Summer Health Tips: ಬೇಸಿಗೆಯಲ್ಲಿ ಇಡ್ಲಿ,ದೋಸೆ ಹಿಟ್ಟು ಬೇಗ ಹುಳಿಯಾಗುತ್ತಿದೆಯೇ? ಹಾಗಿದ್ದರೆ ಈ ಟಿಪ್ಸ್ ಪಾಲಿಸಿ – Kannada News | Summer Batter Care: Prevent Idli/Dosa Spoilage and Ensure Health | Fermentation Tips
ಬೇಸಿಗೆಯಲ್ಲಿ ಇಡ್ಲಿ, ದೋಸೆ ಹಿಟ್ಟುImage Credit source: gemini ai ನಮ್ಮ ದೈನಂದಿನ ಜೀವನದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ಇಡ್ಲಿ ಅಥವಾ ಗರಿಗರಿಯಾದ ದೋಸೆ ಜೊತೆಗೆ ಒಂದು ಕಪ್ ಕಾಫಿ ಸಿಗದಿದ್ದರೆ ದಿನವೇ ಅಪೂರ್ಣ ಎನಿಸುತ್ತದೆ. ಈ ಪೌಷ್ಟಿಕ ಆಹಾರಗಳು ಕೇವಲ ಹೊಟ್ಟೆ ತುಂಬಿಸುವುದಲ್ಲದೆ, ನಾಲಿಗೆಗೂ ಹಿತ ನೀಡುತ್ತವೆ. ಆದರೆ, ಬೇಸಿಗೆಯ ಸುಡುವ ಬಿಸಿಲಿನಲ್ಲಿ ಒಂದು ಸಣ್ಣ ನಿರ್ಲಕ್ಷ್ಯವೂ ಈ ರುಚಿಕರ ಆಹಾರವನ್ನು ಆರೋಗ್ಯಕ್ಕೆ ಹಾನಿಕಾರಕವಾಗಿ ಬದಲಿಸಬಹುದು. ಹೀಗಾಗಿ, ಬೇಸಿಗೆಯಲ್ಲಿ ಹಿಟ್ಟಿನ ತಯಾರಿಕೆ ಮತ್ತು ಬಳಕೆಯ…