಾಡಬಹುದು. ಇಂತಹವರು ಬೆಳಿಗ್ಗೆ ಸ್ವಲ್ಪ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕು. ಉದಾಹರಣೆಗೆ ನೆನೆಸಿದ ಕಡಲೆ ತಿಂದು ವಾಕ್‌ಗೆ ಹೋಗುವುದು ಉತ್ತಮ.

ಇದನ್ನೂ ಓದಿ: ಬೆಳಗಿನ ನಡಿಗೆ ಅಥವಾ ಊಟದ ನಂತರದ ನಡಿಗೆ ಯಾವುದು ಉತ್ತಮ?

ಬೇಸಿಗೆಯಲ್ಲಿ ಏಕೆ ಹೆಚ್ಚಿನ ಜಾಗ್ರತೆ ಅಗತ್ಯ?

ಬೇಸಿಗೆಯಲ್ಲಿ ಹೆಚ್ಚು ಬೆವರು ಬರುತ್ತದೆ, ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿರುವಾಗ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ. ತಲೆನೋವು, ದಣಿವು ಮತ್ತು ಡಿಹೈಡ್ರೇಶನ್ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ವಾಕ್‌ಗೆ ಹೊರಡುವ ಮೊದಲು ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ. ಜೊತೆಗೆ ಬೆಳಗ್ಗೆ 5ರಿಂದ 6 ಗಂಟೆಯೊಳಗೆ ವಾಕ್ ಮಾಡುವುದು ಉತ್ತಮ. ನಂತರ ಸೂರ್ಯನ ತಾಪಮಾನ ಹೆಚ್ಚುತ್ತಾ ಹೋಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ತಿಂಗಳಿಂದ ಮುಚ್ಚಿದ್ದ ಇರಾನ್​ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭ – Kannada News | Iran Reopens Tehran International Airport Resumes commercial Flights After 2 Month War

ಟೆಹ್ರಾನ್, ಏಪ್ರಿಲ್ 25: ಸುಮಾರು 2 ತಿಂಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷ ಆರಂಭವಾದ ನಂತರ ಇರಾನ್ (Iran) ಇಂದು ಮೊದಲ ಬಾರಿಗೆ ಟೆಹ್ರಾನ್‌ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನು ಪುನರಾರಂಭಿಸಿತು. ಟೆಹ್ರಾನ್​ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ತಾನ್‌ಬುಲ್, ಮಸ್ಕತ್ ಮತ್ತು ಮದೀನಾಗೆ ವಿಮಾನಗಳು ಹೊರಟಿವೆ. ಅಮೆರಿಕದೊಂದಿಗೆ ಕದನ ವಿರಾಮದ ನಂತರ ಇರಾನ್ ಈ ತಿಂಗಳ ಆರಂಭದಲ್ಲಿ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆದಿತ್ತು. ಇದು 2 ದೇಶಗಳ ನಡುವಿನ ಹಗೆತನವನ್ನು ಕೊನೆಗೊಳಿಸಿತು.

ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ಬಂದ ನಂತರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದೊಂದಿಗೆ 2 ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಇರಾನ್ ನಿಯೋಗವು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ಮುಂದುವರಿಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಮೆರಿಕದ ರಾಯಭಾರಿಗಳು ಇಂದು ಇಸ್ಲಾಮಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ. ಟೆಹ್ರಾನ್‌ನೊಂದಿಗೆ ಕದನ ವಿರಾಮ ಮಾತುಕತೆಗಳನ್ನು ಪುನರುಜ್ಜೀವನಗೊಳಿಸುವ ಹೊಸ ಪ್ರಯತ್ನದಲ್ಲಿ ಡೊನಾಲ್ಡ್ ಟ್ರಂಪ್ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಾರೆ ಎಂದು ಶ್ವೇತಭವನ ದೃಢಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ

ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಸಂಘರ್ಷಕ್ಕೆ ಕಾರಣವಾಗಿತ್ತು. ಅದಾಗಿ 2 ತಿಂಗಳವರೆಗೆ ಯುದ್ಧ ಮುಂದುವರೆದಿತ್ತು. ಇದರಿಂದ ಇರಾನ್‌ನ ವಾಯುಪ್ರದೇಶವು ಮುಚ್ಚಲ್ಪಟ್ಟಿತ್ತು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿತ್ತು.

ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮದ ವಿಸ್ತರಣೆಯನ್ನು ಘೋಷಿಸಿದ ನಂತರ ರಾಜತಾಂತ್ರಿಕತೆಗೆ ಹೆಚ್ಚಿನ ಸಮಯಕ್ಕಾಗಿ ಪಾಕಿಸ್ತಾನ ಮನವಿ ಮಾಡಿತ್ತು. ಇದಾದ ನಂತರ ಪಾಕಿಸ್ತಾನವು ಅಮೆರಿಕ ಮತ್ತು ಇರಾನ್ ಅನ್ನು ಮಾತುಕತೆಗೆ ಮತ್ತೆ ಒಟ್ಟು ಸೇರಿಸಲು ಪ್ರಯತ್ನ ಮಾಡುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:20 pm, Sat, 25 April 26

Source link

ಬೆಂಗಳೂರಿನ ಬಿಇಎಂಎಲ್​ ಘಟಕಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಮೆಟ್ರೋ ಬೋಗಿಗಳ ಪರಿಶೀಲನೆ​​​ – Kannada News | Bangaluru: Ashwini Vaishnaw Inspects BEML Metro Coaches for Pink Line

ಬಿಇಎಂಎಲ್​ ಘಟಕಕ್ಕೆ ಸಚಿವ ಅಶ್ವಿನಿ ವೈಷ್ಣವ್ ಭೇಟಿImage Credit source: pib twitter

ಬೆಂಗಳೂರು, ಏಪ್ರಿಲ್​ 25: ನಗರದ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಘಟಕಕ್ಕೆ ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw)  ಶನಿವಾರ ಭೇಟಿ ನೀಡಿದರು. ಅಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು. ಜೊತೆಗೆ ಬಿಇಎಂಎಲ್​​ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಬಿಇಎಂಎಲ್​ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗಕ್ಕಾಗಿ ಬಿಇಎಂಎಲ್​ ಚಾಲಕ ರಹಿತ ಎಂಜಿನ್​​​ ರೈಲು ಕೋಚ್​ಗಳನ್ನು ನಿರ್ಮಿಸುತ್ತಿದೆ. ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್​​ಗಳನ್ನು, ಮೇನಲ್ಲಿ ಓಪನ್ ಮಾಡಲು ಬಿಎಂಆರ್​​ಸಿಎಲ್​​ ತಯಾರಿ ನಡೆಸಿದೆ. ಆದರೆ ಟೆಸ್ಟಿಂಗ್ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ, ಓಪನ್ ‌ಆಗುವುದು ಡೌಟ್ ಎನ್ನಲಾಗುತ್ತಿದೆ.

PIB ಟ್ವಿಟ್​​

ಜೂನ್ ಅಥವಾ ಜುಲೈನಲ್ಲಿ ಈ ಮಾರ್ಗ ಓಪನ್ ಆಗಲಿದೆ ಎನ್ನಲಾಗುತ್ತಿದೆ. ಪ್ರತಿ ಮಾರ್ಗ ಓಪನ್ ಮಾಡುವ ವೇಳೆ ರೈಲು ಇರುತ್ತಿರಲಿಲ್ಲ, ಆದರೆ ಈ ಬಾರಿ ಪಿಂಕ್ ಲೈನ್​​ಗಾಗಿ ಈಗಾಗಲೇ ಬಿಇಎಂಎಲ್​​ನಿಂದ 5 ರೈಲುಗಳು ಬಂದಿದ್ದರು, ಈ ಬಾರಿ ಟೆಸ್ಟಿಂಗ್ ಕೆಲಸ ಮುಗಿಯದ ಹಿನ್ನೆಲೆ, ಮೆಟ್ರೋ ವಿಳಂಬ ಆಗುತ್ತಿದೆ. ಪಿಂಕ್‌ ಲೈನ್​ಗಾಗಿ ಒಟ್ಟು ಬಿಇಎಂಎಲ್​​ನಲ್ಲಿ 23 ರೈಲುಗಳಿಗೆ ಆರ್ಡರ್ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಖಾಸಗಿ ಕಂಪನಿ ವಿಭಿನ್ನ ಪ್ಲಾನ್: ಮೆಟ್ರೋ ಬಳಸುವ ಉದ್ಯೋಗಿಗಳಿಗೆ ಸಿಗಲಿದೆ ತಿಂಗಳಿಗೆ 2,000 ರೂ!

ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್​​ಗಳನ್ನು ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳಿವೆ. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​ ಆಗಲಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

DC vs PBKS IPL 2026 Live Score: ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ – Kannada News | Delhi Capitals vs Punjab Kings IPL 2026 Live Cricket Score DC vs PBKS Match on 25th April latest news in Kannada

  • 25 Apr 2026 03:09 PM (IST)

    DC vs PBKS IPL 2026: ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI

    ಶ್ರೇಯಸ್ ಅಯ್ಯರ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯ್​ಕುಮಾರ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

  • 25 Apr 2026 03:08 PM (IST)

    DC vs PBKS IPL 2026: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI

    ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಸಮೀರ್ ರಿಜ್ವಿ, ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

  • 25 Apr 2026 03:03 PM (IST)

    DC vs PBKS IPL 2026: ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Source link

    ಅತ್ತೆ ಮಗಳ ಜೊತೆ ಸರಸ, ಬೇರೊಬ್ಬಳ ಜತೆ ಸಂಸಾರ: ಇದೇನಿದು ವಿದ್ಯೆ ಕಲಿಸುವ ಗುರುವಿನ ಆಟ? – Kannada News | A Government Teacher Cheating His niece after engagement at koppal

    ಕೊಪ್ಪಳ, (ಏಪ್ರಿಲ್ 25): ವಿದ್ಯೆ ಕಲಿಸಬೇಕಾದ ಗುರುವೇ ಇಲ್ಲಿ ಕಾಮಪಿಶಾಚಿಯಾಗಿದ್ದಾನೆ. ಮದುವೆಯಾಗುವುದಾಗಿ (Marriage)  ನಂಬಿಸಿ ಸ್ವಂತ ಅತ್ತೆ ಮಗಳನ್ನೇ ಐದು ವರ್ಷಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಈಗ ಕೈಕೊಟ್ಟಿದ್ದಾನೆ. ಅಲ್ಲದೇ ಮತ್ತೊಬ್ಬಳ ಜೊತೆ ಮದುವೆಯಾಗಿದ್ದಾನೆ. ಹೌದು…ಕೊಪ್ಪಳ (Koppal) ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಬಸವರಾಜ ಎನ್ನುವ ಸರ್ಕಾರಿ ಶಿಕ್ಷಕ, ಅತ್ತೆ ಮಗಳ ಜೊತೆ ಹಿರಿಯರ ಸಮ್ಮುಖದಲ್ಲೇ ನಿಶ್ಚಿತಾರ್ಥ (engagement) ಮಾಡಿಕೊಂಡಿದ್ದ. ಆದ್ರೆ, ಇದೀಗ ಬಸವರಾಜ ಮತ್ತೋರ್ವಳ ಜೊತೆ ಮದುವೆಯಾಗಿದ್ದು, ವಿವಾಹ ನೋಂದಣಿ ಪತ್ರವನ್ನು ಅತ್ತೆ ಮಗಳಿಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲದ ಯುವತಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    ಸರಕಾರಿ ಶಿಕ್ಷಕನಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಬಸವರಾಜ ಹರಿಜನ್ ಎಂಬಾತ ತನ್ನ ನೈತಿಕತೆಯನ್ನೇ ಮರೆತು ವರ್ತಿಸಿದ್ದಾನೆ. ಹುಲಸನಟ್ಟಿ ಮೂಲದ ಯುವತಿ ಕರೆಮ್ಮಾ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ ಬಸವರಾಜನ ಜೊತೆ ಸಂಪರ್ಕವಿತ್ತು. ಸ್ವಂತ ಅತ್ತೆ ಮಗ ಎನ್ನುವ ಕಾರಣಕ್ಕೆ ಯುವತಿ ಆತನನ್ನು ಕುರುಡಾಗಿ ನಂಬಿದ್ದಳು. ನೌಕರಿ ಸಿಕ್ಕ ತಕ್ಷಣ ಮದುವೆಯಾಗುವುದಾಗಿ ನಂಬಿಸಿದ್ದ ಬಸವರಾಜ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇಷ್ಟೇ ಅಲ್ಲದೆ, ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ಆದರೆ, ಯಾವಾಗ ಸರಕಾರಿ ಶಿಕ್ಷಕನ ನೌಕರಿ ಭದ್ರವಾಯಿತೋ, ಆಗ ಈತನ ಬುದ್ಧಿ ಬದಲಾಗಿದೆ. ಪ್ರೀತಿಸಿದ ಅತ್ತೆ ಮಗಳನ್ನು ನಡುನೀರಲ್ಲಿ ಬಿಟ್ಟು, ರತ್ನವ್ವ ಎಂಬ ಯುವತಿಯೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾನೆ.

