ದಾಖಲೆಗಳ ಸರದಾರನ ಹೆಸರಿಗೆ 3 ಪ್ರಚಂಡ ದಾಖಲೆ ಸೇರ್ಪಡೆ – Kannada News | Virat Kohli’s Records and Milestones Achieved in IPL 2026

ದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಮತ್ತೆ ಮೂರು ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 81 ರನ್​ಗಳನ್ನು ಕಲೆಹಾಕುವ ಮೂಲಕ. ಐಪಿಎಲ್​ನ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 44 ಎಸೆತಗಳಲ್ಲಿ81 ರನ್ ಬಾರಿಸಿದ್ದರು.

Source link

Virat Kohli: RCB ತಂಡದ ಭರ್ಜರಿ ಚೇಸಿಂಗ್​ಗೆ ಈತನೇ ಕಾರಣ! – Kannada News | IPL 2026: Virat Kohli About Devdutt Padikkal

IPL 2026: ಐಪಿಎಲ್​ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್​ 20 ಓವರ್​ಗಳಲ್ಲಿ 205 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ 18.5 ಓವರ್​ಗಳಲ್ಲಿ 206 ರನ್​ಗಳಿಸಿ 5 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಆರ್​ಸಿಬಿ ತಂಡವು ಇಷ್ಟೊಂದು ಸುಲಭವಾಗಿ ಚೇಸ್ ಮಾಡಲು ದೇವದತ್ ಪಡಿಕ್ಕಲ್ ಕಾರಣ ಎಂದು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ದೇವದತ್ ಪಡಿಕ್ಕಲ್ ಚೆಂಡನ್ನು ಎಲ್ಲೂ ಸ್ಲಾಗ್​ ಮಾಡದೇ ಕೇವಲ ಕ್ರಿಕೆಟಿಂಗ್ ಶಾಟ್‌ಗಳ ಮೂಲಕವೇ ರನ್ ಗಳಿಸುತ್ತಾರೆ. ಅವರು ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೆ ಅಷ್ಟು ವೇಗವಾಗಿ ರನ್ ಗಳಿಸುವುದು ಅಪರೂಪದ ಸಂಗತಿ.

ಕಗಿಸೊ ರಬಾಡ ಅವರ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಪಡಿಕ್ಕಲ್ ಅವರ ಆತ್ಮವಿಶ್ವಾಸವು ತಂಡದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ದೇವದತ್ ಪಡಿಕ್ಕಲ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಪರಿಣಾಮ ಆರ್​ಸಿಬಿ ತಂಡವು ಯಾವುದೇ ಒತ್ತಡವಿಲ್ಲದೇ 206 ರನ್​ಗಳಿಸಲು ಸಾಧ್ಯವಾಯಿತು. ಹೀಗಾಗಿ ಆರ್​ಸಿಬಿ ತಂಡದ ಚೇಸಿಂಗ್​ನ ಶ್ರೇಯಸ್ಸು ದೇವದತ್ ಪಡಿಕ್ಕಲ್​ಗೆ ಸಲ್ಲಬೇಕು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೌಲರ್​ಗಳಿಗೂ ಬಹುಪರಾಕ್:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ಒಂದು ಹಂತದಲ್ಲಿ 230-235 ರನ್ ಗಳಿಸುವ ಸೂಚನೆ ನೀಡಿತ್ತು. ಆದರೆ ಆರ್​​ಸಿಬಿ ಬೌಲರ್‌ಗಳು ಕೊನೆಯ ಓವರ್‌ಗಳಲ್ಲಿ ಅದ್ಭುತವಾಗಿ ಪುಟಿದೇಳುವ ಮೂಲಕ ಅವರನ್ನು 205 ರನ್‌ಗಳಿಗೆ ನಿಯಂತ್ರಿಸಿದರು.

ನಮ್ಮ ಬೌಲರ್‌ಗಳು 20-25 ರನ್‌ಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು  ಎಂದು ಕೊಹ್ಲಿ ಬೌಲರ್‌ಗಳ ಶ್ರಮವನ್ನು ಸಹ ಶ್ಲಾಘಿಸಿದ್ದಾರೆ.