    ಇದನ್ನೂ ಓದಿ: ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

    ಮೋಸ ಮಾಡಿದ್ದಷ್ಟೇ ಅಲ್ಲದೆ ಬಸವರಾಜ, ರತ್ನವ್ವಳೊಂದಿಗೆ ತಾನು ಮಾಡಿಕೊಂಡ ಮದುವೆಯ ನೋಂದಣಿ ಪತ್ರವನ್ನು ಸಂತ್ರಸ್ತ ಯುವತಿಯ ಮನೆಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮತ್ತು ಆಕೆಯ ಪೋಷಕರು ಈಗ ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹಿರಿಯರ ಸಮ್ಮುಖದಲ್ಲಿ ನಿಶ್ವಯ ಮಾಡಿಕೊಂಡು ಇದೀಗ ಮತ್ತೊಂದು ಮದುವೆಯಾಗಿರುವ ಬಸವರಾಜ್ ಗೆ ತಕ್ಕ ಶಿಕ್ಷೆ ಆಗಬೇಕು ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ಅಮೆಜಾನ್ ಎಚ್ಚರಿಕೆ ನಡುವೆಯೂ ‘ದೃಶ್ಯಂ 3’ ಚಿತ್ರಕ್ಕೆ 100 ಕೋಟಿ ಹೂಡಿದ ಪೆನ್ ಸ್ಟುಡಿಯೋ – Kannada News | Pen Studios invest 100 crore rs on Mohanlal starrer Drishyam 3 movie

    ಮೋಹನ್​​ಲಾಲ್ (Mohanlal) ನಟನೆಯ ‘ದೃಶ್ಯಂ’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ದೃಶ್ಯಂ 3’ ಬಿಡುಗಡೆಗೆ ಬಹುತೇಕ ರೆಡಿಯಾಗಿದೆ. ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸರಣಿ ಆಗಿರುವ ‘ದೃಶ್ಯಂ’ನ ಮೂರನೇ ಭಾಗವನ್ನು ಈ ಸರಣಿಯ ಕೊನೆಯ ಭಾಗ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ಭಾರಿ ಬೇಡಿಕೆ ಇದೆ. ‘ದೃಶ್ಯಂ 2’ ಸಿನಿಮಾ ಕೋವಿಡ್ ಸಮಯದಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಈಗ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮೊದಲೇ ಸಿನಿಮಾಕ್ಕೆ ಕೆಲವು ಕಾನೂನು ಸಂಕಷ್ಟಗಳು ಎದುರಾಗಿವೆ. ಆದರೂ ಸಹ ಹಲವು ಹೂಡಿಕೆದಾರರು ಸಿನಿಮಾದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