ಕೊಹ್ಲಿ ಮತ್ತು ಪಡಿಕ್ಕಲ್ ಜುಗಲ್​ಬಂಧಿ:

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ‘ಪಂದ್ಯ ಪುರುಷ’ ಪ್ರಶಸ್ತಿ ಭಾಜನರಾದರು. ಆದರೆ, ಕೊಹ್ಲಿ ಅವರ ಪ್ರಕಾರ ಈ ಗೆಲುವಿನ ನಿಜವಾದ ಶಕ್ತಿ ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್. ಪಡಿಕ್ಕಲ್ ಕೇವಲ 27 ಎಸೆತಗಳಲ್ಲಿ 55 ರನ್ ಚಚ್ಚುವ ಮೂಲಕ ತಂಡಕ್ಕೆ ಅಗತ್ಯವಿದ್ದ ವೇಗವನ್ನು ನೀಡಿದರು. ಈ ಜೋಡಿ ಕೇವಲ 59 ಎಸೆತಗಳಲ್ಲಿ 115 ರನ್‌ಗಳ ಅಮೋಘ ಜೊತೆಯಾಟವಾಡಿ ಪಂದ್ಯವನ್ನು ಎದುರಾಳಿಗಳ ಕೈಯಿಂದ ಕಿತ್ತುಕೊಂಡಿತು.

ಇದನ್ನೂ ಓದಿ: 1,376 ಕಿ.ಮೀ ದೂರದ ತವರು ಮೈದಾನದಲ್ಲಿ 2 ಪಂದ್ಯಗಳನ್ನಾಡಲಿದೆ RCB

ಪರಿಣಾಮ ಆರ್​​ಸಿಬಿ ತಂಡವು 18.5 ಓವರ್​ಗಳಲ್ಲಿ 206 ರನ್​ಗಳಿಸಿ 5 ವಿಕೆಟ್​ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

Source link

ಪ್ರಿಯಾಂಕ್ ಖರ್ಗೆ ಉಸ್ತುವಾರಿಯ ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು! ಶುದ್ಧ ನೀರಿನ ಘಟಕಗಳು ಬಂದ್ – Kannada News | Water Crisis Hits Kalaburagi DC Office: RO Plants Shut Down in Minister Priyank Kharge’s In charge District

ಕಲಬುರಗಿ, ಏಪ್ರಿಲ್ 25: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಸ್ತುವಾರಿ ಸಚಿವರಾಗಿರುವ, ಅವರ ತವರು ಜಿಲ್ಲೆಯೂ ಆಗಿರುವ ಕಲಬುರಗಿಯ ಜಿಲ್ಲಾಡಳಿತ ಭವನದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದೆ ಬಂದ್ ಆಗಿವೆ. ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ. ಜಿಲ್ಲೆಯ ‘ಶಕ್ತಿ ಕೇಂದ್ರ’ ಎಂದೇ ಕರೆಯಲ್ಪಡುವ ಈ ಕಚೇರಿಯಲ್ಲಿ ಹೊರಗಡೆ ಇರುವ ಒಂದು ಹಾಗೂ ಒಳಗಡೆ ಇರುವ ಎರಡು ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ಕೆಟ್ಟು ಹೋಗಿವೆ. ಕಳೆದ ಎರಡು-ಮೂರು ತಿಂಗಳಿಂದ ನೀರು ಪೂರೈಕೆ ಇಲ್ಲದೆ ಸಾವಿರಾರು ಸಾರ್ವಜನಿಕರು ಮತ್ತು ಅಧಿಕಾರಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ.