    ಜಯಂತಿಲಾಲ್ ಗಡ ಅವರ ನೇತೃತ್ವದ ಪೆನ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯು ಮೋಹನ್‌ಲಾಲ್ ಅವರ ‘ದೃಶ್ಯಂ 3’ ಚಿತ್ರದ ಮೇಲೆ 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದಾಗಿದೆ. ಈ ಹಿಂದೆ ‘ದೃಶ್ಯಂ 2’ ಚಿತ್ರವನ್ನು ನೇರವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಚಿತ್ರಮಂದಿರಗಳ ಮಾಲೀಕರು ಅಸಮಾಧಾನಗೊಂಡಿದ್ದರು. ಈಗ ಮೂರನೇ ಭಾಗದ ಹಕ್ಕುಗಳ ವಿಚಾರವಾಗಿ ಅಮೆಜಾನ್ ಮತ್ತು ನಿರ್ಮಾಣ ಸಂಸ್ಥೆಯ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಅಥವಾ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಇದರ ನಡುವೆಯೂ ಸಹ ಪೆನ್ ಸ್ಟುಡಿಯೋಸ್ ಧೈರ್ಯ ತೋರಿದೆ.

    ಇದನ್ನೂ ಓದಿ;ಮೋಹನ್​​ಲಾಲ್​ ಚಿತ್ರಕ್ಕೆ ಶಾಕ್; ಕೇವಲ 3.5 ಲಕ್ಷ ಗಳಿಸಿದ ಸಿನಿಮಾ

    ಈ ಚಿತ್ರವನ್ನು ಮಲಯಾಳಂ ಮಾತ್ರವಲ್ಲದೆ, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ಪೆನ್ ಸ್ಟುಡಿಯೋಸ್ ಈ ಹಿಂದೆ ‘RRR’ ನಂತಹ ದೊಡ್ಡ ಚಿತ್ರಗಳ ವಿತರಣೆಯಲ್ಲಿ ಭಾಗಿಯಾಗಿದ್ದರಿಂದ, ‘ದೃಶ್ಯಂ 3’ ಗೆ ದೊಡ್ಡ ಮಾರುಕಟ್ಟೆ ಸಿಗುವ ನಿರೀಕ್ಷೆಯಿದೆ. ‘ದೃಶ್ಯಂ 3’ ಸಿನಿಮಾದ ವಿಶ್ವದಾದ್ಯಂತ ವಿತರಣೆ ಹಕ್ಕಿಗಾಗಿಯೇ ಪೆನ್ ಸ್ಟುಡಿಯೋಸ್ 100 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.

    ‘ದೃಶ್ಯಂ’ ಸರಣಿಯ ಮೊದಲೆರಡು ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ಈ ಭಾಗವನ್ನೂ ನಿರ್ದೇಶಿಸುತ್ತಿದ್ದಾರೆ. ಆಶೀರ್ವಾದ್ ಸಿನಿಮಾಸ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಈ ಸಿನಿಮಾದ ನಿರ್ಮಾಪಕ. 2013 ರಲ್ಲಿ ಬಿಡುಗಡೆ ಆಗಿದ್ದ ಮೊದಲ ‘ದೃಶ್ಯಂ’ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಅತಿ ಹೆಚ್ಚು ಭಾಷೆಗೆ ಅಧಿಕೃತವಾಗಿ ರೀಮೇಕ್ ಆದ ಭಾರತೀಯ ಸಿನಿಮಾ ಎನಿಸಿಕೊಂಡಿತು. ‘ದೃಶ್ಯಂ 2’ ಸಿನಿಮಾ 2021 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಈಗ ‘ದೃಶ್ಯಂ 3’ ಸಿನಿಮಾ ಮೇ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ‘ದೃಶ್ಯಂ 3’ ಈ ‘ದೃಶ್ಯಂ’ ಸರಣಿಯ ಕೊನೆಯ ಸಿನಿಮಾ ಎನ್ನಲಾಗುತ್ತಿದೆ.

    ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ‘ಟಾಕ್ಸಿಕ್ ರಿಲೀಸ್ ಆಗುವ ಮುನ್ನ ಈ ಕೆಲಸ ಮಾಡಿ’; KVNಗೆ ಬೇಡಿಕೆ ಇಟ್ಟ ಫ್ಯಾನ್ಸ್ – Kannada News | KVN Big Budget Films Plagued by Delays and Controversy: Fans Ask For Do a Pooja

    ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಕೆವಿಎನ್’ ಮೂರು ಬಿಗ್ ಬಜೆಟ್ ಚಿತ್ರಗಳನ್ನು ಘೋಷಣೆ ಮಾಡಿದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಈ ಚಿತ್ರಗಳಿಗೆ ‘ಜನ ನಾಯಗನ್’, ‘ಟಾಕ್ಸಿಕ್’, ‘ಕೆಡಿ’ ಎಂದು ಟೈಟಲ್ ಕೊಡಲಾಗಿದೆ. ಜನವರಿಯಲ್ಲಿ ಒಂದು, ಮಾರ್ಚ್ ಅಲ್ಲಿ ಒಂದು ಹಾಗೂ ಏಪ್ರಿಲ್ ಅಂತ್ಯಕ್ಕೊಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿದೆ. ಒಂದಾದ ಬಳಿಕ ಒಂದು ವಿಘ್ನ ಈ ಚಿತ್ರಗಳಿಗೆ ಎದುರಾಗುತ್ತಿದೆ. ಹೀಗಾಗಿ, ಅಭಿಮಾನಿಗಳು ಕೋರಿಕೆ ಒಂದನ್ನು ಇಟ್ಟಿದ್ದಾರೆ.

    ಜನವರಿ 9ರಂದು ತಮಿಳಿನ ‘ಜನ ನಾಯಗನ್’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರವೇ ಸಿಕ್ಕಿಲ್ಲ. ಡಿಸೆಂಬರ್​​ನಲ್ಲಿಯೇ ಚಿತ್ರ ತಂಡದವರು ಸೆನ್ಸಾರ್ ಮಂಡಳಿಗೆ ಸಿನಿಮಾ ಸಲ್ಲಿಕೆ ಮಾಡಿದ್ದರು. ಇಂದು ಏಪ್ರಿಲ್ 25. ಅಂದರೆ ಒಂದು ಸಿನಿಮಾಗೆ ಐದು ತಿಂಗಳಾದರೂ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ಕೊಟ್ಟಿಲ್ಲ ಎಂಬುದು ದುರಂತವೇ ಸರಿ. ಈ ಸಿನಿಮಾ ಬಿಡುಗಡೆ ಇನ್ನೂ ಯಾವಾಗ ಎಂದು ಘೋಷಣೆ ಆಗಿಲ್ಲ.

    ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಬೇಕಿತ್ತು. ಆದರೆ, ಇದರ ರಿಲೀಸ್ ದಿನಾಂಕ ಜೂನ್ 4ಕ್ಕೆ ಮುಂದಕ್ಕೆ ಹೋಗಿದೆ. ಇದಕ್ಕೆ ವಾರ್ ಕಾರಣವನ್ನು ತಂಡದವರು ನೀಡಿದರೂ, ಅಭಿಮಾನಿಗಳು ಸಂಪೂರ್ಣವಾಗಿ ಇದನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಇದರ ಹಿಂದೆ ಕಾಣದ ಕಾರಣ ಇರಬಹುದು ಎಂದು ಊಹಿಸಿದ್ದಾರೆ.

    ಈಗ ‘ಕೆಡಿ’ ಸಿನಿಮಾ ರಿಲೀಸ್ ಆಗುತ್ತಿದೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಮೊದಲು ರಿಲೀಸ್ ಆದ ‘ಸರ್ಸೆ ಸರ್ಸೆ..’ ಹಾಡು ವಿವಾದ ಸೃಷ್ಟಿ ಮಾಡಿ ಅದನ್ನು ಯೂಟ್ಯೂಬ್​​ನಿಂದಲೇ ತೆಗೆಯಬೇಕಾಯಿತು. ಇತ್ತೀಚೆಗೆ ತೆರೆಗೆ ಬಂದ ಟ್ರೇಲರ್ ಕೂಡ ತೆಗೆದು, ಹೊಸ ಟ್ರೇಲರ್ ಅಪ್​ಲೋಡ್ ಮಾಡಲಾಗಿದೆ.