ಕಚೇರಿಗೆ ಬರುವ ಸಾರ್ವಜನಿಕರು ಮತ್ತು ಅಧಿಕಾರಿಗಳು ಮನೆಯಿಂದಲೇ ನೀರಿನ ಬಾಟಲಿಗಳನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಪಮಾನ ಹೆಚ್ಚಿದ್ದರೂ, ಜಿಲ್ಲೆಯ ಹಳ್ಳಿಗಳಿಗೆ ಸಮರ್ಪಕ ನೀರು ಒದಗಿಸುವ ಜವಾಬ್ದಾರಿಯಿರುವ ಜಿಲ್ಲಾಡಳಿತವೇ ತನ್ನ ಆವರಣದಲ್ಲಿ ಕುಡಿಯುವ ನೀರು ಒದಗಿಸಲು ವಿಫಲವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರೂ, ಜಿಲ್ಲಾಡಳಿತ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ – Kannada News | Chikkaballapur Student Talks about Cuts janivara During CET Exam

ಚಿಕ್ಕಬಳ್ಳಾಪುರ, (ಏಪ್ರಿಲ್ 25): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ, ಸಂಹಿತೆಯ ಬಗ್ಗೆ ವಿವರಿಸಿದೆ. ಆದರೂ ಸಹ ಮೊನ್ನೆ ನಡೆದ ಸಿಇಟಿ ಪರೀಕ್ಷೆ ವೇಳೆ ಅಭ್ಯರ್ಥಿಗಳ ಜನಿವಾರಕ್ಕೆ ಕತ್ತರಿ ಹಾಕಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಸಂಬಂಧ ಕೆಲವರನ್ನು ಅಮಾನತು ಸಹ ಮಾಡಲಾಗಿದೆ. ಇಂತಹ ಘಟನೆ ನಡೆದಿರುವುದು ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಪ್ರಕರಣದ ತನಿಖೆಗಾಗಿ ತಂಡ ರಚಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಜನಿವಾರ ಕತ್ತರಿಸಿದ ಬಗ್ಗೆ ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಸುಪ್ರೀತ್ ಕೆ.ಆರ್. ಟಿವಿ9ಗೆ ಪ್ರತಿಕ್ರಿಯಿಸಿದ್ದು, ನಾನೆ ತೆಗೆದು ಇಟ್ಟುಕೊಳ್ಳುತ್ತೇನೆಂದು ಹೇಳಿದರೂ ಕೇಳಲಿಲ್ಲ. ಜನಿವಾರ ತೆಗೆಯುವುದಕ್ಕೂ ಅವಕಾಶ ನೀಡಲಿಲ್ಲ. ಕತ್ತರಿಯಿಂದ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು. ಪರೀಕ್ಷೆ ಮುಗಿದ ಮೇಲೆ ಕಸದ ಬುಟ್ಟಿಯಲ್ಲಿ ಜನಿವಾರ ಹುಡುಕಾಡಿ ತಂದೆ. 8 ದಿನಗಳ ಹಿಂದೆ ಉಪನಯನವಾಗಿತ್ತು. ಜನಿವಾರ ಕಿತ್ತಾಕಿದ ಕಾರಣ ಒತ್ತಡಕ್ಕೆ ಒಳಗಾಗಿ ಪರೀಕ್ಷೆ ಸರಿಯಾಗಿ ಬರೆಯಲಿಲ್ಲ. ಪಿ.ಸಿ.ಎಂ.ಬಿ ಯಲ್ಲಿ 90 ಶೇ. ತೆಗೆದಿದ್ದೇನೆ. ನಮ್ಮ ತಂದೆ ಮೃತಪಟ್ಟು ಒಂದು ವರ್ಷ ಆಗಿದೆ. ತಾಯಿ ಆಸೆ ಹಿಡೇರಿಸಲು ಚನ್ನಾಗಿ ಅಧ್ಯಾಯನ ಮಾಡಿದ್ದೆ. ನಮಗೆ ಮೊದಲೆ ಹೇಳಿರಲಿಲ್ಲ. ನಿಯಮಾವಳಿಯಲ್ಲೂ ಜನಿವಾರ ಹಾಕಿಕೊಂಡು ಬರಬಾರದು ಅಂತ ಹೇಳಿರಲಿಲ್ಲ. ಜನಿವಾರ ಕತ್ತರಿಸಿ ಕಿತ್ತಾಕಿದ ಕಾರಣ ತುಂಬಾ ನೋವು ಆಗಿದೆ. ಮತ್ತೆ ಉಪ ನಯನ ನಡೆಸಿ ಜನಿವಾರ ಹಾಕಿಕೊಳ್ಳಬೇಕು ಎಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು

Source link

ವಿನಯ್ ಕುಲಕರ್ಣಿ ಪರ ಧಾರವಾಡದಲ್ಲಿ ಮೌನ ಕ್ರಾಂತಿ; ಕೈಗೆ ಕಪ್ಪು ಪಟ್ಟಿ ಧರಿಸಿ ಬೆಂಬಲಿಗರ ಮೆರವಣಿಗೆ! – Kannada News | Vinay Kulkarni Supporters Silent Protest in Dharwad Against Conspiracy Allegations

ಧಾರವಾಡ, ಏಪ್ರಿಲ್ 25: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ, ಇಂದು ನಗರದಲ್ಲಿ ಅವರ ಬೆಂಬಲಿಗರು ಮೌನ ಮೆರವಣಿಗೆ ಹಮ್ಮಿಕೊಂಡಿದ್ದರು. ಕಲಾಭವನದ ಬಳಿ ಜಮಾಯಿಸಿರುವ ನೂರಾರು ಅಭಿಮಾನಿಗಳು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಕಲಾಭವನದಿಂದ ಕೆಸಿಸಿ ಬ್ಯಾಂಕ್‌ವರೆಗೆ ಪ್ರತಿಭಟನೆ ನಡೆಸಿದ್ದಾರೆ. ಕುಲಕರ್ಣಿ ಅವರು ನಿರಪರಾಧಿ ಎಂದು ಪ್ರತಿಪಾದಿಸಿರುವ ಬೆಂಬಲಿಗರು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು? – Kannada News | Ranveer Singh Apologizes in Chavundi Daiva Case: Actor to Visit Temple Soon

ಚಾವುಂಡಿ ದೈವಕ್ಕೆ ರಣವೀರ್ ಸಿಂಗ್ ಅವಮಾನ ಮಾಡಿದ ಪ್ರಕರಣ ಕೊನೆಗೂ ಇತ್ಯರ್ಥವಾಗಿದೆ. ಈ ಪ್ರಕರಣದಲ್ಲಿ ರಣವೀರ್ ಕ್ಷಮೆಯಾಚನೆಯನ್ನು ವಕೀಲರು ಒಪ್ಪಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ. ಎಲ್ಲಾ ತಪ್ಪಿಗೂ ಕ್ಷಮೆ ಇದೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ದೇವಸ್ಥಾನ ಭೇಟಿಗೆ ಭದ್ರತೆಯ ಸಮಸ್ಯೆ ಆಗಬಹುದು ಎಂದು ರಣವೀರ್ ಸಿಂಗ್ ಹೇಳಿದ್ದರಂತೆ. ಆದರೆ, ಕರ್ನಾಟಕ ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ನೀಡಿರುವುದಾಗಿ ವಕೀಲರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Shani Retrograde 2026: ಶನಿಯ ಹಿಮ್ಮುಖ ಚಲನೆ ಆರಂಭ! ಈ 4 ರಾಶಿಗೆ ಕಾದಿದೆ ಸಂಕಷ್ಟದ ಕಾಲ – Kannada News | Shani Retrograde 2026: 4 Zodiac Signs Face Major Challenges From July 27

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಎನಿಸಿಕೊಂಡಿರುವ ಶನಿ ದೇವನು ‘ಕರ್ಮಫಲದಾತ’. ನಾವು ಮಾಡುವ ಕೆಲಸಗಳಿಗೆ ತಕ್ಕಂತೆ ಫಲ ನೀಡುವ ಶನಿಯು ಜುಲೈ 27 ರಿಂದ ಮೀನ ರಾಶಿಯಲ್ಲಿ ತನ್ನ ಪಥವನ್ನು ಬದಲಿಸಿ, ಹಿಮ್ಮುಖವಾಗಿ (Retrograde) ಚಲಿಸಲಿದ್ದಾನೆ. ಸುಮಾರು 138 ದಿನಗಳ ಕಾಲ ನಡೆಯುವ ಶನಿಯ ಈ ವಕ್ರ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, ಮುಖ್ಯವಾಗಿ ನಾಲ್ಕು ರಾಶಿಗಳ ಜನರು ಜೀವನದಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಆ ಸಂಕಷ್ಟಕ್ಕೊಳಗಾಗುವ ರಾಶಿಗಳು ಯಾವುವು? ಮತ್ತು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಸಂಪೂರ್ಣ ವಿವರ.

ಮೇಷ ರಾಶಿಗೆ ಕೌಟುಂಬಿಕ ಕಲಹದ ಭೀತಿ:

ಮೇಷ ರಾಶಿಯವರಿಗೆ ಜುಲೈ 27 ರಿಂದ ಕಠಿಣ ಸಮಯ ಆರಂಭವಾಗಲಿದೆ. ಶನಿಯ ಹಿಮ್ಮುಖ ಚಲನೆಯು ಈ ರಾಶಿಯ ಎರಡನೇ ಮನೆಯಲ್ಲಿ ಪ್ರಭಾವ ಬೀರಲಿದೆ. ಕುಟುಂಬದಲ್ಲಿ ಸಣ್ಣ ವಿಷಯಗಳಿಗೂ ದೊಡ್ಡ ವಿವಾದಗಳು ಸೃಷ್ಟಿಯಾಗಬಹುದು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ, ಅರ್ಧಕ್ಕೆ ನಿಂತ ಕೆಲಸಗಳು ಮಾನಸಿಕ ಒತ್ತಡ ಹೆಚ್ಚಿಸಬಹುದು. ಹಣಕಾಸಿನ ವ್ಯವಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಉತ್ತಮ.

ಕನ್ಯಾ ರಾಶಿಗೆ ವೃತ್ತಿ ಜೀವನದಲ್ಲಿ ಹಿನ್ನಡೆ:

ಕನ್ಯಾ ರಾಶಿಯ ಉದ್ಯೋಗಿಗಳಿಗೆ ಈ ಅವಧಿಯು ಸವಾಲಿನಿಂದ ಕೂಡಿರಲಿದೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಬಹುದು. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಮನ್ನಣೆ ಅಥವಾ ಬಡ್ತಿ ಸಿಗದೆ ನಿರಾಶೆಯಾಗುವ ಸಾಧ್ಯತೆ ಇದೆ. ಮಾನಸಿಕ ಶಾಂತಿ ಕಳೆದುಕೊಳ್ಳಬೇಡಿ; ತಾಳ್ಮೆಯಿಂದ ಕೆಲಸ ನಿರ್ವಹಿಸಿ.

ಧನು ರಾಶಿಗೆ ಆರೋಗ್ಯದ ಬಗ್ಗೆ ಇರಲಿ ಎಚ್ಚರ:

ಧನು ರಾಶಿಯವರಿಗೆ ಈ ಅವಧಿಯಲ್ಲಿ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಏರುಪೇರಾಗುವ ಸಂಭವವಿದೆ. ಪರಿಣಾಮ ಅನಗತ್ಯ ಖರ್ಚುಗಳು ಹೆಚ್ಚಾಗಿ ಆರ್ಥಿಕ ಸಂಕಷ್ಟ ಎದುರಾಗಬಹುದು. ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು, ಇದು ಆಸ್ಪತ್ರೆ ವಾಸಕ್ಕೂ ಕಾರಣವಾಗಬಹುದು. ಆಹಾರ ಪದ್ಧತಿಯಲ್ಲಿ ಶಿಸ್ತು ಇರಲಿ ಮತ್ತು ಹಣ ವ್ಯಯ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ.

ಇದನ್ನೂ ಓದಿ: ಭಾರತದ ಈ ಪಟ್ಟಣದಲ್ಲಿ ಈರುಳ್ಳಿ ಮಾರಾಟ ಮಾಡುವಂತಿಲ್ಲ, ನಿಷೇಧದ ಹಿಂದಿನ ಕುತೂಹಲಕಾರಿ ಸಂಗತಿ ಇಲ್ಲಿದೆ

ಮೀನ ರಾಶಿಗೆ ವ್ಯವಹಾರದಲ್ಲಿ ನಷ್ಟದ ಭೀತಿ:

ಶನಿಯು ಮೀನ ರಾಶಿಯಲ್ಲೇ ಹಿಮ್ಮುಖವಾಗಿ ಚಲಿಸುತ್ತಿರುವುದರಿಂದ, ಈ ರಾಶಿಯವರಿಗೆ ನೇರ ಪ್ರಭಾವ ಬೀಳಲಿದೆ. ಪರಿಣಾಮ ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗದೆ ನಷ್ಟ ಉಂಟಾಗಬಹುದು. ಉದ್ಯೋಗದಲ್ಲಿ ಅಸ್ಥಿರತೆ ಕಾಡಬಹುದು ಮತ್ತು ಮಾನಸಿಕ ಗೊಂದಲಗಳು ನಿಮ್ಮನ್ನು ಕಾಡಲಿವೆ. ಯಾವುದೇ ಹೊಸ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಕಡ್ಡಾಯ.

ಶನಿ ದೋಷದ ಪ್ರಭಾವ ತಗ್ಗಿಸಲು ಸರಳ ಪರಿಹಾರಗಳು:

ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಜ್ಯೋತಿಷ್ಯ ಶಾಸ್ತ್ರವು ಕೆಲವು ಪರಿಹಾರಗಳನ್ನು ಸೂಚಿಸುತ್ತದೆ:

  • ಪ್ರತಿ ಶನಿವಾರ ಶನಿ ದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ.
  • ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೋಷದ ತೀವ್ರತೆ ಕಡಿಮೆಯಾಗುತ್ತದೆ.
  • ಅಶಕ್ತರಿಗೆ ಮತ್ತು ಬಡವರಿಗೆ ಕಪ್ಪು ಬಟ್ಟೆ ಅಥವಾ ಅನ್ನ ದಾನ ಮಾಡಿ.

ಗಮನಿಸಿ: ಈ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ಲೆಕ್ಕಾಚಾರಗಳನ್ನು ಆಧರಿಸಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ನುರಿತ ಜ್ಯೋತಿಷಿಗಳನ್ನು ಸಂಪರ್ಕಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಮೌಳಿಗೆ ಅವಮಾನ; ಇದು ಸರಿ ಅಲ್ಲ ಎಂದ ಫ್ಯಾನ್ಸ್ – Kannada News | Rajamouli Faces Disrespect at Intl Forum for Varanasi; Racism Allegations Surface

ರಾಜಮೌಳಿ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅವರು ಏಳ್ಗೆ ಕಾಣುತ್ತಿದ್ದಾರೆ. ಗ್ರಾಫಿಕ್ಸ್, ಮೇಕಿಂಗ್ ಸೇರಿದಂತೆ ಪ್ರತಿ ವಿಷಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಿಕೊಂಡು ಅವರು ಫೀಲ್ಡ್​ಗೆ ಇಳಿಯುತ್ತಾರೆ. ಪ್ರತಿ ಪ್ರಾಜೆಕ್ಟ್​ಗೆ ಅವರು 4-5 ವರ್ಷ ತೆಗೆದುಕೊಳ್ಳುತ್ತಾರೆ. ಈಗ ಅವರು ‘ವಾರಣಾಸಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಿಹೈಂಡ್​ ದಿ ಸೀನ್ಸ್​ (ಬಿಟಿಎಸ್) ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಕಂಡಿದೆ. ಈ ವೇಳೆ ಅವರಿಗೆ ಅವಮಾನ ಆಗಿದೆ.

ರಾಜಮೌಳಿ ಸೃಷ್ಟಿ ಮಾಡುವ ಪಾತ್ರ, ವಿಷಯ ಅದ್ಭುತವಾಗಿರುತ್ತವೆ. ‘ಆರ್​​ಆರ್​​ಆರ್​’ ಸಿನಿಮಾ ಆಗಿರಲಿ ಅಥವಾ ‘ಬಾಹುಬಲಿ’ ಚಿತ್ರವೇ ಆಗಿರಲಿ, ಉತ್ತಮ ರೀತಿಯಲ್ಲಿ ಇದನ್ನು ಕಟ್ಟಿಕೊಟ್ಟಿದ್ದರು. ಈಗ ‘ವಾರಣಾಸಿ’ ಚಿತ್ರವನ್ನು ಕೂಡ ಅದೇ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಅವರಿದ್ದಾರೆ. ಈ ಚಿತ್ರದ ಬಿಟಿಎಸ್ ‘ಸಿಸಿಎಕ್ಸ್​​ಪಿ ಮೆಕ್ಸಿಕೋ 2026’ ಅಲ್ಲಿ ಪ್ರದರ್ಶನ ಕಂಡಿದೆ. ಆ ಬಳಿಕ ವಿಡಿಯೋ ಸಂದೇಶದ ಮೂಲಕ ಜನರಿಗೆ ಸಿನಿಮಾ ಬಗ್ಗೆ ಹೇಳಿದರು.