    ಇದನ್ನೂ ಓದಿ: ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ

    ಈ ಬೆಳವಣಿಗೆ ಯಶ್ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಹೀಗಾಗಿ, ‘ಟಾಕ್ಸಿಕ್’ ರಿಲೀಸ್​ಗೂ ಮೊದಲೇ ಒಂದು ಹೋಮ-ಹವನ ಮಾಡಿಸುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಕೆವಿಎನ್​ ಅಂತಹ ದೊಡ್ಡ ಸಂಸ್ಥೆಗೆ ಹೀಗಾದರೆ ಹೇಗೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.

    ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

    Source link

    ಜನಿವಾರ ತೆಗೆಯುತ್ತೇನೆ ಎಂದರೂ ಕೇಳದೆ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ – Kannada News | Karnataka CET Controversy: Student Alleges Sacred Thread Janivara Cut and Thrown Away at Chikkaballapur Exam Centre

    ಚಿಕ್ಕಬಳ್ಳಾಪುರ, ಏಪ್ರಿಲ್ 25: ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿ ಸುಪ್ರೀತ್ ಕೆಆರ್ ಜನಿವಾರವನ್ನು ಬಲವಂತವಾಗಿ ಕತ್ತರಿಸಿ ಕಸದ ಬುಟ್ಟಿಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಏಪ್ರಿಲ್ 23ರಂದು ಬೆಳಗ್ಗೆ 9:45ಕ್ಕೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ ಸುಪ್ರೀತ್, ತಪಾಸಣೆ ವೇಳೆ ಜನಿವಾರ ಧರಿಸಿರುವುದು ಪತ್ತೆಯಾಗಿತ್ತು. ‘ಜನಿವಾರವನ್ನು ನಾನೇ ತೆಗೆದು ಇಟ್ಟುಕೊಳ್ಳುತ್ತೇನೆ ಎಂದರೂ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಬದಲಿಗೆ, ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ಕತ್ತರಿಯಿಂದ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆದರು ಎಂದು ಸುಪ್ರೀತ್ ಆರೋಪಿಸಿದ್ದಾರೆ.

    ಈ ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದೆ. ಕೇವಲ ಎಂಟು ದಿನಗಳ ಹಿಂದೆ ಉಪನಯನ ನಡೆದಿತ್ತು. ಪರೀಕ್ಷೆ ಮುಗಿದ ನಂತರ ಕಸದ ಬುಟ್ಟಿಯಿಂದಲೇ ಜನಿವಾರವನ್ನು ಹುಡುಕಿ ತೆಗೆದುಕೊಂಡು ಹೋದೆ ಎಂದು ಸುಪ್ರೀತ್ ತಿಳಿಸಿದ್ದಾರೆ. ಸುಪ್ರೀತ್ ಜತೆ ‘ಟಿವಿ9’ ಚಿಕ್ಕಬಳ್ಳಾಪುರ ಪ್ರತಿನಿಧಿ ಭೀಮಪ್ಪ ಪಾಟೀಲ್ ನಡೆಸಿರುವ ಮಾತುಕತೆಯ ವಿಡಿಯೋ ಇಲ್ಲಿದೆ.

    ಆರೋಪ ಅಲ್ಲಗಳೆದ ಅಧಿಕಾರಿ

    ಏತನ್ಮಧ್ಯೆ ಜನಿವಾರ ಕತ್ತರಿಸಿ ಬಿಸಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಸಮವಸ್ತ್ರ ಸಂಹಿತಾಧಿಕಾರಿಯಾಗಿದ್ದ ದೊಡ್ಡ ಈರಪ್ಪ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಆರೋಪವನ್ನು ಅಲ್ಲಗಳೆದಿದ್ದಾರೆ. ಕೇಂದ್ರದಲ್ಲಿ ಕೆ.ಇ.ಎ ನಿಯಮಾವಳಿಗಳಂತೆ ವಿದ್ಯಾರ್ಥಿಗಳ ಪರಿಶೀಲನೆ ಮಾಡಲಾಗಿದೆ. ಯಾವುದೇ ವಿದ್ಯಾರ್ಥಿಯ ಜನಿವಾರ ಕತ್ತರಿಲ್ಲ, ತೆಗೆಸಿಲ್ಲ, ಬಿಸಾಡಿಲ್ಲ. ಆದರೂ ಯಾಕೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ತೆಲಂಗಾಳದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕೆಸಿಆರ್‌ ಪುತ್ರಿ ಕವಿತಾ – Kannada News | KCR Daughter K Kavitha launches her own party in Telangana months after being suspended from BRS

    ಹೈದರಾಬಾದ್‌, (ಏಪ್ರಿಲ್ 25): ತೆಲಂಗಾಣದ (Telangana) ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (KCR) ಅವರ ಪುತ್ರಿ ಮತ್ತು ಮಾಜಿ ಸಂಸದೆ ಕೆ. ಕವಿತಾ(K. Kavitha) ಅವರು ಇಂದು (ಏಪ್ರಿಲ್ 25) ಹೊಸ ಪಕ್ಷ ಸ್ಥಾಪಿಸಿ ಘೋಷಣೆ ಮಾಡಿದ್ದಾರೆ. ಕವಿತಾ ಅವರು ತಮ್ಮ ಪಕ್ಷಕ್ಕೆ ತೆಲಂಗಾಣ ರಾಷ್ಟ್ರ ಸೇನಾ (TRS) ಎಂದು ಹೆಸರಿಸಿದ್ದಾರೆ. ಇದು ಈ ಹಿಂದೆ ಅವರ ತಂದೆ ಕೆಸಿಆರ್ ಅವರು ಬಳಸುತ್ತಿದ್ದ ‘ತೆಲಂಗಾಣ ರಾಷ್ಟ್ರ ಸಮಿತಿ’ ಹೆಸರನ್ನು ನೆನಪಿಸುವಂತಿದ್ದು, ತೆಲಂಗಾಣದ ಮೂಲ ಅಸ್ಮಿತೆಯನ್ನು ಮರಳಿ ಪಡೆಯುವ ಸಂಕೇತವಾಗಿ ಬಳಸಲಾಗಿದೆ. ಈ ಮೂಲಕ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದ ತಂದೆ ಕೆಸಿಆರ್​, ಸೋದರ ಕೆ.ಟಿ.ರಾಮಾರಾವ್​​ಗೆ ಸೆಡ್ಡು ಹೊಡೆದಿದ್ದಾರೆ.

    ದೆಹಲಿ ಅಬಕಾರಿ ನೀತಿ ಹಗರಣದ ಆರೋಪದಡಿ ಕವಿತಾ ಜೈಲು ಸೇರಿದ್ದರು. ಅಲ್ಲದೇ ಪಕ್ಷದ ವಿಚಾರದ ಬಗ್ಗೆ ತಂದೆ, ಸೋದರನ ಜೊತೆ ಕಲಹ ಉಂಟಾಗಿತ್ತು. ಕಲಹದಿಂದ ಬೇಸತ್ತು ಕವಿತಾ ಅವರು ಸೆಪ್ಟೆಂಬರ್ 2025 ರಲ್ಲಿ ಭಾರತ್ ರಾಷ್ಟ್ರ ಸಮಿತಿಯಿಂದ (BRS) ಹೊರಬಂದಿದ್ದರು. ಆಂತರಿಕ ಭಿನ್ನಮತ ಮತ್ತು ಅವರ ಸಹೋದರ ಕೆ.ಟಿ. ರಾಮರಾವ್ ಅವರೊಂದಿಗಿನ ವೈಮನಸ್ಸಿನಿಂದಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನಂತರ ಅವರು ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

    Source link

    Exit mobile version