ಇದನ್ನೂ ಓದಿ: ಜೂ ಎನ್​​ಟಿಆರ್ ಋಣ ತೀರಿಸಲಿರುವ ರಾಜಮೌಳಿ, ‘ವಾರಣಾಸಿ’ಯಲ್ಲಿ ಸರ್ಪ್ರೈಸ್

ಈ ವಿಡಿಯೋ ನೋಡಿದ ಅನೇಕರು ಒಂದು ವಿಷಯ ಗಮನಿಸಿದ್ದಾರೆ. ರಾಜಮೌಳಿ ಅವರು ಮಾತನಾಡುವಾಗ ಎಲ್ಲರೂ ಎದ್ದೆದ್ದು ಹೋಗುತ್ತಿದ್ದರು. ಇದು ರಾಜಮೌಳಿಗೆ ಆದ ಅವಮಾನ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು, ರಾಜಮೌಳಿ ದೇಹದ ಬಣ್ಣದ ಬಗ್ಗೆ ಅಸಮಾಧಾನ ಇರಬೇಕು. ಅದಕ್ಕಾಗಿ ಎದ್ದು ಹೋಗಿದ್ದಾರೆ. ಅವರು ವರ್ಣಬೇಧ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜಮೌಳಿ ಅವರು ‘ವಾರಾಣಸಿ’ ಸಿನಿಮಾಗೆ ಈಗಲೇ ಪ್ರಚಾರ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಈ ಸಿನಿಮಾಗೆ ಪ್ರಚಾರ ನೀಡುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯೋಗೇಶ್ ಗೌಡ ಕೊಲೆ ಕೇಸ್: ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ! – Kannada News | Vinay Kulkarni Moves To High Court Seeking Bail And Stay On Life Sentence Yogesh Gowda Murder Case

ಬೆಂಗಳೂರು, ಏಪ್ರಿಲ್ 25: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಅವರು ಹೈಕೋರ್ಟ್‌ಗೆ ಮೇಲ್ಮನವಿಯನ್ನ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆ ಹಾಗೂ ಸಕ್ಷಮ ನ್ಯಾಯಾಲಯ ನೀಡಿದ್ದ ಕನ್ವಿಕ್ಷನ್ ಆದೇಶವನ್ನ ಪ್ರಶ್ನಿಸಿ, ಶಿಕ್ಷೆಗೆ ತಡೆಯಾಜ್ಞೆ ಮತ್ತು ಜಾಮೀನು ನೀಡುವಂತೆ ಅವರು ಮನವಿ ಮಾಡಿದ್ದಾರೆ.

ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿರುವ ಕಾರಣ, ಶಿಕ್ಷೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ವಿಚಾರಣೆಯ ವೇಳೆ ಸಿಬಿಐ ವಾದವನ್ನೂ ನ್ಯಾಯಾಲಯ ಆಲಿಸುವ ನಿರೀಕ್ಷೆಯಿದೆ. ಜೀವಾವಧಿ ಶಿಕ್ಷೆ ಆದೇಶವನ್ನು ರದ್ದುಪಡಿಸುವಂತೆ ತಮ್ಮ ಅರ್ಜಿಯಲ್ಲಿ ವಿನಯ್ ಕುಲಕರ್ಣಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1,376 ಕಿ.ಮೀ ದೂರದ ತವರು ಮೈದಾನದಲ್ಲಿ 2 ಪಂದ್ಯಗಳನ್ನಾಡಲಿದೆ RCB

Source link

Exit mobile version